March 4, 2014

ಹೊಸ ಮನೆಯಿಂದ ಮೊದಲ ಪೋಸ್ಟ್


ಸಂತೋಷ , ನೆಮ್ಮದಿ ಈ ಹಾಲಿನ ಹಾಗೆ ಉಕ್ಕಿ ಹರಿಯಲಿ ಅಂತ ನೀವೂ ಹಾರೈಸಿ :-)

ಗೃಹಪ್ರವೇಶ ಎಲ್ಲ ಮುಗಿದು, ಅಮ್ಮನಿಗೆ ನೆಂಟರಿಷ್ಟರ ಮನೆಗೆಲ್ಲ ಕರೆದುಕೊಂಡು ಹೋಗಿ ಈಗ ಮನೆಯ ಸಾಮಾನು ಸರಂಜಾಮನೆಲ್ಲ ಒಂದು ಸ್ಥಿತಿಗೆ ತಂದಿಟ್ಟಿದ್ದಾಯಿತು. ಸ್ನೇಹಿತರಿಗೆ ಎಷ್ಟು ದಿನ ನನ್ನ ಮನೆಯನ್ನು ಹೊಸ ಮನೆಯೆಂದು ಕರೆಯಬಹುದು ಎಂದು ಕೇಳಿದಾಗ ಇನ್ನೊಂದು ರೌಂಡ್ ಪೈಂಟಿಂಗ್ ಆಗುವ ತನಕ ಅಂದಿದ್ದಾರೆ. :-)
ತುಂಬಾ ಎಂಜಾಯ್ ಮಾಡ್ತಾ ಇದ್ದೇನೆ ನನ್ನ ಹೊಸ ಮನೆಯನ್ನು. ಬ್ಲಾಗ್, ಫ್ರೆಂಡ್ಸ್ , ಇ-ಮೈಲ್, ಪುಸ್ತಕ, ಸಿನಿಮಾ ಇವೆಲ್ಲರಿಂದ ದೂರ ಆಗಿದ್ದೀನಿ. ಕೆಲಸ ಮಾಡ್ತಾ ಮ್ಯೂಸಿಕ್ ಕೆಳ್ತೀನಿ. ಉಳಿದ ಸಮಯ ಬಾಲ್ಕನಿಯಲ್ಲಿ ಕಳೆಯುತ್ತೇನೆ. ಬಾಲಕನಿ ಕೆಳಗಿರುವ ದೊಡ್ಡ ನೇರಳೆ ಮರ ಅದಕ್ಕೆ ಬಿಟ್ಟಿರಿವ ಹೂ. ಒಂದು ದೊಡ್ಡ ಓಪನ್ ಸ್ಪೇಸ್ ಅಲ್ಲಿರುವ ಹಲವಾರು ಮರಗಳು, ದಿನಾ ಬೆಳಿಗ್ಗೆ ಅಲ್ಲಿ ನಡೆಯುವ ಮಹಿಳೆಯರ ಲಾಫಿಂಗ್ ಕ್ಲಬ್, ಶನಿವಾರ ಭಾನುವರ ಅಲ್ಲಿ ಸೇರುವ ಚಿಣ್ಣರು, ಬಿಲ್ಡಿಗ್ ಎದುರುಗಡೆಯಿರುವ ಪೆಟ್ರೊಲ್ ಬಂಕ್, ಹೋಟಲ್ ರಸ್ತೆಯಲ್ಲಿ ಯಾವತ್ತೂ ಕಡಿಮೆಯಾಗದ ಟ್ರಾಫಿಕ್...ಇವೆಲ್ಲದರಲ್ಲಿ ಸಧ್ಯಕ್ಕೆ ನಾನು ಫುಲ್ಲಿ involved.




ಬೆಳಿಗ್ಗೆ ಎದ್ದು ವಾಕ್ ಹೋಗುವುದು, ಹಾಲು ತರುತ್ತಾ. ಕಾರ್ ವಾಶ್ ಮಾಡುವ ಗಿರೀಶ ಕಾಸರವಳ್ಳಿಯವರಿಗೆ ಮುಗುಳ್ನಗೆಯ ಹಾಯ್ ಹಲ್ಲೋ ಅನ್ನುವುದು ಅವರ ಚೆಂದದ ಎರಡು ನಾಯಿಗಳನ್ನು ಮಾತನಾಡಿಸುವುದು ಬೆಳಗ್ಗಿನ ದಿನಚರಿಯಾದರೆ, ಸಂಜೆ ಮಕ್ಕಳು ಮನೆಗೆ ವಾಪಸ್ಸ್ ಆದ ನಂತರ ಹತ್ತಿರದಲ್ಲಿ ಯಾವ ಯಾವ ಅಂಗಡಿಗಳಿವೆ, ಹಾಗೂ ಆಫಿಸ್ ಸ್ಪೇಸ್ ಗಾಗಿ ಹುಡುಕಾಟ. ಇನ್ನೂ ನಮಗೆ ಚಕ್ಕಿ/ಗಿರಣಿ ಎಲ್ಲಿದೆ ಎನ್ನುವ ಸುಳಿವು ಸಿಕ್ಕಿಲ್ಲ. ಉಳಿದಂತೆ ಬ್ಯಾಂಕ್, ಏಟಿಎಮ್ ಮಾತ್ರ ಅಲ್ಲ ಊರಿಗೆ ಹೋಗುವ ಬಸ್ ಗಳೂ ನಮ್ಮ ಬಿಲ್ಡಿಂಗ್ ಎದುರಿಗೆ ಅದರ ಸೌಲಭ್ಯ ಸಿಗುತ್ತೆ ಎನ್ನುವ ಖುಶಿ. 11ವರ್ಷ ರಾಜಾಜಿನಗರ ಅಕ್ಕಪಕ್ಕದಲ್ಲಿದ್ದು, ಈ ಬಿಟಿಎಮ್ ಲೇಔಟ್ ಒಂತರಹ ಬೇರೆ ಊರಿಗೆ ಬಂದ ಹಾಗೆ ಅನ್ನಿಸ್ತಿದೆ. ನಿಹಾ ಗೆ ಕಾಲೇಜ್ ಹತ್ತಿರ ಆಗುತ್ತೆ ಆದರೆ ಇನ್ನೊಂದು ತಿಂಗಳಲ್ಲಿ ಅವಳು ಆ ಕಾಲೀಜಿನಿಂದ ಹೊರ ಬರುತ್ತಾಳೆ. ರಂಗಶಂಕರ ಮತ್ತು ಕೆ ವಿ ಎಸ್ ಆಪ್ತ ರಂಗಮಂದಿರ, ಸುಚಿತ್ರ ಫಿಲ್ಮ್ ಸೊಸೈಟಿ ನಮಗಿಲ್ಲಿ ಹತ್ತಿರವಾಗುತ್ತೆ.

ಇನ್ನೂ ಈ ಕಡೆ ಆಫಿಸ್ ಆಗದೆ ಇದ್ದುದರಿಂದ ಶ್ರೀಕಾಂತ್ ಕೂಡ ಟಿಫಿನ್ ತೆಗೆದುಕೊಂಡು ಹೋಗುತ್ತಾರೆ.ಹಾಗಾಗಿ ನನ್ನ ಮನೆಕೆಲಸಗಳು ಬೇಗ ಮುಗಿಯುತ್ತವೆ. ಇಷ್ಟು ವರ್ಷಗಳಲ್ಲಿ ಇದೇ ಮೊದಲು ಅವರು ಟಿಫಿನ್ ತೆಗೆದುಕೊಂಡು ಹೋಗುವುದು. 

 ಹಲವಾರು ವರ್ಷಗಳ ಹಿಂದೆ ಮಿತ್ರ ಶ್ರೀವತ್ಸ ಜೋಶಿಯವರ ಜತೆ ಚಾಟ್ ಮಾಡುತ್ತಿದ್ದಾಗ ಅವರು(ಆಫಿಸ್ ನಿಂದ) ’ಇವತ್ತು ಉಪ್ಪಿಟ್ಟು, ಮೈಕ್ರೋವೇವ್ ನಲ್ಲಿ ಬಿಸಿ ಮಾಡಿ ತಿನ್ನುತ್ತಾ ಇದ್ದೇನೆ’ ಅಂದಾಗ ನನಗೆ ತುಂಬ ಥ್ರಿಲ್ ಅನ್ನಿಸಿತ್ತು. ನಮ್ಮ ಆಫಿಸ್ ನಲ್ಲೂ ಆ ಸೌಕರ್ಯ ಇದ್ದಿದ್ದರೆ ಅಂತ ಅಂದುಕೊಂಡಿದ್ದೆ. ನಮ್ಮ ಆಫಿಸ್ ನ ಎಲ್ಲರು ತುಂಬ ಕಮಿಟ್ಟಡ್ ಆಗಿರುವವರು. ಶನಿವಾರ ಭಾನುವಾರ ಗಳಲ್ಲೂ ಕೆಲಸ ಮಾಡುವವರು, ಅವರಿಗೆ ಕನಿಷ್ಠ ಮಧ್ಯಾಹ್ನ ಬಿಸಿ ಊಟ ಸಿಗುವ ಹಾಗೆ ಆಗಬೇಕೆಂದು ನನಗೆ ಯಾವತ್ತೂ ಅನ್ನಿಸಿತ್ತು. ಶ್ರೀಕಾಂತ ಈ ಮನೆಗೆ ಬರುವಾಗ ಎಲ್ಲ ಹೊಸ ಸಾಮಾನು ತೆಗೆದುಕೊಳ್ಳುವ ಹಳೇಯದು ಯಾವುದೂ ಬೇಡ (ಸಧ್ಯ ನನ್ನನ್ನು ಹಳೆಯ ಸಾಮಾನಿನ ಪಟ್ಟಿ ನಲ್ಲಿ ಸೇರಿಸದಿದ್ದದ್ದು ನನ್ನ ಪುಣ್ಯ :-))ಅಂದಾಗ ನಮ್ಮ ಮೈಕ್ರೋವೇವ್, ಅದನ್ನು ಕೊಂಡು ಒಂದು ವರೆ ವರ್ಷ ಆಗಿತ್ತಷ್ಟೆ, ಆಫಿಸ್ ಗೆ ಕೊಟ್ಟುಬಿಡಬೇಕೆಂದು ನನ್ನ ಇಚ್ಛೆಯಾಗಿತ್ತು ಆದರೆ ಹೇಳಲು ಭಯ. ಅಮ್ಮ ನ ಬಳಿ ಕೂಡ ಅಂದಿದ್ದೆ. ಇಲ್ಲಿಗೆ ಶಿಫ್ಟ್ ಆಗುವ ಒಂದು ದಿನ ಮುಂಚೆ ಶ್ರೀಕಾಂತ್ ಅವರಾಗಿ ’ನಮ್ಮ ಮೈಕ್ರೋವೇವ್ ಆಫಿಸ್ ಗೆ ಕೊಟ್ಟು ಬಿಡೋಣ ನಿನ್ಗೆ ಹೊಸದು, ದೊಡ್ಡ ದು ಕೊಡಿಸ್ತೀನಿ ಅಂದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ. ಸೋ ಈಗ ಆಫಿಸ್ ನಲ್ಲಿ ಎಲ್ಲರು ಮಧ್ಯಾಹ್ನ ಬಿಸಿ ಊಟ ಎಂಜಾಯಿಸುತ್ತಿದ್ದಾರೆ.
ಇವತ್ತಿಗಿಷ್ಟೆ......
ಸುಮ್ನೆ ಏನೋ ಗೀಚಿದೆ. ಒಪ್ಪಿಸಿಕೊಳ್ಳಿ.
A picture of my balcony was saved in my cell phone. this is for you Radhika: The lovely nameplate has yet to be installed. :-) am excited and looking forward to it. will post a picture of it once it is put up

10 comments:

  1. Wow congratulations...post some more pics of your new house :)

    ReplyDelete
  2. Arrey, nimma beautiful Teerthahalli model balcony photone haakilla? It was nice to read your blog post after a long time (yea 1 month seems like really a long time!). Wishing you all, all the happiness in your new home sweet home.

    ReplyDelete
  3. hosa maneyalli shanti, harusha tumbi tuLuakali. shubhashayagaLu

    usha

    ReplyDelete
  4. ಅಭಿನಂದನೆಗಳು ಮಾಲತಿಯವರೇ,

    ಹೊಸ ಮನೆಯ ಪರಿಸರ ನಿಮ್ಮನ್ನು ಇನ್ನಷ್ಟು ಉತ್ತೇಜಿಸುವುದು, ಬರವಣಿಗೆಯನ್ನು ಪೂರ್ಣ ಪ್ರವೃತ್ತಿಯಾಗಿಸುವುದೆಂದು ಆಶಿಸುತ್ತೇನೆ.

    ಎಲ್ಲವೂ ಶುಭವಾಗಲಿ, ಮುಖಪುಟಕ್ಕೂ ಹಿಂದಿರುಗಿರಿ.

    ತಮ್ಮ ಮನೆ ಮಂದಿಗೆಲ್ಲರಿಗೂ ಅಭಿನಂದನೆಗಳು.

    ReplyDelete
  5. ಮಾಲತಿ,
    ಹೊಸ ಮನೆ ವಾತಾವರಣ ನಿಮ್ಮಲ್ಲಿ ಹೊಸ ಸ್ಪೂರ್ತಿ ತುಂಬಿ ಅರಳಿಸಲಿ.ಬಾಲ್ಕನಿ ನನಗೆ ತುಂಬಾ ಹಿಡಿಸಿತು.ಶುಭಾಶಯಗಳು.

    ReplyDelete
  6. ಮಾಲತಿ,
    ಹೊಸ ಮನೆಯ ಹೊಸ ವಾತಾವರಣ ನಿಮ್ಮಲ್ಲಿ ಹೊಸ ಸ್ಪೂರ್ತಿ ತುಂಬಿ ನಳನಳಿಸಿ.ಬಾಲ್ಕನಿ ನನಗೆ ಇಷ್ಟವಾಯಿತು.ಶುಭಾಶಯಗಳು.

    ReplyDelete
  7. Geeta Nayak, Swarna, Radhika, Usha, Badari bhaiyya and Geeta Pai
    ellarigoo thank u. Swarna kelavondu photos Srikanth FB nallide. public/tag nallirOdu neevu noDababahudu. :-)

    ReplyDelete
  8. Malathi Akka, Congrats..Enjoy at ur new home :)

    ReplyDelete
  9. Forgot to mention in the above comment..beautiful house..wish to see few more pictures :)

    ReplyDelete