ಕೆಲವು ವರ್ಷಗಳ ಹಿಂದೆ, ಅಂದ್ರೆ ಆಗಷ್ಟೆ ನಾನು ಕನ್ನಡದಲ್ಲಿ ಬರೆಯುವ ಪ್ರಯತ್ನ ಮಾಡ್ತಾ ಇದ್ದಾಗ thatskannada ನನ್ನಿಂದ ಆಲೂ ಪೋಹಾ/ ಬಟಾಟಾ ಪೋಹಾ ರೆಸಿಪಿ ಬರೆಯಿಸಿ ಹಾಕಿದ್ದರು. ಆಗ ಒಂದು ಕಮೆಂಟ್ ಹೀಗಿತ್ತು: 'ಮ್ಯಾಡಂ ಕನ್ನಡದಲ್ಲಿ ಲಕ್ಷಣವಾಗಿ ಆಲೂಗಡ್ಡೆ ಅಂತಾರೆ', ಆಲೂಗಡ್ಡೆ ಹಾಕಿದ್ದ ಅವಲಕ್ಕಿ ಅಂತ ಟೈಟಲ್ ಕೊಡಬೇಕಿತ್ತಂತೆ. :-) ನಾನು ಮುಂಬೈನಲ್ಲಿ ಹುಟ್ಟಿ ಬೆಳೆದಿರಬಹುದು, ಆದರೆ ನಮ್ಮ ಮನೆ ಭಾಷೆ ಕೊಂಕಣಿ, ನಾವು ಆಲೂಗಡ್ಡೆಗೆ ಕೊಂಕಣಿಯಲ್ಲಿ ಬಟಾಟೆ ಅಂತಲೇ ಹೇಳೋದು ಹಾಗಾಗಿ ನಾನು ಇವತ್ತು ಹಾಗೇ ಬರೆದಿದ್ದು. ಅಲ್ಲದೇ ಹಲವಾರು ಕಡೆ ಕನ್ನಡದಲ್ಲಿ ಬಟಾಟೆ ಅನ್ನುವುದನ್ನು ಕೇಳಿದ್ದೇನೆ anyways .......
ಇವತ್ತು ಬೆಳಿಗ್ಗೆ ಎದ್ದು ಏನಪ್ಪಾ ಬ್ರೇಕ್ ಫಾಸ್ಟ್ ಗೆ ಮಾಡೋದು ಅಂತ , ಸುಮಾರು ದಿನ ಆಯ್ತು ಚಪಾತಿ ಮತ್ತು ಆಲೂಗಡ್ಡೆ ಪಲ್ಯ ಮಾಡಿರಲಿಲ್ಲ, ಸೋ ಅದನ್ನೇ ಮಾಡುವ ಅಂತ, ಆಲೂಗಡ್ಡೆ ಬೇಯಿಸಿದೆ. ಮಾಲವಿಕಾ ಗೆ ಇವತ್ತು ಚಪಾತಿ ತಿನ್ನುವ ಮೂಡ್ ಇರಲಿಲ್ಲ. ಅಮ್ಮ, ಸುಮ್ಮನೆ ಗಂಜಿ ಊಟ ಮಾಡುವ ಸಿಕ್ಕಾಪಟ್ಟೆ ಸೆಕೆ ಅಂದ್ಲು. ಶ್ರೀಕಾಂತ ಚಪಾತಿ ನೇ ಮಾಡು ಅಂದ್ರು. ಅದಕ್ಕೆ ಎರಡೂ ಮಾಡಿದೆ. ಮಾಲವಿಕಾಗೆ ಗಂಜಿ ಜತೆ ಬಟಾಟೆ ಗೊಜ್ಜು ಇಷ್ಟ. ಹೇಗೂ ಬೇಯಿಸಿದ ಆಲೂಗಡ್ಡೆ ಇತ್ತು. ಅದರಿಂದ ಗೊಜ್ಜು ಕೂಡ ಮಾಡಿದೆ. ಸೊ breakfast double ಧಮಾಕಾ. ಮಕ್ಕಳು ಅಷ್ಟೆಲ್ಲ ಡೈಲಾಗ್ ಹೊಡೆದು ಚಪಾತಿ ಪಲ್ಯ ಸಹ ಗುಳುಂ ಮಾಡಿದ್ರು ಅದು ಬೇರೆ ವಿಷಯ. ಇಲ್ಲಿದೆ ಆಗೂಗಡ್ಡೆ ಉರ್ಫ್ ಬಟಾಟೆ ಗೊಜ್ಜು ಮಾಡುವ ವಿಧಾನ. ಬಹುತೇಕ ಎಲ್ಲರಿಗೂ ಇಷ್ಟ ವಾಗುವಂತಹ ಪದಾರ್ಥ.
ಒಗ್ಗರಣೆಗೆ : ಬಿಸಿ ಎಣ್ಣೆಯಲ್ಲಿ ಸಾಸಿವೆ , ಕರಿಬೇವು, ಹಿಂಗು, ಸಣ್ಣಕ್ಕೆ ಕೊಚ್ಚಿದ ಹಸಿಮೆಣಸಿನಕಾಯಿ. ಇದಕ್ಕೆ ಮ್ಯಾಶ್ ಮಾಡಿದ ಬಟಾಟೆ ಹಾಕಿ. ಉಪ್ಪು ಬೆರೆಸಿ, ಕೊನೆಯಲ್ಲಿ ಮೊಸರು ಮತ್ತು ಸಣ್ಣಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು. Actually original ಗೊಜ್ಜಿ ನಲ್ಲಿ ಕೊತ್ತಂಬರಿ ಸೊಪ್ಪ ಬೆರೆಸಲಿಕ್ಕೆ ಇಲ್ಲ. ಆದರೆ ನಮ್ಮ ರಾಯರು ಕೆಲವೊಮ್ಮೆ ಲೆಕ್ಚರ್ ಮೋಡ್ ಗೆ ಹೋಗಿ, ಈ ಗೊಜ್ಜಲ್ಲಿ ಏನೂ ಪೌಷ್ಠಿಕಾಂಶ ಇಲ್ಲ ಅಂತ ರಾಗ ಎಳೀತಾರೆ. ಅದಕ್ಕೆ ಕೊತ್ತಂಬರಿ ಸೊಪ್ಪು ಕರಿಬೇವು ತೋರಿಸಿ , see i have added some greens' ಅಂತ ಅವರಿಗೆ ತಮಾಷೆ ಮಾಡ್ತೇನೆ. ನೀವು ಮಾಡಿ ನೋಡಿ. ಸಿಕ್ಕಾ ಪಟ್ಟೆ ಈಸಿ. ಚಪಾತಿ ಜತೆಗೂ ಚೆನ್ನಾಗಿರುತ್ತೆ. ಎಂಜಾಯ್




No comments:
Post a Comment