ನನ್ನ ಪುಟ್ಟನ ಇನ್ನಷ್ಟು ಸಂಭಾಷಣೆಗಳು (ಪುಟ್ಟು ನನ್ನ ಮನೇ ಮಾಲೀಕರ 4 ವರ್ಷದ ಮೊಮ್ಮಗ)
"ಪುಟ್ಟು,ಗಗನ್ ಈಗ ಮಾತಾಡ್ತಾನಾ?" (ಮೊನ್ನೆ ದಿನಾ ಇಡಿ ಗಗನ್, ’ಅಕ್ಕ’ ಅನ್ನುವ ಪದವನ್ನು ಅಕ್ಕ್, ಅಕ್ಕಾ, ಅಕ್ಕಾssss, ಅಕ್ಕಕ್ಕಾ..........ಅಂತೆಲ್ಲ ಹೇಗೆಲ್ಲ ಸಾಧ್ಯ ಹಾಗೆಲ್ಲ ನಾಲಿಗೆ ಮೇಲೆ ಹೊರಳಿಸ್ತಾ ಇದ್ದ)
"ಮಾತಾಡೋದಾ ಆಂಟಿ, ಬೈಗಳನ್ನೆಲ್ಲ ಕಲಿತು, ನನಗೆ ಬೈತಾನೆ ಅವನು" :-))) (ಗಗನ್ ಮೊನ್ನೆ ಒಂದು ವರ್ಷದ ಹುಟ್ಟು ಹಬ್ಬ ಆಚರಿಸಿದ)
ರಜೆ ಶುರು ಆಗುವ ಮುನ್ನ ಶಾಲೆಯಲ್ಲಿ ಸರಸ್ವತಿ ಪೂಜೆ ದಿನ ಹೊಸ ಡ್ರೆಸ್ ಹಾಕ್ಕೊಂಡು ’ಆಂಟಿ, ಚೆನ್ನಾಗಿದೆಯಾ?’ ಅಂತ ಕೇಳಿದ. ಫೋಟೊ ತೆಗೀಲಾ ಪುಟ್ಟ ಅಂದಾಗ ಹೂಂ ಆಂಟಿ ಅಂದ...ನಿಹಾ ಇರಲಿಲ್ಲ...ನಾನೆ ತೆಗೆದದ್ದು :-)
"ಐ ಲವ್ ಯು ಕಣೋ ಪು......"
"ಐ ಲವ್ ಯು ಟೂ ಆಂಟಿ" (ನಾನು ಪೂರ್ತಿ ಒಂದು ವಾಕ್ಯ ಪೊರೈಸುವ ಮೊದಲೆ ಅವನು ಉತ್ತರಿಸಿ ಆಗಿರುತ್ತೆ)
"ಆಂಟಿ, ನೀವು ನನಗೂ ಪುಟ್ಟೂ, ಗಗ್ನಿ (his pet name for his younger brother Gagan) ಗೂ ಪುಟ್ಟು ಅಂತೀರಾ..ನನಗೆ confuse ಆಗತ್ತೆ.".:-)
"ಆಂಟಿ ನೆನ್ನೆ ಪೀಸ್ ಮಾರ್ ಖಾನ್ ಪಿಚ್ಚರ್ ನೋಡೋಕೆ ಹೋಗಿದ್ವಿ"
"ಹೋಯ್ ಪುಟ್ಟಣ್ಣ, ಅದು ಪೀಸ್ ಮಾರ್ ಖಾನ್ ಅಲ್ಲ...ತೀಸ್ ಮಾರ್ ಖಾನ್’
"ಎಂತದ್ದೋ ಒಂದು, ಅಮ್ಮನಿಗೆ ಅಕ್ಷಯ ಕುಮಾರ್ ಇಷ್ಟ ಅಂತೆ ಅದಕ್ಕೆ"
"ಚೆನ್ನಾಗಿತ್ತ" ನಾನು ಕೇಳಿದೆ
"ಅಯ್ಯೋ ಡಬ್ಬ ಪಿಚ್ಚರ್ ಆಂಟಿ" ನನಗೆ ಶಿವರಾಜಕುಮಾರ್ ಪಿಚ್ಚರೇ ಇಷ್ಟ. ಜೋಗಿ ಪಿಚ್ಚರ್ ಮೂರು ಸಲ ನೋಡ್ದೆ.
'ಬೇಡುವೆನು ವರವನ್ನು ಅಂತ ಒಂದು ಹಾಡು ಹೇಳಿ ತೋರಿಸಿದ..( ಆ ಸಿನಿಮಾದ ಹಾಡಾ ನನಗಂತೂ ಗೊತ್ತಿಲ್ಲ.:-)
:-)
" ....ಲೈಟ್ ಹಾಕಿದ್ರೆ disturb ಆಗುತ್ತಲ್ಲವಾ?ಅದಕ್ಕೆ ಹೊರಗೆ ಮಲಗಿ ಓದೋದು."
ReplyDeleteKindle ನಲ್ಲಿ ಓದುತ್ತಿರುವ ಪುಸ್ತಕದ ಭಾಗಕ್ಕಷ್ಟೇ ಬೆಳಕು ಬೀಳುವ ಸವಲತ್ತು ಇದೆ.
Dear Anon!!
ReplyDeleteet tu (brutus)!!!
Not yet...
:-)
ms
LOL! You having good time with you little friend Malathi!
ReplyDelete@ Radhika!!
ReplyDeleteYes dear!!
btw i got this idea of adding our conversation in my blog thanks to Srivathsa Joshi!
thank you
:)
malathi S