ಸ್ವಂತ ಮನೆಗೆ ಶಿಫ್ಟ್ ಆಗಿ ಸರಿಯಾಗಿ ಒಂದು ತಿಂಗಳು. ಪುಸ್ತಕಗಳನ್ನು ಅರ್ಧಕ್ಕಿಂತ ಹೆಚ್ಚು ಕೊಡಬೇಕಾದಾಗ ಆದ ನೋವು ಅಷ್ಟಿಷ್ಟಲ್ಲ. ಮೊದಲೆಲ್ಲ ನಾನು ಪುಸ್ತಕಗಳನ್ನು ಮೂರು ನಾಲ್ಕು ಬಾರಿ ಓದಿಯಾದ ನಂತರ ಆಫಿಸ್ ಲೈಬ್ರರಿಗೆ ವರ್ಗಾಯಿಸಿ ಬಿಡುತ್ತಿದ್ದೆ. ಆದರೆ ಈ ಸಲ ಆಫಿಸ್ ನಲ್ಲೂ ಜಾಗ ಇಲ್ಲ ಅಂದಾಗ ಬೇಜಾರಾಯಿತು. ಹಲವಾರು ಪುಸ್ತಕಗಳನ್ನು ನಿಹಾ ಫ್ರೆಂಡ್ಸ್ ಗೆ, ಕೆಅವು ಆಕೃತಿಗೆ, ಕೆಲವು ಕರ್ನಾಟಕ ತಮಿಳನಾಡು ಬಾರ್ಡರ್ ನಲ್ಲಿರುವ ಒಂದು ಎನ್ ಜಿ ಒ ದ ಲೈಬ್ರರಿಗೆ, ಕೆಲವು ನಿಹಾರಿಕಾಳ ಕಾಲೇಜ್ ಗೆ ಕೊಟ್ತ್ತು ಈಗ ನಾನು ತುಂಬ ಬಡವಿ ಎನ್ನುವ ಫೀಲಿಂಗ್ ಬರುತ್ತಾ ಇದೆ. ಹಾಂ ಪುಸ್ತಕ ಗಳನ್ನು ಇತರರಿಗೆ ಕೊಡುತ್ತಿದ್ದಾಗ ನನ್ನ ಕಣ್ಣು ಯಶವಂತ ಚಿತ್ತಾಲರ ಪುಸ್ತಕ ’ಪುರುಷೋತ್ತಮ’ ದ ಮೇಲೆ ಬಿತ್ತು. ಅದನ್ನು ನಿಹಾ ಅವಳ ಫ್ರೆಂಡ್ ಗೆ ಕೊಡಲು ಎತ್ತಿಟ್ಟಿದ್ದಳು. ನಾನು ಒಂದು ಸಮನೆ ಕಿರುಚಿದೆ, ಹೋಯ್ ಯಶವಂತ ಚಿತ್ತಾಲ, ಜಯಂತ ಕಾಯ್ಕಿಣಿ, ಕೆ.ಟಿ. ಗಟ್ಟಿ ಮಾಮ, ವಸುಧೇಂದ್ರ, ಶ್ರೀನಿವಾಸ ವೈದ್ಯ, ನಾಗೇಶ ಹೆಗಡೆ,ಎಸ್.ಎಲ್. ಭೈರಪ್ಪ, ರಾಘವೇಂದ್ರ ಪಾಟೀ ಲ್,ವಿವೇಕ ಶಾನಭಾಗ, ಯು.ಆರ್ ಅನಂತಮೂರ್ತಿ, ನೆಮಿಚಂದ್ರ, ಇವರ ಪುಸ್ತಕ ಮಾತ್ರ ಕೊಡುವ ಹಾಗಿಲ್ಲ. ಅಪ್ಪ ಜಾಗ ಇಲ್ಲ ಅಂದ್ರೆ ನನ್ನ ಸೀರೆಗಳನೆಲ್ಲ ಕೊಟ್ಟು ಬಿಟ್ಟು ಜಾಗ ಖಾಲಿ ಮಾಡಿಕೊಂಡು ಇಡ್ತೇನೆ, ಗೊತ್ತಾಯ್ತಾ ಅಂತ ಆವಾಜ್ ಹಾಕಿದೆ. ಆಗ ನನ್ನ ತಮ್ಮ ಫೋನ್ ನಲ್ಲಿ ಮಾಲವಿಕಳ ಜತೆ ಮಾತನಾಡುತ್ತಿದ್ದ. ನನಗೆ ಫೋನ್ ಮಾಡಿ ’ಏನೇ ಜೀವ ಹೋದ ಹಾಗೆ ಕಿರುಚಿತಿದ್ದೆ, ಏನಾಯ್ತು? ಅಂತ ’ಹೋಗೊ ನಿನಗದೆಲ್ಲ ಅರ್ಥ್ ಆಗಲ್ಲ ಅಂದಿದ್ದೆ.
ಆ ಮೇಲೆ ನಿಹಾ ’ಶಿಕಾರಿ’ ಓದಿ ಅದರ ಕವರ್ ಪೇಜ್ contest ನಲ್ಲಿ ಸೆಕೆಂಡ್ ಪ್ರೈಜ್ ಬಂದಾಗ, ಈ ಸಲ ತಮ್ಮನ ಮನೆಗೆ ಮುಂಬೈಗೆ ಹೋದಾಗ ಅವರನ್ನು, ಹಾಗೂ ಮಿತ್ರಾ ವೆಂಕಟರಾಜ್, ಅನು ಪಾವಂಜೆ (ನನ್ನ FB ಫ್ರೆಂಡ್ಸ್) ಭೇಟಿ ಮಾಡಿ ಬರುವಾ ಅಂತ ಪ್ರಾಮಿಸ್ ಮಾಡಿದ್ದೆ. ನಮಗೆ ಅಂಧೇರಿಯಿಂದ ಅದೇನೂ ಅಷ್ಟು ದೂರ ಇಲ್ಲ.ಹಾಗೂ ಬ್ಯಾಂಡ್ ಸ್ಟ್ಯಾಂಡ್ ನಲ್ಲಿ ನನ್ನ ಇಷ್ಟದ actor ರೇಖಾ ಕೂಡಾ ಇದ್ದಾರೆ ಅಂದಿದ್ದೆ. ಹಿಂದಿನ ಸಲ ಮಕ್ಕಳಿಗೆ ಅಮಿತಾಭ್ ಬಚ್ಚನ್, ಲತಾ ಮಂಗೇಶ್ಕರ್, ನನ್ನ ಇಷ್ಟದ ಇನ್ನೊಂದು ಜಾಗ ಹಾಜಿ ಅಲಿ ತೋರಿಸಿದ್ದೆ .)ತಮ್ಮನ ಗಾಡಿ ಹೇಗೂ ಇದೆ. ಅಂತ. ಆದರೆ ಚಿತ್ತಾಲರು ಈಗಿಲ್ಲ. :-( ನಿಜಕ್ಕೂ ಬೇಜಾರಿನ ವಿಷಯ
ಮಿತ್ರ ರು ನನಗೆ ಫೋನ್ ನಲ್ಲಿ ಯಶವಂತ್ ಚಿತ್ತಾಲರು ದೈವಾಧೀನರಾದ ವಿಷಯ ಹೇಳಿದಾಗ (ಅವರ ಜತೆ ಸಂಗೀತ/ಪುಸ್ತಕದ ಬಗ್ಗೆ ಕೋರಿತಿರ್ತೇನೆ)ಪುಸ್ತಕ ಓದಿ ನೇ ಕೆಲವರ ಬಗ್ಗೆ ಆತ್ಮೀಯತೆ ತಂದುಕೊಳ್ಳುತ್ತೇವಲ್ಲವಾ?? (ಅವರ ದೇಹಾಂತದ ಬಗ್ಗೆ ರಾತ್ರಿನೇ ಮೂರು ಎಸ್ ಎಮ್ ಎಸ್ ಬಂದಿತ್ತು. ನಾನೇನೂ ಸಾಹಿತಿಯಲ್ಲ, ಕನ್ನಡದ ಸಾಹಿತ್ಯದ ಬಗ್ಗೆ ಅಷ್ಟೇನೂ ತಿಳುವಳಿಕೆ ಕೂಡ ಇಲ್ಲ, ಆದರೂ ನನಗೆ ಎಸ್ ಎಮ್ ಎಸ್ ಬಂದಿದ್ದು ನೋಡಿ ನನಗೆ ಆಶ್ಚರ್ಯ.ಬಹುಶ: ನನ್ನ ಕವರ್ ಪೇಜ್ ಶಿಕಾರಿ ಪೋಸ್ಟ್ ನೋಡಿ ಕಳುಹಿಸಿರಬೇಕು) ಅಂತ ಕೇಳಿದಾಗ ಅವರೂ ಹೂಂ ಅಂದಿದ್ದರು. ಚಿತ್ತಾಲರ ಕಾದಂಬರಿ ’ಛೇದ’ ಓದಿ(ನನಗೆ ’ಶಿಕಾರಿ’ ಗಿಂತ ಇದೇ ಹೆಚ್ಚು ಇಷ್ಟ ಆಯ್ತು) ಎರಡು ಮೂರು ದಿನ ಹಿಡಿಯಿತು ಅದರ ಗುಂಗಿನಿಂದ ಹೊರ ಬರಲಿಕ್ಕೆ.ಇಷ್ಟೆಲ್ಲ ಪೀಠಿಕೆ ಯಾಕೆಂದರೆ ಇನ್ನೋರ್ವ ಮಿತ್ರರು, ಎಮ್ ಎಸ್ ಶ್ರೀರಾಮ ಅವರ ಬ್ಲಾಗಿನಲ್ಲಿದ್ದ ಚಿತ್ತಾಲರ ಭೇಟಿಯ ಕತೆ ಯ ಕೊಂಡಿ ಕಳುಹಿಸಿದ್ದರು ಮೊನ್ನೆ. ಇವತ್ತು ಲ್ಯಾಪ್ ಟಾಪ್ ಕೈಗೆ ಸಿಕ್ಕಿದ್ದರಿಂದ ಓದಿ ಸಿಕ್ಕಾಪಟ್ಟೆ ಹೊಟ್ಟೆಕಿಚ್ಚಾಯಿತು. ನೀವು ಇದನ್ನು ಖಂಡಿತ ಓದಿ ಅಂತ:
ನನ್ನ ಈ ಮನೆಯಲ್ಲಿ ಮುಂಬೈನಂತೆಯೇ ಸದ್ದು ಗದ್ದಲ. ಅಷ್ಟೆ ಅಲ್ಲ ಚೆಂದದ ಸೂರ್ಯಾಸ್ತ ಕೂಡ. ಸಮುದ್ರ ಒಂದೇ ಮಿಸ್ಸಿಂಗ್ :-) ನನ್ನ ಸೆಲ್ ನಲ್ಲಿ ಹಿಡಿದಿದ್ದ ಒಂದು ಚಿತ್ರ
ಈ ತಿಂಗಳು ನಾನು ಮೂರು ಇಂಗ್ಲಿಷ ಪುಸ್ತಕ, ಎರಡು ಕನ್ನಡ ಪುಸ್ತಕ ಓದಿದೆ. ಇಂಗ್ಲಿಷ ಪುಸ್ತಕಗಳು ನನ್ನ shelfari ನಲ್ಲಿ ನಮೂದಿಸಿದ್ದೇನೆ. ಕನ್ನಡ ಪುಸ್ತಕಗಳು : ದೇವರ ರಜೆ -ಗುರುಪ್ರಸಾದ ಕಾಗಿನೆಲೆ- ವಸುಧೇಂದ್ರ ಗೃಹಪ್ರವೇಶಕ್ಕೆ ಬಂದಾಗ ಗಿಫ್ಟಿ* ಸಿದ್ದು,
ಶ್ರೀಕಾಂತ ಖರೀದಿಸಿದ್ದ (ಕಾಕತಾಳಿಯವೇನೋ ಗೊತ್ತಿಲ್ಲ) ಎಮ್ ಎಸ್ ಶ್ರೀರಾಮ ರ ’ತೇಲ್ ಮಾಲಿಶ” ಮತ್ತು ’ಸಲ್ಮಾನ್ ಖಾನ್ ನ ಡಿಫಿಕಲ್ಟೀಸು(ಅರ್ಧ ಓದಿ ಇಟ್ಟಿದ್ದೇನೆ)”-(ಇದರ್ರಿಂದಲೇ ಶ್ರೀರಾಮರ ಮೈಲ್ ಐಡಿ ನೋಡಿಕೊಂಡು ಅವರ ಬರಹದ ಕೊಂಡಿ ಇಲ್ಲಿ ಸೇರಿಸಲು ಅನುಮತಿ ಪಡೆದುಕೊಂಡಿದ್ದೇನೆ.)
ಇಷ್ಟೆ...
ನನ್ನ ಅಡುಗೆ ಬ್ಲಾಗ್ ನಲ್ಲಿ ಇವತ್ತು ಅಗಸೆ (Flax seed) ಚಟ್ನಿ ಪುಡಿ ಬಗ್ಗೆ ಹಾಕಿದ್ದೇನೆ. ಇಂಟರೆಸ್ಟ್ ಇದ್ದವರು ಅಲ್ಲಿಗೂ ಒಂದು ಕಣ್ಣು ಹಾಯಿಸಬಹುದು. ;-)
:-)
* = No presents please, ಉಡುಗರೆ ಬೇಡ ಸಡಗರ ಇರಲಿ ಅಂತ ಶ್ರೀಕಾಂತ ಗೃಹಪವೇಶದ ಆಮಂತ್ರಣ ಪತ್ರಿಕೆ ಮೇಲೆ ಹಾಕಿದ್ದನ್ನು ಮಿತ್ರರು ಆಪ್ತೇಷ್ಟರು ಪರಿಪಾಲಿಸಿದ್ದು ನನಗೆ ಅತ್ಯಂತ ಖುಶಿಯ ವಿಷಯ. ವಸುಧೇಂದ್ರರಿಗೆ ಯಾಕ್ರಿ ಗಿಫ್ಟ್ ತಂದಿದ್ದೀರಾ ಅಂದ್ರೆ ’ಪುಸ್ತಕ’ ಗಿಫ್ಟ್ ಕೊಡಬಹುದು ಅಂದ್ರು. ಇನ್ನೊಂದು ರಾಧಿಕಾ ಫುಲ್ ಕಾನ್ಫಿಡೆನ್ಸ್ ನಿಂದ ಗಿಫ್ಟ್ ಕೊಟ್ಟು ’ ಯು ವಿಲ್ ಲೈಕ್ ಇಟ್ ಮಾಲತಿ’ ಅಂದಿದ್ದು ಶೇರ್ ಮಾಡುವ ಅಂತ: ಥ್ಯಾಂಕ್ಯೂ ರಾಧಿಕ. :-)
ಈ ಗಿಫ್ಟ್ ಬಗ್ಗೆ ಎಗ್ಸೈಟಡ್ ಆಗಿ ಮಿತ್ರ ರಘು ಜತೆ ಶೇರ್ ಮಾಡಿದಾಗ ಅವರು ಕೂಡಲೆ ಒಂದು ಪನ್ ಮಾಡಿದರು.
ಹೊರಗಡೆ ಬರೀ ನಾಯ್ಸ್ (Noise)
ಒಳಗಡೆ ಶೆನಾಯ್ಸ್
ಅಂತ....:-)
(ಸ್ವಲ್ಪ track change ಆಗದಿದ್ದರೆ ನನ್ನ ಬ್ಲಾಗ್ ಬ್ಲಾಗ್ ಏ ಅಲ್ಲ)
’ (ಆಗಲೇ ಇದು ನನ್ನ 300 ನೆ ಪೋಸ್ಟ್. ನಿಹಾ ಗೆ ನನ್ನ ಬ್ಲಾಗ್ ಗೆ ಹೊಸ ಮಾಸ್ಟ್ ಹೆಡ್ ಮಾಡಿ ಕೊಡಬೇಕೆಂದು ಹೇಳಿದ್ದೆ. ಆದರೆ ಅವಳೀಗ ಪರೀಕ್ಷೆಗೆ ಓದುತ್ತಿದ್ದಾಳೆ. anyways.....)
ಥ್ಯಾಂಕ್ಯೂ ಎಲ್ಲರಿಗೂ. ನನ್ನ ಬ್ಲಾಗ್ ಒಂದುತರಹ empty vessel making more noise . :-)