ಮೊನ್ನೆ ಕ್ರಿಸ್ಮಸ್ ದಿನ ಮಗಳ ಬಿಸ್ಕೂಟ್ ಫ್ಯಾಕ್ಟರಿ ಬಗ್ಗೆ ವಿಶ್ವ ವಾಣಿ ದಿನಪತ್ರಿಕೆಯಲ್ಲಿ ಬಂದಿದೆ. ಕೆಳಗಿನ ಕೊಂಡಿಯಲ್ಲಿ ಓದಿ.
Biscoot Factory
ಇತ್ತೀಚಿಗೆ ಫೇಸ್ ಬುಕ್ ನಿಂದ ಫೋನ್ ನಂಬರ್ ಪಡೆದು ಕೇಕ್ ಆರ್ಡರ್ ಮಾಡಿ ಇಷ್ಟ ಪಟ್ಟದ್ದರು ..ನಮ್ಮ ಸಂಭಾಷಣೆ ಹೀಗೆ ಸಾಗಿತು.
"ನನ್ನ ಮಗಳಿಗೆ ಮೊನ್ನೆ ೧೩ ಆಯಿತು. ಇದೆ ಮೊದಲ ಸಲ ಕೇಕ್ ಆರ್ಡರ್ ಮಾಡಿದ್ದೂ. "
ನಾನು- ಹೌದಾ? ಇಂಟೆರೆಸ್ಟಿಂಗ್ . ಯಾಕೆ?
"ಹುಟ್ಟಿದ ಹಬ್ಬ ಸೆಲೆಬ್ರೇಟ್ ಮಾಡಿದ್ದೇವೆ. ಆದರೆ ಸುಮ್ಮನೆ ಮನೆಯಲ್ಲಿ ಸಿಹಿ ಖಾರ ತಿಂಡಿ. ಕೇಕ್ ನಲ್ಲಿ ಮೊಟ್ಟೆ ಹಾಕುತ್ತಾರೆಂದು ಭಯ "
ನಾನು- ಅರೆ ಈಗ ಎಲ್ಲ ಬೇಕರಿಯಲ್ಲಿ ಮೊಟ್ಟೆ ರಹಿತ ಕೇಕ್ ಲಭ್ಯ ವಿದೆಯಲ್ಲವಾ?
"ಆದರೂ ಬೇರೆ ಐಟಂ ಗಳಿಗೆ ಮೊಟ್ಟೆ ಹಾಕುತ್ತಾರಲ್ಲವಾ? ಅದೇ ಕೈನಿಂದ ಕೇಕ್ ಎಲ್ಲ ಮಾಡುತ್ತಾರೆಂಬ ನನಗೆ ಅನುಮಾನ. ಮೊಟ್ಟೆ ಇದ್ದ ಕೇಕ್ ಒಂದುಸಲ ನಮ್ಮ ಆಫಿಸ್ ಫಂಕ್ಷನ್ ನಲ್ಲಿ
ಟ್ರೈ ಮಾಡಿದೆ. ಅದು ನನ್ನ ಗಂಟಲಿನಿಂದ ಕೆಳಗಿಳಿಯಲೇ ಇಲ್ಲ. ಹುಷಾರು ತಪ್ಪಿದ ಹಾಗಾಯಿತು. ನಮ್ಮ ಮನೆಯಲ್ಲಿಯಾರಿಗೂ ಇಷ್ಟ ಇಲ್ಲ. ಅತ್ತೆ ಮಾವ ಅಂತೂ ತುಂಬಾ ಸಂಪ್ರದಾಯಸ್ಥರು . ನಿಮ್ಮಿಂದ ಆರ್ಡರ್ ಮಾಡಿದ ಕೇಕ್ ತುಂಬಾ ಇಷ್ಟ ಆಯ್ತು. ಅತ್ತೆ ಮಾವ ಕೂಡ ನೂರು ಸಲ ಕೇಳಿಯಾದ ಮೇಲೆ ತಿಂದಿದ್ದು. "
ಅವರು ಈಗಾಗಲೇ ಮೂರು ಸಲ ಕೇಕ್ ಆರ್ಡರ್ ಮಾಡಿದ್ದಾರೆ.
ಕೇಕ್- ಕುಕ್ಕೀಸ್ -ಕಪ್ ಕೇಕ್ಸ್ - ಚಾಕಲೇಟ್ - ಪೈಸ್ ಗಳಿಗೆ call or whatsapp 9902825368
ಇನ್ನಷ್ಟು ಕೇಕ್ ಚಿತ್ರಗಳಿಗೆ ಫೇಸ್ ಬುಕ್ ಪೇಜ್ biscootfactory ನೋಡಿ
ಎಲ್ಲಾರಿಗೂ ಹೊಸ ವರ್ಷ ಶುಭಪ್ರದವಾಗಲಿ
:-) :-)




