April 12, 2013

'ವಿಜಯ’ ನಾಮ ಸಂವತ್ಸರ

ಎಲ್ಲರೂ ಯುಗಾದಿ ಹೇಗೆ ಆಚರಿಸಿದಿರಿ?
ಯುಗಾದಿ ಮುನ್ನಾ ದಿನ ಸರೀ ರಾತ್ರಿ ತನಕ ಸಿನಿಮಾ ನೋಡಿ ಆ ಮೇಲೆ ಮಲಗಲಾಗ್ಲೇ ಇಲ್ಲ. ಒಂದು ಸೊಳ್ಳೆ, ಇನ್ನೊಂದು ಸೆಕೆ. ಅದಕ್ಕೆ ಮೂರು ಗಂಟೆಗೆ ಎದ್ದು ಸ್ನಾನ ಮಾಡಿ ದೇವರ ಮನೆ ಕ್ಲೀನ್ ಮಾಡಿ, ನಾಲ್ಕು ಗಂಟೆಗೆ ನಮ್ಮ ದೇವರ ಮನೆ ಲುಕ್ ಹೀಗಿತ್ತು, ವರ್ಷದಲ್ಲಿ ಎರಡು ಬಾರಿ ಮಾತ್ರ ನಾನು ದೇವರ ದೀಪ ಹಚ್ಚುವುದು. ಒಂದು ಯುಗಾದಿಗೆ ಒಂದು ದೀಪಾವಳಿಗೆ.
looks so serene ಅಲ್ವಾ? ನನ್ನ ಕ್ಲಿಕ್
ಪ್ರತೀ ವರ್ಷ ಯುಗಾದಿಗೆ ಮನೆಗೆ ಮಿತ್ರರನ್ನು ಊಟಕ್ಕೆ ಆಹ್ವಾನಿಸುವ ಪರಿಪಾಠ. ಈ ಸಲದ ಆಹ್ವಾನಿತರು ಕಾರಣಾಂತರದಿಂದ ಕೊನೆ ಕ್ಷಣ ಬರಲಾಗುವುದಿಲ್ಲವೆಂದರಿಂದ ಬೇರೆ ಯಾರನ್ನೂ ಕರೆಯುವ ಅಂದ್ರೆ ತೀರಾ ಲೇಟ್ ಆಗಿ ಸರಿ ಕಾಣಲ್ಲ ಅಂತ ಸುಮ್ಮನಾದೆ. ಸೋ ಈ ಸಲ ನಾವು ನಾಲ್ಕೇ ಜನ ಹಬ್ಬ ಮಾಡಿದೆವು. ಕೆಳಗಡೆ ನಮ್ಮ ಯುಗಾದಿಯ ಊಟದ funda. ಮಿತ್ರರು ಬರುವುದಿಲ್ಲ ಅಂದಿದಕ್ಕೆ ಇದರಲ್ಲಿ ಮೂರು ಐಟಮ್ ಕಡಿಮೆ ಮಾಡಿದೆ.
ಮೇಲೆ ವಾಟಿಯಲ್ಲಿರೋದು ಪಂಚಾಮೃತ..the best in the world. no one can make it like me :-)
(ಎಲೆಯಲ್ಲಿ ಬಡಿಸಿದ್ದು : ಉಪ್ಪು,ಅಪ್ಪೆಮಿಡಿ ಉಪ್ಪಿನಕಾಯಿ, ಬೆವು+ಬೆಲ್ಲದ ಮಿಕ್ಸರ್, ಬಾಳೆಕಾಯಿ ಫೋಡಿ, ಮೊಳಕೆ ಬರಿಸಿದ ಹೆಸರುಕಾಳು + ಹಲಸಿನಕಾಯಿ ಘಶಿ, ಎಳೆ ಗೇರು ಬೀಜ + ತೊಂಡೆಕಾಯಿ ಪಲ್ಯ, ಪಾಪಡ್, ಬಾಳೆ ಎಲೆ ಕಡುಬು+ ಹಿಂಗು- ಮೆಣಸಿನ ನೀರು + ಶುಂಠಿ ಚಟ್ನಿ, ಸೌತೆಕಾಯಿ ಪಚ್ಚಡಿ, ಅನ್ನ, ತೊವ್ವೆ, ದೂದ್ ಪಾಕ್ (ಪರಿಮಳದ ಅಕ್ಕಿ+ ಸೀಮೆ ಅಕ್ಕಿ (in milk)ಯಿಂದ ಮಾಡಿದ್ದು ಮತ್ತು ಮಜ್ಜಿಗೆ (items which did not make it to the list = ಬೂದುಗುಂಬಳ ಕೊದ್ದೆಲ್, ದಪ್ಪ ಮೆಣಸಿನ ಬೋಂಡಾ, ಮಾವಿನಕಾಯಿ ಚಿತ್ರಾನ್ನ and ಕೋಕಮ್ ಕಡಿ)
ನಮ್ಮ ಬೇವು ಬೆಲ್ಲದ ಚೂರ್ಣದಲ್ಲಿ ಬೇವು ಕಡಿಮೆ ಹೆಚ್ಚು ಬೆಲ್ಲ.ಅದಕ್ಕೆ ಬಹುಶ: ನಾವು ಖುಶಿ ಖುಶಿಯಾಗಿರುವುದು...(ಮಿತ್ರರೊಬ್ಬರು ಫೋನ್ ಮಾಡಿದಾಗಲೆಲ್ಲ ನನಗೆ 'ಅಧ್ಹೇಗೆ ಯಾವಾಗ್ಲೂ ಖುಶಿಯಾಗಿರ್ತೀರಾ, ನಮ್ಗೂ ಒಂಚೂರು ಹೇಳಿ ಕೊಡಿ ಮ್ಯಾಡಂ ಅಂತ ಕೇಳ್ತೀರ್ತಾರೆ...ಉತ್ತರ ನನಗೂ ಈಗಷ್ಟೆ ಹೋಳೀತು) :-)

ಡಾಕ್ಟರ್ ನನಗೆ ಆದಷ್ಟು ಕೆಲಸಗಳನ್ನು ನಿದಾನಕ್ಕೆ ಮಾಡುವ ಸಲಹೆ ನೀಡಿದ್ದಾರೆ c/o ನನ್ನ ಬೆನ್ನು ನೋವು ( c/o breakfast at Koshy's a few days ago -c/o auto which jumped into a pothole- c/o Bangalore roads ). ಆದರೂ 11.00 ಗಂಟೆಗೆ ನನ್ನ ಎಲ್ಲ ಕೆಲಸಗಳು ಮುಗಿದು, ಮಕ್ಕಳನ್ನು ಸಿಕ್ಕಾಪಟ್ಟೆ ಗೋಳು ಹೊಯ್ದೆ. ಯಾಕೆಂದರೆ ನನ್ನ new year resolution ನಲ್ಲಿ ಮಾತು ಕಡಿಮೆ, ನಗು ಕಡಿಮೆ ಹಾಗೂ ಫೇಸ್ ಬುಕ್ ಕಡಿಮೆ ಮಾಡುತ್ತೇನೆಂದು ಹೇಳಿದ್ದೇನೆ. ಅದಕ್ಕೆ ಪೂರ್ತಿ ವರ್ಷದ quota ನಿನ್ನೆ ಮುಗಿಸಿದೆ. :-)

ಇವತ್ತು ಅಡಿಗೆಗೆ ಮತ್ತು intestine ಗೆ ರಜೆ. ಹಾಗಾಗಿ ಇವತ್ತು ’ಸಿಂಪಲ್ಲಾಗ್ ಒಂದು ಮೊಸರನ್ನ’ ಇನ್ನೊಂದು ರೀಸನ್ for  ಮೊಸರನ್ನ ಏನಪ್ಪಾ ಅಂದ್ರೆ ಮಾವಿನ ಕಾಯಿ ಚಿತ್ರಾನ್ನಕ್ಕೆ ಅಂತ ಮಾಡಿಟ್ಟಿದ್ದ ಅನ್ನ ಮುದ್ದೆ ಆಯ್ತು. ಅದು ತಣಿದ ಮೇಲೆ ಫ್ರಿಜ್ ನಲ್ಲಿಟ್ಟೆ. ಇವತ್ತು ಅದು ಮೊಸರನ್ನ ಆಗುವುದು with ಮೊಳೆತ ಹಸುರುಕಾಳಿನ ಉಸ್ಲಿ....

’ವಿಜಯ’ ನಾಮ ಸಂವತ್ಸರ ದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ. ನವನವೋನ್ಮೇಷಶಾಲಿನಿ’ (ನವನವೋನ್ಮೇಷಶಾಲಿನಿ = ನವ+ನವ+ ಉನ್ಮೇಷ + ಶಾಲಿನಿ = ಹೊಸತು + ಹೊಸತಾಗಿ + ಅರಳುವ + ಕಾಲಮಾನ) ಯಾಗಿರಲಿ. ಈ ಪದ ವನ್ನು ಫೇಸ್ ಬುಕ್ ನ ಪದಾರ್ಥಚಿಂತಾಮಣಿಯಲ್ಲಿ ಓದಿ ತುಂಬ ಖುಶಿಯಾಗಿ ಇದನ್ನು ಬಳಸಿಕೊಂಡಿದ್ದೇನೆ.
ಈ ವರ್ಷ ನನ್ನ best wishes go to both the Ravindra's (Ravindra M and Ravindra V) and the young couple whom we  missed lunching with
love you all guys. My blog now has 50000+ visitors and quite a few  repeat visitors. Was sharing with Malavika 'what do people find in this silly blog of mine' and she said 'whatever! i want a treat' so off we went to MTR and had strawberry double dhamaka, falooda and honey and nut icecream. like i said 'treat ke liye koyi bhi bahana chalega',
Special thanks to kannadabloglist and Digital eyes for i find many people directed to this blog from their site, and to also a few others who have listed my blog in theirs.
thanks and have a great year once again

:-)

17 comments:

  1. ತಮ್ಮ ಬೆನ್ನು ನೋವು ಬೇಗನೇ ವಾಸಿಯಾಗಲಿ. ತಮ್ಮ ಹಬ್ಬದ ಆಚರಣೆಯ ಚಿತ್ರಗಳು ಸೂಪರ್ರು.

    ReplyDelete

  2. "ತೇಯುತಲಿದ್ದರೂ ಗಂಧದ ಪರಿಮಳ ತುಂಬಿ ಬರುವುದು" ಎನ್ನುವ ಹಾಡಿನಂತೆ ನೀವು ಬರೆದಾಗೆಲ್ಲ ಹೊಸ ಹೊಸ ರೀತಿಯ ವಿಭಿನ್ನ ಲೇಖನಗಳು ಮೂಡಿಬರುತ್ತಿವೆ. ಆಗಸದಲ್ಲಿ ಮೋಡಗಳು ಚಲಿಸುತ್ತಾ ಒಂದೊಂದು ಆಕಾರ ಪಡೆಯುವಂತೆ.. ನಿಮ್ಮ ಪ್ರತಿ ಲೇಖನಕ್ಕೂ ಒಂದು ಸನ್ನಿವೇಶ ಸೃಷ್ಟಿಯಾಗಿರುತ್ತೆ. ಹಬ್ಬವನ್ನು ಆಚರಿಸುವ ವಿಶಿಷ್ಟ ಪರಿಯ ಜೊತೆಯಲ್ಲೇ ಕಾಣಿಸಿದ ಅಡುಗೆಗಳು ಬಾಯಲ್ಲಿ ನೀರುಬರಿಸುತ್ತವೆ. ಹೊಸ ವರ್ಷದ ನಿಯಾಮಾವಳಿಗಳನ್ನು ತಪ್ಪದೆ ಪಾಲಿಸ "ಬೇಡಿ". ನಿಮ್ಮ ಲೇಖನಗಳು ಮೂಡಿಬರುತ್ತಿರಲಿ. ಹೊಸವರ್ಷದ ಶುಭಾಶಯಗಳು! ಚಿತ್ರಗಳು ಸೂಪರ್. ಅರ್ಧ "ಲಕ್ಷ" ದಾಟಿದ ಭೇಟಿಗರ ಸಂಖ್ಯೆ.. ಎಲ್ಲರ "ಲಕ್ಷ್ಯ"ವನ್ನು ಸೆಳೆದಿರುವದರ ಸಂಕೇತ! ಅಭಿನಂದನೆಗಳು

    ReplyDelete

  3. ಅಭಿನಂದನೆಗಳು ನಿಮಗೆ,
    ನಮ್ಗೆ ಟ್ರೀಟ್ ಎಲ್ಲಿ ? (ಚಿತ್ರ ತೋರ್ಸಿ ಇಷ್ಟೇ ಆನ್ಬೇಡಿ :))
    ಕೊನೆ ನಿಮಿಷವೇನು, ಬಾಳೆ ಮೇಲೆ ಬಡಿಸಿ ಆದ ಮೇಲೆ ಕರೆದ್ರೂ ಓಡೋಡಿ ಬರ್ತಿದ್ದೆ :( ಛೇ
    ನಿಮ್ಮೆಲ್ಲರಿಗೂ ಶುಭಾಷಯಗಳು

    ReplyDelete
  4. Congrats Malathi! Impressive festive menu :-)

    ReplyDelete
  5. Tendle bibbe upkari is the one... Which I miss most here...btw didn't u make panaka?!

    ReplyDelete
  6. Also I liked the new word introduction... Took me back to my Kannada grammar class of sandhi :) as per me this is a good example of aadesha Sandhi... Akarakke ukara aadesha wagi okara !!

    Also silly blog is famous because its silly... Let it be silly don't grow up;)

    ReplyDelete
  7. thank you thank you Badari, Srikanth Manjunath, Swarna :-)
    Anonymous ji maharaj: u miss tendle aNi bibbyaa upkari?? where r u? (no pls dont answer this question):-)
    In Bangalore we get them in Mangalore stores. only i book them in advance 140 Rs for 100 bibbo's..:-)
    we were in Udupi for a period of 1 and half years. i had the luck of sampling the bestest tenderest bibbos, thanks to a drunkard, who used to sell it to me cheaply..enough money for his KhoTTe sharabu....so much i used ti make plain bibbya upkari/ambat etc.my parents who visited me from Mumbai also got to taste them/enjoy them.. mmmmmmmmmm lovely though now i feel sort of guilty cos it was as if i gave him money to drink.. my girls remember the tender bibbo taste even now......sigh..
    thanks for the permission for me to be silly...:-)
    We prepare panaka for Ramnavami...
    malathi S

    ReplyDelete
  8. Oh ho I was about to say where am I... But...now you have told me not to say!
    Btw why Maharaj!? Why not maharani ;) ?!
    Also u get very good bibbo in and around sitanadi to kundapura

    ReplyDelete
  9. ಓಹ್ ಯಾರು ಬರಲಿಲ್ಲವೆಂದರೆ ಏನಂತೆ ನಮ್ಮನ್ನ ಕರೆದಿದ್ರೆ ಬರ್ತಾ ಇದ್ವಪ್ಪ...ಹಹಹ ಲೇಖನ ನವೋಲ್ಲಾಸದಿಂದ ಓದಿಸಿಕೊಂಡು ಹೋಗುತ್ತೆ ನೀವು ಅಷ್ಟ್ ಚೆನ್ನಾಗಿ ಬರಿತೀರಿ.

    ReplyDelete
  10. another lively post from u, Same pinch Malati Akka..atleast in Deepa hacchingu..;P

    ReplyDelete
  11. Festival food picture looks so tempting.. Salivating here. Happy to see my blog name here. Thanks for mentioning my blog name :-)

    ReplyDelete
  12. ಹಬ್ಬದ ಅಡಿಗೆ ವಿಶೇಷ ನೋಡಿ ಆ ಫ್ರೆಂಡ್ಸ್ ಬರದಿದ್ರೂ ನಮ್ ಕರೆದರೆ ಚೆನ್ನಾಗಿತ್ತು ಅನ್ಸಿಬಿಡ್ತು :P .. ಯುಗಾದಿಯ ಶುಭಾಶಯ.. ನವೋಲ್ಲಾಸ ಚಿಮ್ಮುತಿರಲಿ....

    ReplyDelete
  13. Rajesh! thank you.u r welcome to visit us when u r visiting India
    btw ur blog doesnot open. it says profile not found..yaake??

    thanks (Veena Bhat)Mouna Veene...banni nammenege u r welcome!! nimagoo habbada shubhashayagaLu...thanks for peeping in. nimma post gaLu chikkadaagi chennagive. read two posts. will visit again soon
    love
    :-)
    malathi S

    ReplyDelete
  14. Mal, as usual, chandada baraha.. baayalli neeru ooristu.. baalekai podi maadodu hege?

    eshtu simple aagi, aaptavaagi bareyutteeri neevu!

    ReplyDelete