April 10, 2016

ಅಡುಗೆಯ ನೆನಪುಗಳು

೧೯೮೬-೮೭ ರ ಸಮಯ. ಕೊಪ್ಪ.  ಆಗ ರಾತ್ರಿ ೧೧. ೦೦ ಗಂಟೆಗೆ ದೂರದರ್ಶನದಲ್ಲಿ ಶನಿವಾರ  In Retrospective ಟ್ಯಾಗ್ ನ ಅಡಿ ದೇಶ ವಿದೇಶ ಗಳ ಒಳ್ಳೆಯ  ಸಿನಿಮಾಗಳು  ಪ್ರಸಾರ ವಾಗುತ್ತಿತ್ತು. ಆ ದಿನ ರಾತ್ರಿ ನಮ್ಮಲ್ಲಿ ಪಾರ್ಟಿ. ಆಗ ಪ್ರತೀ ವಾರ್ಯಾಂತ ಶ್ರೀಕಾಂತರ ಬ್ಯಾಚುಲರ್ ಫ್ರೆಂಡ್ಸ್ ಎಲ್ಲ ನಮ್ಮಲ್ಲಿ ಊಟಕ್ಕೆ ಇರುತ್ತಿದ್ದರು. ಕರೆಂಟ್ ಇರುತ್ತಿದ್ದದ್ದೆ ಅಪರೂಪ. ಆ ದಿನ ಹಾಗೆ, ಫ್ರೆಂಡ್ಸ್ ಎಲ್ಲ ಊಟ ಮಾಡಿ ಹೋದರು. ನನಗೋಸ್ಕರ ಎಲ್ಲ ಸ್ವಲ್ಪ ಸ್ವಲ್ಪ ಅಡಿಗೆ ಉಳಿದಿತ್ತು. ಸಿನಿಮಾ ಇನ್ನು ಕೆಲವೇ ಕ್ಷಣದಲ್ಲಿ ಪ್ರಾರಂಭವಾಗಬೇಕು. ಆ ದಿನ ರಾಜ್ ಕಪೂರ್ ನ ಮೇರಾ ನಾಮ್ ಜೋಕರ್ ಪ್ರಸಾರವಾಗುವುದಿತ್ತು. ಕರೆಂಟೂ ಇತ್ತು. ಒಂದು ದೊಡ್ಡ ಎಲೆ ತಂದು,ಟಿ ವಿ ಮುಂದೆ   ಹಾಲ್  ನಲ್ಲಿ ಹಾಸಿಟ್ಟು ಅದರಲ್ಲಿ ಉಳಿದ ಎಲ್ಲ ಅಡುಗೆ ಬಡಿಸಿ, ಇನ್ನೇನು ಊಟ ಬಾಯಿಗೆ ಹಾಕ್ಕೋ ಬೇಕು...ಅಷ್ಟರಲ್ಲಿ ಧಡ್ ಧಡ್ ಅಂತ ಬಾಗಿಲ ಸದ್ದು. ಬಂದವರಾರೆಂದು ನೋಡಲು ಯಾವ ಮಾರ್ಗವು ಇರಲಿಲ್ಲ. ಬಾಗಿಲು ತೆರೆದೇ ನೋಡ ಬೇಕು. ಶ್ರೀಕಾಂತ ರಾತ್ರಿ ಆಫಿಸ್ ನ ಫೀಲ್ಡ್ ವರ್ಕ್ ಎಲ್ಲ ಮುಗಿಸಿ ರಾತ್ರಿ ಬರುವುದೇ ತಡವಾಗಿರುತ್ತಿತ್ತು. ಕೊಪ್ಪಕ್ಕೆ  ಮೊದಲು, ಬಂದ ಹಾಗೆ ನಾನು ತುಂಬಾ ಹೆದರ್ತಿದ್ದೆ ಕತ್ತಲೆಗೆ, ಹಾಗಾಗಿ ನಾನು ಬಾಗಿಲ ಬಳಿ ಒಂದು ದಪ್ಪನೆಯ ದೊಣ್ಣೆ ಹಾಗು ಹಂಟಿಂಗ್ ಟಾರ್ಚ್ ಯಾವಾಗಲೂ ಇಟ್ಟಿರುತ್ತಿದ್ದೆ. ಅದು ಅದರ ಜಾಗದಲ್ಲಿದ್ದದ್ದು ಖಾತರಿ ಮಾಡಿ, ಶ್ರಿಕಾಂತ ಗೆ ಸನ್ನೆಯಿಂದಲೇ 'ನಾನು ಎಲೆ ಅಡಿಗೆ ಮನೆಗೆ ಒಯ್ದು  ಇಡ್ತೇನೆ, ಆಮೇಲೆ ಬಾಗಿಲು ತೆಗಿರಿ ಅಂದೆ. ನಾನು ಹೊರಗೆ ಬಂದು ನೋಡ್ತೇನೆ.... ಕೆದರಿದ ಕೂದಲಿನ, ಕೆಂಪು ಕಣ್ಣಿನ ಆಸಾಮಿ. 'ನನ್ನ ಹೆಸರು ಗೋಪಿ, ರಾಮಕೃಷ್ಣ (ಶ್ರೀಕಾಂತ ಕಸಿನ್) ನಿಮ್ಮ ಹೆಸರು ಸೂಚಿಸಿದ್ರು. ನಾನು ಪಶ್ಚಿಮ ಘಟ್ಟ ಉಳಿಸಿ ಪಾದಯಾತ್ರೆಯಲ್ಲಿ ಪಾಲೊಂಡಿದ್ದೆ. ಇವತ್ತು ವಾಪಸ್ ಶಿವಮೊಗ್ಗೆಗೆ ಹೋಗಲು ಯಾವುದೇ ವಾಹನ ಸೌಕರ್ಯ ಸಿಗಲಿಲ್ಲ. ......ನಾನು ಬಿಟ್ಟ ಬಾಯಿಯಿಂದ ನೋಡುತ್ತಲೇ ಇದ್ದೆ. ರಾತ್ರಿ ಮಲಗಲು ಜಾಗ ಬೇಕಿತ್ತು. ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಹೊರಡುತ್ತೇನೆ ಎಂದರು. ತಕ್ಷಣ ಸಾವರಿಸಿ 'ಒಳಗೆ ಬನ್ನಿ ಅಂದ್ರು ಶ್ರೀಕಾಂತ . ಗೋಪಿ ಬಗ್ಗೆ ನಮಗೆ ಕೇಳಿ ಗೊತ್ತಿತ್ತು. ನೋಡಿದ್ದು ಇದೇ ಮೊದಲು. ಊಟ ಮಾಡ್ತೀರಾ ಅಂದೆ.... ಹೌದು ಜೋರು ಹಸಿವೆಯಾಗಿದೆ ಅಂದ್ರು. 
'ಸ್ವಲ್ಪ ಹೊತ್ತು ಕಾಯಬೇಕಾಗಬಹುದು ಅಂದೆ. ಅಡ್ಡಿಯಿಲ್ಲ ಅಂದ್ರು. ಶ್ರೀಕಾಂತ ಅವರಿಗೆ ಟವೆಲ್ ಕೊಟ್ಟು ಸ್ನಾನಕ್ಕೆ   ಕಳುಹಿಸಿದರು. ಕೊಪ್ಪದಲ್ಲಿ ಚಳಿ ಇತ್ತು ಆವಾಗ, ಹಾಗಾಗಿ ನಾನು ಬಿಸಿ ನೀರನ್ನು  ತಪ್ಪಿಸುತ್ತಿರಲಿಲ್ಲ. ಮುಂಬೈನಲ್ಲಿ ಹುಟ್ಟಿ ಬೆಳೆದ ನನಗೆ ಕೊಪ್ಪ ದಲ್ಲಿನ ಚಳಿ ಆಕಸ್ಮಿಕ/ಅಚ್ಚರಿ . ತೀರ್ಥಹಳ್ಳಿ  ಗಿಂತ ಕೊಪ್ಪದಲ್ಲಿ ಚಳಿ ಜಾಸ್ತಿ. 
ನಾನು ಫ್ರೆಶ್ ಆಗಿ ಅಡಿಗೆ ಮಾಡಬೇಕಿತ್ತು. ತೊಗರಿ ಬೇಳೆ, ಅಕ್ಕಿ ಮೊದಲು ಕುಕ್ಕರಿನಲ್ಲಿಟ್ಟೆ. ಕ್ಯಾಬೇಜ್ ಇತ್ತು ಅದನ್ನು ಕತ್ತರಿಸಿ ಪಲ್ಯ ಮಾಡಿದೆ. ಕುಕ್ಕರ್ ಆರಿದ ಮೇಲೆ ತೊವ್ವೆಗೆ ಒಗ್ಗರಣೆ ಹಾಕಿ, ಬೇಗ ಬೇಗ  ಹಪ್ಪಳ ಸಂಡಿಗೆ ಕರಿದೆ. ಉಪ್ಪಿನಕಾಯಿ ಹೇಗೂ ಇತ್ತು.  ಅಷ್ಟು ರಾತ್ರಿ ಸರಿಯಾಗಿ  ಊಟ ಮಾಡುತ್ತಾರೋ ಎಂಬ ದೌಟ್  ಇತ್ತು. ಆಮೇಲೆ   ಟೇಬಲ್ ಮೇಲೆ ಎಲೆ ಹಾಕಿ ಊಟ ಬಡಿಸಿದೆ. ಊಟ ಚೆನ್ನಾಗಿದೆ, ಹಸಿವೆಯಾಗಿತ್ತು ಅಂತ, ಅವರ ಚಳುವಳಿ ಬಗ್ಗೆ ಮಾತಾಡ್ತಾ ಊಟ ಮುಗಿಸಿದ್ರು.  ಅವರಿಗೆ ಹಾಲ್  ನಲ್ಲೇ ಹಾಸಿಗೆ ಹಾಕಿದೆವು. ನಮ್ಮ ಸಿನಿಮಾ ಪ್ರೋಗ್ರಾಂ ಕ್ಯಾನ್ಸೆಲ್. ಆದ್ರೂ ಮನಸೀಗೆ ಏನೋ ಸಮಾಧಾನ. ಅವರು ಹೇಳಿದ ಹಾಗೆ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಹೊರಟ್ರು. ಬಹುಶ: ರಾತ್ರಿ ಎರಡೆ ಗಂಟೆ ನಿದ್ದೆ ಮಾಡಿರಬೇಕು ನಾವು. 
ಆಗ ಅಡಿಗೆ ಮಾಡಿ ಬಡಿಸೋದ್ರಲ್ಲಿ ಏನೋ ಖುಶಿ ಮುಂಬೈಯಾ , ನಾರ್ತ್  ಇಂಡಿಯನ್ ಅಡುಗೆ, ಹೊಸ ರುಚಿ ಇವೆಲ್ಲವನ್ನೂ ಶ್ರೀಕಾಂತ ಫ್ರೇಂಡ್ಸ್, ನಮ್ಮ ಸಂಬಂಧಿಕರಿಗೆ ಅಡುಗೆ ಮಾಡೋದ್ರಲ್ಲಿ ಏನೋ ಥ್ರಿಲ್  . ಈಗ ಅಡುಗೆ ಮನೆಯೆಂದ್ರೆ ಬೇಸರ. ಆ ಕಡೆ ಹೋಗಲೂ ಕೆಲವೊಮ್ಮೆ ಮನಸ್ಸಿರಲ್ಲ. ತಂಗಿಗೆ ಹೇಳಿದ್ರೆ. you have become a burn out  ಅಂತಾಳೆ. ನನ್ನ ತಮ್ಮ ಅಮ್ಮ ಎಲ್ಲ ನನ್ನ ಆಗಿನ ಅಡುಗೆಯ ಬಗ್ಗೆ ಮೆಚ್ಚುಗೆಯ ಮಾತಾಡಿ, ಈಗ ಯಾಕೆ ಹಾಗಾಗಿದ್ದೀಯಾ ಅಂತ ಕೇಳ್ತಾರೆ. :-)
ಮತ್ತು ಆಪ್ತ ಮಿತ್ರ ಗುರು ' ಅಡಿಗೆ ಮಾಡಕ್ಕೆ ಇಷ್ಟ ಇಲ್ಲಾ ಅಂತ ಹೇಳ್ತಾ ಇಷ್ಟು ರುಚಿಯಾದ ಅಡುಗೆ ಮಾಡ್ತಿಯಾ, ಇನ್ನು ಮನಸ್ಸಿಟ್ಟು ಮಾಡಿದ್ರೆ ನಾವು   ಊಟದ ಸಮೇತ ನಮ್ಮ ಬೆರಳುಗಳನ್ನು ಮುಗಿಸುತ್ತಿದ್ವೋ ಏನೋ ಅಂತ ತಮಾಷೆ ಮಾಡ್ತಾನೆ. 
ನನಗೆ ಈಗ ಅಡಿಗೆ ಮಾಡಲು ಬೇಜಾರಾದ್ರೆ ಶ್ರೀಕಾಂತ ಅಥವಾ ಮಕ್ಕಳು ಅಥವಾ ನಮ್ಮ ಬಿಲ್ಡಿಂಗ್ ಎದುರಿಗಿರುವ ಆನಂದ ಭವನ್ ನಿಂದ ತಿಂಡಿ ಅಡುಗೆ ಬರುತ್ತವೆ. 
ಇವತ್ತು ಹಾಗೆ ಬೆಳಿಗ್ಗೆ ಲಾಲ್ಬಾಗ್ ವಾಕಿಂಗ್, ಬರ್ತಾ ಹೊರಗಡೆ ತಿಂಡಿ, ಮಧ್ಯಾಹ್ನ ರಾತ್ರಿ  ಶ್ರೀಕಾಂತ ಅಡುಗೆ.  i count my blessings.:-) 
ಸುಮ್ನೆ ನೆನಪಾಯ್ತು ಗೀಚಿದೆ. 

2 comments:

  1. ದಿನಾ ಫೇಸ್ಬುಕ್ಕಲ್ಲಿ ಹಾಕೋದು ಆನಂದಭವನದ ತಿನಿಸುಗಳಾ? :)

    ReplyDelete
  2. vikas!!
    Anand Bhavan sikkaa paTTe costly. :-) aparUpakke alliMda. illa FB alli naanu maaDida aDige maatra haakOdu.
    :-)
    malathi S

    ReplyDelete