September 1, 2016

auto ಅವಾಂತರಗಳು

ಯು ಎಸ್  ನಿಂದ  ಫ್ರೆ೦ಡ್  ಬಂದಿದ್ದರು. ನಾವೆಲ್ಲಾ ಇನ್ನೊಂದು ಫ್ರೆ೦ಡ್  ಮನೆಯಲ್ಲಿ ಊಟಕ್ಕೆ ಸೇರುವುದೆಂದಾಯಿತು. ಮಹಾಲಕ್ಮಿಪುರದಿಂದ ಜಯನಗರ ಒಂಬತ್ತನೆಯ ಬ್ಲಾಕ್ ಗೆ ಬರಬೇಕಿತ್ತು. ಆ ದಿನ ಮನೆಯಲ್ಲಿ ಏನೋ ಗಡಿಬಿಡಿ. ಅರ್ಜೆಂಟ್  ಆಫಿಸಿನ ಕೆಲಸ, ಮಾಲವಿಕಾ ನಿಹಾರಿಕಾ ರ ಲಂಚ್ ಬಾಕ್ಸ್ ಅಂತ ಲೇಟಾಯಿತು. ದಾರಿಯಲ್ಲಿ ಕೇಕ್ ಒಂದನ್ನು ಪಿಕ್ ಮಾಡಬೇಕಿತ್ತು. ಶ್ರೀಕಾಂತ ನನಗೆ ಬೇಕರಿ ತನಕ ಡ್ರಾಪ್ ಕೊಟ್ಟರು ಅಲ್ಲಿಂದ ನನಗೆ ರಿಕ್ಷಾ ಸಿಕ್ಕಿತ್ತು. ಇಷ್ಟೆಲ್ಲಾ ಗಡಿಬಿಡಿಯಲ್ಲಿ ನಾನು ಮೂತ್ರಕ್ಕೆ ಹೋಗದೆ ಕಟ್ಟಿಕೊಂಡು ಬಿಟ್ಟಿತ್ತು. ಆಟೋ ದವಾ ಇದ್ದ ಬದ್ದ ಹೊಂಡದಲ್ಲೆಲ್ಲ ರಿಕ್ಷಾ ಓಡಿಸ್ತಾ ಇದ್ದ. 
ಸ್ವಲ್ಪ ದೂರ ಹೋದ ಮೇಲೆ, 'ಹಾಲೋ, ಏನ್ರಿ ಇವತ್ತು ಮನೆಯಲ್ಲಿ ಉಪ್ಪಿಟ್ಟಾ? ಇನ್ನೊಂದು ಹೊಂಡದಲ್ಲಿ ರಿಕ್ಷಾ ಓಡಿಸಿದರೆ ನಾನು ಸತ್ತೇ ಹೋಗ್ತೀನಿ ಅಂದೆ'
ಅಯ್ಯೋ ಏನಾಯ್ತ್ರಿ ಮ್ಯಾಡಮ್ ? ಮೊದಲೇ ಹೇಳೋದಲ್ವಾ? ನಿಧಾನಕ್ಕೆ ಓಡಿಸ್ತಿನಿ. ಅಂದಹಾಗೆ ನಮ್ಮ ಹೆಂಡ್ರು ಇವತ್ತು ಏನು ಮಾಡಿಲ್ಲ. ಇನ್ನು ಟಿಫನ್ ಆಗಬೇಕಷ್ಟೆ ಮ್ಯಾಡಮೊರೆ. ನಾನು ರಿಕ್ಷಾ ಓಡಿಸಿ ಆದಷ್ಟು ದುಡ್ಡು ಓಟ್ಟು  ಮಾಡುವ ಪ್ರಯತ್ನ ಮಾಡ್ತಿವ್ನಿ. ಅದು ಸಾಕಾಗೋಲ್ಲ ಅಂತೆ. ಆಕೆ ಚೀಟಿ  ವ್ಯವಹಾರ ಮಾಡ್ತಾಳಂತೆ, ನಾನು ಬೇಡ ಅಂದಿದ್ದಕ್ಕೆ ಸಿಟ್ಟು ಮ್ಯಾಡಮ್. ಮದುವೆ ಮುಂಚೆನೇ ನಾನು ರಿಕ್ಷಾ ಓಡಿಸೋದು ಆಕೆಗೆ ಗೊತ್ತಿತ್ತು. ಚೀಟಿ ವ್ಯವಹಾರ ಎಲ್ಲ ನಮಗೆ ಹೇಳಿದ್ದಲ್ಲ. ನನ್ನ ತಲೆ ಎಲ್ಲಾ ಹಾಳಾಗಿದೆ ಮ್ಯಾಡಂ !! 
"ಎಲ್ಲಾದ್ರೂ ನಿಲ್ಲಿಸಿ ತಿಂಡಿ ತಿನ್ನಿ ಎಷ್ಟು ಲೇಟ ಆಗಿದೆ" ಅಂದಿದ್ದಕ್ಕೆ. ಜಯನಗರ ಕಡೆ ಬೇಜ್ಜಾನ್ ಹೋಟಲ್ ಗಳಿದ್ದಾವೆ. ಅಲ್ಲೇ ಏನಾದ್ರೂ ತಿಂತಿನಿ  ಅಂದ. 
ಜಯನಗರ ತಲುಪಿದ ಮೇಲೆ ದಾರಿ ಸ್ವಲ್ಪ ಕನ್ಫ್ಯೂಸ್ ಆಯ್ತು. ಕೇಕ್ ಹಿಡಿದುಕೊಂಡು ಮನೆ ಹುಡುಕೋದು ಅನುಕೂಲ ಆಗ್ತಿರಲಿಲ್ಲ. ಆದರೂ ಒಂಚೂರು ಬೇಸರಿಸಿಕೊಳ್ಳದೆ ನನ್ನ ಎಡ್ರಸ್ ಚೀಟಿ ಹಿಡಿದುಕೊಂಡು ನಾಲ್ಕೈದು ಕಡೆ ಕೇಳಿ ನನ್ನನ್ನು ಫ್ರೆನ್ಡ್  ಮನೆಗೆ ಬಿಟ್ಟರು. ತುಂಬಾ ಥ್ಯಾಂಕ್ಸ್ ಕಣ್ರೀ. ನಿಮಗೆ ಒಳ್ಳೆದಾಗಲಿ ಅಂದೆ. 
ಅಷ್ಟ೦ದ್ರಲ್ವಾ? ಅದೇ ಸಾಕು ಮ್ಯಾಡಮ್ ಅಂದ 

ಎಪಿಸೋಡ್ -೨ 
ಇದು ಇತ್ತೀಚಿಗೆ ನಡೆದಿದ್ದು. ಅಕ್ಕ ಕೇಕ್ ಒಂದನ್ನು ರಾಮಯ್ಯ ಕಾಲೇಜ್ ಕಡೆ ಒಯ್ಯಬೇಕಿತ್ತು. ಅದು ಯು ಎಸ ನಿಂದ  ಬಂದ ಆರ್ಡರ್, ಅವರ ವಯಸ್ಸಾದ ಅತ್ತೆ ಮಾವಂದರಿಗೆ ಕೇಕ್ ತಲುಪಿಸಬೇಕಿತ್ತು. ತುಂಬಾ ದೊಡ್ಡ ಕೇಕ್ ಅಥವಾ ಅವರ ಮನೆಗೆ ಹೋಗಿ ಸೆಟ್ ಮಾಡುವ ಕೆಲಸ ಇದ್ದರೆ, ನಾನು ಅಕ್ಕನ ಜತೆ ಹೋಗುತ್ತೇನೆ . ಅಲ್ಲಿ ತಲುಪಿದ ಮೇಲೆ ದಾರಿ ಗೊತ್ತಾಗಲಿಲ್ಲ. ಸ್ವಲ್ಪ ಸುತ್ತಾಡಬೇಕಾಯ್ತು. ಆಟೋದವನ ಆಟಾಟೋಪ ನೋಡಬೇಕಿತ್ತು! 'ಸರಿ ದಾರಿ ಗೊತ್ತಾಗಿಲ್ಲಾ ಅಂದ್ರೆ ಯಾರನ್ನಾದ್ರೂ ಕೇಳಬೇಕು, ಇಲ್ಲ ಆ ಮನೆಯವರನ್ನು ಇಲ್ಲಿ ಬರಲಿಕ್ಕೆ ಹೇಳಿ' ಅಂತ ವರಸೆ ಶುರು ಮಾಡಿದ. ನಾನು- ಅಲ್ಲಪ್ಪ ನಮಗೂ ಈ ಏರಿಯಾ ಹೊಸತು, ಮತ್ತು ವಯಸ್ಸಾದ ದಂಪತಿಗಳು, ಈ ಮಳೆಯಲ್ಲಿ ಅವರನ್ನೆಲ್ಲಿ ಬರಲಿಕ್ಕೆ ಹೇಳೋದು ಅಂತ ಕೇಳಿದೆ. ...ಮತ್ತೆ ನಿಮಗೆ ಮೀಟರ್ ಮೇಲೆ ಹತ್ತು ರೂಪಾಯಿ ಜಾಸ್ತಿನೇ ಕೊಡ್ತಿದ್ದೀವಿ, ಯಾಕೆ ಇಷ್ಟು ಗಲಾಟೆ? ನಾವೇನು ಸಂ ಸುಮ್ನೆ ಈ ಕಡೆ ಬಂದಿದ್ದೀವಾ? ಕೆಲಸ ಇರೋದಿಂದಲೇ ಬಂದಿದ್ದು  ?
" ಇಳೀರಿ ಮ್ಯಾಡಮ್  (ಅಕ್ಕ ಆಗಲೇ ಇಳಿದು ಕ್ರಾಸ್ ರೋಡ ಚೆಕ್ ಮಾಡ್ತಾ ಇದ್ಲು. ಜಿ ಪಿ ಎಸ ಬೇರೆ ಹಾಕ್ಕೊ೦ಡಿದ್ಲು) ಲೇಟ ಆಗ್ತಾ ಇದೆ' ಅಂದ. 'ಅರೆ ನಮಗೂ ಮನೇಲಿ ಕೆಲಸ ಇದೆ' (ಅಕ್ಕನಿಗೆ ಇನ್ನೊಂದು ಕೇಕ್ ಆರ್ಡರ್ ಇತ್ತು ). ನೀವು ಎಲ್ಲಿ ಬೇಕು ಅಲ್ಲಿ ಅಲೆದಾಡಿ ಮ್ಯಾಡಮ್, ನನ್ನ ಕಾಸ್ ಕೊಡಿ, ನಾ ಹೊಂಟೋಯ್ತಿನಿ  ಅಂದ. ನಾನು ಸರ್ಕಸ್ ಮಾಡಿ (ಕೇಕ್ ,ಕೊಡೆ , ಪರ್ಸ್ ಬ್ಯಾಗ್ ಎಲ್ಲ ನನ್ನತ್ರ ಇದ್ದವು) ಅವನ ಮೀಟರ್ ದುಡ್ಡು ಕೊಟ್ಟು ಅಷ್ಟೇ ಸರ್ಕಸ್ ಮಾಡ್ತಾ ಕೇಕ್ ಕೊಡೆ ಎಲ್ಲ ಬ್ಯಾಲನ್ಸ್ ಮಾಡ್ತಾ ಇದ್ದೆ. ಸಧ್ಯ ಮಾಲವಿಕಾ ಗೆ ಮನೆ ಸಿಕ್ಕಿ ಬಿಡ್ತು. ನಾವು ಇಳಿದ ಜಾಗದಲ್ಲೇ ಸ್ವಲ್ಪ ಮುಂದಕ್ಕೆ ತಿರುಗಿದ್ರೆ ಅವರ ಮನೆ. ಆಟೋ ದವನ ರಂಪ ಎಲ್ಲ ಹೇಳ್ದೆ. ಕೇಕ್ ಡೆಲಿವರಿ ಆದ ಮೇಲೆ ಓಲಾ ದವರಿಗೆ ಕಂಪ್ಲೈ೦ಟ ಕೊಟ್ಟಳು ಅಕ್ಕ ಫಾರ್ rude behaviour 

ಎಪಿಸೋಡ್ -೩
ಇದು ಹಾಗೆ ದೂರದಲ್ಲಿ ಕೇಕ್ ಡೆಲಿವರಿ ಮಾಡಲು ಹೋಗಿದ್ವಿ. ಇದು ಕೂಡಾ ಓಲಾ ಆಟೋ. ಹತ್ತುವ ಮುಂಚೆನೇ ಹೇಳಿದ್ದೆ ನಮಗೆ ದಾರಿ ಗೊತ್ತಿಲ್ಲ ಅಂತ. ಅವನೇನು ಮಾತನಾಡಲಿಲ್ಲ. ಎಡ್ರೆಸ್ ಅವನ ಮೊಬೈಲ್  ನಲ್ಲಿ ಹಾಕಿಕೊಂಡು ಮ್ಯಾಪ್ ಹಾಕ್ಕೊಂಡ . ಒಂದಷ್ಟು ದೂರ ತಲುಪಿದ  ಮೇಲೆ ಅವನ ಸೆಲ್ ಫೋನ್ ನ ಮ್ಯಾಪ್ ತೋರಿಸೋದು ನಿಂತು ಹೋಯ್ತು. ಆದರೆ ಎಲ್ಲ ಕಡೆ ಬೇರೆ ರಿಕ್ಷಾದವರನ್ನು ಕೇಳಿಕೊಂಡು ಹೋದ. ನಮಗೆ ಹೋಗಬೇಕಾದ ಏರಿಯಾ ಸಿಕ್ಕಿದ್ರು ಮನೆ ಹುಡುಕಲಿಕ್ಕೆ ಕಷ್ಟ ಆಗಿ  ದಾರಿಹೋಕರನ್ನು ಕೇಳಬೇಕಾಯ್ತು, ಅವರೆಲ್ಲ ' ಓ ಆ ಮನೆನಾ? ಅಂತ ಖುಷಿಯಿಂದ ವಿಳಾಸಕ್ಕೆ ಹೋಗುವ ದಾರಿ ಹೇಳಿದ್ರೂ  ಒಂದೆರಡು ಕನ್ಫ್ಯೂಷನ್. 'ಮ್ಯಾಡಮ್ ಎಲ್ಲರಿಗು ಆ ವ್ಯಕ್ತಿಯ ಪರಿಚಯ ಇದೆ' ಅವರು ಫಿಲ್ಮ್ ನವರಾ ಮ್ಯಾಡಮ್? 'ಅಲ್ಲ ಆದರೆ ಸುಪ್ರಸಿದ್ದ ನೃತ್ಯಗಾತಿ' ಅಂದೆ . ಟಿ ವಿ ನಲ್ಲೆಲ್ಲಾ ಬರ್ತಾರಾ? ಬಹುಶ: ಬರ್ತಾರೇನೋ. ನನಗೆ ಅವರ ಹೆಸರ ಪರಿಚಯ ಇದೆ ಆದರೆ ಅವರ ಡ್ಯಾನ್ಸ್ ನಾ ನೋಡಿಲ್ಲ ಅಂದೆ. ಮತ್ತೆ ನಮ್ಮನೇಲಿ ಟಿವಿ ಇಲ್ಲ ಅಂತಲೂ ಹೇಳಿದೆ. ಅವನಿಗೆ ಸಕತ್ ಟೆನ್ಷನ್ ಯಾಕೆ ಮ್ಯಾಡಂ ಟಿ ವಿ ಇಟ್ಟುಕೊಂಡಿಲ್ಲಾ? ಮತ್ತೆ ಬೋರ್ ಆದ್ರೆ ಏನು ಮಾಡ್ತೀರಿ ...ಮುಂತಾದ್ದು, ನಾನು 'ಓದುತ್ತೇನೆ ಅಂದೆ' ಅದು ಒಳ್ಳೇದೇ ಬಿಡಿ ಮ್ಯಾಡಮ್ , ನಮ್ಮನೇಲಿ ಟಿ ವಿ ಇಲ್ಲದಿದ್ದರೆ ಆಗೋದೇ ಇಲ್ಲ ಅಂತ ಸೇರಿಸಿದ.  ಅಷ್ಟ್ರಲ್ಲಿ ಅವರ ಮನೆಗೆ ಹೋಗುವ ಹಾದಿಗೆ ಅರಂಧತೀ  ನಾಗ್ ' ರಸ್ತೆ ಅಂತ ಬೋರ್ಡ್ ನೋಡಿ ಅವನಿಗೆ ಸಿಕ್ಕಾಪಟ್ಟೆ excitement . ಮ್ಯಾಡಮ್ ಶಂಕರ್ ನಾಗ್ ಅವರ ಹೆಂಡ್ರ ಹೆಸರು ' ಅಂತ. ಆ ಜಾಗ ವಂತೂ ನಮ್ಮ ಮನೆಯಿಂದ ಬೇರೆ ಊರು ಅನ್ನುವಷ್ಟು -ಸುಮಾರು ದೂರ ಇತ್ತು. ನಮಗೆ ವಾಪಸ್ ಬರಲು ವೆಹಿಕಲ್ ಸಿಕ್ಕೋದು ಸಂಶಯ  ಇತ್ತು. ಏನು ಮಾಡೋದಪ್ಪಾ ಅಂತ ಯೋಚಿಸ್ತೀರ ಬೇಕಾದ್ರೆ. ಆಟೋ ದವನೇ ಐಡಿಯಾ ಕೊಟ್ಟ. ಐದು ನಿಮಿಷ ಬಿಟ್ಟು ಆಟೋ ಬುಕ್ ಮಾಡಿ. ನಾನು ಇದೆ ಏರಿಯಾದಲ್ಲಿದ್ದೇನೆಂತ  ಆ ಆರ್ಡರ್ ನನಗೆ ಬರುತ್ತೆ ಅಂತ. ನನಗು ಸಮಂಜಸವೆನಿಸಿತು. ಅಲ್ಲಿ ಆಗಲೇ ಫಂಕ್ಷನ್ ನಡಿತಾ ಇತ್ತು , ಬಂದವರೆಲ್ಲ ಅವರವರ ವಾಹನಗಳಲ್ಲೇ ಬಂದಿದ್ದರು. ಜನನಿಬಿಡ ಪ್ರದೇಶ ... ಆದರೆ ಅಲ್ಲಿ ನೆಟ್ವರ್ಕ್  ಇಲ್ಲದೆ ನಮ್ಮ ಫೋನ್ ಕನೆಕ್ಟ್ ಆಗ್ತಾನೆ ಇರಲಿಲ್ಲ. ಆಟೋ ದವನು ಇರಲಿ ಬಿಡಿ ಮ್ಯಾಡಮ್ ಸುಮ್ನೆ ಮೀಟರ್ ಹಾಕ್ಕೊಂಡು  ಕರೆದುಕೊಂಡು ಹೋಗ್ತೀನಿ ಅಂದ . ಸರಿ ಅಂತ ನಾವು ಆರಾಮಾಗಿ ಅವನ ರಿಕ್ಷಾದಲ್ಲೇ ಬಂದ್ವಿ.  ಕೇಕ್ ಬೆಲೆಗಿಂತ ನಮ್ಮ ಟ್ರಾವೆಲ್ ಚಾರ್ಜ ಜಾಸ್ತಿ ಇತ್ತು. ಈ ತರಹ ಹಲವಾರು ಆರ್ಡರ್ ಬಂದಿವೆ :-) 
ಇನ್ನು ಕೆಲವು ಮುಂದಿನ ಸಲ. ಒಂದೆರಡು ಕೆಟ್ಟ ಅನುಭವ ಬಿಟ್ರೆ ನಮಗೆ ಸಿಕ್ಕಿದ ಆಟೋ ದವರು ಒಳ್ಳೆಯವರು

ಇಲ್ಲಿವೆ ಕೆಲ ಹಳೆ ಆಟೋ ಕತೆಗಳು
http://malathisanchiyinda.blogspot.in/2012/03/blog-post.html

http://malathisanchiyinda.blogspot.in/2014/05/blog-post_11.html

No comments:

Post a Comment