ಆಗ ನಾವು ಉಜಿರೆಯಲ್ಲಿದ್ದೆವು. ಕೆ ಟಿ ಗಟ್ಟಿ ಮಾಮನ ಮಹಡಿ ಮನೆಯನ್ನು ಬಾಡಿಗೆಗೆ ಪಡೆದುಕೊಂಡಿದ್ದೆವು. ಅವರ ಮಗಳಿಗೆ ಹುಷಾರಿಲ್ಲ ಅಂತ ಗಟ್ಟಿಯವರು ಮತ್ತು ಯಶೋದಾ ಆಂಟಿ ಪುಣೆ ಗೆ ಹೋಗಿದ್ದರು. ಅಲ್ಲಿ ಹೋದ ಮೇಲೆ ಮಗಳಿಗೆ ಹಲವಾರು ದಿನ ಆಸ್ಪತ್ರೆಯಲ್ಲಿರಬೇಕಾಗಿ ಬರುತ್ತೆ, ಸ್ವಲ್ಪ ಯಮುನಾ (ಯಶೋದಾ ಆಂಟಿ ಯಾ ಅಕ್ಕ) ಅವರಿಗೆ ಪ್ಹ್ರಿಜ್ ಕ್ಲಿನ್ ಮಾಡಲು ಸಹಾಯ ಮಾಡ್ತೀರಾ? ಅವರು ಮಂಗಳೂರಿಗೆ ಹೊರಟಿದ್ದಾರೆ ಅಂತ ಪುಣೆಯಿಂದ ಫೋನ್ ಮಾಡಿದ್ರು. ಆಮೇಲೆ ಯಮುನಾ ಆಂಟಿ ಹೊರಟು ಹೋದ್ರು. ಶ್ರೀಕಾಂತ ಕೂಡ ಮೈಸೂರಿಗೆ ಹೊರಟಿದ್ರು. ಗೇಟ್ ಆ ಕಡೆಯಲ್ಲಿರುವ ಸಚಿನ್ ಮನೆಯವರು ಕೂಡ ಯಾವುದೋ ಸಮಾರಂಭಕ್ಕೆ ಹೋಗಿದ್ದರಿಂದ ಮನೆಯಲ್ಲಿ ನಾನು ಮತ್ತು ಮಕ್ಕಳು ಮಾತ್ರ. ಗಟ್ಟಿಯವರ ಮನೆ ಪೇಟೆಯಿಂದ ದೂರ. ನಮ್ಮ ಮನೆಯಲ್ಲಿ ಫೋನ್ ಇತ್ತು ಆದರು ಅದು ಸರಿಯಿರುತ್ತಿದ್ದದ್ದೇ ಅಪರೂಪ. ಯಾವುದೋ ಕೆಲಸದ ಮೇಲೆ ನನ್ನ ಸ್ನೇಹಿತೆ ಸೂಸಿ ಮನೆಗೆ ಬಂದಿದ್ರು. ಅವರಿಗೆ ನಮ್ಮ ಮನೆಯಲ್ಲೇ ಉಳಿದು ಕೊಳ್ಳಲು ಹೇಳಿದೆ.
ಶ್ರೀಕಾಂತ ರಾತ್ರಿ ಊಟ ಮಾಡಿ ಮೈಸೂರಿಗೆ ಹೊರಟರು. ಮಕ್ಕಳು ಮಲಗಿದ್ದರು. ತಾರಸಿ ಮನೆಯಾದ್ದರಿಂದ ಸೆಕೆ. ಹಾಗಾಗಿ ನಾನು ಸೂಸಿ ಟೆರೇಸ್ ಮೇಲೆ ಇನ್ನೊಂದು ಎತ್ತರದಲ್ಲಿ ನೀರಿನ ಟ್ಯಾಂಕ್ ಮತ್ತು ಡಿಶ್ ಟಿ ವಿ ರಿಸೆಪ್ಟರ್ ಜಾಗಕ್ಕೆ ಹೋಗಿ ಕೂರುವ ಅಂದಾಜು ಮಾಡಿದೆವು. ಕುರುಕುಲು ತಿಂಡಿ ಹಣ್ಣು ಎತ್ತಿಕೊಂಡು, ಮಕ್ಕಳು ಮಲಗಿದ್ದರಿಂದ ಬಾಗಿಲಿಗೆ ಬಿಗ ಜಡಿದು ಟ್ಯಾಂಕ್ ಬಳಿ ಹತ್ತಿದೆವು. ಹೀಗೆ ಲೋಕಾಭಿರಾಮವಾಗಿ ಮಾತಲ್ಲಿ ಮುಳುಗಿದ್ದೆವು. ಹಾಗೆ ಅಡ್ಡಾದೆವು. ಶುಭ್ರ ಆಕಾಶ ಅಲ್ಲಲ್ಲಿ ಚುಕ್ಕೆ ಇಟ್ಟಂತಹ ನಕ್ಸತ್ರಗಳು . ಒಮ್ಮೆಲೇ ಆಕಾಶದಲ್ಲಿ ಸುರು ಸುರು ಬತ್ತಿ ಹಚ್ಚಿದ್ದ ದೃಶ್ಯ. ದೀಪಾವಳಿಯಂತೂ ಇರಲಿಲ್ಲ. ಇದ್ದರು ಈ ರೀತಿ ಪಟಾಕಿ ಮೊದಲೆಲ್ಲೂ ನೋಡಿರಲಿಲ್ಲ ಅಂತ ನಮ್ಮ ನಮ್ಮಲ್ಲೇ ಮಾತನಾಡಿದೆವು. ಆಗ ಮೊಬೈಲ್ ಎಲ್ಲ ಇರಲಿಲ್ಲ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ತಮ್ಮನ ಬಳಿ ಒಂದು ಪೇಜರ್ ಮಾತ್ರ ನೋಡಿದ್ದೆ. :-) ಇಲ್ಲದಿದ್ದರೆ ಈಗಿನ ಹಾಗೆ ಒಂದು ಸೆಲ್ಫಿ ತೆಗೆದುಕೊಳ್ಳಬಹುದಿತ್ತು. ಪೂರ್ತಿ ೧೫ ನಿಮಿಷ ನಮಗೆ ಮನೋರಂಜನೆ.
ಇಂತಹ ಕೆಲವು ಅಪರೂಪ ಡಾ ಸಂಗತಿಗಳನ್ನು ನೋಡಿ ಜೀವನ ಧನ್ಯ ವಾದ ಅನುಭವ.
ಮೊನ್ನೆ ಕೂಡ ಫೇಸ್ ಬುಕ್ ನಲ್ಲಿ ಅಕಾಶದಲ್ಲಿ ಬೆಳಕಿನ ಓಕುಳಿ ನಡೆಯುತ್ತಿದೆಎಂದು ಹಾಕಿದ್ದು, ನಾನು ಬಾಲ್ಕನಿಯಲ್ಲೇ ಪವಡಿಸಿದ್ದೆ , ಆದರೆ ಬಾಲ್ಕನಿಯಿಂದ ಪೂರ್ತಿ ಆಕಾಶ ಕಾಣುವುದಿಲ್ಲ ಮತ್ತು ನಮ್ಮ ಅಪಾರ್ಥಮೆಮ್ಟ್ ನ ಟೆರೇಸ್ ಬಾಗಿಲಿಗೆ ಬಿಗ ಹಾಕಿರುತ್ತಾರೆ. ಟೆರೇಸ್ ಮೇಲೆಲ್ಲಾ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದೆ.
ಓರಿನೋಯ್ಡ್ಸ್, Orionids/starburst galaxy google ಮಾಡಿ ನೋಡಿ ನಿಮಗೂ ಅಂದಾಜು ಆಗಬಹುದು..
ದೀಪಾವಳಿಗೆ ಒಂದು ಚಿಕ್ಕ ಪೋಸ್ಟ್. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು. :-)

No comments:
Post a Comment