ಮಾಲವಿಕ art
ಒಂದೂರಲ್ಲಿ ಒಬ್ಬ ಇದ್ದ. ಕಾಡಿನ ಬಳಿಯಲ್ಲಿದ ನದೀ ತೀರದಲ್ಲಿ ಅವನ ಮನೆ. ಒಂದಿನ ರಾತ್ರಿ ಅವನ ಮನೆ ಬಾಗಿಲು ಸದ್ದು ಮಾಡಿತು. ಕಿಂಡಿಯಿಂದ ಇಣುಕಿದ. ಏನೂ ಕಾಣಲಿಲ್ಲ. ಪುನ: ಹೋಗಿ ಮಲಗಿದ. ಪುನ: ಬಾಗಿಲು ಗೀರಿದ ಸದ್ದಾಯಿತು. ಈಗ ಅವನು ಎದ್ದು ನಿಧಾನವಾಗಿ ಬಾಗಿಲು ತೆರೆದ. ಏನೂ ಕಾಣಲಿಲ್ಲ. ಬಾಗಿದ. ಅಲ್ಲೊಂದು ಪುಟ್ಟ ಬೆಕ್ಕಿನ ಮರಿ ಇತ್ತು. ಇನ್ನಷ್ಟು ಬಾಗಿ ನೋಡಿದ. ಅರೇ ಅದು ಬೆಕ್ಕಿನ ಮರಿಯಾಗಿರಲಿಲ್ಲ. ಅದು ಒಂದು ಮರಿ ಸಿಂಹ. ಆಗಷ್ಟೆ ಹುಟ್ಟಿದ್ದು. ಕಣ್ಣು ಸರಿ ತೆರೆದಿರಲಿಲ್ಲ. ಅವನು ಆ ಸಿಂಹದ ಮರಿಯನ್ನು ಜೋಪಾನವಾಗಿ ಎತ್ತಿ ಹಿಡಿದು ಮನೆಯೊಳಗೆ ಕರೆ ತಂದ. ಹಸಿವಿನಿಂದ ಅದು ಸದ್ದು ಮಾಡುತ್ತಿತ್ತು. ಒಂದು ಹತ್ತಿಯನ್ನು ಹಾಲಲ್ಲಿ ಮುಳುಗಿಸಿ ಅದಕ್ಕೆ ಕುಡಿಸಿದ. ಮರಿ ಸುಮ್ಮನಾಯಿತು. ಒಂದು ಬುಟ್ಟಿಯಲ್ಲಿ ಮೆತ್ತನೆಯ ಹಾಸನ್ನು ಹಾಸಿ ಮರಿಯನ್ನು ಅದರಲ್ಲಿ ಮಲಗಿಸಿದ. ಮರಿ ದೊಡ್ಡ ದಾಗ್ತಾ ಅದಕ್ಕೆ ಬಾಟಲಿಯಲ್ಲಿ ಹಾಲು ಕುಡಿಸಲು ಶುರು ಮಾಡಿದ. ಹೀಗೆ ಇನ್ನೊಂದು ವರ್ಷ ಉರುಳಿತು. ಅವನು ಶುದ್ದ ಸಸ್ಯಾಹಾರಿ ಹಾಗಾಗಿ ಸಿಂಹದ ಮರಿಗೂ ಸಸ್ಯಾಹಾರಿ ಊಟದ ಅಭ್ಯಾಸ ಆಯಿತು. ಹಾಗೂ ಅದು ಅವನ ಅಂಗಳದಲ್ಲಿ ಹಾಯಾಗಿ ಓಡಾಡಿಕೊಂಡಿತ್ತು. ಹೀಗೆ ಜೀವನ ಸಾಗಿತ್ತು.
ಒಂದು ಸಲ ಅವನಿಗೆ ಮೂರು ನಾಲ್ಕು ದಿನಗಳ ಕಾಲ ಯಾವುದೋ ಕೆಲಸದ ನಿಮಿತ್ತ ಪರ ಊರಿಗೆ ಹೋಗಬೇಕಾಯಿತು. ಅವನು ಬಂದ ಮೇಲೆ ಸಿಂಹದ ಮರಿಯನ್ನು ಹುಡುಕುತ್ತಾನೆ. ಮರಿ ಕಾಣಲಿಲ್ಲ. ಎರಡು ದಿನ ಅತ್ತು, ಊಟ ಬಿಟ್ಟು ತುಂಬಾ ಬೇಜಾರಿನಲ್ಲಿ ಕಳೆದ.
ಹೀಗೆ ವರ್ಷಗಳು ಉರುಳಿದವು. ಅವನಿಗೆ ಮದುವೆ ಆಯಿತು, ಮಕ್ಕಳಾದವು. ಒಂದು ಸಲ ಹೀಗೆ ಟೂರ್ ಅಂತ ಪರದೇಶಕ್ಕೆ ಹೋದ. ಅಲ್ಲಿ ಒಂದು ಮೃಗಾಲಯಕ್ಕೆ ಭೇಟಿ ನೀಡಿದ ಕುಟುಂಬ ಸಮೇತ. ಸಡನ್ ಆಗಿ ಅವನಿಗೆ ಗರ್ಜನೆ ಕೇಳಿಸಿತು. ಅವನು ಕೇಜ್ ಹತ್ತಿರ ಹೋಗಿ ನೋಡಿದ. ಒಂದು ಸಿಂಹ ಅವನನ್ನೇ ನೋಡುತ್ತಿತ್ತು. ಅವನಿಗೆ ಹೃದಯದಲ್ಲಿ ಏನೇನೋ ಆಯಿತು. ಅವನು ನೋಡುತ್ತಿದ್ದ ಹಾಗೆ ಆ ಸಿಂಹ ಇವನ ಬಳಿ ಬಂತು. ಅದರ ಮೂಗಿನ ಮೇಲಿನ ಮಚ್ಚೆಯಿಂದ ಗುರುತು ಹಿಡಿದು, ಅದು ಸಣ್ಣಕ್ಕಿದ್ದಾಗ ಅವನೇ ಸಾಕಿದ ಸಿಂಹದ ಮರಿ ಎಂದು ಗುರುತು ಹಿಡಿದ. ಪ್ರೀತಿಯಿಂದ ಪಾರದರ್ಷಕ ಬೋನಿನ ಬಾಗಿಲಿನ ಮೇಲೆ ಕೈಯಾಡಿಸಿದ. ಏನಾಶ್ಚರ್ಯ ಸಿಂಹ ಕೂಡ ತನ್ನ ಪಂಜನ್ನೆತ್ತಿ ಅವನ ಕೈ ಮೇಲೆ ಬೋನಿನ ಆ ಕಡೆಯಿಂದ ನೇವರಿಸಿತು. ಸಿಕ್ಕಾಪಟ್ಟೆ ಇಮೋಷನಲ್ ಆಗಿ ಹೆಂಡತಿ ಮಕ್ಕಳಿಗೆ ಅದರ ಕತೆ ಅದರ ಬಾಲ ಲೀಲೆಗಳನ್ನು ಹಂಚಿಕೊಂಡ. ಸಿಂಹದ ಕಣ್ಣಲ್ಲೂ ನೀರು. ಇನ್ನು ಅವನಿಗೆ ತಡಕೊಳ್ಳಲಾಗಲಿಲ್ಲ. ಅವನು ಮೃಗಾಲಯದ ನಿರ್ವಹಣಾಕಾರರ ಬಳಿ ಹೋಗಿ ತನ್ನ ಹಾಗೂ ಸಿಂಹದ ಬಾಂಧವ್ಯದ ಕತೆ ಹೇಳಿ ಒಂದು ಸಲ ಅದರ ಬೋನಿಗೆ ಹೊಕ್ಕಲು ಅವಕಾಶಮಾಡಿಕೊಡಬೇಕೆಂದು ಕೇಳಿಕೊಂಡ. ನಿರ್ವಹಣಾಧಿಕಾರಿ ಒಪ್ಪಿಕೊಂಡ.
ಇವನು ಬೋನನ್ನು ಹೊಕ್ಕಿದ್ದೆ ಸೈ
ಸಿಂಹ ಅವನ ಮೇಲೆ ದಾಳಿ ಮಾಡಿ ಅವನನ್ನು ಕೊಂದು ಹಾಕಿತು.
.
.
.
.
.
.
..
.
.
.
.
ಇದನ್ನು ಓದಿ ನೀವೆಲ್ಲ ಅಳಬೇಡಿ ಮತ್ತೆ. ಎನೋ misunderstanding ನಡೆದೈತಿ.....ಆ ಸಿಂಹದ ಮರಿ ಬ್ಯಾರೆ ಇದ್ದಿತೇನೋ.....ನನ್ನ ತಂಗಿಗೆ ಈ ಕತೆ ಹೇಳಿ shock ಹೊಡೆಸಿ ಆಮೇಲೆ ಅವಳ ಕೈಯಲ್ಲಿ ಬೈಯಿಸಿಕೊಂಡೆ..ಹಿ ಹಿ ಹಿ (ನಿಮ್ಮ ಜತೆನೂ ಶೇರ್ (ಶೇರ್ ಇನ್ ಹಿಂದಿ ಮೀನ್ಸ್ ಲಯನ್....ಈ ಪನ್ ಕೂಡ ಅವಳ ಮೇಲೆ ಪ್ರಯೋಗಿಸಿ ಛೀ ಥೂ ಅನ್ನಿಸಿಕೊಂಡೆ) ಮಾಡುವ ಅಂತ
:-) :-)
(ಮೇಲಿನ ಮೂರು ಚಿತ್ರಗಳು ಮಾಲವಿಕಾ ಮಾಡಿದ್ದು)
ಕಟ್ಟು ಕಥೆಯಲ್ಲ ಕಟ್ಟಿದ ಕಥೆ ಸೂಪರ್ ಇದೆ. ಬೇವಿನ ಮರಕ್ಕೆ ಸಕ್ಕರೆ ಹಾಕಿದರೆ ಬೇವಿನಕಾಯಿ ಸಿಹಿಯಾಗುವುದೇ... ಉತ್ತಮ ನೀತಿ ಕಥೆ.. ಬರೆದ ಚಿತ್ರಗಳು ಹೊಂದುತ್ತವೆ ಹಾಗೆಯೇ ಸುಂದರವಾಗಿವೆ. ಕಥಾ ಜನನಿ ಹಾಗು ಚಿತ್ರ ಜನನಿ ಇಬ್ಬರಿಗೂ ಅಭಿನಂದನೆಗಳು
ReplyDeletewah wah Sherini. Nanu baya bhakthi inda odi koneyalli bonolage bidde. ha ha ha ha V
ReplyDeleteMadam... Did u change the diet again?!
ReplyDeleteSrikanth Manjunath, V and Anonymous:
ReplyDelete:-) :-)
thank u....
Anonymous: i suppose so...
ms
ತುಂಬಾ ಒಳ್ಳೆಯ ಕಥೆ. ನೀವು ಒಳ್ಳೆಯ ಶಿಶು ಸಾಹಿತ್ಯ ಬರೆಯಬಲ್ಲಿರಿ.
ReplyDeleteHe He .. sakattagide :-)
ReplyDeletethank you Prashasti!!
ReplyDeleteoye hoy Badari bhaiyya: either neevu kate poorti Odilla or sumne chitragaLannu nODi shishu sahitya andiddeeri annisutte.
ee tarahada shishu sahitya baredre people will have my head examined..:-)
thank u
ms
Nice story... enjoyed the last paragraph... paapa jyothi.. :-P
ReplyDeleteBeautiful sketches by Malavika....
Sumathi (munna) yes paapa jyothi...but her younger daughter is a greater punner than me!!! we had a great time.....travelling, singing, eating etc...
ReplyDelete:-)
pachchi
ಅಂತೂ ಸಿಂಹದ story ಹೇಳಿ ನಮ್ಮನ್ನು ಮಂಗ ಮಾಡಿದ್ರಿ
ReplyDelete