ಮೂರು ನಾಲ್ಕು ವರ್ಷ ಹಿಂದೆ ನಡೆದದ್ದು.
ಶ್ರೀಕಾಂತ ಗೆ ಆಗಾಗ ಮಧ್ಯಪ್ರದೇಶದ ಪ್ರಯಾಣ ಇರುತ್ತಿತ್ತು, consultation ದ್ದು.
ಹದಿನೈದು ದಿನದ ಪ್ರವಾಸ. ಹಾಗಾಗಿ ಅಮ್ಮನನ್ನು ನಮ್ಮ ಜತೆ ಬಂದು ಇರಲಿಕ್ಕೆ ಹೇಳಿದ್ದೆ, ನಾನೇ ಹೋಗಿ ಕರೆದುಕೊಂಡು ಬಂದೆ ಸಹ. ಶ್ರೀಕಾಂತ , ಮೊದಲು ಫ್ಲೈಟ್ ನಲ್ಲಿ ಕೋಲ್ಕತಾ, ಆಮೇಲೆ ಟ್ರೈನ್ ನಲ್ಲಿ, ನಂತರ ಕೊನೆಯ ಪ್ರಯಾಣ ಆ ಕಂಪೆನಿ ಕಳುಹಿಸಿ ಕೊಡುವ ಕಾರ್ ನಲ್ಲಿ.
ಇಲ್ಲ್ಲಿಂದ ಹೊರಡಬೇಕಾದ್ರೆ, ಎಲ್ಲಾ ಸಾಮಾನುಗಳು ಪ್ಯಾಕ್ ಆದವು. ನನಗೆ ತಂಗಿ ಮಗಳು ಯು ಎಸ ನಿಂದ ಬರುವಾಗ ಒಂದು ಪುಟ್ಟ ಸೋಲಾರ್- ಸೌರ ಟಾರ್ಚ್ ತಂದು ಕೊಟ್ಟಿದ್ದಳು. ಅದನ್ನು ತುಂಬಾ ಸುಲಭವಾಗಿ ಬ್ಯಾಗ್ ಹ್ಯಾಂಡಲ್ ಗೆ ಲಗತ್ತಿಸಬಹುದಿತ್ತು. ಮತ್ತು ಸ್ವಲ್ಪ ಬೆಳಕಿದ್ದರೂ ಅದು ಚಾರ್ಜ್ ಆಗುತ್ತಾ ಹೋಗುತ್ತೆ. ಶ್ರೀಕಾಂತ ಗೆ ಅದನ್ನು ತೆಗೆದುಕೊಂಡು ಹೋಗಲಿಕ್ಕೆ ಹೇಳಿದೆ. ಅವರು ಛೆ ಮೊಬೈಲ್ ನಲ್ಲೇ ಬೆಳಕು ಇರುತ್ತೆ, ಆ ಟಾರ್ಚ್ ನಾನು ತೆಗೆದುಕೊಂಡು ಹೋಗಲ್ಲ ಅಂದ್ರೆ ನನ್ನದು ಒಂದೆ ಹಠ- ಅದನ್ನು ಒಯ್ಯಲೇಬೇಕೆಂದು. ಎಷ್ಟು ಹೊತ್ತು ಕಿರಿ ಕಿರಿ ಮಾಡಿದೆ ಅಂದ್ರೆ ಕೊನೆಗೆ ಅವರು ನಿರುಪಾಯರಾಗಿ, ಹಾಗೂ ಅವರನ್ನು airport ಗೆ ಒಯ್ಯುವ ಟ್ಯಾಕ್ಸಿ ಕೂಡ ಬಂದಿದ್ದರಿಂದ , ಅದನ್ನು ಒಯ್ದರು.
ಶ್ರೀಕಾಂತ ಐಯರ್ ಪೋರ್ಟ್ ಗೆ ಹೊರಟ ಮೇಲೆ ಅಮ್ಮ, 'ಛೀ ಎಂತದೆ ಅದು ನಿನ್ನ ಹಠ? ನನಗೆ ನಾಚಿಕೆ ಆಯ್ತು. ಟಾರ್ಚ್ ಬೇಡದಿದ್ರೆ ಬೇಡ . ಅದಕ್ಕೆ ಯಾಕಿಷ್ಟು ಫಸ್ ಅಂತ ಗೊತ್ತಾಗ್ಲಿಲ್ಲ' ಅಂದ್ರು. ನನಗೂ ತಕ್ಷಣ ಕ್ಕೆ ಹೌದಲ್ಲ ಅನ್ನಿಸಿತು. ಸಾರಿ ಅಮ್ಮ ಹಾಗೇಕೆ ಮಾಡಿದೆ ನನಗೂ ಗೊತ್ತಿಲ್ಲ ಅಂತ, ಶ್ರೀಕಾಂತ ಗೆ ಸಾರಿ ಕೇಳಿ ಒಂದು ಸ್ಯಾಡ್ ಫೇಸ್ ಟೆಕ್ಸ್ಟ್ ಮಡಿದೆ. ಅವರು 'it's allright' ಅಂತ ಸ್ಮೈಲಿ ಕಳುಹಿಸಿದ್ರು.
ಮರು ದಿನ ತಲುಪಿದ ನಂತರ ಶ್ರೀಕಾಂತ ನನಗೆ ಫೋನ್ ಮಾಡಿ, ಬೇಗ ಸ್ಪೀಕರ್ ಫೋನ್ ನಲ್ಲಿ ಹಾಕು ಅಂದ್ರು. ಹಾಗೇ ಮಾಡಿದೆ. .......
ಮುಂದೆ:
ಫ್ಲೈಟ್ ನಲ್ಲಿ ಕೋಲ್ಕತ್ತಾ, ಆಮೇಲೆ ಟ್ರೈನ್ ನಲ್ಲಿ ಝಾರ್ಸ್ಗುಡಾ. ಅಲ್ಲಿ ತಲುಪುವಾಗ ರಾತ್ರಿ ಮೂರು ಗಂಟೆ. ಟ್ರೈನ್ ನಿಂದ ಇಳಿದ ಮೇಲೆ , ಟ್ರೈನ್ ಅಲ್ಲಿಂದ ಹೊರಟ ಮೇಲೆ ಶ್ರೀಕಾಂತ ಗೆ ಪ್ಲ್ಯಾಟ್ಫೋರ್ಮ್ ಕತ್ತಲಿದ್ದದ್ದು ಅರಿವಾಯ್ತು. ಒಂದು ನಾರಾ ಮನುಷ್ಯ ಕೂಡ ಕಾಣಲಿಲ್ಲ. . ಏನೇನೂ ಕಾಣ್ತಿರಲಿಲ್ಲ. ಮೊಬೊಲ್ ತೆಗೆದರೆ ಲೋ ಬ್ಯಾಟರಿ. ಸ್ವಲ್ಪ ಹೊತ್ತು ಕಣ್ಣು ಎಡ್ಜಸ್ಟ್ ಆದಮೇಲೆ ಮನುಷ್ಯ ತರಹ ಆಕೃತಿಗಳು ಮಲಗಿದ್ದು, ಅಡ್ಡಾ ತಿದ್ದಿ ಇದ್ದದ್ದು ಕಾಣಿಸ್ತು. . ನಿಧಾನಕ್ಕೆ ಅಂದಾಜಲ್ಲಿ ಹೊರಗಡೆ ಬಂದು ನೋಡಿದ್ರೆ ನನಗೆ ಬೆಲ್ಪಾರ್ ಗೆ ಕರೆದೊಯ್ಯುವ ಕಾರ್ ಕೂಡ ಕಾಣಲಿಲ್ಲ.' ಆಗ ಅವರಿಗೆ ನನ್ನ ಟಾರ್ಚ್ ನೆನಪಾಗಿ, ಅದರ ಮೂಲಕ ಸ್ಟೇಷನ್ ನಲ್ಲಿ ಬೆಳಕು ಚೆಲ್ಲಿದಾಗ, ಅಲ್ಲಿ ಅಡ್ಡಾದಿಡ್ಡಿ, ಗೋಡೆಗಾನಿಸಿ, ನೆಲದ ಮೇಲೆ ಪೇರಿಸಿದ್ದು ಗೋಣಿ ಚೀಲಗಳಂತೆ, ಅನತಿ ದೂರದಲ್ಲಿ ಪೇ ಫೋನ್ ಕಾಣಿಸ್ತಂತೆ.( ಎಷ್ಟೆ ಟೆಕ್ನಾಲಜಿ ಮುಂದುವರೆದಿದ್ದು ನಾನು ತುರ್ತು ಫೋನ್ ನಂಬರ್ ಗಳನ್ನು ಸ್ಪೈರಲ್ ಬೊಉಂಡ್ ಪುಟ್ಟ ಪಾಕೆಟ್ ಬುಕ್ ನಲ್ಲಿ ಎಲ್ಲರಿಗೂ ಬರೆದು ಕೊಡುತ್ತೇನೆ. ಹಾಗೇ ಶ್ರೀಕಾಂತ್ ಹತ್ತಿರ ಕೂಡ ಇದೆ. ಅದರಲ್ಲಿ ಆ ಕಂಪೆನಿ ಕಾರ್ ನವನ ಸೆಲ್ ನಂಬರ್ ಕೂಡ ಇತ್ತು. ಅದರ ಸಹಾಯ ದಿಂದ ಪೇ ಫೋನ್ ನಿಂದ ಅವನಿಗೆ ಫೋನ್ ಮಾಡಿದರಂತೆ. ಅವನು ಇಲ್ಲೇ ಇದ್ದೀನಿ ಸಾಬ್ ಈಗ ಬಂದೆ ಅಂದನಂತೆ....
ಅವನ ಕತೆ ಹೀಗಿತ್ತು:
ನಾನು ಆವಾಗಲೇ ಬಂದೆ. ಇವತ್ತು ಅಮವಾಸ್ಯೆ. ಕತ್ತಲು ಬೇರೆ. ಸ್ಟೇಶನ್ ನಲ್ಲಿ ಬೆಳಕಿರಲಿಲ್ಲ. ನನಗೆ ಇಲ್ಲಿ ಹೆದರಿಕೆ ಆಯ್ತು. ಅದಕ್ಕೆ ಬೀದಿ ದೀಪ ಇದ್ದ ಕಡೆ ಕಾರ್ ಪಾರ್ಕ್ ಮಾಡಿದ್ದೆ. ಇನ್ನು ಸ್ವಲ್ಪ ಹೊತ್ತು ಬಿಟ್ಟು ನಾನು ಮನೆಗೆ ಹೋಗ್ತಿದ್ದೆ ಸಾಬ್ ' ಅಂದನಂತೆ.
ನನ್ನ ಟಾರ್ಚ್ ಬಗ್ಗೆ ನನಗೆ ಖುಷಿ ಯಾಯ್ತು.
:-)
ಈಗ ನಾನು ಎಲ್ಲಾದರೂ ಹೋಗುವಾಗ ಇದನ್ನು ತೆಗೆದುಕೊಂಡು ಹೋಗಿ ಅಂದರೆ, ಸುಮ್ಮನೆ ತೆಗೆದುಕೊಂಡು ಹೋಗ್ತಾರೆ ಶ್ರೀಕಾಂತ
No comments:
Post a Comment