January 5, 2012

ವೈಕುಂಠ ಏಕಾದಶಿ ಪ್ರಯುಕ್ತ ಒಂದು recipe


ಬ್ಲಾಗ್ ನ್ನು ವೆಬ್ ಸೈಟ್ ಮಾಡುವ ಅಂದುಕೊಂಡಿದ್ದೆ. ಬಟ್ ಯಾಕೋ ಸಮಾಧಾನ ಅನ್ನಿಸಲಿಲ್ಲ. ಅದಕ್ಕೆ ನಾನೀಗ ಅದನ್ನು ನನ್ನ ತಮ್ಮನ ಕಂಪೆನಿ ವೆಬ್ ಸೈಟ್ ಆಗಿ ಬದಲಾಯಿಸಿದ್ದೇನೆ. ಈ ವೆಬ್ ಸೈಟ್ ಡಿಸೈನ್ ಮಾಡುವುದಿದೆಯಲ್ಲ ಕಂಡಾಪಟ್ಟೆ addictive. ಈಗಾಗಲೇ ನಾಲಕ್ಕೈದು ಪಾತ್ರೆ ಸೀದು ಹೋಗಿದೆ. ಬೆಳಿಗ್ಗೆ ರಾತ್ರಿ ಸಿಸ್ಟಮ್ ಎದುರಿಗೆ ಕೂತು ಕಣ್ಣು ಪರೀಕ್ಷೆ ಮಾಡುವ ಹಂತಕ್ಕೆ ಬಂದಿದೆ. ಪುಸ್ತಕ ಓದದೆ ಎಷ್ಟೊಂದು ದಿನ ಆಯ್ತು. ಒಟ್ಟಿಗೆ ನಾಲ್ಕು ವೆಬ್ ಸೈಟ್ ಡಿಸೈನ್ ಮಾಡ್ತಾ ಇದ್ದೇನೆ.I am enjoying it immensely!! :-) ನನ್ನfavorite ಪಾಸ್ ಟೈಮ್ ಆದ ಪುಸ್ತ್ಕಕದ ಓದನ್ನು ಹಿಂದಿಕ್ಕಿದೆ ಇದು. ಈಗ ಸಂಜೆ ಶ್ರೀಕಾಂತ ನನಗೆ ಕಡ್ಡಾಯವಾಗಿ ವಾಕ್ ಕಳುಹಿಸುತ್ತಿದ್ದಾರೆ.

ಅರೇ ತಿಂಡಿ ಬಗ್ಗೆ ಬರೆಯೋದು ಬಿಟ್ಟು ಇದೇನು ರಾಮಾಯಣ ಅಂದುಕೊಂಡ್ರಾ?? ಅದು ಯಾಕೆಂದರೆ ನನ್ನ ವೆಬ್ ಸೈಟ್ ಗೋಸ್ಕರ ಸುಮಾರು ಮಿತ್ರರು ಶುಭ  ಹಾರೈಸಿದ್ದರು. ಅವರಿಗೆಲ್ಲ :' ನಾನು ಬ್ಲಾಗ್ ನ್ನು ಇಲ್ಲೇ ಮುಂದುವರೆಸುತ್ತಿದ್ದೇನೆ'- ಅಂತ ಹೇಳೊದಿಕ್ಕೆ..

ಸರಿ ಇವತ್ತು ವೈಕುಂಠ ಏಕಾದಶಿ. ನಾವು ನೀರುಳ್ಳಿ ಬೆಳ್ಳುಳ್ಳಿ ಬಳಸಲ್ಲ (ಇದನ್ನೆ ಸುಮಾರು ಪೋಸ್ಟ್ ಗಳಲ್ಲಿ ಬರೆದಿದ್ದೇನೆ). ಮಾಲವಿಕ ’ಅಮ್ಮ, ಇವತ್ತು ರಜೆ (ಕೆಲಸಕ್ಕೆ) ಏನಾದರೂ ಸ್ಪೇಷಲ್ ಮಾಡು ಅಂದಾಗ, ಅದನ್ನೆ ಚಾಲೆಂಜ್ ಆಗಿಟ್ಟುಕೊಂಡು ಈ ರೈಸ್ ಐಟಮ್ ಪ್ರಾಯೋಗಿಕವಾಗಿ ಮಾಡಿದ್ದೇನೆ.

ಬೇಕಾಗುವ ಪದಾರ್ಥ:
ಪರಿಮಳದ ಅಕ್ಕಿ (ನಾನು ಬಾಸುಮತಿ ಅಕ್ಕಿಯನ್ನು ಬೆಳಗಾವಿಯಿಂದ ಹೊತ್ತು ತರುವುದು. ಅಲ್ಲಿನ ಸಂತೆಯಲ್ಲಿ ಲೋಕಲ್ ಬಾಸುಮತಿ ಅಂತ ಸಿಗುತ್ತೆ. 38 ರೂ/ಕೆ.ಜಿ (:-))
ಮಿಶ್ರ ತರಕಾರಿ ಒಂದು ಕಪ್ (ಕ್ಯಾರೆಟ್, ಬಟಾಣಿ (ಈಗ ಹೇಗೂ ಸೀಸನ್) ಕಾಲಿಫ್ಲವರ್, ಬೀನ್ಸ್) ಮೊದಲೆ ಬೇಯಿಸಿಡಿ
5 ಹಸಿಮೆಣಸಿನಕಾಯಿ, ಒಂದು ಇಂಚ್ ಶುಂಠಿ- ನೀರು ಹಾಕದೆ ಮಿಕ್ಸಿಯಲ್ಲಿ ರುಬ್ಬಿ
ಎಣ್ಣೆ ಅಥವಾ ತುಪ್ಪ ಒಂದು ದೊಡ್ಡ ಟೇಬಲ್ ಸ್ಪೂನ್ ಬಿಸಿ ಮಾ,ಡಿ ದಾಲ್ಚಿನಿ ಎಲೆ ಎರಡನ್ನು ಹಾಕಿ, ಅಮೇಲೆ ಒಂದು ಸ್ಪೂನ್ ಜೀರಿಗೆ, ನಾಲಕೈದು ಕರಿಬೇವಿನ ಎಲೆ ಹಾಕಿ. ಇದಕ್ಕೆ ಹಸಿಮೆಣಸಿನಕಾಯಿ-ಶುಂಠಿ ಪೇಸ್ಟ್ ಬೆರೆಸಿ. ಹಸಿ ವಾಸನೆ ಹೋಗುವವರೆಗೆ ಕೈಯಾಡಿಸಿ, ಅರಿಸಿನಪುಡಿ ಬೆರೆಸಿ, ಅರೆ ನಿಮಿಷ ಬಿಟ್ಟು ಬೇಯಿಸಿದ ಅನ್ನ-ತರಕಾರಿ ಮಿಶ್ರಣ ಬೆರೆಸಿ, ಉಪ್ಪು, ಚಿಟಿಕೆ ಸಕ್ಕರೆ ಬೆರೆಸಿ. ಬಡಿಸುವ ಮುಂಚೆ ಸಣ್ಣ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ತಾಜಾ ತೆಂಗಿನ ಕಾಯಿಯ ತುರಿ ಬೆರೆಸಿ. ಲಿಂಬೆ ಹುಳಿ ಬೆರೆಸ ಬಹುದು ಅಥವಾ ಮೊಸರಿನೊಟ್ಟಿಗೆ ತಿನ್ನಬಹುದು.
ಮಾಡಿ ನೋಡಿ. ಇಷ್ಟ ಆಗದಿದ್ದರೆ ನನ್ನ ಹೆಸರನ್ನು ಬದಲಾಯಿಸುತ್ತೇನೆ :-)
ನಮ್ಮ ಮನೆಯಲ್ಲಿ ನಮಗೆ ನಾಲ್ಕು ಜನರಿಗೂ ಇಷ್ಟ ಆಯ್ತು....ಇದರ ಜತೆ ಜಾಮೂನು ಕೂಡ ಮಾಡಿದೆ


photo by my blog fan: Niharika
Few Readers want this recipe in English:
Pre- cook the rice with the vegetables( a mix of Carrot, Cauliflower, Green peas and beans)Add salt while cooking the rice. let it cool.
Grind and prepare paste with 5 green chillies and 1 inch Ginger piece. Heat oil/ghee, add tej patta, jeera, a few curry leaves. Next add the ginger-chiily paste and fry until the raw smell disappears. Add a half a tsp of turmeric, pich of sugar and cooked rice+ Vegetables. Garnish with freshly grated coconut, and coriander leaves. Serve with wedge of Lemon or Curds....
:-)

6 comments:

  1. "ಮಾಡಿ ನೋಡಿ. ಇಷ್ಟ ಆಗದಿದ್ದರೆ ನನ್ನ ಹೆಸರನ್ನು ಬದಲಾಯಿಸುತ್ತೇನೆ :-)"

    ha ha LOL. Thanks for the recipe.

    ಎರಡನೇ ಚಿತ್ರದಲ್ಲಿರದು ಜಾಮೂನಾ? ನಾನು 'ಗೋಳಿಬಜೆ' ಅಂದುಕೊಂಡೆ ! :)

    ReplyDelete
  2. houdu nanagoo haage annistu...but jamoon maaDiddu naane ( nan husband allaa),photo tegediddoo naane,.adakke guarantee adu jamoon chitra...:-)
    thanks V.R H....
    :-)
    ms

    ReplyDelete
  3. hey bath ge olle hesaru idbekithu i think vaikunta bath suits well.again bayalli neeru and my fav jammon well continue writing but i was expecting ur web site

    ReplyDelete
  4. @ Neelesh!
    blog aa ka suit jaayna re devaa website....mhaNuchi...but will provide u the link of my brothers website once it is ready..jaayt vhe??
    :-)
    akka

    ReplyDelete
  5. Malthi Sanje hottalli nimma blog block maduva vidanagalenu??? heege neevu ruchi ruchiyada Ekadashi receipe madi photosahita prakatisi e- sanje odugalannu kaduvudu sariye??
    V

    ReplyDelete
  6. Dearest V!!!
    henceforth i will warn u when i putup a food post....
    :-)
    ms

    ReplyDelete