ಗಿಂಗಿ ಫೋರ್ಟ್ ಪೋಸ್ಟ್ ಗೆ ಸ್ವಲ್ಪ ಕಾಯಬೇಕಾಗುತ್ತೆ. ಮಾಲವಿಕಾ ನ ಲ್ಯಾಪ್ ಟಾಪ್ ನನ್ನ ಕೈಗೆ ಸಿಗ್ತಾ ಇಲ್ಲ. :-) ಹಾಗಾಗಿ ಸುಮ್ನೆ ಒಂದು ಲಹರಿ....
ಕೆಲವೊಮ್ಮೆ ಮಾಲವಿಕ ಅವಳ ಆಫ್ ದಿನ ಇದ್ದಾಗ ನನಗೆ ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾಗೆ ಕರೆದುಕೊಂಡು ಹೋಗ್ತಾಳೆ. ಥಿಯೇಟರ್ ಗಳಲ್ಲಿ ಸಿನಿಮಾಗಳನ್ನು ನೋಡುವುದೆಂದರೆ ನಾ ಕಳ್ಳಿ. ಯಾಕೆಂದರೆ ಕೆಟ್ಟ ಹಾಡುಗಳಿದ್ದರೆ ಅದನ್ನು ನೋಡೇ ತೀರಬೇಕು. ಮನೆಯಲ್ಲಾದರೆ ಹಾಡು ಇಷ್ಟ ಆಗದಿದ್ದರೆ ಅವನ್ನು ಮುಂದಕ್ಕೋಡಿಸಬಹುದು. ಮನೆಯಲ್ಲಿ ಅಂದ್ರೆ ಸಿಸ್ಟಮ್ ನಲ್ಲಿ ನೋಡೋದು ನಾ ಸಿನಿಮಾ. ಇತ್ತೀಚೆಗೆ ಅವಳು ನನ್ನನ್ನು ನಿಹಾಳನ್ನು (ನಿಹಾ ಗೆ ಆ ದಿನ ರಜೆ ಇತ್ತಾ ಅಥವ ಕಾಲೇಜ್ ಗೆ ಚಕ್ಕರ್ ಹಾಕಿದ್ದಳಾ ಗೊತ್ತಿಲ್ಲ) ಮಾಲವಿಕಾಳಿಗೆ ಮಧ್ಯಾಹ್ನದ ನಂತರ ಬೇರೆ ಕೆಲಸ ಇತ್ತು ಹಾಗೂ ಬೆಳಗ್ಗಿನ ಶೋ ಗೆ ಕಡಿಮೆ ರೇಟ್ ಅಂತಪ್ಪ, ಹಾಗಾಗಿ ಇಂಗ್ಲಿಶ್ ವಿಂಗ್ಲಿಶ್ ಸಿನಿಮಾಗೆ ಬೆಳಿಗ್ಗೆ 10.30 ಶೋ ಗೆ ಹೊರಟ್ವಿ. ಮಾಲವಿಕಾ ತಲೆ ಸ್ನಾನ ಎಲ್ಲ ಮಾಡಿ ಬಂದು ಸ್ವ್ಲಲ್ಪ ಲೇಟ್ ಆಯ್ತು. ನಾನು ಒಂದು ಚೂಡಿದಾರ ಹಾಕ್ಕೊಂಡಿದ್ದೆ. ಆದರೆ ಅದರ ಓಢನಿ ಸಿಗಲಿಲ್ಲ. ಬೇರೆ ಡ್ರೆಸ್ ಗಳಿಗೆ ಇಸ್ತ್ರಿ ಇರಲಿಲ್ಲ. ಸೀರೆ ಉಡುವ ಮೂಡ್ ಹಾಗೂ ವೇಳೆ ಕೂಡ ಇರಲಿಲ್ಲ. ಮತ್ತು ಈ ಫಿಲ್ಮ್ ದಿಢೀರ್ ಐಡಿಯಾ. ಹಾಗಾಗಿ ಟಿಕೆಟ್ ಕೂಡ ಮುಂಚಿತವಾಗಿ ಕಾಯ್ದಿರಿಸಿರಲಿಲ್ಲ. ನಾವು ಹೋಗುವಾಗ ಟ್ರಾಫಿಕ್ ಕೂಡ ಇತ್ತು. ಮಲ್ಲೆಶ್ವರಂ ನ ಮಂತ್ರಿ ಸ್ಕೇರ್ ನಲ್ಲಿ ಸಿನಿಮಾ. ಅಲ್ಲಿ ತಲುಪುವಾಗ ದೊಡ್ಡ ಲೈನ್. ಬೇರೆ ಎರಡು ಸಿನಿಮಾ ಸೋಲ್ಡ್ ಅಔಟ್ ಅಂತ ಹಾಕಿದ್ದರು. ಆ ದಿನ ಬುಧವಾರ. ನಾನಂತೂ ಅಷ್ಟು ರಶ್ expect ಮಾಡಿರಲಿಲ್ಲ, ಮಾಲವಿಕ ಸರತಿ ಸಾಲಿನಲ್ಲಿ ನಿಂತಳು. ನೋಡ ನೋಡುತ್ತಿದ್ದ ಹಾಗೆ ಅವಳು ಕೌಂಟರ್ ಬಳಿ ತಲುಪಿದಳು. ಆಗ ನಾನು ಆ ಹಿರಿಯ couple ಅನ್ನು ನೋಡಿದೆ. ಗಂಡ ಕಷ್ಟಪಟ್ಟು ಸೆಕ್ಯುರಿಟಿಯವರು ಹಾಕಿದ್ದ ರೋಪ್ barricade ಒಳಗೆ ನುಸುಳಿದರು. ಹೈಯರ್ ಪಿನ್ ಬೆಂಡ ನ ಮಾದರಿಯಲ್ಲಿ ಟಿಕೆಟ್ ಕೊಳ್ಳುವವರ ಲೈನ್ ಮೂರು ಸುತ್ತು ತಿರುಗಿ ಕೌಂಟರ್ ಬಳಿ ತಲುಪುತಿತ್ತು. ಆಗಲೇ ಸಿನಿಮಾ ಶುರು ಆಗುವ ಟೈಮ್ ಕೂಡ ಆಯ್ತು. ನಾನು ಆ ವಯಸ್ಸಾದವರ ಹೆಂಡತಿ ಬಳಿಗೆ ಹೋಗಿ 'ವ್ಹಿಚ್ ಪಿಕ್ಚರ್' ಅಂತ ಕೇಳಿದೆ. ಅವರು ಇಂಗ್ಲಿಶ್ ವಿಂಗ್ಲಿಶ್, ಆದರೆ ಟಿಕೆಟ್ ಸಿಗೋದು ಡೌಟ್ ಅಂತ ಬೇಸರದಿಂದ ಹೇಳಿದರು. ನಾವು ಅದನ್ನೆ ನೋಡಲಿಕ್ಕೆ ಬಂದಿರುವುದು. ನನ್ನ ಮಗಳು ಕೌಂಟರ್ ಬಳಿ ಇದ್ದಾಳೆ. ನಿಮಗೂ ಟಿಕೆಟ್ ತೆಗೆಸಲಾ ಅಂತ ಕೇಳಿದೆ. ಅವರು ಗಂಡನ ಒಟ್ಟಿಗೆ ಸಮಾಲೋಚಿಸಿದರು. ನಾನು ಅವರ ಬಳಿ ಹೋದೆ. ಅರೇ ಅವರು ಕೊಂಕಣಿ ಮಾತಾಡ್ತಾ ಇದ್ದರು. ನಾನು ಕೊಂಕಣಿ ಮಾತಾಡಲು ಶುರು ಮಾಡಿದೆ. ಆ ಹಿರಿಯರು ಕೂಡ ಓ ಕೆ ಅಂದರು. ನಾನು ನಿಂತಲ್ಲಿಂದಲೇ ಮಾಲವಿಕಾಳಿಗೆ ಕೂಗಿದೆ. ಅವಳು ತಿರುಗಿದಾಗ ಕೈ ಸನ್ನೆಯಲ್ಲೇ ಆ ಹಿರಿಯರನ್ನು ತೋರಿಸಿ 5 ಬೆರಳು ತೋರಿಸಿ 5 tickets ಅಂದೆ. ಅವಳು ಟಿಕೆಟ್ ತರುವ ಮುಂಚೆನೆ ಆ ಹಿರಿಯರು ನನಗೆ ಅದರ ಟಿಕೆಟ್ ನ ದುಡ್ಡು ಕೊಡಲು ಬಂದರು. ನಾನು 'ಮೊದಲು ಟಿಕೆಟ್ ಕೈ ಗೆ ಬರಲಿ , ಆ ಮೇಲೆ ಡುಡ್ಡು ಕೊಡುವಿರಂತೆ, ಅಷ್ಟರ ತನಕ ಅಲ್ಲಿ ಕೂತುಕೊಳ್ಳಿ ಅಂತ, ಆಗಷ್ಟೆ ತೆರವಾಗಿದ್ದ ಕೂತುಕೊಳ್ಳುವ ಜಾಗವನ್ನು ತೋರಿಸಿದೆ. ಅವರು ಕುಳಿತಿಕೊಂಡರು. ಮಾಲು ಟಿಕೆಟ್ ತಂದು ಅವರಿಗೆ ಕೊಟ್ಟು ದುಡ್ಡು ಇಸಕೊಂಡಳು. ಆ ಮೇಲೆ ಥೀಯೇಟರ್ ಒಳಗೆ ಹೋಗಲು ಸೆಕ್ಯುರಿಟಿ ಚೆಕ್ ಬಳಿ ಹೋದೆವು. ಅವರು ನಮ್ಮನ್ನು ಹಿಂಬಾಲಿಸಿದರು. ಹೇಗೂ ನಮ್ಮ ಬಳಿಯ ಸೀಟು. ನನ್ನ ಬಳಿ ನೀರಿನ ಬಾಟಲ್ ಇತ್ತು. ಅದಕ್ಕೆ ಲೇಬಲ್ ಕೂಡ ಇತ್ತು. ಚೆಕ್ ಮಾಡುವ ಹೆಂಗಸು ಆ ಲೇಬಲ್ ಅನ್ನು ಕಿತ್ತು ಬಾಟಲಿ ನನಗೆ ವಾಪಸ್ ಕೊಟ್ಟಳು. ಒಳಗಡೆ ತಿಂಡಿ ನೀರು ತೆಗೆದುಕೊಂಡು ಹೋಗುವ ಹಾಗಿರಲಿಲ್ಲ.

ಸಿನಿಮಾ ತಕ್ಕ ಮಟ್ಟಿಗೆ ಚೆನ್ನಾಗಿತ್ತು. ಅಂದರೆ 10 ರಲ್ಲಿ 7.5 ಕೊಟ್ಟೆ ನಾನು. ಇಂಟರ್ ವೆಲ್ ನಲ್ಲಿ ನನ್ನ ಪಕ್ಕದಲ್ಲಿ ಕೂತ ಮಾಮಾ ನೊಂದಿಗೆ ಮಾಲವಿಕ ತಂದ ಬಿಸಿ ಬಿಸಿ ಚೀಸಿ popcorn ಶೇರ್ ಮಾಡ್ತಾ-(ಕೊಂಕಣಿಯವರು ತುಂಬ easily ಮಾಮು ಮಾಯಿ ಸಂಬೋಧನೆಗೆ ಇಳಿದುಬಿಡ್ತೀವಿ)ನೀರು ಬೇಕಾ ಅಂತ ಕೇಳಿದೆ? ಹೌದು ಗಡಿಬಿಡಿಯಲ್ಲಿ ನೀರು ತರಲು ಮರೆತು ಹೋಯ್ತು. ಮತ್ತೆ ಹೊರಗಡೆ ಹೇಗೂ ನೀರು ಸಿಗುತ್ತಲ್ಲವ ಅಂತ ಅದರ ಬಗ್ಗೆ ತಲೆ ಕೆಡಸಿಕೊಳ್ಳಲಿಲ್ಲ. ನನಗೆ ಈ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವುದೆಂದರೆ ಆಗುವುದಿಲ್ಲ. ಇವಳ ಪಿರಿಪಿರಿಗೆ ಬಂದೆ' ಅವಳು ಅವಳ ಮಹಿಳಾ ಮಂಡಲಿ ಮಹಿಳೆಯರ ಜತೆ ಸಿನಿಮಾಗೆ ಹೋಗ್ತಿರುತ್ತಾಳೆ. ನಮಗೆ ಬರುವಾಗ ದಾರಿ ತಪ್ಪಿತು ಹಾಗಾಗಿ ತಲುಪಲು ವಿಳಂಬ ವಾಯ್ತು' "ನನಗೂ ಥಿಯೇಟರ್ ನಲ್ಲಿ ಸಿನಿಮಾ ನೋದುವುದೆಂದರೆ ಸ್ವಲ್ಪ ಕಿರಿಕಿರಿನೇ. ಆದರೆ ಈ ಸಿನಿಮಾದ ಟ್ರೈಲರ್ ನೋಡಿ ಚೆನ್ನಾಗಿರಬಹುದೆಂದು ಬಂದೆ' ಅಂತಂದೆ.. ಹಾಗೆ......
"ಹೇಗೆ ಬಂದ್ರಿ?"
"ಸ್ಕೂಟರ್ ನಲ್ಲಿ'
"ಎಲ್ಲಿ ಮನೆ"
"ಮಹಾಲಕ್ಷ್ಮೀಪುರಂ"
"ಅರೇ, ನಾವು ಕೂಡ ಅಲ್ಲಿಂದಲೇ ಬಂದಿದ್ದು "
ಹೀಗೆ ಮಾತಾಡ್ತಾ ಮಾತಾಡ್ತಾ ಅವರು ನಮ್ಮ ಮಹಾಲಕ್ಷ್ಮಿಪುರಂ ಆಫಿಸ್ ನ ಬಳಿಯಲ್ಲಿ ಇರುವುದು, ನಮ್ಮ ಆಫಿಸ್ ಬೋರ್ಡ್ ನೋಡುತ್ತಿರೋದು' ನಾನು ನಮ್ಮ ಆಫಿಸ್ ಶುರು ಮಾಡಿದ ಸಾಹಸಗಳು, ಬೆಂಗಳೂರಿಗೆ 11 ವರ್ಷದ ಹಿಂದೆ ಬಂದಿದ್ದು ಎಲ್ಲ ವಿನಿಮಯ ಮಾಡಿಕೊಂಡ್ವಿ. ಅಷ್ಟೆ ಅಲ್ಲ' ನಿಮ್ಮ ಮಗಳಿಗೆ ಥ್ಯಾಂಕ್ಸ್ ಹೇಳಿ' ಎಷ್ಟು ಒಳ್ಳೆ ಮಕ್ಕಳು ನಿಮ್ಮನ್ನು ನೋಡಿತ್ತಿದ್ದರೆ ಖುಶಿ ಆಗ್ತದೆ. ಫ್ರೆಂಡ್ಸ್ ತರಹ ಇದ್ದೀರಿ ಮೂರು ಜನ ಅಂದರು.
ನಾನು ಮುಂಬೈ ನಲ್ಲಿ ಹುಟ್ಟಿ ಬೆಳೆದದ್ದು, ಶ್ರೀಕಾಂತ ತೀರ್ಥಹಳ್ಳಿಯವರು ಅಂತೆಲ್ಲ ಅಂದಾಗ ಹಿರಿಯರು full alert
'ತೀರ್ಥಹಳ್ಳಿಯಲ್ಲಿ ಯಾರ ಮನೆ"
ನಾನು ಹೇಳಿದೆ
ನೋಡಿದ್ರೆ ನನ್ನ ಎರಡನೆ ಓರಗಿತ್ತಿಯ ಹತ್ತಿರದ ಸಂಬಂಧಿಕರು ಆಗಿದ್ದರವರು. ಖ್ಯಾತ ಉದಯೋನ್ಮುಖ ಹಾಡುಗಾರ್ತಿ ಮಾಹಾಲಕ್ಶ್ಮಿ ಶಣೈ ಅವರ ತಂದೆಯ ಸೋದರ ಅಂತ ತಿಳಿಯಿತು. ಆ ಮೇಲೆ ಶುರು ಆಯ್ತು ಅವರು ಗೊತ್ತಾ ಇವರು ಗೊತ್ತಾ...ಈ ಸಂಬಂಧಗಳನ್ನು ವಿವರಿಸುವುದಲ್ಲಿ ನಾನು ದೊಡ್ಡ faliure.ಮತ್ತೆ inevitably we end up being related to each other in some ಬಾದರಾಯಣ way. :-) ಮತ್ತೆ ದೊಡ್ಡ ಮಗಳಿಗೆ ಮದುವೆ ಮಾಡ್ತೀರಾ ಅಂತ ಕೇಳಿದರು. ಇಲ್ಲ ಮುಂದಿನ ವರ್ಷ ಅದರ ಬಗ್ಗೆ ಡಿಸೈಡ್ ಮಾಡ್ತೀವಿ ಅಂದೆ. ಅವರ ಮಗ ಹೊರ ದೇಶದಲ್ಲಿರೋದು ಹೇಳಿದರು. ಕಂಪ್ಯೂಟರ್ ಇ-ಮೈಲ್ , ಸ್ಕೈಪ್ ಎಲ್ಲ ಕಲಿತು ಕೊಂಡಿದ್ದರು. ಬನ್ನಿ ಮಾಮಾ ಮನೆಗೆ ಆಫಿಸ್ ಹತ್ತಿರನೇ ಮನೆ ಅಂದೆ. ಸಿನಿಮಾ ಮುಗಿದ ಮೇಲೆ, ಬನ್ನಿ ನಮ್ಮ ಜತೆ ಇಲ್ಲೆ ಊಟ ಮಾಡಿ ಅಂತ ಅಹ್ವಾನಿಸಿದೆ. ಬೇಡ ಅಂತ ನಯವಾಗಿ ನಿರಾಕರಿಸಿ ಅವರು ಹೊರಟು ಬಿಟ್ಟರು.
ಇವತ್ತು ಹಾಲು ತರಲು ಹೋದಾಗ ಅವರನ್ನು ನೋಡಿದೆ.
ಅರೆ ಮಾಮಾ ಏನು ನೀವಿಲ್ಲಿ ಅವರಿಗೆ ನನ್ನ ನೆನಪು ಇರಲಿಕ್ಕಿಲ್ಲ ಅಂತ ತಿಳಿದುಕೊಂಡಿದ್ದೆ
ಅರೆ ಮಗು ನೀನು ಇಲ್ಲಿ ಅಂತ ಕೇಳಿದರು. ನನ್ನ ಮನೆ ಇಲ್ಲೇ ಈ ದೇವಸ್ಥಾನದ ಹಿಂದೆ ಅಂತ ಹೇಳಿದೆ, ಹಾಗೇ 'ಅಲ್ಲ ನಿಮ್ಮ ಮನೆ ಬಳಿಯೇ ನಂದಿನಿ ಹಾಲಿನ ಬೂತ್ ಇದೆಯಲ್ಲ' ಇಷ್ಟು ದೂ ರ ಯಾಕೆ ಬಂದ್ರಿ" (ನಮ್ಮ ಮನೆ ಕಡೆ ಬರಬೇಕಾದ್ರೆ ರಸ್ತೆ ಸ್ವಲ್ಪ uphill ಇದೆ
ಒಂದು ವಾಕ್ ಆಗುತ್ತಲ್ಲವ ಮಗು. ಹಾಗೆ ಸ್ವಲ್ಪ ತರಕಾರಿ ಒಯ್ಯುವ ಅಂತ ಬಂದೆ' ಹೌದು ನಮ್ಮ ಮನೆ ಬಳಿ costly but ತಾಜಾ ತರಕಾರಿ, ಮಂಗಳೂರಿನ ಸ್ಪೆಷಲ್ ತರಕಾರಿ/ ದಿನಸಿ/ತಿಂಡಿಗಳನ್ನು ಮಾರುವ 'ಮಂಗಳೂರು ಸ್ಟೋರ್ಸ್' ಇದೆ
ಬನ್ನಿ ಮಾಮಾ ಮಾಯಿಯನ್ನು ಕರೆದುಕೊಂಡು ಅಂತ ಆಹ್ವಾನ ನೀಡಿದೆ. ಆಯ್ತು ಮಗು ಮನೆ ಗೊತ್ತಾಯ್ತಲ್ಲ ಬರ್ತೇನೆ ಅಂದ್ರು
ಹೆಂಗೆ???
:-) :-)
Good one! Amidst the conversation, did you watch English-Vinglish by the way?
ReplyDeleteconversation was during the intermission and whilst leaving the cinema hall Radhika
ReplyDelete:-)
malathi S
ಹಿಂದಿ ಚಿತ್ರ ಆನಂದ್ ನಲ್ಲಿ ರಾಜೇಶ್ ಖನ್ನ ಪಾತ್ರದಾರಿ ಹೇಳುವಂತೆ ಪ್ರತಿಯೊಬ್ಬರಲ್ಲೂ ಟ್ರಾನ್ಸ್ ಮೀಟರ್ ಮತ್ತು ರಿಸೀವರ್ ಇರುತ್ತೆ. ವಿಬ್ರತಿಒನ್ ಸಿಕ್ಕಿದೆ ಅಂದ್ರೆ ಸೆಳೆದು ಬಿಡುತ್ತೆ ಅಂತ. ಈ ಮಾತಿಗೆ ಪರ್ಫೆಕ್ಟ್ ಉದಾಹರಣೆ ಈ ನಿಮ್ಮ ಲೇಖನ ಹಾಗು ಅನುಭವ. ಜಲಪಾತದ ನೀರು ಹರಿಯುವಂತೆ ಯಾವುದೇ ವಿಷಯವನ್ನು ಮನಮುಟ್ಟುವ ಹಾಗೆ ವಿವರಿಸುವ ರೀತಿ ಸೂಪರ್. ಸುಂದರ ಲೇಖನ ಮಾನವತಭಾವವನ್ನು ಪರಿಚಯಿಸುವಲ್ಲೇ ಮಾನವ ಸಂಘಜೀವಿ ಎಂಬುದನ್ನು ನಿರೂಪಿಸುತ್ತದೆ
ReplyDeletethank you Srikanth Manjunath
ReplyDelete:-)
ms
ಎಲ್ಲೋ ನಮ್ಮ ಊರಿನವರು ಸಿಕ್ಕಾಗ ಅವರು ನಮ್ಮ ಬಾದರಾಯಣ ಸಂಬಧಿಕರು ಎಂದು ಗೊತ್ತಾದಾಗ ಒಂದು ತರಹ ಖುಷಿಯಾಗುತ್ತೇ ಅಲ್ಲವೇ?
ReplyDeleteನನಗಂತೂ ಮ0ಗಳೂರು ಸ್ಟೋರ್ಸ್ ಇಷ್ಟ.
One fact ur friend doesn't know is transmitter and receiver works best when it is in kasane kitte, tumka khaiyin ?! Thirthahalli ve !? Thai konal ghara?! Kirlu khalla ve hain seasonanthu... Oh tummi patraDeka god ghaltave...?! How abt writing a blog on these very own funny yet interesting conversations!!?
ReplyDeletehoudu Badari Bhaiyya!!
ReplyDeleteThank u anonymous ji for the suggestion. i will soon..
:-)
malathi S