September 8, 2012

ಗರಮಾ ಗರಂ ಪೆಪ್ಪರ್ ರಸಂ/ Pepper Rasam

ಮಾಲವಿಕ ಮಳೆಯಲ್ಲಿ ನೆಂದು ಅವಳಿಗೆ ಶೀತ- ಗಂಟಲು ಕಟ್ಟಿ, ಅವಳಿಗೋಸ್ಕರ ಟೋಮೇಟೋ ಸೂಪ್ ಮಾಡಿಯಾಯ್ತು. ಇಗೋ ಇಲ್ಲಿದೆ

ಈಗ ಶ್ರೀಕಾಂತ ಹಾಗೂ ನಿಹಾ ಗೂ ಶೀತ ಕೆಮ್ಮು , ಇಬ್ಬರಲ್ಲೂ ಜುಗಲ್ ಬಂದಿ. ನಿಹಾ ಗೆ ಇವತ್ತು ಪೆಪ್ಪರ್ ರಸಂ ತಿನ್ನುವ ಆಸೆಯಾಯಿತು. ಕಾಲೇಜಿಗೆ ಹೇಗೂ ಚಕ್ಕರ್. ಮಾಡಿ ಕೊಟ್ಟು ನಿಮಗೋಸ್ಕರ ಇಲ್ಲಿ ಹಾಕಿದ್ದೇನೆ. ಸೂಪರ್ ಟೇಸ್ಟಿಯಾಗಿದೆ.
ಚಳಿಗಾಲ ಮಳೆಗಾಲ ಅಂದ್ರೆ ನನಗೆ ಒಂದು ತರಹ ಹಿಂಸೆ. ನನಗೆ ಮೊದಲೇ ನಿದ್ದೆ ಕಡಿಮೆ (light sleeper). ಅದರಲ್ಲೂ ನಮ್ಮ ಸ್ಯಾಂಡ್ ವಿಚ್ ಮನೆಯ ದೆಸೆಯಿಂದ ಎಲ್ಲರ ಕೆಮ್ಮು-ದಮ್ಮು ನಮ್ಮ ಮನೆಯೊಳಗೆ ದೊಡ್ಡದಾಗಿ (amplified) ಕೇಳಿಸುತ್ತೆ. ಇನ್ನು ನಮ್ಮ ಮನೆಯಲ್ಲೇ ಕೆಮ್ಮಿನ ಸದ್ದು ಗದ್ದಲ ಅಂದ್ರೆ ನನ್ನ ಪರಿಸ್ಥಿತಿ ಊಹಿಸಿಕೊಳ್ಳಿ. ಫ್ಯಾನ್ ಹಾಕಿದ್ರೆ ಸ್ವಲ್ಪನಾದ್ರೂ ಸದ್ದನ್ನು ಅಡಗಿಸಬಹುದು. ನಮ್ಮ ಮನೆಯ ಫ್ಯಾನಿನ ಸಂಗೀತ ಇಂಪಾಗಿದೆ. ಆದರೆ ಸ್ವಲ್ಪ ಚಳಿ ಗಾಳಿ ವಾತಾವರಣ ಅಂದ ಕೂಡಲೇ ನಮ್ಮ ಮನೆಯಲ್ಲಿ ಯಾರೂ ಫ್ಯಾನ್ ಹಾಕಲ್ಲ..ಸೋ ಕ್ಯಾ ಕರೇಂ

ಮೊನ್ನೆ ರಾತ್ರಿ ನಮ್ಮ ಮೇಲಿನ ಮನೆ ಪುಟ್ಟು ದಿಶಾಂತ್ ನ ತಮ್ಮ ಗಗನ್ ಕೆಮ್ಮಿ ವಾಂತಿ ಎಲ್ಲ ಮಾಡ್ಕೊಂಡ. ಮರುದಿನ ಬೆಳಿಗ್ಗೆ ಅವನ ಶಾಲೆಯ ವ್ಯಾನ್ ಬರುವ ತನಕ ಅವನ ಬಳಿ ಗೇಟ್ ಹತ್ತಿರ ನಿಂತಿದ್ದೆ. 'ಯಾಕೋ ಗಗನ್ ಗೆ ಹುಷರಿಲ್ಲವಾ?' ರಾತ್ರಿ ಕೆಮ್ಮ್ ತಿದ್ದ?..'ಹೂಂ ಆಂಟಿ, ಮಮ್ಮ (ಅವನು ಅಮ್ಮನಿಗೆ ಹಾಗೆ ಕರೆಯುವುದು) ಹಾಗೂ ಅಜ್ಜಿಗೆ ಗೊತ್ತು ಅವನಿಗೆ ಮುಸಂಬಿ ತಿಂದರೆ ಆಗಲ್ಲ ಅಂತ, ನಾನೂ ಹೇಳ್ತಾನೆ ಇದ್ದೆ, ಅವನಿಗೆ ಆಗಲ್ಲ, ತಿನ್ನಿಸಬೇಡಿ, ತಿನ್ನಿಸಬೇಡಿ ಅಂತ, ಆದರೂ ತಿನ್ನಿಸಿದ್ದಾರೆ. ಕೆಮ್ಮು ವಾಂತಿ ಆಗದೆ ಇರುತ್ತ? ಅವನು ಸೊಂಟದ ಮೇಲೆ ಕೈಯಿಟ್ಟು  ಆಕ್ಷನ್ ಮಾಡಿ ಹೇಳಿದ್ದ ರೀತಿ ನೋಡಲು ಎರಡು ಕಣ್ಣು ಸಾಲದಾಯಿತು...love you puttu..:-).
ಸೊ ಇಲ್ಲಿದೆ ನಿಮಗೂ ಪೆಪ್ಪರ್ ರಸಂ. ಒಂದು ಸಲ ಕುಡಿದು ನೋಡಿ, ಶೀತ ಹತ್ತಿರ ಬಂದರೆ ನನ್ನ ಹೆಸರು ಹೇಳಿ..:-) :-)
ಬೇಕಾಗುವ ಪದಾರ್ಥ:
1 ಟೀ ಸ್ಪೂನ್ - ಜೀರಿಗೆ
1 ಟೀ ಸ್ಪೂನ್ - ಕಾಳುಮೆಣಸು
ಬ್ಯಾಡಗಿ ಮೆಣಸು for colour :-) ಯಾಕಂದ್ರೆ ಕಾಳುಮೆಣಸಿನ ಖಾರನೇ ಸಖತ್ ಆಗಿರುತ್ತೆ. ನಮ್ಮ ಕಾಳುಮೆಣಸು ತೀರ್ಥಹಳ್ಳಿಯ ನನ್ನ ಸೊಸೊಯ ತೋಟದಿಂದ.
ಮೂರು ಹದ ಗಾತ್ರದ ಟೋಮೇಟೋ, ತಾಜಾ ಕರಿಬೇವಿನ ಎಲೆ, ತೊಗರಿ ಬೇಳೆ ಕಟ್ಟು(ತೊಗರಿ ಬೇಳೆ ಬೇಯಿಸಿದ ನಂತರ ಸಿಗುವ ಮೇಲೆ ನಿಂತ ನೀರು- ಇದು optional ಅಂದ್ರೆ ಬೇಕಾದರೆ ಮಾತ್ರ)ಹುಣಸೆ ನೀರು, ಒಗ್ಗರಣೆಗೆ ಸ್ವಲ್ಪ ತುಪ್ಪ, ಬೆಳ್ಳುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು

ಟೋಮೇಟೋ ನೀರು ಕರಿಬೇವು ಉಪ್ಪು ಸೇರಿಸಿ ಬೇಯಿಸಿಟ್ಟುಕೊಳ್ಳಿ. ಬೆಂದಮೇಲೆ ಬೀಜ ಮತ್ತು ಸಿಪ್ಪೆ ಬೇರ್ಪಡಿಸಲು ಸೋಸಿಕೊಳ್ಳಿ.

ಸ್ವ್ಲಲ್ಪ ತುಪ್ಪದಲ್ಲಿ ಜೀರಿಗೆ, ಕಾಳುಮೆಣಸು, ಕೆಂಪುಮೆಣಸು ಹುರಿದಿಟ್ಟುಕೊಳ್ಳಿ

ನನ್ನ pestle and mortar...ಕೊಂಕಣಿಯಲ್ಲಿ ಕುಟ್ಟಾಣಿ ಅನ್ನುತ್ತೇವೆ. ಶ್ರೀಕಾಂತ got this for me from Delhi

ಹುರಿದ ಪದಾರ್ಥ ಹೀಗೆ ನುಣ್ಣಗೆ ಪುಡಿಮಾಡಿಟ್ಟುಕೊಳ್ಳಿ...ಆಫಿಸ್ ಗೆ ಹೋಗುವವರು ಮಿಕ್ಸಿನಲ್ಲಿ ಪುಡಿಮಾಡಿಕೊಳ್ಳಬಹುದು. ಈ ಪುಡಿಯನ್ನು ಸೋಸಿಟ್ಟ ಟೋಮೇಟೋ ಮಿಶ್ರಣಕ್ಕೆ ಸೇರಿಸಿ. ಬೇಕಾದಷ್ಟು ನೀರೂ ಬೆರೆಸಿ. ಇನ್ನೂ ಸ್ವಲ್ಪ ಉಪ್ಪು, ಬೇಕಿದ್ದಲ್ಲಿ ಬೆಲ್ಲ ಸೇರಿಸಿ, ಹುಣಸೆ ರಸ ಸೇರಿಸಿ ಚೆನ್ನಾಗಿ ಕುದಿ ಬರೆಸಿ.

ಛೊಂಯ್ ಅಂತ ಬೆಳ್ಳುಳ್ಳಿ ಒಗ್ಗರಣೆ ಕೊಡಿ.ಕೊತ್ತಂಬರಿ ಸೊಪ್ಪು ಉದುರಿಸಿ. ಸೂಪ್ ತರಹ ಕುಡಿಬಹುದು. ಅಥವಾ ಬಿಸಿ ಅನ್ನದ ಜತೆ....ಶ್ರೀಕಾಂತ ಅಂತು ಫುಲ್ ಖುಶ್. ಎಷ್ಟು ಸಲ ಥ್ಯಾಂಕ್ಸ್ ಅಂದ್ರು. ನಿಹಾ 'thank you mommy for being my mommy' ಅಂದ್ಲು. ಮಾಲವಿಕ ಪುಸ್ತಕ ಓದ್ತಾ ಊಟ ಮಾಡಿದ್ದರಿಂದ ಅವಳು ಏನು ಊಟ ಮಾಡಿದ್ಲು ಅಂತ ಅವಳಿಗೆ ಗೊತ್ತಾಗಲಿಲ್ಲ. ನನ್ನದು ಒಂದು ಥ್ಯಾಂಕ್ಸ್ ಇಟ್ಟುಕೋ ಅಂದ್ಲು..:-) :-)

ಈ ಪೋಸ್ಟ್ ಲಂಡನ್ ನಿಂದ, ಹಲವಾರು ತಿಂಗಳಿನಿಂದ ನನ್ನ ಅವರೆಕಾಳಿನ ಪೋಸ್ಟ್ ನ ಜಾಡು ಹಿಡಿದುಕೊಂಡು ಓದುತ್ತಿರುವ ಅನಾಮಿಕ ಓದುಗರಿಗೆ ಮತ್ತು ಬ್ಯಾಚಲರ್ ತಮ್ಮ ವಿಕಾಸ ಹೆಗ್ಡೆಯವರಿಗೆ..

ಹೌದು ಒಂದಾದರೊಂದರ ಮೇಲೆ ಪೋಸ್ಟಿಸುತ್ತಾ ಇದ್ದೀನಿ. ಇನ್ನೊಂದೆರಡು ಪೋಸ್ಟ ಮತ್ತೊಂದು ಲಾಂಗ್ ಬ್ರೇಕ್...love u all guys..
ವಿ.ಸೂ: ನಾನು ಟೋಮೇಟೋ ಬೇಯಿಸಿದ ಮೇಲೆ ಅದನ್ನು ಸೋಸೋದು (strain) ಯಾಕಂದ್ರೆ..ಸ್ಟೋನ್ (kidney stone) ಸಮಸ್ಯೆ ಇದ್ದವರಿಗೆ ಟೋಮೇಟೋ ಬೀಜ ಇಸ್ ನಾಟ್ ಗುಡ್. ನನ್ನ ತಂದೆ, ತಮ್ಮಂದಿರಬ್ಬರಿಗೂ ಹಾಗೂ ಶ್ರೀಕಾಂತ ಗೆ ಈ ಸಮಸ್ಯೆ ಇದೆ..ಹೂಂ ಎಲ್ಲರ ಕಿಡ್ನೀ ಕಲ್ಲು ಕಲೆಕ್ಟ್ ಮಾಡಿದಿದ್ದ್ರೆ ಮನೆ ಕಟ್ಟಿಸಬಹುದಿತ್ತೇನೋ..ಹಿಹಿಹಿ.....ಮನೆ ಕಟ್ಟಿಸುವುದಿದ್ರೆ ಕನಿಷ್ಟ foundation ಗಾದ್ರೂ ಹಾಕಬಹುದು, ಮತ್ತು 'ಇಡೀ ಮನೆ ನನ್ನ ಕಲ್ಲ ಮೇಲೆ ನಿಂತಿದೆ' ಅನ್ನಬಹುದು...
:-)

8 comments:

  1. ಥಾಂಕ್ಯೂ ಅಕ್ಕಾ... ನಾನು ಮಾಡಿ ನೋಡ್ತೀನಿ.

    ReplyDelete
  2. Malathi, we do exactly the same but replace tomato juice with tamarind juice. Will try this tomato combination once :-)

    ReplyDelete
  3. Thank you so.... much. :)

    ಆದ್ರೆ ಬ್ಯಾಚುಲರ್ ತಮ್ಮಂಗೆ ಬರೀ ಸಾರು ಬಡಿಸಿಬಿಟ್ರಲ್ಲ ಪಾಪ :P

    ReplyDelete
  4. Thank you Suguna and Radhika!!Try maaDi...
    Dear Vikas: soup taraha kuDdu biDi..:-)))
    malathi S

    ReplyDelete
  5. Good point about tomato seeds leading to kidney stones.

    Hey Ram

    ReplyDelete
  6. Hi Ram!!
    thanks for posting the link in Sampada.net.more than 60 people had a taste of my pepper rasam :-))
    All solanaceous vegetables are bad for kidney stones (Potato, Tomato, Brinjal to name a few...)
    :-)
    maayee

    ReplyDelete
  7. Luv ur ಕುಟ್ಟಾಣಿ.!! as usual big :) for ur nice narration :)

    ReplyDelete