ಇಷ್ಟು ದೊಡ್ಡ ಜಗದಲ್ಲಿ ಯಾರೂ ನನಗಿಲ್ಲ
ಪರರ ಮಾತು ಹಾಗಿರಲಿ ನನ್ನವರೂ ನನ್ನ ಪಾಲಿಗಿಲ್ಲ
ಜನರು ಅತ್ತು ಅತ್ತು ಜೀವನ ಸವೆಸುವರು
ನಾನು ನಗುತ್ತಿದ್ದರೂ ಜೀವನ ಸಾಗಿಸಲಾಗಲಿಲ್ಲ
ಒಂದು ಚೂರು ಪ್ರೀತಿ ಅಷ್ಟೆ ನನಗೆ ಬೇಕಿತ್ತು
ಜಗತ್ತಿಗೆ ಅದನ್ನೂ ಸಹಿಸಲಾಗಲಿಲ್ಲ
ಆಕಾಶವೇ ಎಷ್ಟೊಂದು ತಾರೆಗಳು ನಿನ್ನ ಸನ್ನಿಧಿಯಲ್ಲಿ
ನನ ಜೀವನದಲ್ಲಿ ಆ ಅದೃಷ್ಟ ಜಗಮಗಿಸಲಿಲ್ಲ
:-)
guess ಮಾಡಿ
(ಮಿರ್ಜಾನ ಕೋಟೆ ಚಿತ್ರಗಳು ಮುಂದಿನ ವಾರ ಪುರುಸೊತ್ತು ಆದ್ರೆ. ಗೋಕರ್ಣ ಕ್ಕೆ ಹೋಗಿ ಬಂದದ್ದೇ ಬಿಸ್ಕೂಟ್ ಫ್ಯಾಕ್ಟರಿ ಗೆ ಬಿಡುವಿಲ್ಲದ ಕೆಲಸ . ನನಗೊತ್ತಿರೋವಷ್ಟು ಸಹಾಯ ನಾನು ಮಾಡುತ್ತಿದ್ದೇನೆ. ನಮ್ಮ ಮಾಮೂಲಿ ಅಡಿಗೆಯ ಹಾಗೆ ಅಲ್ಲ. ಮಾಮೂಲಿ ಅಡಿಗೆಯಾದ್ರೆ ಅದೇನೋ ಹೇಳ್ತಾರಲ್ಲ ಇಂಗು ಮತ್ತು ತೆಂಗು ಇದ್ದರೆ ಮಂಗ ಕೂಡ ಅಡಿಗೆ ಮಾಡುವುದು' ಅಂತ ..... ನನ್ನ ಅಡಿಗೆ ಸ್ವಲ್ಪ ಹಾಗೆ ಕಾಯಿ, ಉಪ್ಪು, ಹುಳಿ ಹಾಕೋದು ಏನೋ ಒಂದು ಮಾಡಿ ಇಡೋದು. Baking needs precision. ಬೇಕಿಂಗ್ ಅದೆಲ್ಲ ನನಗೆ ಹೇಳಿ ಮಾಡಿಸಿದ್ದಲ್ಲ. ಕೆಲ ಐಡಿಯಾ, suggestions, ಲೇಬಲ್ ಅಂಟೀಸೋದು, ಬಾಕ್ಸ್ ಅಸೆಂಬಲ್ ಮಾಡಿ ಕೊಡೋದು, ಪಾತ್ರೆ ತೊಳೆಯೋದು ಇಂತದ್ದೆಲ್ಲ ಮಾಡಿ ಕೊಡೋದು. ಹಾಂ ಮತ್ತೆ ನನಗೆ ಅವಳು ಸಂಬಳ ಕೊಡುತ್ತಾಳೆ. :-))
ಬೇಕಿಂಗ್ = ? in ಕನ್ನಡ
ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು
Festive wishes to you and your family Malathi. Best wishes to Biscoot factory too :-)
ReplyDeleteಬೇಕಿಂಗ್ = ಬೇಕುವುದು, ಬೇಯಿಸುವುದು :)
ReplyDeletethank you very much Radhika. u are always supportive of Akka's enterprise.
ReplyDeleteVikas: hee hee haagaadre perfect/exact kannada padavillaa antaaytu...bEyisuvudu...cooker nalli cake maadidre haaganna bahudu.