ಊರಲ್ಲಿ ಕುಟುಂಬದಲ್ಲಿ ಮದುವೆ. 'ಅಮ್ಮ ನೀನು, ಅಪ್ಪ ತಂಗಿ ಎರಡು ದಿನ ಮೊದಲೇ ಹೋಗಿರಿ. ನಾನು ಮದುವೆ ದಿನ ತಲುಪುತ್ತೀನಿ. ನನಗೆ ಹೆಚ್ಚಿನ ರಜೆಯಿಲ್ಲ' ಅಂದ ಹುಡುಗ. ಅಲ್ಲಿ ಮದುವೆಯಮೂಹೂರ್ತದ ಸಮಯದಲ್ಲೂ ಮಗ ನಾಪತ್ತೆ. ಬಂದಿದ್ದು ಬೆಂಗಳೂರಿನಿಂದ ಕರೆ 'ನಿಮ್ಮ ಮಗ ಸೀಮೆ ಎಣ್ಣೆ ಸುರಿದು ಬೆಂಕಿಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಅಂತ. ಪ್ರೇಮ ವೈಫಲ್ಯ ಕಾರಣವಂತೆ. ಅವನು ಸತ್ತು ಯಾರಿಗೆ ಎನು ಉಪಯೋಗ ವಾಯ್ತು. ಜೀವದಿಂದಿದ್ದು ತನಗೋಸ್ಕರ ಅಲ್ಲದಿದ್ದರೂ ಇತರರಿಗೆ ಉಪಯೋಗವಾಗುವಂತಹದ್ದು ಏನಾದರೂ ಮಾಡಿ ಬದುಕಬಹುದಿತ್ತು. ಛೆ.
ಚಿತ್ರ-2
ಅವರಿಬ್ಬರಿಗೂ ಒಬ್ಬರಿಗೊಬ್ಬರ ಮೇಲೆ ಅತ್ಯಂತ ಪ್ರೇಮ. ಆಗಲೇ ಒಂದು ದಿನ ಅವನಿಗೆ ಮಾರಣಾಂತಿಕ ಹೃದಯ ಸಂಬಂಧಿ ಕಾಯಿಲೆ ಅಂತ ಗೊತ್ತಾಗಿದ್ದು. ಟಿಕ್ಕಿಂಗ್ (ticking) ಟೈಮ್ ಬಾಂಬ್ ತರಹ ಹೃದಯ ಯಾವಾಗ ಸ್ಪೋಟಗೊಳ್ಳುತ್ತೋ ಗೊತ್ತಿಲ್ಲ ಅಂತ ಹೇಳಿದರು ಡಾಕ್ಟರ್. ವಿಷಯ ತಿಳಿದ ಅವಳ ಅಪ್ಪ'ಅವನಿಗೆ ನಿನ್ನನ್ನ ಮದುವೆ ಮಾಡಿ ಕೊಡುವುದರ ಬದಲು ನಿನ್ನ ಕುತ್ತಿಗೆ ಹಿಚುಕಿ ಕೊಲ್ಲುವುದು ಲೇಸು, ಅಂತ ಅಬ್ಬರಿಸಿದ. ಇವಳಿಗೀಗ ನಿದ್ದೆಯಿಲ್ಲ ಅಂತ ಅವನಿಗೆ ಚಿಂತೆ, ಅವಳಿಗೆ ಅವನು ಮಲಗಿ ಇನ್ನು ಏಳದಿದ್ದರೆ ಎನ್ನುವ ಚಿಂತೆಯಿಂದ ಇಬ್ಬರೂ ಹೈರಾಣು.
ಚಿತ್ರ-3
ನಾವು ಆ ಊರಲ್ಲಿ 5 ವರ್ಷಗಳ ಕಾಲ ಇದ್ದೆವು. ಅವರು ದಿನಾ ಸಂಜೆ ನಮ್ಮ ಮನೆಗೆ. ಬಂದು ಮಾಲವಿಕಾಳ ಜತೆ ಆಟ. ಅವರ ಮನೆ ಮಾತು ತುಳು ಆದರೂ ಅವರಿಗೆ ಗೊತ್ತಿದ್ದ ಕೊಂಕಣಿಯಲ್ಲಿ ಮಾಲವಿಕ ಜತೆ ಮಾತಾಡಿ ಮಾತಾಡಿ ಮಾಲವಿಕ ಕೊಂಕಣಿ ಕಲಿಯುವ ಹಾಗಾಯ್ತು. ಆಫಿಸ್ ಬಿಟ್ಟ ಕೂಡಲೆ (ಅವರು ಶ್ರೀಕಾಂತ ಕಲೀಗ್) ಅವರು ನಮ್ಮ ಮನೆಗೆ ಬಂದು ಮಾಲು ಜತೆ ಕಿಚ ಪಿಚ ಮಾತು ನಡೆಸ್ತಿದ್ದರೆ ನಾನು ನನ್ನ ಬ್ಯಾಚುಲರ್ಸ್ ಡಿಗ್ರೀ (?) ಪರೀಕ್ಷೆಗೆ ಓದುತ್ತಿದ್ದೆ. ಮಾಲವಿಕಾಗೆ ಅವರ ಹೆಸರು ಪೂರ್ತಿ ಹೇಳಲು ಬಾರದೆ ಅವರಿಗೆ ಪೇ ಆಂಟಿ ಅಂತ ಸಂಭೋಧಿಸುತ್ತಿದ್ದಳು. ಅವರು ಅವಳಿಗೆ 'ಪುಟ್ಟಮ್ಮ' ಅಂತ ಕರೆಯುವರು. 5.30 - 6.00 ಆಗುತ್ತಿದ್ದಂತೆ ಶ್ರೀಕಾಂತ ಮತ್ತು ಅವರ ಹಲವಾರು ಮಿತ್ರರು ನಮ್ಮ ಮನೆಗೆ. ನನಗೆ ಓದಿನಿಂದ ಬ್ರೇಕ್. ಅವರೆಲ್ಲರ ರಾತ್ರಿ ಊಟ ಹೆಚ್ಚು ಕಡಿಮೆ ನಮ್ಮ ಮನೆಯಲ್ಲೇ. ನನಗೆ ಅವರೆಲ್ಲ ಮೇಲೆ ನನ್ನ ಅಡಿಗೆ ಪ್ರಯೋಗಗಳಿಗೆ ಬಲಿಪಶು ಮಾಡುವುದರಲ್ಲಿ ಇನ್ನಿಲ್ಲದ ಖುಶಿ. ಆಮೇಲೆ ಮಾತು, ಕತೆ, ನಗು ಅಂತ ಹತ್ತು ಗಂಟೆಯವರೆಗೆ ಅವರೆಲ್ಲ ನಮ್ಮ ಮನೆಯಲ್ಲೆ. ಇದೇ ದಿನಚರಿಯಾಗಿತ್ತು. 5 ವರ್ಷದ ನಂತರ ನಮಗೆ ಅಲ್ಲಿಂದ ಟ್ರಾನ್ಸಫರ್ ಆಯ್ತು. ನಾವು ಹೊರಡುವ ಒಂದು ದಿನ ಮುಂಚೆ ಪೇ ಆಂಟಿ ಮಾಲವಿಕಾಳನ್ನು ತಬ್ಬಿ ಅತ್ತಿದ್ದೆ ಅತ್ತಿದ್ದು. 'ಮಾಲತಿ, 5 ವರ್ಷದಿಂದ ನಾನು ದಿನಾ ನಿಮ್ಮ ಮನೆಗೆ ಬರ್ತಿದ್ದೇನೆ. ಆದರೂ ಒಂದು ಸಲವೂ ಕುತೂಹಲಗೋಸ್ಕರ ನನ್ನ ಬಗ್ಗೆ ನೀವು ಕೇಳಲೆ ಇಲ್ಲ'? ಎಲ್ಲರಿಗೂ ಎಷ್ಟೊಂದು ಕೂತುಹಲ ನನ್ನ ಬಗ್ಗೆ. ಇಷ್ಟು ವಯಸ್ಸಾದರೂ ಒಬ್ಬಳೆ ಇದ್ದೀನಿ, ಮತ್ತು ನನ್ನ ಬಗ್ಗೆ ಚಿತ್ರ ವಿಚಿತ್ರವಾಗಿ ಮಾತನಾಡುತ್ತಾರೆಂದೂ ಗೊತ್ತಿದೆ. ನೀವೊಬ್ಬರು ಬೇರೆ ತರಹ ಪಾ".
ನನಗೊಂದು ಅಭ್ಯಾಸ. ಯಾರಾದರೂ ನನಗೆ ಇಷ್ಟ ಆದರೆ ಅವರು ಹೇಗಿರುತ್ತಾರೆ ಅವರನ್ನು ಹಾಗೇ (accept) ಸ್ವೀಕರಿಸುವುದು. ಅವರನ್ನು ಬದಲಾಯಿಸುವ ಪ್ರಯತ್ನ, ಅವರ ಬಗ್ಗೆ ವಿಶೇಷ ಕುತೂಹಲ, ಅನಾವ್ಯಶಕ ಉಪದೇಶ ಮಾಡುವುದು ಇತ್ಯಾದಿಗಳು ನನಗಿಲ್ಲ. ಅವರೇನಾದರೂ ಹೇಳಿದ್ದಲ್ಲಿ ಸುಮ್ಮನೆ ಕೇಳಿಸಿಕೊಳ್ಳುತ್ತೇನೆ. ಹಾಗೆ ಅವರು ಈ ಕತೆ ಹೇಳಿದರು.
ನನಗೊಂದು ಅಭ್ಯಾಸ. ಯಾರಾದರೂ ನನಗೆ ಇಷ್ಟ ಆದರೆ ಅವರು ಹೇಗಿರುತ್ತಾರೆ ಅವರನ್ನು ಹಾಗೇ (accept) ಸ್ವೀಕರಿಸುವುದು. ಅವರನ್ನು ಬದಲಾಯಿಸುವ ಪ್ರಯತ್ನ, ಅವರ ಬಗ್ಗೆ ವಿಶೇಷ ಕುತೂಹಲ, ಅನಾವ್ಯಶಕ ಉಪದೇಶ ಮಾಡುವುದು ಇತ್ಯಾದಿಗಳು ನನಗಿಲ್ಲ. ಅವರೇನಾದರೂ ಹೇಳಿದ್ದಲ್ಲಿ ಸುಮ್ಮನೆ ಕೇಳಿಸಿಕೊಳ್ಳುತ್ತೇನೆ. ಹಾಗೆ ಅವರು ಈ ಕತೆ ಹೇಳಿದರು.
ಪೇ ಅವರದ್ದು ಚಿಕ್ಕಂದಿನಲ್ಲಿ ಅಂದರೆ ತೊಟ್ಟಿಲಲ್ಲೆ ಮದುವೆ ಆಗಿತ್ತಂತೆ. ಆ ಹುಡುಗನ ಫ್ಯಾಮಿಲಿ ಸಿಕ್ಕಾಪಟ್ಟೆ rich . ಅವನು ಇಂಜಿನೀಯರಿಂಗ್ ಓದುತ್ತಿದ್ದಾಗ ಓದುವುದಕ್ಕಿಂತ ಬರೀ ದುಂದುವೆಚ್ಚ ಮಾಡುವುದೇ ಹೆಚ್ಚಿತ್ತಂತೆ. ಹಾಗೇ ಒಂದು ಸಲ ದುಡ್ಡು ಬೇಕೆಂದಾಗ ಮನೆಯವರು ಕೊಡಲು ಒಪ್ಪಲಿಲ್ಲ ಅಂತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡನಂತೆ. ಆಗ ಪೇ ಗೆ ಕೇವಲ 10 ರ ವಯಸ್ಸಂತೆ. ಆಗಲೇ ಅವಳಿಗೆ ವಿಧವೆಯ ಪಟ್ಟ ಕಟ್ಟಿದರು. ಬ್ಯಾಂಕ್ ನಲ್ಲಿ ಉದ್ಯೋಗ ಏನೋ ಇದೆ. ಆದರೆ ಅವರು ಒಂಟಿ. ಅವರಿಗೆ ಹಲವಾರು ಅಕ್ಕ ಅಣ್ಣಂದಿರು, ಓದಿ, ಎಲ್ಲ ದೇಶ ವಿದೇಶದಲ್ಲಿಕೆಲಸದಲ್ಲಿದ್ದಾರೆ. ಯಾರಿಗೂ ಅವಳಿಗೆ ಮರು ಮದುವೆ ಮಾಡಿಕೋ ಅನ್ನಲು ತೋಚಲಿಲ್ಲವೇ? ಅವರ ಮಕ್ಕಳ ಬಾಣಂತನ, ಅವರಿಗೆ ಬೇಕಾದಾಗ ಅವರ ಕೆಲಸಗಳು , ಊರಲ್ಲಿ ಕಟ್ಟಿದ ದೊಡ್ಡ ಮನೆಯ ಉಸ್ತುವಾರಿ ನೋಡಿಕೊಳ್ಳಲು ಅವರು ಬೇಕು. ಈಗೀಗ ಅವರು ತುಂಬ ಒಂಟಿ.
ಚಿತ್ರ-4
ಆತನಿಗೆ ಆ ಮಾರಣಾಂತಿಕ ಕಾಯಿಲೆಯಿದೆಯೆಂದು ಆತನ 15 ವರ್ಷ ವಯಸ್ಸಿದ್ದಾಗ ಗೊತ್ತಾಗಿತ್ತು. 19 ರ ತನಕ ಜೀವನದಿಂದುಳುವುದು ಕಷ್ಟ ಅಂದಿದ್ದರು ವೈದ್ಯರು. ಆದರೂ ಆ ವಿಷಯವನ್ನು ಮುಚ್ಚಿಟ್ಟು ಒಂದು ಬಡಕುಟುಂಬದ ಹೆಣ್ಣನ್ನು ಆತನಿಗೆ ಕಟ್ಟಿದರು. ಇಬ್ಬರು ನಾದಿನಿಯರಿಗೆ ಅಂವ ಜೀವದಿಂದಿರುವುದಕ್ಕಿಂತ ,ಅವನು ಹೇಗೂ ಬೆಕ್ಕಿನ ತಲೆ ಮೇಲೆ ಇಟ್ಟ ದೀಪ- ಅವನು ಸತ್ತ ಮೇಲೆ ಅವನ ಹೆಂಡತಿಯನ್ನು ಮನೆಕೆಲಸಕ್ಕೆ ಇಡಬಹುದು' ಅನ್ನುವಂತಹ ದುರಾಲೋಚನೆ. ಆ ಹೃದಯಸಂಬಂಧಿ ಕಾಯಿಲೆ ಎಷ್ಟೊ ಲಕ್ಷ ಜನರಲ್ಲಿ ಒಬ್ಬರಿಗೆ ಬರುವುದಂತ ಇತ್ತೀಚಿಗಿನ ಮೆಡಿಕಲ್ ಶೋಧ. ಆಗ ಇದು ಗೊತ್ತಿರಲಿಲ್ಲ. ಅವರ ಮಾತನ್ನು ಕೇಳಿದ ಹೆಣ್ಣು ಕಂಗಾಲು. ನಿಟ್ಟುಸಿರು ಬಿಟ್ಟು ನನ್ನ ತಾಳಿಭಾಗ್ಯ ಇದ್ದಂತೆ ಆಗುವುದು ಎಂದುಕೊಂಡಳು.
ಆದರೆ ಅವನು ನಾಲ್ಕು ಮಕ್ಕಳ ತಂದೆ, 7 ಜನ ಮೊಮ್ಮಕ್ಕಳು ಆತನಿಗೆ ಮತ್ತು ಮೊನ್ನೆಯಷ್ಟೆ 73 ರ ಹುಟ್ಟಿದ ಹಬ್ಬ ಆಚರಿಸಿದ ಹೇಗಿದೆ? ಇದು miracle ಅಲ್ಲದೇ ಮತ್ತೇನು? ಡಾಕ್ಟರ್ ಕೂಡ ಹುಬ್ಬೇರಿಸಿದ್ದಾರೆ. :-)
( Painting by me:i tried to paint using ArtRage. Friend said its nice so putting it up here)
:-)
( Painting by me:i tried to paint using ArtRage. Friend said its nice so putting it up here)
:-)

Madam!
ReplyDeletei am compelled to comment here. i tried to give a comfortable life and good education to my only son. I took a huge amount of loan for his higher studies. But when the time came for him to settle down he committed suicide because he could not get the girl he loved. Whenever i think of him i am filled with anger.
Sad stories indeed !
ReplyDeleteWhy does one feel the need to end one's life?
Because it is unbearable to continue living?
One can understand cases of painful terminal illness or poverty and hunger.
But failures in other walks of life such as love, exams, etc....?