2 ಗ್ಲಾಸ್ - ಮೈದಾ ಹಿಟ್ಟು
1 ಹಿಡಿ - ಕಡಲೆ ಹಿಟ್ಟು
2 ಟೇಬಲ್ ಸ್ಪೂನ್ - ಸಕ್ಕರೆ
1 ಟೀ. ಸ್ಪೂನ್ - ಅಡಿಗೆ ಸೋಡಾ
2 ಟೇ ಸ್ಪೂ - ಮೊಸರು
2 ಟೀ.ಸ್ಪೂ ಜೀರಿಗೆ, 4 ಹಸಿಮೆಣಸಿನ ಕಾಯಿ, ತುಂಬಾ ಹಣ್ಣಾದ 2 ಬಾಳೆ ಹಣ್ಣು (ಸಿಪ್ಪೆ ಕಪ್ಪಾಗಿದ್ದು), ರುಚಿಗೆ ಉಪ್ಪು ಮತ್ತು deep fry ಮಾಡಲು ಎಣ್ಣೆ.
ಮೊಸರಿಗೆ ಸೋಡಾ ಪುಡಿ, ಸಕ್ಕರೆ, ಉಪ್ಪು ಹಾಕಿಡಿ. ಮಿಕ್ಸಿಯಲ್ಲಿ ಜೀರಿಗೆ, ಹಸಿಮೆಣಸಿನಕಾಯಿ, ಬಾಳೆ ಹಣ್ಣು ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮೊಸರಿಗೆ ಹಾಕಿ. ಎರಡು ನಿಮಿಷ ಅಂದ್ರೆ ಸಕ್ಕರೆ ಕರಗುವ ತನಕ ಕೈಯಾಡಿಸಿ. ಇದಕ್ಕೆ ಮೈದಾ ಹಿಟ್ಟು + ಕಡಲೆ ಹಿಟ್ಟು ಬೆರೆಸಿ , ನೀರನ್ನು ಹಾಕಿ ತುಂಬಾSSSSSS ಮೆತ್ತಗಿನ dough ತಯಾರಿಸಿ. ಒದ್ದೆ ಬಟ್ಟೆಯಿಂದ 4-5 ಗಂಟೆಮುಚ್ಚಿಡಿ. ದೊಡ್ಡ ಲಿಂಬೆ ಹಣ್ಣಿನ ಗಾತ್ರದ ಹಿಟ್ಟಿನ ಉಂಡೆ ಮಾಡಿ,(ಪೂರಿ size ನಲ್ಲಿ )ಸ್ವಲ್ಪ ದಪ್ಪ ದಪ್ಪ ಲಟ್ಟಿಸಿ ಎಣ್ಣೆಯಲ್ಲಿ ಕರಿಯಿರಿ :-) ಇಬ್ಬರಿಗೆ ಸಾಕು.
for ತೊವ್ವೆ
ತೊಗರಿಬೆಳೆ ತೊಳೆದು, 2 ಹಸಿ ಮೆಣಸಿನಕಾಯಿ ಸೀಳಿ ಹಾಕಿ, ಸ್ವಲ್ಪ ಅರಿಶಿನ ಪುಡಿ ಬೆರೆಸಿ ನೀರು ಹಾಕಿ ಬೇಯಿಸಿ.. ಒಗ್ಗರಣೆಗೆ ಸಾಸಿವೆ, ಕರಿಬೇವು, ಹಿಂಗು ಮತ್ತು ಕೆಂಪು ಒಣ ಮೆಣಸು ಹಾಕಿ. ಉಪ್ಪು ಹಾಕಲು ಮರೆಯಬೇಡಿ.
ಈ ತಿನಿಸು ಸಂಜೆಗೆ ಅಥವಾ ರಜೆಯಿದ್ದಾಗ nice. ಬ್ರೇಕ್ ಫಾಸ್ಟ್ ಗೆ ಇದನ್ನು ಮಾಡಿ ತಿಂದು , ಆಫೀಸ್ ನಲ್ಲಿ ನಿದ್ದೆ ಹೋಗಿ ನನ್ನ ಬೈಯಬೇಡಿಯಪ್ಪ.
Double role: ದಪ್ಪಗೆ ಲಟ್ಟಿಸಿ ಚಾಪಾತಿ ಕಾವಲಿಮೇಲೆ ಎಣ್ಣೆ ಹಾಕದೆ ಬೇಯಿಸಬಹುದು. ಇದಕ್ಕೆ ’ವಸ್ತಾದಿ ರೊಟ್ಟಿ” ಅನ್ನುತಾರೆ. ಬೆಣ್ಣೆ ಜತೆ ತಿನ್ನ ಬಹುದು ಅಥವಾ ತೊವ್ವೆ ಜತೆಗೂ!!
:-)
ನಂಗೆ ಬನ್ಸ್ ಅಂದ್ರೆ ತುಂಬಾ ಇಷ್ಟ .. ನಿಮ್ಮೆ recipe ನೋಡಿ ತುಂಬಾ ಖುಶಿಯಾಯಿತು. ಮನೇಲಿ ಇನ್ನು try ಮಾಡ್ಬೇಕು..
ReplyDeleteನನ್ನ ಅತ್ತೆ ಈ ಬನ್ಸ್ ಸ್ಪೆಶಲಿಷ್ಟ್ ಅಕ್ಕ. ತುಂಬ ಚೆನ್ನಾಗಿ ಮಾಡ್ತಾರೆ .ಅವರಿಂದ ಕಲಿತದ್ದರಿಂದ ನಾನು ಮಾಡಿದ್ರೂ ಕೆಲವೊಮ್ಮೆ ಚೆನ್ನಾಗಿ ಆಗಿಬಿಡುತ್ತೆ :)
ReplyDeleteಈಗ ಫೋಟೋ ನಿಮ್ಮ ರೆಸಿಪಿ , ಫೋಟೊ ನೋಡಿ ಬಾಯಲ್ಲಿ ನೀರೂರುತ್ತಿದೆ . ನ
Malathi avare..
ReplyDeleteThere was a hotel near our ex office who was doing this bunns. But with thovve i have try it once. Is this thovve is similar to that we eats with rice? If not can u pl. Mail me thovve for rice on my email id.
God is great for me mam. My new nokia hand set supports kannada.
Nange ondu Sunday sumne ondu 4 hours chennagi nidrisona anta aase ide Madam. Taavu tilisida e thindi maadkondu tindu malagibidtene hagadre. Thanks a lot.
ReplyDeleteಮಾಲತಿ, ನಿಮ್ಮ ಬನ್ಸ್ ನನಗೆ ಮೊದಲಿಗೆ ಅಲರ್ಜಿ ಥರ ಇತ್ತು ಮಂಗಳೂರಿನ ವ್ಯಾಸಂಗದ ಪ್ರಾರಂಭದಲ್ಲಿ...ಆಮೇಲೆ ಏನೋ ಒಂಥರಾ ಚನ್ನಾಗಿದೆ ಅನ್ನಿಸ್ತಿತ್ತು...ಮತ್ತೆ ನಾನು ಪಿ.ಎಚ್.ಡಿ. ಮಾಡುವಾಗ ಮಧ್ಯಾನ್ಹ ಕೆಲವೊಮ್ಮೆ ಲಂಚ್ ಗೆ ಲಂಚ ಕೊಟ್ಟು ಬನ್ ತಿನ್ತಿದ್ದೆ...ಹಹಹ ಒಳ್ಳೆ...ರುಚಿ-ಲಿಸ್ಟ್ ಗೆ...ಸೇರ್ಪಡೆ...
ReplyDeleteನಮಸ್ಕಾರ,
ReplyDeleteನನ್ನ ಪದ್ಯದ ಬ್ಲಾಗ್ ಜೊತೆಗೆ, ನನಗನಿಸಿದ್ದು ಬರೆವ ಹೊಸ ಬ್ಲಾಗ್ ಆರಂಭಿಸಿದ್ದೇನೆ. ಓಮ್ಮೆ ಹೊಸ ಬ್ಲಾಗಿಗೆ ಬನ್ನಿ ಮತ್ತು ನಿಮಗೇನು ಅನಿಸಿತು ಹೇಳಿ..
ನಿಮ ಪ್ರೀತಿ ಹೀಗೆ ಇರಲಿ...
http://badari-notes.blogspot.com/
nanna ishttaddu.. :-))
ReplyDeletemy fav too!
ReplyDelete-- A Ram