ಮುಂಬೈನಲ್ಲಿ ಬೆಳೆದರೂ ನನಗೆಲ್ಲೂ ಹೊರಗಡೆ ಇಂತಹ ದುಷ್ಟ ಕೃತ್ಯಗಳ ಬಗ್ಗೆ ಅನುಭವ ಆಗಿಲ್ಲ. ನಾನು ಕಲಿತದ್ದು ಹೆಣ್ಣು ಮಕ್ಕಳ ಕಾನ್ ವೆಂಟ್. P T ಸರ್ ಒಬ್ರು ಬಿಟ್ರೆ ನಮಗೆ ಕಲಿಸಲಿಕ್ಕೆ ಇದ್ದದ್ದು ಎಲ್ಲ ಲೇಡಿ ಟೀಚರ್ ಗಳೆ. ಆದರೆ P T ಸರ್ ಗೆ ಒಂದು ಕೆಟ್ಟ ಚಾಳಿ ಇತ್ತು. ಮೊದಲ ಪೀರಿಯಡ್ ಏ PT. ಶಾಲೆಗೆ ಲೇಟಾಗಿ ಬಂದ, ಸ್ವಲ್ಪ ದಪ್ಪಗಿನ ಮಕ್ಕಳನ್ನು ಸುಮ್ಮ ಸುಮ್ಮನೆ ಶಾಲೆಯ ಗ್ರೌಂಡ್ಸ್ ನ್ ಎರಡು ಸುತ್ತು ಹಾಕಿಸುವುದು ಮತ್ತು ತದೇಕಚಿತ್ತದಿಂದ ಅವರ ಎದೆಯ ಭಾಗವನ್ನು ಅವಲೋಕಿಸುವುದು. ಯಾರೂ ಪ್ರಿನ್ಸಿ ಗೆ ಕಂಪ್ಲೈಂಟ್ ಕೊಟ್ಟಿರಲಿಲ್ಲ. ನಮ್ಮಷ್ಟಕ್ಕೆ ನಾವೇ ಅವರ ಬಗ್ಗೆ ಮಾತಾಡಿಕೊಳ್ಳುತ್ತಿದ್ದೆವು. If eyes had any power his looks might melt the breasts . ಅಷ್ಟು ಮುಜುಗರ ಆಗುವಂತೆ ಇರುತ್ತಿತ್ತು ಅವರ ನೋಟ
ನೆನಪಿದೆ ನನಗೆ ಆ ದಿನ. ಶನಿವಾರ. ನಮಗೆಲ್ಲ ಸ್ಪೋರ್ಟ್ಸ್ ಯುನಿಫಾರ್ಮ್ , ಅಂದ್ರೆ ಡಿವೈಡಡ್ ಸ್ಕರ್ಟ್ ಮತ್ತು ಕೆಟ್ಟದಾಗಿ ಕಾಣುವ ಟಿ ಶರ್ಟ್. well endowed ಹುಡುಗಿಯರಾದ್ರೆ ಅದು ಇನ್ನೂ ಕೆಟ್ಟದಾಗಿ ಕಾಣುವಂತದ್ದು. ತುಂಬಾ ಮುಜುಗರದವರು ಪಾಪ ಆ ಸೆಕೆಯಲ್ಲೂ ಅದರ ಮೇಲೆ ಕೋಟ್/ ಸ್ವೆಟರ್ ಮುಂತಾದೆಲ್ಲ ಹಾಕುವರು. ಸರ್ ನಮಗೆ ಎಕ್ಸರ್ ಸೈಜ್ ಮಾಡಿಸೋ ಮುಂಚೆ ಕೋಟ್, ಓವರ್ ಕೋಟ್ ಗಳನ್ನೆಲ್ಲ compulsorily ತೆಗೆಸಿಸುತ್ತಿದ್ದರು. ಅದಕ್ಕೆ ನಾವು ಸ್ಪೋರ್ಟ್ ಯುನಿಫಾರ್ಮ್ ಅನ್ನು ಶಾಲೆಗೆ ಹೋಗಿ ನಮ್ಮ ಕಾಮನ್ ರೂಮ ಅಂತ ಒಂದು ಇರುತ್ತೆ, ಅಲ್ಲಿ ಹೋಗಿ ಚೆಂಜ್ ಮಾಡ್ತಿದ್ದೆವು. ಸ್ಪೋರ್ಟ್ಸ್ ಪೀರಿಯಡ್ ಮುಗಿಸಿ ಕ್ಲಾಸ್ ಗೆ ಬಂದು ಪುನ: ನಮ್ಮ ಡೈಲಿ/regular ಯೂನಿಫಾರ್ಮ್ ಹಾಕಿಕೊಳ್ಳುತ್ತಿದ್ದೆವು. ನಾನಂತೂ ಕಡ್ಡಿಗೂ ನಾಚಿಸುವಷ್ಟು ತೆಳ್ಳಗಿದ್ದೆ, ಆದ್ದರಿಂದ ಸ್ಪೋರ್ಟ್ಸ್ ಯುನಿಫಾರ್ಮ್ ಮೇಲೆ ನೆ ರೆಗುಲರ್ ಯುನಿಫರ್ಮ್ ಹಾಕಿಕೊಳ್ಳುತ್ತಿದ್ದೆ. :-) ಲೇಟ್ ಆಗಿ ಬಂದ ಹುಡುಗಿಗೆ ಆ ದಿನ ಮುಟ್ಟಿನ ನೋವು ಬೇರೆ. ಸರ್ ಗೆ ರಿಕ್ವೆಸ್ಟ್ ಮಾಡಿದಳು. ಪ್ಲೀಸ್ ಸರ್ ಇವತ್ತೊಂದಿನ ಮಾಫ್ ಮಾಡಿ. ನನಗೆ ಹುಷಾರಿಲ್ಲ ಅಂತ. ಆದರೂ ಅವಳನ್ನು ಓಡಿಸಿ ಅರ್ಧ ಸುತ್ತು ಓಡುತ್ತಿರಬೇಕಾದ್ರೆ ಅವಳು ಬಿದ್ದು ಬಿಟ್ಟಳು. ನನಗೆ ಆ ದಿನ ಅಸಾಧ್ಯ ಕೋಪ. ನೇರವಾಗಿ ಸರ್ ಬಳಿ ನಡೆದು ನಿಮ್ಮ ಬಗ್ಗೆ ಕಂಪ್ಲೈನ್ ಕೊಡ್ತೇನೆ ಪ್ರಿನ್ಸಿಗೆ ಅಂದೆ. ಕ್ಯಾ ತು ಕಂಪ್ಲೈನ್ ಕರೆಗಿ? ಅಂತ ನನ್ನ ಟಿ-ಶರ್ಟ್ ಹಿಡಿದೆಳೆದ. ನನಗೆ ಏನಾಯ್ತೂ ಅಂತ್ಲೆ ಗೊತ್ತಾಗಲಿಲ್ಲ. ಸಡನ್ ಆಗಿ ಅವನ ಮುಂದೆ ನಿಂತು, ಇನ್ನೊಂದು ಸಲ touch me and i will kill you' ಅಂದೆ. ಯಾವಾಗಲೂ meek ಆಗಿರುವ ಈಕೆಗೆ ಏನಾಯ್ತು ಅಂತ ಎಲ್ಲರಿಗೂ ಶಾಕ್' ಧಿಸ್ ಇಸ್ ದ ಲಾಸ್ಟ್ ಟೈಮ್ ಯು ಮೇಕ್ ದ ಗರ್ಲ್ಸ್ ರನ್, ಬಿವೇರ್ ಅಂದೆ.
'ಗರ್ಲ್ ವ್ಹಾಟ್ ಇಸ್ ಯುವರ್ ನೇಮ್'
'ಗರ್ಲ್ ವ್ಹಾಟ್ ಇಸ್ ಯುವರ್ ನೇಮ್'
'ಮಾಲತಿ ಪೈ'
Don't you have manners? don't you know how to talk to your teacher, respect your teacher??
I know everything. but respect automatically goes to to those who deserve it' in this respect you definitely don't deserve any respect ಅಂತ ಕೆರಳಿದ ಸರ್ಪಿಣಿಯಂತೆ ಉತ್ತರಿಸಿದೆ ಅಂತ ಅಲ್ಲಿ ಸೇರಿದ ಕ್ಲಾಸ್ಮೇಟ್ಸ್ ಹೇಳಿದರು. ಆ ಮೇಲೆ ಸರ್ ನನ್ನ ಬಗ್ಗೆ ಕಂಪ್ಲೈನ್ ಕೊಟ್ಟರು. ನಾನು ಅಂಜದೆ ಪ್ರಿನ್ಸಿ ಗೆ ಎಲ್ಲ ಹೇಳಿದೆ. ಬೇರೆ ಹುಡುಗಿಯರಿಗೂ ಕೇಳಿ, ನನ್ನ ಧೈರ್ಯ ನೋಡಿ ಸಾಕಷ್ಟು ಜನರು ಅವರ ವಿರುದ್ಧ ಕಂಪ್ಲೈಂಟ್ ಕೊಟ್ಟಿದ್ದರಿಂದ ಆ ಸರ್ ಗೆ ನಮ್ಮ ಶಾಲೆಯಿಂದ್ ಗೇಟ್ ಪಾಸ್ ನೀಡಿ ಒಬ್ಬ ಲೇಡಿ physical training ಟೀಚರ್ ನ್ನು ನೇಮಕ ಮಾಡಲಾಯಿತು. ಇದು ನಡೆದದ್ದು ಹೈಸ್ಕೂಲಿನಲ್ಲಿದ್ದಾಗ.
ನಾನು ಹನ್ನೊಂದನೆ ತರಗತಿಗೆ ಬಂದಾಗ ನಮ್ಮ ಬಿಲ್ಡಿಂಗ್ ನಲ್ಲಿ xyz ಮಾಮ ಮತ್ತು ಕುಟುಂಬ ಬಂದಿಳಿದರು. ಕೊಂಕಣಿಯೆಂದ ಮೇಲೆ ಬಾದರಾಯಣ ಸಂಬಂಧ, ಮಾಮಾ ಮಾಯಿ ಎನ್ನುವ ಬಳಕೆ ನಮ್ಮಲ್ಲಿ ಕಾಮನ್. ನಮ್ಮ ಬಿಲ್ಡಿಂಗ್ ನಲ್ಲಿ A wing ಮತ್ತು B ವಿಂಗ್ ಅಂತ ವಿಂಗಡಣೆ. A ವಿಂಗ ನಲ್ಲಿ 15 ಅಪಾರ್ಟಮೆಂಟ್ B ವಿಂಗ್ ನಲ್ಲಿ 17. ನಮ್ಮದು B ವಿಂಗ್ ನಲ್ಲಿ ಮೂರನೆ ಮಹಡಿ. ನಾಲ್ಕು ಕುಟುಂಬಗಳು ಬಿಟ್ರೆ ಎಲ್ಲ ಕೊಂಕಣಿಯವರೆ. ಆ xyz ಮಾಮ ಇದ್ದಿದ್ದು A ವಿಂಗ್ ನ 5 ನೇ ಮಹಡಿಯಲ್ಲಿ. ಪರಿಚಯ ಆದ ಮೇಲೆ ಆಂಟಿ ನಮ್ಮ ಮನೆಗೆ ಬರೋದು ಹೋಗೋದು ಇದ್ದೇ ಇರುತ್ತಿತ್ತು. ಆಂಟಿ ನೇ ಗೊಂಬೆ ತರಹ, ಗಿಡ್ಡ ಬಿಳಿ ಬಿಳಿ ಬಣ್ಣ, ಕಂದು ಬಣ್ಣದ ಕಣ್ಣುಗಳು, ಗಟ್ಟಿಯಾದ ನಗು ಮಾತು ಮತ್ತು ಮುದ್ದು ಗೊಂಬೆ ತರಹ ಪುಟಾಣಿ ಮಕ್ಕಳು. ನಮ್ಮ ಮನೆಗೆ ಬಂದಾಗ ಮಕ್ಕಳಿಗೆ ಮದರಂಗಿ ಹಚ್ಚುವುದು, ನೈಲ್ ಪಾಲಿಷ್ ಹಚ್ಚುವುದು, ಹೊಸ ಹೊಸ ವಿನ್ಯಾಸದಲ್ಲಿ ಕೂದಲು ಹೆಣೆಯುವುದು ಮುಂತಾದ್ದು ಮಾಡುತ್ತಿದ್ದೆ. ಮಕ್ಕಳೂ ನನ್ನನ್ನು ಹಚ್ಚಿಕೊಂಡಿದ್ದರು. ಆದರೆ ಯಾವಾಗಲೂ ನಾನಾಯಿತು ನನ್ನ ಕೆಲಸ ಆಯಿತು ಅಂದ್ರೆ ಓದು, ಅಮ್ಮನಿಗೆ ಮನೆ ಕೆಲಸಗಳಿಗೆ ಸಹಾಯ ಮಾಡುವುದು ಇಂತದ್ದರಲ್ಲೆ ನಾ ಇರುತ್ತಿದ್ದರಿಂದ ನಾನು ಯಾರ ಜೊತೆನೂ ಅತೀಯಾದ ಸಲಿಗೆ ಅಥವಾ ಯಾರ ಮನೆಗೂ ಹೋಗೋದು ಬರೋದು ಮುಂತಾದ್ದೆಲ್ಲ ಇರಲಿಲ್ಲ. ಆಂಟಿ ನನಗೆ ಅವರ ಜತೆ ತರಕಾರಿ, ದಿನಸಿ ತರಲು ಹೋಗುವಾಗ ನನ್ನನ್ನು ಜತೆ ಗೆ ಕರೆದುಕೊಂಡು ಹೋಗುತ್ತಿದ್ದರು.ಅವರ ಪುಟ್ಟ ಮಕ್ಕಳನ್ನು ಅಮ್ಮ ನೋಡಿಕೊಳ್ಳುತ್ತಿದ್ದರು. ತುಂಬಾ ಸಾಮಾನುಗಳಿದ್ದರೆ ನಾನು ಅವನ್ನು ಹೊರಲು ಹೆಲ್ಪ್ ಮಾಡಿ ಅವರ ಮನೆ ತನಕ ಕೊಟ್ಟು ಬರುತ್ತಿದ್ದೆ. ಹೀಗೆ ಒಂದು ದಿನ ಅವರ ಜತೆ ಸಾಮಾನು ತೆಗೆದುಕೊಂಡು ಹೋದಾಗ ಮಾಮ ಮನೆಯಲ್ಲಿದ್ದರು. ಆಂಟಿ ತರಕಾರಿ ಚೀಲ ಎತ್ತಿಕೊಂಡು ಅಡಿಗೆ ಮನೆಗೆ ನಡೆದರು. ಮಾಮ ಮನೆಯಲ್ಲಿದ್ದರಿಂದ ಪ್ಲಸ್ ನನಗೆ ಗಂಡಸರ ಜತೆ ಮಾತು ಆಡಲು ಮುಜುಗರ ಆದ್ದರಿಂದ, ನಾನು ಕಾರಿಡಾರ್ ನಲ್ಲೇ ಆಂಟಿಗಾಗಿ ಕಾಯ್ತಾ ಇದ್ದೆ. ಅಷ್ಟರಲ್ಲಿ ಮಾಮ ಬಂದು ನನ್ನ ಕೈನಲ್ಲಿದ್ದ ಇನ್ನೊಂದು ಚೀಲ ತೆಗೆಯುವ ನೆವದಲ್ಲಿ ಕೈ ನೇವರಿಸಿ ಚೀಲ ಎತ್ತಿಕೊಂಡರು. ನನಗಾಗ ಅಷ್ಟೊಂದು ತಲೆಗೆ ಹೋಗಲಿಲ್ಲ. ಮಾಮ ಅದೂ ಮದುವೆಯಾದ ಮಾಮ, ಮಕ್ಕಳೊಂದಿಗಂವ ಆದುದರಿಂದ respectable ಅಂತ ನನ್ನ 16 ನೇ ವಯಸ್ಸಿನ ತಲೆಗೆ.
ಒಂದು ದಿನ ಅವರ ಮನೆಗೆ ಟಿ.ವಿ. ಬಂತು. ಆಂಟಿ ಹೇಳಿದ ಪ್ರಕಾರ she hailed from a very rich and reputed transport business family from Mangalore. ಮಂಗಳೂರಿನಿಂದ ಮುಂಬೈಗೆ ಅವರ ಟ್ರಕ್ ಯಾವುದೇ ಕೆಲಸ ಮೇಲೆ ಬಂದ್ರೂ ಇವರ ಮನೆಗೆ ತೊಗ್ರಿ , ಕಾಳು, ಬೇಳೆ, ಅಕ್ಕಿ, ತೆಂಗಿನಕಾಯಿ, ಊರಿನ ವಿಶೇಷ ಹಣ್ಣು ಕಾಯಿ ಪಲ್ಲೆ ಮುಂತಾದವು ಬಂದು ಬೀಳುತ್ತಿದ್ದವು. ಅಷ್ಟೇನೂ ಚೆನ್ನಾಗಿ ಅಡಿಗೆ ಗೊತ್ತಿಲ್ಲದ ಆಂಟಿ ಅಡಿಗೆ ಸಹಾಯ ಎಲ್ಲ ಬೇಕಾದಾಗ ಮಕ್ಕಳನ್ನು ಕರೆದುಕೊಂಡು ನಮ್ಮನೆಗೆ ಹಾಜರ್. ಅಮ್ಮನಿಂದ ಹೇಳಿಸಿಕೊಂಡು ಅದನ್ನು ಬರೆದುಕೊಳ್ಳುವುದು ಅಥವ ಅಮ್ಮ ಮಾಡುವಾಗ ಬಂದು ನೋಡಿ ಕಲಿಯುವುದು ಮುಂತಾದನ್ನು ಮಾಡುವುದಲ್ಲದೇ ಧಾರಾಳವಾಗಿ ಅವರಿಗೆ ಮನೆಯಿಂದ ಸರಬರಾಜಾದ ವಸ್ತುಗಳನ್ನು ನಮ್ಮೊಂದಿಗೆ ಶೇರ್ ಮಾಡುತ್ತಿದ್ದರು.
ಒಂದು ದಿನಾ ಆಂಟಿಯ ತಂದೆ ಬಂದವರೇ ಅವರ ಮನೆಗೆ ಒಂದು ಟಿ ವಿ ಅದೂ ಬಣ್ಣದ್ದು ತಂದು ಹಾಕಿದರು. ಆಗ ನಮ್ಮ ಮನೆಯಲ್ಲಿ ಇನ್ನೂ black and white ಟಿ ವಿ ಕೂಡ ಬಂದಿರಲಿಲ್ಲ. ಆಂಟಿಗೆ ಅವರ ಟಿ ವಿ ಯನ್ನು ನನಗೆ ತೋರಿಸುವ ಉಮ್ಮೇದು. ಬಿಲ್ಡಿಂಗ್ ನಲ್ಲಿರುವವರೆಲ್ಲ ಒಂದು ರೌಂಡ್ ಅವರ ಮನೆಗೆ ಹೋಗಿ ಬಂದಾಗಿತ್ತು. ನನ್ನ ಹಾಡು ಕೇಳುವ ಗೀಳನ್ನು ಅರಿತ ಆಂಟಿ ಸೋಮವಾರ ಬರುವ ಚಿತ್ರಮಾಲಾ, ಬುಧವಾರದ ಚಿತ್ರಹಾರ ಶುಕ್ರವಾರದ ಛಾಯಾಗೀತ್ ನ್ನೆಲ್ಲ ರಸವತ್ತಾಗಿ ಬಣ್ಣಿಸಿದಾಗಲೂ ನನಗೆ ಅವರ ಮನೆಗೆ ಹೋಗಿ ಟಿ ವಿ ನೋಡಬೇಕೆಂಬ ಆಸೆ ಆಗಲಿಲ್ಲ.
ಆದರೆ ಅಮ್ಮ ನನಗೆ ಒಂದು ದಿನ ಜಬರದಸ್ತಿನಿಂದ ಅವರ ಮನೆಗೆ ಕಳುಹಿಸಿದಳು 'ನಿನ್ನ ನಖರೆಗಳು ಜಾಸ್ತಿಯಾಯ್ತು, ಅವರೆಷ್ಟು ಕರೆಯುತ್ತಾರೆ. ನಿನಗೆ ಒಂದು ಹಾಡು ಕೇಳಿ ಬರಲಿಕ್ಕೆ ಏನದು ಅಹಂಕಾರ ಎಂದು. ಅಜ್ಜನ ಬಳಿ ಬೆಳೆದ ನಾನು ಅಮ್ಮನಿಗೆ ತುಂಬ ಹೆದರುತ್ತಿದ್ದೆ. ಆದುದರಿಂದ ಸುಮ್ಮನೆ ಅಲ್ಲಿಗೆ ಹೋದೆ. ಮೇಲೆ ಹೇಳಿದ ಮೂರೂ ಹಾಡಿನ ಕಾರ್ಯ್ರಕ್ರಮ ರಾತ್ರಿ 8 ರ ನಂತರದ್ದು. ನಮ್ಮ ತಂದೆಯಂತು ಯಾವ ವಿಷಯಕ್ಕೂ ತಲೆ ಹಾಕುತ್ತಿರಲಿಲ್ಲ ಮತ್ತು ನನಗೂ ಅಪ್ಪನ ಬಳಿ ಮಾತನಾಡಿ ರೂಢಿಯಿರಲಿಲ್ಲ. (ಈಗಲೂ ಇಲ್ಲ ನಾನು 8 ನೇ ತರಗತಿ ತನಕ ಅಜ್ಜನ ಬಳಿಯಿದ್ದೆ. ಆಮೇಲೆ ಅಜ್ಜಿಗೆ ಕ್ಯಾನ್ಸ್ ರ್ ಆದ ನಂತರ ನನಗೆ ಪುನ: ನನ್ನ ತಂದೆ ತಾಯಿ ಬಳಿಗೆ ಕಳುಹಿಸಲಾಗಿ ನನಗೆ ತಂದೆ ತಾಯಿ ಜತೆ ಸಲಿಗೆಯಿಂದ ಸ್ನೇಹದಿಂದ ಇರಲಾಗಲಿಲ್ಲ. ಅಷ್ಟೆ ಅಲ್ಲ ನಾನು ಬೇರೆಯವರೊಂದಿಗೆ ಮಾತಾಡಲಿಕ್ಕೆ ಶುರು ಮಾಡಿದ್ದೆ ಮದುವೆಯಾದ ಮೇಲೆ. ಶ್ರೀಕಾಂತ ತುಂಬ ಸೋಷಿಯಲ್, ತುಂಬ ಜನ ಫ್ರೆಂಡ್ಸ್...ಈಗಲೂ ಕೆಲವು ಬೆರಳಣಿಕೆಯ ಮಿತ್ರರು ಸಂಬಂಧಿಕರ ಜತೆ ಬಿಟ್ಟರೆ ನನ್ನ ಮಾತು ನಿಲ್. ನನ್ನ ಇ ಮೈಲ್, ಬ್ಲಾಗ್ ಎಲ್ಲ ಓದುವವರೆಲ್ಲ ನಾನು ತುಂಬ ಫ್ರೆಂಡ್ಲೀ ಸೋಷಿಯಲ್ ಅಂತೆಲ್ಲ ಅಂದುಕೊಂಡಿದ್ದಾರೆ. ಹಾಂ ನನ್ನ ಮನೆಯಲ್ಲಿ ವಟ ವಟಾ ಅಂತಿರುತ್ತೇನೆ...)
ಸರಿ ಕಾಲೆಳೆದುಕೊಂಡು ಹೋದೆ. ಆಂಟಿ ಮುಖ ಅಂತೂ ಸಂತಸದಿಂದ ಹಿಗ್ಗಿದ ಹೀರೆಕಾಯಿ ತರಹ ಆಗಿ ಹೋಯ್ತು. ಟಿ.ವಿ ಮುಂದೆ ಮಾಮ ನೂ ಪವಡಿಸಿದ್ದರು. 'ಬಾಮ್ಮಾ ಕೂತ್ಕೋ ಅಂತ ಅವರ ಬಳಿ ಸೋಫಾದ ಕಡೆ ತಟ್ಟಿ ಹೇಳಿದರು. ಆಂಟಿ ನಮ್ಮೊಡನೆ ಇರುತ್ತಾರೆಂಬ ಧೈರ್ಯದಿಂದ ಕೂತುಕೊಂಡೆ. ಹಾಡಿನ ಮಧ್ಯ Advertisement ವಿರಾಮ. ಆಂಟಿ ಅಡಿಗೆ ಮನೆಗೆ ಹೋದರು. ಶುರುವಾಯ್ತು ಅವರ ಕೈ ನನ್ನ ಬೆನ್ನು ಸವರುವುದು, ಬೆರಳು ಒತ್ತುವುದು ವಗೈರೆ. ಆಂಟಿ ಬಂದ ಕೂಡಲೆ ಪುನ: ಸಭ್ಯಸ್ಥನ ಪೋಸ್. ಪುಟ್ಟ ಮಕ್ಕಳೆದುರಿಗೆ ಇವೆಲ್ಲ ನಡೆಯುತ್ತಿತ್ತು. ಅವರು ಅಮ್ಮನ ಬಳಿ ಇದೆಲ್ಲವನ್ನು ವರದಿ ಮಾಡುತ್ತಿರಲಿಲ್ಲವೇ?
ಮುಂದೊಂದು ದಿನ ಅಮ್ಮ, ಆ ದಿನ ಭಾನುವಾರ ಬೇರೆ, ನನಗೆ ನಮ್ಮ ಮನೆಯಲ್ಲಿ ಮಾಡಿದ ತಿಂಡಿಯೊಂದನ್ನು ಕೊಟ್ಟು ಬರಲು ಹೇಳಿದಳು. ನಾನು ಖಡಾಖಂಡಿತವಾಗಿ ನಿರಾಕರಿಸಿದೆ, ಏನಾದರಾಗಲಿ ಎಂದು
'ಯಾಕೆ ಹೋಗಲ್ಲ'
'ನನಗೆ ಮಾಮನ ಕಂಡರೆ ಒಂದು ತರಹ'
ಏನು ಅದು ಒಂದು ತರಹ ಅಂದ್ರೆ? ಎಷ್ಟು ಪ್ರೀತಿ ವಿಶ್ವಾಸದಿಂದ ವಿನಯದಿಂದ ನಮ್ಮನ್ನೆಲ್ಲ ಮಾತನಾಡಿಸ್ತಾರೆ!'
'ಇಲ್ಲ ಅಮ್ಮ ಅವರು ಸುಮ್ಮ ಸುಮ್ಮನೆ ಮುಟ್ಟುವುದು ಅಂತದೆಲ್ಲ ಮಾಡ್ತಾರೆ
ಅಂದಾಗ ಅಮ್ಮ ಸಿಟ್ಟಿನಿಂದ:
ಎಷ್ಟು ಆಚ್ಛೆ ,ಪ್ರೀತಿ ಮಾಡ್ತಾರೆ ನಿನ್ನನ್ನ.ಇಲ್ಲಮ್ಮ ಅಂತ ಎಷ್ಟೋ explanation ಕೊಡಲು ಪ್ರಯತ್ನ ಮಾಡಿದೆ.. ನಿನಗೆ ಎಲ್ಲೋ ಭ್ರಮೆ ಎಂದಾಗ ನನಗೆ ಹೇಗಾಗಿರಬೇಡ?
'ಸುಮ್ಮನೆ ಅದನ್ನು ಕೊಟ್ಟು ಬಾ ಅಂದರು'
ಪುನ: ಕಾಲೆಳೆದು ಹೋದೆ. ಬಾಗಿಲು ತೆಗೆದದ್ದು ಮಾಮ. ಆಂಟಿ ಆ ದಿನ ಮನೆಯಲ್ಲಿರಲಿಲ್ಲ. ಮಾಮ 'ಬಾ ಬಾ ನೋಡು ಮಗು ಆವಾಗ್ಲಿಂದ ಅಳ್ತಾ ಇದೆ ಮಾಲತಿ ಅಕ್ಕ ಬೇಕು ಅಂತ' ಒಳಗೆ ಬಾ ಅವಳನ್ನ್ನು ಸಮಾಧಾನ ಮಾಡು ಅಂತ. ಅಷ್ಟರೊಳಗೆ ಪುಟ್ಟಿ ಹೊರಗೆ ಬಂದಳು. ಅವಳನ್ನು ಎತ್ತಿಕೊಂಡು ಬಲವಂತವಾಗಿ ಅವಳನ್ನು ನನ್ನ ಕೈಗೆ ತುರುಕುವ ನೆವದಲ್ಲಿ ಅವರ ಕೈ ನನ್ನ ಎದೆ ಭಾಗಕ್ಕೆ ಇನ್ನೇನೂ ಸ್ಪರ್ಶಿಸಬೇಕು ನಾನು ದೂರ ಸರಿದೆ, ಮಾಮ, ನಾನು ಅಮ್ಮ ಹೊರಗಡೆ ಹೋಗ್ತಾ ಇದ್ದೀವಿ , ಅಮ್ಮ ಗ್ರೌಂಡ್ ಫ್ಲೋರ್ ನಲ್ಲಿ ನನಗೆ ಕಾಯ್ತಿದ್ದಾರೆ ಅಂತೆ ಹೇಳಿ ಹಿಂತಿರುಗಿ ನೋಡದೆ, ಲಿಫ್ಟ್ ಗೂ ಕಾಯದೆ ಮನೆಗೆ ಧಾವಿಸಿ ಬಂದೆ. ಅಮ್ಮ ಆಗಲೇ ಗೆಳತಿಯೊಂದಿಗೆ ವಾಕ್ ಹೋಗಿಯಾಗಿತ್ತು. ನನ್ನ ಎದೆಯ ಡವ ಡವ ನಿಲ್ಲಬೇಕಾದ್ರೆ ಎಷ್ಟು ಸಮಯ ಬೇಕಾಯ್ತು ನನಗೆ.
ಹೀಗಿದ್ದಾಗ ಒಂದು ದಿನ ಮೇಲಿನ ಫ್ಲೋರ್ ನ 'ಅ' ಹೆದರಿ ಕೊಂಡು ನನ್ನ ಬಳಿ ಬಂದು ಮಾಲ್ತೀ, if you don't mind please accompany me to 'xyz's house. i don't like to go there alone ಅಂದ್ಲು.
why
because he touches me in my private places
ಪಾಪದ ಹುಡುಗಿ ನನಗಿಂತ ಎರಡು ವರ್ಷ ಚಿಕ್ಕವಳು. ಆದರೆ ಮೈ ಕೈ ತುಂಬಿಕೊಂಡು ನನಗಿಂತ ದೊಡ್ಡವಳ ತರಹ ಕಾಣುತ್ತಿದ್ದಳು. ಚಂದದ ಹುಡುಗಿ. ತುಂಬಾ ಮಾತು ನಗೆ..ಗುಳಿ ಬೀಳುವ ಕೆನ್ನೆ ಅವಳಿಗಂತೂ ನನಗಿಂತ ಜಾಸ್ತಿ ಕಿರುಕುಳ ಕೊಟ್ಟಿದ್ದ ಆ ಮಾಮ
'why dont you tell your mother'
ಅವಳು ಅಮ್ಮನಿಗೆ ಈ ಬಗ್ಗೆ ಹೇಳಿದಾಗ ನೀನೇ ಚೆಲ್ಲು ಚೆಲ್ಲಾಗಿ ಆಡ್ತೀಯಾ ಅದಕ್ಕೆ ಅವರು ಹಾಗೆಲ್ಲಾ ಮಾಡ್ತಾರೆ ಅಂದ್ರಂತೆ..:-(
ಆಕೆಯ ಅಮ್ಮ ನನ್ನ ಅಮ್ಮ best friends.ಆದರೆ ನನಗೆ ಅವಳಿಗೆ ಸ್ಕೂಲ್ ನ ಸಮಯ ಮ್ಯಾಚ್ ಆಗದೆ ನನಗೂ ಅವಳಿಗೂ ಹೇಳಿಕೊಳ್ಳುವಂತಹ ಗೆಳೆತನ ಇರಲಿಲ್ಲ. ಅವಳು ಮಾಮ ನ ಮನೆಗೆ ಹೋದಾಗ, ಮಾಮ ಒಳಗಡೆ ಏನೂ ಹಾಕಿಕೊಳ್ಳದೆ , ಆಂಟಿ ಅಡುಗೆ ಮನೆ ಕಡೆ ಹೋದ ಕೂಡಲೆ ಲುಂಗಿಯ ಸಂದಿನಿಂದ ಅವರ private part ತೋರಿಸುತ್ತಿದ್ದರಂತೆ.
ಹೇಳಿಕೊಳ್ಳಲು ಬ್ಯಾಂಕ್ ನ ಉನ್ನತ ಅಧಿಕಾರಿ ಮಾಡೋದು ಥರ್ಡ್ ಕ್ಲಾಸ್ ಕೆಲಸ
ಆಮೇಲೆ ನಾನು ಅವಳಿಗೆ ಹೇಳಿದೆ, ನಾವು ಮನೆಯಲ್ಲಿ ಏನೂ ಹೇಳದೆ ಸುಮ್ಮನಿರುತ್ತೇವಂತ ಅವರಿಗೆ ಆ ಧೈರ್ಯ. ಇನ್ಮುಂದೆ ಆದಷ್ಟು ಅವರ ಮನೆಗೆ ಹೋಗುವುದನ್ನು avoid ಮಾಡುವ. ಹೋಗಲೇ ಬೇಕೆನಿಸಿದ್ದಲ್ಲಿ ಒಟ್ಟಿಗೆ ಹೋಗುವ, but let us scare him.
ಒಂದು ಸಲ ನಾವಿಬ್ಬರೂ ಹೋದಾಗ ಅವರು ಇನ್ನೇನು ಮಂಗ ಚೇಷ್ಟೆ ಮಾಡಬೇಕೆನ್ನುವಷ್ಟರಲ್ಲಿ ನಾನು 'ಅರೆ ಆಂಟಿ' ಅಂದೆ. ಅವರ ಮುಖದ ಮೇಲಿನ ಭಯ ನೋಡಬೇಕಿತ್ತು. ನಾನು ಹೊಸದಾಗಿ ಕಲಿತ ಪದ 'ಲೆಚರ್/lecher ಅನ್ನು ಅವರ ಮೇಲೆ ಪ್ರಯೋಗಿಸಿ ಲುಕ್ ಇಟ್ ಅಪ್ ಇನ್ ದ ಡಿಕ್ಷ್ನನರಿ ಎಂದೆ' ಎರಡು ವರ್ಷದ ನಂತರ ಅವರಿಗೆ ಬೇರೆ ಕಡೆ ವರ್ಗವಾಗಿ ಮನೆ ಬಿಟ್ಟು ಹೋದ ಮೇಲೆ ನಮಗೆ ನಿರಾಳ. ಅವರು ಮನೆ ಬಿಟ್ಟು ಹೋದ ಮೇಲೆ ಒಂದೊಂದಾಗಿ ಅಮ್ಮನ ಕಿವಿಗೆ ಅವರ ರಾಸಲೀಲೆಗಳ ಬಗ್ಗೆ, ಮೊದಲು ಅವರ ಮನೆಗೆ ಕೆಲಸಕ್ಕಿದ್ದ ಹುಡುಗಿಯಿಂದ ಮತ್ತು ಅವರಿವರಿಂದ ಗೊತ್ತಾಯಿತು. ಇತ್ತೀಚಿಗಿನ ವರ್ಷಗಳಲ್ಲಿ ನಾನು ಅಮ್ಮನಿಗೆ ಕೇಳಿಯೂ ಇದ್ದೆ' ಅಮ್ಮ ನಾನು ಹೇಳಿದ್ದು ನೀನು ನಂಬಲಿಲ್ಲ ಯಾಕೆ' ಅಂತ ಅಮ್ಮನ ಉತ್ತರ'ನಿನ್ನಷ್ಟು ನನಗೆ ಓದು ಬರಹ ಇಲ್ಲವಲ್ಲ ಮತ್ತು ಅವರು ಎಷ್ಟು ಸಭ್ಯತೆಯಿಂದ ನಮ್ಮೊಂದಿಗೆ ವರ್ತಿಸುತ್ತಿದ್ದರು, ನಿನಗೂ ಮಗಳೆ ಅಂತ ಸಂಭೋಧಿಸುತ್ತಿದರು..ಅಂತ ಹೇಳಿದ್ದಳು. ಅದಕ್ಕೆ ನಾನು ಅಂದೆ' ಇಂತಹ ವಿಷಯಕ್ಕೆ ಕಲಿಕೆ ಮಾತ್ರ ಬೇಕಾ ನನ್ನ ದ್ವನಿಯಲ್ಲಿನ ನೋವು ಹತಾಶೆ ಭಯ ನಿನಗರ್ಥವಾಗಲೆ ಇಲ್ಲವಲ್ಲ ಅಂತ ಹನಿಗಣ್ಣಾಗಿದ್ದೆ. ಆದರೆ ನನ್ನ ತಂಗಿ ಗೆ ನಾನೇ ಅಮ್ಮನ ಸ್ಥಾನದಲ್ಲಿ ನಿಂತು ಎನು ಮಾಡಬೇಕು, ಇಂತಹ ಗಂಡಸರೇನಾದರೂ ಸಿಕ್ಕಿದ್ದಲ್ಲಿ ಮುಲಾಜಿಲ್ಲದೇ ಗಲಾಟೆ ಮಾಡು, ಕಚ್ಚು, ಪಿನ್ ನಿಂದ ಚುಚ್ಚು ಆದರೆ ಸುಮ್ಮನೆ ನೋವು, ಅವರು ನೀಡುವ ಕಿರುಕುಳ ಅನುಭವಿಸಬೇಡ ಅಂತ ಅಮ್ಮನ ಎದ್ರಿಗೇ ಧೈರ್ಯವಾಗಿ ಅಂದಿದ್ದೆ.
ಆ ದೆಹಲಿಯ ರೇಪ್ ಪ್ರಕರಣದ ಬಳಿಕ ನಾನು ಮತ್ತು 'ಅ' ಫೇಸ್ ಬುಕ್ ಮೆಸೆಜ್ ನಲ್ಲಿ ಚ್ಯಾಟ್ ಮಾಡುವಾಗ ಹಳೆಯದನ್ನೆಲ್ಲ ನೆನಪಿಸಿಕೊಂಡಿದ್ವಿ. ಆ ಮಾಮನ ಇಬ್ಬರ ಮಕ್ಕಳು ಕೂಡ ನನ್ನ ಫೇಸ್ ಬುಕ್ ಫ್ರೆಂಡ್ಸ್. ನಾನು ಮತ್ತು
ಅ' ಇಬ್ಬರೂ ಸೇರಿ ಪುನ: ಆ ಮಾಮನನ್ನು ಭೇಟಿ ಮಾಡಿ ಯಾಕೆ ಅವರು ಹಾಗೆ ಮಾಡುತಿದ್ದದ್ದು ಅಂತ ಕೇಳ ಬೇಕೆಂದು ಕೊಂಡಿದ್ವಿ. ಚಂದದ ಮಡದಿ ಮುದ್ದಾದ ಮಕ್ಕಳು, ಅದಲ್ಲದೇ ಸಿಕ್ಕಿ ಬೀಳುವೆ ಅನ್ನುವ ಭಯ ಇದ್ದರೂ ಕೂಡ ಯಾಕೆ ಹಾಗೆ ಬಿಹೇವ್ ಮಾಡುತ್ತಿದ್ದರು, ಹೆಣ್ಣು ಮಕ್ಕಳಿಬ್ಬರೂ ವಯಸ್ಸಿಗೆ ಬಂದಾಗ ಅವರ ವರ್ತನೆ ಹೇಗಿತ್ತು ಮುಂತಾದದ್ದು ತಿಳಿದು ಕೊಳ್ಳುವ ಕುತೂಹಲ. ಆದರೆ ಅವರ ಕಿರಿಯ ಮಗಳಿಂದ' ಅಮ್ಮ ಎರಡು ವರ್ಷದ ಹಿಂದೆ ಹಿರಿಯ ಮಗಳ ಮದುವೆಯ ದಿನದ ರಾತ್ರಿ ಹೃದಯಾಘಾತಕ್ಕೆ ಗುರಿಯಾಗಿದ್ದರು ಮತ್ತು ಅಪ್ಪನಿಗೆ ಪಾರ್ಕಿನ್ ಸನ್ಸ್ ತಗುಲಿದೆ ಅಂತ ಗೊತ್ತಾಗಿ ನಿಟ್ಟುಸಿರಿಟ್ಟೆ.
ಇನ್ನೊಂದು ಘಟನೆ:
ನಮ್ಮ ಮನೆಯ ಮೇಲಿನ ಫ್ಲ್ಯಾಟ್ ನಲ್ಲಿ ಬಿಜಾಪೂರದಿಂದ ಒಂದು ಕುಟುಂಬ transfer ಆಗಿ ಬಂದಿತ್ತು. ಗಂಡ ಟಿಪ್ ಟಾಪ್ ಡ್ರೆಸ್ ಮಾಡಿಕೊಂಡಿರುವ, ಸೆಂಟು ಪೂಸಿ ಓಡಾಡಿಕೊಂಡಿರುವ ಚೆಲುವ. ಆಕೆ ಪಕ್ಕಾ ಹಳ್ಳಿ ಹೆಂಗಸಿನ ಗೆಟ್ ಅಪ್. ಅಷ್ಟೆ ಅಲ್ಲ 6.2 ಫೂಟ್ ಉದ್ದ. ಅವನೋ ಕುಳ್ಳಗಿನ ಆಸಾಮಿ. ಅದಾಗಲೇ ಮೂರು ಜನ ಗಂಡು ಮಕ್ಕಳು. ಅವಳೋ ಹಳ್ಳಿಯ ಕಾಟನ್ ಸೀರೆ ಮೈತುಂಬ ಹೊದ್ದು ತಲೆಗೆ ಸೆರಗು ಹಾಕಿಕೊಂಡು ಓಡಾಡುವಳು. ಅದೂ ಅವಳ ಉದ್ದನೆಯ ಗಾತ್ರದಿಂದ ಸೀರೆ ಕಾಲ ತನಕ ಬರುತ್ತಲೇ ಇರಲಿಲ್ಲ. ಗಂಡನಿಗೆ ಆಕೆಯೊಂದಿಗೆ ಹೊರಗೆ ಹೋಗಲು ಮುಜುಗರ. ವಿಚಿತ್ರ ರೀತಿಯ ಹಿಂದಿ ಮಾತನಾಡುತ್ತಿದ್ದರಿಂದ ನಮ್ಮ ಮನೆಗೆ ಹೋಗಿ ಬರುವುದು ಎಲ್ಲ ಮಾಡುತ್ತಿದ್ದಳು. ಗಂಡನ ಬಗ್ಗೆ complaints ಸಾಕಷ್ಟು ಇರುತ್ತಿದ್ದವು. ಅದಕ್ಕೆ ಅಮ್ಮ ಮಾಡರ್ನ್ ಡೇ ಪ್ರೋ Higgins ಮತ್ತು ಅಕೆ ಎಲೀಜಾ ಡುಲಿಟ್ಲ್ ಎಂಬಂತೆ ಅವಳ ಸೌಂದರ್ಯದ ಬಗ್ಗೆ ಗಮನ ಹರಿಸಲು ಶುರು ಮಾಡಿದಳು. ಸೀರೆಗೆ ಮೇಲಿಂದ ಒಂದು ಬಟ್ಟೆ ಕೊಟ್ಟು ಹೊಲಿಸಿ ಆಕೆಯ ಪಾದದ ತನಕ ಬರುವಂತೆ ಮಾಡಿದ್ದು, ಅವಳ ಪೊದೆ ಹುಬ್ಬನ್ನು ಬಿಲ್ಲಿನಾಕಾರ ಮಾಡಿಸಿದ್ದು, change of hair style, ಮಾತಿನಲ್ಲಿ ನಯ ನಾಜೂಕು, ಹಿಂದಿ ಹಾಗೂ ಇಂಗ್ಲಿಷ್ ಪಾಠ ಮುಂತಾದವು. ಆಕೇನೂ ಬೇಗ ಬೇಗ ಕಲಿತುಕೊಂಡಳು .ಹೀಗಿದ್ದರೂ ಹೈಟ್ ವಿಷಯದಲ್ಲಿ ಮಾತ್ರ ಯಾವುದೇ ರಾಜಿ ಮಾಡಲಾಗಲಿಲ್ಲ. ಅವನು ಎಷ್ಟೆ ಹೀಲ್ ಶೂ ಧರಿಸಿದರು ಅವಳಿಗಿಂತ ಉದ್ದ ಆಗುವ ಹಾಗೆಯೆ ಇರಲಿಲ್ಲ. ತೊಟ್ಟಿಲ ಮದುವೆ ಯಂತೆ ಅವರದ್ದು. ಹೆಂಗಸು ಉದ್ದಕ್ಕೆ ಬೆಳೆದರೆ ಗಂಡು ಗಿಡ್ಡನಾಗಿ ಉಳಿದು ಬಿಟ್ಟ
ಒಂದು ದಿನ ಆಕೆ ದಿದಿ ದಿದಿ ಅಂತ ಓಡೋಡಿ ಬಂದ್ಲು.
'ಏನಾಯ್ತು'- ಅಮ್ಮ
ದೀದೀ ವೊ ಸಾಮ್ನೆ ವಾಲಾ ಲಡ್ಕಾ ಅಪ್ನಾ ನಿಕ್ಕರ್ ಖೋಲ್ ಕೆ ಉಸ್ಕಾ ವೋ ದಿಖಾ ರಹಾ ಹೈ
ಮೇಲಿನ ಮನೆ ಆಂಟಿಯ (ಆ ವಿಂಗ್ ನ ಎಲ್ಲ ಮನೆಯ )ಅಡಿಗೆ ಮನೆ ಯನ್ನು ಎದುರಿನ ಬಿಲ್ಡಿಂಗ್ ನವರು ಚೆನ್ನಾಗಿ ಕಾಣಬಹುದಿತ್ತು. ಬಹುತೇಕ ಜನರು ಅಡಿಗೆ ಮನೆ ಕಿಟಕಿ ಹಾಕಿ ನೆ ಅಡಿಗೆ ಮಾಡುವವರು. ಅಕ್ಟೋಬರ್ ನಲ್ಲಿ ಅಸಾಧ್ಯ ಸೆಕೆ, ಅದೂ ನಮ್ಮದು ಬೀಚ್ ಬಳಿ ಮನೆ. ಅಡಿಗೆ ಮನೆ ತುಂಬ ಕಾದಿರುತ್ತಿತ್ತು. ನಾವೆಲ್ಲ ಬೆಳಿಗ್ಗೆ ಮುಂಚೆನೆ ಅಡಿಗೆ ಮಾಡಿ ಇಡುವ ಪರಿಪಾಠದವರು. ಆಕೆ ಕೂಡ ಅಡಿಗೆ ಬೇಗ ಮಾಡಿಡುತ್ತಿದ್ದಳಾದರೂ ಮಕ್ಕಳು ಶಾಲೆಯಿಂದ ಬರುವಾಗ ಬಿಸಿ ಬಿಸಿ ರೊಟ್ಟಿ ತಟ್ಟಿ ಕೊಡುತ್ತಿದ್ದಳು. ಈ ದಿನ ಕೂಡ ರೊಟ್ಟಿ ತಟ್ಟುವಾಗ ಆ ದೃಶ್ಯ ನೋಡಿ ಓಡೋಡಿ ಬಂದಳು. ಹಲವಾರು ದಿನದಿಂದ ಆತ ಕಿರುಕುಳ ಕೊಡುತ್ತಿದ್ದರೂ ಇವತ್ತು ಅದು ವಿಕೋಪಕ್ಕೆ ಹೋಗಿತ್ತು. ಅವನು ಕನ್ನಡಿ ಬಿಸಿಲಿಗೆ ಹಿಡಿದು , ಅಂಟಿ ಕೆಲಸ ಮಾಡುವ ಕಡೆ ಅದನ್ನು ಬಿಂಬಿಸುತ್ತಿದ್ದ. ಆ ಬೆಳಕು ಇವರ ಕಣ್ಣಿಗೆ ಬಿದ್ದು reflex ನಲ್ಲಿ ಕಣ್ಣು ಮೇಲಕ್ಕೆ ಹೋಗಿತ್ತು. ಇವರು ನೋಡುತ್ತಿದ್ದಂತೆ ಅವನು ಚಡ್ಡಿ ಬಿಚ್ಚಿ ಅವನ ಅದನ್ನು ತೋರಿಸಿದ್ದ.
(ಆ ಹುಡುಗನ್ನ ಯಾಲ್ ಗಾರ್ ಎನ್ನುವ flop ಸಿನಿಮಾದಲ್ಲಿ ಕಾಣಬಹುದು. ಅವನ ಹೆಸರು ಜೈ ದೀಪ್. ಒಂದು ಸಿನಿಮಾ ಮಾಡಿದ್ದಕ್ಕೆ ಅವನಿಗೆ ಅಷ್ಟೊಂದು ಜೋಶ್.)
ಮುಂಬೈನಲ್ಲಿ ಹೆಚ್ಚಾಗಿ ನಾವು ಟ್ರೈನ್ ಬಸ್ ನಲ್ಲಿ ಓಡಾಡುತ್ತಿದ್ದರೂ public space ನಲ್ಲಿ ಯಾವತ್ತೂ ಇಂತಹ ಘಟನೆ ನನ್ನ ಜತೆ ನಡೆದಿಲ್ಲ , ಆದರೆ ಬೆಂಗಳೂರಿನಲ್ಲಿ ಆಫಿಸ್ ಗೆ ಹೋಗ್ತಾ ಇಂತಹ ಸುಮಾರು ಘಟನೆಗಳು ನಡೆದಿವೆ
1.ಕಂಡಕ್ಟರ್ ಸುಮ್ಮ ಸುಮ್ಮನೆ ತಳ್ಳಿಕೊಂಡು ಹೋಗುವುದು
2. ಇನ್ನೊಂದು ಸಲ ನನ್ನ ಫ್ರೆಂಡ್ ಬಸ್ ನಲ್ಲಿ ಮಲಗಿ ಬಿಟ್ಟಿದ್ದಳು, ನಾನು ಪುಸ್ತಕ ಓದ್ತಾ ಇದ್ದೆ. ಸಡನ್ ಆಗಿ ನನ್ನ ಫ್ರೆಂಡ್ 'ಮಾಲ್ತಿ ನೋಡಿ ಹೆಂಗೆ ಮಾಡ್ತಿದಾರೆ ' ಅಂದ್ಲು. ಸೀಟ್ ಪಕ್ಕ ನಿಂತ ಗಂಡಸು ಬೆರಳಿನಿಂದ ಅವರ ಕುತ್ತಿಗೆಯನ್ನು ಗಿಟಾರ್ ನಂತೆ ಮೀಟಿಸುತ್ತಿದ್ದ. ನನ್ನ ಬಳಿ ಕೊಡೆ ಇತ್ತು ಅದರಿಂದಲೇ ಅವನ ಕೈ ಗೆ ಬಡಿದೆ. ಅಲ್ಲಿಂದ ಹೋಗಿ ಬಿಟ್ಟ. ನನ್ನ ಫ್ರೆಂಡ್ ತಾನಾಗಿ ಅವನಿಗೆ ನಾಲ್ಕು ಚಚ್ಚಬಹುದಿತ್ತು.
3. ಸಾಧಾರಣವಾಗಿ ಹೆಂಗಸರ ಸೈಡ್ ಗೆ ಗಂಡಸರು ಬಂದು ನಿಂತರೆ ನಾನು politely 'please ಹಿಂದೆ ಹೋಗಿ' ಅಂತ ಹೇಳತೇನೆ. ಹೆಚ್ಚಿನವರು ಹೋಗ್ತಾರೆ, ಕೆಲವರು ಕೇಳಿಸಲೇ ಇಲ್ಲೆಂಬಂತೆ ನಿಂತರೆ ನಾನು ಕಂಡಕ್ಟರ್ ಗೆ ಹೇಳ್ತೇನೆ. ಆ ದಿನ ಬಸ್ಸಿನ ಎದುರುಗಡೆಯಿಂದ ಹತ್ತಿದ ಮುದುಕ- ಹಣ್ಣು ಹಣ್ಣು ಮುದುಕ, ಬಾಯಲ್ಲಿ ಒಂದೂ ಹಲ್ಲಿರಲಿಲ್ಲ.ಎದುರಿನ ಲೇಡೀಸ್ ಸೀಟ್ ಪಕ್ಕನೆ ನಿಂತ. ನಾನೂ ಮುದುಕ ಅಂತ ಸುಮ್ಮನಿದ್ದೆ. ಕೆಲ ಸಮಯದ ನಂತರ ನನ್ನ ಎದುರಿಗಿನ ಹುಡುಗಿಯರು ಅಜ್ಜನನ್ನು ನೋಡ್ತಾ ಗುಸು ಗುಸು ಮಾಡುವುದನ್ನು ನೋಡಿದೆ. ಸುಮ್ನೆ ಒಬ್ಸರ್ವ್ ಮಾಡಿದಾಗ ಕಂಡಿದ್ದು ಏನು ಗೊತ್ತ, ಬಸ್ ಬ್ರೇಕ್ ಹಾಕಿದಾಗಲೆಲ್ಲ ಅವನ ಹೆಬ್ಬೆಟ್ಟನ್ನು ಹುಡುಗಿಯರ private part ಗೆ ಚುಚ್ಚುತ್ತಿದ್ದ. ನೀರಿನ ಬಾಟಲಿ ಫುಲ್ ಇತ್ತು ಆ ದಿನ. ಅದರಿಂದಲೇ ಸರೀ ಏಟು ಕೊಟ್ಟೆ ಬೆರಳು ಮುರಿ ಬೇಕು ಹಾಗೆ...ನನ್ನ ಬಾಟಲ್ ಕ್ಯ್ರಾಕ್ ಆಯ್ತು. ಸ್ಟಾಪ್ ಬಂದ ತಕ್ಷಣ ಮುದಿಯ ಇಳಿದು ಹೋದ. ಹುಡುಗಿಯರಿಗೂ ಸರೀ ಗದರಿಸಿದೆ. ಕಂಡಕ್ಟರ್ ಏನು ಏನು ಅಂತ ಕೇಳಿದಳು ಆ ದಿನ ಲೇಡಿ ಕಂಡಕ್ಟರ್..ಹೀಗೆ ಅಂತ ಹೇಳಿದೆ, 'ಸರೀ ಉಗಿ ಬೇಕಿತ್ತು ಮುಖಕ್ಕೆ' ಅಂದ್ಲು
ಇನ್ನು ಏನೇನು ನಡೆಯುತ್ತವೋ ಏನೋ??
ಮಾಲವಿಕಾ ನಿಹಾರಿಕಾ ನೆ ಕೇಳುತ್ತಿರುತ್ತೇನೆ ಕಾಲೇಜು/ ಕೆಲಸಕ್ಕೆ ಅವರೂ ಬಸ್ಸ್ ನಲ್ಲೇ ಓಡಾಡುವುದು. ನಿಹಾ ಗೆ ಆ ತರಹ ಅನುಭವ ಆಗಿಲ್ಲ ಅಂತೆ, ಮತ್ತು ಮಾಲವಿಕ ಳ ಬಳಿ ಯಾವತ್ತೂ ಒಂದು ಪೆನ್ knife ಬ್ಯಾಕ್ ಪ್ಯಾಕ್ ನ ಎದುರಿನ ಜಿಪ್ ನಲ್ಲಿರುತ್ತಂತೆ...ರಶ್ ಇದ್ದಾಗ ಅವಳ ಕೈ ಆ pen knife ಸುತ್ತನೇ ಇರುತ್ತಂತೆ.
ಹೇಳತೇವ ಓದಿ ರೋಷ ಉಕ್ಕಿ ಬಂತು. ಇದಕ್ಕೆಲ್ಲ ಎಂದು ಕೊನೆ??ಇಷ್ಟೆಲ್ಲ ನ್ಯೂಸ್ ಪೇಪರ್/ಜಾಹಿರಾತುಗಳಲ್ಲಿ ಇಂತವರ ಬಗ್ಗೆ ಬರುತ್ತಿದ್ದರೂ ಈ ಕಿರುಕುಳಗಳು ಏನೇನೂ ಕಮ್ಮಿಯಾಗಿಲ್ಲವೆಂಬುದು ದು:ಖದ ಸಂಗತಿ..
Avadhi Mag ನಲ್ಲಿ ಹೇಮಾ ಹೆಬ್ಬಗೋಡು ಅವರ ಕಳವಳ: ಕೆಳಗಿನ ಕೊಂಡಿಯಲ್ಲಿ
ಕೊರಳುಬ್ಬಿಬಂತು 'ಹೇಳತೇವ ಕೇಳಿ' ಓದಿ
:-(

Malathi
ReplyDeleteHow perverted some of these men are! I like the smartness shown by you in each of these mentioned events.
ಒಳ್ಳೆಯ ಪುಸ್ತಕ :)
ReplyDeleteI feel ur mothers generation was very innocent... They never believed something like that cud happen! But I think the generation after that is aware hence cautious... However the old generation men also were scared of society to do anything open but now that's not true.... So every time had/has its own challenges.. We got to be careful and protective parents! :(
ReplyDeleteHope situation may improve in the coming years.
ReplyDeleteAs Jayalakshmi madam said the other day, there may be no woman on this earth who has not undergone this kind of harassment. Male PT teachers are born to behave like what you mentioned I think. The PT teacher in our middle school was also like this. Fortunately, in high school we had female PT teacher.
ReplyDeleteI really appreciate the way you fought to help your friend. Really inspiring.
thanks for the comments Sumathi, Badari, Anonymous, Digital eyes and Radhika!!
ReplyDelete:) the way of expressing it is really passionable and innovative ...liked it :)
ReplyDelete