ಆಫಿಸ್ ನ ಕೆಲಸ, ಮತ್ತೊಂದೆರಡು ತುರ್ತು ಕೆಲಸ ಮುಗಿಸಿ ಅಲಿಂದ ಹೊರಡುವಾಗ ಲೇಟ್. ಆದರೂ 15 ನಿಮಿಷ ಮುಂಚೆ ತಲುಪುತ್ತೇವೆ ಅಷ್ಟು ಸಾಕು ಅಂದುಕೊಂಡಿದ್ದೆ. ರಾಯರು ನಮ್ಮನ್ನು drop ಮಾಡಿ ಮನೆಗೆ ಹೋಗುವವರಿದ್ದರು. ನಾನು ಶುಕ್ರವಾರ ಮೂರು ಟಿಕೆಟ್ ಬುಕ್ ಮಾಡಿಕೊಂಡಿದ್ದೆ. ಕೊನೆ ಗಳಿಗೆಯಲ್ಲಿ ಮಾಲವಿಕಾ ಬರಲ್ಲ ಅಂದ್ಲು. ನಾನು ನಿಹಾ (ನನ್ನ ನಿಹಾ ಕಾಲೇಜಿನ ಹಲವಾರು ನಾಟಕಗಳಲ್ಲಿ ಪ್ರತ್ಯಕ್ಷ/ಪರೋಕ್ಷವಾಗಿ ಭಾಗವಹಿಸಿ(ರಂಗ ಸಜ್ಜಿಕೆ ಅವಳ speciality) ಹಲವಾರು ಬಹುಮಾನಗಳನ್ನು ಪಡೆದಿದ್ದಾಳೆ. ಹಾಗಾಗಿ ನಾನು ಅವಳು ನಾಟಕಗಳಿಗೆ ಹೋಗುವುದು ಸಾಮಾನ್ಯ. ಏನಾದರೂ ಹೊಸತನ್ನು ಕಲೀಲಿಕ್ಕೆ/ನೋಡಕ್ಕೆ ಸಿಗತ್ತೆ ಅಂತ.) ದಾರಿ ಮಧ್ಯ ಶ್ರೀಕಾಂತ,’ನಾನು ನಾಟಕಕ್ಕೆ ಬರ್ತೀನಿ ಹೇಗೂ ಮೂರು ಟಿಕೆಟ್ ಬುಕ್ ಮಾಡಿದೀ ಅಲ್ಲ’ ಅಂದ್ರು. ನನಗೆ ಪುಕು ಪುಕು. ನಿಧಾನಕ್ಕೆ ಬಾಯಿ ಬಿಟ್ಟೆ. ’ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟರ್ ನೋಡಿ ಮತ್ತು ನನ್ನ ಇಷ್ಟದ ಕುಮುದವಲ್ಲಿ ಅದರಲ್ಲಿ ಇದ್ದಾರೆ ಅಂತ ಈ ನಾಟಕ ನೋಡುವ ಪ್ಲ್ಯಾನ್ ಅಂತ ಹೆದರಿ ಹೆದರಿ ಹೇಳಿದೆ. ಪುಕುಪುಕು/ಹೆದರಿಕೆ ಯಾಕಂದ್ರೆ after an hectic tiruing day at the office i wanted him to relax and enjoy.
ನಾನು ನನ್ನ ಯೋಚನೆಯಲ್ಲಿ ಮುಳುಗಿದ್ದು ಸಡನ್ ಆಗಿ ಅಲ್ಲಿಂದ ಹೊರಬಂದಾಗ ದಾರಿ ಫಲಕ ಅಶೋಕನಗರ ತೋರಿಸ್ತಾ ಇತ್ತು. ’ಹೋಯ್ ಮಾರಾಯ್ರೆ ಎಲ್ಲಿಗೆ ಅಂತಾ ಕರಕೊಂಡು ಹೋಗ್ತಿದ್ದೀರಿ? ಅಂದ್ರ’ ಹನುಮಂತನಗರ ಮೇಡಂ ಅಂದಾ ಆಟೋ ದವ. ಯಾರಿಗಾದ್ರು ಕೇಳಿ ಯಾಕೋ ದಾರಿ ತಪ್ಪಿದ ಹಾಗೆ ಅನ್ನಿಸ್ತಾ ಇದೆ ಅಂದೆ. ಅಲ್ಲೇ ನಿಂತಿದ್ದ ಇನ್ನೊಂದು ರಿಕ್ಷಾದವನಿಗೆ ಕೆ ಎಚ್ ಕಲಾಸೌಧ ಎಲ್ಲಿ ಅಂದ್ರೆ, ನನ್ನ ಮುಖ ಮಿಕಿ ಮಿಕಿ ನೋಡ್ತಾ ಇದ್ದ. ಕೊನೆಗೆ ರಾಮಾಂಜನೇಯ ದೇವಸ್ಥಾನ ಅಂದೆ. ಅದಕ್ಕೆ ರೈಟ್ ಗೆ ಹೋಗಿ ಇನ್ನೊಂದು ರೈಟ್ ಆಮೇಲೆ ಸರ್ಕಲ್ ಅಲ್ಲಿಂದ ಸೀದಾ ಅಂದ ಭೂಪ್. ನಮ್ಮ ಆಟೋ ಡ್ರೈವರ್ ಇನ್ನಷ್ಟು ಸುತ್ತಾಡಿಸಿ, ನಾನು ಆಲ್ಮೋಸ್ಟ್ ನನ್ನ ಭಾರವಾದ bag ನಿಂದ ಅವನ ತಲೆ ಒಡೆಯುವುದೊಂದು ಬಾಕಿ. ಅಂತೂ ಇಂತೂ ಸುತ್ತಾಡಿಸಿ ನನ್ನ ಪಿರಿಪಿರಿ ಮಧ್ಯೆ 7.28 ಕ್ಕೆ ನಾವು ಕಲಾಸೌಧ ತಲುಪಿದ್ವಿ. ಆಗಲೇ ಅಲ್ಲೆಲ್ಲ ರಶ್. ’ಚೆನ್ನಾಗಿದೆಯಾ ಈ ನಾಟಕ? ಎಷ್ಟೊಂದು ಜನರು ಅಮ್ತ ಕೇಳಿದರು ರಾಯರು. ಅದಕ್ಕೆ ನಾನು ಫೇಸ್ ಬುಕ್ ಪ್ರಭಾವ. ನಾನು ಅಲ್ಲೇ ಇದರ ಪೋಸ್ಟರ್ ನೋಡಿ ಬಂದದ್ದು ಅಂದಾಗ ಅವರು ಗಟ್ಟಿಯಾಗಿ ನಕ್ಕರು. ನಿಹಾ ಟಿಕೆಟ್ ತರಲು ತೆರಳಿದರೆ ನಾನು ಟಾಯಲೆಟ್ ಗೆ ಹೋದೆ. ಅಲ್ಲಿಂದ ಹೊರಗೆ ಬರುವಾಗ ಕೆಳಗಡೆ ಹೌಸ್ ಫುಲ್, ಮೇಲಕ್ಕೆ ಹೋಗಿ ಅಂದ್ರು. ನನಗೆ ಯಾವತ್ತೂ ನಾಟಕ ನೋಡಲು ಹೋದಾಗ ಒಳಗಡೆ ಹೋಗಿ ಸ್ಟೇಜ್ ಕಡೆಯ vantage point ನೋಡಿ ಜಾಗ ಹುಡುಕುವ ಅಭ್ಯಾಸ. ಮೇಲೆ ಕೂಡ ರಶ. ನಾನು ಹಲವಾರು ಬಾರಿ ಕೆ ಎಚ್ ಕಲಾಸೌಧಕ್ಕೆ ಹೋದರೂ ಮೇಲಿನ ಸೆಕ್ಷನ್ ಒಪನ್ ಮಾಡುವಷ್ಟು ಗರ್ದಿ ಇರಲಿಲ್ಲ. ರಾಯರು ಎದುರಿನ ಬೆಂಚ್ ಮೇಲೆ ಕೂರುವ ಅಂದ್ರು. ಅಲ್ಲಿ ಕೂತ್ರೆ ಅಲ್ಲಿನ parapet ನಮಗಿಂತ ಉದ್ದ. ಸ್ಟೇಜ್ ಸರಿಯಾಗಿ ಕಾಣ್ತಿರಲಿಲ್ಲ. ಮಂಗಗಳ ತರ parapet ಮೇಲೆ ನೇತಾಡ್ತಾ ನಾಟಕ ನೋಡುವ ಅನುಭವ. ಅದರಲ್ಲಿ ನನ್ನ ಹಿಂಬದಿ ಕೂತವರಿಗೆ ಕೆಮ್ಮು, ಗಡಿ ಗಡಿ ಕ್ಯಾಕರಿಸ್ತಾ ಇದ್ರೆ ನನಗೆ ಬೆನ್ನ ಮೇಲೆ ಅವರ ಕಫ ಏನಾದರೂ ಬೀಳ ಬಹುದು ಅಂತ amoeba ತರಹ ಮೈ ಅನ್ನು ಮುದುಡಿಸ್ತಾ ಇದ್ದೆ. :-(. ಇಇನ್ನೊಬ್ಬರು ಪಿಸಿ ಪಿಸಿ ಮಾತಿನಲ್ಲಿ ನಾಟಕ ಯಾರಿಗೋ explain ಮಾಡ್ತಾ ಇದ್ರು. ಅಸಹನೆ ಇಂದ ಅವರ ಕಡೆ ನೋಡಿದ್ರೆ ಅವರು ಪುಟ್ಟ ಹುಡುಗಿಗೆ ನಾಟಕ explain ಮಾಡ್ತಾ ಇದ್ದದರಿಂದ ಸುಮ್ನಾದೆ. ಮತ್ತೆ ಹಿಂದೆ ಕೂತವರ ಕಾಲು ನಮ್ಮ ಬೆನ್ನಿಗೆ ತಾಗ್ತಾ literally we were on the edge of the seat. ಮನೆಗೆ ಬಂದು ಅಕ್ಕನಿಗೆ ಹೇಳಿ ನಕ್ಕಿದ್ದೆ ನಕ್ಕಿದ್ದು. ಅವಳು mommeeeee ಅಂತ ಹೇಳಿದಾಗ ಆಗುವ ಖುಶಿನೆ special.
’ಮೌನ’ ನಾಟಕ ಒಟ್ಟು ಐದು ಕತೆಗಳ ಸಂಗಮ. ಎರಡನೆ ಕತೆ ಅಷ್ಟು impressive ಆಗಿ ಬರಲಿಲ್ಲ. ಕೊನೆಯ ಕತೆಯಲ್ಲಿ ಹಾಡು ಸ್ವಲ್ಪ ಜಾಸ್ತಿ ಆಯ್ತು. ಕುಮುದವಲ್ಲಿಯವರ acting .005% over ಅನ್ನಿಸಿದ್ರೂ not bad. ಜಯಲಕ್ಷ್ಮಿ ಪಾಟೀಲ, ಪುಟ್ಟ ಸಾತ್ವಿಕ್ ಸೂಪರ್. ರಂಗ ಸಜ್ಜಿಕೆ, ಲೈಟಿಂಗ್ ನ ಹೊಸ ಟೆಕ್ ನೀಕ್ ಗೆ ನನ್ನದು 5/5.
ಹಿನ್ನೆಲೆಗಾಯನ ಕುಮುದವಲ್ಲಿ ಸೂಪರ್.You have a very sweet voice. ಅವರ ಜತೆ ಇದ್ದವರು ಕೂಡ, ಆದರೆ ಚಪ್ಪಾಳೆ ತಟ್ಟುವ ಭರದಲ್ಲಿ ಅವರ ಹೆಸರುಗಳು ಸರಿಯಾಗಿ ಕೇಳಿಸಲಿಲ್ಲ.
’ಮೌನ’ ನಾಟಕದ ಬಗ್ಗೆ ಹೇಳುವುದಾದ್ರೆ....................ಅರೇ ನಾನ್ಯಾಕೆ ಹೇಳ್ಲಿ?? ಪುನ: ಕೆ ಎಚ್ ಕಲಾಸೌಧದಲ್ಲಿ ಅವರ show ಇದೆ. ಹೋಗಿ ನೋಡಿ ಪ್ರೋತ್ಸಾಹಿಸಿ.
ಶ್ರೀಕಾಂತ ಅಂತೂ ಟೀಮ್ ನಲ್ಲಿರುವ ಒಟ್ಟಾರೆ youngsters ಗಳನ್ನು ನೋಡಿ ತುಂಬಾ ಇಂಪ್ರೆಸ್ಡ್. ನಾನು ನಿಹಾ ಗಿಂತ ಅವರು ಜಾಸ್ತಿ ಎಂಜಾಯ್ ಮಾಡಿದಾರೆ. I am glad.
ಆಜಾದ್ ಭಾಯ್ ನಿಮ್ಮನ್ನು ಸ್ಟೇಜ್ ಮೇಲೆ ಸೋಮಯಾಜಿ ಯವರು ನೆನಪಿಸಿಕೊಂಡಾಗ , ಶ್ರೀಕಾಂತ , ’ನಿನ್ನ ಆಜಾದ್ ಭಾಯ್ ನಾ’ ಅಂತ ಕೇಳಿದಾಗ ಹೌದು ಎನ್ನಲು ಖುಶಿ ಅನ್ನಿಸ್ತು. ನೀವು ಕುವೈಟ್ ನಲ್ಲಿದ್ದು ಕೊಂಡು ಸಪೋರ್ಟ್ ಮಾಡ್ತಿದ್ದೀರಲ್ಲ..ಭೇಷ!!! ಇಲ್ಲೆ ಇದ್ದುಕೊಂಡು ನಾವೇನೂ ಮಾಡಲ್ಲ.
ಪ್ರಕಾಶ ಹೆಗ್ಡೆ : ’ನಿಮ್ಮ ಬ್ಲಾಗ್ ಓದುತ್ತಿದ್ದ ದಿನಗಳಲ್ಲಿ ನನಗೆ ಸಖತ್ ಕಾಡಿದ ಕತೆಯನ್ನು ಇಲ್ಲಿ adapt ಮಾಡಿದ್ದು ಖುಶಿ ಅನ್ನಿಸ್ತು.
'ಮೌನ; i award it 3.8 / 5
:-)
ಸರಿ ನೀವು ಓದ್ತಾ ಇರಿ ನಾ ಹೊಂಟೆ.....ಮೆಂಥ್ಯದ್ ದೊಸೆ ಮಾಡಲು ಎಲ್ಲರಿಗೂ ಹೊಟ್ಟೆ ಹಸೀತಾ ಇದೆ ಅಂತೆ. ಸಂಡೆ ಅಲ್ಲವಾ ಸ್ವಲ್ಪ ಲೇಟ್ .....ಇದನ್ನು ಬರೆದು ಹೋಗುವಾ ಅಂತ ಬಂದೆ
ಬರಲಾ??
:-)
ನೀವೆಲ್ಲ ಅಲ್ಲಿದ್ದು ಇಂತಹ ನಾಟಕಗಳನ್ನೆಲ್ಲಾ ನೋಡುತ್ತೀರಲ್ಲಾ ತುಂಬಾ ಖುಷಿ.. ನಮಗೆ ಅಂತಹ ಭಾಗ್ಯವಿಲ್ಲ. ಮೌನ ಎಲ್ಲಾ ಸಮಯಕ್ಕೂ ಸರಿಬರೋಲ್ಲ ಅನ್ನುವುದು ನಿಜ.
ReplyDeleteಮಾಲತೀ..... :-) ಚೆಂದ ಚೆಂದ ನಿಮ್ಮ ಮಾತು. ಬಂದಿದ್ದು ಖುಷಿ. ಆದ್ರೆ ಮಾತಾಡಿಸದೇ ಹೋದ್ರಲ್ಲಾ...ಟೂ ನಿಮ್ಜೊತೆ :-(
ReplyDeleteಓಯ್ ಮಾಲ್ತಿ, ಚಂದ ಬರ್ದಿದ್ರಿ ಮಾರಾಯ್ತಿ! ನಿಮ್ ಜತೆ ಆಟೊದಲ್ಲಿ ಸುತ್ತಿ, ಕೊನೆಗೂ ಹನುಮಂತ ಸೌಧ ತಲುಪಿ ಬೆಂಚ್ ಮೇಲೆ ಕುತ್ಕೊಂಡು ಸ್ವಲ್ಪ ಕಿರಿ ಕಿರಿ ಅನುಭವಿಸಿ "ಮೌನ"ದ ಝಲಕ್ ನೋಡಿ ಇಡ್ಲಿ ತಿಂದ್ವಿ ಮೆಂತ್ಯ ದೋಸೆ ಪರಿಮಳದ ಘಮದೊಂದಿಗೆ! :-)))))
ReplyDelete:-) thank you Suguna, Kumudavalli and Shiela.
ReplyDeleteನನಗೆ ಬರಲಾಗಲಿಲ್ಲ ಮಾಲತಿಯವರೇ! :(
ReplyDeleteChennagi barediddira malathi ravare....
ReplyDeleteನನಗೆ ಪುಕು ಪುಕು....chennagide
ReplyDelete