ಆಶಾ ಜಾವೋರ್ ಮಾಝೆ ( -labour of love) ) ನಾನು ಇತ್ತೀಚಿಗೆ ನೋಡಿದ ಚೆಂದದ ಸಿನಿಮಾ . ಒಂದು ಸುಂದರ ಪದ್ಯದ ಹಾಗಿದೆ. ಇಬ್ಬರ synchronised ನೃತ್ಯದ ಹಾಗೆ. ಕಷ್ಟಪಟ್ಟು ದುಡಿದು ಜೀವಿಸುವ ಗಂಡ ಹೆಂಡತಿ. ಹೆಂಡತಿಗೆ ಬೆಳಿಗ್ಗೆ ಹೋದರೆ ಸಂಜೆ ಮರಳುವ ಕೆಲಸ , ಆತನಿಗೆ ರಾತ್ರಿ ಶಿಫ್ಟ್ . ಅವಳು ಒಂದು ಹೆಂಗಸರ ಕೈಚೀಲ ತಯಾರಿಸುವ ಘಟಕದಲ್ಲಿ ಸೂಪ್ರವೈಸರ್ ಕೆಲಸ ಆದರೆ ಅವನಿಗೆ ಪ್ರಿಂಟಿಂಗ್ ಪ್ರೆಸ್ ನಲ್ಲಿ. ಅವಳು ಬೆಳಿಗ್ಗೆ ಎದ್ದು ಅಡಿಗೆ- ಡಬ್ಬಿಗೆ ತಿಂಡಿ ತಯಾರಿಸಿ ಫ್ರಿಜ್ ನಲ್ಲಿ ಇತ್ತು ಹೋಗುತ್ತಾಳೆ. ಹಾಗೆ ಬಟ್ಟೆ ಒಗೆದು ಬಕೆಟ್ ನಲ್ಲಿ ಇಟ್ಟಿರುತ್ತಾಳೆ. ಅವನು ಬೆಳಿಗ್ಗೆ ಮನೆಗೆ ಬಂಡಿ ಟಿ ಕುಡಿದು ಸ್ನಾನ ಮಾಡಿ ಅವಳು ಒಗೆದ ಬಟ್ಟೆ ಒಣಗಿಸಲು ಹಾಕುತ್ತಾನೆ.( ಬಹುಶ: ಇಬ್ಬರಿಗೂ ದಿನದ ಕೂಲಿ ಕೊಡುತ್ತಾರೆ. ಯಾಕೆಂದರೆ ಯಾಕೆಂದರೆ ಇಬ್ಬರೂ ಮನೆಯ ಕಪಾಟಿನ ಡಬ್ಬಿಯಲ್ಲಿ ದುಡ್ಡು ಹಾಕುತ್ತಾರೆ. ) ನಂತರ ಬ್ಯಾಂಕ್ ಗೆ ಹೋಗಿ ದುಡ್ಡು ಡೆಪಾಸಿಟ್ ಮಾಡುತ್ತಾನೆ. ಹಾಗೆ ಬರುತ್ತಾ ಮೀನು ತಂದು ಫ್ರಿಜ್ ನಲ್ಲಿ ಹಾಕುತ್ತಾನೆ. ಅವಳು ಮಾಡಿಟ್ಟ ಊಟ ಮಾಡಿ ಮಲಗುತ್ತಾನೆ. ಸಂಜೆ ಅವಳು ಮನೆಗೆ ತಲುಪುವಷ್ಟರಲ್ಲಿ ಅವನು ಕೆಲಸಕ್ಕೆ ಹೋಗಿರುತ್ತಾನೆ. ಹೋಗ್ತಾ ಫ್ರಿಜ್ ನಲ್ಲಿಟ್ಟ ಊಟದ ಡಬ್ಬಿ ತೆಗೆದುಕೊಂಡು ಹೋಗುತ್ತಾನೆ. ಅವಳು ಮನೆಗೆ ಬಂದು ಟಿ ಕುಡಿದು, ಒಣಗಿದ ಬಟ್ಟೆ ತಂದು ಫೋಲ್ಡ್ ಮಾಡುತ್ತಾಳೆ . ಬಟ್ಟೆಗೆ ಇಸ್ತ್ರಿ ಹಾಕಿ ಊಟ ಮಾಡಿ ಮಲಗುತ್ತಾಳೆ. ಬೆಳಿಗ್ಗೆ ಅವಳು ಬೇಗ ಎದ್ದು ಫ್ರಿಜ್ ನಲ್ಲಿದ್ದ ಮಿನುಗಳನ್ನು ತೆಗೆದು ಹೊರಗಿಡುತ್ತಾಳೆ. ಅಡಿಗೆ -ಚಪ್ಪಾತಿ ಪಲ್ಯ , ಮೀನಿನ ಖಾದ್ಯಮಾಡಿಡುತ್ತಾಳೆ. ಬೆಳಿಗ್ಗೆ ಒಂದು ಗಳಿಗೆ ಇಬ್ಬರ ಭೇಟಿ. ಅವಳು ಇಬ್ಬರಿಗೂ ಚಹಾ ಮಾಡಿಡುತ್ತಾಳೆ . ಅವಳು ಚಹಾ ಕುಡಿದಾದ ನಂತರ ಅವನು ಬಂದು ಟಿ ಕುಡಿತಾ ಇರುವಾಗಲೇ ಅವಳು ಚಪ್ಪಲಿ ಮೆಟ್ಟಿ ಕೆಳಸಕ್ಕೆ ಹೊರಡುತ್ತಾಳೆ. ಅವಳು ಮನೆಯ ಓಣಿ ದಾಟಿ ಅದ್ರಶ್ಯ ಆಗುವ ತನಕ ಅವು ಕಿಟಕಿಯಿಂದ ನೋಡುತ್ತಾನೆ.
ಈ ಸಿನಿಮಾದಲ್ಲಿ ಸಂಭಾಷಣೆ ಇಲ್ಲ. ಇದು ಯಾವುದೇ ಬಾಷೆಯ ಸಿನಿಮಾ ಆಗಿರ ಬಹುದು ಬೆಂಗಾಲಿ ಶಾಸ್ತ್ರೀಯ ಸಂಗೀತ ಮತ್ತು ಬೆಂಗಾಲಿಯಲ್ಲಿ ಶ್ಲೋಗನ್ ಕೂಗುತ್ತ ಹೋಗುವ ಒಂದು ದೃಶ್ಯ ಇದ್ದುದ್ದರಿಂದ ಇದು ಬೆಂಗಾಲಿ ಸಿನಿಮಾ ಅಂತ ಗೊತ್ತಾಗುತ್ತದೆ. :-)
ನಾನು ಯೂ ಟ್ಯೂಬ್ ನಲ್ಲಿ ನೋಡಿದ್ದು. ಕಪ್ಪು ಬಿಳಿಪು ಸಿನಿಮಾ ಆಗಿತ್ತು. amazon ಪ್ರೈಮ್ ನಲ್ಲಿ ಕಲರ್ ಸಿನಿಮಾ ಸಿಗುತ್ತದೆ. ಯಾರೋ ಅಪ್ಲೋಡ್ ಮಾಡುವಾಗ ಸಿನಿಮಾ ಕಪ್ಪು ಬಿಳುಪಾಯಿತಾ ಗೊತ್ತಿಲ್ಲ, ಆದರೆ ನನಗಂತೂ ತುಂಬಾ ಇಷ್ಟ ಆಯ್ತು. :-) ಯು ಟ್ಯೂಬ್ ಲಿಂಕ್ ಇಲ್ಲಿ ಹಾಕುತ್ತೇನೆ. ಇಷ್ಟ ಇದ್ದವರು ನೋಡ ಬಹುದು. ನಾನಂತು ಈ ಸಿನಿಮಾದಲ್ಲಿ ಕಳೆದು ಹೋದೆ. ನೀವೇನಾದರೂ ನೋಡಿದ್ರೆ ನಿಮಗೇನನ್ನಿಸಿತು ಹೇಳಿ. ಸಿನಿಮಾ ಸ್ವಲ್ಪ ಸ್ಲೋ , ಬಟ್ i like such movies.
ನನಗನ್ನಿಸಿದ್ದು : ಜಗಳ ಮಾಡಕ್ಕೆ ಪುರುಸೋತ್ತಿರಲ್ಲ. ಮತ್ತು ಭಾನುವಾರ ಏನು ಮಾಡುತ್ತಾರೆ ಅಂತ ಕುತೂಹಲ . ಅಥವಾ ಇಬ್ಬರಿಗೂ ಒಟ್ಟಿಗೆ ರಾಜಾ ಇಲ್ಲವೇನೋ
ಸಿನಿಮಾದ blurb ಹೀಗಿದೆ.
Set in the crumbling environs of Calcutta, LABOUR OF LOVE is a lyrical unfolding of two ordinary lives suspended in the duress of a spiraling recession. They are married to a cycle of work and domestic routine, and long stretches of waiting in the silence of an empty house. They share each other's solitude in pursuit of a distant dream that visits them briefly every morning. Incorporating poignant political undertones, director Aditya Vikram Sengupta creates a stylistically beautiful film that depicts the challenges of sustaining love in a fast transitioning world via a simultaneous sensation of breathlessness and space.
Actors
Director
Producer
Writer
Category
ಎಷ್ಟೊಂದು ಬೆಂಗಾಲಿ ಸಿನಿಮಾ ನೋಡಿದೆ ಅಂದ್ರೆ, ಹಿಂದಿನ ತಿಂಗಳು ಕೊಲ್ಕಾತಾ ಗೆ ಹೋದಾಗ ಸಲೀಸಾಗಿ ಓದಿದ್ದು ಮಾತ್ರವಲ್ಲ ಅವರ ಭಾಷೆ ಕೂಡ ಅರ್ಥ ಆಗ್ತಿತ್ತು. ಶ್ರೀಕಾಂತಗಂತೂ ಅಚ್ಚರಿ. :-)
Hi, Amazed that your blog is still there. How could I ignore it for so long beats me. A couple or two might be interested to join your not-for-profit NGO. one couple is well off and can work gratis. The other couple has 2 small kids and will work for a salary. Do you have vacancies?
ReplyDeleteRgds
Shree Kar
Malathi Madam
ReplyDeleteMissing u
Pls come back to blogs
Hello Meena,
DeleteUpdated with a short story
😊😊