April 8, 2014

ಈ ಯುಗಾದಿಯ ಕತೆ

ಇದೇನಪ್ಪ ರಾಮನವಮಿಯಂದು ಯುಗಾದಿ ಪೋಸ್ಟ್ ಅಂದುಕೊಂಡ್ರಾ ಮತ್ತೆ? ಯುಗಾದಿಗೆ ವಿಶ್ ಮಾಡುತ್ತಾ ಎರಡು ಮೈಲ್ ’ಈ ಯುಗಾದಿಗೆ ಏನು ಸ್ಪೇಶಲ್, ಯಾರನ್ನು ಊಟಕ್ಕೆ ಕರೀತಾ ಇದ್ದೀರ” ಅಂತ ಕೇಳಿದ್ದವು.
ಯುಗಾದಿಗೆ ಒಂದೆರಡು ದಿನ ಮುಂಚೆ ತೀರ್ಥಹಳ್ಳಿಯ ನಮ್ಮ ತೋಟದಲ್ಲಿ ಬೆಂಕಿ ಬಿದ್ದು ಸುಮಾರಷ್ಟು ಹಾನಿಯಾಯಿತು. ರಾಯರು ತೀರ್ಥಹಳ್ಳಿಗೆ ಹೋಗುವವರಿದ್ದರು. ಆದ್ದರಿಂದ ನಾವೇ ಮೂರು ಜನ ಒಂದು ಅನ್ನ ಸಾರು ಒಂದು ಸ್ವೀಟ್ ಮಾಡಿ ಹಬ್ಬ ನಿಪಟಾಯಿಸುವಾ ಅಂತ ಇದ್ವಿ. ಆದರೆ ಮನೆ ಗೃಹಪ್ರವೇಶಕ್ಕೆ ಕರೆದ ಮಿತ್ರರೊಬ್ಬರು, ಆಗ ಹುಷಾರಿಲ್ಲದೆ ಊರಿಗೆ ಹೋಗಿ ಅಲ್ಲಿಂದಲೇ ಫೋನ್ ಮಾಡಿದಾಗ, ಇರಲಿ ಬಿಡಿ ಡಾಕ್ಟರ್ ಹತ್ತಿರ ಎಲ್ಲ ಚೆಕ್ ಅಪ್ ಮಾಡಿಸಿ, ಆರಾಮಾಗಿ ಬೆಂಗಳೂರಿಗೆ ಬಂದ ಮೇಲೆ ಬನ್ನಿ. ಯುಗಾದಿಗೆ ಬನ್ನಿ ಅಂತ ಹೇಳಿದ್ದೆ. ನಿರಂತರ ಸಂಪರ್ಕದಲ್ಲಿರುವ ಅವರು, ಅವರ ಗಾಯಕ ಮಿತ್ರರನ್ನು ನಮ್ಮನ್ನು ಪರಿಚಯಿಸಬೇಕೆಂದಿದ್ದರು. ಅಷರಲ್ಲೇ ಮಿತ್ರರ ಮಿತ್ರರು ಅವರ ಗುರುಗಳನ್ನು ವಂದಿಸುವ ಒಂದು ಸುಂದರ ಸಂಗೀತದ ಸಂಜೆಯನ್ನು ನಾವು ಅಸ್ವಾದಿಸುವಮ್ತೆ ಮಾಡಿದರು. ಅಲ್ಲಿ ಪರಿಚಯ ಆದ ಅವರು ಅವರ ಮದುವೆಯ ಆಮಂತ್ರಣ ಕೊಡಲು ಮನೆಗೇ ಬರುವರೆಂದು ಹೇಳಿದರು. ಅವರಿಗೂ ಯುಗಾದಿಗೆ ಆಹ್ವಾನವೀಯುತ್ತ , ಏನಿದ್ದರೂ ಪುನ: ಫೋನ್ ಮಾಡಿ ತಿಳಿಸುತ್ತೇನೆಂದು ಹೇಳಿದ್ದೆ. ಯುಗಾದಿಯ ಮುಂಚಿನ ದಿನ ನನ್ನ ಸ್ನೆಹಿತರು ಫೋನ್ ಮಾಡಿದಾಗ ಹೀಗ್ ಹೀಗೆ, ಶ್ರೀಕಾಂತ ತುಮಕೂರುನಿಂದ ತೀರ್ಥಹಳ್ಳಿಗೆ ಹೋಗಬಹುದು, ನಾವು ಹಬ್ಬ ಗ್ರಾಂಡ್ ಆಗಿ ಮಾಡಲ್ಲ’ ಅಂದು ’ಏನು ಮಾಡುತ್ತೀರಿ, ಯಾರ ಮನೆಗೆ ಊಟಕ್ಕೆ ಹೋಗುತ್ತೀರಿ ಅಂತ ಬೇರೆ ಕೇಳಿದೆ. ಅದಕ್ಕೆ ಅವರು ’ಯಾರೂ ಊಟಕ್ಕೆ ಕರೆದಿಲ್ಲ ಯಾರದಾದ್ರೂ ಮನೆಗೆ ಹೋಗೋದಪ್ಪ’ ಅಂದಾಗ ಛೆ ಬ್ಯಾಚಲರ್ ಹುಡುಗ್ರು, ನನಗೆ ಅಕ್ಕ ಅಂತೆಲ್ಲ ಕರೀತಾರೆ ಅಂತ ಕೆಟ್ಟದನಿಸಿ, ಅಯ್ಯೋ ಹಾಗಾದ್ರೆ ಇಲ್ಲಿಗೇ ಬನ್ನಿ, ಸಿಂಪಲ್ಲಾಗ್ ಒಂದು ಊಟ ಮಾಡೋಣ, ಒಂದೆ ಪ್ರಾಬ್ಲಮ್ ಅಂದ್ರೆ ನಾವು ಮೂರು ಜನ ಮಾತೇ ಆಡಲ್ಲ. ಸ್ವಲ್ಪ ಸುಧಾರಿಸಕೊಳ್ಳಬೇಕು’ ಅಂತ. ರಾಯರು ಇದ್ದರೆ ಅವರೆ ಮಾತಾಡ್ತಾರೆ......( ಅಂತ ಹೇಳಿ ಅಡಿಗೆ ಮನೆಗೆ ಹೋದಾಗ ಅಲ್ಲಿ ನಾಲ್ಕೇ ನಾಲ್ಕು ಬ್ರೆಡ್ ಸ್ಲೈಸ್ ಕಾಣಿಸಿತ್ತು. ರಾಯರು ಊರಲ್ಲಿಲ್ಲದಿದ್ದಾಗ ನಾವು ಬ್ರೆಡ್ ಬಿಸ್ಕತ್ ಮೇಲೆ ಜೀವನ ಸಾಗಿಸೋದು. ಹಿ ಹಿ ಹಿ.).....ಈ ವಿಷಯದ ಬಗ್ಗೆ ಮುಂದೆ ಬರೀತೇನೆ. ಸ್ವಲ್ಪ ಟ್ರ್ಯಾಕ್ ಚೆಂಜ್!
ಅಲ್ಲಿ ತೋಟದಲ್ಲಿ ಬೆಂಕಿ ಬಿದ್ದಾಗ ಪಕ್ಕದ ತೋಟದವರು ಫೋನ್ ಮಾಡಿ ಹೇಳಿದರು. ನಮ್ಮ ತೋಟದ ಉಸ್ತುವಾರಿ ನೋಡಿಕೊಳ್ಳುವ ಪುಟ್ಟರಾಜು ಕುಟುಂಬ ಹಬ್ಬಕ್ಕೆಂದು ಅವರ ಉರಾದ ಹಿರಿಯೂರಿಗೆ ಹೋಗಿದ್ದರು. ಶ್ರೀಕಾಂತ ಇಲ್ಲಿಂದಲೇ ತೀರ್ಥಹಳ್ಳಿಯ ಫೈರ್ ಇಂಜೀನ್ ಗೆ ಫೋನ್ ಮಾಡಿದರು. ಆದರೆ ಅಲ್ಲಿರುವ ಒಂದೇ ಫೈರ್ ಇಂಜಿನ್ ಕೋಣಂದೂರಿಗೆ ಹೋಗಿತ್ತು. ಆ ದಿನ ಸುಮಾರು ತೋಟಗಳಲ್ಲಿ ಬೆಂಕಿ ಬಿದ್ದಿದ್ದವಂತೆ. ಅಷ್ಟು ಸೆಕೆ/ಬಿಸಿಲು. ಕೊಪ್ಪ, ಶ್ರೀಂಗೇರಿಯ ಫೈರ್ ಎಂಜಿನ್ ಕೂಡ ದೂರ ದೂರದ ಹಳ್ಳಿಗೆ ಹೋಗಿದ್ದರಿಂದ ಶಿವಮೊಗ್ಗಕ್ಕೆ ಫೋನ್ ಮಾಡಿ ಅಲ್ಲಿಂದ ತೀರ್ಥಹಳ್ಳಿಗೆ ನಮ್ಮ ತೋಟಕ್ಕೆ ಬರಲು ಎರಡು ಮುಕ್ಕಾಲು ಗಂಟೆ. ಬಿಸಿಲಿಗೆ ಚೆನ್ನಾಗಿ ಒಣಗಿನ ಬಿದಿರಿನ ಮೆಳೆ ಬೆಂಕಿಗೆ ಆಹುತಿಯಾಯಿತು. ಅಂತೂ ಬೆಂಕಿ ನಂದಿಸಲು ಸುಮಾರು ಹರಸಹಾಸ ಪಡಬೇಕಾಯ್ತು. ನೆಂಟರು ಮಿತ್ರರೆಲ್ಲ ತುಂಬ ಸಹಕರಿಸಿದರು. ಅಷ್ಟೆ ಅಲ್ಲ whatsapp ನಲ್ಲಿ ಬೆಂಕಿಯ, ಅದನ್ನು ಆರಿಸುವ ಚಿತ್ರಗಳನ್ನು ಕಳುಹಿಸಿ ನಮ್ಮ ಹೃದಯಕ್ಕೆ ಬೆಂಕಿ ತಾಗುವಂತೆ ಮಾಡಿದರು :-(
ಊಟಕ್ಕೆ ಕರೆದಿದ್ದಾಯ್ತು. ಅಡಿಗೆ ಮನೆಗೆ ಹೋಗಿ ಮೊದಲಿಗೆ ಉದ್ದಿನ ಬೇಳೆ ನೆನೆಸಿದೆ. ಬಾಳೆ ಎಲೆ ಕಡಬು ಮಾಡಲಿಕ್ಕೆ. ಮಕ್ಕಳಿಗೆ ಜಯನಗರ್ ಫೋರ್ಥ್ ಬ್ಲಾಕ್ ಕೆ ಓಡಿಸಿದೆ ಶೆಣೈ ಸ್ಟೋರ್ಸ್ ನಿಂದ ಎಳೆ ಗೇರು ಬೀಜ ತರಲು. ತೊಂಡೆಕಾಯಿ+ ಎಳೆಗೇರುಬೀಜದ ಪಲ್ಯ  ಯುಗಾದಿಗೆ ನಮ್ಮಲ್ಲಿ ಮಸ್ಟ್.  ಮಕ್ಕಳು ಸಂತೆಗೆ ಹೋಗಿ ಹೂ, ಹಣ್ಣು, ತರಕಾರಿ ತಂದರು. ಹಬ್ಬದ ದಿನ ನಾನು ಬೆಳಿಗ್ಗೆ ಬೇಗ ಎದ್ದು ಮನೆಯೆಲ್ಲ ಶುಚಿ ಮಾಡಿ, ರಂಗೋಲಿ ಬರೆದು, ಮಾವಿನ ತೋರಣ ಕಟ್ಟಿದೆ. ದೇವರಿಗೆ ದೀಪ ಕೂಡ ನಾನೇ ಹಚ್ಚಿದೆ. ಹೊಸ ಪಂಚಾಂಗ್ ಮೊದಲೆ ತಂದಿದ್ದಿತ್ತು. ಅದನ್ನು ದೇವರ ಮುಂದಿಟ್ಟೆ. ಅಡಿಗೆ ಎಲ್ಲ ಮುಗಿಸುವಷ್ಟರಲ್ಲಿ ರಾಯರು ಹಳ್ಳಿಯಿಂದ ಫೋನ್ ಮಾಡಿದರು. ತೀರ್ಥಹಳ್ಳಿಯಲ್ಲಿ ಅವರ ಕಸಿನ್ ಎಲ್ಲ ಮ್ಯಾನೇಜ್ ಮಾಡಿದ್ದಾರೆ ನಾನೇನೂ ಅರ್ಜೆಂಟ್ ಹೋಗುವ ಪ್ರಮೇಯ ಇಲ್ಲ’ ಅಂತ. ಹಾಗಾದರೆ ಬೇಗ ಬನ್ನಿ , ಸ್ನೇಹಿತರಾದ ’ರ’ ಮತ್ತು ”ನ’ ಬರುತ್ತಿದ್ದಾರೆಅಂತ ಖುಶಿಯಿಂದ ಕುಣಿಯೋದೊಂದೆ ಬಾಕಿ. ಅದಕ್ಕೆ ರಾಯರು, ’ಇಲ್ಲ ನಾವು ಬರುವುದು ನಾಲ್ಕು ಗಂತೆಯಾಗುತ್ತೆ, ಪಾಪ ಅವರನ್ನು ಕಾಯಿಸುವುದು ಬೇಡ’ ಅಂದರು.
ಹೇಳಿದ ಟೈಮ್ ಗೆ ಸರಿಯಾಗಿ ಬಂದರು ’ರ’ ಮತ್ತು ’ನ’. ಗಡಿಬಿಡಿಯಲ್ಲಿ ಅವರಿಗೆ ವಿಶ್ ಮಾಡಲು ಮರೆತು ಹೋಯ್ತು. ಊಟ ಬಡಿಸುವಾಗ ಇಬ್ಬರಿಗೂ ಯುಗಾದಿಯ ಶುಭಾಶಯಗಳನ್ನು ಹೇಳಿದೆ.
ಆ ದಿನದ ಮೆನ್ಯೂ:
ಬೇವು ಬೆಲ್ಲ with lots of ಬೆಲ್ಲ, ತೊಂಡೆಕಾಯಿ+ ಎಳೆಗೇರುಬೀಜದ ಪಲ್ಯ, ಬೀನ್ಸ್ ಪಲ್ಯ, ಸೌತೆಕಾಯಿ ಪಚ್ಚಡಿ, ದಪ್ಪಮೆಣಸಿನ ಬೋಂಡಾ, ಬಾಳೆಲೆ ಕಡುಬು, ಚಟ್ನಿ, ಅನ್ನ, ತೊವ್ವೆ, ಸಾರು, ಸಾಬಕ್ಕಿ ಖೀರು, ಬೇಳೆ ಹೋಳಿಗೆ with home made ತುಪ್ಪ, ಮಸಾಲಾ ಮಜ್ಜಿಗೆ :-) ಅಷ್ಟೆ. ನಾಲ್ಕು ಐಟಮ್ ಕಡಿಮೆ.
ಸರಿ ಈಗ ಆ ಬ್ರೆಡ್ ಸ್ಲೈಸ್ ಕಡೆ ಹೊರಡುವ?? ಅದರಿಂದ ಏನಾದರೂ ಹೊಸ ಡಿಶ್ ಮಾಡುವ ಅಂದುಕೊಂಡು ಅದರ ಜಾಮೂನು ಮಾಡಿದೆ. ಇಲ್ಲ ಅದನ್ನು ಬಂದ ಮಿತ್ರರಿಗೆ ನೀಡಲು ಮುಜುಗರ ಆಯ್ತು.
ಮೊದಲಿಗೆ ಬ್ರೆಡ್ ಸ್ಲೈಸ್ ಮುಳುಗುವಷ್ಟು ಹಾಲು ಹಾಕಿದೆ. ಮನೆಯ ಕಸ ಗುಡಿಸಿ ಬರುವಷ್ಟರಲ್ಲಿ ಅದು ಮೆತ್ತಗಾಯ್ತು. ಅದಕ್ಕೆ ಒಂದು ಟೀ ಸ್ಪೂನ್ ರವೆ, ಸ್ವ್ಲಲ್ಪ ಸೋಡಾ ಪುಡಿ, ಒಂದೆ ಟೇಬಲ್ ಸ್ಪೂನ್ ಮೈದಾ, ಒಂದು ಟೇಬಲ್ ಚಮಚ ಮೊಸರು ಬರೆಸಿ. soft dough ಮಾಡಿ ಒದ್ದೆ ಬಟ್ಟೆಯಿಂದ ಮುಚ್ಚಿಟ್ಟು ಮನೆಯೆಲ್ಲ ಒರೆಸಿ ಬಂದೆ. ಆ ಮೇಲೆ ಆ ಹಿಟ್ಟಿನ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಟ್ಟು ಸಕ್ಕರೆ ಸಿರಪ್ ಮಾಡಿ ಅದಕ್ಕೆ ಏಲಕ್ಕಿ ಪುಡಿ ಬೆರೆಸಿದೆ. ಮಾಡಿಟ್ಟ ಉಂಡೆಗಳನ್ನು ಎಣ್ಣೆಯಲ್ಲಿ ಕರಿದು ಸಕ್ಕರೆ ಪಾಕಕ್ಕೆ ಹಾಕಿದೆ. ಮಕ್ಕಳಿಗೆ ಫೋನಾಯಿಸಿ ವ್ಯಾನಿಲ್ಲ ಐಸ್ ಕ್ರೀಮ್ ತರಿಸಿದೆ. ಮಧ್ಯಾಹ್ನ ಊಟ ಆದಮೇಲೆ ಈ ಜಾಮೂನಿನ ಮೇಲೆ ಐಸ್ ಕ್ರೀಮ್ ಹಾಕಿ ತಿಂದೆವು. ನಿಹಾರಿಕಾಗೆ ತುಂಬ ಇಷ್ಟ ಆಗಿ, ನಾಳೆ ನಿನ್ನ ಫ್ರೆಂಡ್ಸ್ ಗೂ ಸರ್ವ್ ಮಾಡು. ಎಮ್ ಟಿ ಆರ್ ಗಿಂತ ಈ ಜಾಮೂನೇ ಚೆನ್ನಾಗಿದೆ ಅಂದ್ಲು. :-)






ಹಬ್ಬದ ದಿನ ರಾಯರು  ಮತ್ತು ಅವರ ಮಿತ್ರರು ಮನೆಗೆ ತಲುಪಿದಾಗ ನಾಲ್ಕು ಕಾlu ಆಗಿತ್ತು . ಆಮೇಲೆ ಸ್ನಾನ ಒಂದು ಮಿನಿ ಪೂಜೆ ಆದಮೇಲೆ ಊಟ. ನಾನು ಮಜ್ಜಿಗೆ ಮಾತ್ರ ಕುಡಿದು ಸೀದಾ ರಾತ್ರಿ ನೇ ಊಟ ಮಾಡಿದ್ದು. ಮಿತ್ರರು ಮನೆಗೆ ಹೋಗಿ ನಿದ್ದೆ ಹೊಡೆದು, ಸಂಜೆ ಫೋನ್ ಮಾಡಿ ’ಚೆನ್ನಾಗಿತ್ತು ಅಡಿಗೆ’ ಅಂದಾಗ ಖುಶಿಯೇನೋ ಆಯ್ತು. ಆದರೆ ರಾತ್ರಿ ಕಡಬು ಚಟ್ನಿ ತಿನ್ನುವಾಗ ಸಖತ್ ಉಪ್ಪುಪ್ಪು ಆಗಿದ್ದು ಗೊತ್ತಾಗಿ ಛೆ! ಪಾಪ ಏನೂ ಅನ್ನದೇ ತಿಂದುಬಿಟ್ರು ಪಾಪ ಅನ್ನಿಸಿತು:-(
ಅವರು ತುಂಬಾssss ಚೆನ್ನಾಗಿದೆ ನಿಮ್ಮ ಮನೆ ಅಂದಿದ್ದು ತುಂಬಾ ಅಂದ್ರೆ ತುಂಬಾ ಖುಶಿ ಆಯ್ತು.
ಅಷ್ಟೆ ಕತೆ. ಸಾಕಾ??!! :-)
(ಅಮ್ಮ, ಯುಗಾದಿ ಮುಗಿದು ಅದೆಷ್ಟೊ ದಿನ ಆದ ಮೇಲೆ ಬರಿತಿದ್ದಿಯಾ ಅಂತ ಮಾಲವಿಕಾ ಉವಾಚ’ ಹೌದು ಒಂದು ಸೋಂಬೇರಿತನ, ಇನ್ನೊಂದು ಹದಿನಾಲ್ಕನೇ ತಾರೀಕಿಗೆ ಸೌರಮಾನ ಯುಗಾದಿ......ಹಾಗಾಗಿ ಇನ್ನೂ ಕೆಲವೇ ದಿನಕ್ಕೆ ಯುಗಾದಿಯೇ ತಾನೇ??ಅದಕ್ಕಿಂತ ಮೊದಲೇ ಬರೆದೆ ಅಲ್ವಾ  ಮತ್ತು ನನ್ನ ಬ್ಲಾಗ್ ಹೆಸರೆ ನೆನಪಿನ ಸಂಚಿಯಲ್ಲವಾ’ಅಂತ ಹೇಳಿದೆ ಅವಳಿಗೆ. ಅವಳು whew, whatever, sorry i asked ಅಂದ್ಲು....)
:-) :-)

7 comments:

  1. Hope there's not much damage at your farm.
    Whenever I've tried making Jamoon, they would break while frying. Will try this one :-).

    ReplyDelete
  2. ತಡವಾಗಿ ಬರೆದುಕೊಟ್ಟರೂ ಅಮೋಘವಾಗಿ ಬರೆದಿದ್ದೀರ.

    ReplyDelete
  3. Ravindra MavakhandaApril 9, 2014 at 4:23 PM

    ''ಸರಿ ಈಗ ಆ ಬ್ರೆಡ್ ಸ್ಲೈಸ್ ಕಡೆ ಹೊರಡುವ?? ಅದರಿಂದ ಏನಾದರೂ ಹೊಸ ಡಿಶ್ ಮಾಡುವ ಅಂದುಕೊಂಡು ಅದರ ಜಾಮೂನು ಮಾಡಿದೆ. ಇಲ್ಲ ಅದನ್ನು ಬಂದ ಮಿತ್ರರಿಗೆ ನೀಡಲು ಮುಜುಗರ ಆಯ್ತು. ಮೊದಲಿಗೆ ಬ್ರೆಡ್ ಸ್ಲೈಸ್ ಮುಳುಗುವಷ್ಟು ಹಾಲು ಹಾಕಿದೆ. ಮನೆಯ ಕಸ ಗುಡಿಸಿ ಬರುವಷ್ಟರಲ್ಲಿ ಅದು ಮೆತ್ತಗಾಯ್ತು. ಅದಕ್ಕೆ ಒಂದು ಟೀ ಸ್ಪೂನ್ ರವೆ, ಸ್ವ್ಲಲ್ಪ ಸೋಡಾ ಪುಡಿ, ಒಂದೆ ಟೇಬಲ್ ಸ್ಪೂನ್ ಮೈದಾ, ಒಂದು ಟೇಬಲ್ ಚಮಚ ಮೊಸರು ಬರೆಸಿ. soft dough ಮಾಡಿ ಒದ್ದೆ ಬಟ್ಟೆಯಿಂದ ಮುಚ್ಚಿಟ್ಟು ಮನೆಯೆಲ್ಲ ಒರೆಸಿ ಬಂದೆ. ಆ ಮೇಲೆ ಆ ಹಿಟ್ಟಿನ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಟ್ಟು ಸಕ್ಕರೆ ಸಿರಪ್ ಮಾಡಿ ಅದಕ್ಕೆ ಏಲಕ್ಕಿ ಪುಡಿ ಬೆರೆಸಿದೆ. ಮಾಡಿಟ್ಟ ಉಂಡೆಗಳನ್ನು ಎಣ್ಣೆಯಲ್ಲಿ ಕರಿದು ಸಕ್ಕರೆ ಪಾಕಕ್ಕೆ ಹಾಕಿದೆ. ಮಕ್ಕಳಿಗೆ ಫೋನಾಯಿಸಿ ವ್ಯಾನಿಲ್ಲ ಐಸ್ ಕ್ರೀಮ್ ತರಿಸಿದೆ. ಮಧ್ಯಾಹ್ನ ಊಟ ಆದಮೇಲೆ ಈ ಜಾಮೂನಿನ ಮೇಲೆ ಐಸ್ ಕ್ರೀಮ್ ಹಾಕಿ ತಿಂದೆವು.''

    ಪಾಪ! ಬಂದವರಿಗೆ ಹೊಸ ಐಟಮ್ ಕೊಡಲೇ ಇಲ್ವಲ್ಲ!! ಅನ್ಯಾಯ!!!!

    ReplyDelete
  4. @ Radhika : try maaDi hELi

    @ Badari : thank u

    @ Ravindra: innomme maaDi karedraytu biDi

    :-)

    ms

    ReplyDelete
  5. ನಿಮ್ಮ `ಹಸ್ತಗುಣ'ಚೆನ್ನಾಗಿದೆ. ಹೊಸರುಚಿಗಳ ತಯಾರಿಕೆಯೂ ಚೆನ್ನ,ಬರೆಯುವುದೂ ಚೆನ್ನ, ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಸ್ವಾಗತ.

    ReplyDelete
  6. Prabhamani : dhanyavadagaLu

    Munna: :-) :-) thank u

    ReplyDelete