ಆ ಮನೆಯಲ್ಲಿ ಗದ್ದಲವೋ ಗದ್ದಲ. ಅಲ್ಲಿ ಒಂದು ಮರಣ ಘಟಿಸಿತ್ತು. ತಾಯಿ ತನ್ನ ಮಗನ ಕಳೇಬರವನ್ನು ನೆಟ್ಟ ನೋಟದಲ್ಲಿ ನೋಡುತ್ತಿದ್ದಳು. ಮುಖದಲ್ಲಿ ಯಾವುದೇ ವಿಕಾರವು ಇರದೇ. ಕಣ್ಣಲ್ಲಿ ನೀರಿನ ಪಸೆ ಕೂಡ ಇರಲಿಲ್ಲ. ಆಕೆಯ ಅತ್ತೆ ಆಕೆಗೆ ತಿವಿದು, 'ಏನಾದರೂ ಉಸುರು, ಅತ್ತು ಬಿಡು , ಹೀಗೆ ಸುಮ್ಮನೆ ಮಾತ್ರ ಇರಬೇಡ' ಅಂತ ಒಂದುಕಡೆ ಹೇಳುತ್ತಲೂ, ಇನ್ನೊಂದು ಕಡೆ ಎದೆ ಬಡಿದು ಅಳುತ್ತಿದ್ದಳು. ಮಗನ ತಂದೆಯಂತೂ ಮೂರ್ಛೆ ಹೋಗಿ ಸಂಬಂಧಿಕರು ಗಾಳಿ ಹಾಕಿ ಮುಖದ ಮೇಲೆ ನೀರು ಚಿಮುಕಿಸುತ್ತಿದ್ದರು .
ಅತ್ತೆ ಇನ್ನೊಮ್ಮೆ ಆಕೆಯನ್ನು ತಿವಿದಾಗ, ಆಕೆ ರುದ್ರಾವತಾರ ತಾಳಿ , ಅತ್ತೆಯನ್ನು ದೂರ ನೂಕಿ 'ಯಾಕಳಬೇಕು ನಾನು? ಅದೂ ಪ್ರೀತಿ ಮಾಡಿದವಳು ಸಿಗಲಿಲ್ಲವೆಂದು ಸತ್ತವನಿಗೋಸ್ಕರ?. ಅಷ್ಟೇಯಾ ಜೀವನ ಅಂದ್ರೆ?
ಅಳಬೇಕಾದವರು ನೀವು. ಮೊದಲನೇಯದು ಹೆಣ್ಣು ಮಗುವಾಯ್ತು ಯಾಕೋ ಸುಮ್ಮನಿದ್ರಿ. ಆದರೆ ನನ್ನ ನನ್ನ ಆರೋಗ್ಯ ಕೆಟ್ಟು hOgiddaroo ಎರಡು ಮೂರೂ ನಾಲ್ಕು ಹೆಣ್ಣು ಭ್ರೂಣಗಳನ್ನು , ಗಂಡು ಮಗು ಹೆರುವ ತನಕ , ,ನಿಮ್ಮಿಂದಾಗಿ ಸಾಯಿಸಲಿಲ್ಲವೇ? ಅದರ ಪಾಪ ನಿಮಗೆ ತಗುಲಿದೆ. ಗಂಡು ಮಗು ಎಂದು ನೀವು , ಅವನ ತಂದೆ ಸೇರಿ ತಲೆ ಮೇಲೆ ಏರಿಸಿ ಕುರಿಸಿದ್ರಿ. ಕೇಳಿದ್ದನ್ನೆಲ್ಲ ಕೊಡಿಸಿದ್ರಿ. ಈಗ ಹುಡುಗಿಯೊಬ್ಬಳ ಪ್ರೀತಿ ಸಿಗಲಿಲ್ಲ ವೆಂದು ಆತ್ಮಹತ್ಯೆ ಮಾಡಿದವನಿಗೋಸ್ಕರ ನಾ ಖಂಡಿತ ಅಳಲಾರೆ.
ಅಲ್ಲೇ ಇದ್ದ ಮಗಳು 'ಬಾ ಅಮ್ಮ ನನ್ನ ಜತೆ ' ಅಂದಾಗ ಅವಳ ಆಸರೆ ಪಡೆದು ಆಚೆ ನಡೆದಳಾಕೆ.















