March 16, 2013

ಹಾಗಲಕಾಯಿ ಮಾವಿನಕಾಯಿ ಮೆಣ್ಸಗಾಯ್

ಹಿಂದಿನವಾರ ಅಮ್ಮ ತಮ್ಮಂದಿರ ಬಳಿ ಎರಡು ದಿನ ಇದ್ದು ಬರುವಾ ಅಂತ ಹೋಗಿದ್ದೆ. ಅಲ್ಲಿನ ಮೈನ್ attraction ನನ್ನ ಎರಡನೇ ತಮ್ಮನ ಮಗಳು ಸ್ಯಾಮಿ. ನನ್ನ ಪ್ರೀತಿಯ ಸ್ಯಾಮ್, ಸ್ಯಾಮಸಂಗ್, ಸ್ಯಮೋ, ಮೋಗ್ ಬಾಬು etc etc. ನಾ ಯಾವುದೇ ಹೆಸರಿನಿಂದ ಕರೆದ್ರೂ 'ಓ ಮಾಲತಿಯಕ್ಕ' ಅನ್ನುತ್ತಾಳೆ. ಈಗ ಅವಳ ಮನೆಯಲ್ಲಿ ಇನ್ನೊಂದು ಪುಟ್ಟ ಪಾಪು ಬರಲಿದೆ ಆಗಸ್ಟ್ ಸುಮಾರಿಗೆ.

ನಾನು ಅಕ್ಕ ಅವಳನ್ನು ಮಿಲಿಟರಿ ಮಹಾದೇವಕ್ಕೆ ಕರೆದುಕೊಂಡು ಹೋಗಿದ್ವಿ. ಅಲ್ಲಿ ಮಾಲತಿಯಕ್ಕ ಪಾಪ್ ಕಾರ್ನ್ ತಗೊಳುವ? ಅಂತ ಕೇಳಿದಳು. ನಾನು ಹೂಂ ಅಂದೆ. ಅವಳೇ ನಮ್ಗೆ ಪೋಪ್ ಕಾರ್ನ್ ಕೊಡಿಸ್ತಿದ್ದಾಳೋ ಎಂಬ ಠೀವಿ. ಎಷ್ಟು innocent carefree and honest ಅಲ್ವಾ ಆ ವಯಸ್ಸು. ಮೊನ್ನೆ ಡಿಸೆಂಬರ್ ನಲ್ಲಿ ಅವಳು ನಾಲ್ಕನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡ್ಲು. ಹಾಗೆ ರಿಕ್ಷಾದಲ್ಲಿ ಮನೆಗೆ ವಾಪಸ್ ಆಗುವಾಗ, ಮಾಲತಿಯಕ್ಕ ನಾಳೆ raw mango ತಿನ್ನುವ? ಅಂತ ಕೇಳಿದಳು. ನಾನು ಓಕೆ ಅಂದೆ.
ನಾನು ನಿನಗೆ ಕಟ್ ಮಾಡಿ ಕೊಡ್ತೇನೆ ಆಯ್ತಾ ಅಂದ್ಲು...cho chweet. love you love you and love you ಸ್ಯಾಮಿ. ಚೆಂದದ ದನಿ ಇದೆ ಅವಳಿಗೆ.  ಹಿಂದುಸ್ಥಾನಿ vocal ಕಲಿತಿದ್ದಾಳೆ. ಹಿಂದಿ, ಇಂಗ್ಲಿಶ, ಕೊಂಕಣಿ, ಮರಾಠಿ ಮತ್ತು ಕನ್ನಡ ಮಾತಾಡ್ತಾಳೆ.
ಮಾವಿನಕಾಯಿ ಕಟ್ ಮಾಡ್ತಿದ್ದಹಾಗೆ ಅವಳ ನೆನಪಾಯ್ತು. ಅದಕ್ಕೆ ನಿಮ್ಮೊಂದಿಗಿಷ್ಟು ಶೇರ್ ಮಾಡಿದೆ.
ಸ್ಯಾಮಿಯ ಹೆಸರು ಸಮಿಧಾ

ಈಗ ಮೆಣ್ಸಗಾಯ್ ಬಗ್ಗೆ ಬರೀತೀನಿ
1 ಒಂದು ಹದ ಗಾತ್ರದ ಮಾವಿನಕಾಯಿ
2 ಹಾಗಲಕಾಯಿ
1/2 ಟೀ ಚಮಚ ಉದ್ದಿನ ಬೇಳೆ
1/2 ಟೀ ಚಮಚ ಕಡಲೆ ಬೇಳೆ
1/2 ಟೀ ಚಮಚ ಮೆಂತೆ
1 ಚಮಚ ಕೊತ್ತಂಬರಿ
1/4 ಟೀ ಚಮಚ ಜೀರಿಗೆ
1 ಟೇಬಲ್ ಸ್ಪೂನ್ ಕಾಯಿ ತುರಿ
ಸಣ್ಣ ಹಿಂಗಿನ ತುಂಡು
ಹುರಿದ ಕೆಂಪು ಮೆಣಸು 5-6
ಎರಡು ಹಸಿಮೆಣಸಿನಕಾಯಿ
ದೊಡ್ಡ ಚೂರು ಬೆಲ್ಲ, ರುಚಿಗೆ ಉಪ್ಪು, ಸ್ವಲ್ಪ ಹುಣಸೆ ಹುಳಿ






ಮಾವಿನ ಕಾಯಿ ಹೋಳು ಮಾಡಿಡಿ. ಹಾಗಳಕಾಯಿಯ ಹೋಳಿ ಗೆ ಉಪ್ಪು ಹಚ್ಚಿಡಿ. ಅರ್ಧ ಗಂಟೆ ಬಿಟ್ಟು ನೀರಲ್ಲಿ ಹಾಕಿ. ಮೇಲಿನ ಪಟ್ಟಿಯಲ್ಲಿದ್ದ ಸಾಂಬಾರು ಪದಾರ್ಥಗಳನ್ನು ಒಂದೊಂದಾಗಿ ಎಣ್ಣೆಯಲ್ಲಿ ಕೆಂಪಗೆ ಹುರಿಯಿರಿ. ಕೊನೆಯಲ್ಲಿ ಕಾಯಿ ತುರಿ ಹಾಕಿ ಕೆಂಪಗೆ ಹುರಿಯಿರಿ. ಹುಣಸೆ ಹುಳಿ ಕೆಂಪು ಮೆಣಸಿನ ಒಟ್ಟಿಗೆ ತರಿತರಿಯಾಗಿ ರುಬ್ಬಿ. ಎಣ್ಣೆ ಯಲ್ಲಿ ಸಾಸಿವೆ ಕರಿಬೇವಿನಿಂದ ಒಗ್ಗರಣೆ ಹಾಕಿ. ಅದಕ್ಕೆ ಉದ್ದಕ್ಕೆ ಸೀಳಿದ ಎರಡು ಹಸಿಮೆಣಸಿನಕಾಯಿ ಹಾಕಿ ಕೈಯಾಡಿಸಿ. ಇದಕ್ಕೆ ಹೋಳುಮಾಡಿಟ್ಟುಕೊಂಡ ಮಾವಿನಕಾಯಿ + ಹಾಗಲಕಾಯಿ ಹಾಕಿ ನೀರು ಹಾಕಿ ಬೇಯಿಸಿ.ರುಬ್ಬಿಟ್ಟ ಮಸಾಲೆ ಬೆರೆಸಿ. ಕುದಿ ಬರುವಾಗ ಉಪ್ಪು ಬೆಲ್ಲ ಬೆರೆಸಿ.

ಬಿಸಿ ಬಿಸಿ ಅನ್ನದೊಂದಿಗೆ ಚೆನ್ನಾಗಿರುತ್ತೆ.
(This post is for Sakhee : Sowmya Kalyankar)
:-)
ಮುಂದಿನ ಪೋಸ್ಟ್ ನಲ್ಲಿ ಗಿಂಗಿ ಫೋರ್ಟ್...

5 comments:

  1. This is new combo mango and bitter gourd. Will try it out :-)

    ReplyDelete
  2. Aashi jaavnu tonDa udda aile! My amma uses fresh ambado instead of mangoes

    ReplyDelete
  3. Its a fav amongst most konkani's Radhika. try. dont forget to add lots of jaggery though
    ...............................
    thank u Anonymous. kOn mhaNu kaLnee moo. yes even i use amtekaay. but now is the raw mango season nhave...to uska majaa loot rahi hoon
    :-)
    malathi S

    ReplyDelete
  4. ಪುರಾಣದಲ್ಲಿ ಕೇಳಿದ್ದ ಬ್ರಹ್ಮ ಮಾನಸಪುತ್ರ ಎಲ್ಲೆಂದರಲ್ಲಿ, ಎಲ್ಲ ಕಡೆಯೂ ಇರುತಿದ್ದರು ಎಂದು. ನಿಮ್ಮ ಲೇಖನಗಳನ್ನು ನೋಡಿದಾಗ ಹಾಗೆ ಅನ್ನಿಸುತ್ತದೆ. ಕಡಲ ಕಿನಾರೆಯಲ್ಲಿ ತೇಲಿಸುತ್ತ ಅಚಾನಕ್ ಅಡಿಗೆ ಮನೆಯ ಊಟ ಕೊನೆಗೆ ಭರ್ರನೆ ಎಳೆದು ತಂದು ಬಿಡ್ತೀರ. ಸೊಗಸಾಗಿದೆ ಲೇಖನದ ಚಿತ್ರಗಳು ಹಾಗು ಅದರ ಸಿದ್ಧತೆ. ಬಾಯಲ್ಲಿ ನೀರುಬರಿಸುತ್ತೆ.

    ReplyDelete
  5. as usual nice post.

    -- Shree Kar

    ReplyDelete