November 22, 2010

ಮಂಗಳೂರು special - ಬನ್ಸ್ ಮತ್ತು ತೊವ್ವೆ


2 ಗ್ಲಾಸ್ - ಮೈದಾ ಹಿಟ್ಟು
1 ಹಿಡಿ - ಕಡಲೆ ಹಿಟ್ಟು
2 ಟೇಬಲ್ ಸ್ಪೂನ್ - ಸಕ್ಕರೆ
1 ಟೀ. ಸ್ಪೂನ್ - ಅಡಿಗೆ ಸೋಡಾ
2 ಟೇ ಸ್ಪೂ - ಮೊಸರು
2 ಟೀ.ಸ್ಪೂ ಜೀರಿಗೆ, 4 ಹಸಿಮೆಣಸಿನ ಕಾಯಿ, ತುಂಬಾ ಹಣ್ಣಾದ 2 ಬಾಳೆ ಹಣ್ಣು (ಸಿಪ್ಪೆ ಕಪ್ಪಾಗಿದ್ದು), ರುಚಿಗೆ ಉಪ್ಪು ಮತ್ತು deep fry ಮಾಡಲು ಎಣ್ಣೆ.

ಮೊಸರಿಗೆ ಸೋಡಾ ಪುಡಿ, ಸಕ್ಕರೆ, ಉಪ್ಪು ಹಾಕಿಡಿ. ಮಿಕ್ಸಿಯಲ್ಲಿ ಜೀರಿಗೆ, ಹಸಿಮೆಣಸಿನಕಾಯಿ, ಬಾಳೆ ಹಣ್ಣು ಹಾಕಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮೊಸರಿಗೆ ಹಾಕಿ. ಎರಡು ನಿಮಿಷ ಅಂದ್ರೆ ಸಕ್ಕರೆ ಕರಗುವ ತನಕ ಕೈಯಾಡಿಸಿ. ಇದಕ್ಕೆ ಮೈದಾ ಹಿಟ್ಟು + ಕಡಲೆ ಹಿಟ್ಟು ಬೆರೆಸಿ , ನೀರನ್ನು ಹಾಕಿ ತುಂಬಾSSSSSS ಮೆತ್ತಗಿನ dough ತಯಾರಿಸಿ. ಒದ್ದೆ ಬಟ್ಟೆಯಿಂದ 4-5 ಗಂಟೆಮುಚ್ಚಿಡಿ. ದೊಡ್ಡ ಲಿಂಬೆ ಹಣ್ಣಿನ ಗಾತ್ರದ ಹಿಟ್ಟಿನ ಉಂಡೆ ಮಾಡಿ,(ಪೂರಿ size ನಲ್ಲಿ )ಸ್ವಲ್ಪ ದಪ್ಪ ದಪ್ಪ ಲಟ್ಟಿಸಿ ಎಣ್ಣೆಯಲ್ಲಿ ಕರಿಯಿರಿ :-) ಇಬ್ಬರಿಗೆ ಸಾಕು.

for ತೊವ್ವೆ

ತೊಗರಿಬೆಳೆ ತೊಳೆದು, 2 ಹಸಿ ಮೆಣಸಿನಕಾಯಿ ಸೀಳಿ ಹಾಕಿ, ಸ್ವಲ್ಪ ಅರಿಶಿನ ಪುಡಿ ಬೆರೆಸಿ ನೀರು ಹಾಕಿ ಬೇಯಿಸಿ.. ಒಗ್ಗರಣೆಗೆ ಸಾಸಿವೆ, ಕರಿಬೇವು, ಹಿಂಗು ಮತ್ತು ಕೆಂಪು ಒಣ ಮೆಣಸು ಹಾಕಿ. ಉಪ್ಪು ಹಾಕಲು ಮರೆಯಬೇಡಿ.


ಈ ತಿನಿಸು ಸಂಜೆಗೆ ಅಥವಾ ರಜೆಯಿದ್ದಾಗ nice. ಬ್ರೇಕ್ ಫಾಸ್ಟ್ ಗೆ ಇದನ್ನು ಮಾಡಿ ತಿಂದು , ಆಫೀಸ್ ನಲ್ಲಿ ನಿದ್ದೆ ಹೋಗಿ ನನ್ನ ಬೈಯಬೇಡಿಯಪ್ಪ.

Double role: ದಪ್ಪಗೆ ಲಟ್ಟಿಸಿ ಚಾಪಾತಿ ಕಾವಲಿಮೇಲೆ ಎಣ್ಣೆ ಹಾಕದೆ ಬೇಯಿಸಬಹುದು. ಇದಕ್ಕೆ ’ವಸ್ತಾದಿ ರೊಟ್ಟಿ” ಅನ್ನುತಾರೆ. ಬೆಣ್ಣೆ ಜತೆ ತಿನ್ನ ಬಹುದು ಅಥವಾ ತೊವ್ವೆ ಜತೆಗೂ!!
:-)

8 comments:

  1. ನಂಗೆ ಬನ್ಸ್ ಅಂದ್ರೆ ತುಂಬಾ ಇಷ್ಟ .. ನಿಮ್ಮೆ recipe ನೋಡಿ ತುಂಬಾ ಖುಶಿಯಾಯಿತು. ಮನೇಲಿ ಇನ್ನು try ಮಾಡ್ಬೇಕು..

    ReplyDelete
  2. ನನ್ನ ಅತ್ತೆ ಈ ಬನ್ಸ್ ಸ್ಪೆಶಲಿಷ್ಟ್ ಅಕ್ಕ. ತುಂಬ ಚೆನ್ನಾಗಿ ಮಾಡ್ತಾರೆ .ಅವರಿಂದ ಕಲಿತದ್ದರಿಂದ ನಾನು ಮಾಡಿದ್ರೂ ಕೆಲವೊಮ್ಮೆ ಚೆನ್ನಾಗಿ ಆಗಿಬಿಡುತ್ತೆ :)
    ಈಗ ಫೋಟೋ ನಿಮ್ಮ ರೆಸಿಪಿ , ಫೋಟೊ ನೋಡಿ ಬಾಯಲ್ಲಿ ನೀರೂರುತ್ತಿದೆ . ನ

    ReplyDelete
  3. Malathi avare..
    There was a hotel near our ex office who was doing this bunns. But with thovve i have try it once. Is this thovve is similar to that we eats with rice? If not can u pl. Mail me thovve for rice on my email id.

    God is great for me mam. My new nokia hand set supports kannada.

    ReplyDelete
  4. Nange ondu Sunday sumne ondu 4 hours chennagi nidrisona anta aase ide Madam. Taavu tilisida e thindi maadkondu tindu malagibidtene hagadre. Thanks a lot.

    ReplyDelete
  5. ಮಾಲತಿ, ನಿಮ್ಮ ಬನ್ಸ್ ನನಗೆ ಮೊದಲಿಗೆ ಅಲರ್ಜಿ ಥರ ಇತ್ತು ಮಂಗಳೂರಿನ ವ್ಯಾಸಂಗದ ಪ್ರಾರಂಭದಲ್ಲಿ...ಆಮೇಲೆ ಏನೋ ಒಂಥರಾ ಚನ್ನಾಗಿದೆ ಅನ್ನಿಸ್ತಿತ್ತು...ಮತ್ತೆ ನಾನು ಪಿ.ಎಚ್.ಡಿ. ಮಾಡುವಾಗ ಮಧ್ಯಾನ್ಹ ಕೆಲವೊಮ್ಮೆ ಲಂಚ್ ಗೆ ಲಂಚ ಕೊಟ್ಟು ಬನ್ ತಿನ್ತಿದ್ದೆ...ಹಹಹ ಒಳ್ಳೆ...ರುಚಿ-ಲಿಸ್ಟ್ ಗೆ...ಸೇರ್ಪಡೆ...

    ReplyDelete
  6. ನಮಸ್ಕಾರ,
    ನನ್ನ ಪದ್ಯದ ಬ್ಲಾಗ್ ಜೊತೆಗೆ, ನನಗನಿಸಿದ್ದು ಬರೆವ ಹೊಸ ಬ್ಲಾಗ್ ಆರಂಭಿಸಿದ್ದೇನೆ. ಓಮ್ಮೆ ಹೊಸ ಬ್ಲಾಗಿಗೆ ಬನ್ನಿ ಮತ್ತು ನಿಮಗೇನು ಅನಿಸಿತು ಹೇಳಿ..
    ನಿಮ ಪ್ರೀತಿ ಹೀಗೆ ಇರಲಿ...
    http://badari-notes.blogspot.com/

    ReplyDelete
  7. my fav too!

    -- A Ram

    ReplyDelete