ಎಲ್ಲರೂ ದಸರಾ ಹಬ್ಬ ಎಂಜಾಯ್ ಮಾಡಿದ್ರಾ?
ಕೆಲ ತಿಂಗಳ ಹಿಂದೆ ನಾನು ಇಂಗ್ಲಿಷ್ ನಲ್ಲಿ ಪೋಸ್ಟ್ ಮಾಡಿದ ದೀಪಿಕಾ-ಬರ್ನಾಡ್ ರ ಪೆಬ್ಬಲ್ ಗಾರ್ಡನ್ ಬಗ್ಗೆ ಆನಂದ ತೀರ್ಥ ಪ್ಯಾಟಿಯವರ ಲೇಖನ ಇಂದಿನ ಪ್ರಜಾವಾಣಿ ಕೃಷಿ ಪುರವಣಿಯಲ್ಲಿ. ಕೆಳಗಡೆ ಇದೆ ಕೊಂಡಿ. ಕೆಲದಿನಗಳ ಹಿಂದೆ ಹೆಬ್ಬಾಳ ಕೃಷಿ ವಿಶ್ವವಿದ್ಯಾಲಯದಲ್ಲಿ ಬೀಜ ಜಾತ್ರೆ ಹಮ್ಮಿ ಕೊಂಡಿದ್ದರು. ಅದರ ಉದ್ಘಾಟನೆ ದೀಪಿಕಾ ಅವರಿಂದ ಮಾಡಿಸಿದರು. ನಮಗೆ ದೀಪಿಕಾ ಮಾತಿಗೆ ಸಿಕ್ಕಿದಾಗ i sold all my seeds in just one hour ಅಂತ ಹೇಳಿದರು. ಬೀಜ ಜಾತ್ರೆ ಮೂರುದಿನಗಳ ಕಾಲ ನಡೆಯಿತು. ನಾವು ಹೋಗಿದ್ದು ಭಾನುವಾರದಂದು. ಕತ್ತಲೆಯಲ್ಲಿ ಮುಳುಗಿದ, ಗಾಳಿ ಬೆಳಕು ಸರಿಯಿಲ್ಲದ ಜಾತ್ರೆಯ ಸ್ಥಳದಲ್ಲಿ ಹಲವಾರು ಸಾವಯವ ಕೃಷಿ, ಬೀಜಗಳ ವಿತರಣೆ-ಸಂರಕ್ಷಣೆ, ಗುಡಿ ಕೈಗಾರಿಕೆ, ಗೃಹೋತ್ಪನ್ನಗಳನ್ನು ವೀಕ್ಷಿಸಲು, ಖರೀದಿಸಲು, ಮಾಹಿತಿ ವಿನಿಮಯ ಮಾಡುವ ಆಸಕ್ತರನ್ನು ನೋಡಿ ಖುಶಿಯಾಗಿತ್ತು. ದೀಪಿಕಾ ಅವರಿಂದ ಕೊಂಡುಕೊಂಡ ಬೀಜಗಳನ್ನು ಜನರು ಬಳಸಿ ಅದರ ಬಗ್ಗೆ ಫೀಡ್ ಬ್ಯಾಕ್ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸ್ತು.
ಮೊದಲಿಗೆ ನನ್ನ ಲೇಖನದ ಲಿಂಕ್:http://malathisanchiyinda.blogspot.in/2013/04/pebble-garden-pondicherri-trip-4.html
http://www.prajavani.net/article/%E0%B2%B9%E0%B2%BF%E0%B2%A4%E0%B3%8D%E0%B2%A4%E0%B2%B2%E0%B3%8A%E0%B2%B3%E0%B3%81-%E0%B2%A4%E0%B2%B0%E0%B2%95%E0%B2%BE%E0%B2%B0%E0%B2%BF-%E0%B2%9A%E0%B2%BF%E0%B2%A4%E0%B3%8D%E0%B2%A4%E0%B2%BE%E0%B2%B0
ಪ್ರಜಾವಾಣಿ ಕೃಷಿ ಪುರವಣಿ ಖಂಡಿತ ಓದುತ್ತೇನೆ.
ReplyDeleteಈ ಹಿಂದೆಯೂ ಓದಿದ್ದ ಆ ಚಿತ್ರ ಬರಹ ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು.