ವಿನೋದಕ್ಕನ ಫೋನ್ ಬಂದಾಗ ನಾನು ಮಾಡುತ್ತಿದ್ದ ಅಡುಗೆ ಕೆಲಸವನ್ನು ಅರ್ಧಕ್ಕೆ ಬಿಟ್ಟು ಹೊರಗೆ ಬಂದೆ. ಅಕ್ಕನ ಫೋನ್ ಅಂದರೆ ಹಾಗೆ ಸುಮಾರು ಹೊತ್ತು ಮಾತು ಕತೆ. ನಮ್ಮ ಸಂಸ್ಥೆ ಬಗ್ಗೆ, ಅವರ ಬಿಸಿನೆಸ್ ಬಗ್ಗೆ, ನನ್ನ ಮಕ್ಕಳು, ಅವರ ಮಕ್ಕಳು, ನನ್ನ ಬ್ಲಾಗ್ ಬರಹ, ಊರಿನ ವಿಷಯ, ಕಾಮನ್ ಸಂಬಂಧಿಕರ ವಿಷಯ ಹೀಗೆ.......
ನಾನು ಹಲೋ ಅಂದಿದ್ದಕ್ಕೆ ಅಲ್ಲಿಂದ ಸ್ವಲ್ಪ ಹೊತ್ತು ಸದ್ದೆ ಬರಲಿಲ್ಲ. ನಮ್ಮ ಮನೆಯಲ್ಲಿ ಕೆಲವೊಮ್ಮೆ ಸಿಕ್ಕಾಪಟ್ಟೆ ಸಿಗ್ನಲ್ ಪ್ರಾಬ್ಲಮ್. ಹಾಗಾಗಿ ಎರಡು ಮೂರು ಕಡೆ ಸ್ಥಳ ಬದಲಾಯಿಸಿ, ಫೋನ್ ಕಟ್ ಆಗಿಲ್ಲ ಎನ್ನುವುದನ್ನು ಖಾತರಿ ಪಡಿಸಿ, ಹಲೋ ಹಲೋ ಎಂದೆ. ಅಲ್ಲಿಂದ ಬಿಕ್ಕುವ ಅಳುವ ಸದ್ದು ಕೇಳಿ ಬಂದು ನಾನು ಕಂಗಾಲಾದೆ. ಹಿರಿಯ ಜೀವ , ಅದೂ ಯಾವತ್ತೂ ಲವಲವಿಕೆಯಿಂದ ಕೂಡಿದ ಜೀವ ಅತ್ತರೆ ಹೇಗನಿಸಬೇಡ. ಏನಾಯ್ತಕ್ಕ ಅಂದೆ. ’ಇವರಿಗೆ ಹೊರಗಡೆ ಅಫೈರ್ ಇದೆ ಏನು ಮಾಡಬೇಕೆಂದು ತೋಚುತ್ತಿಲ್ಲ’ ಅಂದರು. ಕೂಡಲೆ ನನಗೆ ಸಿಟ್ಟು ಏರಿ ಏನಾಯ್ತಪ್ಪ ಆಯಂಪ್ಪಂಗೆ ಧಾಡಿ? ಎಂದು ಅಳಬೇಡಿ ನಾನು ಸ್ವಲ್ಪ ಹೊತ್ತು ಬಿಟ್ಟು ಬರುತ್ತೇನೆ ಎಂದೆ.
ಬೇಗ ಬೇಗ ಉಳಿದ ಕೆಲ್ಸ ಮುಗಿಸಿದೆ ಹಾಗೆ ನನ್ನ ವಿನೋದಕ್ಕನೆ ಪರಿಚಯದ ಬಗ್ಗೆ ಆಲೋಚಿಸಿದೆ. ನಾನು ಅವರನ್ನು ಭೇಟಿಯಾಗಿದ್ದು ನಮ್ಮ ಮಹಿಳಾ ಸ್ವ ಉದ್ಯೋಗ ಮಾರ್ಗದರ್ಶನ ಕೇಂದ್ರದಲ್ಲಿ, ನಾವು ಸ್ವ ಉದ್ಯೋಗ ಕೈಗೊಳ್ಳುವ ವರಿಗೆ ಒಂದು ತರಬೇತಿ ಕಾರ್ಯಕ್ರಮ ಹೊಮ್ಮಿಕೊಂಡಿದ್ದೆವು. ಅದನ್ನು ನ್ಯೂಸ್ ಪೇಪರ್ ನಲ್ಲಿ ಹಾಕಿದ್ದೆವು. ಅದರ ಬಗ್ಗೆ ಹೆಚ್ಚಿನ ಮಾಹಿತಿಗೋಸ್ಕರ ಅವರು ನಮ್ಮ ಸೆಲ್ ಗೆ ಬಂದಿದ್ದರು. ಅವರದ್ದು ಸ್ವಂತ್ ಉದ್ಯೋಗ ಆಗಲೇ ಇತ್ತು. ನಾವು ಲೋನ್ ಏನಾದರೂ ಏರ್ಪಾಡು ಮಾಡುತ್ತೀವಾ ಅಂತ ಕೇಳಿದರು. ಮಾತಾಡ್ತಾ ಅವರು ಕೊಂಕಣಿಯೆಂದು ಗೊತ್ತಾಗಿ , ಹಾಗೂ ನಮ್ಮ ಸೆಲ್ ಗೆ ಅವರು ಬರುತ್ತಾ ಹೋಗುತ್ತಾ ಇದ್ದರಿಂದ ಅವರ ಜತೆ ನನ್ನ ಸಲಿಗೆ ಹೆಚ್ಚಾಯಿತು. ನನಗಿಂತ 15-16 ವರ್ಷಕ್ಕೆ ದೊಡ್ಡವರು. ಅವರ ಗಂಡ ಕೂಡ ಬಿಸಿನೆಸ್ ಮ್ಯಾನ್. ಮೂರು ಜನ ಮಕ್ಕಳು ಮಾತ್ರವಲ್ಲದೆ, ಅವರ ಊರಾದ ಉತ್ತರ ಕರ್ನಾಟದ ಬಳಿಯ ಹಳ್ಳಿಯಲ್ಲಿ ಅವರ ಕುಟುಂಬದ ಬುದ್ದಿವಂತ ಮಕ್ಕಳನ್ನು ಗುರುತಿಸಿ, ಅವರ ಹೆಚ್ಚಿನ ಓದಿಗಾಗಿ ಅವರಿಗೆ ಕೆಲಸ ಸಿಗುವ ತನಕ ಆರ್ಥಿಕ ಸಹಾಯ ಮಾಡಿ ಇವರ ಮನೆಯಲ್ಲೇ ಇರಿಸಿಕೊಳ್ಳುವುದು ರೂಢಿ,ಅಲ್ಲದೇ ದೊಡ್ಡ ಕುಟುಂಬದವರಾದ್ದರಿಂದ ಮನೆಗೆ ಬರುವ ಸಂಬಂಧಿಕರು, ಸ್ನೇಹಿತರು ಹಾಗಾಗಿ ಮನೆ ತುಂಬ ಜನವೋ ಜನ. ವಿನೋದಕ್ಕ ಮೊದಲು ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಗಂಡ ಆ ಬ್ಯಾಂಕಿನಲ್ಲಿ ವ್ಯವಹರಿಸುತ್ತಿದ್ದರಿಂದ ಅವರ ಪರಿಚಯ ಪ್ರೇಮಕ್ಕೆ ತಿರುಗಿ , ಇಬ್ಬರ ಮನೆಯ ವಿರೋಧದ ನಡುವೆ ಇಬ್ಬರ ಮದುವೆಯಾಯಿತು. ಆ ಮೇಲೆ ಅಕ್ಕನ ಮನೆಯಲ್ಲಿ ಎಲ್ಲ ಸರಿಯಾದರೂ, ಅವರ ಗಂಡ ಮನೆಯವರು ರಾಜಿಯಾಗಲೇ ಇಲ್ಲ. ಅವರ ಗಂಡ ಕೂಡ ದೊಡ್ಡ ಕುಟುಂಬದವರು. ಎಲ್ಲರೂ ಶಾಸ್ತ್ರೀಯ ಸಂಗೀತದಲ್ಲಿ ಒಂದಲ್ಲ ಒಂದು ಸಾಧನೆ ಮಾಡಿದವರು. ಮದುವೆಯಾಗಿ ಮೂವತ್ತು ಚಿಲ್ಲರೆ ವರುಷ, ಮೂರು ಮಕ್ಕಳು ಯಾಕಪ್ಪ ಭಾವಾಜಿಗೆ ಈ ಚಾಳಿ ಬಂತು ಅಂತ ನನ್ನಷ್ಟಕ್ಕೆ ನಾನು ಚಿಂತಿಸಿದೆ. ಬೇಜಾರಾಯಿತು. ನಾನು ಅಂದರೆ ಅವರಿಗೆ ತುಂಬಾ ಅಭಿಮಾನ. ನನ್ನ ಮಾತು ತುಂಬ ಕಡಿಮೆಯಾದರೂ ಭಾವಾಜಿ ಜತೆ ನಾನು ಮನ ಬಿಚ್ಚಿ ಮಾತಾಡುತ್ತಿದ್ದೆ ಮಾತ್ರವಲ್ಲ ಅವರು ನನಗೆ ತುಂಬಾ ಇಷ್ಟ ಕೂಡ ಆಗುತ್ತಿದ್ದರು. ನಮ್ಮ ಪರಿಚಯ ಆದ ಕೆಲ ದಿನದಲ್ಲೇ ವಿನೋದಕ್ಕನಿಗೆ ಲೀವರ್ ನ ಕ್ಯಾನ್ಸರ್ ಕಾಣಿಸಿಕೊಂಡಿತು. ಆಮೇಲೆ ಕೀಮೋಥೆರಪಿ , ರಕ್ತದಲ್ಲಿ ಏನೋ ನ್ಯೂನತೆಯಿಂದಾಗಿ ಆಗಾಗ ರಕ್ತದ transfusion. ಇದರ ಮಧ್ಯೆಯೂ ಅವರ ಬಿಸಿನೆಸ್ ಹೀಗೆಲ್ಲ ನಡೆಯಿತು. ಮೂರು ಮಕ್ಕಳು ಕೆಲ್ಸದಲ್ಲಿದ್ದಾರೆ. ಮಗಳು ಇತ್ತೀಚಿಗೆ ಕೆಲಸ ಬಿಟ್ಟು ಎಂ ಬಿ ಎ ಗೆ ತಯಾರಾಗುತ್ತಿದ್ದಾಳೆ. ಈಗ ಈ ಸುದ್ದಿ.
ಅವರ ಮನೆ ತಲುಪಿದೆ. ಎದುರಾದದ್ದೆ ಭಾವಾಜಿ. ನಾನು ಬಿಟ್ಟ ಬಾಯಿಯಿಂದ ಅವರನ್ನು ನೋಡುತ್ತಲೇ ಇದ್ದೆ. ಅವರ ಮುಖದಲ್ಲಿ ಹತ್ತು ವರ್ಷ ಕಡಿಮೆ ಕಾಣುತ್ತಾ ಇತ್ತು. ಹಣೆಯ ಮೇಲೆ ಕೂದಲು ಬೀಳುವ ಹಾಗೆ ಹೊಸ ಮಾದರಿಯ ಹೆಯರ್ ಕಟ್, ಕೂದಲಿಗೆ ಕಪ್ಪು ಬಣ್ಣ, ಕನ್ನಡ ಹೋಗಿ ಕಾಂಟ್ಯಾಕ್ಟ್ ಲೆನ್ಸ್, ಲೋ ವೈಸ್ಟ್ ಜೀನ್ಸ್, ಜಿಮ್ ಗೆ ಹೋಗಿ ಪಡೆದ ಚೆಂದದ ದೇಹ, ಬೈಸೆಪ್ಸ್ ಕಾಣುವಂತೆ ಗಿಡ್ಡ ತೋಳಿನ ಟೈಟ್ ಶರ್ಟ್, ಚೆಂದದ ಬಕಲ್ ನ ಲೆದರ್ ಬೆಲ್ಟ್, ಹೈ ಫಂಡಾ ಶೂ ಗಳು. ಬೆರಳಿಗೆ ಸುತ್ತಿಕೊಂಡ ಕೀಚೈನ್ ಗಿರ ಗಿರ ತಿರುವುತ್ತ, ಹಾಡಿನ ವಿಶಲ್ ಹಾಕುತ್ತಿದ್ದರು. ನನ್ನನ್ನು ನೋಡಿ, ಹಾಯ್ ಮಾಲ್ತಿ. ಐ ಯಾಮ್ ಆಫ್ ಟು ಎ ಮೀಟಿಂಗ್, ಬಟ್ ಡೊಂಟ್ ಗೋ, ಲೆಟ್ ಅಸ್ ಹ್ಯಾವ್ ಲಂಚ್ ಟುಗೆದರ್’ ಅಂದ್ರು. ನಾನು ಹೂಂ ಅಂದೆ. ಅವರು ಮೆಟ್ಟಲು ಓಡುತ್ತಾ ಇಳಿದರು. ನಾನು ಮೆಚ್ಚುಗೆಯಿಂದ ಅವರನ್ನು ನೋಡುತ್ತ ಬಾಲ್ಕನಿಗೆ ಬಂದೆ. ಅವರು ಬುಲೆಟ್ ಬೈಕ್ ಗುಡುಗುಡು ಮಾಡುತ್ತಾ ನಾನು ಬಾಲ್ಕನಿ ಮೇಲೆ ನಿಂತಿದ್ದನ್ನು ನೋಡಿ ನನಗೆ ವೇವ್ ಮಾಡಿ ಹೊರಟು ಬಿಟ್ಟರು. ನಾನು ಸ್ವಲ್ಪ ಹೊತ್ತು ಹೊರಗಡೆ ನೆ ನಿಂತೆ. ನನ್ನ ಮೆಚ್ಚುಗೆಯ ನಿಮಿತ್ತ ನನ್ನ ಮುಖದಲ್ಲಿನ ಮಂದಹಾಸ , ವಿನೋದಕ್ಕ ನೋಡುವುದಕ್ಕೆ ಮುಂಚೆ , i had to compose myself.
ಒಳಗೆ ಬಂದೆ, ವಿನೋದಕ್ಕ ಅಳು ಶುರು ಮಾಡಿದರು. ಮಾಲ್ತಿ ಬೇರೆ ಸಮಯ ಹೀಗೆಲ್ಲ ಆದ್ರೆ ಬೇರೆ ವಿಷಯ. ನಮ್ಮ ಮದುವೆಯಾಗಿ ಮೂವತ್ತು ಮೂರು ವರ್ಷ ಆಯ್ತು. ಮಕ್ಕಳೂ ಮದುವೆ ವಯಸ್ಸಿಗೆ ಬರುತ್ತಿದ್ದಾರೆ, ಅದಲ್ಲದೆ ನನಗೆ ಕಾಯಿಲೆ ಬೇರೆ. ಇವರು ನೋಡಿದರೆ ಹೀಗೆ ಅಂದ್ರು.
ಭಾವಾಜಿಯವರ ಪರವಾಗಿ ಯೋಚಿಸಲು ಶುರು ಮಾಡಿದೆ. ಯಾವುದೋ ಸಂಗೀತ ಕಾರ್ಯಕ್ರಮದಲ್ಲಿ ಆಕೆ ಭೇಟಿ ಯಾಗಿದ್ದಳಂತೆ. ವಿಧವೆ, ಪುಟ್ಟ ಮಗು ಅಲ್ಲದೇ ಅವರದ್ದೆ ಕುಟುಂಬದ ದೂರದ ಸಂಬಂಧಿ. ಪರಿಚಯ ಸ್ನೇಹ ವಾಗಿ ಈಗ ಪ್ರೀತಿ (?) ಗೆ ತಿರುಗಿತ್ತು. ಅಕ್ಕನ ಹುಷರಿಲ್ಲದ್ದಿದ್ದಾಗಲೆಲ್ಲ ಮನೆಯ ಸಂಪೂರ್ಣ ಜವಾಬ್ದಾರಿ ಅವರ ಬಿಸಿನೆಸ್ ಜತೆ , ನಿಭಾಯಿಸುತ್ತಿದ್ದರು. ಆಸ್ಪತ್ರೆಯ ಓಡಾಟ, ಮನೆಗೆ ಬಂದು ಅಕ್ಕನ ಶುಶ್ರೂಷೆ, ಅಂತ ಅವರಿಗೆ ಬಿಡುವೇ ಆಗುತ್ತಿರಲಿಲ್ಲ, ಅವರ ಕಡೆಯ ಕುಟುಂಬದ ಸಹಕಾರ ಕೂಡ ಇರಲಿಲ್ಲ. ಹಾಗಾಗಿ ಒಂಟಿತನ ಅನಿಸಿ ಎಲ್ಲೋ ನಾಲ್ಕು ಒಳ್ಳೆಯ ಮಾತಾಡಿದ, ಹಾಗೂ ಆಕೆ ವಿಧವೆ ಎಂಬ ಕಾರುಣ್ಯದಲ್ಲಿ ಇಬ್ಬರಲ್ಲಿ ಮೈತ್ರಿ ಕಾಣಿಸಿಕೊಂಡಿರಬೇಕು.
ಅಕ್ಕ, ’ ನಾನೀಗ ಏನು ಮಾಡಲಿ. ನನಗೆ ಅವರು ಬೇಕು. ಅವಳನ್ನು ಬಿಡಲ್ಲ ಅಂತಿದ್ದಾರೆ. ಈಗ ಹೇಗೆ ನಡೆದುಕೊಂಡಿದೆ ಹಾಗೆ ನಡೆಯಲಿ. ನನಗೆ ಅವಳೂ ಬೇಕು ’ಅಂತಿದ್ದಾರೆ, ಅದಲ್ಲದೇ ಭಾನುವಾರ ಪೂರ್ತಿ ಅವಳ ಜತೆಯಲ್ಲೇ ಇರ್ತಾರೆ ಅಥವ ಎಲ್ಲಾದರೂ ಕಾರ್ ನಲ್ಲಿ ಹೋಗುತ್ತಾರೆ. ಮಕ್ಕಳು ಅವರಪ್ಪನ ಜತೆ ಮಾತು ಯಾವಾಗಲೋ ಬಿಟ್ಟಿದ್ದಾರೆ. ಮಗ ಬೇರೆ ಊರಿಗೆ ಟ್ರಾನ್ಸ್ಫರ್ ಮಾಡಿಸಿಕೊಳ್ಳುತ್ತಿದ್ದಾನೆ. ದೊಡ್ಡವಳಿಗೆ ಮದುವೆ ಪ್ರೊಪೋಸಲ್ಸ್ ಬರುತ್ತಿವೆ. ನೀನೆ ಹೇಳು ಏನು ಮಾಡಲಿ..
’ಅಕ್ಕ ನಾನು ನಿಮಗಿಂತ ವಯಸ್ಸಿನಲ್ಲಿ ತುಂಬಾ ಚಿಕ್ಕವಳು. ನನ್ನ ಸಲಹೆ ಕೇಳುತ್ತೀರಾ?/"
"ಆಗಲಿ, ಹೇಳು"
ಇದು ಒಂದು passing phase. ನೀವು ಹೇಳಿದ ಪ್ರಕಾರ ಅವರ ಮಧ್ಯ ವಯಸ್ಸಿನ ಗ್ಯಾಪ್ ತುಂಬಾ ಇದೆ. ಗಂಡಸಿರಿಗೂ ಮೇಲ್ ಮೆನೋಪಾಸ್ ಅಂತ ಇರುತ್ತೆ. ಇದು ಅದರ ಪ್ರಭಾವ. ಭಾವಾಜಿಯವರು ನನಗೆ ಆತ್ಮೀಯರು ಅದಕ್ಕೆ ನನಗೆ ಗೊತ್ತು ಅವರು ನಿಮ್ಮನ್ನು ಯಾವತ್ತೂ ನೋಯಿಸಲ್ಲ. ಇದೆನೋ ಆಗಿ ಬಿಟ್ಟಿದೆ. ನೀವು ಬಿಟ್ಟುಕೊಡಬೇಕು." ನನ್ನ ಮಾತಿನಿಂದ ಅಕ್ಕ ಹೌಹಾರಿದರು. ಅವರು ಬಾಯಿ ತೆರೆಯುವ ಮುಂಚೆ..’ಇಲ್ಲ ಕೇಳಿಸಿಕೊಳ್ಳಿ. ನನ್ನ intuition ಪ್ರಕಾರ, ಅದೂ ಯಾವತ್ತೂ ಸುಳ್ಳಾಗಿಲ್ಲ,ಎಲ್ಲ ಸರಿಯಾಗುತ್ತೆ. ಅವರು ಇವೆಲ್ಲ ಬಿಟ್ಟು ವಾಪಸ್ ಬರುತ್ತಾರೆ, ಅವರಿಗೇ ನಾಚಿಕೆನೂ ಆಗುತ್ತೆ. ಆಗ ನೀವು ಧಾರಾಳ ಮನಸ್ಸು ಮಾಡಿ ಅವರನ್ನು ಕ್ಷಮಿಸಬೇಕು. ಮಕ್ಕಳಿಗೂ ತಿಳಿ ಹೇಳ ಬೇಕು. ಅಲ್ಲದೇ you should also think on behalf of him. ಹೆಚ್ಚಿನ ಪ್ರೀತಿ ಕಾಳಜಿ ತೋರಿಸಿ. ನಿಮಗೆ ಹುಷಾರಿಲ್ಲದಿದ್ದಾಗ ನೋಡಿಕೊಳ್ಳಲ್ಲು ದಾದಿ ನೇಮಿಸಿ. give him a break from time to time. ಪೊಸೆಸಿವ್ ನೆಸ್ ಸ್ವಲ್ಪ ಕಡಿಮೆ ಮಾಡಿ.
ಅವರಿಗೆ ದುಡ್ಡಿಗೇನೂ ಕಡಿಮೆಯಿಲ್ಲ. ಬಿಸಿನೆಸ್ ಚೆನ್ನಾಗಿಯೇ ನಡೆಯುತ್ತೆ. ವಿನೋದಕ್ಕನಿಗೆ ವಿಚಿತ್ರ ಅಭ್ಯಾಸ. ಯಾವುದಾದರೊಂದು ಕಿರು ಉದ್ಯಮ ಶುರು ಮಾಡೋದು, ಅದು ಲಾಭಕ್ಕೆ ಬರುತ್ತಿದ್ದ ಹಾಗೆ ಅದನ್ನು ಬೇರೆಯವರಿಗೆ ಮಾರಿಬಿಡುವುದು. ಯಾವಾಗಲೂ ಏನಾದರೂ ಹೊಸತನದಿಂದ ಕೂಡಿರುತ್ತೆ ಅವರ ಜೀವನ, ನನಗೆ ಖುಶಿ ಅವರ ಬಗ್ಗೆ. :-) ಅಷ್ಟೆ ಅಲ್ಲದೇ ಹಲವಾರು ಬಿಲ್ಡಿಂಗ್ ಕಾಂಪ್ಲೆಕ್ಸ್ ಬಾಡಿಗೆಗೆ ಎಲ್ಲ ನೀಡಿದಾರೆ.
" ನೀವು ಯು ಎಸ್ ಗೆ ಹೋಗುವ ಪ್ಲ್ಲ್ಯಾನ್ ಏನಾಯ್ತು?"
ಎಲ್ಲ ರೆಡಿಯಾಗಿದೆ ಮಾಲ್ತಿ.’ ತಾರೀಕೂ ಫಿಕ್ಸ್ ಮಾಡುವುದೊಂದು ಬಾಕಿ"
ಅದನ್ನು ಮೊದಲು ಮಾಡಿ. ನೀವು ಮತ್ತು ರಜೆ ಹಾಕಿರುವ ಮಗಳು ಹೋಗಿ ಬನ್ನಿ’ ಡಾಕ್ಟರ್ ಹತ್ತಿರ ಚೆಕ್ ಮಾಡಿಸಿ ಹೊರಡುವ ಮುನ್ನ". ಹಾಗೆ ನಾನು ನಮ್ಮ ಆಫಿಸ್ ನಿಂದ ಇತ್ತೀಚಿಗೆ ಹೊರದೇಶಕ್ಕೆ ಹೋಗಿ ಬಂದವರರಿಂದ coxs and kings ಟ್ರಾವೆಲ್ ಏಜೆನ್ಸಿ ಬಗ್ಗೆ ತುಂಬಾ ಕೇಳಿದ್ದೆ. ನಮ ಕಲೀಗ್ ಇಬ್ಬರು ಈ ಟ್ರಾವೆಲ್ಸ್ ನಲ್ಲಿ ಫ್ಲೈಟ್ ಬುಕ್ ಮಾಡಿ ಯೂರೋಪ್/ಅಮೇರಿಕಾ/ಅಂಡಾಮಾನ್, ಹೀಗೆ ಹೋಗಿ ಬಂದಿದ್ದಾರೆ. ಒಬ್ಬ ಕಲೀಗ್ ಸಿಂಗಾಪೂರ್ ನಲ್ಲಿ ಗಾರ್ಡನ್ ಬಳಿಯ cow-catch ತರದ್ದು ಏನೋ ಇದ್ದು ಅದರಲ್ಲಿ ಕಾಲು ಸಿಲುಕಿ ಬಿದ್ದು, ಕಾಲು ತಿರುಚಿ ಅದು ಫ್ರಾಕ್ಛರ್ ಆದಾಗ ಅವರ ಎಯರ್ ಲೈನ್ಸ್ ನಿಂದ ತುಂಬಾ ಕಾಳಜಿಯಿಂದ ಅಲ್ಲಿ ಚಿಕಿತ್ಸೆ ಕೊಡಿಸಿ ಪುನ: ಭಾರತಕ್ಕೆ ತಂದು ಇಳಿಸಿದ್ದರಂತೆ, ಅವರ ಖರ್ಚಿನಲ್ಲೇ. ಕಾಲು ಸರಿಯಾದ ಮೇಲೆ ಇವರು ಅವರ ಟ್ರಿಪ್ ಅನ್ನು ಮುಂದುವರೆಸಿದರು...ಅದು ಬೇರೆ ವಿಷಯ...
ಆ ಟ್ರಾವಲ್ ಏಜೆನ್ಸಿ ನಾನೆ ಸಜೆಸ್ಟ್ ಮಾಡಿದೆ.
ನಮ್ಮ ಮನೆಯ ಗೃಹಪ್ರವೇಶಕ್ಕೆ ಅವರು ಭಾರತದಲ್ಲಿರಲಿಲ್ಲ. ಮೊನ್ನೆ ನಗುತ್ತ ಬಂದು ನನಗೋಸ್ಕರ ಅಮೇರಿಕೆಯಿಂದ ತಂದ ಮೆಮೆಂಟೊ (ನಯಾಗರಾ ಫಾಲ್ಸ್ ಚಿತ್ರದ ಟೂಥ್ ಪಿಕ್ ಹೋಲ್ಡರ್), ಚಾಕಲೇಟುಗಳನ್ನು ನೀಡಲು ಬಂದಿದ್ದರು.
"ನೀನು ಹೇಳಿದ್ದು ಸರಿಯಿತ್ತು ಮಾಲ್ತಿ". ನಾನು ಅಮೇರಿಕಾಗೆ ಹೋಗುತ್ತಿದ್ದದ್ದು ಮೊದಲು ಅವರಿಗೆ ಪಿಚ್ಚೆನಿಸಿತು. ನಾವೆಲ್ಲರೂ ಒಟ್ಟಿಗೆ ಹೋಗುವ ಪ್ಲ್ಯಾನ್ಸ್ ಅಲ್ಲವಾ ಇದ್ದದ್ದು? ನೀನೊಬ್ಬಳೆ ಹೋಗುತ್ತಿಯಾ’ ಅಂತ ಮೊದಲಿಗೆ ಬೆಜಾರಾದರೂ, ಆಕೆಯೊಂದಿಗೆ ಹೆಚ್ಚು ಸಮಯ ವ್ಯಯಿಸಬಹುದು ಎಂಬ ವಿಚಾರದಿಂದ ಅವರ ಮುಖ ಅರಳಿದಾಗ ಒಂದು ಕ್ಷಣ ನನಗೆ ಸತ್ತು ಹೋಗುವ ಮನಸ್ಸಾಯಿತು. ನಾವು ಹೋದ ಮೇಲೆ ಇವರು ಅವಳ ಮನೆಯಲ್ಲಿರಲು ಹೋದರಂತೆ. ಮೊದಲು ಕೆಲವು ದಿನ ಎಲ್ಲ ಸರಿಯಿತ್ತೆನಿಸುತ್ತೆ. ನನಗೆ ಯಾವುದೆ ಫೋನ್ , ಮೆಸೇಜ್ ಏನೂ ಇರಲಿಲ್ಲ. ನಾನು ಮೂರು ತಿಂಗಳಿಗೆ ಅಂತ ಹೋಗಿದ್ದು, ಆರು ತಿಂಗಳು ಇದ್ದು ಬಂದೆ. ಮೊದಲು ಎಲ್ಲ ಸೈಟ್ ಸೀಯೀಂಗ್ ಮುಗಿಸಿದೆ, ಆಮೇಲೆ ನನ್ನ ಅಕ್ಕನ ಮನೆಯಲ್ಲಿ ಇದ್ದೆ. ಅವಳ ಮಗ ಡಾಕ್ಟರ್. ಅವನ ಬಳಿ ಎಲ್ಲ ಚೆಕ್ ಅಪ್ ಮಾಡಿಸಿದೆ. ಸಧ್ಯಕ್ಕೆ ಕ್ಯಾನ್ಸರ್ ತಹಬದಿಯಲ್ಲಿದೆ ಎಂದ. ಹಾಗೆ ಎಲ್ಲ ಸಂಬಂಧಿಕರ ಮನೆಯಲ್ಲಿ ಸ್ವಲ್ಪ ಸಮಯ ಇದ್ದು ಬಂದೆ. ಇವಳಿಗೂ (ಮಗಳಿಗೂ) ಅವಳ ಕರಿಯರ್ ಬಗ್ಗೆ ಯೋಚಿಸಲು ಅವಕಾಶ ಆಯ್ತು. ಕೊನೆ ಕೊನೆಗೆ ಇವರ ಫೋನ್ ಕಾಲ್ಸ್ ಶುರು. ’ಯಾವಾಗ ಬರುತ್ತೀಯಾ’? ಮೂರು ತಿಂಗಳು ಯಾವಾಗಲೋ ಆಗಿ ಹೋಯ್ತು’. ನನಗಿಲ್ಲಿ ಒಂಟಿಯಾಗಿರಲಿಕ್ಕೆ ಆಗ್ತಾ ಇಲ್ಲ", ನಾನು ಬರಲಾ’ ಮುಂತಾದ್ದು. ನಾನು ತಣ್ಣಗಿದ್ದೆ. ಇಲ್ಲಿಗೆ ಬಂದ ಮೇಲೆ ತಿಳಿಯಿತು. ಮೊದ ಮೊದಲು ಎಲ್ಲ ಚೆನ್ನಾಗಿತ್ತು, ಆಮೇಲೆ ಅವಳಿಗೆ ಇವರ presence ಕಿರಿ ಕಿರಿ ಅನ್ನಿಸಲಿಕ್ಕೆ ಶುರು ಆಯ್ತು’. ಹೊರಗಡೆ ಎಲ್ಲರ ಕಣ್ಣು ತಪ್ಪಿಸಿ ಕಳ್ಳತನದಲ್ಲಿ ಸಿಗುವ ಥ್ರಿಲ್ ಈಗ ಇರಲಿಲ್ಲ, ಅಲ್ಲದೇ ಅವರ ಮನೆಗೆ ಬಂದ ಅವಳ ಅಣ್ಣಂದಿರು ಸರಿಯಾಗಿ ಛಿ ಮಾರಿ ಹಾಕಿದ್ದಲ್ಲದ್ದೆ, ಅವಳಿಗೆ ಬೇರೆ ಗಂಡು ಹುಡುಕಲು ಶುರು ಮಾಡಿದರಂತೆ. ಇವಳೂ ಅದಕ್ಕೆ ಒಪ್ಪಿಕೊಂಡಾಗ ಇವರು ಬಾಲ ಸುಟ್ಟ ಬೆಕ್ಕಿನಂತೆ ಮನೆಗೆ ವಾಪಸ್ ’ ಮೊನ್ನೆ ನನ್ನ ಕೈ ಹಿಡಿದು ನಾಚಿಕೆಯಿಂದ ಅತ್ತು ಬಿಟ್ಟರು’ಅಂತ ನಗುತ್ತ ಹೆಳಿದಾಗ ನನಗೆ ನೆಮ್ಮದಿ.
All's well that end's well. ಆದರೆ ತದ್ವಿರುದ್ದ ಆಗಿದ್ದಿದ್ದರೆ? how long can i rely on my intuition?? ಹಾಂ?
ಅವರಿಗೆ ನಾನು ಇಲ್ಲಿ ಬಂದು ಕನ್ನಡ ಕಲಿತು ಬ್ಲಾಗ್ ಬರೆಯುತ್ತೆನೆಂಬುದು ಎಲ್ಲಿಲ್ಲದ ಅಭಿಮಾನ. ಪೇಪರ್ ನಲ್ಲಿ ನಾನು ಬರೆದ ಆರ್ಟಿಕಲ್ ಎಲ್ಲ ಬಂದಾಗ ಫೋನ್ ಮಾಡುವುದಲ್ಲದೇ ಅದರ ಕ್ಲಿಪ್ಪಿಂಗ್ ಕೂಡ ಇಟ್ಟಿದ್ದಾರೆ. ಮನೆಯಲ್ಲಿ ಯಾರದಾದರೂ ಲ್ಯಾಪ್ ಟಾಪ್ ಸಿಕ್ಕರೆ ನನ್ನ ಬ್ಲಾಗ್ ಪೋಸ್ಟ್ ಗಳನ್ನು ಓದುತ್ತಾರೆ. ಇದನ್ನು ಬ್ಲಾಗಿಸಲು ಅವರೇ ಹೇಳಿದ್ದು. ನಾನು ಹೆಸರನ್ನು ಬದಲಾಯಿಸಿದ್ದೇನೆ ಅಷ್ಟೆ.
HAPPY WOMEN S DAY ಎಲ್ಲರಿಗೂ

ಮೊದಲಿಗೆ ಸಮಸ್ತ ಸ್ರೀ ಮೂರ್ತಿಗಳಿಗೆಲ್ಲ ಮಹಿಳಾ ದಿನಾಚರಣೆಯ ಶುಭಾಶಯಗಳು.
ReplyDeleteನಡುವಯಸು ದಾಟಿದ ಪುರುಷ ಪುಂಗವರಿಗೆ ಹೊರಗೊಂದು ಸಂಬಂಧ ಕಲ್ಪಿಸಿಕೊಳ್ಳುವ ಆತುರ ಹಲವು ಕಡೆ ಕೇಳಿದ್ದೇನೆ.
ಸಿಟ್ಟಿಗೆದ್ದು ಮನೆಯಾಕೆ ವಿಕೋಪಕ್ಕೆ ತೆಗೆದುಕೊಂಡು ಹೋಗದೆ. ಆತನೇ ಬುದ್ದಿ ಕಲಿಯಲೊಂದಿಷ್ಟು ಕಾಲಾವಲಾಶ ಕೊಟ್ಟರೆ ಸಂಸಾರವು ಹಳಿತಪ್ಪದೇ ಇದ್ದೀತು.
ಸರಿಯಾದ ಸಮಯಕ್ಕೆ ಹೀಗೆ ಸಲಹೆ ಕೊಡುವವರೂ ಸಿಕ್ಕರೂ ಒಳಿತು.
New avatar of successful counselling. :-)
ReplyDelete- Kar
ಧನ್ಯವಾದಗಳು ಬದರಿನಾಥ. thanks for sharing on FB. :-)
ReplyDeleteShree Kar!!
ReplyDeleteNice to find you here again. and thanks for the comment
:-)
malathi S
First of all, congratulations on ur counselling & its success. Nice one....
ReplyDelete