ಆಫಿಸ್ ನ ಸ್ವಲ್ಪ ಕೆಲಸ ಮತ್ತು ಮಿತ್ರರೊಬ್ಬರು ಹೇಳಿದ editing ಕೆಲಸ ಮುಗಿಸಿದಾಗ ಮಧ್ಯಾಹ್ನದ 3.30 ಗಂಟೆ. ಏನಾದರೂ ಓದುವ ಅಂದರೆ ಸಿಕ್ಕಿದ್ದು ತೀರ್ಥರಾಮ ವಳಲಂಬೆಯವರ 'ಮೃತ ಸಂಜೀವಿನಿ'. ನಮ್ಮ ರಾಯರು ತೀರ್ಥರಾಮ ಅವರ ಫ್ಯಾನ್. ಅವರ ಎಲ್ಲ ಪುಸ್ತಕಗಳು ನಮ್ಮಲ್ಲಿದೆ. (ಒಂದನ್ನು ಮಾತ್ರ ಸ್ನೇಹಿತೆಯ ಮೂಲಕ ಚಕ್ರವರ್ತಿ ಸೂಲಿಬೆಲೆ ಯವರಿಗೆ ಕೊಟ್ಟಿದ್ದು ಅವರಿಗೆ ತುಂಬಾ ಇಷ್ಟ ಆಗಿದ್ದಕ್ಕೆ ಅವರಿಗೇ ಅದನ್ನು ಉಡುಗೊರೆ ಆಗಿ ಕೊಟ್ಟು ಬಿಟ್ಟೆ- ಇದನ್ನು ಬರೆಯುವಾಗ ನೆನಪಾಯ್ತು. ಇನ್ನೊಂದು ಪ್ರತಿಯನ್ನು ತಂದು replace ಮಾಡಬೇಕು :-)) ಮೊನ್ನೆ ಅಂಕಿತಾಗೆ ಹೋದಾಗ ಇನ್ನೊಂದಿಷ್ಟು ಪುಸ್ತಕ ತಂದಿದ್ವಿ. ಅದರಲ್ಲೊಂದು ಈ ಪುಸ್ತಕ.
ತೀರ್ಥರಾಮ ಅವರ ಪುಸ್ತಕ ತಂದ ಕೂಡಲೆ ನಾನು ಅದರ ಹಿಂಪುಟ ಓದಿ, ಅದರೊಳಗಿನ ಚಿತ್ರಗಳನ್ನು ನೋಡಿ ಇಡುವುದು ಮಾಮೂಲು.ಅವರ ಬರಹಗಳಿಗೆ ಅವರೇ ರೇಖಾಚಿತ್ರ, ಮುಖಪುಟ ಎಲ್ಲ ಸಿದ್ದಪಡಿಸುತ್ತಾರೆ. ಸಿಕ್ಕಾಪಟ್ಟೆ ಟ್ಯಾಲೆಂಟಡ್ ಮಾತ್ರ ಅಲ್ಲ ಬರಹದ ಕಲೆ ತುಂಬಾ ಚೆನ್ನಾಗಿ ಸಾಧಿಸಿದೆ. ಸುಮ್ನೆ diagonal reading ಮಾಡಿ impress ಆಗಿದ್ದೇನೆ. ಅವರ ಪುಸ್ತ್ಕಕಗಳನ್ನೆಲ್ಲ ನನಗೆ 45 ಆದ ನಂತರ ಓದಲು ಪ್ರಾರಂಭಿಸುತ್ತೇನೆಂದುಕೊಂಡಿದ್ದೇನೆ . ಆದರೆ ಈ ಪುಸ್ತಕ ಓದಿಸಿಕೊಂಡು ಹೋಯ್ತು. ಓದ್ತಾ ಮಧ್ಯದಲ್ಲಿ ಮಕ್ಕಳಿಗೆ ಬಾಸುಂದಿ ಮಾಡಿಕೊಡುತ್ತೇನೆಂದು ಪ್ರಾಮಿಸ್ ಮಾಡಿದ್ದು ನೆನಪಾಗಿ ದಪ್ಪ ತಳದ ಪಾತ್ರೆಯಲ್ಲಿ ಹಾಲನ್ನು ಹಾಕಿ ಗ್ಯಾಸ್ ಮೇಲಿಟ್ಟು ಬಂದೆ. ಇನ್ನು ಕೆಲವು ಪುಟಗಳನ್ನು ಓದುವಷ್ಟರಲ್ಲಿ ಅಲ್ಲೆ ಕುಳಿತಿದ್ದ ನಿಹಾ, 'ಅಮ್ಮ, ನನಗೆ ಪೆಡಿಕ್ಯೂರ್ ಮಾಡ್ತೀಯಾ ಅಂತ ಕೇಳಿದ್ಲು. ನನಗೆ ಇಷ್ಟ ನನ್ನ ಮನೆಯವರಿಗೆಲ್ಲ ಪೆಡಿಕ್ಯೂರ್ ಮಾಡೋದು. ಸರಿ ಟಬ್ ನ ಉಗುರುಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಶ್ಯಾಂಪು ಹಾಕಿ ಅದರಲ್ಲಿ ಸ್ವಲ್ಪ ಬಾತ್ salt ಬೆರೆಸಿ ನಿಹಾಗೆ ಅದರಲ್ಲಿ ಕಾಲು ಇಳಿಬಿಡಲು ಹೇಳಿದೆ. ಸಿಸ್ಟಮ್ ನಲ್ಲಿ ಕಿಶೋರಿ ಅಮೋನ್ಕರ್ ಅವರ 'ಸಹೆಲಾ ರೆ' ಹಾಕ್ಕೊಂಡಿದ್ದೆ.
"ಅಮ್ಮ, ನಿನಗೆ ಕಿಶೋರಿ ಅಮೋನ್ಕರ್ ಇಷ್ಟ ಆಗುತ್ತಾರಾ?"
ನಾನು - ಹೂಂ. ನಿನಗೆ??
"ಅವರದ್ದು nasal ವಾಯ್ಸ್. ನನಗದು ಅಷ್ಟು ಇಷ್ಟ ಆಗಲ್ಲ'
ನಾನು- 'ನೀಹಾ ಮೊನ್ನೆ ಅಶ್ವಿನಿ ಭಿಡೆ ಕಾರ್ಯಕ್ರಮ ಚೆನ್ನಾಗಿತ್ತಂತೆ, ರವೀಂದ್ರ ಫೋನ್ ಮಾಡಿದ್ರು. ನಾವು ಆ ಬಂಡಲ್ ನಾಟಕಕ್ಕೆ ಹೋಗುವುದಕ್ಕಿಂತ ಅಶ್ವಿನಿ ಭಿಡೆ ಕಾನ್ ಸರ್ಟ್ ಎಟೆಂಡ್ ಮಾಡಬಹುದಿತ್ತು ನೋಡು."
ನಿಹಾ ತನ್ನ economics assignment ಮಾಡ್ತಾ ಕೂತಳು.
ನಿಹಾ ತನ್ನ economics assignment ಮಾಡ್ತಾ ಕೂತಳು.
ನಾವು ಹೋಗಿದ್ದು the gossips of 47 ಎನ್ನುವ ಹಿಂದಿ ನಾಟಕಕ್ಕೆ. ಸದತ್ ಹಸನ್ ಮಾಂಟೋ ರವರ ಸಣ್ಣ ಕತೆಗಳನ್ನು ಆಧರಿಸಿದ ನಾಟಕ. ಆದರೆ ಕತೆಗಳಲ್ಲಿನ ಪಂಚ್ ನಾಟಕದ ಮುಖೇನ ನೀಡುವಲ್ಲಿ ಆ ತಂಡ ವಿಫಲವಾಯಿತು. ಯಾವುದೇ ಹಿಂದಿ ಶೋ ನಾವು ರಂಗಶಂಕರದಲ್ಲಿ ಈ ಹಿಂದೆ ನೋಡಿರಲಿಲ್ಲ. ಅದಕ್ಕೆ ಹೋಗಿದ್ವಿ. ಪ್ಲಸ್, ನಿಹಾಳ ಫ್ರೆಂಡ್ ಮತ್ತು ತಂದೆ ತಾಯಿ ಕೂಡ ಬರುವವರಿದ್ದರು. ಖುಶಿಯಾಯ್ತು ನನಗೆ ಅವರ ಜತೆ ಹಿಂದಿಯಲ್ಲಿ ಸಂಭಾಷಿಸಲು. ಫ್ರೆಂಡ್ ತಂದೆಗೆ Geological survey of India ದಲ್ಲಿ ಕೆಲಸ. ಕುಮಾರಕೄಪಾ ರೋಡ್ ನಲ್ಲಿ ಮನೆಯಂತೆ. ಹಿಂದಿನ ಸಲ ಅವರು 'ಬಿಖರೆ ಬಿಂಬ್' ನಾಟಕಕ್ಕೆ ಬಂದು ಟಿಕೆಟ್ ಸಿಗದೆ, ಮಳೆರಾಯನ ಕೃಪೆಯಿಂದಾಗಿ, ನಾಟಕ ನೋಡುವವರು ನಾಟಕ ನೋಡಿ ಹೊರಗೆ ಬಂದರೂ, ಇವರು ಅಲ್ಲೇ ಸಿಕ್ಕಿ ಹಾಕಿಕೊಂಡಿದ್ದನ್ನು ಶೇರ್ ಮಾಡಿದರು.
'ಆಪನೆ 'ಪಾ' ಫಿಲ್ಮ್ ದೇಖಿ ಹೈ? ಉಸ್ಮೆ ಜೋ ಮಾ ಕಾ ರೋಲ್ ಕಿಯಾ ಹೈ ನಾ, ಮೈನೆ ಉನ್ಹೆ ಯಹಾಂ ದೇಖಾ' ಅಂತ ತುಂಬ excite ಆಗಿ ನಿಹಾ ನ ಫ್ರೆಂಡ್ ಅಮ್ಮ ಹೇಳಿದರು. ಅವರು ಮಾತು ಮುಗಿಸಿದ ಮೇಲೆ, ರಂಗ ಶಂಕರ ಅವರದ್ದೆ ಸಂಸ್ಥೆ ,ಅವರ ದಿವಗಂತ ಪತಿಯ ಹೆಸರಿನಲ್ಲಿ ಸಂಸ್ಥಾಪಿಸಿದ್ದು ರಂಗ ಶಂಕರ ಅಂತ ಹೇಳಿದೆ. ಅವರು ತೀರಾ ಇತ್ತೀಚಿಗೆ ಜೈಪುರ್ ದಿಂದ ಬೆಂಗಳೂರಿಗೆ ವರ್ಗವಾಗಿ ಬಂದಿದ್ದಾರೆ.
ಅದರಲ್ಲಿನ ಪಾತ್ರ ಮಾಡಿದ ಒಬ್ಬ ಹುಡುಗನ ಮಿಮಿಕ್ರಿ ಮಾಡಿ ನಿಹಾ ನ ನಗಿಸಿದೆ. ಪೆಡಿಕ್ಯೂರ್ ಮುಗಿಸಿ, ಕಿಶೋರಿ ತಾಯಿ ಯ ಇನ್ನೊಂದೆರಡು ಹಾಡು- ಅವಘಾ ರಂಗ್ ಎಕ್ ಝಾಲಾ', ಆಯಿ ರೆ ಬದರಿಯಾ ಕಾರಿ ಕಾರಿ, ಕೇಳುವಷ್ಟರಲ್ಲಿ , ಹಸಿವೆಯಿಂದ ಹೊಟ್ಟೆ ತಾಳ ಹಾಕಲಾರಂಭಿಸಿತು. ಸಮಯ ನೋಡಿದ್ರೆ 9.15. ಬಾಸುಂದಿ ರೆಡಿಯಾಗಿತ್ತು. ಅದಕ್ಕೆ ಸಕ್ಕರೆ ಬೆರೆಸಿ, ಸ್ತ್ಟವ್ ಆಫ್ ಮಾಡಿ, ಏಲಕ್ಕಿ ಕುಟ್ಟಿ, ದ್ರಾಕ್ಷಿ ಗೋಡಂಬಿ ಮೈಕ್ರೋವೇವಿಸಿ ಹಾಕಿ, ಫೋಟೊ ತೆಗೆದು, ಮಕ್ಕಳು ಊಟದ ನಂತರ ಅದನ್ನು ತಿನ್ನುವ ಹಾಗೆ ಫ್ರಿಜ್ ನಲ್ಲಿಟ್ಟೆ. ಅನ್ನದ ಪಾತ್ರೆ ಬಿಸಿ ಮಾಡಲು ತೆರೆದರೆ ಅದರಲ್ಲಿ ತುಂಬ ಕಡಿಮೆ ಅನ್ನ ಇತ್ತು. ಅನ್ನ ಮಾಡಿಕೊಳ್ಳುವಷ್ಟು ವ್ಯವಧಾನ ಇರಲಿಲ್ಲ.
ಆಗ ಆಪತ್ಬಾಂಧವ ಮ್ಯಾಗಿಯ ನೆನಪಾಯ್ತು. ಕೂಡಲೆ ಒಂದು ಚಿಕ್ಕ ನೀರುಳ್ಳಿ ಕಚಕಚನೆ ಚಕಚಕನೆ ಕಟ್ ಮಾಡಿದೆ, ಎರಡು ಬೆಳ್ಳುಳ್ಳಿ ಜಜ್ಜಿದೆ, ಫ್ರಿಜ್ ನಲ್ಲಿ ಫ್ರೋಜನ್ ಸ್ವೀಟ್ ಕಾರ್ನ್ ನೋಡಿದೆ. ಅದನ್ನು ಹೊರ ತೆಗೆದೆ. ಎಣ್ಣೆ ಬಿಸಿ ಮಾಡಿ ನೀರುಳ್ಳಿ - ಬೆಳ್ಳುಳ್ಳಿ ಹಾಕಿ ಕೈ ಆಡಿಸಿದೆ. ನಾಲ್ಕು ಹಸಿಮೆಣಸು ಹಾಕಿದೆ. ಅದಕ್ಕೆ ಒಂದು ಹಿಡಿ ಸ್ವೀಟ್ ಕಾರ್ನ್ ಬೆರೆಸಿ ಘಂ ಅನ್ನುವ ಪರಿಮಳ ಬರುತ್ತಿದ್ದ ಹಾಗೆ ನೀರು ಹಾಕಿದೆ. ಇಂಡಕ್ಷನ್ ಸ್ಟವ್ ಆದ್ದರಿಂದ ಅರ್ಧ ನಿಮಿಷಕ್ಕೆ ನೀರು ಕುದಿಯಲು ಶುರು. ಅದಕ್ಕೆ ಮ್ಯಾಗಿ ಮಸಲಾ ಪ್ಯಾಕ್ ನಿಂದ ಮಸಾಲೆ ಹಾಕಿದೆ. ಆಮೇಲೆ ನೂಡಲ್ಸ್ ಸೇರಿಸಿದೆ. ಫೋಟೊಗೋಸ್ಕರ ಕೊತ್ತಂಬರಿ ಸೊಪ್ಪಿನ ಶೋ off ಮಾಡಿದೆ. ತುಂಬಾ ಟೇಸ್ಟೀಯಾಗಿತ್ತು. ನನ್ನ ಬ್ಯಾಚಲರ್ ಬ್ಲಾಗ್ ಓದುಗ ತಮ್ಮಗೋಳ್ ಇದನ್ನು ಆರಾಮಾಗಿ ತಯಾರಿಸಿ ತಿನ್ನಬಹುದು.
ರಾತ್ರಿ ನಿದ್ರೆ ಇಲ್ಲದೆ ಒಂದು ನ್ಯಾನೋ ಕತೆ ಹುಟ್ಟಿಕೊಂಡಿತು :
ಮಿತ್ರರಿಬ್ಬರು ಮಾತುಕತೆ ಆಡುತ್ತ ನಗುತ್ತ ಇದ್ದ ಹಾಗೆ ಬಾಗಿಲು ದಡದಡ ಸದ್ದು ಮಾಡಿತು. ಇವರ ರೂಂ ಗೆ ಆವಾಗಾವಾಗ ಮಿತ್ರರು ಭೇಟಿ ನೀಡುತ್ತಿದ್ದರಾದ್ದರಿಂದ ಆ ರಾತ್ರಿ ಅವರು ಯಾವತ್ತಿನ ಹಾಗೆ ಬಾಗಿಲು ತೆರೆದರು. ಬಂದೂಕು ಧಾರಿಯೊಬ್ಬ ಬಾಗಿಲು ತೆಗೆದವನನ್ನು ನೂಕಿ ಒಳಗೆ ಬಂದ
"ನಿನ್ನ ಹೆಸರೇನು?'
"ಪದ್ಮನಾಭ"
" ಸರಿ. ಆ ಕಡೆ ಸರಿ"
ಇನ್ನೊಬ್ಬ ರೂಂ ಮೇಟ್ ನನ್ನು ಉದ್ದೇಶಿಸಿ
'ನಿನ್ನ ಹೆಸರು'?
"ಸಾಹಿಲ್ ಖುರ್ಶೀದ್"
ಆಗ ಪದ್ಮನಾಭ "ಏನಲೇ ನೀನು ಮುಸ್ಲಿಮ್ ಆ? ಐದು ವರ್ಷ ಒಟ್ಟಿಗಿದ್ದರೂ ಇವತ್ತೆ ಗೊತ್ತಾಗಿದ್ದು ಅಂತ ಆಶ್ಚರ್ಯದಿಂದ ಕೇಳಿದ
ಬಂದೂಕುಧಾರಿ ಸಾಹಿಲ್ ನ ಎದೆಗೆ ಬಂದೂಕು ಗುರುಯಿಟ್ಟ. ಕೂಡಲೆ ಪದ್ಮನಾಭ ಸಾಹಿಲ್ ಗೆ ಎದುರಾಗಿ ನಿಂತು ನನ್ನ ಸ್ನೇಹಿತನನ್ನು ಕೊಲ್ಲುವ ಮೊದಲು ನಾನು ಸಾಯಬೇಕು
ಬಂದೂಕುಧಾರಿ ಗುಂಡಿ ಒತ್ತಿಯೇ ಬಿಟ್ಟ. ಒಂದೆ ಬುಲೆಟ್ ಇಬ್ಬರ ಹೃದಯ ಸೀಳಿ ಹಿಂದಿನ ಗೋಡೆಗೆ ಬಡಿಯಿತು. ಮಿತ್ರರಿಬ್ಬರೂ ಕುಸಿದರು. ಇಬ್ಬರ ರಕ್ತ ಕೂಡಿ ಕೋಡಿಯಾಗಿ ಹರಿಯಿತು, ಯಾವ್ ರಕ್ತ ಯಾರದ್ದು ಅನ್ನುವುದರ ಪರಿವೆಯೇ ಇಲ್ಲದೆ.
moral of the story is: ರಾತ್ರಿ ಮ್ಯಾಗಿಯಲ್ಲಿನ ಹಸಿಮೆಣಸು ತಿಂದು ಹೊಟ್ಟೆ ಉರಿದು ಇಂತಹ ಕತೆಗಳು ಹುಟ್ಟುವ ಸಂಭವವಿದೆ ಆದ್ದರಿಂದ ಹಸಿಮೆಣಸು ತಿನ್ನಬಾರದು.
ಅಷ್ಟೆ ಕಣ್ರೀssss........ನನ್ನ ಬ್ಲಾಗ್ ಗೊಂದು ಹೂರಣ ಕೂಡ ಸಿಕ್ಕಿತ್ತು
ನಿನ್ನೆಯ ದಿನಚರಿ
ನಿನ್ನೆಯ ದಿನಚರಿ
ಆಪತ್ಬಾಂಧವ ಮ್ಯಾಗಿಯಿಂದಾಗಿ ಹಸಿಮೆಣಸು ತಿಂದು ನ್ಯಾನೊ ಕತೆ ಹುಟ್ಟಿಕೊಂಡದ್ದು ಓದಿ ಖುಶಿಯಾಯಿತು. ಣಿವು ಓದಿದ ಪುಸ್ತಕ, ನೋಡಿದ ನಾಟಕದ ಬಗ್ಗೆ ಚೆನ್ನಾಗಿ ಬರೆದಿದ್ದೀರಿ.
ReplyDeleteಮಾಲತಕ್ಕ, ನೀವು ರೆಸಿಪಿ ಮಾಸ್ಟರ್ (ಮಾಸ್ಟ್ರೆಸ್?!) ಕಣ್ರೀ... ಮ್ಯಾಗೀನೂ ಇಷ್ಟು ರುಚಿಯಾಗಿ ಮಾಡಬಹುದು ಅಂತ ತೋರಿಸಿಕೊಟ್ರಲ್ಲ!
ReplyDelete