October 1, 2013

ಕವನಗಳು ನೆವನಗಳು

ಮೊನ್ನೆ ನನ್ನ ಕಿರಿಯ ಮಿತ್ರರೊಬ್ಬರು ಮೈಲ್ ನಲ್ಲಿ ಕಳುಹಿಸಿದ ಪದ್ಯವನ್ನು ಓದುತ್ತಿರಬೇಕಾದ್ರೆ, ಇನ್ನೋರ್ವ ಮಿತ್ರರು ಫೋನ್ ಮಾಡಿದರು. ಅವರು ನನಗೆ ಕವನಗಳನ್ನು ಓದಿ ಹೇಳಿದರು. ಅವರು ಫೋನ್ ಇಟ್ಟ ಮೇಲೆ ಅನ್ನಿಸ್ತು ಛೆ! ಅವರು ಕವನ ಓದುತ್ತಿರುವಾಗ ಮಧ್ಯ ಮಧ್ಯ ನಾನು ಎಷ್ಟು ಮಾತಾಡ್ತೀನಿ ಅಂತ. ಯಾಕೋ ಇತ್ತೀಚಿಗೆ ತುಂಬ ಜನ ಕವನಗಳನ್ನು ಕಳಿಸೋರು. ಒಬ್ಬಮಹಾನುಭಾವರಂತು ಒಂದು ಹೆಜ್ಜೆ ಮುಂದೆ, ಯಾರಯಾರದ್ದೋ ಕವನಗಳನ್ನು copy paste ಮಾಡಿ ಕಳಿಸ್ತಾರೆ ಆದರೆ ಬರೆದವರ ಹೆಸರು ಹಾಕಲ್ಲ. ಅವರಿಗೆ ಹೇಳಿ ಹೇಳಿ ಸಾಕಾಯ್ತು 'credit should go to the writer/poet please mention his name' ಅಂತ. ನನ್ನ ಬೆಸ್ಟ್ ಫ್ರೆಂಡ್ ಒಬ್ಬರ ಕವನ ಅಂತ ಹೇಳಿ ಅವರು ಈಗಲೂ ಕವನಗಳನ್ನು ಹೆಸರಿಲ್ಲದೇ ಕಳುಹಿಸುತ್ತಿದ್ದಾರೆ. ಈಗ ನಾನು ಪ್ರತಿಕ್ರಯಿಸಲು ಹೋಗಲ್ಲ.

ಮೊದಲೆಲ್ಲ rhyming ಇದ್ರೆ ಮಾತ್ರ ಕವನ ಅಂದುಕೊಂಡಿದ್ದೆ.  ಈಗಂತೂ ಗದ್ಯವನ್ನು ಒಂದರಕೆಳಗೆ ಒಂದು ಸಾಲಾಗಿ ಬರೆದರೆ ಅದೇ ಪದ್ಯ. ಕೆಲವು ಪದ್ಯ/ಕವನಗಳ ತಲೆ ಬುಡ ಅರ್ಥ ಆಗಲ್ಲ. ಆಗ ನಾನು very interesting ಅಂತ ಅವರ ಇ ಮೈಲ್ ಗಳಿಗೆ ಉತ್ತರ ಕಳಿಸಿಬಿಡುವುದು. ಬಹುಶ: ಈ ಪೋಸ್ಟ್ ಓದಿದ ಮೇಲೆ ಕೆಲವರು ಕವನಗಳನ್ನು ಕಳುಹಿಸಲಿಕ್ಕೆ ಇಲ್ಲ ಅನ್ನಿಸುತ್ತೆ.

ನಾನು ಒಂದು ಕೈ ನೋಡಿಯೇ ಬಿಡ್ತೀನಿ ಅಂತ ಈ ಕೆಲವು ಕೀಟಲೆ ಗದ್ಯದಂತಾ ಪದ್ಯ ಬರೆದಿದ್ದೇನೆ.. ನಿಹಾ ಓದಿ ನಗ್ತಾ ಇದ್ದಳು. ಈಗ ನೀವು ಓದಿ.

ಎಚ್ಚರಿಕೆ: ಓದಿ ಮೈ ಮೇಲಿನ್ ಸ್ಥಿಮಿತ ಕಳೆದುಕೊಳ್ಳುವ ಸಾಧ್ಯತೆಯಿರುವುದರಿಂದ ದಯವಿಟ್ಟು ಕಂಪ್ಯೂಟರ್ ಸ್ಕ್ರೀನ್ ಬಳಿ ಯಾವುದೇ ಗಟ್ಟಿ ಸಾಮಾನನ್ನು ಇಡಬೇಡಿ. ಸಿಟ್ಟಿನಿಂದ ಸ್ಕ್ರೀನ್ ಗೆ ಬೀಸಿ ಒಗೆದು ಗ್ಲಾಸ್ ಚಿಂದಿ ಚೂರಾದರೆ ನಾನು ಜವಾಬ್ದಾರಳಲ್ಲಾ:

........೧...............
ಅದೇ ದಾರಿ, ಮರ ಆಕಾಶ
ನಿನ್ನ ಪರಿಚಯ ಆದ ಮೇಲೆ
ಈಗ ಮರಗಳಲ್ಲಿ ಹೂ, ಅದರ ಬಣ್ಣ, ಅದಕ್ಕೆ ತುಂಬಿರುವ ದುಂಬಿ
ದಾರಿಯೊಳಗಣ ಕಲ್ಲು ಮುಳ್ಳು ಸೂಕ್ಷ್ಮ ಜೀವ- ಜಂತುಗಳು
ಸೂರ್ಯೋದಯ, ಸೂರ್ಯಾಸ್ಥ, ಮಳೆಗೆ ತೊಯ್ದ ದಾರಿ ಮಣ್ಣು 
ಎಲ್ಲ ಸ್ಪುಟವಾಗಿ ಗೋಚರಿಸುತ್ತಿವೆಯಲ್ಲ
ಥ್ಯಾಂಕ್ಸ್ ಕಣೊ
ಆ ಕಣ್ಣಿನ ವೈದ್ಯರನ್ನು suggest ಮಾಡಿದ್ದಕ್ಕೆ

..........೨...................
ಮರುಭೂಮಿಯಂತೆ ಇದ್ದ ನನ್ನ ಜೀವನದಲ್ಲಿ
ಧುಮ್ಮಿಕ್ಕುವ ಜಲಧಾರೆಯಂತೆ ನೀನು ಬಂದೆ 
ಈಗ ನೀನು ನನ್ನ ಬಿಟ್ಟು ಹೊರಟಿರುವಿ
ನಾ ಏನೂ ನಿನ್ನ
ಬಿಟ್ಟು ಹೋಗಬೇಡ ನನ್ನ
ಹೇಳುತ್ತೇನೆ ಅಂತ ಭ್ರಮೆಯಲ್ಲಿರಬೇಡ
ನಾಳೆ ಬಾವಿ ತೋಡಿಸುವವಳಿದ್ದೇನೆ

..............೩................
ನಿನ್ನ ಬಿಸಿ ಉಸಿರು ಸೋಕಿ
ನನ್ನ ದಿನ ರಾತ್ರಿಗಳು ಪರಿಮಳಯುಕ್ತವಾಗಿವೆ
ನಿನ್ನ ನವಿರಾದ ಉಸಿರು ತಾಕಿ
ನನ್ನ ಕಾಲಕೆಳಗಿಂದ ಭುವಿ ಜಾರುತ್ತಿದೆ
ನಿನ್ನ ಟೂಥ್ ಪೇಸ್ಟ್ ಯಾವುದು ಚಿನ್ನಾ??
ನನ್ನ ಹೆಂಡತಿಗೂ ಅದನ್ನೆ ತರ್ತೀನಿ

............೪..................
ಇದು ಸ್ವಲ್ಪ ಸೀರಿಯಸ್ ಆಗಿದೆ) :-)
kaise bayaan kare hum per kya gujarti hai..aapka najm padhke
saas lete rehte hai per marne ka ehsaas  hota hai

(ಇಲ್ಲಿಗೆ ನನ್ನ ಕವನಗಳ ಪ್ರವರ ಮುಕ್ತಾಯವಾಯಿತು)

ಹಿಂದೆ ಒಂದೆರಡು ಬಾರಿ ಕವನ ಬರೆಯಲು ಪ್ರಯತ್ನಿಸಿದ್ದೇನೆ. ಅದರ ಕೊಂಡಿ ನನ್ನ ಹೊಸ ಓದುಗರಿಗೆ

1. ಹೂವಿನ ಅಭಿಲಾಷೆ

 2. ಅನನ್ಯಳಿಗೆ ಪ್ರೀಯಿಂದ

 3. ಗೀಚಿದ್ದು ಸುಮ್ಮ ಸುಮ್ಮನೆ 
**********************************************************************************************************************************
ಇದು ನಿಹಾರಿಕಾ ಬರೆದ ಕವನ (ನಮ್ಮ ಕಣ್ಣಿನ ಡಾಕ್ಟರ್ ಒಬ್ಬರಿಗೆ ಡಾಕ್ಟರ್ ಆಗಲಿಕ್ಕೆ ಇಷ್ಟ ಇರಲಿಲ್ಲ ಅಂತ ಅವರ ಕತೆ ಎಲ್ಲ ನಮ್ಮ ಶೇರ್ ಮಾಡಿಕೊಂಡಿದ್ರು. ಅದನ್ನು ಕೇಳಿ ನಿಹಾ ಹೀಗೆ ಬರೆದಿದ್ದಾಳೆ.)
Ah,what can I say,
Of my ordeals
My fate was sealed right the day,
I was born.

Never asking what I wanted to be,
Father dumped all his dreams and hopes on me
Not knowing that I didn’t want the power and prestige
That he so craved and lusted for.

I tried to be bold,really,I tried to speak,
However,all that emerged was a measly squeak!
Ah !what can I say,
My fate was sealed,right that day.

Got a seat with lady luck smiling
Slogging all day,no music no leisure
With teachers adding to good measure
“study,study and study,
Your book is your only buddy”
Goodness!how  had I fallen to such a rut,
With no time even to scratch my butt?

To cut a long story short,I’m finally a doctor
My parents say they’re proud
They proclaim it clear and loud
In front of guests,relatives and
   Even complete strangers,
That their son has finally become a doctor.

A lesson be learnt,my friend
To never succumb to your parents’ wishes,
If they are against your own
Lest you rot in a clinic like me
being someone,u don’t really want to be.
Trying to hide your frown
And replace it with an ingratiating smile
Because,after all,it is my job
To cure the weak and the terminally ill!
:-)

8 comments:

  1. Niha's poem is good. Your chuTukas brought a smile on my face :-)

    ReplyDelete
  2. ಎಷ್ಟೊಂದು ಒಳ್ಳೆಯ ಕವನಗಳನ್ನು ಬರೆದಿದ್ದೀರಾ...ಬರವಣಿಗೆ ಬೇರೆಯವರಿಗೆ ಇಷ್ಟವಾಗಲು ಒಳ್ಳೆಯ ಚೌಕಟ್ಟಿನೊಳಗೆನೇ ಇರಬೇಕೇನಿಲ್ಲ. ನಿಹರಿಕಾ ಬರೆದ ಕವನನೂ ಚೆನ್ನಾಗಿದೆ. ನಿಮಗೆ ಹೆಸರಿಲ್ಲದೇ ಕವನಗಳನ್ನು ಕಳುಹಿಸಿದವರು ನಿಮ್ಮ ಕವನಗಳನ್ನು ಓದಿದ ಮೇಲೆ ನಾಚಿಕೆ ಪಟ್ಟು ಇನ್ನು ಮುಂದೆ ಕಳಿಸಲ್ಲ ಅನ್ನಿಸುತ್ತೆ.

    ReplyDelete
  3. Radhika:
    :-) thank you

    Chandrashekar : thank u niharika paravagi. hesarillada kavana kaLisuvavaru nanna blog Odalla. ivattu kooDa chendada kavanagaLu nanna inbox ge bandide..
    :-)
    malathi S

    ReplyDelete
  4. ಮಾಲತಿಯವರೇ,

    ಮಾಲತಿಯವರೇ,

    ನಿಮ್ಮ ಈ ಪೋಸ್ಟನ್ನು facebook ನ 3K ಗುಂಪಿನಲ್ಲಿ guest post ಆಗಿ ಹಂಚಿಕೋಡಿದ್ದೇನೆ.
    ಅದರ ಪಾಠ: "ಮಾಲತಿ ಶಣೈ ಬಹುಶಃ ನಾನು ಬ್ಲಾಗು ಬರೆಯಲು ಆರಂಭಿಸುವ ಕಾಲಕ್ಕಿಂತಲೂ ಹಳಬರು. ಗದ್ಯ - ಪದ್ಯ - ಪಾಕ ಮತ್ತಿತರೆಗಳ ಸಮಪಾಕ ಅವರ ಬ್ಲಾಗು. ಅವರಂತಹ senior blogger ನನಗೆ ಯಾವತ್ತಿಗೂ ಮಾರ್ಗದರ್ಶಿ.

    ಅವರ ಈ ಕಿವಿ ಮಾತಿನಂತಹ post ಓದಿರಿ:"

    ಅದರ ಲಿಂಕ್:
    https://www.facebook.com/photo.php?fbid=640452919332494&set=gm.517005318384023&type=1&theater

    ಕವಿತೆ ಮತ್ತು ಅದು ಬೀರಬೇಕಾದ ನಿಜ ಪರಿಮಳ ಇವೆರಡನ್ನೂ ವಿಶ್ಲೇಷಿಸುವ ನಿಮ್ಮ ಬ್ಲಾಗ್ ಬರಹ ನನಗೆ ಇಷ್ಟವಾಯಿತು. ಬೇರೆಯವರ ಕವಿತೆ ಓದಿ - ಮೆಚ್ಚಿ ಅದನ್ನು share ಮಾಡಿದರೆ ತಪ್ಪಿಲ್ಲ, ಆದರೆ ನೀವು ಹೇಳಿದಂತೆ copy & paste ಮಹಾಪರಾಧ!

    ಇನ್ನೂ ನಿಮ್ಮ ಕವಿತೆಗಳೂ ಇಷ್ಟವಾದವು,
    1. ಕವಿತೆಯ climaxನ punch ಚೆನ್ನಾಗಿದೆ.
    2. ಆಗಿ ಹೋದ ಅವಘಡದ ಬಗ್ಗೆ ಚಿಂತಿಸದೆ ನಾಳೆಗಳ ರೂಪಿಸುವ ಕಿವಿಮಾತು.
    3. ಹ್ಹಹ್ಹಹ್ಹ :-D
    4. ಭಾವ ತಟ್ಟಿತು.

    ಮಗಳು, ನೀಹಾರಿಕಾ ಅವರ ಇಂಗ್ಲಿಷ್ ಕವನವೂ ಇಷ್ಟವಾಯಿತು.
    "
    “study,study and study,
    Your book is your only buddy”"

    ReplyDelete
  5. modala baarige nimmanege bande...innoo hechchinadannu neerikshisi odidde ,aa nittinalli tusu niraashe :-(...

    ReplyDelete
  6. Thanks Badari bhaiyya. nanna link 3K nalli haaki baiyiskoLLillaa andkoteeni. :-)

    Chinmay Bhat!!
    I agree. thank you for visiting my blog. nimm baraha Odteerteeni tumba chennaagi bareeteeri. nimm blog parichaya nanage munna (sumathi deepa Hegde- Sudeepa blog)) moolaka.
    :-)
    ms

    ReplyDelete
  7. Kavanagalu chennagide. Simple & easy to understand.

    ReplyDelete
  8. ರಾಜೇಶ:
    ಧನ್ಯವಾದಗಳು. :-)
    ಮಾಲತಿ ಎಸ್

    ReplyDelete