May 16, 2015

ಮಾವು-ಅನಾನಸು ಸಾಸಿವೆ

ಈ ಎಪ್ರಿಲ್ ಮೇ ತಿಂಗಳಲ್ಲಿ ನಮ್ಮ ಕೊಂಕಣಿ ಸಮಾರಂಭಗಳಾದ ಮದುವೆ, ಮುಂಜಿ, ಗರ್ಭಿಣಿ ಶಾಸ್ತ್ರ, ಗೃಹಪ್ರವೇಶ ಅಥವಾ ಚೌಲು...ಮಾವು ಅನಾನಸಿನ ಸಾಸಿವೆ ಕಾಮನ್ ಆಗಿ ಮೆನ್ಯು ನಲ್ಲಿರುತ್ತೆ. ಹಿಂದಿನ ತಿಂಗಳಂತೂ ನಾನು ಎಟೆಂಡ್ ಆದ ಸಮಾರಂಭಗಳೆಷ್ಟೋ. ಅದು ನನ್ನ ಅಮ್ಮ ತಮ್ಮ ಇಲ್ಲಿಗೆ ಬಂದಿದ್ದರಿಂದ. ಇಲ್ಲದಿದ್ದರೆ ನಾನು ತಪ್ಪಿಸ್ಕೊಳ್ಳೊ ಪಾರ್ಟಿ. ನನ್ನ ಮನೆಯಾಯ್ತು ನಾನಾಯ್ತು. ಖುಶಿಯಿಂದ ನಾನು ಹೊರಡೋದು ಬ್ರಿಟಿಶ್ ಲೈಬ್ರರಿಗೆ ಮಾತ್ರ. ಉಳಿದ ಹಾಗೆ ನನಗೆ ಎಲ್ಲೂ ಹೋಗಬೇಕನಿಸಲ್ಲ. ಕೆಲವೊಮ್ಮೆ  ಈ ಸಮಾರಂಭಗಳಿಂದ ತಪ್ಪಿಸಿಕೊಳ್ಳಗಾಗುವುದೇ ಇಲ್ಲ. ಹೋದರೆ ಊಟ ಅಂತೂ ಪಟ್ಟಾಗಿ ಎಲೆಯಲ್ಲಿ ಒಂಚೂರು ಬಿಡದೆ ಕ್ಲೀನ್ ಆಗಿ ಊಟಮಾಡಿ ಬರುತ್ತೇನೆ. ನನ್ನ ಮಕ್ಕಳೂ ಹಾಗೆ ಊಟದ ತಟ್ಟೆ ಮೇಲೆ ಯಾವತ್ತೂ ಫುಡ್ ವೇಸ್ಟ್ ಮಾಡಲ್ಲ. ಇಷ್ಟ ಆಗದಿದ್ದರೂ !! ಲವ್ ಯು ಅಕ್ಕ ಎಂಡ್ ನಿಂಪು.
 :-) ಮಾಲವಿಕ ಅಂತು ನನಗಿಂತ ವರ್ಸ್. ಅವಳಿಗಂತೂ ಅವಳ ಕೇಕ್/ಕೂಕಿ ಗಳ ಆರ್ಡರ್ ಇರುತ್ತೆ. ಅವಳೂ ಎಲ್ಲೂ ಬರಲ್ಲ. ಹಾಗಾಗಿ ಈ ಅವಳ ಇಷ್ಟದ ಪದಾರ್ಥ ನಾನು ಮನೆಯಲ್ಲಿ ಮಾಡಿದಾಗ ಮಾತ್ರ ಅವಳಿಗೆ ತಿನ್ನುವ ಭಾಗ್ಯ. ಇವತ್ತು ಬೆಳಿಗ್ಗೆ ಸೆಲ್ ಫೋನ್ ನಲ್ಲಿ ಏನೋ ಮಾಡುತ್ತಿದ್ದಳು. ’ಪೈನ್ ಆಪಲ್ ಇದೆ, ಮಾವಿನ ಹಣ್ಣು ಇದೆ. ಸಾಸಿವೆ ಮಾಡಲಾ ಅಂದೆ..ಧಿಗ್ಗನೆದ್ದು..’ಮಾಡು, ಮಾಡು’ ಅಂದ್ಲು, ಅಲ್ಲದೆ ನಾನು ಮಾಡು ವಾಗ ಹೇಗೆ ಮಾಡುವುದೆಂದೂ ಕಲಿತುಕೊಂಡಿದ್ದಾಳೆ.

ಮಾಡುವ ಬಗೆ:
ಮಾವಿನ ಹಣ್ಣು ಅನಾನಸಿನ ಹೋಳು ಮಾಡಿಟ್ಟು ಕೊಂಡು ಅದಕ್ಕೆ ಉಪ್ಪು ಬೆಲ್ಲ ಹಸಿಮೆಣಸಿನಕಾಯಿ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ.

 ಒಂದು ಟೇಬಲ್ ಚಮಚ ಕಾಯಿ ತುರಿ, ನಾಲ್ಕೈದು (ಅಥವಾ ನಿಮಗೆ ಎಷ್ಟು ಖಾರ ಬೇಕೋ ಅಷ್ಟು) ಹುರಿದ ಕೆಂಪು ಮೆಣಸು, ಸಣ್ಣ ತುಂಡು ಹುಣಸೆ ಹುಳಿ, ಅರ್ಧ ಚಮಚ ಸಾಸಿವೆ - ಇವನ್ನು ನುಣ್ಣಗೆ ರುಬ್ಬಿ. ಹೋಳುಗಳಿಗೆ ಬೆರೆಸಿ. ರುಚಿ ನೋಡಿ ಬೇಕಿದ್ದಲ್ಲಿ ಇನ್ನಷ್ಟು ಉಪ್ಪು, ಬೆಲ್ಲ ಸೇರಿಸಿ. ಹುಳಿ, ಖಾರ, ಸಿಹಿ, ಉಪ್ಪು ಇವೆಲ್ಲ ಸಮ ಪ್ರಮಾಣದಲ್ಲಿದ್ದರೇನೆ ಈ ಸಾಸಿವೆಗೆ ರುಚಿ.  ಕೊನೆಯಲ್ಲಿ ಸಾಸಿವೆ ಕರಿಬೇವಿನ ಒಗ್ಗರಣೆ ಕೊಡಿ.


ದಕ್ಷಿಣ ಕನ್ನಡದ ಕಡೆ ಈ ಸಾಸಿವೆಗೆ ದ್ರಾಕ್ಶಿ, ಗೇರು ಹಣ್ಣು ಕೂಡ ಬೆರೆಸುತ್ತಾರೆ. ಅದರ ರುಚಿನೇ ಬೇರೆ. :-)


1 comment: