December 28, 2012

A Story

(this is a story written when i was in the 8th std, so please read this with a pinch of salt)


She was gazing out of the window of cancer ward watching the children that were playing below. There were a few grown ups swimming in the pool in the adjacent building. Inside the ward the atmosphere was gloomy. A few patients were retching after their chemotherapy. A child was moaning. But Madhuri did not turn her face inside. She felt someone sit beside her and then a cautious Hello. She turned to see a man almost sixty years besides her. Hello, she replied.

They used to meet every evening hence wards. She learnt that he had two sons, of which one had died at the age of four. He lost his wife two years ago to breast cancer. Now his remaining son had some disorder of the kidney and he was searching for a donor for a new kidney.

He never asked anything about her and nor did she volunteer any information. One day he dropped a bombshell on her. He said, “ since you are dying of cancer, why don’t you donate your kidney to my son?” Iam extremely sorry to ask you like this, but I don’t know what else to do. I want him and I need him. I know your name is Madhuri and that your blood matches that of my son. Will you think over it?” I am ready to pay any amount of money.

Madhuri turned her angry and red face towards him. Some sharp retort almost escaped her lips. But the pathetic look on his face somehow had a calming effect on her nerves. “ I will think about it” she said. After he left, a slow sigh escaped her lips. She kept her hot forehead on the cool windowsill.

TWO YEARS LATER.

Hello Papa, I will be returning tomorrow on the 6.30 a.m. flight. Be sure to meet me. I am bringing my beloved with me. See you tomorrow. The old man was in a state of excited anticipation. He was conjuring the image of his future daughter-in –law. He used to write and talk a lot about her.

Next day the old man was up early. He asked the cook keep his son’s favorite breakfast hot and ready.

Soon at the airport he saw his son alight along with a graceful woman clad in a Mysore silk saree, the saree which he had helped his son in choosing. But from far it was difficult to see wether the lady was an Indian or a foreigner.

Before long the son came running to father and fell at his feet and then embraced him. All the while the old man was looking enquiringly at the woman. She looked vaguely familiar. Papa, this is my life, my Madhuri. The name stuck a chord and he remembered her as his son’s kidney donor. But what was she doing with him? I have already made all the payments due to her family and the surprising this was she was looking healthy and beautiful. What happened to her cancer disease?

Madhuri herself was speechless with shock. But the hunted look on her face silenced any questions from him.

Prakash was surprised at his girl friends behavior, for she was always exuberant and lively. I hope she liked my pa. He could not meet her eyes either, for she was looking out at the passing scenario on the road through the car window.

Madhuri was thinking how life takes unexpected turn. She hardly thought that prakash was the old man’s son to whom she had donated her kidney. After so long had she fallen in love with a man and she was sad that this affair would end. Though she could function well with a single kidney, she knew the old man would not let them marry.

Amidst all their thoughts they arrived at the bungalow. It was a huge place and gave her an idea of how rich they were.

There were many relatives who had come to welcome Prakash home from the U.S. of A.  The house fell. silent  only a little after midnight. Madhuri came out of the guest room allotted to her. She found the old man waiting, she knew, for her.

Now i remember i met you in the cancer ward and I have paid you 25 lakhs of rupees.

Yes, you met me at the cancer ward no doubt, but I was not afflicted with the cancer. I used to come there for my friend. She had nobody with her.  She was very dear to me. She and me were two bodies with one soul. Both of us belong to a very rich family and both of us were spoilt. We used to trouble people who were beneath us, like our servants, beggars on the road, poor relatives etc. We hurt many a people in the process. we both were shocked when she was diagnosed with cancer.

I left me the very day I was operated upon. The atmosphere there and the pain in your eyes prompted me to take such a step. Anyway I belong to a very affluent family and spoilt silly. I and my late friend were always up to some prank or the other. We have hurt so many people in the process of having fun ourselves. I thought it would like cleaning of my soul of all the bad-deeds I did. The money you gave me, I donated it to the cancer hospital itself. Since I was doing an advanced course in computers and was quite good at it, I soon got a job which took me abroad. I had not met your son either before or after donating my kidney to him. Coincidentally we met at our work place and fell in love. I know him since the past 11/2 year. I did not scheme on anything as you are implying.”

The old man was filled with remorse. At the same time Prakash who had come to ask what was eating Madhuri after their arrival to their ancestral home overheard the entire conversation.  

I love her very much father. I cant live without her. And after I have the entire tale I respect her a lot. Do give us your blessings.

The old man hugged them both and blessed them saying, May you live a very long life. 

December 19, 2012

Two Snacks: ಚಳಿಗಾಲಕ್ಕೆ ಎರಡು ಸ್ನ್ಯಾಕ್ಸ್

ನೇಂದ್ರಬಾಳೆಹಣ್ಣಿನ ಫೋಡಿ (ಇದು ಕೊಂಕಣಿ preparation)
ಎರಡು ನೇಂದ್ರಬಾಳೆ ಹಣ್ಣು ಬಿಲ್ಲೆ ಅಥವಾ rectangle ಆಗಿ ಕಟ್ ಮಾಡಿ
ಅದಕ್ಕೆ ಉಪ್ಪು, ಹಿಂಗು, ಕಾರದಪುಡಿ ಹಚ್ಚಿಡಿ

ಅದನ್ನು ಅಕ್ಕಿಹಿಟ್ಟು+ಕಡಲೆಹಿಟ್ಟು+ಚಿಟಿಕೆ ಉಪ್ಪು ಮಿಕ್ಸ್ ನಲ್ಲಿ ಹೊರಳಿಸಿ ಕಾವಲಿ ಮೇಲೆ ಶ್ಯಾಲೋ ಫ್ರೈ ಮಾಡಬಹುದು ಅಥವ ಎಣ್ಣೆಯಲ್ಲಿ ಕರಿಯಬಹುದು


ಮೂಲಂಗಿ ಕಟ್ಲೆಟ್
ತುರಿದು ನೀರು ಹಿಂಡಿ ಇಟ್ಟ ನಾಲ್ಕು ಮೂಲಂಗಿ
ಇದಕ್ಕೆ ಹಸಿಮೆಣಸು, ಕೊತ್ತಂಬರಿಸೊಪ್ಪು, ಬೆಳ್ಳುಳ್ಳಿ + ಶುಂಠಿ ತರಿತರಿಯಾಗಿ ರುಬ್ಬಿ ಮಿಕ್ಸ್ ಮಾಡಿ. ಕಡಲೆಬೇಳೆಯನ್ನು ಮಿಕ್ಸಿಯಲ್ಲಿ ಹಾಕಿ ಹಿಟ್ಟುಮಾಡಿಟ್ಟು ಕೊಂಡು ಈ ಮಿಶ್ರಣಕ್ಕೆ ಉಪ್ಪಿನ ಜತೆ ಬೆರೆಸಿ.ಕೈ ನಲ್ಲಿ ಉರುಟು (round ball) ಮಾಡಿ ಚಪ್ಪಟೆ (flatten) ಮಾಡಿ. ಆಮೇಲೆ ಕಾವಲಿ ಮೇಲೆ ಇಟ್ಟು ಎಣ್ಣೆ ಹಾಕಿ ಫ್ರೈ ಮಾಡಿ. ಟೊಮ್ಯಾಟೋ ಸಾಸ್ ಜತೆ serve ಮಾಡಿ

 (ಇದು ನಿಹಾಳ ಫ್ರೆಂಡ್ ಅಖಿಲಾಳ ಅಮ್ಮನ ರೆಸಿಪಿ). ನಮ್ಮ ಮನೆಯಲ್ಲಿ ನಿಹಾ ಮಾಡಿದ್ದು. ಸಖತ್ ಟೇಸ್ಟಿ ಅನ್ನಿಸ್ತು. ಈಗ ನೀವು ಟ್ರೈ ಮಾಡಿ.
:-)

December 13, 2012

ಉಜ್ವಲಾ- ಮುಂದುವರೆದ ಭಾಗ

ಆ ಪುಟ್ಟ ಹುಡುಗಿಯ ಹೆಸರು 'ಮಾಹಿ'. 'ಆಂಟಿ ಹೋಮ್ ಕೇರ್ ನರ್ಸ್ ಇಟ್ಟಿದ್ದೆ ಕೆಲವೊಂದು ದಿನ ಆದರೆ ನಾನು ಮನೆಯಿಂದ ಹೋದ ಕೂಡಲೆ ಅವರು ಟಿವಿ ನೋಡುತ್ತಿದ್ದರು.ಸರಿಯಾದ ಸಮಯಕ್ಕೆ ಔಷಧಿ ನೀಡದೆ ತಂದೆಯ ಆರೋಗ್ಯ ಒಂದೊಮ್ಮೆ ತುಂಬ ಕೆಟ್ಟಿತ್ತು. ನನಗೆ ಗಿಲ್ಟ್ ಕಾಡಲಿಕ್ಕೆ ಶುರು ಆಯಿತು. ನಾನು ತಕರಾರು ಮಾಡಿದ್ದಕ್ಕೆ ಬಿಟ್ಟು ಹೋದರು' ಅಂದಳು. 
ಮನೆಗೆ ಬರ್ತಾ ಉಜ್ವಲಳ ಮುಖದ ತುಂಬ ಮಂದಹಾಸ. ಅವಳ ಮನಸ್ಸಿನಲ್ಲಿ ಆಗಲೆ ಒಂದು ಉಪಾಯ ರೂಪುಗೊಳ್ಳುತ್ತಾ ಇತ್ತು. ಅವಳಿಗೆ ಗೊತ್ತು ತನ್ನ ಗಂಡ ತಾನು ಹೇಳಿದ್ದನ್ನು ಪೂರ್ತಿ ಕೇಳಿಸಿಕೊಳ್ಳದೆ ಹೂಂ ಅನ್ನುತ್ತಾನೆಂದು. ಉಜ್ವಲಳ ಗಂಡ ಓರ್ವ ಹೆಸರಾಂತ ಉದ್ಯಮಿ. ಹೆಂಡತಿಗೆ ಬೈ, ಸಿ ಯು ಅನ್ನುತ್ತ ಮನೆಯ ಹೊಸ್ತಿಲು ದಾಟುತ್ತಲೆ ಅವನ ತಲೆಯಲ್ಲಿ ಹರೀಶ ಭಾಯ್, ಜಿತೇನ್ ಬಾಯ್, ಪರೇಶ ಭಾಯ್ ಗಳು, ಕಲೆಕ್ಷನ್ ವಿಷಯ, ಗೋಡೌನ್ ನಲ್ಲಿ ಸ್ಟಾಕ್ ಎಷ್ಟಿದೆ, ಕುರಿಯರ್ ನಲ್ಲಿ ಮಾಲು ಹೋಯಿತೆ?  ಬ್ಯಾಂಕ್ ನಿಂದ ಕ್ಯಾಶ್ ಡ್ರಾ ಇಂತವೇ ತುಂಬುಕೊಳ್ಳುತ್ತದೆ. ಅದರಲ್ಲಿ ಉಜ್ವಲಳ ಬಗ್ಗೆ ಆಲೋಚಿಸುವಷ್ಟು ವ್ಯವಧಾನವಿಲ್ಲ. ಮದುವೆಯಾದ ಬಳಿಕ ಹನಿಮೂನ್ ಗೆ ಒಟ್ಟಿಗೆ ಇಬ್ಬರೆ ಹೋಗಿದ್ದು ಬಿಟ್ಟರೆ, ವರ್ಷಕ್ಕೊಂದಾವರ್ತಿ ವೈಷ್ನೋದೇವಿಗೆ 10 ಕುಟುಂಬಗಳು ಟ್ರೈನ್ ನಲ್ಲಿ ಒಟ್ಟಾಗಿ ಹೋಗುವ ವಾಡಿಕೆ. ಅದರಲ್ಲಿ ಗಂಡಸರದ್ದೆ ಒಂದು ಪ್ರತ್ಯೇಕ ರೈಲು ಬೋಗಿ.ಹಾಗಾಗಿ ಅವರ ಮಧ್ಯೆ ಪ್ರೀತಿಯಿಂದ ಲಲ್ಲೆಗರೆಯುವಿಕೆ ವಗೈರ ಇಲ್ಲವೆ ಇಲ್ಲ. ಉಜ್ವಲಳಲಿಗೆ ಇದರಿಂದ ಬೇಜಾರಾ? ಖಂಡಿತ ಇಲ್ಲ. ಅವಳು ಕೂಡ ಬಿಸಿನೆಸ್ ಫ್ಯಾಮಿಲಿಯಿಂದಲೇ ಬಂದವಳು. ಅವಳ ಅಪ್ಪ ಕೂಡ ಸಾಕಷ್ಟು ಧನವಂತರೆ. 
ಉಜ್ವಲಳನ್ನು ಅವಳ ಗಂಡ ನೋಡಿದ್ದು ಒಂದು ಕುಟುಂಬದವರ ಮದುವೆ ರಿಸೆಪ್ಷನ್ ನಲ್ಲಿ. ತುಂಬ ಚೆಂದದ ಚಟುವಟಿಕೆಯ ಉಜ್ವಲ ಅವನ ಬಿಸಿನೆಸ್ ಡಿನ್ನರ್ ಮೀಟ್ ಗಳಿಗೆ ಸರಿಹೊಂದುವಂತೆ ಇದ್ದಳು. ಮದುವೆ ಗೊತ್ತಾಗುವ ಮುಂಚೆ ಉಜ್ವಲ ಅವಳ ತಂದೆಗೆ ಅವರ ಬಟ್ಟೆಯ ಉದ್ಯಮದಲ್ಲಿ ನೆರವು ನೀಡುತ್ತಿದ್ದಳು. ಈಗ ಅವಳ ಗಂಡನಿಗೆ ಅವಳು ಪಾರ್ಟಿ ಗೀರ್ಟಿಗೆ ಬಂದು , ಚೆಂದದ ಬಟ್ಟೆ ಹಾಕಿಕೊಂಡು ಮುಗುಳ್ನಗುತ್ತ ನಾಲ್ಕು ಕುಶಲೋಪರಿ ಮಾತಾಡಿದರೆ ಮುಗೀತು. ತಿಂಗಳಲ್ಲಿ ಇಂತಹ ಮೂರು ಪಾರ್ಟಿಗಳಾದರೂ ಇರುತ್ತಿತ್ತು. ಉಳಿದ ಸಮಯ ಉಜ್ವಲ ಖಾಲಿಯಾಗೆ ಇರುತ್ತಿದ್ದಳು. ಟಿ.ವಿ ನೋಡಿಕೊಂಡು, ಹಳೆ- ಹೊಸ ಫ್ರೆಂಡ್ಸ್ ಜತೆ ಕಿಟ್ಟಿ ಪಾರ್ಟಿ, ಶಾಪಿಂಗ್ ವಗೈರೆ. ತಿಂಗಳಿಗೊಮ್ಮೆ ಅವಳ ಗಂಡ ಅವಳ ಖಾತೆಯಲ್ಲಿ ಒಂದಿಷ್ಟು ದುಡ್ಡು ಹಾಕುತ್ತಿದ್ದ. ಅವನಲ್ಲ, ಅವನ ಸೆಕ್ರೆಟರಿಗೆ standing instruction ಅದು.
ಉಜ್ವಲಳ ಮಗನಿಗೆ ಒಂದು ಕಂಪೆನಿಯಲ್ಲಿ ಇತ್ತೀಚಿಗೆ ನೌಕರಿ ಸಿಕ್ಕಿದೆ. ಒಂದು ವರ್ಷದ ಮಟ್ಟಿಗೆ ಅವನಿಗೆ ತರಬೇತಿಗೆ ಅಂತ ಹೊರದೇಶಕ್ಕೆ ಕಳುಹಿಸಲಾಗಿದೆ. ಈಗಲೇ ಆರು ತಿಂಗಳು ಮುಗಿದಿದೆ. ಮೊನ್ನೆ ಫೋನ್ ಮಾಡಿದಾಗ 'ಮಮ್ಮಿ ನಾ ನೌಕರಿ ಮಾಡೋದಿಲ್ಲ ಸ್ವಂತದ್ದು ಏನಾದರೂ ಮಾಡ್ತೇನೆ' ಅಂತ ತುಂಬ ಉತ್ಸಾಹದಿಂದ ಹೇಳುತ್ತಿದ್ದ. ಮತ್ತೆ ಮಗಳು ಡೆಂಟಿಸ್ಟ್ ಆಗುವ ತಯಾರಿ ನಡಿಸಿದ್ದಾಳೆ. ದೂರದ ಊರಿನ ಹೊಸ್ಟೆಲ್ಲನಲ್ಲಿ ಅವಳ ವಾಸ-ವ್ಯಾಸಂಗ.
ಹೇಳಿಕೊಳ್ಳುವಂತಹ ಜಾವಾಬ್ದಾರಿ ಅಂತೂ ಏನೂ ಇಲ್ಲ.ಮುಂದೆ ಗಂಡ ಏನಾದರೂ ತಕರಾರು ತೆಗೆದರೆ Corporate Social Responsibility ಪಟ್ಟ ಕಟ್ಟಿದರಾಯಿತು. ಗಂಡ ಅವಳ ಖಾತೆಯಲ್ಲಿ ಜಮಾಮಾಡಿದ ಹಣವನ್ನೆಲ್ಲ ಆಕೆ invest ಮಾಡಿ ಅವಳದ್ದೆ ಆದ ಸ್ವಲ್ಪ ಅಪದ್ದನ್ ಕೂಡಿದೆ.
ಹೇಗೂ ಪಕ್ಕದಲ್ಲೇ ಮಾಹಿ ಮನೆ. ಮಧ್ಯೆ ಇರುವ ಗೋಡೆ ತೆಗೆದು ಒಂದೆ ಮನೆ ಮಾಡಿದರಾಗುತ್ತದೆ. ಒಬ್ಬ ಹೋಮ್ ಕೇರ್ ನರ್ಸ್ ಇಟ್ಟು ಆ ನರ್ಸ್ ನ ಮೆಲೆ ನಿಗಾ ಇಡುವ ಕೆಲಸ ಒಂದು ಮಾಡಿದ್ರಾಯ್ತು. ಹಾಗೂ ಸಹಾಯಕ್ಕೆ ವಾಚ್ ಮನ್ ಹೇಗೂ ಇದ್ದಾನೆ. ಆ ಹುಡುಗಿ ಜತೆ ಹಂಚಿಕೊಂಡಾಗ ಆಕೆಗೆ ಮೊದಲು ನಂಬಿಕೆ ಬರಲಿಲ್ಲ. ಆಮೇಲೆ ಖುಶಿಯಿಂದಲೇ ಒಪ್ಪಿದಳು. 
ಐದ್ದು ವರ್ಷಗಳ ನಂತರ:
ಉಜ್ವಲಳ ಗಂಡನಿಗೆ ಮೈಲ್ಡ್ ಹಾರ್ಟ್ ಅಟಾಕ್ ಆಗಿ ಮನೆಯಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ. ಈಗ ಅವರ ಉದ್ಯಮದ ಜವಾಬ್ದಾರಿ ಮಗನ ಮೇಲೆ. ಅವನು ಖುಶಿಯಿಂದ ಅದನ್ನು ನಿಭಾಯಿಸುತ್ತಿದ್ದಾನೆ. ಮೂರು ವರ್ಷದ ಕೆಳಗೆ ಮಾಹಿಯ ಅಮ್ಮ ತೀರಿಕೊಂಡರು. ಉಜ್ವಲಳ ಮಗನಿಗೆ ಮಾಹಿ ಜತೆ ಲಗ್ನ ಮಾಡಿಕೊಳ್ಳುವ ಆಸೆ ವ್ಯಕ್ತಪಡಿಸಿದ್ದಾನೆ. ಉಜ್ವಲ ಹಾಗೂ ಅವಳ ಗಂಡನಿಗೆ ತಕರಾರಿಲ್ಲ. ಆದರೆ ಮಾಹಿ ಅವಳ ವ್ಯಾಸಂಗ ಮುಗಿಸಿದ ನಂತರ ಮದುವೆ ಅಂತ ಗಟ್ಟಿ ನಿರ್ಧಾರ ಮಾಡಿದ್ದಾಳೆ. ಅವಳು ಮಾಸ್ತರ್ ಆಫ್ ಸೋಶಲ್ ವರ್ಕ್ ಆಯ್ಕೆ ಮಾಡಿಕೊಂಡಿದ್ದಾಳೆ.
(thanks for all the comments for the previous post)
:-)

December 9, 2012

ಉಜ್ವಲಾ

ಲಿಫ್ಟ್ ಗಾಗಿ ಕಾಯುತ್ತಿದ್ದಳು ಉಜ್ಜಲಾ. ಗುಂಡಿ ಒತ್ತಿ ಒತ್ತಿ ಇಟ್ಟಳು. ಆಮೇಲೆ ನಾಲ್ಕನೆ ಮಹಡಿಯಿಂದಲೇ 'ಅರೇ ವಾಚಮನ್ ಭೈಯ್ಯ ಲಿಫ್ಟ್ ಕೊ ಕ್ಯಾ ಗೋಯಾ' ಅಂತ ಕಿರುಚಿದಳು. ವಾಚಮನ್ ನಿಂದ ಯಾವುದೇ ಪ್ರತ್ರಿಕ್ರಿಯೇ ಇಲ್ಲ. ಅದೊಂದೊ ಹೊಸದಾಗಿ ನಿರ್ಮಾಣಗೊಂಡ ಅಪಾರ್ಟಮೆಂಟ್ ಕಾಂಪ್ಲೆಕ್ಸ್. ಆದ್ದರಿಂದ ಹೊಸಬರು ಬರೋದು ಅವರ ಸಾಮಾನು ಅಂತ ದಿನ ಇಡಿ ದಿನ ಅಲ್ಲೆಲ್ಲ ಚಟುವಟಿಕೆಯಿಂದ ಕೂಡಿರುತ್ತಿತ್ತು. ಅಷ್ಟರೊಳಗೆ ಲಿಫ್ಟ್ ಉಜ್ವಲಳ ಮಹಡಿಗೆ ಬಂದು ನಿಂತಿತು. ಲಿಫ್ಟ್ ನ ಬಾಗಿಲು ತೆರೆದುಕೊಂಡಿತು, ಅದರಲ್ಲಿ ತೀರಾ ವಯಸ್ಸಾದ ಒಬ್ಬ ಮಹಿಳೆ, ಒಬ್ಬ ಗಂಡಸು ಮತ್ತು ಪುಟ್ಟ ಹುಡುಗಿ ಕಾಣಿಸಿದರು. ಗಂಡಸು ಅಂತು ಹೊರಗೆ ಬರಲ್ಲ ಅಂತ ಗಟ್ಟಿಯಾಗಿ ಲಿಫ್ಟ್ ಒಳಗೆ ನಿಂತು ಬಿಟ್ಟರು. ಆ ಹುಡುಗಿ ಮೊದಲಿಗೆ  ಹೆಂಗಸನ್ನು ಪುಸಲಾಯಿಸಿ ಹೊರಗೆ ತಂದ ನಿಲ್ಲಿಸಿದಳು. ಆ ಮೇಲೆ ಕಷ್ಟಪಟ್ಟು ದೂಡಿಕೊಂಡೆ ಗಂಡಸನ್ನು ಲಿಫ್ಟ್ ನಿಮ್ದ ಹೊರ ತಂದಳು. ಇದನ್ನು ನೋಡುತ್ತಿದ್ದ ಉಜ್ವಲಾ 'ಓ ಅಜ್ಜ-ಅಜ್ಜಿ-ಮೊಮ್ಮಗಳಿರಬೇಕೆಂದು ಕೊಂಡಳು. ಹುಡುಗಿ  ಉಜ್ವಲಾಳ ಮನೆಯ ಬದಿಯಲ್ಲಿರುವ ಫ್ಲಾಟ್ ನ ಬೀಗ ತೆರೆಯುವುದನ್ನು ನೋಡ ನೋಡುತ್ತಲೇ ಲಿಫ್ಟ್ನಿಂದ ಕೆಳಗಡೆ ಬಂದಳು.
ಹಲವಾರು ತಿಂಗಳ ಬಳಿಕ ಪಕ್ಕದ ಫ್ಲ್ಯಾಟ್ ನ ಒಂದು ಪತ್ರ ಇವರ ಪೊಸ್ಟ್ ಬಾಕ್ಸ್ ನಲ್ಲಿ ಬಂದಿತ್ತು. ಅದನ್ನು ಪಕ್ಕದ ಮನೆಯವರಿಗೆ ತಲುಪಿಸಲು, ಉಜ್ಜ್ವಲಾ ಆ ಮೆನಯ ಬೆಲ್ ಒತ್ತಿದಳು. ಆ ಹುಡುಗಿ, ಅವಳ ಪ್ರಾಯ 17-18 ಇರಬಹುದು ಕೆಂಪಾಗಿ ಊದಿದ ಕಣ್ಣುಗಳಿಂದ ಬಾಗಿಲು ತೆಗೆದಳು. ಅವರ ಮನೆಯಲ್ಲಿರುವ ವಯಸ್ಸಾದ ವ್ಯಕ್ತಿಗಳ ನೆನೆಪಾಗಿ ಉಜ್ಜ್ವಲಾ ಆ ಹುಡುಗಿಗೆ' ಎನೀ ಪ್ರಾಬ್ಲಮ್' ಅಂತ ಮೃದುವಾಗಿ ಕೇಳಿದಳು. ಅಷ್ಟಕ್ಕೆ ಆ ಹುಡುಗಿ ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದಳು. ಅವಳನ್ನು ನಿಧಾನವಾಗಿ ಅವಳ ಮನೆಯೊಳಗೇ ನಡೆಸಿಕೊಂಡು ಹೋದಳು ಉಜ್ಜ್ವಲಾ. ವ್ಹಾಟ್ ಹ್ಯಾಪನ್ಡ್? ವೈ ಆರ್ ಯು ಕ್ರೈಯಿಂಗ್' ಅಜ್ಜ ಅಜ್ಜಿಗೆ ಏನಾದರೂ ಆಯ್ತಾ? 'ಅಜ್ಜ ಅಜ್ಜಿ ಯಲ್ಲ' ದೇ ಆರ್ ಮೈ ಪೇರೆಂಟ್ಸ್. ಐ ಡಿಡ್ ನಾಟ್ ವಾಂಟ್ ಟು ಬಿ ಬೋರ್ನ್' ನಾನು ಇವರ ಮಗಳಾಗಿ ಹುಟ್ಟಿ ಬರಲು ಕೇಳಿಕೊಂಡಿದ್ನಾ'? ಅರೇ ಇದೇನಾಯಿತು ಈ ಹುಡುಗಿಗೆ. ಹಲವಾರು ಬಾರಿ ಆಕೆಯನ್ನು ಅವಳ ಜತೆಯಿರುವ ವಯಸ್ಸಾದವರನ್ನು ನೋಡಿ, ಹಾ ಮೊಮ್ಮಗಳು ಇವರನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಳು ಉಜ್ಜ್ವಲಾ ತನ್ನ ಮನೆಯವರೊಂದಿಗೆ
ಆ ಹುಡಿಗಿನೇ ಮಾತನ್ನು ಮುಂದುವರೆಸಿದಳು, 'ಆಂಟಿ ನನ್ನ ಅಪ್ಪ ಅಮ್ಮ ನಾಲವತ್ತು ವರ್ಷದವರಿದ್ದಾಗ ಭೇಟಿಯಾಗಿ ಮದುವೆ ಮಾಡಿಕೊಂಡರು. ಇಬ್ಬರಿಗೂ ಒಂದೇ ವಯಸ್ಸು. ನಾನು ಹುಟ್ಟುವಾಗ ಅಮ್ಮನಿಗೆ 50 ವಯಸ್ಸು. ಆದರೂ ಹೆತ್ತಳು. ನನ್ನನ್ನು ಹೆತ್ತ ದಿನದಿಂದ ಆಕೆಗೆ ಹುಷರಿಲ್ಲ. ಚಿಕ್ಕವಳಿದ್ದಾಗಳಿಂದಲೂ ನನಗೆ ಅಮ್ಮನ ಪ್ರೀತಿ ಸಿಗಲಿಲ್ಲ. ಈಗ ಅಪ್ಪನಿಗೂ ಹುಷಾರಿಲ್ಲ. ನನಗೀಗ ಕೇವಲ 17 ವರ್ಷ ವಯಸ್ಸು. ನಾನು ಇವರನ್ನು ನೋಡಿಕೊಳ್ಳೋದೆ ಆಗಿದೆ. ನಾನು ಓದಿ ಬರೆಯುವುದು ಮಾಡುವುದು ಯಾವಾಗ?? ಕಾಲೇಜಿನಿಂದ ಈಗಾಗಲೇ ನನ್ನ absenteeism ನಿಂದ ಹಲವಾರು ಕಂಪ್ಲೈಂಟ್ ಬಂದಿದೆ. ಕೆಲಸದವಳು ಬಂದು ಹೋಗ್ತಾಳೆ. ಉಳಿದ ಸಮಯ ನಾನೇ ಇವರನ್ನು ನೋಡಿಕೋ ಬೇಕು. ಒಂದೇ ಒಂದು ಪ್ಲಸ್ ಪಾಯಿಂಟ್ ಅಂದರೆ ದುಡ್ಡಿಗೇನೂ ಕೊರತೆಯಿಲ್ಲ. ಹತ್ತಿರ ಹೇಳಿಕೊಳ್ಳುವ ಸಂಬಂಧಿಕರಿಲ್ಲ. i did not ask to be born ಅಂತ ಪುನ: ಗೋಳೋ ಅಂತ ಅಳಲು ಶುರುಮಾಡಿದಳು.....
ಉಜ್ವಲಳ ಬಳಿ ಇದಕ್ಕೊಂದು solution/ಸಮಾಧಾನ ಇತ್ತು...any guesses?? (ಇಲ್ಲ ಆ ಹುಡುಗಿ ತನ್ನ ಅಪ್ಪ ಅಮ್ಮನನ್ನು ವೃದ್ಧಾಶ್ರಮಕ್ಕೆ ಹಾಕಲು ತಯಾರಿಲ್ಲ).....
:-)

December 5, 2012

ನನ್ನ ಕೆಲವು first attempt ಗಳು

ಪೊಂಡಿಚೆರ್ರಿಯಿಂದ ಬೆಂಗಳೂರಿಗೆ ತಡರಾತ್ರಿ ತಲುಪಿದ್ದೆವು. ಆದ್ದರಿಂದ ಟ್ರಾವಲ್ ನ ಸುಸ್ತಿನಿಂದ ಮರುದಿನ ಮಧ್ಯಾಹ್ನ್ ಮನೆಯವರೆಲ್ಲ ಊಟ ಮಾಡಿ ಗೊರಕೆ ಹೊಡೆಯುತ್ತಾ ಇದ್ರು. ನಾನು ಸ್ವಲ್ಪ ಹೊತ್ತು ಓದುತ್ತಾ ಇದೆ. ಸಂಜೆ ನಾಲ್ಕು ಗಂಟೆಗೆ ಟಿ ಮಾಡಲು ಅಡಿಗೆ ಮನೆಗೆ ಹೋಗಬೇಕೆಂದಿದ್ದವಳು ಕಂಪ್ಯೂಟರ್ ಆನ್ ಇದ್ದ್ದದ್ದು ನೋಡಿ, ಮಾನಿಟರ್ ನ ಸ್ಕ್ರೀನ್ ನ ರಿಫ್ರೆಶ್ ಕೊಟ್ಟೆ. ಕೂಡಲೆ ನನ್ನ ಕಣ್ಣ ಮುಂದೆ ಬಣ್ಣ ಬಣ್ಣದ ಕವರ್ ಪೇಜ್ ಗಳು ಒಟ್ಟು ಹದಿನೈದು. ನಿಹಾರಿಕಾ ಮಲಗೋ ಮುಂಚೆ ಚುಕ್ಕುಬುಕ್ಕು ವೆಬ್ ಸೈಟ್ ಓಪನ್ ಮಾಡಿ ಇಟ್ಟಿದ್ದಳು. ನಾನು ಟೀ ಮಾಡಿಕೊಂಡು ಪುನ: ಕಂಪ್ಯೂಟರ್ ಎದುರಿಗೆ ವಿರಾಜಮಾನಳಾಗಿ ಒಂದೊಂದೆ ಕವರ್ ಪೇಜ್ ನೋಡ್ತಾ ಹೋದೆ. ಹಲವಾರು ಚಂದದ ಕವರ್ ಪೇಜ್ ಗಳು ಇದ್ದರೂ ಕೊನೆ ಕೊನೆಗೆ ಅಷ್ಟೊಂದು ಬಣ್ಣ ನೋಡಿ ಹೇಗೇಗೋ ಆಯ್ತು.it was jarring to the senses.  ನನ್ನ ಪ್ರಕಾರ ಜಗತ್ತಲ್ಲೆ ಚಂದದ ಬಣ್ಣಗಳು ಕಪ್ಪು ಬಿಳುಪು. ಬಿಟ್ರೆ ಬೂದು ಬಣ್ಣ. ಸರಿ ನೋಡಿ ಹಾಗೆ ಆ ಜಾಲತಾಣವನ್ನು ಮಿನಿಮೈಸ್ ಮಾಡಿಟ್ಟು, ನಾ ಟೀ ಹೀರುತ್ತ ನಮ್ಮ ಟೂರ್ ಫೋಟೊಗಳನ್ನು ಡೌನ್ ಲೋಡ್ ಗೆ ಹಾಕ್ದೆ. ಅದರಲ್ಲಿ ನಿಹಾ ತೆಗೆದ ಚಿಟ್ಟೆ ಚಿತ್ರ ನನಗಿಷ್ಟವಾಗಿ ಸುಮ್ನೆ ನಾನು ಅದನ್ನು ಬೇಸ್ ಆಗಿ ಉಪಯೋಗಿಸಿಕೊಂಡು ಕವರ್ ಪೇಜ್ ಮಾಡೋಣ ಅಂತ MSPaintನಲ್ಲಿ ಹಾಕ್ಕೊಂಡು ಈ ಕೆಳಗಿನಂತೆ ಮಾಡಿದೆ. ನನಗೆ ತಗುಲಿದ ಸಮಯ 30 ನಿಮಿಷ. ಯಾರದ್ದೂ ತಲೆ ತಿನ್ನದೇ ನನ್ನ ಸ್ವಂತ ಪ್ರಯತ್ನದಿಂದ ಮಾಡಿದೆ. ಏನೋ ಮನಸ್ಸಿಗೆ ಸಮಾಧಾನ. ಈ ಚಿತ್ರಕಲೆ, ರಂಗೋಲಿ ಬಿಡಿಸೋದು ಮುಂತಾದ ನವಿರಾದ art ಗಳಿಗೂ ನನಗೂ ಕೂಡಿ ಬರಲ್ಲ. ಕುರ್ಚಿ ಮೇಲೆ ಹತ್ತಿಕೊಂಡು ಟ್ಯೂಬ್ ಲೈಟ್ ರಿಪೇರಿ, ಬಾಯ್ಲರ್ ನ ವಯರಿಂಗ್ ಬಿಚ್ಚಿ fault ಹುಡುಕೋದು ಇಂತದ್ದನ್ನೆಲ್ಲ ಮಾಡ್ತೀನಿ. ನಾಜೂಕಿನ ಕೆಲಸಗಳೆಲ್ಲ ಆಗಲ್ಲ. ಅಧ್ಹೇಗೆ ಅಡಿಗೆ ಮಾಡಿ ಬಡಿಸ್ತೀನೋ ನನಗೇ ಗೊತ್ತಿಲ್ಲ. ಏನಾದರೂ ಚಿತ್ರ ಅಥವಾ ನನ್ನ ಬ್ಲಾಗ್ ಗೆ ಮಾಸ್ಟ್ ಹೆಡ್ ಮುಂತಾದವು ಬೇಕಾದಾಗ ನಾನು ಶ್ರೀಕಾಂತ್ ನಿಹಾರಿಕಾ ಇವರ ತಲೆ ಮಾತ್ರ ಅಲ್ಲ ಜೀವ ಕೂಡ ತಿನ್ನುತ್ತೇನೆ. ಕಿರಿಕಿರಿ ಎನಿಸಿ ಅವರು ನನಗೆ ಚಂದದ ಚಿತ್ರಗಳನ್ನು ಬರೆದುಕೊಡುತ್ತಾರೆ.
ಕವರ್ ಪೇಜ್ ಬಗ್ಗೆ ನನಗೆ ಮರೆತೇ ಹೋಯ್ತು. ಅದನ್ನು ಸೇವ್ ಕೂಡ ಮಾಡಿರಲಿಲ್ಲ. ಪುನ: ನನ್ನ ಪುಸ್ತಕ ಓದನ್ನು ಮುಂದುವರೆಸಿದೆ. ಸ್ವಲ್ಪ ಸಮಯದ ನಂತರ ನಿಹಾರಿಕಾ ಳ ಅಚ್ಚರಿಯ ದನಿ ಕೇಳಿಸ್ತು. 'ಮಾ ಇದು ನೀ ಮಾಡಿದ್ದ? its really nice. ಅದಕ್ಕೆ ಮಾಲವಿಕನೂ ದನಿ ಸೇರಿಸಿದ್ಲು'. ನಾನು ನಕ್ಕು ಸುಮ್ಮನಾದೆ. ಮತ್ತೆ ಸಂಜೆ ಸುಮಾರು ಹೊತ್ತಿನ ಬಳಿಕ ನಿಹಾ 'ಅಮ್ಮ ಕವರ್ ಪೇಜ್ ಕಳಿಸಿದ್ಯಾ' ಅಂತ ಕೇಳಿದ್ಲು..ನಾನು ಹೋಗೆ ನಾ ಕಳಿಸಲ್ಲ ಅಂದೆ. ಅವಳು ಪೀಡಸಲಿಕ್ಕೆ ಹತ್ತಿದ್ದಳು. ಮತ್ತೆ ನಾನು ಕೂತು ಅದಕ್ಕೆ'ವರ್ಣಮಯ' ಅಂತ ಹೆಸರು ಕೊಟ್ಟು ವಸುಧೇಂದ್ರರ ಹೆಸರು ಹಾಕಿದೆ.

ಹಾಗೆ ಇನ್ನೊಂದು ಕವರ್ ಪೇಜ್ ಮಾಡಿದೆ. ಮಕ್ಕಳಿಗೆ ಅದಷ್ಟು ಇಷ್ಟ ಆಗಲಿಲ್ಲ. ಆದರೂ ನನ್ನ favorite ಬ್ಲಾಕ್ ಕಲರ್ ಇತ್ತು ಅದರಲ್ಲಿ.

ಕಳಿಸುವ ಮುನ್ನ ಒಂದು ಸಲ ಆಲೋಚಿಸಿದೆ, 'ವಸುಧೇಂದ್ರರು ನನ್ನ ಮಿತ್ರರು' ನಾ ಕವರ್ ಪೇಜ್ ಮಾಡಿ ಕಳಿಸಿದ್ರೆ ಅದು ಸರೀ ನಾ ಅಂತ. ಅದರ ಹಿಂದೆನೆ' ಆದರೆ ಜಡ್ಜ್ ಸ್ ಗಳು ಬೇರೆಯವರು ಹಾಗಾಗಿ ಆರಾಮ ಆಗಿ ಕಳಿಸಬಹುದು ಅಂತ ಕಳಿಸಿಬಿಟ್ಟೆ.
ನನ್ನ ಪ್ರಕಾರ ಪುಸ್ತಕದ ಟೈಟಲ್ ವರ್ಣಮಯ ಅಂತ ಇದ್ರೆ ಅದರಲ್ಲಿ ವರ್ಣಗಳೇ ಇರಬೇಕಂತೇನಿಲ್ಲ. ಶ್ರೀಕಾಂತ್ ನನ್ನ ಕವರ್ ಪೇಜ್ ನೋಡಿ ಹಮ್ ಟೈಟಲ್ ಗೂ ಇದಕ್ಕೂ ಏನೂ ಮ್ಯಾಚ್ ಏ ಇಲ್ಲ 'it has nothing to do with colours(ವರ್ಣಮಯ) ಅಂದ್ರು. ಅದಕ್ಕೆ ನಾನು ವರ್ಣಮಯ ಅನ್ನೋದು ಬರೀಲಿಕ್ಕೆ ನಾಲ್ಕು ಬಣ್ಣಗಳನ್ನು ಉಪಯೋಗಿಸಿದೆ, ನನ್ನ ಫೇವ್ black & white ಸೇರಿಸಿ..:-) ಅಂದ ಹಾಗೆ ಆ ಚಿಟ್ಟೆ  ಕೂಡ ಬ್ಲಾಕ್ & ವ್ಹೈಟ್.
ಆದರೆ ಮಾಡಿದ ಮೇಲೆ ನನಗೆ ಈ ಕವರ್ ಪೇಜ್ ಮಾಡುವವರ ಮೇಲೆ ಗೌರವ ಇನ್ನಷ್ಟು ಹೆಚ್ಚಿದೆ. ಆದರೆ i really pity the judges who have a tough task ahead of them of choosing the winner from so many entries..
ನನಗಂತೂ ನಿಹಾ ಮಾಲು ಚೆನ್ನಾಗಿದೆ ಅಂದಿದ್ದೆ ನಾನು ಗಾಳಿಯಲ್ಲಿ ತೇಲಾಡ್ತಾ ಇದ್ದೀನಿ..ನಮ್ಮನೆಯಲ್ಲಿ ಸುಮ್ಮಸುಮ್ಮನೆ ಹೊಗಳಿಕೆಗೆ ಆಸ್ಪದವಿಲ್ಲ. ಅದಕ್ಕೆ if they say its nice..IT IS NICE!!!!
ಅಷ್ಟೆ ಅಲ್ಲ ಒಂದು ಚಿತ್ರ ಬರೆದು ಸೈ ಅನ್ನಿಸ್ಕೊಂಡೆ, ಒಂದು ಕವನ ಬರೆದು ಬೈಸಿಕೊಂಡೆ
ಇತ್ತೀಚಿನ ಮೂರು ತಿಂಗಳಲ್ಲಿ ನನ್ನ ಮಿತ್ರರೊಬ್ಬರು ಫೋನ್ ಮಾಡಿ ವಾಡಿಕೆಯಂತೆ ಏನ್ ಮಾಡ್ತಾ ಇದ್ದೀಯಾ ಅಂತ ಕೇಳಿದಾಗಲೆಲ್ಲ ನನ್ನ ಉತ್ತರ facebook ನಲ್ಲಿ ಹೊಕ್ಕೊಂಡಿದ್ದೀನಿ ಅಂತ ಇರುತ್ತೆ, ಅದಕ್ಕೆ ಅವರು do something constructive like reading writing drawing etc.. ಅಂದಿದ್ದರು. ರೀಡಿಂಗ್ ಮಾಡ್ತೀನಿ.ಕೆಲವೊಮ್ಮೆ ಬರಹ ಅಂತ ಏನೇನೋ ಗಿಚ್ತೀನಿ ಆದರೆ ಚಿತ್ರ ಬರೆಯೆಂದಾಗ ಮಾತ್ರ ನನಗೆ ಕಸಿವಿಸಿಯಾಗತ್ತೆ. ನೆಟ್ಟಗೆ ಒಂದು ಗೆರೆ ಎಳಿಲಿಕೆ ಬರಲ್ಲ ಅಂತದ್ದರಲ್ಲಿ ಚಿತ್ರ ಬರೆಯೋದಾ ಅಂತ ಅವರಿಗೆ ಮರುಪ್ರಶ್ನಿಸಿದೆ. ಅದಕ್ಕೆ ಅವರು, ’have you tried' ಅಂತ ಕೇಳಿದ್ರು ನಾನು ನೋ ಅಂದೆ.....ಇವತ್ತು ಟ್ರೈ ಮಾಡುವ ಅಂತ............:-)ಇದನ್ನು ನೋಡಿ ನಿಮಗೂ ನಗು ಬಂದ್ರೆ ನಕ್ಕು ಬಿಡಿ.....ನನ್ನ ಹಾಗೆ



"ನೀ ಹೃದಯಕ್ಕೆ ಇಟ್ಟ ಕಿಚ್ಚನ್ನು ತಣಿಸಲು ಕಣ್ಣೀರನ್ನು ಧಾರೆಧಾರೆಯಾಗಿ ಎರೆದೆ...ಬೆಂಕಿ ಆರಲಿಲ್ಲ
ನೋವಿನಿಂದ ಮಂಜುಗಡ್ಡೆಯಾದ ಹೃದಯಕ್ಕೆ ಕಣ್ಣೀರಿನ ಬಿಸಿ ಶಾಖ ಇತ್ತೆ...ಆದರದು ಕರಗಲಿಲ್ಲ "

ಈ ಕವನ ಬರೆದು ನನ್ನ ಆಪ್ತಮಿತ್ರರಿಂದ ಬೈಸಿಕೊಂಡ್ಡೆ. it does not suit your temperament ಅಂತ
ನಿನ್ನೆ ರಾತ್ರಿ ಕೂತು ಚುಕುಬುಕು ಸೈಟ್ ನ ಎಲ್ಲ ಕವರ್ ಪೇಜ್ ಗಳನ್ನು ನೋಡಿದೆ. ಕೆಲವು ತುಂಬಾssss ಚೆನ್ನಾಗಿವೆ. 
ಅಂದ haage ನನ್ನ ಕವರ್ ಪೇಜ್ ಮೆಚ್ಚಿದವರು ಒಬ್ರೆ ಯಾರೋ ರಾಜಪ್ಪ ಅಂತ.ತಪ್ಪಿ ನಂಬರ್ ಹಾಕಿರುವ ಸಾಧ್ಯತೆ ಇದೆ. ಆದರೂ ನನಗದು ಮುಗುಳ್ನಗೆ ಬರೆಸಿದೆ.:-) ನನ್ನ ಎಂಟ್ರೀ ಬಗ್ಗೆ ನಾನು ಯಾರಿಗೂ ಹೇಳಿರಲಿಲ್ಲ. ಈಗ ಹೇಗೂ final 15 ಫಲಿತಾಂಶ ಹೊರಬಂದಿದೆಯಲ್ಲ್ವ..ಅದಕ್ಕೆ ಈ ಪೋಸ್ಟ್. ನಿಮಗಿದು ಇಷ್ಟ ಆಯ್ತಾ, ಇಲ್ವಾ??

:-)

December 2, 2012

ಬಿಳಿ ಹೋಳಿಗೆ

ಬೇಕಾಗುವ ಸಾಮಾನು:
ಅಕ್ಕಿ ಹಿಟ್ಟು, ಮೈದಾ ಹಿಟ್ಟು, ನೀರು, ಉಪ್ಪು, ಸ್ವಲ್ಪ ಎಣ್ಣೆ
ಮೊದಲಿಗೆ ಮೈದಾಗೆ ನೀರು ಹಾಗಿ ಮೆತ್ತಗಿನ ಕಣಕ ತಯಾರಿಸಿಕೊಳ್ಳಿ. 
ಒಂದು ಗ್ಲಾಸ್ ನೀರನ್ನು ದಪ್ಪ ತಳೆಯ ಬಾಣಲೆಯಲ್ಲಿ ಬಿಸಿಮಾಡಲು ಇಡಿ. ಇದಕ್ಕೆ ಚಿಟಿಕೆ ಉಪ್ಪು ಹಾಗೂ 1/2ಟಿಸ್ಪೂನ್ ಎಣ್ಣೆ ಹಾಕಿ. ನೀರು ಮರಳಲು ಶುರು ಆದಾಗ ಅದಕ್ಕೆ ಮೂರು ಗ್ಲಾಸ್ ಅಕ್ಕಿ ಹಿಟ್ಟು ಬೆರೆಸಿ ಬೇಗ ಬೇಗ ಸಟ್ಟುಗದಿಂದ ಕೈಯಾಡಿಸಿ. ತಣಿದ ಮೇಲೆ ಅದನ್ನು ಚಪಾತಿ ಹಿಟ್ಟಿನಂತೆ ನಾದಿ ಕೊಳ್ಳಿ. ಮೈದಾ ಹಿಟ್ಟನ್ನು ಚಿಕ್ಕ ಚಪಾತಿ ಗಾತ್ರದಲ್ಲಿ ಲಟ್ಟಿಸಿ ಅದರಲ್ಲಿ ಅಕ್ಕಿ ಹಿಟ್ಟಿನ ಒಂದು round ನ್ನ ಇಡಿ.

ಈಗ ಎರಡನ್ನು ಸೇರಿಸಿ ಪುನ: ಉಂಡೆ ಮಾಡಿ,


ಸಾಧರಣ ಗಾತ್ರ ಚಪಾತಿ ಆಕಾರದಲ್ಲಿ ಲಟ್ಟಿಸಿ.

ಬಿಸಿ ಕಾವಲಿಯಲ್ಲಿ ಎಣ್ಣೆ ಹಾಕದೆ ಒಂದು ಬಟ್ಟೆ ಯಿಂದ ಒತ್ತಿ ಒತ್ತಿ ಉಬ್ಬಿಸಿ. ಬಿಳಿ ಹೋಳಿಗೆ ರೆಡಿ. ಇದಕ್ಕೆ ಯಾವುದಾದರೂ ಸೈಡ್ ಡಿಶ್ ನಡೆಯುತ್ತೆ. ನಾನು ಬೆಳ್ಳುಳ್ಳಿ ಚಟ್ನಿ ಮತ್ತು ಮೆಥಿ ದಾಲ ಮಾಡಿದೆ. ಬಿಸಿ ಹೋಳಿಗೆ ಮೇಲೆ ತಾಜ ಬೆಣ್ಣೆ ಕೂಡ ಸವರಬಹುದು.

with Methi daal and Garlic chutney as side dish
ಟ್ರಾವೆಲ್ ಮಾಡುವಾಗ/ಪಿಕ್ ನಿಕ್ ಗೆಲ್ಲ ಒಳ್ಳೆ ಡಿಶ್... soft ಆಗಿರತ್ತೆ ಮತ್ತು filling ಕೂಡ..ಅಂದ್ರೆ ಬೇಗ ಹಸಿವೆಯಾಗಲ್ಲ.
ಬಿಳಿ ಹೋಳಿಗೆ ಬಗ್ಗೆ ಹೇಳಿದ್ದು ನನ್ನ ಫೇಸ್ ಬುಕ್ ಸ್ನೇಹಿತೆ ಭಾಗ್ಯಶ್ರೀ... Thank you Bhagya. it was a great hit in our household
:-)

November 29, 2012

ಚಿಕ್ಕ ಚಿಕ್ಕು ಕತೆ

ಟೀ ಕುಡೀತಾ ಬಾಲ್ಕನಿ ಮೇಲೆ ಕೂತಾಗ ಹೊಳೆದ ಕತೆ>>>>(love you Brooke Bond Red Label chai)
ತೋಟದಿಂದ ಮನೆಗೆ ತಂದಿದ್ದ ದೊಡ್ಡ ಚಿಕ್ಕುಗಳನ್ನು ಮೃದುಲಾ ಹಣ್ಣಾ ಗಿಸಲು ಅವನ್ನು ಅಕ್ಕಿ ಡಬ್ಬಿಯಲ್ಲಿ ಹಾಕುತ್ತ ಇದ್ದಳು. ಅದರಲ್ಲಿ 5 ಕಾಯಿ ಚೆನ್ನಾಗಿ ಹಣ್ಣಾಗಿತ್ತು ಆಗಲೆ. ಅವನ್ನು ಬದಿಗಿಟ್ಟು, ಕೆಲಸದವಳು ಮೆನೆಕೆಲಸ ಮುಗಿಸಿ, ’ಹೋಗಿ ಬರ್ತೇನೆ ಅಕ್ಕ’ ಎಂದಾಗ...’ಈ ಚಿಕ್ಕುಗಳನ್ನು ಮನೆಗೆ ತೆಗೆದುಕೊಂಡು ಹೋಗು’ ಅಂತ ಅವಳ ಕೈಗೆ ಇತ್ತಳು. ಅವಳು ಹೋದ ಮೇಲೆ ಅಲ್ಲೆ ಇದ್ದ ಮೃದುಲಾಳ ತಂದೆ ಅವಳನ್ನು
 ತರಾಟೆಗೆ ತೆಗೆದುಕೊಂಡರು, ’ಅಷ್ಟು ಚೆನ್ನಾಗಿರೋ ರುಚಿಯಾಗಿರೋ ಹಣ್ಣನ್ನು ಆ ಕೆಲ್ಸದವಳಿಗೆ ಕೊಡ ಬೇಕಿತ್ತೆ? ಎದುರು ಮನೆಯ ಛಾಯಾಪತಿ ಮನೆಗೆ ಕಳಿಸಬಹುದಿತ್ತು.’
ಮೃದುಳಲಿಗೆ ಈಗ ಆಲೋಚನೆ, ಅಲ್ಲ ಆ ಛಾಯಾಪತಿಯವರ ಕುಟುಂಬ ಅಮೇರಿಕಾದಿಂದ ಬಂದವರ ತರಹ ಆಡ್ತಾರೆ, ಮಾತು ಮಾತಿಗೆ ರಾಂಬುಟಾನ್, ಸ್ಟ್ರಾಬೆರ್ರಿ, ರಾಸ್ಪಬೆರ್ರಿ ಅಂತಾರೆ ವಿನ ಭಾರತ ದೇಶದ ಹಣ್ಣಿನ ಹೆಸರು ಸುದ್ದಾ ಉಸುರಿಸಲ್ಲ. ಅವರಿಗೆ ಚಿಕ್ಕು ಕೊಟ್ಟರೂ ಅದೂ ಗ್ಯಾರಂಟಿ ಕಸದ ಬುಟ್ಟಿಗೆಸೇರುತ್ತೆ ಅಂತ ಅವಳಿಗೆ ಗೊತ್ತು, ಆದರೆ ಯಾರಿಗೂ ಎದುರು ಮಾತಾಡುವ ಸ್ವಭಾವ ಮೃದುಲಾಳದಲ್ಲ್ಲ. ’ಅಲ್ಲ ಅವರು ಉಳ್ಳವರು ಹಣ್ಣನ್ನು ಕಾಸುಕೊಟ್ಟು ತಂದುಕೊಂಡು ತರುತ್ತಾರೆ. ನೂರಾರು quantityಯಲ್ಲಿ ನಮ್ಮ ತೋಟದಲ್ಲಿ ಬೆಳೆದ ಐದು ಚಿಕ್ಕು ಹಣ್ಣನ್ನು ಕೆಲಸದವಳಿಗೆ ಕೊಟ್ಟ ಮಾತ್ರಕ್ಕೆ ಪ್ರಳಯ ಬರುತ್ತಾ??? ಮತ್ತೆ ಮೃದುಲಾ ಅವಳಿಗೆ ಸರಿ ಎನಿಸಿದ್ದನ್ನು ಮಾಡುವವಳೆ ಬಿಡಿ..
ಆದರು ಆಲೋಚಿಸಿ: ನಾವು ಉಳ್ಳವರಿಗೆ ಕೊಡುತ್ತೇವಲ್ಲವೇ (for eg ಗೃಹ ಪವೇಶ, ಮದುವೆ, ಮುಂಜಿ, ಹುಟ್ಟುಹಬ್ಬ ಇತ್ಯಾದಿಗಳಿಗೆ...ಇಲ್ಲದ್ದವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ (ನಾವು= most cases)
ಮೊದಲೇ ಕಂಜೂಸ್ ಎಂದು ಖ್ಯಾತಿ ಪಡೆದ ನಾ ಇನ್ನು ಮುಂದೆ ಯಾರಿಗೂ ಗಿಫ್ಟ್ ಕೊಡಲ್ಲ..:-))))

November 17, 2012

................??ವಿಷಾಧಬಂಧ

ಪತ್ತೆದಾರರಿಗೆ ಜೆನೆಟ್ ಹೇಳಿ ಕಳಿಸಿದ್ದಳು. ಆಕೆಯ ಪತಿ 4 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದನು. ಎಷ್ಟೆ ಆಲೋಚನೆ ಮಾಡಿದರೂ ಆತ ಯಾಕೆ ಹಾಗೆ ಮಾಡಿದ ಎಂಬುದೆ ಅವಳಿಗೆ ತಲೆ ತಿನ್ನುತ್ತಿತ್ತು. ಅವರಿಬ್ಬರೂ ಸೇನೆಯಲ್ಲಿದ್ದವರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಸೇವೆಯಿಂದ ನಿವೃತ್ತಿ ಹೊಂದಿದವರು. ಯಾವುದೋ ಒಂದು ಬಾಲ್ ಪಾರ್ಟಿ ಯಲ್ಲಿ ಸಿಕ್ಕಿ ಒಬ್ಬರಿಗೊಬ್ಬರ ಪರಿಚಯವಾಗಿತ್ತು. ಇಬ್ಬರೂ ಅನಾಥರು. ಹಾಗಾಗಿ ಸ್ವಲ್ಪ ವಯಸ್ಸಾಗಿದ್ದರೂ, ಒಬ್ಬರಿಗೂಬ್ಬರು ಕಂಪೆನಿಯಾಗಬಹುದೆಂದು ಮದುವೆಯಾಗಿದ್ದರು. ಮದುವೆಯಾಗಿ ಎರಡು ವರ್ಷಗಳ ಬಳಿಕ ಈ ದುರ್ಘಟನೆ. ಇಬ್ಬರಿಗೂ ಹೇಳಿಕೊಳ್ಳ್ಳುವಂತ ಆತ್ಮೀಯರು ಯಾರೂ ಇರಲಿಲ್ಲ. ಒಬ್ಬರಿಗೊಬ್ಬರಿದ್ದರು ಅಷ್ಟೆ.
ಪೋಲಿಸರಿಗೂ ಏನೂ ಹೊಳೆದಿರಲಿಲ್ಲ. ಅದಕ್ಕೆ ಅವಳು ಪತ್ತೆದಾರರನ್ನು ನೇಮಿಸಿದಳು. ಪತ್ತೆದಾರರು ಮನೆಯನ್ನು ಶೋಧಿಸುತ್ತಿದ್ದಾಗ ಅವರ ಕೈಗೆ ಒಂದು ಫೈಲ್ ಸಿಕ್ಕಿತು. ಆ ಫೈಲ್ ಫೋಲ್ಡರ್ ನಲ್ಲಿ ಕೆಲವು ಕಾಗದ ಪತ್ರಗಳ ಜತೆಗೆ ಒಂದು ಚೈನ್ ಹಾಗೂ ಅದಕ್ಕೆ ತಗುಲಿರುವ ಲಾಕೆಟ್ ಸಿಕ್ಕಿತು. ಅವರು ಲಾಕೆಟ್ ಅನ್ನು ಪರಿಶೀಲಿಸುವಾಗ ಅವಳೆ ಮುಂದಾಗಿ,
'ಆ ಚೈನ್ ನನ್ನದು. ಅದರ ಕೊಂಡಿ ತುಂಡಾಗಿದೆಯಂತ ಹಿಂದಿನ ವಾರ ನಾನು ಸೋಮನ್ ಕೈಲಿ ರಿಪೈರಿಗೆ ಅಂತ ಕಳಿಸಿದ್ದೆ. ಆದರೆ ಅದನ್ನು ಫೈಲ್ ನಲ್ಲೇ ಮರೆತಿದ್ದರು ಅನ್ನಿಸುತ್ತೆ'
ಪತ್ತೇದಾರ ಆ ಲಾಕೆಟ್ ಅನ್ನು ಆಚೀಚೆ ತಿರುಗಿಸುವಾಗ ಹೇಗೋ ಆ ಲಾಕೆಟ್ ತೆರೆದುಕೊಂಡಿತು. ಅದರಲ್ಲಿ ಒಂದು ಫೋಟೊ. ಆ ಫೋಟೊದಲ್ಲಿ ನಗುಮುಖದ ಇಬ್ಬರು ಮಕ್ಕಳು-ಡೊಡ್ಡವನು ಹುಡುಗ. ಪುನ: ಜೆನೆಟ್ ಲೇ ಮುಂದಾಗಿ,
'ನನಗೆ ಬುದ್ದಿ ಬಂದಾಗಿನಿಂದ ಅದು ನನ್ನ ಕೊರಳಿನಲ್ಲಿದೆ. ಬಹುಶ: ಅನಾಥಾಶ್ರಮಕ್ಕೆ ಸೇರಿಸುವಾಗ ನನ್ನ ತಂದೆಯೋ ತಾಯಿಯೋ ನನ್ನ ಕೊರಳಿಗೆ ಹಾಕಿರಬಹುದು'
ಚಿತ್ರ ಮಿನಿಯೇಚರ್ ಗಾತ್ರದ್ದು ಇದ್ದುದರಿಂದ ಅದರಲ್ಲಿನ ಮುಖ ಸರಿಯಾಗಿ ಕಾಣುತ್ತಿರಲಿಲ್ಲ. ಪತ್ತೆದಾರರು ಅವರ ಪರಿಚಯವಿರುವ ಛಾಯಾಗ್ರಾಹಕರ ಬಳಿ ಅದನ್ನು ಕೊಂಡೊಯ್ದು ಆ ಚಿತ್ರದ ಬ್ಲೊ ಅಪ್ ಒಂದನ್ನು ಮಾಡಿಸಿದರು.ಆ ಫೋಟೊದಲ್ಲಿನ ಹುಡುಗಿ ಮುಖಕ್ಕೂ ಜೆನೆಟ್ ಗೂ ಸಾಮ್ಯವಿತ್ತು  ಆ ಫೋಟೊದ ಕೆಳಗಡೆ ಸೂಕ್ಷ್ಮವಾಗಿ ನೋಡಿದರೆ ಒಂದು ಶಿಲುಬೆ ಆಕಾರ ಹಾಗೂ ಊರಿನ ಹೆಸರು ಕಾಣಸಿಕ್ಕಿತು. ನಮ್ಮ ಪತ್ತೆದಾರರ ಟೀಮ್ ಆ ಊರಿಗೆ ಹೋಯಿತು. ಅದೊಂದು ಪುಟ್ಟ ಊರು. ಹೆಚ್ಚಿನವರೆಲ್ಲ ಕ್ರಿಶ್ಚಿಯನ್ನರೆ. ಆ ಊರಿನ ಇಗರ್ಜಿಗೆ ತಾಗಿದ ಹಾಗೆ ಒಂದು ಅನಾಥಾಶ್ರಮ. ಅಲ್ಲಿಗೆ ಹೋದರು ಇವರೆಲ್ಲ. ತುಂಬ ಹಳೆಯ ರೆಕಾರ್ಡ್ ಗಳು ಅಲ್ಲಿ ಸಿಗುವುದು ಇವರಿಗೆ ಅನುಮಾನವಿತ್ತು. ಅಲ್ಲಿನ ಕಛೇರಿಯಲ್ಲಿ ಕೆಲಸ ಮಾಡುವವರೆಲ್ಲ ತರುಣರು. ಆದರೂ ಅವ್ರಿಗೆ ಕೇಳಿದರು. ಅವರಲ್ಲಿ ಒಬ್ಬರು, ತಡಿರೀ, ನಮ್ಮ ಅಂಟೋಣಿಯವರಿಗೆ ಕೇಳುವ. ಅವರು 90 ವರ್ಷ ವಯಸ್ಸಿನವರಾದರೂ ಬುದ್ದಿ ಮತ್ತು ನೆನಪು ತುಂಬ ಚುರುಕಾಗಿದೆ. ಸರಿ, ಅಂಟೋನಿಗೆ ಬುಲಾವ್ ಹೋಯಿತು. ಮುದುಕ ಅಂಟೋನಿ ನಿಧಾನವಾಗಿ ಕೋಲು ಹಿಡಿದು ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಬಂದ. ಅವನಿಗೆ ಲಾಕೆಟ್ ತೋರಿಸಲಾಯಿತು. ’ಅರೇ ಮೊನ್ನೆ ಭಾನುವಾರ ಅಷ್ಟೆ ಇನ್ನೊಬ್ಬ ವ್ಯಕ್ತಿ ಈ ಲಾಕೆಟ್ ಬಗ್ಗೆ ಕೇಳಿ ಹೋದರು. ಅವರಿಗೆ ಹೇಳಿದ ಹಾಗೆ ನಿಮಗೂ ಹೇಳುತ್ತೇನೆ. ’ಯುದ್ದದ ಸಮಯ ಆಗ ಏನು ಕಷ್ಟವೋ ಏನೋ ಆ ತಾಯಿ ಇಬ್ಬರು ಮಕ್ಕಳನ್ನು ಇಲ್ಲಿ ತಂದು ಬಿಡುವಾಗ ನಾನೇ ಇಲ್ಲಿದ್ದೆ. ಇಬ್ಬರ ಕುತ್ತಿಗೆಯಲ್ಲೂ ಸಮಾನಾದ ಚೈನೂ- ಲಾಕೆಟ್. ಹೆಣ್ಣು ಮಗು ತುಂಬ ಚಿಕ್ಕದು. ಇನ್ನೂ ತಾಯಿ ಹಾಲು ಕುಡಿಯುವ ಹಸುಳೆ.ಹಸಿವೆಯಿಂದಲೋ ಏನೋ ತುಂಬ ಅಳುತ್ತಿತ್ತು. ನಾನು ಹಾಗೂ ಫಾದರ್ ಆ ಮಗುವಿಗೆ ಹಾಲಿನ ಏರ್ಪಾಡು ಮಾಡಲು ಒಳಗೆ ಹೋದೆವು, ನಾವು ಬರುವಷ್ಟರಲ್ಲಿ ಆ ತಾಯಿ ಪರಾರಿ. ಸಾಧಾರಣ 5 ವರ್ಷದ ಹುಡುಗ ಮಾತ್ರ ಸುಮ್ಮನೆ ಎಲ್ಲ ಪಿಳಿ ಪಿಳಿ ಕಣ್ಣು ಬಿಟ್ಟು ನೋಡುತ್ತಿದ್ದ. ಕೊಂಕಣಿ ಭಾಷೆ ಮಾತನಾಡುತ್ತಿದ್ದ. ಆ ರಾತ್ರಿ ಭೀಕರ ಯುದ್ದ. ಒಂದಾದ ಮೇಲೆ ಒಂದು ಬಾಂಬ್ ಸ್ಪೋಟ. ನಮ್ಮ ಈ ಹಳೇ ಅನಾಥಾಶ್ರಮದಲ್ಲಿ ಒಂದು ನೆಲಮನೆಯಿತ್ತು. ಆಶ್ರಮದ ಇತರೇ ಮಕ್ಕಳನ್ನೆಲ್ಲ ಒಟ್ಟು ಮಾಡಿ ಎರಡು ರಾತ್ರಿ ಅಲ್ಲೇ ಕಳೆದೆವು. ಮೂರನೆ ದಿನ ನಾವೆಲ್ಲ ಹೊರಗೆ ಬಂದು ನೋಡಿದ್ದಾಗ ಊರಿಗೆ ಊರೆ ಧ್ವಂಸ. ಇಬ್ಬರಿಗೂ ಹೆಸರು ನಾವೇ ಇಟ್ಟಿದ್ದು ಜೆನೆಟ್ ಮತ್ತು ಜೇಜು.
ಕೆಲ ತಿಂಗಳ ನಂತರ ಒಂದು ಹಿಂದು ಕುಟುಂಬ ಆ ಹುಡುಗನನ್ನು ದತ್ತು ತೆಗೆದುಕೊಂಡು ಹೋದರು. ಅದರ ವಿವರಗಳೆಲ್ಲ ಕಡೆತದಲ್ಲಿದ್ದವು. ಮೊನ್ನೆ ಬಂದ ವ್ಯಕ್ತಿಗೋಸ್ಕರ ಮೇಲ್ಛಾವಣಿಯಲ್ಲಿದ್ದ ಧೂಳು ತುಂಬಿದ ಕಡತಗಳನ್ನೆಲ್ಲ ತೆಗೆದು ಅಂದಾಜಿನಲ್ಲಿ ನಾಲ್ಕೈದು ಕಡತ ಹುಡುಕುತ್ತಿದ್ದ ಹಾಗೆ ನಮಗೆ ಆ ದತ್ತು ತೆಗೆದುಕೊಂಡ ಹುಡುಗನ ಪರಿವಾರದವರ ಅಡ್ರೆಸ್ ಸಿಕ್ಕಿತು. ಬಂದ ವ್ಯಕ್ತಿ ಒಂದು ದೊಡ್ಡ ಮೊತ್ತದ ಸಹಾಯಧನದ ರೂಪದಲ್ಲಿ ಚೆಕ್ ಬರೆದುಕೊಟ್ಟು ಅ ವಿಳಾಸ ಬರೆದುಕೊಂಡು ಹೋದರು’ ಇಲ್ಲಿಗೆ ಮಾತು ನಿಲ್ಲಿಸಿದ ಅಂಟೋನಿ. ಪತ್ತೆದಾರರೂ ಆ ವಿಳಾಸವನ್ನು ನೋಟ್ ಮಾಡಿಕೊಂಡು
ಮತ್ತೆ ಆ ಹುಡುಗಿ ಅವನ ತಂಗಿ, ಅವಳ ವಿಚಾರ ಏನಾದರೂ ಗೊತ್ತೇ?? ’ಹಾಂ ಅವಳು ನಮ್ಮ ಇಗರ್ಜಿ ಶಾಲೆಯಲ್ಲೇ 5 ಕ್ಲಾಸ್ ತನಕ ಓದಿ, ಮತ್ತೆ ಒಂದು ರೆಸಿಡೆಂಶಿಲ್ ಶಾಲೆಗೆ ವರ್ಗಾಯಿಸಳಾದಳು. ಆ ಶಾಲೆಯ ವಿಳಾಸ ನಮ್ಮ ಕಛೇರಿಯವರು ನಿಮಗೆ ನೀಡುತ್ತಾರೆ”
ರೆಸಿಡೆಂಶಿಯಲ್ ಶಾಲೆಗೆ ಹೋಗಿ ವಿಚಾರಿಸಿದಾಗ ಅವರು ಹೀಗೆ ಹೇಳಿದರು’ಓದಿನಲ್ಲಿ ತುಂಬ ಚುರುಕು ಜೆನೆಟ್. ಮುಂದೆ ಅವಳು ವಾಯುಸೇನೆ ಯಲ್ಲಿ ಭರ್ತಿ ಯಾದಳು. ನಮ್ಮ ರೆಸಿಡೆಂಶಿಯಲ್ ಶಾಲೆಯ ಒಂದು ನಿಯಮವಿದೆ. ಕೆಲಸಕ್ಕೆ ಹೋಗುವವರು ಅವರ ಮದುವೆಯಾಗುವ ತನಕ ಅವರ ಸಂಬಳದಲ್ಲಿನ ಸ್ವಲ್ಪ ಮೊತ್ತ ಶಾಲೆಗೆ ನೀಡಬೇಕೆಂದು. ಇತ್ತಿಚಿನ ಎರಡು ವರ್ಷಗಳ ಹಿಂದೆ ಅವಳಿಗೆ ಮದುವೆಯಾಯಿತು. ಮೊನ್ನೆ ಕ್ರಿಸ್ ಮಸ್ ಗೆ ಒಂದು ಕಾರ್ಡ್ ಕಳಿಸಿದ್ದಳು. ಯಾಕೆ ಅವಳ ವಿಚಾರ ಕೇಳುತ್ತಿದ್ದೀರಿ? ಅವರಿಗೆ ಏನೋ ಒಂದು ಉತ್ತರ ಕೊಟ್ಟು ಪತ್ತೆದಾರರು ಮುಂದಿನ ವಿಳಾಸ ಹುಡುಕಿ ಹೊರಟರು.
ಆ ವಿಳಾಸ ಹುಡುಕಿಕೊಂಡು ಹೋದರು. ಅದು ಬೇರೆಯದೇ ಊರಾಗಿತ್ತು. ಅಲ್ಲಿ ತಲುಪಿದಾಗ ರಾತ್ರಿ. ಸರಿ ವಿದ್ಯುತ್ ವ್ಯವಸ್ಥೆ ಕೂಡ ಇರಲಿಲ್ಲ ಆ ಊರಲ್ಲಿ. ಆ ರಾತ್ರಿ ಅಲ್ಲಿನ ಚಿಕ್ಕ ಹೋಟಲ್ ನಲ್ಲಿ ತಂಗಿದ್ದು, ಬೆಳಿಗ್ಗೆ ಅವರ ಕಾರ್ಯ ಶುರು ಮಾಡಿದರು. ಮನೆ ಪತ್ತೆ ಹಚ್ಚಲು ತುಂಬ ಕಷ್ಟ ಪಡಬೇಕಾಗಲಿಲ್ಲ. ಹೋಟಲ್ ನ ಮಾಣಿಯೇ ಅವರಿಗೆ ಅಲ್ಲಿ ಕರೆದುಕೊಂಡು ಹೋಗಿ ಆ ಮನೆಯನ್ನು ತೋರಿಸಿದ್ದ. ಪಾಳು ಬಿದ್ದ ದೊಡ್ಡದಾದ ಬಂಗಲೆ. ಆದರು ಮನೆಯಂಗಳ ಗುಡಿಸಿ ನೀಟ್ ಆಗಿಟ್ಟಿದ್ದರಿಂದ ಅಲ್ಲಿ ಯಾರೋ ವಾಸಿಸ್ತಾ ಇರುವ ಕುರುಹು ಸಿಕ್ಕಿತು. ಮನೆಯ ಬಾಗಿಲಿಗೆ ಬಡಿದಾಗ, ಸುಮಾರು ಹೊತ್ತಾದ ಮೇಲೆ ಇಲ್ಲಿಯೂ ಕೂಡ ಓರ್ವ ಮುದುಕ ನಿಧಾನಕ್ಕೆ ಬಂದು ಬಾಗಿಲು ತೆಗೆದ. ದೃಷ್ಟಿ ಪೂರ್ತಿ ಮಂಜಾಗಿದ್ದು ಕಷ್ಟ ಪಟ್ಟು ಬಂದವರನ್ನು ನೋಡ ಹತ್ತಿದರು.ಅವರಿಗೆ ಲಾಕೆಟ್ ನಲ್ಲಿದ್ದ ಫೋಟೊ ಸರಿ ಕಾಣುತ್ತಿರಲಿಲ್ಲವಾಗಿ, ಬ್ಲೋ ಅಪ್ ಮಾಡಿದ ಫೋಟೊ ನೇ ತೋರಿಸಿದರು. ಅವರು ಏನೋ ಆಲೋಚಿಸುವವರಂತೆ ಪುನ: ಒಳಗೆ ಹೋಗಿ ಇವರ ಬಳಿಯಿದ್ದ ಲಾಕೆಟ್ ತರಹದ್ದೆ ಇನ್ನೊಂದು ಲಾಕೆಟ್ ತಂದು ಇವರ ಮುಂದೆ ಇರಿಸಿದರು. ಮಾತನಾಡುವಾಗ ದನಿ ಅದುರುತ್ತಿತ್ತು.
"ಸೋಮು ನಮ್ಮ ಮನೆಗೆ ಬಂದಾಗ ಈ ಲಾಕೆಟ್ ಚೈನ್ ಅವನ ಕುತ್ತಿಗೆಗಿತ್ತು. ಅವನನ್ನು ದತ್ತು ಪಡೆದ ಈ ಮನೆಯವರು ಅವನನ್ನು ಸ್ನಾನ ಮಾಡಿಸಿ ತರಲು ನನಗೆ ಹೇಳಿದರು. ಹಾಗೆ ಆ ಚೈನ್ ನ್ನೂ ತೆಗೆದಿಡಲು ಸೂಚಿಸಿದರು. ನಾನು ಆ ಚೈನ್ ಅನ್ನು ನನ್ನ ಬಳಿಯೇ ಇರಿಸಿಕೊಂಡೆ. ಇದಾದ ಕೆಲ ದಿನದ ನಂತರ ರಾತ್ರಿ ಎಲ್ಲಿಂದಲೋ ಕಾರ್ ನಲ್ಲಿ ಮರಳುತ್ತಿರುವಾಗ, ಕಾರ್ ಎಕ್ಸಿಡೆಂಟ್ ನಲ್ಲಿ ಇಬ್ಬರೂ ತೀರಿಕೊಂಡರು. ದತ್ತು ಪ್ರಕ್ರಿಯೆ ಇನ್ನೂ ಮುಗಿದಿರಲಿಲ್ಲ. ಎಲ್ಲಿ ಎಲ್ಲ ಆಸ್ತಿ ಆ ಹುಡುಗನಿಗೇ ಹೋಗುತ್ತೋ ಅಂತ ಅವರ ದಾಯಾದಿಗಳು ಈ ಪುಟ್ಟ ಹುಡುಗನಿಗೆ ಕಿರುಕುಳ ನೀಡಲು ಆರಂಭಿಸಿದರು. ಆ ಮೇಲೆ ಒಂದು ದಿನ ಸೋಮು ಕಾಣೆಯಾದ. ಕೆಲಸದವನಾದ ಏನು ಮಾಡಲು ಸಾಧ್ಯವಿತ್ತು?
ನಮ್ಮ ಪತ್ತೇದಾರರು ಒಂದಕ್ಕೊಂದು ತಾಳೆ ಹಾಕಿ ಸೋಮು ಯಾಕೆ ಆತ್ಮಹತ್ಯೆ ಮಾಡಿಕೊಂಡನು ಅಂತ ಅಂದಾಜಿಸಿದರು.
ಅವರು ಗೊತ್ತಿಲ್ಲದೆ ಘೋರ ಅಪರಾಧ ಮಾಡಿದ್ದರು. ತಮ್ಮ ತಂಗಿಯನ್ನೆ ಮದುವೆಯಾಗಿ ಅವಳ ಜತೆ ದೈಹಿಕ ಸಂಬಂಧ ಹೊಂದಿದ್ದರು. ಈ ಆಘಾತ ತಡೆಯಲಾಗದೆ ಜೆನೆಟ್ ಗೂ ಹೇಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದನು.
ಪತ್ತೆದಾದರು ಜೆನೆಟ್ ಬಳಿ ಹೋಗಿ’ನಮಗೂ ಕಾರಣ ತಿಳಿಯಲಾಗಲಿಲ್ಲ’ ನನ್ನನ್ನು ಕ್ಷಮಿಸಿ ಬಿಡಿ ಅಂತ ಕೇಳಿಕೊಂಡನು. ಇದನ್ನು ಕೇಳಿದ ಪತ್ತೇದಾರರ ಜ್ಯೂನಿಯರ್, ಯಾಕೆ ಸುಳ್ಳು ಹೇಳಿದ್ರಿ? ಅವರು ಯಾಕೆ ಆತ್ಮಹತ್ಯೆ ಮಾಡಿಕೊಂಡದ್ದು ಅಂತ ನಮಗೆ ತಿಳಿದಿದೆಯಲ್ಲ?’
’ಸತ್ಯ ಗೊತ್ತಾಗಿ ಅವರೂ ಆತ್ಮಹತ್ಯೆ ಮಾಡಿಕೊಂಡ್ರೆ’ ಅವರದಲ್ಲದ ಪಾಪಕ್ಕೆ ಅವರನ್ನು ಯಾಕೆ ಹೊಣೆಮಾಡಿ ಅವರಲ್ಲೂ ಪಾಪಪ್ರಜ್ಝೆ ತುಂಬುವುದು. ಬದುಕಿಕೊಳ್ಳಲಿ ಬಿಡು.
(ಈ ಕತೆಗೆ ಸ್ಪೂರ್ತಿ ಕೆ.ಎನ್. ಗಣೇಶಯ್ಯನವರ ನೇಹಲ ಕಥಾಸಂಕಲದಲ್ಲಿನ ಕತೆ ’ನಿಷಿದ್ದಬಂಧ’ ಹಾಗೂ ಯಾವಾಗಲೋ ಚಿಕ್ಕಂದಿನಲ್ಲಿ ಅಂಗಡಿಯಿಂದ ಸಾಮಾನು ಕಟ್ಟಿಸಿ ಬಂದ ಮರಾಠಿ ಪೇಪರ್ ನಲ್ಲಿ ಬಂದ ಇಂತಹುದೊಂದು ಕತೆಯ ನೆನಪಿನ ಆಧಾರದ ಮೇಲೆ.)
:-)

November 7, 2012

ಹೀಗೂ ಉಂಟಂತೆ!!!

ಮೊನ್ನೆ ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಾ ಬಸ್ ನಲ್ಲಿ ಕೇಳಿಸಿಕೊಂಡಿದ್ದು.
ನನ್ನ ಪಕ್ಕದ ಸೀಟನಲ್ಲಿಬ್ಬರು ಗಟ್ಟಿಯಾಗೇ ಮಾತಾಡ್ತಾ ಇದ್ದರು. ಆದ್ದರಿಂದ ಕದ್ದು ಕೇಳಿದ್ದು ಅಂತ ಹೇಳಲಿಕ್ಕೆ ಆಗಲ್ಲ.
ಪಕ್ಕದ ಸೀಟ್ ಅಂದ್ರೆ ನಾನು ಹೋಗಿದ್ದು 2 + 1 ಬಸ್ ನಲ್ಲಿ
ಸೋ ಅವರ ಸಂಭಾಷಣೆ ಹೀಗೆ ಸಾಗಿತ್ತು. ಕಿಟಕಿ ಬಳಿ ಕೂತವರು ಒಬ್ಬ ಇಕೊನೋಮಿಕ್ ಕನ್ಸಲ್ಟೆಂಟ್ ಅಂತೆ. ಇತ್ತೀಚಿಗೆ ಮಧ್ಯಪದ್ರೇಶದ ಒಂದು ಊರಿಗೆ ದೊಡ್ಡ ಕಂಪೆನಿ ಒಂದಕ್ಕೆ ಕನ್ಸಲ್ಟೆಂಟ್ ಆಗಿ ಹೋಗಿದ್ದರಂತೆ. ಆಗ ಸೆಕೆ ಸಮಯ. ಒಂದು ಸಂಜೆ ತುಂಬ ಸೆಕೆ ಎನಿಸಿ, ಅವರು ಉಳಿದುಕೊಂಡಿದ್ದ ಗೆಸ್ಟ್ ಹೌಸ್ ಮೇಲ್ವಿಚಾರಕನಿಗೆ, ಒಂದು ಬೀಯರ್ ಹೊಡೆಯುವ ಅಂದಾಜಲ್ಲಿ, ’ಇಲ್ಲಿ ಡ್ರಿಂಕ್ಸ್ ಎಲ್ಲಿ ಸಿಗತ್ತೆ’ ಅಂತ ಕೇಳಿದನಂತೆ. ಗೆಸ್ಟ್ ಹೌಸ್ ಪಕ್ಕದ ರೋಡ್ ತೋರಿಸಿ ’ಯಾಹಾಂ ಸೆ ಏಕ್ ಹೀ ರಾಸ್ತಾ, ದೊ ಕಿಲೋಮಿಟರ್ ಕಿ ದೂರಿ ಪರ್ ಹೈ, ಕಾರ್ ಮಂಗವಾವೂಂ ಸಾಬ್?’ ಅಂತ ಕೇಳಿದನಂತೆ. ನಮ್ಮ ನೆರೇಟರ್ (narrator) ಸಾಹಬರಿಗೆ ಒಂದು ಬ್ರೇಕ್ ಬೇಕಿತ್ತಂತೆ ಹಾಗೂ ಎಕ್ಸರ್ಸೈಝ್ ಆದ ಹಾಗಾಗುತ್ತೆ ಅಂತ ’ಪೈದಲ್ ಚಲೂಂಗಾ, ಗಾಡಿ ಕಿ ಜರೂರತ್ ನಹೀಂ’ ಅಂತ ಹೇಳಿ ಸವಾರಿ ಆ ಕಡೆ ಹೆಜ್ಜೆ ಹಾಕಿತಂತೆ..:-) 
ಒಂದು ಕಿ.ಮಿ ನಡೆದ ನಂತರ ಒಂದು ಸೈನ್ ಬೋರ್ಡ್ ಸಿಕ್ಕಿತಂತೆ...***** ಕ್ಲಬ್ -1 km ಅಂತ. ಇನ್ನಷ್ಟು ನಡೆದುಕೊಂಡ ಹೋದ ಮೇಲೆ ಕ್ಲಬ್ ನ ಗೇಟ್ ಸಿಕ್ಕಿತಂತೆ. ಗೇಟ್ ನಿಂದ ಕ್ಲಬ್ ಒಂದು ಫರ್ಲಾಂಗ್ ಇತ್ತಂತೆ. ಒಳಗೆ ನಡೆದು ರಿ ರಿಸೆಪ್ಷನ್ ಬಳಿ ಹೋಗುವಷ್ಟರಲ್ಲಿ ಅಲ್ಲಿನ ವಾಚ್ ಮನ್ ’ಆಪ್ ಅಂದರ್ ನಹೀಂ ಜಾ ಸಕ್ತೆ’ ಅಂತ ದಾರಿಗೆ ಅಡ್ಡ ನಿಂತನಂತೆ. ಯಾಕಪ್ಪ ಅಂತ ಕೇಳಿದ್ರೆ, ’ನೀವು ಶೂ ಹಾಕಿಕೊಂಡಿಲ್ಲ’ ಅಂತ ಹೇಳಿದ್ನಂತೆ. ದಿನ ಇಡೀ ಶೂ ಹಾಕಿದ್ದು, ಸಾಕ್ಸ್ ಗೆ ವಾಸನೆ ಹೊಡೆಯುತ್ತೆ ಅಂತ ಹಾವಾಯಿ ಚಪ್ಪಲ್ ಹಾಕಿಕೊಂಡು ಬಂದಿದ್ದರಿವರು. ’ದೂರದಿಂದ ನಡೆದುಕೊಂಡು ಬಂದಿದ್ದೇನೆ, ****** ಕಂಪೆನಿ ಕೆಲ್ಸದ ಮೇಲೆ ಬಂದಿದ್ದೆ ಅಂದರೂ ಅವನದ್ದು ಒಂದೇ ವರಾತ ವಂತೆ no shoe no entry..ಸರಿ ಇನ್ನು ಇವನ ಜತೆ ಏಗಿ ಪ್ರಯೋಜನವಿಲ್ಲ, ಬಂದ ದಾರಿಗೆ ಸುಂಕವಿಲ್ಲ ಅಂತ ನಮ್ಮ ನೆರೇಟರ್ ಮಹಾಶಯರು ಇನ್ನೇನು ಗೇಟ್ ಬಳಿ ತಲುಪುವಷ್ಟರಲ್ಲಿ, ಒಂದು ಕಾರ್ ಬಂದು ಅವರ ಬಳಿ ನಿಂತು, ಅವರ *****ಕಂಪಿನಿಯ ಹಿರಿಯ ಅಧಿಕಾರಿ ಇಳಿದು, ’ಇದೇನಿದು ಇಷ್ಟು ಬೇಗ ಹೊರಟಾಯಿತೆ? ಇವತ್ತು ಒಂದೊಳ್ಳೆ ಗಜಲ್ ಕಾರ್ಯಕ್ರಮ ಇದೆ, ಕೇಳಿಕೊಂಡು ಹೋಗಬಹುದಿತ್ತು’. ’ಇಲ್ಲ ಶೂ ಇಲ್ಲದ ಕಾರಣ ಒಳಗೆ ಬಿಡಲಿಲ್ಲ.’ ಅರೇ ಬನ್ನಿ ನನ್ನ ಜತೆ, ಅಂತ ರೆಸೆಪ್ಪ್ಷನ್ ಬಳಿ ಹೋಗಿ ಅಲ್ಲಿ ಸಹಿ ಹಾಕಿ (ಅವರು ಅಲ್ಲಿನ ಮೆಂಬರ್ ಅಂತೆ, ವರ್ಷಕ್ಕೆ ಒಂದು ಲಕ್ಷ ಮೆಂಬರ್ ಶಿಪ್ ಫೀ ಅಂತೆ). ರಿಸೆಪ್ಷನಿಷ್ಟ್ ಬಳಿ ಹಿರಿಯ ಅಧಿಕಾರಿ ಗುಸು ಪುಸು ಏನೋ ಮಾತಾಡಿದರಂತೆ. ನಮ್ಮ ನೆರೇಟರ್ ಮಹಾಶಯರು ’ಓ ಇವರ interference ಇಂದ ನನಗೆ ಒಳಬಿಡುತ್ತಿದ್ದಾರೆ ಅಂದುಕೊಳ್ಳುವಷ್ಟರಲ್ಲಿ , ರಿಸೆಪ್ಷನಿಷ್ಟ್, ’ಸಾಬ್ ಆಪ್ ಹಮಾರೆ ಸಾಥ್ ಚಲಿಯೆ’ ಅಂತ ಒಂದು ದೊಡ್ಡ ಕೋಣೆಗೆ ಕರೆದುಕೊಂಡು ಹೋದನಂತೆ. ಅಲ್ಲಿ ನೋಡಿದರೆ rack ಮೇಲೆ rack....ಅಲ್ಲಿ ಎಲ್ಲಾ ಸೈಜ್ ನ ಶೂ ಗಳು. ’ಆಪ್ ಕಾ ಸೈಜ್’ ಅಂತ ಕೇಳಿ ಇವರು ಹಾಕಿಕೊಂಡ ಬಟ್ಟೆಗೆ ಸ್ಯೂಟ್ ಆಗುವ ಒಂದು ಜತೆ ಶೂ ಕೊಟ್ಟನಂತೆ. ಶೂ ಕ್ಲೀನ್ ಆಗಿದ್ದು ಅದರಲ್ಲಿ ಸಿಲಿಕಾ ಜೆಲ್ ಪ್ಯಾಕೆಟ್ ಗಳನ್ನು ತುಂಬಿಟ್ಟಿದ್ದರಂತೆ. ಒಂದು ಜತೆ ಸಾಕ್ಸ್ ಗೆ ಇವರು ದುಪ್ಪಟ್ಟು ದುಡ್ಡು ಕೊಟ್ಟು ಕೊಳ್ಳಬೇಕಾಗಿ ಬಂದದ್ದು ಮಾತ್ರವಲ್ಲ ಶೂ ಬಾಡಿಗೆ ಮತ್ತು maintenance ಅಂತ ಸಣ್ಣ ಮೊತ್ತ ಕೊಡಬೇಕಾಯಿತಂತೆ. ಉಳಿದಂತೆ ಒಳಗಡೆ ಹೋದ ಮೇಲೆ ಅನ್ ಲಿಮಿಟಡ್ ಡ್ರಿಂಕ್ಸ್, ಸ್ನ್ಯಾಕ್ಸ್ ಊಟ ಇತ್ಯಾದಿ ಅಂತೆ, ಯಾಕೆಂದರೆ ಇವರು ಹಿರಿಯ ಅಧಿಕಾರಿ ಜತೆ ಇದ್ದರಲ್ಲವೇ?
ಈ ಪೋಸ್ಟ್ ನನ್ನ ಆತ್ಮೀಯ ಗೆಳತಿ/ಮಗಳು ದಿವ್ಯಾ ಮಲ್ಯಾಗೆ...:-) ಪ್ರೀತಿಯಿಂದ....

November 2, 2012

ಭವಿಷ್ಯ: ಬೆಸ್ತು



ನನ್ನ ತಂದೆಯವರು ಬೆಳಿಗ್ಗೆ ಜ್ಯೋತಿಷ್ಯ ಕಾರ್ಯಕ್ರಮ ನೋಡುತ್ತಿದ್ದಾಗ ಹೊಳೆದಿದ್ದು:
ಅದೊಂದು ಫೋನ್ ಇನ್ ಕಾರ್ಯಕರಮ.
ತಾಯಿ: ಗುರೂಜಿ ನನ್ನ ಮಗನ ಭವಿಷ್ಯ ಹೇಗಿದೆ?
ಗುರೂಜಿ: ಓದಲ್ಲಿ ಸ್ವಲ್ಪ ಹಿಂದಿದ್ದಾನೆ ಆದರೂ ಏನಡ್ಡಿಯಿಲ್ಲ.
ಕೆಲದಿನಗಳ ನಂತರ
ಗುರೂಜಿ ನಿಮ್ಮನ್ನ ಕಾಣಲು ಒಬ್ಬ ಯುವಕ ಬಂದಿದ್ದಾನೆ
ಗುರೂಜಿ: ಒಳಗೆ ಕಳಿಸಿ ಅವನ್ನನ್ನ
ಯುವಕ: ಗುರೂಜಿ ನೀವು ಟಿವಿ. ಕಾರ್ಯಕ್ರಮದಲ್ಲಿ ಭವಿಷ್ಯ ಹೇಳಿ ಸಕತ್ತ್ ದುಡ್ಡು ಮಾಡ್ತಿರಬೇಕಲ್ಲವಾ??
ಗುರೂಜಿ: ಹಾಂ ಬರುತ್ತೆ ಆದಾಯ. ಯಾಕೇ?
ಯುವಕ್: ನೀವು ನಿಮಗೆ ಬರುವ ಆದಾಯದಲ್ಲಿ ನನಗೆ 20% ಕೊಡಬೇಕು
ಗುರೂಜಿ: ಯಾಕೆ?
ಯುವಕ: ಇಷ್ಟರ ತನಕ ನಾನು ಚೆನ್ನಾಗಿ ಓದಿ ಚೆನ್ನಾಗಿ ಅಂಕಗಳನ್ನು ಪಡೆಯುತ್ತ ಬಂದಿದ್ದೇನೆ. ಆದರೆ ನಿನ್ನೆ ಅಮ್ಮನ ನಿಮ್ಮ ಸಂಭಾಷಣೆ ಕೇಳಿಸ್ಕೊಂಡೆ..ಇನ್ಮುಂದೆ ಓದದೆ ಇರಬೇಕೆಂದು ಕೊಂಡಿದ್ದೇನೆ.
ಗುರೂಜಿ; ಅದಕ್ಕೂ ಇದಕ್ಕೂ ಏನು ಸಂಬಂಧ?
ಯುವ್ಕ: ಅಮ್ಮನಿಗೆ ನನ್ನ ಮೇಲೆ ನಂಬಿಕೆಯಿಲ್ಲ. ಈಗ ನಾನು ಅಂಕ ತೆಗೆದುಕೊಳ್ಳದೇ ಇದ್ದರೆ ಅಮ್ಮನಿಗೆ ನಿಮ್ಮ ಮೇಲೆ ನಂಬಿಕೆ ಇನ್ನೂ ಹೆಚ್ಚಾಗುತ್ತೆ. ಆದ್ದರಿಂದ ನಿಮಗೆ  ಇದರಿಂದ ಆದಾಯ ಹೆಚ್ಚುತ್ತದೆ.ಅಮ್ಮ ಅವರ ಸ್ನೇಹಿತೆಯರಿಗೆ ಆಪ್ತೇಷ್ಟರಿಗೆ ಈ  ವಿಷಯ ಹೇಳುತ್ತಾರೆ. ನಿಮಗೆ free advertisement ಆಗುತ್ತೆ, ಹಾಗಾಗಿ.ನೀವು ನನ್ನ ಜತೆ 20% ಶೇರ್ ಮಾಡಲೇಬೇಕು..
(ಸುಮ್ನೆ, ನಾನು ಟೂರ್ ಮೇಲಿದ್ದೀನಿ. ಚಿಕ್ಕ ಲ್ಯಾಪ್ ಟಾಪ್ ನಲ್ಲಿ ಟೈಪ್ ಮಾಡೋದು ಕಿರಿಕಿರಿ..ಇದರಲ್ಲಿ ಕಾಗುಣಿತದ ತಪ್ಪಿದ್ದಲ್ಲಿ ಮುಂದಿನ ತಿಂಗಳು ಸರಿಮಾಡೋದು...ಅಲ್ಲಿ ತನಕ...Sayonara...)

October 21, 2012

ಚಾಟಿ- ಒಂದು ನ್ಯಾನೋ ಕತೆ


ಬೆಳಿಗ್ಗೆ ಟೀ ಕುಡೀತಾ ಹೊಳೆದ ಒಂದು ನ್ಯಾನೋ ಕತೆ...

ಆ ದಿನ

ಹೀಗೆ ಮನೆಗೆ ಬಂದ ಕೀಳು ಜಾತಿಯವನಿಗೆ ನಾವು ಉಪಯೋಗಿಸುವ ಬೆಲೆಬಾಳುವ ಕಪ್ ನಲ್ಲಿ ,ಇಷ್ಟು ದಪ್ಪ ಹಾಲು ಹಾಕಿ ಮಾಡಿದ ಚಹಾ ಕೊಡುವುದೇ? ಗಾಂಧಿ ತತ್ವಗಳನ್ನು ಪಾಲಿಸುವ ಅವಳ ತಂದೆಯ ಬಳಿ ಎಲ್ಲ ಜನರನ್ನೂ ಸಮಾನವಾಗಿ ಕಾಣುವುದನ್ನು ಕಲಿತ ಅವಳು ಮದುವೆಯಾಗಿ ಬಂದ ಮನೆಯಲ್ಲಿ ಕಲಿತ ಮೊದಲ ಪಾಠ ಅವಳನ್ನು ಕಕ್ಕಾಬಿಕ್ಕಿಯಾಗಿಸಿತ್ತು
ಇಂದು
ಆ ಕೀಳು ಜಾತಿಯವ ಈಗ ದೇಶದ ದೊಡ್ಡ ವ್ಯಕ್ತಿ. ಅವರು ಮನೆಗೆ ಬರುವವರಿದ್ದಾರೆ, 'ಲಾಕರ್ ನಿಂದ ನಮ್ಮ ಬೆಳ್ಳಿ
ಸಾಮಾನುಗಳನ್ನು ತಂದಿಡು ಬೆಳ್ಳಿ ಲೋಟದಲ್ಲೇ ಅವರಿಗೆ ಬಾದಾಮಿ ಹಾಲು ನೀಡಬೇಕು' ಎಂಬ ಆಜ್ಝೆ ಅವಳಿಗೆ...

ಆ ದಿನ: ಆ ಕೀಳು ಜಾತಿಯವನಿಗೆ ಕೇಳಿಸುವ ಹಾಗೆ ಆಕೆಯ ಗಂಡ ಗರ್ಜಿಸಿದ, 'ಇನ್ನು ಆ ಕಪ್ ಬೇರೆ ಕಡೆ ಇಟ್ಟು ಬಿಡು. ಇನ್ನು ಮುಂದೆ ಅಂವ ಬಂದಾಗ ಎಲ್ಲ ಆ ಕಪ್ ನಲ್ಲೆ ಅವನಿಗೆ ಚಹಾ ಕೊಡು....
ಇಂದು: ಅಂವ" ತಾಯಿ ನನಗೆ ಈ ಬೆಳ್ಳಿ ಲೋಟದಲ್ಲಿ ಹಾಲು ಬೇಡ. ನನಗೋಸ್ಕ್ರರ ಆ ದಿನ ಬೇರೆ ಇಟ್ಟ ಕಪ್ ನಲ್ಲೆ ಚಹಾ ಕೊಡಿ'.....
(ಚಾಟಿ ಹಾಗೂ ತಿರುಗೇಟು ಎನ್ನುವ ಎರಡು ಶಿರ್ಷಿಕೆಗಳ option ನನಗೆ ಫೇಸ್ ಬುಕ್ ನಲ್ಲಿ ಸಿಕ್ಕಿತ್ತು. 'ಚಾಟಿ' ಸೂಚಿಸಿದವರು ಮಿತ್ರ ಶ್ರೀವತ್ಸ ಜೋಶಿ ಮತ್ತು ತಿರುಗೇಟು ಬೈ ಸಾವಿತ್ರಿ ಹಟ್ಟಿ...)
:-)
ಚಾ/Tea one and the same...;-)

October 18, 2012

ಇಸ್ತ್ರೀ ಅಜ್ಜಿಯೂಂ ಸೀರೆಯೂಂ

ಮೊನ್ನೆ ನಮ್ಮ ಮನೆಯಿಂದ ನಮ್ಮ ಹಳೆ ಮನೆ ಇದ್ದ area- ಮಹಾಲಕ್ಶ್ಮಿ ಲೇ ಔಟ್ ಕಡೆ ಸುಮ್ಮನೆ ನಾನು ಶ್ರೀಕಾಂತ ವಾಕ್ ಹೋಗಿದ್ವಿ. ಅಲ್ಲಿ ಒಂದು ಕಡೆ ಶ್ರೀಕಾಂತ ಹಣ್ಣು ಖರೀದಿಸಬೇಕಾದ್ರೆ ನನ್ನ ಕಣ್ಣು ಅಲ್ಲೇ ಲೈಟ್ ಕಂಬಕ್ಕೆ ತೂಗುಹಾಕಿದ ಫ್ಲೆಕ್ಸ್ banner ಕಡೆ ಹೋಯ್ತು. ಅರೇ ಮುಖ ಎಲ್ಲೋ ನೋಡಿದ ಹಾಗಿದೆಯಲ್ಲ ಅಂತ ಶ್ರೀಕಾಂತ ಗೂ ತೋರಿಸಿದೆ. ಶ್ರೀಕಾಂತ ಫೋಟೊ ನೋಡಿ, 'ನೆನಪಾಗಲಿಲ್ಲವಾ, ಸರೀ ನೋಡು ಅಂದ್ರು' ಕೆಲವೆ ದಿನಗಳ ಹಿಂದೆ ಕಣ್ಣು ಪರೀಕ್ಷೆ ಮಾಡಿಸಿ ಬಂದು ಡಾಕ್ಟರ್ 'ಕಣ್ಣು perfect ' ಅಂದಿದ್ದು ಖುಶಿಯಿಂದ ಮನೆಗೆ ಬಂದು ಅಮ್ಮ ತಮ್ಮನಿಗೆ ಫೋನ್ ನಲ್ಲಿ ರವಾನಿಸಿದ್ದು ಎಲ್ಲ ನೆನಪಿಗೆ ಬಂದು, ಕಣ್ಣು ಉಜ್ಜಿಕೊಂಡು ಪುನ: ನೋಡಿದೆ.ಊಹೂಂ ಯಾರು ಅಂತ ಗೊತ್ತಾಗಲಿಲ್ಲ. ಶ್ರೀಕಾಂತ ಕಡೆ ಪ್ರಶ್ನಾರ್ಥಕವಾಗಿ ನೋಡಿದಾಗ, ಅವರು'ನಮ್ಮ ಹಳೆ ಇಸ್ತ್ರಿಯವಳು' ಅಂತ ಹೇಳಿ ಪುನ: ಹಣ್ಣಿನ ಚೌಕಾಸಿಯಲ್ಲಿ ನಿರತರಾದರು. ಅರೇ ಹೌದಲ್ಲವೇ ಐದು ವರ್ಷ ನನ್ನ ಕಾಟನ್ ಸೀರಿಗಳಿಗೆ ಸ್ಟಾರ್ಚ್, ಇಸ್ರೀ ವಗೈರೆ ಹಾಕಿ, ನಾನು ಆಫಿಸ್ ಗೆ ಟಿಪ್ ಟಾಪ್ ಆಗಿ ಹೋಗುವಂತೆ ಮಾಡಿದವರು..ಅಂತ ಪುನ: ಫ್ಲೆಕ್ಸ್ ನ ತೀರ ಬಳಿ ಹೋಗಿ ಕಣ್ಣು ಗುಡ್ಡೆ ಹೊರಬರುವಷ್ತು ಕಣ್ಣನ್ನು ದೊಡ್ಡದಾಗಿಸಿ ನೋಡಿದೆ. ಅರೇ ಅವರು ತೀರಿ ಹೋಗಿರುವ ವಿಷಯ ಹಾಕಿದ್ದರು. ಇದೇನಿದು ಹೊಸ ಪರಿ ಅಂದುಕೊಳ್ಳುತ್ತಿರುವಾಗಲೇ ಶ್ರೀಕಾಂತ , ಅದು ಇತ್ತೀಚಿಗಿನ ಹೊಸ ಫ್ಯಾಷ್ಯನ್ -ಸತ್ತು ಹೋಗಿರುವವರ ಚಿತ್ರ ಫ್ಲೆಕ್ಸ್ ನಲ್ಲಿ ಪ್ರಿಂಟ್ ಹಾಕಿಸಿ ನೇತಾಕುವುದು- ಅಂದುಬಿಟ್ಟರು.
ಅರೇ ಇವರು ತೀರಿಕೊಂಡೇ ಬಿಟ್ರಾ ಅಂತ ಅವರ ಬಗ್ಗೆ ನೆನೆಸ್ತಾ ವಾಪಸ್ ಮನೆ ದಾರಿ ಹಿಡ್ಕೊಂಡ್ವಿ.
ನಾವು ಉಡುಪಿಯಿಂದ ಮಹಾಲಕ್ಷ್ಮಿ ಲೇಔಟ್ ನ ಮನೆಗೆ ಶಿಫ್ಟ್ ಆದ ಮೂರನೆ ದಿನ ಈ ಅಜ್ಜಿ ಬಂದಿದ್ದರು. ಇಸ್ತ್ರೀ ಬಟ್ಟೆ ಇದ್ರೆ ನಾನು ತೆಗೆದುಕೊಂಡು ಹೋಗ್ತೀನಿ ಅಂತ. ನಾನು ಮುಂದಿನ ವಾರ ಬನ್ನಿ ಅಂತ ಹೇಳಿ ಕಳಿಸಿದೆ. ಸರೀ ಒಂದು ವಾರದ ನಂತ್ರ ಬಂದ್ರು ಅಜ್ಜಿ. ಅಷ್ಟೇನೂ ಬಟ್ಟೆಗಳಿಲ್ಲದಿದ್ರೂ (ಮಕ್ಕಳ ಯೂನಿಫಾರ್ಮ್ ನನ್ನ ಚೂಡಿದಾರ್ ಗೆಲ್ಲ ನಾನೆ ಇಸ್ತ್ರೀ ಹಾಕ್ತಿದ್ದೆ. ಆದರೆ ಶ್ರೀಕಾಂತ ಪ್ಯಾಂಟ್ ಶರ್ಟ್ ಗೆ ಇಸ್ತ್ರೀ ಹಾಕಕ್ಕೆ ನನಗೆ ಬರ್ತಿರಲಿಲ್ಲ ಈಗಲೂ ಬರಲ್ಲ.) ಹಾಗಾಗಿ ಶ್ರೀಕಾಂತ ರ ಕೆಲವು ಶರ್ಟ್ ಮತ್ತು ಪ್ಯಾಂಟ್ , ಕೆಲವು ನಾನು ವಾಶ್ ಮಾಡಿ ಹಾಕಿದ್ದು, ಕೆಲವು ನಮ್ಮ ಪ್ರಾಯಾಣದ ವೇಳೆ ನೆರಿಗೆ ಬಿದ್ದ ಬಟ್ಟೆಗಳನ್ನು ಕೊಟ್ಟೆ. ಆಗ ಅವರು ಬಟ್ಟೆ count ಮಾಡಿದ್ದು ಗಮ್ಮತ್ತು ಎನಿಸಿತ್ತು. ಅಜ್ಜಿ ತಮಿಳು  ಮಾತನಾಡುವವರು. her lanaguage was a curious mix of Kannada and Tamil. ನಾಲ್ಕು ಆದ ಮೇಲೆ ಕೈದು, ಕಾರು, ಕೇಳು, ಕೆಂಟು ಅಂತ ಲೆಕ್ಕ ಮಾಡ್ತಿದ್ದದ್ದು. ನಾನು ಮಕ್ಕಳು ನಗುತ್ತಿದದ್ದು ಇನ್ನೂ ನೆನಪಿದೆ. ಆಮೇಲೆ ಕಾಟನ್ ಸೀರೆಗೆ ಸ್ಟಾರ್ಚ್ ಮಾಡಿ ಪಾಲಿಶ್ ಮಾಡ್ತೇವೆ. ಸೀರೆನೂ ಕೊಡಬಹುದು ಅಂತ ಹೇಳಿದ್ದರು ಒಂದು ದಿನ ನಾ ಸೀರೆ ಉಟ್ಟಿಕೊಂಡಾಗ. ಸರಿ ಅಂತ ಅವಳಿಗೆ ಕೊಡ್ತಿದ್ದೆ. ನನಗಂತೂ ಆರಾಮ್. ಆಕಸ್ಮಾತ್ ನಾವು ಯಾರೂ ಮನೆಯಲ್ಲಿಲ್ಲದಿದ್ದಲ್ಲಿ ಹೊರಗಡೆ ಝೂಲಾದ ಮೇಲೆ ಇಟ್ಟು ಹೋಗ್ತಿದ್ದರು. ಮರುದಿನ ಹಣ ಪಡೆದುಕೊಂಡು ಹೋಗುತ್ತಿದ್ದರು. ಸಾಧಾರಣ ಆ ಮನೆಯಲ್ಲಿ ನಮ್ಮದು ಮೂರನೆ ವರ್ಷ ಅನ್ನಿಸುತ್ತೆ, ಒಂದು ದಿನ ಸಾಯಂಕಾಲ ಜೋರಾಗಿ ಅಳುತ್ತ ಅಜ್ಜಿ ನಮ್ಮನೆಗೆ ಬಂದ್ರು. ನಾನೇನಾಯ್ತು ಅಂದಿದಕ್ಕೆ ನೀವು ನಿನ್ನೆ ಕೊಟ್ಟ ಸೀರೆ ಸುಟ್ಟು ಹೋಯ್ತು. ಅದರ ಬದಲಾಗಿ ಕಾಸು ಕೊಡವಾ ಅಂದ್ರೆ ನನ್ನ ಮಗ 'ನಿನ್ನ ಬೇಜವಾಬ್ದಾರಿಯಿಂದ ಹಾಗಾಗಿದ್ದು ನಾ ಯಾಕೆ ದುಡ್ಡು ಕೊಡಲಿ' ಅಂತ ಹೇಳ್ತಿದ್ದಾನೆ, ಆ ಸೀರೆ ಬೆಲೆ ಎಸ್ತು? ನಾನು ನಿಮ್ಮ ಹತ್ತಿರ ಸೀರೆ ಬೆಲೆಯಾಗುವಸ್ತು ದಿನ ಕಾಸ್ ತೆಗೆದುಕೊಲ್ಲಲ್ಲ (ಅವರ ಕನ್ನಡ) ಅಂದ್ರು. ಅದಕ್ಕೆ ನಾನು 'ಅಯ್ಯೋ ಬಿಡಿ ಅಜ್ಜಿ, ಮನುಷ್ಯರೇ ಈಗ ಇದ್ದವರು ಸ್ವಲ್ಪ ಹೊತ್ತಿಗೆ ಇರಲ್ಲ, ಅದರಲ್ಲಿ ಸೀರೆ ಬಗ್ಗೆ ತಲೆ ಕೆಡಿಸಕೊಳ್ಳಬೇಡಿ ಅಂತ ಹೇಳಿ ಅವರನ್ನು ಬಲವಂತದಿಂದ ಮನೆಗೆ ಕಳಿಸಿದ್ದೆ.ಆ ಸೀರೆ ಹಾಗೆ ತಂದು ಕೊಡಿ ಮಕ್ಕಳೆಗೆ ಬಟ್ಟೆ ಹೊಲಿಸ ಬಹುದು. (ಅದು ಚಂದದ ಆರ್ಟ್ ಸಿಲ್ಕ್ ಸಾರಿ ಆಗಿತ್ತು ಅದರ ಕತೆ ಮುಂದಿನ ಪ್ಯಾರ)  ಆದರೂ ಹೋಗುವ ಮುಂಚೆ, 'ನಾನು ಆದಷ್ಟು ಆ ಚೀರೆ ಶೆರಿ (ಸರಿ) ಮಾಡಿ ತರ್ತೇನೆ ಅಕ್ಕ ಅಂದ್ರು..ಮೂರು ದಿನ ಬಿಟ್ಟು ನನ್ನ ಸೀರೆ ನನಗೆ ತಂದು ಕೊಟ್ರು. ನಾನು ಸೀರೆ ಬಿಡಿಸಿ ನೋಡ್ತೇನೆ ಎಲ್ಲಿಯೂ ಅದು ಸುಟ್ಟಿದ್ದು.ಹೊಲಿದಿದ್ದು ಕಾಣಲಿಲ್ಲ. ಕೊನೆಗೆ ಸೀರೆಯ ಅಂಚು ಕೂಡ ಸೂಕ್ಷ್ಮವಾಗಿ ನಿರೂಕಿಸಿದೆ, ಊಹೂಂ...ಬಹುಶ್ಯ ಬೇರೆಯವರಿಗಾದ್ರೂ ಅದರಲ್ಲಿನ defect ಕಾಣಬಹುದು ಅಂತ ಮತ್ತೆರಡು ಸಮಾರಂಭಕ್ಕೆ ಕೂಡ ಅದನ್ನು ಉಟ್ಟು ಹೋದೆ. ಯಾರೂ ಏನೂ ಗಮನಿಸಲಿಲ್ಲ..ನನಗಂತೂ ಸೋಜಿಗ ಅರೆ?? ಮುಂದಿನ ಸಲ ಅಜ್ಜಿ  ಬಂದಾಗ ಪುನ: ವಿಚಾರಿಸಿದೆ. ಸುಟ್ಟಿದ್ದು ಹೌದಾ?? ನನಗೇನೂ ಕಾಣ್ತಿಲ್ಲವಲ್ಲ ಅಂದಾಗ ಅಜ್ಜಿ mysteriously ನಕ್ಕು ಸೀರೆ ರಿಪೇರಿಯವನ ಗುಣಗಾನ ಮಾಡ್ತಾ ಇದ್ದಳು. ಆ ಸಮಯಕ್ಕೆ ಅಮ್ಮ ಕೂಡ ನಮ್ಮನೆಗೆ ಬಂದಿದ್ರು. ಸೀರೆ ಸುಟ್ಟಿದ್ದು ಹೇಳಲು ಅಜ್ಜಿ ನಮ್ಮ ಮನೆಗೆ ಬಂದು ಹೋದ ಮೇಲೆ ಅಮ್ಮನ ಫೋನ್ ಬಂದಿತ್ತು ಅವರು ಬೆಂಗಳೂರಿಗೆ ಬರುತ್ತಿರುವುದಾಗಿ ನನಗೆ ತಿಳಿಸಲು, ಆಗ ಅಜ್ಜಿ ಕತೆ ಹೇಳಿ, ನಾನು ಬೈಯಿಸಿಕೊಂಡಿದ್ದೆ. ' ಅಷ್ಟು ಚಂದದ ಸೀರ ಅವಳು ಹಾಳು ಮಾಡಿಬಿಟ್ಟಳಾ ಅದರ ದುಡ್ಡು ತೆಗೋ ಬೇಕಿತ್ತು. ಅದಕ್ಕೆ ನಾನು ಅಮ್ಮ 'ಆ 150 ಬೆಲೆ ಸೀರೆಗೆ ಅಷ್ಟು ಜಗಳ ಮಾಡಬೇಕ ಅಂತಲೂ ಕೇಳಿದ್ದೆ.ಹಾಗಾಗಿ ಅಮ್ಮ ಕೂಡ ಸೀರೆ ಬಿಡಿಸಿ ಕೂಲಂಕಷವಾಗಿ ಅದನ್ನು ಪರೀಕ್ಷಿಸಿದರು.ಅಮ್ಮನಿಗೂ ಎಲ್ಲೂ damage ಗೊತ್ತಾಗಲಿಲ್ಲ
ಈಗ ಆ ಸೀರೆ ನನ್ನ ಬಳಿ ಬಂದ ಬಗ್ಗೆ ಹೇಳುತ್ತೇನೆ:
ನಾವು ಉಡುಪಿ ಬಿಡುವ ಮುಂಚೆ ಅಮ್ಮ ಸಿಲ್ಕ್ ಸೀರೆ ಬೇಕೆಂದಿದ್ದಕ್ಕೆ ಅಮ್ಮನಿಗೆ ಅಲ್ಲಿ ಬರಲಿಕ್ಕೆ ಹೇಳಿದ್ದೆ.ಯಾಕಂದರೆ ನನ್ನ ದೂ ಅಮ್ಮಂದೂ ಬಣ್ಣದ ಟೇಸ್ಟ್ ಯಾವತ್ತೂ ಮ್ಯಾಚ್ ಆಗ್ತಿರಲಿಲ್ಲ ಇಬ್ಬರೂ ಕುಲ್ಯಾಡಿಕಾರ್ಸ್ ಸಿಲ್ಕ್ಸ್ ಅಂಗಡಿಗೆ ಹೋಗಿ, ಅಲ್ಲಿ ಕೊಂಕಣಿ ಮಾತಾಡ್ತಾರಾದ್ದರಿಂದ ನಾನು ಅಮ್ಮನಿಗೆ ಅವರ ಖರೀದಿಗೆ ಬಿಟ್ಟು ನಾನು ಅಲ್ಲಿಗೆ ಬಂದ ಬೇರೆ ಮಹಿಳೆಯರನ್ನೂ, ರಸ್ತೆಯಲ್ಲಿನ ಆಗು ಹೋಗುಗಳನ್ನು ಗಮನಿಸುತ್ತ ಇದ್ದೆ. ಅಮ್ಮ ಮೂರು ನಾಲ್ಕು ಸೀರೆ ಖರೀದಿಸಿದ ನಂತರ ಬಿಲ್ಲ ಪಾವತಿಸುವ ವೇಳೆಗೆ ,ಮಾಯಿ ನಿಮ್ಮ ಮಗಳಿಗೆ ಅಂತ ಒಂದು ಸೀರೆ ತೋರಿಸ್ತೇನೆ ಅಂತ, ನಾನು ಬೇಡ ಬೇಡ ಅಂದರೂ ಒಂದು ಸೀರೆ ತೆಗೆದು ತೋರಿಸಿದ್ರು. ಬಿಳಿ ಟಿಶ್ಯು ಪೇಪರ್ ನಲ್ಲಿ ಸುತ್ತಿದ ಆ ಸೀರೆಗೆ ನಾನೆಂದೂ ಕಂಡಿರದ ವಿಶಿಷ್ಟ ಬಣ್ಣ, ಜರಿ ಅಂಚು.ಇಡೀ ಸೀರೆ ಮೇಲೆ ಜರಿಯ ಬುಟ್ಟ. ಯಾವುದೂ ಸಿಂತೆಟಿಕ್ ಸೀರೆ ಉಡದ ನಾನು 'ನಾನು ಅಂತ ಸೀರೆ ಉಡೋದಿಲ್ಲ ಮಾಮ' ನನಗೆ ಬೇಡ ಅಂದ್ರೆ, ಅದನ್ನು ತೆಗೆದುಕೊಳ್ಳುವಂತೆ ಪೀಡಿಸಿ ಅವರು ಅಳುವುದೊಂದು ಬಾಕಿ. ನಾನು ಅಮ್ಮನಿಗೇ ಹೇಳಿದೆ, 'ಅಮ್ಮ ನಿನಗೆ ಬೇಕಾದರೆ ತೆಗೋ, ನನಗೆ ಮಾತ್ರ ಬೇಡ'. ಆ ಮಾಮ ಎಷ್ಟು upset ಆದರೆಂದರೆ ನನಗೆ ತೀರ ಕೆಡುಕೆನಿಸಿತು plus ವಿಚಿತ್ರ ಅನಿಸಿತ್ತು, ಯಾಕಂದ್ರೆ ಅಮ್ಮ ಕೊಂಡಿದ್ದ ಸೀರೆಯೆ 6000 ರೂ ಗಿಂತ ಹೆಚ್ಚಾಗಿತ್ತು, ಆಗ ಅದು ಸ್ವಲ್ಪ ಹೆಚ್ಚೆ ಮೊತ್ತ...ಹಾಗಾಗಿ ಸೀರೆ ಮಾರುವ ಮಾಮನಿಗೆ (ಕೊಂಕಣಿಯವರೆಲ್ಲ ಮಾಮ-ಮಾಯಿ ಗಳೆ) ಕಮಿಶನ್ ಅಂತ ಇದ್ದ್ರೂ ಅದಕ್ಕೇನೂ ತೊಂದರೆ ಇರಲಿಲ್ಲ. ಆಯ್ತು ಕೊಡಿ ಅಂದ್ರೆ ಬೆಲೆ ಕೇವಲ 150 ರೂ...ಈಗ ಇನ್ನಷ್ಟು ಗಾಬರಿ ಮಿಶ್ರಿತ ಆಶ್ಚರ್ಯ ಪಡುವ ಸರದಿ ನಮ್ಮದಾಯಿತು, ಆದರೂ ಮೂರು ಸಲ ಕನ್ ಫರ್ಮ್ ಮಾಡಿ, ಇನ್ನು ಅಲ್ಲಿ ಸೀನ್ create ಮಾಡೋದು ಬೇಡ ಅಂತ ಬಿಲ್ಲ ಪಾವತಿಸುವ ಕೌಂಟರ್ ಬಳಿ ಸೀರೆ ಕೊಡುವಾಗಲೂ ನನಗೊಂದು ಸಣ್ಣ ಆಸೆ, ಆ ಮಾಮನಾದರೂ 'ಇದರ ಬೆಲೆ ಹೆಚ್ಚೆ ಇದೆ ಇದ್ಯಾಕೆ 150 ರೂ' ಅಂತ ಹೇಳುತ್ತಾರೇನೋ ಅಂತ..ಇಲ್ಲ ಅವರೂ ಏನೂ ಹೇಳಲಿಲ್ಲ. ಆ ದಿನ ಮನೆ ತಲುಪಿದ ಕೂಡಲೇ ಅಮ್ಮ ನನ್ನ ಸೀರೆ ಪ್ಯಾಕೆಟ್ ನಿಂದ ಬಿಡಿಸಿ ಏನೋ ಮೊಸ ಇದೆ ಅಂತ ಅದನ್ನು ಇಂಚಿಂಚಾಗಿ  ಪರಿಶೀಲಿಸಿದ್ದು ಇನ್ನೂ ನೆನಪಿದೆ.
ಈಗ ಈ ಅಜ್ಜಿಯ ಪ್ರಸಂಗ. 
ಮತ್ತೆ ನಾವು ಆ ಮನೆಯ 5 ವರ್ಷಗಳ ಲೀಸ್ ಮುಗಿದ ಮೇಲೆ ಬಸವೇಶ್ವರನಗರಕ್ಕೆ ಶಿಫ್ಟ್ ಆದ್ವಿ. ನಾವು ಹೋಗುವ ಮುಂಚ ಅಜ್ಜಿ ಅಳುತ್ತ ಇದ್ದರು. ನಾನು ಅವರಿಗೆ ನೀವು ಅಲ್ಲಿಗೆ ಬರಬಹುದಲ್ಲ್ವಾ? ಏನೂ ಪರದೇಶಕ್ಕೆ ಹೋಗ್ತಾ ಇಲ್ಲ ತಾನೆ ಅಂದಿದ್ದೆ. ಆ ಐದು ವರ್ಷಗಳಲ್ಲಿ ಮಗನ ಮದುವೆ ಆಗಿತ್ತು. ಸೊಸೆಗೂ ಅತ್ತೆಗೂ ಕೂಡಿ ಬರುತ್ತಿರಲಿಲ್ಲ, ನಮ್ಮ ಮನೆಯಿಂದ ಇಸ್ರೀ ಬಟ್ಟೆ ತೆಗೆದುಕೊಂಡು ಹೋಗುವಾಗ ಸೊಸೆಯ ಚಾಡಿ ಮಾತೆ ಜಾಸ್ತಿ ಇರುತ್ತಿದ್ದವು. ಈಗ ಅವರ ಮುಖ ಇಲೆಕ್ಟ್ರಿಕ್ ಕಂಬದಲ್ಲಿ ನೇತಾಡುವ ಫ್ಲೇಕ್ಸ್ ನಲ್ಲಿ ನೋಡುವಂತಾಯಿತು. ಹೀಗೆ ಒಂದು ದಿನ ನನ್ನ ಕಲೀಗ್ ಮನೆಗೆ ಹೋಗಿ (ಅವರು ಇನ್ನೂ ಅಲ್ಲೇ ಇದ್ದಾರೆ) ನನಗೆ ಆ ಅಕ್ಕನ ಮನೆಗೆ ಕರೆದುಕೊಂಡು ಹೋಗಿ ಮನೆಯಲ್ಲಿ ಹಿಂಸೆ ತಾಳಕ್ಕೆ ಆಗಲ್ಲ ಅಂತ ಕೂತಿದ್ದರಂತೆ, ಅವರು ಜಾಣತನದಿಂದ ಅವರೀಗ ಊರಲಿಲ್ಲ ಅವರು ಬಂದ ಮೇಲೆ ಹೋಗುವ ಅಂತ ಹೇಳಿದ್ರಂತೆ. ವಿಷಯ ಇಷ್ಟೆ ಕೊನೆ ಕೊನೆಗೆ ಬಟ್ಟೆಗಳು ಅದಲು ಬದಲಾಗೋದು, ಪ್ಲ್ಲ್ಯಾಸ್ಟಿಕ್ ಗುಂಡಿ melt ಆಗೋದು, ಸುಡೋದು , (ನನ್ನ ಕಲೀಗ್ ಗಂಡನ ಎರಡು ಹೊಸ ಶರ್ಟ್ ಹಾಳು ಮಾಡಿದ್ದರಂತೆ) ಮುಂತಾದವು ಜಾಸ್ತಿ ಆಗಿ ಯಾರೂ ಬಟ್ಟೆ ಕೊಡುತ್ತಿರಲಿಲ್ಲವಾದ್ದರಿಂದ ಅಕ್ಕನಾದ್ರೂ (ನಾನು) ಬಟ್ಟೆ ಕೊಡ್ತಾರೆ ದೂರ ಆದ್ರೂ ಅಡ್ಡಿಯಿಲ್ಲ ಅವರ ಬಟ್ಟೆಗೆ ನಾನೇ ಇಸ್ತ್ರೀ ಹಾಕಿ ಕೊಡ್ತೇನೆ ಅಂತ ಹೊರಟಿದ್ರಂತೆ. ಅವರ ಸೊಸೆಯನ್ನು ಮೊನ್ನೆ ನೋಡಿದೆ, ನಮ್ಮ ಈಗಿನ ಮನೆಯ ಬಳಿ ಶಿಫ್ಟ್ ಆಗಿದ್ದಾರೆ. ಚಂದದ ಹೆಂಗಸು. ಎಲ್ಲೋ ಹರಕೆ ಹೇಳಿ ತಳೆ ಬೋಳಿಸಿದ್ದು ಈಗ ಸ್ವಲ್ಪ ಸ್ವಲ್ಪ ಕೂದಲು boycut ತರಹ ಬರುತ್ತ ಇದೆ.ನನಗೆ ಫಕ್ಕನೆ ಅವಳ ಗುರುತು ಸಿಗಲಿಲ್ಲ ಅವಳೆ   ನಾನು ನನ್ನಷ್ಟಕ್ಕೆ ನಡೆದುಕೊಂಡು ಹೋಗ್ತಾ ಇದ್ರೆ, ನನ್ನ ಕೈ ಗಟ್ಟಿ ಹಿಡಿದು ನಿಲ್ಲಿಸಿ, ಪರಿಚಯಿಸಿಕೊಂಡ್ಲು. ಎರಡು ಹೆಣ್ಣು ಒಂದು ಗಂಡು ಮಗ ಅಂತೆ. :-)
ಅಂತೂ ನನಗೆ ಬೇಡದಿದ್ದ ಸೀರೆ 14 ವರ್ಷಗಳ ಕಾಲ ಉಡುತ್ತಿದ್ದರೂ ಒಂಚೂರು ಶೈನ್ ಕಳಕೊಳ್ಳದೇ, ಇತ್ತೀಚಿಗೆ ನಮ್ಮ BBMP ರಸ್ತೆ ಕ್ಲೀನ್ ಮಾಡುವ ಜಯಮ್ಮ, ಸೀರೆ ಚೆನ್ನಾಗಿದೆ ಅಕ್ಕೋ ನನಗೆ ಕೊಡಿ ಅಂದಿದಕ್ಕೆ ಆಕೆಗೆ ಕೊಟ್ಟು ಬಿಟ್ಟೆ.ಶssss ಅಮ್ಮನಿಗೆ ಹೇಳಿಲ್ಲ. ಆ ಸೀರೆ ಉಟ್ಟಿದ್ದ ಫೋಟೊ ಎಲ್ಲಾದರೂ ಇದ್ರೆ ಅದನ್ನೂ ಇಲ್ಲಿ ಹಾಕ್ತೇನೆ..
ಮೊನ್ನೆ ಯಾವುದೋ ಕಾರ್ಯಕ್ರಮಕ್ಕೆ ಹೊರಟಿದ್ದ ಜಯಮ್ಮ 'ನೋಡಿ ಅಕ್ಕ ನೀವು ಕೊಟ್ಟ ಸೀರೆ, ಬೋ ಪಸಂದಾಗೈತೆ' ಅಂತ ರಸ್ತೆ ಮಧ್ಯ ನಿಂತು ಗಟ್ಟಿ ದನಿಯಲ್ಲಿ ಹೇಳಿದಾಗ ನನಗೆ ನಾಚಿಕೆ...
Long live the saree , the man who sold it to me (forced it on me) and peace be to ಇಸ್ತ್ರೀ ಅಜ್ಜಿ..
:-)
ಹಾಂ ಅಂದ ಹಾಗೆ ಇಂಗ್ಲಿಷ್-ವಿಂಗ್ಲಿಷ ನಲ್ಲಿ ಶ್ರೀದೇವಿ ಸೀರೆಗಳು ಸೂಪರ್sssssss

October 13, 2012

ಬಾಳೆ ಎಲೆ ಕಡುಬು

ಒಂದು ಕಪ್ ಉದ್ದಿನ ಬೇಳೆ ಗೆ ಎರಡು ಕಪ್ ಅಕ್ಕಿ ರವೆ/3 ಕಪ್ ಬಾಂಬೆ ರವಾ
ಉದ್ದಿನ ಬೇಳೆ ರುಬ್ಬೋಕಲ್ಲು ಅಥವ ಗ್ರೈಂಡರ್ ನಲ್ಲಿ ರುಬ್ಬಿದರೆ ನಿಮಗೆ soft ಇಡ್ಲಿ ಅಥವ ಕಡಬು ಮಾಡಲಿಕ್ಕೆ ಆಗುತ್ತದೆ. ಕೈಗೆಟಕುವ ಬೆಲೆಗೆ ಟೇಬಲ್ ಟಾಪ್ ಗ್ರೈಂಡರ್ ಸಿಗುತ್ತೆ. ಇಡ್ಲಿ ದೋಸೆಗೆ ಇದು ಉತ್ತಮ.
ಉದ್ದಿನ ಬೇಳೆ ರುಬ್ಬಿದ ಎರಡು ಮೂರು ಗಂಟೆ ನಂತರ ಅಕ್ಕಿ ರವೆ ಬೆರೆಸಿ. ಮೊದಲೆಲ್ಲ ಅಕ್ಕಿ ರುಬ್ಬಿ ಅಥವ ಅಕ್ಕಿಯನ್ನು ಎರಡು ಗಂಟೆ ನೆನೆಕಾಕಿ, ಆಮೇಲೆ ನೀರಲ್ಲ ಬಸಿದು ಅದನ್ನು ಬಟ್ಟೆ ಮೇಲೆ spread ಮಾಡಿ, ಅದು ಒಣಗಿದ ಮೇಲೆ ಅದರ ರವೆ ಮಾಡಿ ಬೆರೆಸುವುದಿತ್ತು ನಾನು. ಈಗ ಎಲ್ಲ ರೆಡಿ ಸಿಗುತ್ತೆ. ಮಂಗಳೂರು ಸ್ಟೋರ್ಸ್ ನಲ್ಲಿ ಬೆಳ್ತಿಗೆ ಅಕ್ಕಿ ರವೆ ಸಿಗುತ್ತೆ. ಆಫಿಸ್ ಗೆ ಹೋಗುವವರಿಗೆ ಇದರಿಂದ ಅನುಕೂಲ. ( ಕುಚ್ಚಲಕ್ಕಿ ರವೆ ಬೆರೆಸಿ ಕೂಡ ಕಡುಬು ಮಾಡಬಹುದು ಆದರೆ ಕೆಲವರಿಗೆ ಅದರ ಪರಿಮಳ ಹಿಡಿಸುವುದಿಲ್ಲ.)
ವಿ.ಸೂ: ಬಾಂಬೆ ರವಾ ಬೆರೆಸುವುದಾದರೆ ಬಾಂಬೆರವೆಯನ್ನು ಒಂದು ಬಟ್ಟೆಯಲ್ಲಿ ಹಾಕಿ ಗಂಟು ಕಟ್ಟಿ ಹಬೆ ಮೇಲೆ 15 ನಿಮಿಷ ಬೇಯಿಸಿ. ಕೂಡಲೆ ಹೊರಗೆ ತೆಗೆದು ಆರಲು ಬಿಡಿ. ಪೂರ್ತಿ ಆರಿದ ಮೇಲೆ ಕೈನಿಂದ ರವೆಯನ್ನು ಉದುರುದುರಾಗಿಸಿ ಅದನ್ನು ಉದ್ದಿನ ಹಿಟ್ಟಿಗೆ ಬೆರೆಸಿ.
ಅಕ್ಕಿ ರವೆ ನೀರಿನಲ್ಲಿ ಎರಡು  ಗಂಟೆ ನೆನೆಸಿ ಆಮೇಲೆ ಅದರ ನೀರೆಲ್ಲ ಬಸಿದು ಉದ್ದಿನ ಹಿಟ್ಟಿಗೆ ಬೆರೆಸಿ.

ಮರು ದಿನ ಹಬೆಪಾತ್ರೆಯಲ್ಲಿ ನೀರು ಇಟ್ಟು ಬಿಸಿ ಮಾಡಲು ಇಡಿ. ಅದರಲ್ಲಿ ಬಾಳೆ ಎಲೆಯನ್ನು ಚೆನ್ನಾಗಿ spread ಮಾಡಿಡಿ. ನೀರು ಮರಳಲು (boiling) ಶುರು ಆದಾಗ ಹಿಟ್ಟನ್ನು ಹಾಕಿ.

ಹಿಟ್ಟು ಬೆಂದು ದುಪ್ಪಟ್ಟು ಆಗುವ ಸಾಧ್ಯತೆಗಳಿರುವುದುದರಿಂದ ಪಾತ್ರೆಯ ಅರ್ಧದಷ್ಟೆ ಹಿಟ್ಟು ಹಾಕಿ. ಹದಿನೈದು ನಿಮಿಷ ಬೇಯಿಸಿ. ಕಡಬು ರೆಡಿ.

 ಚಟ್ನಿ, ಬೆಣ್ಣೆ ಅಥವ ಆಲುಗಡ್ಡೆಯ ತೆಳು ಪಲ್ಯ ಚೆನ್ನಾಗಿರತ್ತೆ.
ಕಡುಬು, ಸಾಂಬಾರ, ಶುಂಠಿ ಹಾಕಿದ ಕೆಂಪು ಖಾರ ಚಟ್ನಿ ಮತ್ತು ತಾಜಾ ತಾಜಾ ಬೆಣ್ಣೆ
FB ನಲ್ಲಿ ಪೋಸ್ಟ್ ಮಾಡಿದ ಕಡುಬಿನ ಚಿತ್ರ ನೋಡಿದ ನನ್ನ ಬ್ಲಾಗ್ ಓದುಗರು, ಇದರ ರೆಸಿಪಿ ಇಲ್ಲಿ ಹಾಕಲು ಸಲಹೆ ನೀಡಿದ್ದರು..ಈ ಪೋಸ್ಟ್ ಅವರಿಗೆ...
:-)

October 9, 2012

ಹೀಗೊಂದು ಒನ್ ವೇ ಸಂಭಾಷಣೆ

ನಿನ್ನೆ ನಿಹಾಳ ಜತೆ ಅವಳ ಕಾಲೇಜ್ ಗೆ ಹೋಗಿದ್ದೆ ಅವಳ psychology subject ಆಗಿ. ಬಸ್ ನಲ್ಲಿ ಕೇಳಿದ್ದ ಸಂಭಾಷಣೆ as is..
ಹೆಲ್ಲೋ ಸುಮಿ...
..................
ನನ್ನದು ನಡೀತಾ ಇದೆ ಯಾವತ್ತಿನ ಹಾಗೆ ಏನೂ ಸುಖ ಇಲ್ಲ..
..................
ಹೂಂ ಹೇಳ್ಕೊಳ್ಳೋಕೆ ಸರಕಾರಿ ನೌಕರಿನೆ, ಆದರೆ ಸಂಬಳ ಹೆಚ್ಚಾಗ್ತಾ ಖರ್ಚೂ ಜಾಸ್ತಿ
....................
ಗಂಡ ಎನಿಸಿಕೊಂಡವ ಕುಡಿದು ಎಲ್ಲೋ ಬಿದ್ದ್ದಿರತಾನೆ.ಮನೆಗೆ ಬಂದ್ರೆ ಬಂದ. ಬಂದ್ರೂ ಗಲಾಟೆ. ನಾನು ಸುಮ್ನಿರಲ್ಲ.ಬರೀ ಗೋಳು
...................
ಅವನಾ?? (ಬಹುಶ: ಮಗನ ಬಗ್ಗೆ ಇರಬೇಕು)ಇಂಜಿನಿಯರಿಂಗ್ ಮುಗಿಸಿದ್ದಾನೆ. ದಿನ ಇಡೀ ಕಂಪ್ಯೂಟರ್ ಮುಂದೆ ಕಟಿಪಿಟಿ ಮಾಡ್ತಿರ್ತಾನೆ..ಅವನೆ ಹೇಳಿಕೊಳ್ಳುವ ಹಾಗೆ ಅವನೊಬ್ಬ ಜೀನಿಯಸ್ ಅಂತೆ
........................
ಕೆಲಸ ಏನು ಅವನನ್ನು ಹುಡುಕ್ಕಂಡು ಬರುತ್ತಾ? ಇವನ್ ತಾನೆ ಹೋಗಬೇಕು? ಎಲ್ಲ ನನ್ನ ಖರ್ಮ (ಕರ್ಮ)
........................
ಅವಳಾ? ವಯಸ್ಸು 25 ಆಯ್ತು. ಕತ್ತೆ ತರಹ ಬೆಳೆದಿದ್ದಾಳೆ. ಬಿ ಎಸ್ಸಿ ಮಾಡಿ ಮನೆಯಲ್ಲೇ ಇದ್ದಾಳೆ. ಕೆಲಸಕ್ಕೋಗೋದು ಬಿಡು. ಮನೆ ಕೆಲಸಕ್ಕೂ ಸಹಾಯ ಮಾಡಲ್ಲ. ಗಂಟೆ 9 ಆಯ್ತು ಹೌದಾ? ಇನ್ನೂ ಏಳೇ ಇಲ್ಲ ಸೋಂಬೇರಿ..ಯಾಕೆ ಬೆಳಿಗ್ಗೆ ಹಾಲು ತರೋದು, ತರಕಾರಿ ಕೊಯ್ದು ಕೋಡೋದು ಹಿಂತದ್ದೆಲ್ಲ (ಇಂತದ್ದೆಲ್ಲ )ಮಾಡಿಕೊಡಬಹುದಲ್ವಾ?
..........................
ನಿನ್ನೆ ಸಂಜೆ ಆಫಿಸ್ ನಲ್ಲಿ ಒಡಿಟ್ (audit)ನಡಿತೀತ್ತು ಮನೆಗೆ ಹೋಗುವಾಗ ಲೇಟ್...ಬೆಳಿಗ್ಗೆ ನಾನು ಮಂಚದ ಮೇಲೆ ಹಾಕಿದ್ದ ಒಣಗಿದ ಬಟ್ಟೆ ಹಾಗ್ ಹಾಗೇ...ಎಲ್ಲಾ ನಾನು ಹೇಳಿ ಮಾಡಬೇಕಾ?
.........................
ಟಿ.ವಿ ನೋಡ್ತಿರ್ತಾಳೆ
..........................
ಸುಮೀ, ಅದು ಮಾಡಿ ಆಯ್ತು. ಪಕ್ಕದ ಮನೆಗೆ ಹೋಗಲಿಕ್ಕೆ ಶುರು ಮಾಡಿದ್ಲು. ಸುಮ್ನೆ ನಮ್ಮ ಮನೆ ಹೇಸಿಗೆ ಬೇರೆಯವರಿಗೆ ತಿಳಿಯೋದು ಬೇಡ ಅಂತ ಪುನ: ಹಾಕಿಸ್ಕೊಂಡೆ. ಮತ್ತು ಸಿಗುವ ಒಂದು ಭಾನುವಾರ ನನಗೂ ಒಂದು ಬ್ರೇಕ್ ಟಿ.ವಿ ನಲ್ಲಿ ತೋರಿಸೋ ಸಿನಿಮಾಗಳು (ಬಹುಶ: ಟಿ.ವಿ ನೆಟ್ ವರ್ಕ್ ಕೇಬಲ್ ಕನೆಕ್ಷನ್ ?)
.........................
ಗಂಡು ನೋಡ್ತಾ ಇದ್ದೀನಿ. ತಕ್ಷಣಕ್ಕೆ ಸಿಗಬೇಕಲ್ಲ. ಎಲ್ಲರಿಗೂ ಕೆಲಸಕ್ಕೆ ಹೋಗುವವರು ಬೇಕು. ಒಂದೆರಡು ಬಿಸಿನೆಸ್ಸ್ ನಲ್ಲಿರೋ ಹುಡುಗರ ಮನೆಯವರು ಕೇಳಿಕೊಂಡು ಬಂದಿದ್ರು. ಇವಳಿಗೆ ಬೇಡವಂತೆ. ಬಲವಂತ ಮಾಡಿ, ಬೈದ್ದಿದ್ದಕ್ಕೆ ನೇಣು ಹಾಕ್ಕೊಂಡು ಸಾಯ್ತೀನಿ ಅಂತ ಹೇಳ್ತಾಳೆ ಬೇರೆ. ಸಾಯ್ಲಿ ಅಂತ ನಾನೇ ಸುಮ್ನಾದೆ. ನೋಡಿದ್ಯಾ ಸುಮಾ ಒಟ್ಟಿಗೆ ಸುಖ ಇಲ್ಲ. ನಾಲ್ಕು ದಿನ ಎಲ್ಲದರೂ ಹೋಗಿ ಸಾಯುವ ಅಂದ್ರೆ ನನಗೆ ಯಾರಿದ್ದಾರೆ? ನಾನ ಇವನ್ನನ್ನ ಕಟ್ಟಿಕೊಂಡು ದಿನಾನೆ ನಮ್ಮ ಮನೆಯವರ ಪಾಲಿಗೆ ನಾ ಸತ್ತು ಹೋದೆ. ನಿನ್ನನ್ನ ಬಿಟ್ರೆ ಹೇಳಿಕೊಳ್ಳುವಂತಹ ಸ್ನೇಹಿತರು ಹಿತೈಷಿಗಳು ಯಾರೂ ಇಲ್ಲ.
........................
ಪ್ರೀತಿ ಪ್ರೇಮ ಎಲ್ಲ ಸ್ವಲ್ಪ ಕಾಲ ಚಂದ. ಈಗ ನಾನೆ ಉದಾಹರಣೆಯಾಗಿದ್ದೀನಿ ಅಲ್ಲವ?ಪ್ರೀತಿಸಿದವನ್ನನ್ನ ಕಟ್ಟಿಕೊಂಡೆ ಉಳಿದವರೆಲ್ಲ ನನ್ನಿಂದ ದೂರ ಆದರು. ಇವಂದು ಆಮೇಲೆ ಗೊತ್ತಾಯ್ತು..ಪ್ರೀತಿ ಅಂತ ಅಲ್ಲ ಸುಮ್ನೆ ಜಿದ್ದಿನಿಂದ ನನ್ನನ್ನು ಮದುವೆ ಮಾಡಿಕೊಂಡಿದ್ದು. ನೀನೆ ಸುಖಿ ಸುಮಿ..
........................
ಹೌದಾ ಸುಮೀ..ಈ ಸಂತಸದ ವಿಷಯ ಹೇಳಲಿಕ್ಕೆ ಇಷ್ಟು ಹೊತ್ತು ಬೇಕಾಯ್ತಾ. ಛೆ ನಂದೇ ರಗಳೆಯಾಗಿ ಹೋಯ್ತು. ಏನು ಮಾಡ್ತಾನೆ ಹುಡುಗ, ಏನ್ ಕತೆ?
........................
ಹೂಂ. ದಸರಾಗೆ ಹೇಗೂ ರಜೆ ಇದೆ. ಅದಕ್ಕೆ ಇನ್ನಷ್ಟು ಸೇರಿಸಿ ನಾನಂತು ಹಾಜರ್. ಹಾಗೇ ದೆಹಲಿ ಕೂಡ ನೋಡಬಹುದು. ಖಂಡಿತ ಬರ್ತೇನೆ ಸುಮಿ. ಈಗ ಫೋನ್ ಇಡ್ಲಾ. ಸಂಜೆ ಮಾತಾಡ್ತೀನಿ. ನನ್ನ ಸ್ಟಾಪ್ ಬಂತು.
............................

October 6, 2012

ಸಂಚಿಯಿಂದ ತೆಗೆದ ನೆನಪು-9: (ನನ್ನ 200 ನೆ ಪೋಸ್ಟ್)

can u believe it? i cannot....love u readers my hits have crossed 36000 mark without any effort from my side..
ನನ್ನ 200 ನೆ ಪೋಸ್ಟ್ ಇನ್ನೊಂದು ನೆನಪು...ಕುಛ್ ಖಟ್ಟಿ ಕುಛ್ ಮೀಠಿ

ಮೇ 4, 2012. ಗೀತಾ ದತ್ ಹಾಡು ಗಟ್ಟಿಯಾಗಿ ಹಾಕಿಕೊಂಡು ಮನೆ ಕ್ಲೀನ್ ಮಾಡ್ತಾ ಇದ್ದೆ. ಮನೆ ಕ್ಲೀನ್ ಯಾಕಪ್ಪ ಅಂದ್ರೆ ಯು ಎಸ್ ನಲ್ಲಿರೋ ನನ್ನ ಆತ್ಮೀಯ ಗೆಳೆಯರಾದ ಶ್ರೀವತ್ಸ ಜೋಶಿ, ಸಹನಾ ಜೋಶಿ ಮತ್ತು ನನ್ನ ಬೆಂಗಳೂರಿನ ಮಿತ್ರರಾದ ವೇದಾ ಮತ್ತು ಜ್ಯೋತಿ- ಇವರನ್ನು 6 ನೇ ತಾರೀಕಿಗೆ ಊಟಕ್ಕೆ ಕರೆದಿದ್ದೆ.ಮತ್ತು ಊಟಕ್ಕೆ ಕರೆದ ಎರಡು ದಿನ ಮುಂಚೆ ಮನೆ ಕ್ಲೀನ್ ಆ ಅಂತ ನಿಮ್ಮ ಪ್ರಶ್ನೆಗಳೇನಾದರೂ ಇದ್ದರೆ ಅದಕ್ಕೂ ಉತ್ತರ ಇದೆ. ನಮ್ಮ ಮನೆಯ ಬಳಿ ಮೂರು ನಾಲ್ಕು ಮನೆ ರಿಪೇರಿ, ಮಹಡಿ ಕಟ್ಟಿಸುವುದು, ಬೀಳಿಸಿ ಕಟ್ಟಿಸುವುದು ಮುಂತಾದ ಕೆಲಸಗಳು, ಅದಕ್ಕೆ ಬೇಕಾದ ಸಿಮೆಂಟ್ ಮರಳು ಅದರ ಧೂಳು ನಮ್ಮ ಮನೆಯೊಳಗೆ ಹಾಗಾಗಿ ನನ್ನದೊಂದು ಕ್ಲೀನಿಂಗ್ ಪ್ರೋಗ್ರಾಮು.
ಇದರ ಮಧ್ಯ ನನ್ನ ತಂಗಿ ಜತೆ ಚ್ಯಾಟ್ ಮತ್ತು ಇಲ್ಲಿ ಊಟಕ್ಕೆ ಬರಲಾಗದ, ನನ್ನ ಹೈದರಾಬಾದ್ ನಲ್ಲಿರೋ ಸ್ನೇಹಿತೆ ಸಂಧ್ಯಾ ಹಾಗು ಮಧ್ಯಪ್ರದೇಶದಲ್ಲಿರೋ ನಾಗಮಣಿಯವರಿಗೆ ನನ್ನ ಮೆನ್ಯೂ ಬಗ್ಗೆ ಹೇಳಿ ಆಸೆ ತೋರಿಸ್ತಾ ಇದ್ದೆ. ಶೋ ಕೇಸ್ ಬಳಿ ಕ್ಲೀನ್ ಮಾಡ್ತಿದ್ದಾಗ ಅಲ್ಲೇ ಬಳಿಯಿರುವ ನನ್ನ ಫಿಶ್ ಬೌಲ್ ನಲ್ಲಿರುವ ಮೀನು ನನ್ನನ್ನು ನೋಡಿ ತಿಪ್ಪರಲಾಗ ಹಾಕುತ್ತ ನೀರನ್ನು ಎಲ್ಲ ಕಡೆ ಸಿಂಪಡಿಸುತ್ತಿದ್ದರು. ಅವರಿಗೆ ಸುಮ್ಮನಿರದಿದ್ದರೆ ಬೆಕ್ಕಿಗೆ ಆಹಾರವಾಗಿ ಕೊಡುವುದಾಗಿ ಗದರಿಸಿ ನನ್ನಷ್ಟಕ್ಕೆ ನಗುತ್ತ, ಇನ್ನೇನೂ ಈ ಕಡೆ ತಿರುಗಬೇಕು ಎನ್ನುವಾಗ ನನ್ನ ಸೆಲ್ ಫೋನ್ ಬ್ಲಿಂಕ್ ಆಗುವುದನ್ನು ನೋಡಿದೆ. ನನಗೂ ನನ್ನ ಸೆಲ್ ಫೋನ್ ಗೂ ಅಂತಹ ಗಳಸ್ಯ-ಕಂಠಸ್ಯ ಏನಿಲ್ಲ. ನನ್ನ ತಮ್ಮ ಬೆಳಿಗ್ಗೆ ಫೋನ್ ಮಾಡಿದ ಮೇಲೆ ಅದು ಎಲ್ಲೆಲ್ಲೋ ಇರುತ್ತೆ. ಒಂದು ಸಲ ಹಾಸಿಗೆ ಮಡಚುವಾಗ ಅದರ ಒಳಗಿದ್ದು ಅದನ್ನು ಹುಡುಕಿ ಹೊರತೆಗೆದಾಗ ಎರಡು ದಿನ ದಾಟಿತ್ತು. ಶ್ರೀಕಾಂತ ಟೂರ್ ಅಥವ ಹೊರದೇಶಕ್ಕೆ ಹೋದಾಗ ಮಾತ್ರ ನನ್ನ ಸೆಲ್ ಫೋನ್ ನನ್ನ ಡ್ರೆಸ್ ಪೊಕೆಟ್ ನಲ್ಲಿರುತ್ತೆ. ನನ್ನ ಈ ಅಭ್ಯಾಸ ಬಲ್ಲ ಆತ್ಮೀಯರು ಕುಟುಂಬ ಸದಸ್ಯರು ಆದಷ್ಟು ನನಗೆ ಲ್ಯಾಂಡ್ ಲೈನ್ ಗೆ ಫೋನ್ ಮಾಡುವುದು.
ಹಾಂ! ಎಲ್ಲಿದ್ದೆ? ಮಿಸ್ಡ್ ಕಾಲ್ ನೋಡಿದೆ..ಅರೇ ಮುನ್ನ ಳದ್ದು (ಮುನ್ನ ನನ್ನ ಭೈಯ್ಯ ಅಂದರೆ ಶ್ರೀಕಾಂತರ ಹಿರಿಯಣ್ಣನ ಮಗಳು) . ಭೈಯ್ಯನವರಿಗೆ ಹುಷಾರು ತಪ್ಪಿದ್ದ ದಿನದಿಂದ ಅವಳು ಫೋನ್ ಮಾಡಿದರೆ ಶ್ರೀಕಾಂತಗೆ ಮಾಡೋದು. ನನಗೆ ಬಂದಿರೋದು ಆಶ್ಚರ್ಯ ಪಡುತ್ತ ಅವಳಿಗೆ ಫೋನಾಯಿಸಿದೆ.. 'ಅಪ್ಪ ಹೋಗಿ ಬಿಟ್ಟರು-ಏನು ಮಾಡ್ಲಿ, ಚಿಕ್ಕಪ್ಪ ಫೋನ್ ಎತ್ತತಾ ಇಲ್ಲ' ಅಂದಾಗ ಒಂದು ಕ್ಷಣ ನನಗೆ disorient ಆದ ಭಾವನೆ ಬಂತು. ಕೂಡಲೇ ಸಾವರಿಸಿ, 'ಧೈರ್ಯ ತೆಗೆದುಕೋ' ಸ್ವಲ್ಪ ಹೊತ್ತಿಗೆ ಫೋನ್ ಮಾಡ್ತೇನೆ ಅಂದೆ. ಶ್ರೀಕಾಂತ ಗೆ ಫೋನ್ ಹಚ್ಚಿದಾಗ ಸ್ವಿಚ್ ಆಫ್ ಆಗಿತ್ತು. ಹೌದು ಆ ದಿನ ಬ್ಯಾಂಕಿನ ವರಿಷ್ಟರೊಬ್ಬರ ಭೇಟಿ ಇತ್ತು ಅಂತ ಹೇಳಿದ್ದ ನೆನಪು. ಶ್ರೀಕಾಂತ ಗೆ ಸೆಲ್ಲ್ ಫೋನ್ ಅನ್ನು ಸೈಲೆಂಟ್ ನಲ್ಲಿ ಇಡಕ್ಕೆ ಗೊತ್ತಿಲ್ಲ ಅದಕ್ಕೆ ಅದನ್ನು ಸ್ವಿಚ್ ಆಫ್ ಮಾಡಿಡೋದು. ಅವರ ಜತೆ ಇರುವ ಸಾಲಿಮಠರಿಗೆ ಫೋನ್ ಮಾಡಿದೆ. ಅವರು ವರಿಷ್ಠರ ಕೊಟಡಿಯಿಂದ ಹೊರಗೆ ಬಂದು ನನ್ನ ಜತೆ ಮಾತನಾಡಿದರು. ಶ್ರೀಕಾಂತಗೆ ಸೂಕ್ಷ್ಮವಾಗಿ ವಿಷಯ ತಿಳಿಸಿ ಅಲ್ಲಿಂದ ಮನೆಗೆ ಕಳುಹಿಸಲು ಹೇಳಿದೆ.
ಒಂದು ವರ್ಷದ ಹಿಂದೆಯೆ ಭೈಯ ನವರಿಗೆ ಲೀವರ್ ನ ಸಿರ್ರೊಸಿಸ್ (Cirrhosis)  ಅಂತ ಡಯಗ್ನೈಸ್ ಮಾಡಿದ್ದರು. ಅತ್ಯಂತ ಕ್ಲೀನ್, ಸಾಧು life style ನಡೆಸುವ, ಕುಡಿತದಿಂದ ದೂರವಿರುವ ಭೈಯ್ಯನವರಿಗೆ ಈ ರೋಗ ಬಂದಿದ್ದು ನಮಗೆಲ್ಲ ತುಂಬ ಆಶ್ಚರ್ಯದ ಸಂಗತಿ. ಆ ಮೇಲೆ ಗೊತ್ತಯಿತು ಇದು ಬಿ ಪಿ ಮಾತ್ರೆಯ ಸತತ ಬಳಕೆಯಿಂದಾದ ದುಷ್ಪರಿಣಾಮ ಅಂತ. ಹದಿನೈದು ದಿನದ ಹಿಂದೆ ನಾನು ಶ್ರೀಕಾಂತ ತೀರ್ಥಹಳ್ಳಿಯಿಂದ ಉಡುಪಿಗೆ ಹೋಗಿ ಅವರನ್ನು ನೋಡಿಕೊಂಡು ಬಂದಿದ್ದೆವು. ನಾನು ಅಲ್ಲಿಂದ ಹೊರಡುವ ಮುಂಚೆ ಅವರ ಕಾಲಿಗೆರಗಿದ್ದಾಗ ಅವರ ಕಣ್ಣೋಟ ಸಂಜ್ಞೆಯಿಂದಲೆ ನನಗೆ ಗೊತ್ತಾಯಿತು ಅದು ನಮ್ಮ ಕೊನೆಯ ಭೇಟಿ ಅಂತ. ಆದರೂ ನಾನು ,ಇನ್ನು ಸ್ವಲ್ಪ ದಿನದಲ್ಲೆ ನಿಹಾನ ಪರೀಕ್ಷೆ ಮುಗಿಯುತ್ತೆ, ನಾನು ಅವಳು ಇಲ್ಲಿ ಬಂದು ಸ್ವಲ್ಪ ದಿನ ಇರುತ್ತೇವೆ 'ಅಂದಿದ್ದೆ. ಈಗ ಈ ಸುದ್ದಿ.
ನಾನು ಚಿಕ್ಕವಯಸ್ಸಿಗೆ ಮದುವೆಯಾಗಿ ಆ ಮನೆಗೆ ಹೋದಾಗ ಅವರೆ ನನ್ನಲ್ಲಿ ಧೈರ್ಯ ತುಂಬಿದ್ದು ಹಿರಿಯರಂತಿರದೆ ನನ್ನ ಸ್ನೇಹಿತರ ತರಹ ಇದ್ದಿದ್ದು. ಆವಾಗಿನ ದಿನಗಳನ್ನೆಲ್ಲ ನೆನೆಸಿ ಸ್ವಲ್ಪ ಹೊತ್ತು ಅತ್ತೆ. ಆದರೆ ಹಲವಾರು ಕೆಲಸಗಳಿದ್ದವು ಈಗ ಮಾಡಲು. ಮೊದಲಿಗೆ ನನ್ನ ತಮ್ಮನಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಆ ಮೇಲೆ ತೀರ್ಥಹಳ್ಳಿಯಲ್ಲೆಲ್ಲ ಸುದ್ದಿ ಮುಟ್ಟಿಸಲು ನೀಲೇಶ ಜವಳಿಗೆ ಫೋನ್ ಮಾಡಿದೆ. ಅದಾದ ನಂತರ ಶ್ರೀವತ್ಸ ಜೋಶಿಯವರಿಗೆ. ಅವರು ಚಂದದ ನಾಲ್ಕು ಸಾಂತ್ವನದ ಮಾತು ಹೇಳಿದರು. ಜ್ಯೋತಿ ವೇದಾ ರ ಫೋನ್ ಹೋಗಲಿಲ್ಲ ಅದಕ್ಕೆ ತಕ್ಷಣ ಅವರಿಗೊಂದು ಮೈಲ್ ಹಾಕಿದೆ. 
ನಿಹಾ ಆ ದಿನ ಬೆಳಿಗ್ಗೆ 'ಸಂವಾದ' ತಂಡ ಆಯೋಜಿಸಿರುವ ಎರಡು  ದಿನದ ಸಿನಿಮ appreciation ಕೋರ್ಸ್ ಗೆ ಅಂತ ತುಮಕೂರಿಗೆ ಹೊರಟಿದ್ದಳು. ಅವಳಿಗೆ ಫೋನ್ ಮಾಡಿ ವಿಷಯ ತಿಳಿಸಿ, ಅವಳಿಗೆ ನಮ್ಮ ತುಮಕೂರಿನ ಆಫಿಸ್ ನಲ್ಲಿ ಕಾಯಲು ಹೇಳಿದೆ. ಮಾಲವಿಕ ಬರಬೇಕು ಅಂತ ನನಗೆ ಆಸೆ ಇತ್ತು. ಯಾಕೆಂದರೆ ಅವಳು ಭೈಯ್ಯ ಅವರನ್ನು ನೋಡಿ ಎರಡು ವರ್ಷಗಳೇ ಸಂದಿದ್ದವು. ಕೆಲಸಕ್ಕೆ ಸೇರಿದ ಮೇಲೆ ಅವಳು ಅವರನ್ನು ನೋಡಿರಲಿಲ್ಲ. ಅವಳಿಗೆ ಫೋನ್ ಮಾಡಿ ಏನು ಮಾಡ್ತೀಯಾ? ನಮ್ಮ ಜತೆ ಬರುತ್ತೀಯಾ ಅಂತ ಕೇಳಿದೆ, ಅವಳು ಒಂಚೂರು ಆಲೋಚಿಸದೆ, ಈಗಲೇ ಹೊರಡುತ್ತೇನೆ ಅಂದಳು. ಇಷ್ಟರಲ್ಲಿ ಶ್ರೀಕಾಂತ ನನಗೆ ಫೋನ್ ಮಾಡಿ ಎರಡು ಗಂಟೆಗೆ ಗಾಡಿ ಬರುತ್ತೆ ರೆಡಿಯಾಗಿರು ಅಂದಿದ್ದರು. ನಾನು ಬೇಗ ಬೇಗ ನಮಗೆ ಬೇಕಾಗಿರುವ ಬಟ್ಟೆ ಬರೆ ಮತ್ತು ಇತರೇ ಅಗತ್ಯದ ಸಾಮಾನುಗಳನ್ನು ಸ್ಯೂಟ್ ಕೇಸ್ ಒಳಗೆ ಹಾಕಿಟ್ಟೆ. ಶ್ರೀಕಾಂತ ಬಂದ ಮೇಲೆ ಮೊದಲು ಅವರು ಊಟ ಮಾಡಿದರು. ಆಮೇಲೆ ಹಣಕಾಸಿನ ವ್ಯವಸ್ಥೆ ಮುಂತಾದವುಗಳನ್ನು ಮಾಡಲು ಆಫಿಸ್ ಗೆ ಹೋದರು. ಮಾಲವಿಕ ಬಂದ ಮೇಲೆ ನಾನು ಅವಳು ಊಟ ಮಾಡಿ ಉಳಿದ ಪದಾರ್ಥಗಳನ್ನು ಕಸದ ಬುಟ್ಟಿಗೆ ಚೆಲ್ಲಿ ಮನೆ ಕಿಟಕಿಗಳು, ಹಿಂದಿನ ಬಾಗಿಲು ಭದ್ರ ಪಡಿಸುವಷ್ಟರಲ್ಲಿ ಗಾಡಿ ಬಂದಿತ್ತು. ನಮ್ಮ ಮನೆಯ ಔನರ್ ಗೆ ಹೇಳ್ಬಿಟ್ಟು, ಒಂದು  ಜತೆ ಬೀಗದ ಕೈ ಅವರಿಗೆ, ಇನ್ನೊಂದು ಆಫಿಸ್ ಗೆ ಕೊಟ್ಟು, ಮಲ್ಲೇಶ್ವರಂ ನಲ್ಲಿ ಶ್ರೀಕಾಂತರ ಕಸಿನ್ ಸತೀಶರನ್ನು ಪಿಕ್ ಮಾಡಿ ಹೊರಟ್ವಿ. ಉಡುಪಿಯಿಂದ ಅಲ್ಲಿನ ವ್ಯವಸ್ಥೆ ಬಗ್ಗೆ ಫೋನ್ ಮಾಡಿ ಆಗಾಗ ಶ್ರೀಕಾಂತ ವಿಚಾರಿಸುತ್ತಿದ್ದರು. ನಾವು ಹೊರಟಾಗ ಆಗಲೇ ಮೂರು ದಾಟಿತ್ತು. ಅಲ್ಲಿಂದ ಟ್ರಾಫಿಕ್ ಎಲ್ಲ ದಾಟಿಕೊಂಡು ಊರ ಹೊರಗಡೆ ಬರಲು 2 ತಾಸುಗಳಾದವು. ದಹನ ಕ್ರಿಯೆ ರಾತ್ರಿ 10 ಕ್ಕೆ ಅಂತ ತೀರ್ಮಾನಿಸಲಾಯಿತು. ನಮ್ಮ ಗಾಡಿಯ ಚಾಲಕ ನನಗೆ 'ನೀವು ಏನೂ ಚಿಂತೆ ಮಾಡಿಬೇಡಿಯಮ್ಮ, ನಿಮಗೆಲ್ಲ 10 ಗಂಟೆಯೊಳಗೆ ಉಡುಪಿಗೆ ತಲುಪಿಸೋದು ನನ್ನ ಜವಾಬ್ದಾರಿ' ಅಂದರು. ನೀಹಾಳನ್ನು ದಾರಿಯಲ್ಲಿ ಪಿಕ್ ಮಾಡಿ ಹೊರಟೆವು. ಸಕಲೇಶಪುರ್ ತಲುಪುವಾಗ ಉಡುಪಿಯಿಂದ ಶ್ರೀಕಾಂತರ ಭಾವ ಫೋನ್ ಮಾಡಿದರು' ರುದ್ರಭೂಮಿ ಸಂಜೆ 7 ಗಂಟೆಗೆ ಕ್ಲೋಸ್, ಮತ್ತು body ಯನ್ನು ಸಾಯಂಕಾಲ 5 ರ ನಂತರ ಆಸ್ಪತ್ರೆಯಲ್ಲಿರಗೂಡುವುದಿಲ್ಲ' ಅಂತ. ಹಾಗಾಗಿ ಭೈಯನವರ ದೇಹವನ್ನು ಮಣಿಪಾಲದ ಶೈತ್ಯಾಗಾರದಲ್ಲಿಡಲಾಯಿತು.ನಾನೂ 'ಡ್ರೈವರ್ ಗೆ, ಗಡಿಬಿಡಿಯಿಂದ ಏನೂ ಹೋಗುವುದು ಬೇಡ, ಘಟ್ಟ ಪ್ರದೇಶ..ಸಾವಕಾಶವಾಗಿ ತಲುಪಿದರಾಯಿತೆಂದು. ನೀಲೇಶ ಮತ್ತು ಊರಿನ ದೇವಸ್ಥಾನದ ಕಡೆಯವರು ಗಾಡಿ ಮಾಡಿ ಹೊರಡುವ ಮುಂಚೆ ಅವನು ನನಗೆ ಎಸ್ ಎಮ್ ಎಸ್ ಮಾಡಿದ. ನಾನು ಕೂಡಲೆ, ಬೇಡ ದಹನ ಕ್ರಿಯೆ ನಾಳೆ. ನೀವೀಗ ಹೋದರೂ ಅಲ್ಲಿ ಭೈಯ್ಯನವರು ಕಾಣ ಸಿಗಲ್ಲ ಅಂತ ಹೇಳಿದೆ. ಹಾಗೂ ಮಿತ್ರ ವಸುಧೇಂದ್ರ ಹಾಗೂ ಸಂದೀಪ ಕಾಮತ್ ಗೆ ವಿಷಯ ತಿಳಿಸಿ ಎಸ್ ಎಮ್ ಎಸ್ ಮಾಡಿ ನನ್ನ ಸೆಲ್ ಫೋನ್ ಅನ್ನು ಬ್ಯಾಗ್ ಒಳssssಗಡೆ ತುರುಕಿಸಿಟ್ಟೆ. ಇನ್ನು ಯಾರ ಜತೆನೂ ಯಾವ ಮಾತೂ ಎಸ್ ಎಮ್ ಎಸ್ ನನಗೆ ಬೇಕಿರಲಿಲ್ಲ.
ಶ್ರೀಕಾಂತ-ಸತೀಶ ಸಮಯ ಕಳೆಯಲು ಲೋಕಾರೂಢಿಯ ಮಾತುಗಳನ್ನಾಡುತ್ತಿದ್ದರೆ, ನಿಹಾ ಅವಳ ಪುಸ್ತಕ ಓದುತ್ತಿದ್ದಳು, ಮಾಲವಿಕ ನಿದ್ದೆಗೆ ಜಾರಿದ್ದಳು. ನನಗೋ ಮೌನ ಮಾತ್ರ ಬೇಕಾಗಿತ್ತು. ಆವಾಗಾವಾಗ ಒಸರುತ್ತಿದ್ದ ಕಂಬನಿ ಕಿಟಕಿಯಿಂದ ಬೀಸುತ್ತಿದ  ಗಾಳಿಗೆ ಹಾಗೇ ಆವಿಯಾಗುತ್ತಿತ್ತು. ನನ್ನ ಪರಿವಾರದವರು ನಾನು ಅಳುವುದು ನೋಡುವುದು ನನಗೆ ಬೇಕಾಗಿರಲಿಲ್ಲ.
ಹಾಗೆ ಹಳೆ ನೆನಪುಗಳೆಲ್ಲ ಒತ್ತಿಕೊಂಡು ಬಂದವು:
ಚಿಕ್ಕ ಪ್ರಾಯಕ್ಕೆ ಮದುವೆಯಾಗಿ ನಾನು ನನ್ನ ಮುಂಬೈ ನ ಪುಟ್ಟ ಕುಟುಂಬದಿಂದ ಈ ಕೂಡು ಕುಟುಂಬಕ್ಕೆ ಹಾರಿದ್ದೆ. ನಗರದಿಂದ ಹಳ್ಳಿಗೆ. ನನಗೊಂದೂ ತೋಚುತ್ತಿರಲಿಲ್ಲ. ಮದುವೆಯಾದ ಎರಡು ದಿನದ ನಂತರ, ತೀರ್ಥಹಳ್ಳಿಯಲ್ಲಿ ಆಯೋಜಿಸಿದ ಸತ್ಯನಾರಾಯಣ ಪೂಜೆ ಮುಗಿಸಿ ನನ್ನ ತಂದೆ ತಾಯಂದಿರು, ತಮ್ಮಂದಿರು, ತಂಗಿ ಹೋದ ಮೇಲೆ ನನಗೆ ಅನಾಥ ಪ್ರಜ್ಞೆ ಕಾಡಿತ್ತು. ನನಗೆ ಹಳ್ಳಿ ಜೀವನದ ಪರಿಚಯವಿರಲಿಲ್ಲ. ಶ್ರೀಕಾಂತ ಬೆಳಿಗ್ಗೆ 9 ಕ್ಕೆ ಮನೆ ಬಿಟ್ಟರೆ ಬರುತ್ತಿದ್ದದ್ದೆ ರಾತ್ರಿ. ಮನೆಯಲ್ಲಿ ಮುನ್ನ (ಸುಮತಿ) ಬಿಟ್ಟರೆ ಎಲ್ಲರೂ ನನಗಿಂತ ಹಲವಾರು ವರ್ಷ ಹಿರಿಯರೇ. ಬೇಗ ಎದ್ದು ಅಕ್ಕ (ಓರಗಿತ್ತಿ) ನಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತಿದ್ದೆ. ಆ ಮೇಲೆ ನನ್ನ ಮೊದಲನೇ ವರ್ಷದ ಪದವಿ ಪರೀಕ್ಷೆಗೆ ಓದುತ್ತಿದ್ದೆ. ಸ್ವಲ್ಪ ಹೊತ್ತು ಅತ್ತೆಯವರ ಜತೆ ಸಮಯ ಕಳೆಯುತ್ತಿದ್ದೆ. ಅವರಿಗೆ ಕಣ್ಣಲ್ಲಿ ದೃಷ್ಟಿಯಿರಲಿಲ್ಲ ಹಾಗೂ ಕಿವಿ ಮಂದವಾಗಿ ಕೇಳಿಸುತ್ತಿತ್ತು. ಅವರ ತವರುಮನೆಯ ಕತೆಗಳನ್ನು ಹೇಳಿ ನನ್ನನ್ನು ರಂಜಿಸುತ್ತಿದ್ದರು. ಮಧ್ಯಾಹ್ನ ಮಾವ ಅಂಗಡಿ ನೋಡಿಕೊಳ್ಳುತ್ತಿದ್ದರೆ ಭೈಯ್ಯ ಊಟಕ್ಕೆ ಬರುತ್ತಿದ್ದರು. ಅವರದ್ದು ಸಾವಕಾಶ ಊಟ. ಅಕ್ಕ ಮತ್ತು ಭಯ್ಯ ಅವರನ್ನು ಬಡಿಸುತ್ತ ಅವರ ಮಾತುಗಳನ್ನು ಕೇಳಲು ಉತ್ಸುಕಳಾಗುತ್ತಿದೆ. ಅವರು ಓದುವುದರಲ್ಲಿ, ಅದರಲ್ಲೂ ಲೆಕ್ಕದಲ್ಲಿ ತುಂಬ ಬುದ್ದಿವಂತರಿದ್ದರಂತೆ, ಆದರೆ ಮಾವನವರಿಗೆ ಅಂಗಡಿಯಲ್ಲಿ ಸಹಾಯ ಮಾಡಬೇಕಾಗಿ ಬಂದು ಅವರು 8 ನೇ ಈಯತ್ತೆ ಮುಗಿಯುತ್ತಿದ್ದ ಹಾಗೆ ಅವರನ್ನು ಶಾಲೆಯಿಂದ ಬಿಡಿಸಿದ್ದರಂತೆ. ಈ ಬಗ್ಗೆ ಅವರು ಬೇಜಾರಿನಿಂದ ಹಲವಾರು ಬಾರಿ ನನ್ನಲ್ಲಿ ಹೇಳಿಕೊಂಡಿದ್ದರು. ಮನೆಯಲ್ಲಿ ಹಿರಿಯ ಮೂವರು ಗಂಡಸಿದ್ದರೂ (ನನ್ನ ಮಾವನವರ ಇಬ್ಬರು  ತಮ್ಮಂದಿರು ಮತ್ತು ಶ್ರೀಕಾಂತರ ಇನ್ನೊಬ್ಬ ಅಣ್ಣ) ಅವರೆಲ್ಲ ಬೇರೆ ಬೇರೆ ಕೆಲಸ ಮಾಡುತ್ತಿದ್ದರಿಂದ ಅಂಗಡಿಯ ಜವಾಬ್ದಾರಿ ನನ್ನ ಭೈಯ್ಯನವರ ಮೇಲೆ. ಭಾರವಾದ ಮೂಟೆಗಳನ್ನು ಹೊರುವುದರಿಂದ ಅಂಗಡಿಯ ಸಾಮಾನುಗಳನ್ನು ಅದರ ಸ್ಥಾನದಲ್ಲಿಡುವುದು, ಸೇಲ್ಸ್, ಆರ್ಡರ್ ಕೊಡುವುದು, ತಿಂಗಳಿಗೆ ಒಂದು ಸಲ ಶಿವಮೊಗ್ಗಕ್ಕೆ ಹೋಗಿ ಖಾಲಿಯಾದ ಸಾಮಾನಿನ ಪಟ್ಟಿ ಕೊಟ್ಟು ಬರುವುದು ಮುಂತಾದ ಹತ್ತು ಹಲವು ಕೆಲಸಗಳು. ನಮ್ಮ 25 ವರ್ಷದ ಒಡನಾಟದಲ್ಲಿ ಅವರು ಕಾಯಿಲೆ ಬಿದ್ದದ್ದು ಆ ಒಂದೇ ಸಲ. ಭಾನುವಾರ ಅಂಗಡಿ ಬಾಗಿಲು ಹಾಕಿದ್ದರೂ ಓಣಿ ಬಾಗಿಲಿನಿಂದ ಬರುವ ಗ್ರಾಹಕರು. ಹಾಗಾಗಿ ರವಿವಾರ ಕೂಡ ಕೆಲಸವೇ ಆಗುತ್ತಿತ್ತು.

ನಮ್ಮ ತೀರ್ಥಹಳ್ಳಿಯ ಜೀನಸಿ ಅಂಗಡಿಗೆ 100 ವರ್ಷಕ್ಕಿಂತ ಹಳೆಯ ಇತಿಹಾಸ..ಎಲ್ಲ ಸಿಗುತ್ತಿತ್ತು. ಊರಿನಲ್ಲಿ ಒಂದು ಮಾತು ಇತ್ತು ;ಎಲ್ಲೂ ಸಿಗದಿದ್ದರೆ ಬಾಲಕೃಷ್ಣ ಶಣೈ ಅವರ ಅಂಗಡಿಯಲ್ಲಿ ಸಿಗುತ್ತೆ ಅಂತ. ಬಾಣಂತಿ ಔಷಧಗಳು, ಬೇರು-ಕಾಷ್ಟಗಳು etc etc..:-)
ಬೆಳಿಗ್ಗೆ ಅವರು ಹೋಮ್ ಗಾರ್ಡ್ಸ್ ಸೇವೆ ಗೆ ಹೋಗುತ್ತಿದ್ದರು. ಅವರು ಹೋಮ್ ಗಾರ್ಡ್ ಕ್ಯಾಂಪ್ ಗೆ ಎಲ್ಲ ಹೋದಾಗ ಕ್ರೀಯಾಶೀಲತೆಯಿಂದ ಪಡೆದ ಬಹುಮಾನಗಳ ಬಗ್ಗೆ, ಅವರು ಕಲಿತ ಬೇರೆ ಬೇರೆ knots ಬಗ್ಗೆ ಹೇಳೊದು ಅದರ ಪ್ರಾತ್ಯಕ್ಷಿಕತೆ ಕೂಡ ಮಾಡಿ ತೋರಿಸುವುದು, ಫರ್ಸ್ಟ್ ಎಇಡ್ ಬಗ್ಗೆ ಎಲ್ಲ ಹೇಳುತ್ತಿದ್ದರು. ಯಾವುದೇ ಪದಾರ್ಥ/ಸಾಮಾನು ಅವರು ವೇಸ್ಟ್ ಮಾಡುತ್ತಿರಲಿಲ್ಲ ನಮಗೂ ಹಾಗೇ ಹೇಳುತ್ತಿದ್ದರು, 'ಯಾವುದಕ್ಕಾದರೂ ಉಪಯೋಗಕ್ಕೆ ಬರುತ್ತದೆ' ಅಂತ.
ವಿಷ್ಣುವರ್ಧನ್ ಅವರ ನೆಚ್ಚಿನ ಸಿನಿಮಾ ತಾರೆ. ಅವರ ಆಪ್ತಮಿತ್ರ ಸಿನಿಮಾವನ್ನು ರಾತ್ರಿ ಅಂಗಡಿ ಬಾಗಿಲು ಮುಚ್ಚಿದ ಮೇಲೆ ಲಾಸ್ಟ್ ಶೋ ಹೋಗಿ ಮೂರು ಸಲ ಹೋಗಿ ನೋಡಿ ಬಂದವರು. ಮತ್ತು ತೀರ್ಥಹಳ್ಳಿಗೆ ವಿಷ್ಣುವರ್ಧನ್ ಅವರು ಭೇಟಿ ನೀಡಿದಾಗ ಬೆಳಿಗ್ಗಿನಿಂದ ಸಂಜೆ ತನಕ ಬಿಸಿಲನ್ನೂ ಲೆಕ್ಕಿಸದೆ ಕಾದು, ಅವರಿಗೆ ಹಸ್ತಲಾಘವ ನೀಡಿದ್ದು ಅದು ಟಿ.ವಿ ಯವರು ರೆಕಾರ್ಡ್ ಮಾಡಿದ್ದು, ಮನೆಗೆ ಬಂದು  ಬೆಂಗಳೂರಿನಲ್ಲಿದ್ದ ನನಗೆ ಫೋನಾಯಿಸಿದ್ದು ಇನ್ನು ನಿನ್ನೆ ಮೊನ್ನೆ ತರಹ ಹಸಿ ಹಸಿ ನೆನಪು.
ಮಾಲು-ನಿಹಾ 10 ನೇ ಮತ್ತು PUC 2 ನಲ್ಲಿ ಒಳ್ಳೆ ಅಂಕಗಳಿಂದ ಪಾಸ್ ಆದಾಗ, ಲೆಕ್ಕದಲ್ಲಿ ನೂರಕ್ಕೆ ನೂರು ಪಡೆದಾಗಲೆಲ್ಲ ಅವರಿಗೆ ಮೊದಲಿಗೆ ಫೋನಾಯಿಸುತ್ತಿದೆ. ಇಬ್ಬರಲ್ಲಿ ಒಬ್ಬರಾದರೂ ಡಾಕ್ಟರ್ ಆಗಬೇಕೆಂದು ಅವರು ಬಯಸಿದ್ದರು. :-)
ತುಂಬ ಕಷ್ಟ ಪಟ್ಟಿದ ಜೀವ. ಮನೆಯ ಹಿರಿಯರೆಲ್ಲ ಅವರ ಕೊನೆ ಸಮಯದಲ್ಲಿ ಹಾಸಿಗೆ ಹಿಡಿದಾಗ ಅವರ ಮಲ ಮೂತ್ರಕೂಡ clean  ಮಾಡಿದವರು. ಹಿರಿಯರೆಲ್ಲ ಕಾಲವಾದ ಮೇಲೆ, ಒಬ್ಬಳೆ ಮಗಳು 'ಮುನ್ನ' (ಸುಮತಿ) ಳ ಮದುವೆಯ ಬಳಿಕ ಅವರು ಸ್ವಲ್ಪ ನೆಮ್ಮದಿಯಿಂದಿದ್ದರು. ಹಲವಾರು ಬಾರಿ ನಾನು ಅವರಿಗೆ ಕೆಲಸಕ್ಕೆ ಸಣ್ಣ ಹುಡುಗರನ್ನು ಇಟ್ಟುಕೊಳ್ಳಿ, ಎಲ್ಲ ನೀವೆ ಮಾಡುವುದನ್ನು ಇನ್ನು ಸಾಕು ನಿಲ್ಲಿಸಿ ಅಂತ ಗಿಣಿಗೆ ಹೇಳಿದ ಹಾಗೆ ಹೇಳಿದ್ದೆ. ಆದಷ್ಟು ದಿನ ನಿರ್ವಹಿಸುತ್ತೇನೆ ಆಮೇಲೆ  ಅದೆಲ್ಲ ಇದ್ದದ್ದೆ ಅಲ್ಲವಾ ಅಂತ ಹೆಳುತ್ತಿದ್ದರು. ಅಷ್ಟರಲ್ಲಿ ಊರಿನಲ್ಲಿ ಕೊಂಕಣಿಯವರು ಶ್ರೀ ವೆಂಕಟರಮಣ ದೇವಸ್ಥಾನ ಕಟ್ಟುವುದೆಂದು ನಿರ್ಧರಿಸಿದರು. ಆ ಸಲುವಾಗಿ ಅವರು ಓಡಾಡಿದ್ದು.ಊರೂರು ತಿರುಗಿದ್ದು ಅಷ್ಟಿಷ್ಟಲ್ಲ. ಆದರೂ ತುಂಬ ಎಂಜಾಯ್ ಮಾಡುತ್ತಿದ್ದರು. ಅವರು ತುಂಬ jovial ಮನುಷ್ಯ. ಎದುರಿಗೆ ಸಿಕ್ಕ ಯಾರನ್ನೂ ಮಾತನಾಡಿಸದೇ ಯಾವತ್ತೂ ಕಳಿಸಿದವರಲ್ಲ.
'ದೇವರ ಕೆಲಸ ಶುರು ಹಚ್ಚಿಕೊಂಡ ಮೇಲೆ ನನಗೆ ಆದಾಯ ಕೂಡ ಹೆಚ್ಚಾಗಿದೆ, ಎಲ್ಲ ಸ್ವಾಮಿ ದೇವನ ಕೃಪೆ' ಅಂತ ಎಷ್ಟೊಂದು ಬಾರಿ ನನ್ನ ಬಳಿ ಹೇಳಿದ್ದರು. ರಾತ್ರಿ ಊಟ ವಾದ ಮೇಲೆ ಅವರು, ಯಾರ್ಯಾರು ದೇವಸ್ಥಾನಕ್ಕೆ ಎಷ್ಟೆಷ್ಟು ದೇಣಿಗೆ ನೀಡಿದರು ಮುಂತಾದೆಲ್ಲ ರಸಿತಿಯನ್ನು ಬರೆಯುತ್ತ, ರಸವತ್ತಾಗಿ ಹೇಳುತ್ತಿದ್ದರು. ಇನ್ನೊಮ್ಮೆ ಒಂದು ಚಿಕ್ಕ ಪೆಟ್ಟಿಗೆ ತೋರಿಸಿ 'ಇದರಲ್ಲಿ ನಾನು ದಿನಾ 100 ರೂ ಹಾಕುತ್ತೇನೆ ವಾರಕ್ಕೊಂದು ಸಲ ಅದು ದೇವಸ್ಥಾನಕ್ಕೆ ನೀಡುತ್ತೇನೆ ಅಂದಿದ್ದರು. ಆಪ್ತರು ಪರಿಚಯಸ್ಥರು ಹಲವಾರು ಜನರು 'ದೇವಸ್ಥಾನಕ್ಕಾಗಿ ತುಂಬ ಖರ್ಚು ಮಾಡುತ್ತಿದ್ದಾರೆ' ಅಂದಾಗ ಅವರ ದುಡ್ಡು ಬೇಕಾದ ಹಾಗೆ ಖರ್ಚು ಮಾಡಲು ಅವರಿಗೆ ಹಕ್ಕಿದೆ ಅಂತ ಹೇಳಿ ನಾನು ಬಾಯಿ ಮುಚ್ಚಿಸಿದೆ. ನನಗೂ ದೇಣಿಗೆ ನೀಡಲು ,ಹಾಗೂ ಈ ನಿಟ್ಟಿನಲ್ಲಿ ನನ್ನ ಕುಟುಂಬದವರನ್ನು ಪ್ರೇರೇಪಿಸಲು ಅವರು ಅವಾಗಾವಾಗ ನನಗೆ ಹೇಳುತ್ತಿದ್ದರು. ನನಗೆ ಅದರಲ್ಲೆಲ್ಲ ನಂಬಿಕೆಯಿಲ್ಲ. ಅದಕ್ಕೆ ನಕ್ಕು ಸುಮ್ಮನಾಗುತ್ತಿದೆ. ಕಡೆಗೆ ಅವರೇ ನನ್ನ ತಂದೆ-ತಾಯಿ, ತಮ್ಮ, ತಂಗಿಯರಿಗೆ ಫೋನ್ ಮಾಡಿ ಅವರಿಂದ ದೇಣಿಗೆ ಪಡೆಯುವುದರಲ್ಲಿ ಯಶಸ್ವಿಯಾದರು. ದೇವಸ್ಥಾನದ ಅಧ್ಯಕ್ಷರನ್ನಾಗಿ ಮಾಡಿದಾಗಲಂತೂ ಅವರ ಖುಶಿ ಹೇಳತೀರದು. ಅಷ್ಟು ಖುಶಿಯಲ್ಲಿದ್ದಾಗಲೇ ಅವರು ಒಂದು ದಿನ ರಕ್ತ ವಾಂತಿ ಮಾಡಿಕೊಂಡಿದ್ದು. ದೇವಸ್ಥಾನದ ಕಮಿಟಿಯವರ ಸಹಾಯದಿಂದ ಅವರಿಗೆ ಮಣಿಪಾಲಕ್ಕೆ ಕರೆದೊಯ್ಯಲಾಯಿತು. ಆಗ ನಾವು ಹಾಗೂ ನನ್ನ ತಮ್ಮನ ಕುಟುಂಬ ಮಹಾರಾಷ್ಟ್ರದ  ಟೂರ್ ಹೋಗಿದ್ದೆವು. ಆಮೇಲೆ ಅವರ ಚಿಕಿತ್ಸೆಗೋಸ್ಕರ ಅಂತ ಅವರು ಉಡುಪಿಯಲ್ಲೆ ಇರುವುದೆಂದು ನಿರ್ಧರಿಸಲಾಯಿತು ಉಡುಪಿಯಲ್ಲಿ ಹೇಗೂ ಮುನ್ನಳ ಮನೆಯಿತ್ತು.
ಕೊನೆ ಕೊನೆಗೆ ಅವರ ಜೀವ ತೀರ್ಥಹಳ್ಳಿ ಕಡೆ ಎಳೆಯುತ್ತಿತ್ತು. ಅಲ್ಲೇ ಹುಟ್ಟಿ ಬೆಳೆದು, ಕಷ್ಟ ಸುಖ, ದು:ಖ, ಹುಟ್ಟು, ಸಾವು ಸಂತಸ ಕಂಡಂತಹ ಮನೆಗೆ ಹೋಗುವ ಸಹಜ ತವಕ ವ್ಯಕ್ತ ಪಡಿಸುತ್ತಿದ್ದರು.ಉಡುಪಿಯಲ್ಲಿ  ಕೂಡ ಅಕ್ಕ ಪಕ್ಕದವರ ಸ್ನೇಹ ಸಂಪಾದಿಸಿದ್ದರು. ಯಾರಿಗೂ ಯಾವತ್ತೂ ಕೇಡು ಬಯಸಿದವರಲ್ಲ.
ನಾವು ಉಡುಪಿ ತಲುಪಿದಾಗ ರಾತ್ರಿ 11.30. ಹೋಗಿ ಮೊದಲಿಗೆ ಅಕ್ಕನನ್ನು ತಬ್ಬಿಕೊಂಡಿದ್ದು. ರಾತ್ರಿ ಇಡೀ ಸಂಕಟ, ದು:ಖವನ್ನೂ ಮರೆಮಾಚಿಸುವಷ್ಟು ಸೊಳ್ಳೆಗಳ ಕಾಟ. ಅಕ್ಕನೆ ಎದ್ದು ನಮಗೆ ಸೊಳ್ಳೆ ಓಡಿಸುವ ಕಾಯಿಲ್ ತಂದು ಕೊಟ್ಟರು. ಹಾಗೆ ಹೀಗೆ ಹೊರಳಾಡಿ  ಬೆಳಗಾಗುವುದನ್ನೆ ಕಾಯುತ್ತಿದ್ದೆ. ಶೈತ್ಯಾಗಾರದ ಬಾಗಿಲು ತೆರೆಯುವುದೇ 8 ಗಂಟೆಗೆ.
ಯಾರೂ ಅಳಕೂಡದೆಂದು ಭೈಯ್ಯ ನವರು ಹೇಳಿದ್ದರಂತೆ. ಆದರೂ ಕೊನೆಯ ಬಾರಿ ಅವರನ್ನು ಎತ್ತಿಕೊಂಡು ಹೋದಾಗ ತಡೆಯಲಾಗದೆ ಬಿಕ್ಕಳಿಸಿದ್ದೆ. ಅಷ್ಟೆ ಅಲ್ಲ, ಯಾರಿಗೂ ತೊಂದರೆ ಯಾಗಬಾರದೆಂದು ಅಂತ್ಯ ಸಂಸ್ಕಾರಕ್ಕೆಂದು ದುಡ್ಡು ಸಹ ರೆಡಿ ಮಾಡಿ ಬ್ಯಾಂಕ್ ನಲ್ಲಿ ಇಟ್ಟಿದ್ದರು ಎಂದರೆ ನಂಬುತ್ತೀರಾ??
ಈಗ ನಮ್ಮಲಿರುವುದು ಅವರ ನೆನಪು ಮಾತ್ರ.
ಮುನ್ನ ಉರ್ಫ್ ಸುಮತಿ ಹೆಗ್ಡೆ ಅವಳ ತಂದೆ ಬಗ್ಗೆ ಬರೆದಿದ್ದು ಕೆಳಗಿನ ಕೊಂಡಿಯಲ್ಲಿದೆ
http://sumathihegde.blogspot.in/2012/09/blog-post_15.html
:-(
200 ನೇ ಬರಹಕ್ಕೆ ತಲುಪಿದಕ್ಕೆ ಪುನ: ರಘು ಅಪಾರ, ಶ್ರೀಕಾಂತ, thatskannada.com, ವಿಜಯಕರ್ನಾಟಕ ಪತ್ರಿಕೆ, ಶ್ರೀವತ್ಸ ಜೋಶಿ, ಬದರಿನಾಥ ಪಲವಳ್ಳಿ, ಶ್ರೀದೇವಿ ಕಳಸದ್, ಅವಧಿ ಮ್ಯಾಗ್, ಕೆಂಡಸಂಪಿಗೆ, ನಿಲುಮೆ, ಕನ್ನಡ ಬ್ಲಾಗರ್ಸ್ ಲಿಸ್ಟ್, ಸಂಪದ ಹಾಗೂ ನನ್ನೆಲ್ಲ ಓದುಗ ಮಿತ್ರರಿಗೆ ನನ್ನ ಧನ್ಯವಾದ ಸಲ್ಲುತ್ತದೆ.

October 4, 2012

ಹೀರೆಕಾಯಿ ಸಿಪ್ಪೆ ಚಟ್ನಿ/ ridge gourd peel chutney

ನಮ್ಮ ಮನೆಯಲ್ಲಿ ಹೀರೆಕಾಯಿ ಪಲ್ಯ ಮಾಡಿದಾಗಲೆಲ್ಲ ಅದರ ಸಿಪ್ಪೆ ಚಟ್ನಿಯಾಗುತ್ತೆ by default..:-).

ಈ ರುಚಿಕರವಾದ ಚಟ್ನಿ ಮಾಡುವ ಬಗೆ ಹೀಗೆ
ಎರಡು ಹದ ಗಾತ್ರದ ಹೀರೆಕಾಯಿಗಳ ಸಿಪ್ಪೆ. tender ಇದ್ದಷ್ಟು ರುಚಿ ಹೆಚ್ಚು. ಎರಡು ದೊಡ್ಡ ಚಮಚ ತಾಜ ತೆಂಗಿನ ತುರಿ, ಮೂರು ಹಸಿ ಮೆಣಸಿನಕಾಯಿ (ಗ್ಯಾಸ್ಟ್ರಿಕ್ ಪ್ರಾಬ್ಲಮ್ ಅಥವಾ ಎಸಿಡಿಟಿ (acidity) ಇದ್ದವರು ಹಸಿ ಮೆಣಸಿನಕಾಯಿ ಬದಲು ಕಾಳುಮೆಣಸು (pepper) ಬಳಸಬಹುದು), ಜೀರಿಗೆ, ಸ್ವಲ್ಪ ತುಪ್ಪ ಅಥವ ಎಣ್ಣೆ, ಉಪ್ಪು, ಸಣ್ಣ ಚೂರು ಹುಣಸೆಹಣ್ಣು, ಚೂರು ಬೆಲ್ಲ.

ಮೊದಲಿಗೆ ತುಪ್ಪ / ಎಣ್ಣೆಯಲ್ಲಿ ಜೀರಿಗೆ ಸಿಡಿಸಿ, ಅದಕ್ಕೆ ಕತ್ತರಿಸಿದ ಹಸಿಮೆಣಸಿಕಾಯಿ / (ಕಾಳುಮೆಣಸು) ಹಾಕಿ followed by ಹೀರೆಕಾಯಿ ಸಿಪ್ಪೆ ಮತ್ತು ತೆಂಗಿನಕಾಯಿ ತುರಿ. ಕಾಯಿತುರಿ ಸ್ವಲ್ಪವೇ ಬಿಸಿಯಾದರೆ ಸಾಕು. ತಣ್ಣಗಾದ ಮೇಲೆ ಇವೆಲ್ಲವನ್ನು ಹುಣಸೆ ಮತ್ತು ಉಪ್ಪಿನೊಡನೆ ನುಣ್ಣಗೆ ರುಬ್ಬಿ ಕೊನೆಯಲ್ಲಿ ಚೂರು ಬೆಲ್ಲ ಬೆರೆಸಿ...ಚಟ್ನಿ ರೆಡಿ.ಅನ್ನ ಅಥವ ಚಪಾತಿಗೆ ಸಖತ್ combination ಸ್ವಲ್ಪ ಹೆಚ್ಚೆ ಊಟ ಮಾಡಿ ನನ್ನನ್ನು ಬೈಕೋತಾ ಕೂರಬೇಡಿ ಮತ್ತೆ...:-)

ಮಿಕ್ಸಿ ಅಥವಾ ಒರಳು ತೊಳೆದ ನೀರಿಗೆ ಮಜ್ಜಿಗೆ ಬೆರೆಸಿ ಅದಕ್ಕೊಂದು ಸಾಸಿವೆ ಕರಿಬೇವಿನ ಒಗ್ಗರಣೆ ಕೊಟ್ಟು ತಂಬಳಿ ಮಾಡಬಹುದು. ಬಿಸಿ ಅನ್ನದೊಂದಿಗೆ ರುಚಿ.ಹಾ ಹಾ after all konkaniಗಳು...
:-)

September 29, 2012

Story of Heena


painting by Niharika Shenoy

Her big brown eyes comforted me. Even as tears welled up in my eyes, i did not want them to roll over my cheeks, blackening them with the thickly applied kohl in my eyes. It was my first time in a co-ed school/college. I was 15 years old. The college was an extension of school and was called 11 th and 12th standard. we were to adhere to the school uniform code!! my mom was very strict in these aspects of appearance. So there i was standing in front of the whole class of about 45 students. The teacher had earlier asked for the newcomers to the school to stand up. Me and another boy suresh from Tamilnadu were the only new comers. Rest of the students had passed out of the 10th std from the same school. The teacher beckoned to me 'Saridha' ,malayalee teacher Ambiga pronounced my name Saritha thus, come here, to the front of the class. i went. She pointed out to me...'look at her, so neat..hair well oiled and plaited and tied up, neck-tie and sash perfect, black socks and black shoes.... i heard the students stifling their snigger and really wished the earth would swallow  me!! missed my granp pa badly on that day.

From the time i was an year old, i grew up with grandpa. To me he was my whole world. I am an introvert. It was he who introduced me to the wide world of books. From then on my universe consisted of only me and my books. I did not make any friends. Then my Grandmother fell ill and was bed ridden, i was sent back to live with my parents. I was miserable. With grand pa i was the princess,  with servants and a room to myself. in my mothers place i had to share space with my four other siblings. i was not even close to them. And to add to my woes, now this school.

My tear filled eyes suddenly locked into kind brown eyes full of warm reassurance. Her name was Heena and she quickly took me into her fold. She protected me fiercely from the naughty teasing boys when we were together. Heena was a couple of years older to me. Heena's schooling began late because she was a very sick child when she was  young.

I hated the boys in my class and i used to sit with my body averted from them, I had another cause to fear the boys...for my mom had warned me that if she saw me with any boy or heard my name linked with any boy, she  would break my legs and throw me into the sea ....my mom resorted to violence of words. I would  sit very close to Heena, feeling safe and protected in her presence.If ever she was absent for any reason from the school i would panic. She in turn used to regale me with lots of stories. Heena had two elder brothers..grown up and already managing their family's textile business. She used to tell me about the weird customers to their shop.  She was an excellent mimic.

whenever i used to smile , which was a very rare occurrence, she used to compliment me saying...'allah when u smile it is like a rainbow on a cloudy day.. such a beautiful thing i could write poetry'...she used to jot lovely urdu poems in my book, explaining their meaning. She used to constantly touch my eyes and lips and recite poetry..making me wonder at my looks.(Fortunately the word lesbian was not very rampant then.),while at home my mummy specifically told me i was not good looking., unlike my siblings who were extremely good looking and used to get offers to act,do advertisements. There was another reason for me to judge my looks. when i was very young about 8 years old..my fathers elder sister's son 'Jagannath' was teaching me math...and my mom casually mentioned they make a good pair they could get married...my aunt created such a furor ..'what! look at your dark and spindly daughter and look at my son so fair and good looking one has to wash their hand properly to touch him...even in your dreams don't think of alliance between them' and mom retorted...'oh she is not that ugly i can easily marry her off to a loona-langda (physically handicapped)....that scared the day lights out of me) ..gradually i realized that she recited poetry not because of my looks but because of her love for Vindoo, her childhood friend and now her love. I did not know urdu and she painstakingly explained their meaning to me...

Heena's neighbour and friend, Asha, knew of the love between Heena and Vindoo..Asha was a distant relative to Vindoo. She also vied for attention from Vindoo and when Vindoo talked to his mother of his intention to marry Heena,she not only objected to it, but also consumed poison when he was insistent..His mother wanted him to marry Asha.

Heena -with the shine in the eyes dulled, the spring in her footsteps stalled, she had this hunted gazelle look which hurt me so much. Her pain pierced me like a dagger. I knew i could not do anything about it, but remained silent by her side, like a sentinel. She used write heart wrenching gazals and one day in the class she cut her wrist carving a V with a half-blade...i immediately held my thumb to the cut, crying shamelessly and openly. I told her again and again it was not worth it...seeing her pain i had vowed never ever to fall in love. I had opted for science as my subject for the 11th. At the chemistry practicals lab Heena started mixing all the volatile chemicals, in spite of the warning of our science teacher,and she burnt her legs and mine too in the process. My mom learning of her behavior told me  to severe by friendship with her, not to invite her to my house any more. I felt so lost and helpless. We used to spend  most of our evenings together on the beach very near to our house.

Then Vindoo got married to Asha. This time round,Heena cut her wrists  in the night and had to hospitalized and when she came to the class she had white bandages around her wrist. Seeing my woe begone face she used to say..my soul is  dead'..'pls dont worry about me, Saritha'..Then she started having the worst time of her life. Since Vindoo's house was located very near to her own place....if at all in the evening Vindoo came out to stand in his veranda, Asha would scream at him thinking he was standing there for Heena..if he was late from work, Asha inquired whether he was meeting Heena elsewhere outside the house!! Then Asha had a miscarriage and suddenly things took a turn for the worse.they started fighting everyday and Vindoo resorted to Alcohol. 

It was because of Heena that i developed a keen interest in sports and excelled in Sprint, high jump and basket ball. Heena was very tall and very good basketball player, We used to go away to different places to compete and we both always stuck to each other like siamese twins. Once when Heena was absent from school, I was chosen for an State level  basketball tournament which was to be held in Delhi. Thinking Heena would join me i agreed to compete. But she was unwell and i had to leave alone with great reluctance. We got the second place which was a great victory to us.

I was happy with our victory and was bursting to share this good news with Heena. I literally flew to school that day. I saw students looking at me strangely, but it was not always that i was filled with such exuberance  My eyes searched in vain for Heena. I did not find her on the desk we both shared!! Somehow the entire class was silent. The class teacher came to the class and sadly explained that Heena was no more. 'no more' was the last word i heard that day. When i came to (i had fainted in the class) i was at home on the bed. 

When i was away at the games, it is said Vindoo 's mother came and talked to Heena's mother saying Heena was creating a havoc in their household. Even though Heena was not responsible for anything she had to listen to the bitter words of her brothers and parents. She was packed off to a residential college elsewhere. ..i feel so GUILTY.. I could not meet her and she went away with out a bye....

she cut her wrists again and this time there was nobody to save her. Her photograph framed by garland was all that welcomed me when i visited her house for a condolence call. 

I had all the poems/Ghazals written by her but sometime during one of my absence my mother gave all my books to raddi....

Every now and then when i listen to soul stirring Ghazals Heena's memory stands out like an  embossed picture in my mind. I live now with memories of my friend...

September 27, 2012

ಮಲೆ ಮಹದೇಶ್ವರ ಬೆಟ್ಟ/MM Hills

ಕೊಳ್ಳೇಗಾಲ ತಾಲೂಕಿನಿಂದ ಸಾಧಾರಣ 80 ಕಿ ಮಿ ಗುಡ್ಡದ ಹಾದಿ ಏರಿ ಆಮೇಲೆ ಇಳಿಯಬೇಕು. ಕೊಳ್ಳೇಗಾಲದಿಂದ ಮಧುವನಹಳ್ಳಿ, ಸಿಂಗಾನಲ್ಲೂರು (ಇಲ್ಲಿ ನಾವು ಊಟಕ್ಕೆ ನಿಲ್ಲಿಸಿದ್ದು at ಶ್ರೀ ಅನ್ನಪೂರ್ಣ ಭವನ), ಕಾಮಗೆರೆ, ಹನೂರು, ಅಜ್ಜೀಪುರ, ರಾಮಪುರ ,ಕೌದಳ್ಳಿ ಮಾರ್ಗವಾಗಿ ಬೆಟ್ಟಕ್ಕೆ ತೆರಳಬೇಕು. ದೇವಸ್ಥಾನದ ತನಕ ನಮ್ಮ ವೆಹಿಕಲ್ ಹೋಗುತ್ತೆ. ನಾವು ಹೋದ ದಿನ ಅಲ್ಲಿ ಅಮವಾಸ್ಯೆ ಜಾತ್ರೆ. ನನ್ನ ಕಿರಿಯ ಮಿತ್ರ ನಟರಾಜು ಅವರ ಪ್ರಕಾರ ಕನಕಪುರ, ಮಳವಳ್ಳಿ, ಕೊಳ್ಳೇಗಾಲ, ಚಾಮರಾಜನಗರ ದಿಂದ ಈ ದೇವಸ್ಥಾನಕ್ಕೆ ಹೆಚ್ಚು ಭಕ್ತರು  ಭೇಟಿ ನೀಡುತ್ತಾರಂತೆ. ಕನಕಪುರದವರಾದರೂ ಅವರು ಇನ್ನೂ ಮಾದೇಶ್ವರನ ಆಶೀರ್ವಾದ ಪಡೆದಿಲ್ಲವಂತೆ....
ದೇವಸ್ಥಾನಕ್ಕಿಂತ ಬೆಟ್ಟದಿಂದ ಕಾಣುವ ದೃಶ್ಯಗಳೆ ಚೆನ್ನಾಗಿದ್ದವು. ಹಳೆ ದೇವಸ್ಥಾನ ಚೆನ್ನಾಗಿತ್ತೇನೋ ಆದರೆ ನಾವು ನೋಡಿದ ಸಿಮೆಂಟ್/ಕಾಂಕ್ರೀಟ್ ದೇವಾಲಯ ಯಾಕೋ ಇಷ್ಟ ಆಗಲಿಲ್ಲ. ಎಲ್ಲಿ ನೋಡಿದರೂ ಪ್ಲಾಸ್ಟಿಕ್ ಮಯ. ಒಂದು ಸುತ್ತು ಜಾತ್ರೆಗೆ ಪೇರಿಸಿದ್ದ ಅಂಗಡಿ ಸಾಲುಗಳಿಗೆ ಭೆಟ್ಟಿ ನೀಡಿ, ಒಂದು ಸಿಹಿ ಸಿಹಿಯಾದ ಚಹಾ ಕುಡಿದು ಅಲ್ಲಿಂದ ಹೊರಟು ಬಿಟ್ವಿ.
ಇಲ್ಲಿವೆ ಕೆಲವು ಚಿತ್ರಗಳು
ಮೇಲೇರುವ ಮುನ್ನ



 ಜಾತ್ರೆ ಕಣ್ರೀsssssssssss

 ದೇವಸ್ಥಾನ ಎದುರಿನ ದೃಶ್ಯ

 ಹರಕೆಯ ಕೋಲು. ಕೋಲನ್ನು ಹಿಡಿದುಕೊಂಡು ದೇವಸ್ಥಾನ ಸುತ್ತು ಹೋಗಿ ಬರುವುದಂತೆ
ಹರಕೆ ಹೇಳಿ ಬಟ್ಟೆಯ ತುಂಡೊಂದು ಮರಕ್ಕೆ ಕಟ್ಟಿದ್ದು

ಮಾದೇಶ್ವರ ತೇರು...ಅಮವಾಸ್ಯೆ special

ಇನ್ನೆರಡು ತೇರು..ಒಂದರಲ್ಲಿ ದನ ಇನ್ನೊಂದರಲ್ಲಿ ಹುಲಿ...

ಬನ್ನಿ ಜಾತ್ರೆಗೆ ಹೋಗೋಣು....
 sweet-o-sweetooo

 ಸಾರ್ ನಮ್ಮ ಫೋಟೊ ಪೆಪರ್ ನ್ಯಾಗೆ ಹಾಕಿ ನಾವು ತೆರಿಗೆ ಕಟ್ಟೋ ಹಂಗೆ ಮಾಡ್ತೀರಾ?? ಅಂತ ಕೇಳಿದ್ದರು ಈ ಮಹಿಳೆ ಫೋಟೊ ಗೆ ಪೋಸ್ ಕೊಡಿ ಅಂದಾಗ..:-))

ಮಿತ್ರ ವಸುಧೇಂದ್ರರ ಕತೆ ಸ್ಟೀಲ್ ಪಾತ್ರೆಗಳು ನೆನಪಿಗೆ ಬಂತು...

ಕತ್ತೆಗೂ ಜಾತ್ರೆ ಮಜಾ....
 ವಾಪಸ್ ಬರ್ತಾ ದಾರಿಯಲ್ಲಿ

ಮೋಡ??!! ಸೇರಲಿಕ್ಕೆ ಹೊರಟಿಹವ್ಹು ಯಾವ ನಾಡ??





 ಬಿಳುಪಾಯ್ತು, ಕಪ್ಪಾಯ್ತು ಕೆಂಪಾಯ್ತು ಮೋಡ..ಕ್ಷಣಕೊಂದು ರೂಪಾಯ್ತು...ಯಾರ ಕೈವಾಡ?

 ಸೂಪರ್ ಆಗಿದೆ ಅಲ್ಲಾ?? picture postcard ತರಹ

 ನಿಹಾಳ ಕಣ್ಸೆಳೆದ ಹೂವು

 ಇನ್ನೊಂದು

 ನಮ್ಮ ರಾಯರ composition ಅಂದ್ರೆ ಸುಮ್ನೆ ಅಂದುಕೊಂಡ್ರಾ??



ಇದು ನಿಹಾಳ composition...

ಚಲಿಸುವ ಚಿತ್ರಗಳು ಅಂದ್ರೆ ಗಾಡಿ ಓಡ್ತಾ ಇರುವಾಗ ತೆಗೆದದ್ದು, ನಾನು!!:-) ಮುಗಿಲ ಮಾರಿಗೆ ರಾಗ ರತಿಯ ನಂಜ ಏರಿತ್ತ, ಆಗ ಸಂಜೆಯಾಗಿತ್ತss...

 ಇದೂ ನಂದೇ...

 ತಡೀರಿ ತಡೀರಿ..ಇದೂ ಒಂದು ನಂದೇ...

ಈ ಮೂವಿಂಗ್ ಪಿಚ್ಚರ್ ನಿಹಾದು..:-)

ಲಾಸ್ಟು ಬಟ್ ನಾಟ್ ದ ಲೀಸ್ಟೂ... ಮೇಡ್ ಫಾರ್ ಈಚ್ ಅದರ್....ನಿಹಾ clicks.
ಹಾಂ ಅಂದಹಾಗೆ ಹೋಟಲ್ ಅನ್ನಪೂರ್ಣ ಭವನ್ ಅಂದ್ರೆ star ಹೋಟಲ್ ಅಲ್ಲ. ತೆಂಗಿನ ಮಡಲಿನ ತಟ್ಟಿಯಿಂದ ಕಟ್ಟಿದ ಪುಟ್ಟ ಖಾನಾವಳಿ. ಊಟಕ್ಕೆ 30 ರೂ...ಎರಡು ಚಪಾತಿ ಅದಕ್ಕೊಂದು ಪಲ್ಯ, ಅನ್ನ, ಸಾಂಬಾರು, ಸಾರು, ಮೊಸರು ಉಪ್ಪಿನಕಾಯಿ. ಹೊಟ್ಟೆ ತುಂಬ ಊಟ ಮಾಡಿ ಅವರನ್ನು ಬಾಯಿ ತುಂಬ ಹರಸಿ ಬಂದ್ವಿ...ಹೋಟಲ್ ನ ಮಾಲೀಕರು ನೀವು ಮಾತಾಡ್ತಿರೋದು ಕೊಂಕಣಿಯಾ ಅಂತ ಕೇಳಿದ್ರು. ನಮಗೆ ಆಶ್ಚರ್ಯ. ನಿಮಗೆ ಕೊಂಕಣಿ ಗೊತ್ತ ಅಂತ ಕೇಳಿದ್ರು ಶ್ರೀಕಾಂತ, ಅದಕ್ಕೆ ಅವರು 'ಇಲ್ಲ ಇಲ್ಲಿ ಸುತ್ತ ಮುತ್ತ ಕೊಂಕಣಿಯವರು ತುಂಬ ಇದ್ದ್ದಾರೆ ಅಂದಾಗ ನಮಗೆ ಫ್ಲ್ಯಾಶ್ ಆಯ್ತು...ದಾರಿಯಲ್ಲಿ ಸಾಗ್ತಾ ಅಲ್ಲಲ್ಲಿ  ಹಲವಾರು ಕ್ರಿಶ್ಚಿಯನ್ ಸಂಸ್ಥೆಗಳು ಕಾಣಿಸಿತ್ತು..
ಗಗನಚುಕ್ಕಿಯಲ್ಲಿ ಒಂದೆರಡು ಹೋಟಲ್ ಬಿಟ್ರೆ (ಅದರಲ್ಲಿ ಒಂದು ಬಂದ್ ಇತ್ತು) ಊಟಕ್ಕೆ ಅಲ್ಲಿ ಯಾವುದೇ ಹೋಟಲ್ ಎಲ್ಲ ಇಲ್ಲ. ಈ ಪೋಸ್ಟ್ ನೋಡಿ ಅಲ್ಲಿ ಹೋಗುವವರು ಊಟ/ತಿಂಡಿ ಕಟ್ಟಿಕೊಂಡು ಹೋಗಿ. so what are you waiting for ನಾಡಿದ್ದು ಆಕ್ಟೋಬರ್ 2 ಗಾಂಧಿ ಜಯಂತಿ ಪ್ರಯುಕ್ತ ರಜೆ ಇದೆಯಲ್ಲವಾ??
:-) :-)