April 16, 2012

ಟೋಮ್ಯಾಟೋ ಭಾತ remake ಆಗಿ ರವಾ ರೊಟ್ಟಿ

ನಿನ್ನೆ ಮಾಲವಿಕಳಿಗೆ ರಜೆ. ನಾನು  ಟೊಮ್ಯಾಟೊ  ಭಾತ್ ಮಾಡಿದ್ದೆ. ಡಯಟ್ ನಲ್ಲಿ  ಟೊಮ್ಯಾಟೊ  ಅಳವಡಿಸಿದರೆ ದೇಹದ ತೂಕ ಕಡಿಮೆಯಾಗುತ್ತದಂತೆ. ಥ್ಯಾಟ್ಸ್ ಕನ್ನಡ ಡಾಟ್ ಕಾಮ್ ನಲ್ಲಿ ಓದಿದ್ದ ನೆನಪು. tomato ಭಾತ ಜಾಸ್ತಿನೆ ಆಗಿತ್ತು. ಆದರೆ ಮಾಲವಿಕ ಳಿಗೆ ಪಾವ್ ಭಾಜಿ ತಿನ್ನಬೇಕನ್ನಿಸಿದ್ದರಿಂದ ಅದನ್ನೂ ಮಾಡಿದೆ. ಬ್ರೇಕ್ ಫಾಸ್ಟ್ ಡಬಲ್ ಧಮಾಕಾ. ಆದರೆ ಟೊಮ್ಯಾಟೊ ಭಾತ್ ಉಳಿದು ಬಿಡ್ತು. ಅದನ್ನು ಫ್ರಿಜ್ ನಲ್ಲಿ ಹಾಕಿಟ್ಟೆ. ಇವತ್ತು ಉಳಿದಿದ್ದ ಭಾತ್ ಗೆ ಮೊಸರು, ಗೋದಿ ಹಿಟ್ಟು, ಸಣ್ಣಕ್ಕೆ ಕತ್ತರಿಸಿದ ನೀರುಳ್ಳಿ ಬೆರೆಸಿ, ಬಾಳೆ ಎಲೆಯಲ್ಲಿ ತಟ್ಟಿ ರೊಟ್ಟಿ ಮಾಡಿದೆ. ಚೆನ್ನಾಗಿತ್ತು ರುಚಿ ಬಿಸಿ ಬಿಸಿ ರೊಟ್ಟಿ ವಿದ್ ಮನೆಯಲ್ಲೇ ಮಾಡಿದ ತುಪ್ಪ. 





ಬಾಳೆ ಎಲೆ ಅಂದಾಗ ಒಂದು ಪ್ರಸಂಗ ನೆನಪಿಗೆ ಬಂತು.

ನಮ್ಮ ಹಳೆ ಮನೆ ಬಳಿ ಒಬ್ಬ ತರಕಾರಿ ಮಾರುವವ ಬಾಳೆ ಎಲೆ ಕೂಡ ಮಾರುತ್ತಿದ್ದ. ಹೆಚ್ಚಿನದಾಗಿ ತರಕಾರಿಯವರೆಲ್ಲ ಬಾಳೆ ಎಲೆ ಮಾರಲ್ಲ ಅದರಲ್ಲಿ ತುಂಬ wear and tear ಪ್ರಾಬ್ಲಂ ಇದ್ದು ಅದರಲ್ಲಿ ನಷ್ಟ ಹೆಚ್ಚು ಅಂತ ನಮ್ಮ ಮನೆಯ ಬಳಿ ಇರುವ ಉಳಿದ ತರಕಾರಿ ಅಂಗಡಿಯವರು ಬಾಳೆ ಎಲೆ ಮಾರುತ್ತಿರಲಿಲ್ಲ. ಹಾಗಾಗಿ ಈ particular ಅಂಗಡಿಯಲ್ಲಿ ಸಿಕ್ಕುತ್ತಿದ್ದು ನನಗೆ ಖುಶಿಯ ವಿಷಯ. ಮನೆಗೆ ನನಗೆ ಬಾಳೆ ಎಲೆ ಬಳಕೆ ಸ್ವಲ್ಪ ಹೆಚ್ಚು. ನೆಂಟರು ಬಂದಾಗ ಅಥವಾ ಕಡಬು,ಅಕ್ಕಿ ರೊಟ್ಟಿ, ರವೆ ರೊಟ್ಟಿ ತಟ್ಟಲು, ಶ್ಯಾವಿಗೆ, ಸೌತೆಕಾಯಿ ಮುದ್ದೆ ಮಾಡಲು  ಹೀಗೆ...


ಈ ತರಕಾರಿಯವನ ಮುಖದಲ್ಲಿ ನಾನು ಯಾವತ್ತೂ ಒಂದು ನಗು ಕಂಡಿಲ್ಲ. ಶ್ರೀಕಾಂತ ಅವನಿಗೆ ಉಗ್ರಪ್ಪ, ಏನೂ customer relationship ಇಲ್ಲ ಅನ್ನುತ್ತಿದ್ದರೂ ನಾನು ಮಾತ್ರ ’ಏನಕ್ಕೆ ನಗ ಬೇಕು ಆತ, ನಾವು ತರಕಾರಿ ತೆಗೊಳ್ಳೋದು ದುಡ್ಡು ಕೊಡೋದು ಅಷ್ಟೆ ತಾನೆ ಬೇಕಾಗಿರುವುದು’ ಅನ್ನುತ್ತಿದ್ದೆ.

ಬಾಳೆ ಎಲೆಯವ ನನಗೆ 2 ರೂ ಗೆ 4 ಎಲೆಗಳನ್ನು ಕೊಡುವುದು. ಒಂದು ದಿನ ಶ್ರೀಕಾಂತ ಆಫಿಸ್ ನಿಂದ ಮನೆಗೆ ಬರಬೇಕಾದರೆ ಎರಡು ರೂಪಾಯಿಯ ಬಾಳೆ ಎಲೆ ತರಲು ಹೇಳಿದೆ. ಅವರು ಎರಡು ಬಾಳೆ ಎಲೆ ತಂದರು. "ಇದೇನಿದು ನಾಲ್ಕು ಬಾಳೆ ಎಲೆ ಕೊಡಲಿಲ್ಲವಾ ಅವನು" ಅಂತ ಕೇಳಿದೆ. 'ಇಲ್ಲ , ಅವನು ಎರಡು ರೂ ಎರಡೇ ಬಾಳೆ ಎಲೆ ಅಂತ ಹೇಳಿದ" ಅಂತ ಶ್ರೀಕಾಂತ ಹೇಳಿದರು. ಬಹುಶ: ಬೆಲೆ ಜಾಸ್ತಿಯಾಗಿರಬಹುದು ಅಂತಂದುಕೊಂಡೆ.

ಎರಡು ದಿನಗಳ ಬಳಿಕ ಪುನಃ ನನಗೆ ಬಾಳೆ ಎಲೆ ಬೇಕಾಯ್ತು. ನಾನೆ ಹೋದೆ. ಆವತ್ತೂ ಅವನು ನನಗೆ ಎರಡು ರೂ. ಗೆ ನಾಲ್ಕು ಬಾಳೆ ಎಲೆ ಕೊಟ್ಟ. ಅದರ ಮರುದಿನ ನಾನು ಶ್ರೀಕಾಂತ ಅವನ ಬಳಿ ಏನೋ ತರಕಾರಿ ತರಲು ಹೋದೆವು, ಆಗ ನಾನು ಬಾಳೆ ಎಲೆ ರೇಟ್ ಬಗ್ಗೆ ಕೇಳಿದೆ. ಎರಡು ರೂಪಾಯಿಗೆ ನಾಲ್ಕು ಬಾಳೆ ಎಲೆ ಅಂದ...ಆಗ ಶ್ರೀಕಾಂತ ಅದೇನು ಹಾಗೆ, ನನಗೆ ನೀವು ಎರಡು ರೂಪಾಯಿಗೆ ಎರಡು ಬಾಳೆ ಎಲೆ ಕೊಡೋದು?ನನ್ನ ಹೆಂಡತಿಗೆ ಅದೇ ಬೆಲೆಗೆ ನಾಲ್ಕು ಕೊಡುವುದು? ನಾನೆ ಮುಂದಾಗಿ ಇವರು ನನ್ನ ಮನೆಯವರು ಅಂದೆ..ಅದಕ್ಕೆ ಆ ಭೂಪ ಏನೆಂದ ಗೊತ್ತೇ? ನನ್ನ ಅಂಗಡಿ, ನನಗೆ ಬೇಕಾದ ಜನರಿಗೆ, ನನಗೆ ಬೇಕಾದ ಬೆಲೆಗೆ ಮಾರ್ತೀನಿ, ಏನೀಗ ಅಂತ ಅನ್ನುವುದೇ? ಅದಾದ ಮೇಲೆ ನಮಗೆ ಅವನ ಅಂಗಡಿಗೆ ಹೋಗುವ ಪ್ರಮೇಯ ಬರಲಿಲ್ಲ ಯಾಕಂದರೆ ನಾವು ಬೇರೆ ಬಾಡಿಗೆ ಮನೆಗೆ shift ಆದೆವು.:-)

ಈ ಮನೆ ಹತ್ತಿರ ಬಾಳೆ ಎಲೆ ಸಿಗಲ್ಲ. ನಾನು ನವರಂಗ್ ಸರ್ಕಲ್ ಅಥವ ಶಂಕರಮಠ ದೇವಸ್ಥಾನದ ಬಳಿಯಿಂದ ತರಬೇಕು. ಶಂಕರಮಠದ ಪುಟ್ಟ ಹುಡುಗನಿಗೆ ನನಗೆ ಯಾವ ತರಹದ ಬಾಳೆ ಎಲೆ ಬೇಕೆಂದು ಗೊತ್ತು. ನನಗೆ ಬೇಕಾದ ಚಚೌಕ ಆಕಾರದಲ್ಲಿ   ಬಾಳೆ ಎಲೆ ಕತ್ತರಿಸಿ ಕೊಡುತ್ತಾನೆ. 3 ರೂ. ಗೆ ನನಗೆ ಒಂದು ವಾರಕ್ಕೆ ಆಗುವಷ್ಟು ಬಾಳೆ ಎಲೆ ತುಂಡುಗಳು ಸಿಗುತ್ತವೆ. ತುಂಬ tender ಎಲೆಗಳು ಒಂದು ವಾರ ಏನೂ ಆಗದೆ ಉಳಿಯುತ್ತವೆ. ರೊಟ್ಟಿ ತಟ್ಟಿ ಉಳಿದದ್ದನ್ನು ನಾನು ಬ್ರೇಕ್ ಫಾಸ್ಟ್ ಗೆ ಪ್ಲೇಟ್ ಗೆ ಬದಲಿಯಾಗಿ ಉಪಯೋಗಿಸುತ್ತೇನೆ. ತಟ್ಟೆ ತೊಳೆಯುವ ಕೆಲಸ ಉಳಿಯಿತು. ಉಪಯೋಗಿಸಿದ ಎಲೆ ನಮ್ಮ ಮನೆಯ ಹಿಂದೆ ನಾವು ಮಾಡಿಕೊಂಡಿರುವ ಕಾಂಪೋಸ್ಟ್ ಗುಂಡಿಗೆ ಸೇರುತ್ತೆ.

ಅಂದ ಹಾಗೆ ನಮ್ಮೂರಲ್ಲಿ ನೀರಿಲ್ಲದೇ ಬಾಳೆ ಗಿಡಗಳು ಬಳಲಿ ಬೆಂಡಾಗಿದ್ದರೂ ಸುಮಾರು ಬಾಳೆ ಗೊನೆ ನಮಗೆ ಕೊಡುತ್ತಿದೆ. ಅದರಲ್ಲಿ ಒಂದು ಗೊನೆ ಶ್ರೀಕಾಂತ ದೇವಸ್ಥಾನಕ್ಕೆ, ಎರಡು ನಮ್ಮ ತೋಟ ನೋಡಿಕೊಳ್ಳುವ ಕುಟುಂಬಗಳಿಗೆ, ಒಂದು ಅಲ್ಲೇ ಬಳಿಯಲ್ಲಿರುವ ಒಡ್ಡರ ಕಾಲೋನಿ ಜನರಿಗೆ, ಒಂದು ಅವರ ಅಕ್ಕನಿಗೆ, ಒಂದು ನಾನು ತೆಗೆದುಕೊಂಡು ಬಂದಿದ್ದೇನೆ..ಉಳಿದದ್ದನ್ನು ಮಾರುಕಟ್ಟೆಗೆ..
:-)

No comments:

Post a Comment