September 15, 2010

Some assorted photos of ತೀರ್ಥಹಳ್ಳಿ -ತೋಟ, ಹಬ್ಬ ಇತ್ಯಾದಿ

ನಾವು ಗೌರಿ ಪೂಜೆಗೆ ಮೂರ್ತಿ ಅಥವಾ ಗೌರಿಯ ಮುಖವಾಡ ಬಳಸಲ್ಲ. ಜುಟ್ಟು ಇರುವ ತೆಂಗಿನಕಾಯಿಗೆ ಕಣ್ಣು ಮೂಗು ಬರೆದು ಅದನ್ನು ಕಲಶದ ಮೇಲೆ ಸ್ಥಾಪಿಸಿ ಪೂಜಿಸುತ್ತೇವೆ. ಗಣಪನನ್ನು ಪ್ರತಿಷ್ಟಾಪಿಸುವ ಮೊದಲು ಗೌರಿಯನ್ನು ಪೀಠದಲ್ಲಿ ಅಲಂಕರಿಸುತ್ತೇವೆ. ಕಲಶದ ಎಡ ಭಾಗದಲ್ಲಿ ಬೂದಿ ಮೆತ್ತಿಕೊಂಡಿರುವ ಮಹಾದೇವ again ತೆಂಗಿನಕಾಯಿಯ ರೂಪದಲ್ಲಿ.
ಪೂಜೆಗೆ ಅಣಿಯಾಗಿರುವ ಹೂ- ಹಣ್ಣು-ಹಂಪಲು
ಮನೆಯ ಒಳಗಿನ ಅಂಗಳ, ಅಂಗಳದಲ್ಲಿ ಪುಟ್ಟ ತುಲಸಿ ಕಟ್ಟೆ

ಗೆಜ್ಜೆವಸ್ತ್ರ ತಯಾರಿಸುವಲ್ಲಿ training ಮಾಲವಿಕಾಗೆ, ನನ್ನ ದೊಡ್ಡ ಭೈಯಾ ನವರಿಂದ. ನಾವು ಗೆಜ್ಜೆವಸ್ತ್ರವನ್ನು ಪೂಜೆಯ ದಿನವೇ ತಯಾರಿಸುವುದು.
ಈಗ  ಸುಶ್ರುತ ಬರೆದ ’ಗೆಜ್ವಸ್ತ್ರ’ ಸುಲಲಿತ ಪ್ರಬಂಧವನ್ನು ಓದಿ. ಎಷ್ಟು ಸೊಗಸಾಗಿ ಬರಿಯುತ್ತಾನೆ ಈ ಹುಡುಗ. ಇಗೋ ಇಲ್ಲಿದೆ ಲಿಂಕ್

ಆರತಿ ತಟ್ಟೆಗಳನ್ನು ಸಿಂಗರಿಸುತ್ತಿರುವ ಮಾಲವಿಕ

ಪಂಚಾಮೃತದ ಬಟ್ಟಲು
ಸೌತೆಕಾಯ್ ಪಚ್ಚಡಿ in the making. ಚೆನ್ನಾಗಿತ್ತು, ಖಾರ-ಲಿಂಬೆ ಹುಳಿ....:-)
ಸುಮ್ಮನೆ ನಂದೂ ಒಂದು ಫೋಟೊ ಇರಲಿ ಅಂತ....ಪೂಜೆ ಮಾಡುತ್ತಿರುವ ನನ್ನ ಕಾಂತ ಶ್ರೀಕಾಂತ :-)
ಅಲಂಕೃತಗೊಂಡ ಗಣಪ. ಗೌರಿಯ ಎಡಬದಿಗೆ ಒಂದು ಗೆಜ್ಜೆವಸ್ತ್ರ ಕಾಣ್ತಾ ಇದೆಯಲ್ಲ್ವಾ?? ಅಲ್ಲಿದ್ದಾನೆ ಮಹಾದೇವ!!
ವಿಸರ್ಜನಾ ಪೂಜೆಗೆ ರೆಡಿ!!! ಮಂಗಳಮೂರ್ತಿ ಮೋರಯಾ..ಪುಡ್ಚಾ ವರ್ಷಿ ಲೌಕರ್ ಯಾ!!!
***********************************************************************************************
ತೋಟದ ಬಳಿ ತೆಗೆದ ಕೆಲವು ಚಿತ್ರಗಳು
ತೀರ್ಥಹಳ್ಳಿಯಲ್ಲಿ ನಾವಿದ್ದ ಮೂರು ದಿನವು ಮಳೆ. ಸಂಜೆ ತೋಟದಲ್ಲಿ...
ಅಂಬಾssssssssssssss
ಅಡಿಕೆ ಹಾಳೆ ಟೊಪ್ಪಿ ಹಾಕದೆ ನಮ್ಮ ಸೀನಣ್ಣ ಹೊರ ಬರುವುದೇ ಇಲ್ಲ.
ಮಳೆಗೆ ಅರಳಿದ ಹೂ - ipomea
Lichen which caught Niharika's fancy
:-)
ಶ್ರೀಕಾಂತ್ ಯಾವುದೋ ಹೆಸರು ಹೇಳಿದ್ರು...ನೆನಪಿಗೆ ಬರುತ್ತಾ ಇಲ್ಲ. :-(
ಯಾವುದೋ ಹಳದಿ ಬಣ್ಣದ ಹೂವಾ
ಪುಟ್ಟ farmer ನಿಹಾರಿಕಾ...ನುಗ್ಗೆ ಬೀಜ ಹಾಕುವ ಮುನ್ನ...:-)
Sheep pen..ನಮ್ಮ ತೋಟದ ಉಸ್ತುವಾರಿ ನೋಡುವ ಕೇದಾರಿ (left side of pic in striped T-Shirt) ಇಲ್ಲಿ ಕುರಿ ಸಾಕ್ತಾನಂತೆ
ರಭಸವಾಗಿ ಹರಿಯುವ ಝರಿಗೆ ಮಣ್ಣು ಕೊಚ್ಚಿಕೊಂಡು ಹೋಗದಿರಲು ಅಡ್ಡ ಹಾಕಿದ sand bag.
ಕೆಳಗೆ ಹರಿದು ಬಂದ ನೀರಲ್ಲಿ ಪುಟ್ಟ ಪುಟ್ಟ ಮೀನು. ಎಂಟು ಮೀನು ನಾನು ತಂದು ಇಲ್ಲಿ ಇಟ್ಟುಕೊಂಡಿದ್ದೇನೆ.
silver ಕಲರ್ ನ ಮೀನು ತೋಟದ ಹಳ್ಳದಿಂದ. ಅವಕ್ಕೂ travel ಮಾಡುವ ಯೋಗ. ತೀರ್ಥಹಳ್ಳಿಯಿಂದ taxiನಲ್ಲಿ ಶಿವಮೊಗ್ಗ ತನಕ, ಆಮೇಲೆ ಟ್ರೈನ್ ನಲ್ಲಿ ಬೆಂಗಳೂರು, ಅಲ್ಲಿಂದ ರಿಕ್ಷದಲ್ಲಿ ಮನೆಗೆ. ಅವಕ್ಕೆ ಬೇಸರ ಬರಬಾರದೆಂದು petbonding ಅಂಗಡಿಯಿಂದ ಎರಡು swordtail fish ನಾನು ತಂದು ಹಾಕಿದ್ದು
ಈ ಪುಟ್ಟ ಮೀನುಗಳ ಆಟ ನೋಡುತ್ತ ಸುಮಾರು ಹೊತ್ತು ಕಳೆಯಬಹುದು. therapeutic. ಈಗಷ್ಟೆ ಡಾಕ್ಟರ್ ಮಿತ್ರರೊಬ್ಬರ ಫೋನ್ ಬಂದಿತ್ತು. ನನ್ನ ಮೀನ್ ಕತೆ ಹೇಳಿದಾಗ ಅವರೇನಂದ್ರು ಗೊತ್ತಾ?? ಮೀನಿನ ಓಡಾಟ ನೋಡ್ತಾ ಇದ್ರೆ ಕಣ್ಣಿನ / ದೃಷ್ಟಿದೋಷ ನಿವಾರಣೆಯಾಗುತ್ತದಂತೆ.
Fish bowl pictures by me ಉಳಿದ ಫೋಟೊಗಳು triggerhappy Niha...
:-)

10 comments:

  1. ಚೆನ್ನಾಗಿದೆ, ನಿಮ್ಮ ತೀರ್ಥಹಳ್ಳಿ.. ಮೊನ್ನೆ ಮೊನ್ನೆ ಸಾಗರ ಹೋಗಿ ಬಂದಿದ್ದೆ.. ಶಿವಮೊಗ್ಗ ತುಂಬಾ ಚೆನ್ನಾಗಿರತ್ತೆ ಇರಲು.. ಅದ್ರೆ ಜಾಸ್ತಿ ದಿನ ಇರುವ ಅವಕಾಶ ಇರರಿಲ್ಲ..

    ReplyDelete
  2. nice ಅಕ್ಕ ... ಮತ್ತೊಮ್ಮೆ ಹಬ್ಬದ ಸಡಗರ ಅನುಭವಿಸಿದೆ.

    ReplyDelete
  3. Those photos are taken with point and shoot camera and some of them are taken with mobile, I am wishing for an DSLR, so that I can give a shape to my skills.

    Thanks for Visiting and supporting Malathi mam.. I keep reading your blog, it gives a feel good factor somehow..

    ReplyDelete
  4. ಉತ್ತಮ ಚಿತ್ರಗಳೊಡನೆ ನಿಮ್ಮ ಮನೆಯ/ಊರಿನ ಹಬ್ಬದ ಸಡಗರವನ್ನು ನಮಗೂ ಉಣಬಡಿಸಿದಿರಿ. ಧನ್ಯವಾದಗಳು.

    ಅನ೦ತ್

    ReplyDelete
  5. ಮಾಲತಿ ಅಕ್ಕ,
    ಚಿತ್ರಗಳು ಚೆನ್ನಾಗಿವೆ. ನಮ್ಮೂರ ಮಳೆಗಾಲವನ್ನು, ಹಬ್ಬವನ್ನು ಒಂದು ತಿಂಗಳು ಅನುಭವಿಸಿ ಬಂದಿದ್ದೇನೆ. ನಿಮ್ಮ ಲೇಖನ ಮತ್ತು ಚಿತ್ರಗಳು ಖುಷಿ ಕೊಟ್ಟವು.

    ReplyDelete
  6. Malathi Akka,
    Nice to know about your celebrations..missing ooru:(

    ReplyDelete
  7. ಓದಿ, ಚಿತ್ರಗಳನ್ನು ನೋಡಿ ತುಂಬಾ ಖುಶಿ ಆಯ್ತು. ಹಳೇ ನೆನಪುಗಳೂ ಸಾಕಷ್ಟು ಬಂದ್ವು. Thanks for sharing. :-)

    ReplyDelete
  8. ಹಬ್ಬದಲ್ಲಿ ನಾವು ಸೇರಿದಂತಿತ್ತು ಚಿತ್ರ ನೋಡುತ್ತಾ ಓದುತ್ತಿದ್ದಂತೆ.
    ಧನ್ಯವಾದಗಳು.

    ReplyDelete
  9. ಈ ಚಿತ್ರಗಳಲ್ಲಿ ಊರಿದ್ದು ನೆನಪು ಜೋರು ಬರುತ್ತೆ :)

    ReplyDelete
  10. Nice pics,
    Nicer titles

    Liked the one below.
    >>> "ಪೂಜೆ ಮಾಡುತ್ತಿರುವ ನನ್ನ ಕಾಂತ ಶ್ರೀಕಾಂತ :-)"

    -- Shree Kar

    ReplyDelete