February 16, 2018

ಒಂದು ಬೊಂಡದ ಕತೆ


ಟೂರ್ ಎಲ್ಲ ಹೋಗಿ ಬಂದ್ವಿ. ನಮ್ಮ ಮಿತ್ರರು ಹಾಗು ಕಲೀಗ್ ಸಾಲಿಮಠರ ಮಗನ ಮದುವೆ ಇತ್ತು.  ಟೂರ್ ಹೋಗಿ ಬಂದ  ಮೇಲೆ ಯೂರಿನರಿ ಇನ್ಫೆಕ್ಷನ್ ಆಯ್ತು. ಅದಕ್ಕೆ ಎಳನೀರು ಕುಡಿಯಲು ಹೋಗಿದ್ದೆ. ಹಲವಾರು ವರ್ಷದ ಹಿಂದೆ ನಡೆದ ಈ ಘಟನೆ ನೆನಪಾಯ್ತು. 

ಆಗ ನಾವು ಮಹಾಲಕ್ಷ್ಮಿಪುರಂ ನಲ್ಲಿ ಬಾಡಿಗೆ ಮನೆಯಲ್ಲಿಇದ್ವಿ. ಮೋದಿ ಕಣ್ಣಿನ ಆಸ್ಪತ್ರೆ ಬಳಿ ವಾಕ್ ಹೋಗಿದ್ವಿ. ಅಲ್ಲಿ ಒಬ್ಬ ಎಳನೀರು ಮಾರುವವನಿದ್ದ. ಶ್ರೀಕಾಂತ ಅಲ್ಲಿ ಯಾವಾಗ್ಲೂ ಎಳನೀರು ಕುಡಿತಿದ್ರು. ಆ ದಿನ ಹಾಗೆಯೇ ವಾಕ್ ಹೋಗಿ ಎಳನೀರಿನವನ ಬಳಿ ಹೋದ್ವಿ. ತುಂಬಾ ರಶ್ ಇತ್ತು. ಅವನು ಒಂದು ಎಳನೀರು ಕಟ್ ಮಾಡಬೇಕಾದ್ರೆ ಕಾಯಿ ಜಾರಿ ಅವನ ಹೆಬ್ಬೆರಳ  ಸುಮಾರು ಭಾಗ ಕೆತ್ತಿ  ಹೋಯ್ತು. ಸ್ವಲ್ಪ ಹೊತ್ತು ಒತ್ತಿ ಹಿಡಿದ್ರು ರಕ್ತಸ್ರಾವ ನಿಲ್ಲಲಿಲ್ಲ. ನಾನು ಅವನಿಗೆ 'ನೀವು ಡಾಕ್ಟರ್ ಗೆ ತೋರಿಸಿ, ಟೆಟಾನಸ್ , ಹೋಲಿಗೆ ಬ್ಯಾಂಡೇಜ್ ಹಾಕಿಸಿಕೊಂಡು  ಬನ್ನಿ ' ನಾವು ಇಲ್ಲಿ ಕಾಯುತ್ತೇವೆ  ಅಂದೆ.  ಅಲ್ಲೇ  ಹಲವಾರು ಡಾಕ್ಟರ್  ಶಾಪ್ ಗಳಿವೆ. ಅವನು ಆಯ್ತು  ಅಂತ ಹೋದ. ನಾನು ಶ್ರೀಕಾಂತ್ ಆ ಹುಡುಗ ಬರುವ ತನಕ ಎಳನೀರು ವ್ಯಪಾರ ಮಾಡಿದ್ವಿ. ಸುಮಾರುಹೊತ್ತು ಆಯ್ತು ಅವನಿಗೆ ಡಾಕ್ಟರ್ ಬಳಿ. ಅವನು ಬರುವಷ್ಟರಲ್ಲಿ ಸುಮಾರು ವ್ಯಾಪಾರ ಮಾಡಿದ್ವಿ. :-)

ಮೊನ್ನೆ ಇದನ್ನೆಲ್ಲಾ ನೆನೆದು ,ಇದರ ಬಗ್ಗೆ ಬರೀತೀನಿ, ಫೋಟೋ ಗೆ ಪೋಸ್ ಕೊಡು ಅಂತ ನಿಹಾ ಳ ಫೋಟೋ ತೆಗೆದೆ . ನಂಬುತ್ತೀರಾ ಇಲ್ಲವಾ, ಅವನೂ  ಕೈಗೆ ಗಾಯ ಮಾಡಿಕೊಂಡ. ಆದರೆ ಅವಂಗೆ ಸಹಾಯಕರಿದ್ದರು ಹಾಗಾಗಿ ನಾವು ವ್ಯಾಪಾರ ಮಾಡುವ ಪ್ರಮೇಯ ಬರಲಿಲ್ಲ. 

ನಮ್ಮ ಮನೆಯಿಂದ ಫೋರಂ ಮಾಲ್ ಗೆ ನಡೆದುಕೊಂಡು ಹೋಗ ಬಹುದು. ಕೆಲವೊಮ್ಮೆ ರಿಕ್ಷಾ ದವರು ಮಿನಿಮಮ್ ಅಂತ ಬರೋದೇ ಇಲ್ಲ. ಆದಿನ ಹಾಗೆ ಆಯ್ತು. ಕೇಕ್ಗೆ  ಬೇಕಾಗುವ ಸಾಮಗ್ರಿ ತರಲು ಹೋಗಿದ್ವಿ. ರಿಕ್ಷಾ ದವರು ಬರಲಿಲ್ಲ. ನಿಧಾನವಾಗಿ ನಡೆದುಕೊಂಡು ಬರ್ತಾ ಇದ್ವಿ. ನಾನು ನೀರಿನ ಬಾಟಲ್ ತರಲು ಮರೆತಿದ್ದೆ. ಸೆಕೆ ಬೇರೆ. ಹಾಗಾಗಿ ಒಂದು ಎಳನೀರು ಕುಡಿದ್ವಿ. ಅದರಲ್ಲಿ ತುಂಬಾ ಗಂಜಿ ಇತ್ತು. ತಿನ್ನೋದು ಬೇಡ ವಾಗಿತ್ತು ಹಾಗಾಗಿ 'ಹಾಗೆ ಕೊಡಿ ಮನೆಗೆ ಹೋಗಿ ಕಟ್ ಮಾಡ್ತೇನೆ/ ಅಂದೆ. ನಿಮಗೆ ಕಟ್ ಮಾಡಕ್ಕೆ ಬರುತ್ತಾ ಅಂತ ಕೇಳಿದ ಎಳನೀರು ಮಾರುವವ. ನಿಹಾ 'ಹೌದು , ನಮ್ಮಮ್ಮನಿಗೆ ಎಲ್ಲಾ ಬರುತ್ತೆ 'ಅಂದ್ಲು. ಅವನು ನಗುತ್ತಾ ' ಎಷ್ಟು ಖುಷಿಯಾಯ್ತು ಮೇಡಂ ಕೇಳಿ, ಗಂಡಸರೇ ಇಂತಾ ಮಾತು ಹೇಳಲ್ಲಾ ' ಅಂದ  ನಾನು ಇಲ್ಲದ ಮೀಸೆಯಡಿ ನಗುತ್ತಾ ಮನೆಗೆ ವಾಪಸ್ ಆದೆ. 
:-)  


1 comment:

  1. This is so interesting Malathi that you could cut the eLneeru for others! When those people are cutting the coconut open, it looks simple. But find it difficult when I do at home. I want to learn to cut jackfruit, may be you can make a post as the season is around :-)

    ReplyDelete