September 30, 2015

ಇದೆಲ್ಲ ಯಾಕಾಗಿ?

ಅದು ಬಲವಂತದ ಮದುವೆ. ಆತನಿಗೆ ಬೇರೆಯವಳೊಂದಿಗೆ ಪ್ರೀತಿಯಿತ್ತು, ಅವಳನ್ನೇ ಮದುವೆಯಾಗುವ ಆಶಯವಿತ್ತು. ಅವಳು ಬೇರೆ ಜಾತಿ. ಅಮ್ಮನಿಗೆ ಇಷ್ಟವಿರಲಿಲ್ಲ. ಖಡಾ ಖಂಡಿತವಾಗಿ ಈ ಮದುವೆ ಬೇಡ ಅಂದಿದ್ದು ಮಾತ್ರವಲ್ಲದೆ ವಿಷ ಕೂಡ ತೆಗೆದುಕೊಂಡು, ಪ್ರಾಣಾಪಾಯದಿಂದ ದೂರ ಆದ ಮೇಲೆ ಮಗ ಇನ್ನೊಂದು, ಅಮ್ಮ ಹೇಳಿದ ಹುಡುಗಿಯನ್ನು ಮದುವೆ ಮಾಡಿಕೊಂಡ. ಅವಳ ಜತೆ ಮಾತು ಕತೆ ಸ್ನೇಹ..ಊಹೂಂ ಇಲ್ಲ. ಅಸಡ್ಡೆ. ಇದರಿಂದ ಅವನ ಅಮ್ಮನಿಗೂ ಅನೂಕೂಲವಾಯ್ತು. ಅವಳಿಗೆ ಮನೆಯ ಕೆಲಸದಾಳಿಗಿಂತ ತುಚ್ಛವಾದ ನಡೆಸಿಕೊಂಡಳು. ಆಕೆಗೊ ತವರಿಗೆ ಹೊಗಿರುವ ಅನೂಕೂಲ ಕೂಡ ಇರಲಿಲ್ಲ. ಹಾಗಾಗಿ ಅವಳಾಯ್ತು ಮನೆ ಕೆಲಸ ಆಯ್ತು. ಹಾಗೂ ಹೀಗೂ ಒಂದು ಗಂಡು ಒಂದು ಹೆಣ್ಣು ಹೆಡೆದಳಾಕೆ. ಮಕ್ಕಳು ಅಮ್ಮನ ಹಾಲು ಬಿಟ್ಟಿದ್ದೆ ಅವನ್ನೂ ಅಜ್ಜಿ ತಮ್ಮ ತಾಬೆಯಲ್ಲಿ ಇಟ್ಟುಕೊಂಡಳು. ಮಕ್ಕಳಿಗೂ ಅಮ್ಮನ ಬಗ್ಗೆ ಅಸಡ್ಡೆ ಬರುವ ಹಾಗೆ. ಹೀಗೆ ಒಂಟಿ ಒಂಟಿಯಾಗೇ ಇದ್ದಳವಳು. ತನ್ನ ಪುಟ್ಟ ಕೈದೋಟದಲ್ಲಿ ಅವಳ ಜೀವ ಬೆರೆತುಹೋಯಿತು.
ಮಗಳು ಮನೆಯಲ್ಲಿ ದೊಡ್ಡ ಗಲಾಟೆಯೆಬ್ಬಿಸಿ ಬೇರೆ ಜಾತಿಯವನೊಂದಿಗೆ ಮದುವೆಮಾಡಿಕೊಂಡು ಹೊರ ದೇಶಕ್ಕೆ ಹಾರಿಹೋದಳು.
ಮಗನ ಹೆಂಡತಿ ಅಂದರೆ ಆಕೆಯ ಸೊಸೆಗೆ ಎಲ್ಲರ ತರಹ ಇವಳ ಮೇಲೆ ಅಸಡ್ಡೆ. ಸೊಸೆಯಾದರೂ ತನ್ನೊಂದಿಗೆ ಸ್ನೇಹದಿಂದಿರಬಹುದು ಎಂದುಕೊಂಡ ಅವಳಿಗೆ ತುಂಬಾ ನಿರಾಸೆ.
ಕೊನೆಗೊಮ್ಮೆ ಆಕೆಯ ಅತ್ತೆ ತೀರಿಕೊಂಡರು........
ಮಗಳಿಗೆ ಮಗು ಹುಟ್ಟುವಾಗ ತುಂಬ ತೊಂದರೆಯಾಗಿ ಕೊನೆಗೆ ಅಮ್ಮನೆ ನೋಡಿಕೊಳ್ಳಬೇಕಾಯ್ತು. ಆಗ ಅಲ್ಪ ಸ್ವಲ್ಪ ಅವಳಿಗೆ ತಾನು ಅಮ್ಮನೊಂದಿಗೆ ಸರಿಯಾಗಿ ವರ್ತಿಸಿಲ್ಲ ಎನ್ನುವ ಪಶ್ಚಾತಾಪ.
ಸೊಸೆಗೂ ಕ್ರಮೇಣ ಅತ್ತೆಯ ಮೇಲೆ ಪ್ರೀತಿ. ಆಕೆ ಫೇಸ್ ಬುಕ್ ನಲ್ಲಿ ಎಕೌಂಟ್ ಮಾಡಿಸಿ, ಆಕೆಯ ಏಕೈಕ ಪ್ರೀತಿ ಆಕೆಯ ಹೂದೋಟದ ಚಿತ್ರಗಳನ್ನು ಹಾಕಲು ಪ್ರೆರೇಪಿಸಿದಳು. ಚೆಂದ ಕೈ ತೋಟ ನೋಡಿ ಆಕೆಗೆ ಈಗ ಸಾವಿರಾರು ಮಿತ್ರರು. ಅವಳ ಬಳಿ ತೋಟಗಾರಿಕೆಯ ಬಗ್ಗೆ ಸಲಹೆ. ಅಷ್ಟೆ ಅಲ್ಲದೇ ತೋಟಗಾರಿಕಾ ಸಮ್ಮೇಳನಗಳಲ್ಲಿ ತಪ್ಪದೇ ಆಕೆಯಿಂದ ಒಂದು ಲೆಕ್ಚರ್...
ಗಂಡನಿಗೆ ಹಾರ್ಟ್ ಎಟ್ಯಾಕ್. ಮಗ ಮಗಳು ಯಾರೂ ಇರಲಿಲ್ಲ. ಹೊರ ದೇಶದ ಟೂರ್ ಹಾಕ್ಕೊಂಡು ಹೋಗಿದ್ದರು. ಅಕ್ಕಪಕ್ಕದವರ ಸಹಾಯ ಪಡೆದುಕೊಂಡು ಸಮಯ ಪ್ರಜ್ಝೆ ಮೆರೆದು ಆತ ಮರಣದಿಂದ ಪಾರು. ಅವನಿಗೀಗ ಹೆಂಡತಿ ಎಂದರೆ ಹೆಮ್ಮೆ.
ಈಗ ಅತ್ತೆ ಇರಬೆಕಿತ್ತು ಅಂತ ಅವಳಿಗನಿಸಿತು. ಮನಸ್ಸು ಮಾತ್ರ ರೋಸಿ ಹೋಗಿದೆ.
ಹೇಗೋ ಏನೋ ಅವಳಿಗೆ ದೂರದ ಸಂಬಂಧಿಯೊಬ್ಬರಿಂದ ಯಾವುದೋ ಆಸ್ತಿಯ ತುಂಬ ಹಣ ಬಂದಿದೆ. ಈಗ ಅವರೆಲ್ಲರನ್ನೂ ಬಿಟ್ಟು ತಾನೊಬ್ಬಳೆ ಬದುಕಬೇಕೆಂದು ಅವಳ ಇಚ್ಛೆ.
ಖುಶಿ ಪಡಬೇಕಾ ಬೇಸರ ಪಟ್ಟುಕೊಳ್ಳಬೇಕಾ?? ನನಗಂತು ತಿಳಿಯದು
ನೀವು ಏನನ್ನುತ್ತೀರಾ??
( ಪ್ರೀತಿ ಬೇಡ ಕನಿಷ್ಠ ಮನುಷ್ಯಳ ತರ ನೋಡಿಕೊಳ್ಳಬಹುದಿತ್ತು ಗಂಡ ಮತ್ತು ಅತ್ತೆ....ಮಕ್ಕಳು ಬುದ್ದಿ ಬಂದ ಮೇಲೆ ಅವಳನ್ನು ಪ್ರೀತಿಯಿಂದ ನೋಡಿಕೊಳ್ಳಬಹುದಿತ್ತು.....ಔರ್ ಭಿ ಹೈ ಕಿತ್ನೆ ಜಮಾನೆ ಮೆಂ ಗಮ್ .....)
ಕೆಲವೊಮ್ಮೆ ನಮಗೇ ಬೇಕಾಗಿರೊದು, ಬೇಕಾದಾಗ ಸಿಗದಿದ್ದಾಗ, ಕೊನೆಗೂ ಸಿಕ್ಕಾಗ ಅದರ value ಅಷ್ಟಿರುವುದಿಲ್ಲಾ...:-(

3 comments:

  1. ollada maduve aadroo how could they neglect her all her life. I respect her choice. But even though it is their need based change in their behavior, it may be good to hang on with the family and still do what she wants! The family also should realize she has her own mind and preferences in life.

    ReplyDelete
  2. ನಮಸ್ಕಾರ,
    I am Basavaraj Kanthi. I have a ebook publishing website where you can publish your writings. With online publishing you can reach more number of readers. Also you can decide price of books yourself. Contact me for more details.
    email: kanthibasu@gmail.com

    Thanks,
    Basavaraj

    ReplyDelete