May 17, 2010

world famous in ಕೋಣನಕುಂಟೆ


ಭಾನುವಾರ , ನನ್ನ ಚಿಕ್ಕಪ್ಪನ ಮೊಮ್ಮಗನ ಉಪನಯನ ಪ್ರಯುಕ್ತ ಕೋಣನಕುಂಟೆಗೆ ಹೋಗಿದ್ದೆ. ಡಿಸೆಂಬರ್ ತಿಂಗಳಲ್ಲಿ ನನ್ನ ಸಣ್ಣದೊಂದು ಬರಹ ವಿಜಯ ಕರ್ನಾಟಕದಲ್ಲಿ ಬಂದಿತ್ತು. ನನ್ನ ಒಬ್ಬ ಸೋದರ ಮಾವನಿಗೆ ಅದರ ನೆನಪಾಗಿ ಅದರ ಬಗ್ಗೆ mention ಮಾಡಿದ್ರು. ಅವರು ಆಗ್ಲೇ ಫೋನ್ ಮಾಡಿದಾಗ cell out of reach ಮೆಸೆಜ್ ಬಂದಿದ್ದು ಹೇಳಿದರು.ಆವಾಗಲೇ ಎಲ್ಲರೂ ಅದು ಓದಿದ್ದರ ಬಗ್ಗೆ ತಿಳಿಯಿತು. ಎಲ್ಲರೂ ಶಹಬ್ಬಾಸಗಿರಿ ಕೊಟಿದ್ದೆ ಕೊಟ್ಟಿದ್ದು. ನನ್ನ ಕನ್ನಡ ಅಷ್ಟೊಂದು ಸುಧಾರಿಸಿದ್ದು ಅವರಿಗೆಲ್ಲ ಆಶ್ಚರ್ಯದ ವಿಷಯ.
ನಮ್ಮ ಕೆಲವು ಕುಟುಂಬ ವರ್ಗದವರಿಗೆ ನಾವು ಏನು ಕೆಲಸ ಮಾಡ್ತಾ ಇದ್ದೇವೆ ಅನ್ನುವುದರ ಬಗ್ಗೆ ಸರಿ ತಿಳಿದಿಲ್ಲ. ಒಂದೊಮ್ಮೆ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಶ್ರೀಕಾಂತ್ ತಮ್ಮ ಹಿರಿ ಅಕ್ಕನಿಗೆ ನಮ್ಮ ಕೆಲಸದ ಬಗ್ಗೆ-NGO ಬಗ್ಗೆ consultancy ಬಗ್ಗೆ ಅರ್ಧ ಗಂಟೆ ತಿಳಿಹೇಳಿದರು. ಅವರು ಆ ಕಡೆ ಹೋದ ಮೇಲೆ ನನಗವರು ಮಾಡಿದ ಪ್ರಶ್ನೆ ’ನೀವು ಮದುವೆ ಎಲ್ಲ ಮಾಡಿಸ್ತೀರಾ?? ಶ್ರೀಕಾಂತ್ ಏನು ಹೇಳಿದ ಅಂತ್ಲೇ ಗೊತ್ತಾಗಲಿಲ್ಲ ಅಂತ...:-) ಅವರಿಗೆ ಗೊತ್ತಿದ್ದು marriage consultancy ಮಾತ್ರ ಯಾಕಂದ್ರೆ ಅವರ ಇಬ್ಬರ ಹೆಣ್ಣು ಮಕ್ಕಳ ಜಾತಕವನ್ನು ಅವರು marriage consultancy bureau ನಲ್ಲಿ ನೋಂದಾಯಿಸಿದ್ದರಿಂದ. :-)
ವಿಜಯ ಕರ್ನಾಟಕದಲ್ಲಿದ್ದ ಸುಧನ್ವಾ ದೇರಾಜೆ ಯವರು -’ಹೊಸ ವರ್ಷಕ್ಕೆ ವಿ.ಕ. ಸಾಪ್ತಾಹಿಕ ಲವಲವಿಕೆಯಿಂದ ಎರಡು ವಿಶೇಷ ಪುಟಗಳು ಬರ್‍ತಿವೆ. ಅದರಲ್ಲಿ "ನಿಮ್ಮ ಕನಸಿನ ಉದ್ಯೋಗ ಯಾವುದು?' ಅಂತ ಒಂದಷ್ಟು ಜನರ ಬಳಿ ಬರೆಸುತ್ತಿದ್ದೇವೆ. ನೀವೂ ಒಂದು ಪುಟ್ಟ ಬರಹ (250 ಪದಗಳ ಮಿತಿಯಲ್ಲಿ) ಬರೆದುಕೊಡುವಿರಾ? ಕಲ್ಪಿತ ಜಾಬ್ ಬಗ್ಗೆ ಬೇಡ. ಈಗ ಇರುವ ಒಂದು ಉದ್ಯೋಗದ ಬಗ್ಗೆ . ಅದು ನಿಮಗೆ ಯಾಕಿಷ್ಟ ಅಂತ’. ಅದು 475 ಪದಗಳಾಯ್ತು. ಅದನ್ನು ಸರಿ ಪಡಿಸುವಷ್ಟು/edit ಮಾಡುವಷ್ಟು ಸಮಯ ನನ್ನಲ್ಲಿರಲಿಲ್ಲ, ಯಾಕೆಂದ್ರೆ ಅದರ ಮರುದಿನ ಮುಂಜಾನೆ ನಾವೆಲ್ಲರೂ ಮಹಾರಾಷ್ಟ್ರಕ್ಕೆ ಹೊರಟಿದ್ದ್ವಿ. ಅವರು ಅದನ್ನು ತುಂಬಾ ಚೆನ್ನಾಗಿ ಎಡಿಟ್ ಮಾಡಿ ಹಾಕಿದ್ರು. ಕೊಲ್ಹಾಪುರ್ ತನಕ ನನಗೆ ಫೋನ್ ಕಾಲ್/ ಎಸ್ ಎಮ್ ಎಸ್ ಮೂಲಕ ಅದು ವಿ.ಕೆ ನಲ್ಲಿ ಬಂದಿದ್ದು ತಿಳಿಯಿತು. ಹಾಗೆ ಶೆಣೈ ಅಂತ ಹಾಕಿದ್ದರಿಂದ, ನಮ್ಮ ಸಂಸ್ಥೆಯ ಬಗ್ಗೆ ಅಲ್ಪ ಸ್ವಲ್ಪ ತಿಳಿದವರು, ಇತರರಿಂದ ನಮ್ಮ ನಂಬರ್ ಪಡೆದುಕೊಂಡು, ಸುಮಾರು ಫೋನ್ ಕರೆಗಳು ಬಂದವು.  ಶ್ರೀಕಾಂತ್ ಕಾಲೇಜ್ ನ ಗುರುಗಳು ಅವರಿಗೆ ಫೋನ್ ಮಾಡಿ ಅಭಿನಂದಿಸಿದಾಗ ತುಂಬ ಖುಶಿ ಪಟ್ಟಿದ್ದೆ. ಆ ಮೇಲೆ ಸೆಲ್ ಫೋನ್ ಸಿಗ್ನಲ್ ಪೂರ್ತಿ ಹೋಗಿಬಿಡ್ತು.
ಸುಮಾರು 15 ದಿನಗಳ ಮೇಲೆ ಮನೆಗೆ ಬಂದ ಮೇಲೆ e-mail ನಲ್ಲಿ ಸುಮಾರು ಮಿತ್ರರು-ಬಂಧುಗಳ ಅಭಿನಂದನಾ ಪತ್ರಗಳಿದ್ದವು ನಮ್ಮ ಕೆಲಸದ ಬಗ್ಗೆ ಖುಶಿ ವ್ಯಕ್ತ ಪಡಿಸಿ.
ಈಗ ನೀವು ಓದಿ. ನಮ್ಮ ವೆಬ್ ಸೈಟ್ ಗೂ ಭೇಟಿ ನೀಡಿ.
ಕೆಲವು ತಿದ್ದುಪಡಿಗಳಿವೆ ಮೇಲಿನ ಬರಹದಲ್ಲಿ
* ಶ್ರೀಕಾಂತ್ RUDSET Institute ನಲ್ಲಿ ನಿರ್ದೇಶಕರಾಗಿದ್ದರು.
* ಮಾಲತಿ ಶೆಣೈ - ಸಮಾಜ ಸೇವಾ ಕಾರ್ಯಕರ್ತೆ ಖಂಡಿತ ಅಲ್ಲ. ನನ್ನದೇನಿದ್ದರೂ back-end / moral support ಮಾತ್ರ.
* ಈಗ ನಮ್ಮೊಂದಿಗೆ 620 ಜನ ಸಹೋದ್ಯೋಗಿಗಳಿದ್ದಾರೆ.
* ಕೋಣನಕುಂಟೆಯಲ್ಲಿ world famous ಶೀರ್ಷಿಕೆ c/o ಮಾಲವಿಕ ಶೆಣೈ
clipping ಮೇಲೆ click ಮಾಡಿದ್ರೆ ಓದಬಹುದು ಅನ್ನಿಸುತ್ತೆ!!!

:-)
ನಮ್ಮ web-site

:-)


10 comments:

  1. ಮಾಲತಿ ಮೇಡಂ,
    ನಿಮ್ಮ ಬರಹ ಓಡಿದೆ. ನಿಮ್ಮ ಮತ್ತು ನಿಮ್ಮವರ ಸಾಮ್ಮಾಜಿಕ ಕಳಕಳಿ ತುಂಬಾ ಇಷ್ಟ ಆಯಿತು. ಕೇವಲ ಬಾಯಿಮಾತಿನಲ್ಲಿ ಹೇಳಿಕೊಳ್ಳದೆ ಅದನ್ನು ಕಾರ್ಯರೂಪಕ್ಕೆ ತರುವುದು ಸಾಧಾರಣ ಸಂಗತಿಯೇನಲ್ಲ.
    ಕೈತುಂಬಾ ಸಂಬಳ ಬರುತ್ತಿದ್ದ ಕೆಲಸವನ್ನು ಬಿಟ್ಟು ಶ್ರೀಕಾಂತ್ ಸರ್ ಮತ್ತವರ ಸ್ನೇಹಿತರು ನೆಮ್ಮದಿಗಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವುದು ನಿಜಕ್ಕೂ ಸಂತೋಷದ ಸಂಗತಿ. ಮಲೆನಾಡಿನ ಮಕ್ಕಳಿಗೆ ಹೆಮ್ಮೆಯ ವಿಷಯ.
    ವಿಷಯವನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  2. ಅಭಿನಂದನೆಗಳು...ಲೇಖನ ಚೆನ್ನಾಗಿದೆ...moral ಸಪೋರ್ಟ್ ಯಾರು ಕೊಡೋಲ್ಲ ಮೇಡಂ.. ಅದು ತುಂಬಾ ಮುಖ್ಯ..ಯಾರ್ ಏನ್ ಬೇಕಾದರು ಮಾಡ್ಕೊಳ್ಳಿ ನಾವ್ ಚೆನ್ನಾಗಿರೋಣ ಎನ್ನುವವರ ಎಣಿಕೆ ಜಾಸ್ತಿ..Hats off to you..
    ನಿಮ್ಮವ,
    ರಾಘು.

    ReplyDelete
  3. ಕಾರು, ದುಡ್ಡು, ಬಂಗಲೆಗೆ ಆಸೆ ಪಡದೆ ನೆಮ್ಮದಿಗಾಗಿ ಸಮಾಜ ಸೇವೆಯಲ್ಲಿ ನೀವೆಲ್ಲಾ ತೊಡಗಿಸಿಕೊಂಡಿರುವುದು ನಿಜಕ್ಕೂ ಸಂತೋಷದ ಸಂಗತಿ.... ಅಭಿನಂದನೆಗಳು...
    NGO ಬಗ್ಗೆ ಒಳ್ಳೆ ಮಾಹಿತಿ...
    ನಿಮಗೆ ಶುಭವಾಗಲಿ..

    ReplyDelete
  4. ಅಭಿನಂದನೆಗಳು ಮಾಲತಿ ಅಕ್ಕ..:)

    ReplyDelete
  5. thnx for info congrats... and all the best

    ReplyDelete
  6. ತಮ್ಮ ಮನೆಯವರ ಸಾಮಾಜಿಕ ಕಳಕಳಿ ಪ್ರಶ೦ಶನೀಯ. ಹೇಳಿದಷ್ಟು ಸುಲಭವಲ್ಲ ಅದನ್ನು ಮಾಡಿ ತೋರಿಸುವದು. ತಮ್ಮ ಮನೆಯವರು ಮತ್ತು ಅವರ ಮಿತ್ರರೂ ಜೊತೆಗೆ ತಮ್ಮೆಲ್ಲರ ಹಿ೦ಬೆಬಲ ಇದಾನು ಸಾಧ್ಯವಾಗಿಸಿದ್ದು ಕೇಳಿ ಖುಷಿಯಾಯಿತು. ತಮ್ಮ ತ೦ಡದವರಿಗೆಲ್ಲಾ ನಮ್ಮ ಅಭಿನ೦ದನೆಗಳು ಮತ್ತು ನಮ್ಮಿ೦ದೇನಾದರೂ ಇಲ್ಲಿ೦ದ ಮಾಡಲಿಕ್ಕಾಗುವದಿದ್ದರೆ ತಿಳಿಸಿ ನಾವು ಜೊತೆಗೂಡುವೆವು.

    ReplyDelete
  7. :-)
    ನಿಮ್ಮ ಪ್ರೋತ್ಸಾಹಕರ ನುಡಿಗಳಿಂದ ನಮ್ಮನ್ನು ಇನ್ನಷ್ಟು ಜನಪರ ಚಟುವಟಿಕೆಗಳಲ್ಲಿ ಹುಮ್ಮಸ್ಸಿನಿಂದ ತೊಡಗಿಸಿಕೊಳ್ಳುವಂತಾಗಿದೆ. ನಿಮಗೆಲ್ಲರಿಗೂ ನನ್ನ ಹಾಗೂ ಶ್ರೀಕಾಂತ್ ಪರವಾಗಿ ಧನ್ಯವಾದಗಳು
    ಮಾಲತಿ ಎಸ್.

    ReplyDelete
  8. ಮಾಲತಿ ಅವರೇ,

    ಐ.ಡಿ.ಎಫ್ ಸಂಸ್ಥೆಯ ಬಗ್ಗೆ ಹಾಗೂ ಅದಕ್ಕೆ ಪ್ರೇರಿತವಾದ ರುಡ್ಸೆಟ್ ಸಂಸ್ಥೆಯ ಬಗ್ಗೆ ವಿವರಗಳು ಆದರ್ಶಪ್ರಾಯವಾಗಿವೆ.

    ಇಂದು ಎಲ್ಲಿ ದುಡ್ಡು ಮಾಡೋಣ, ಯಾವುದು ದುಡ್ಡನ್ನೂ, ಸನ್ಮಾನವನ್ನೂ, ಹೆಸರನ್ನೂ ತರುತ್ತದೋ ಅಂತಹ ಕೆಲಸಗಳ ಮೇಲೇ ಮುಗಿಬೀಳುವ ಜನಸ್ತೋಮದ ನಡುವೆ, ಸೇವಾ ಮನೋಭಾವನೆಯನ್ನು ಹೊತ್ತ ನಿಮ್ಮ ಕುಟುಂಬದ ಮನೋಭಾವ ಅನುಸರಿಸಲೇ ಬೇಕಾದ ನಡೆ.

    ಅಂತೆಯೇ, ಒಂದು ನಿರಂತರ ಆದಾಯ ತರುವ ರಿಸ್ಕ್ ಲೆಸ್ ಜಾಬ್ನಲ್ಲಿದ್ದ ಶ್ರೀಕಾಂತ್ ಅವರು ಇಂತಹ ದಿಟ್ಟ ನಿರ್ಧಾರ ತೆಗೆದುಕೊಂಡಾಗ ನಡು ಮನೆ ಮಾಮೂಲಿ ಗೃಹಣಿಯಂತೆ ಯೋಚಿಸದೇ ಅವರನ್ನು ಪ್ರೋತ್ಸಾಹಿಸಿದ ಮತ್ತು ಈಗಲೂ ಬೆನ್ನೆಲುಬಾಗಿ ನಿಂತ ನಿಮ್ಮ ಸಹೃದಯಕ್ಕೂ ಗೌರವವಿದೆ.

    ಗ್ರಾಮೀಣ ಬದುಕು ಹೇಗಿರುತ್ತದೆ ಎನ್ನುವುದು ನನ್ನಂತಹ ಹಳ್ಳಿಗಾಡಿನವನಿಗೇ ಗೊತ್ತು. ರಸ್ತೆ, ಆಸ್ಪತ್ರೆ, ಕರೆಂಟು, ಹೈಸ್ಕೂಲು, ಕಾಲೇಜು ಕನಸಿನ ಮಾತುಗಳಾದರೆ; ಕೈಕೊಡುವ ಮಳೆ, ಅರ್ಥವೇ ಆಗದ ಬ್ಯಾಂಕಿಗ್ ವ್ಯವಸ್ಥೆ, ಊರೆಲ್ಲ ಸಾಲ ಇವೇ ನಮ್ಮ ಜನ್ಮೇಪಿ ಸಮಸ್ಯೆಗಳು. ಇಂತಹ ನೋವಿನ ನಡುವೆ ಬೆಳಕು ಚೆಲ್ಲುವ ನಿಮ್ಮಂತಹ ಸಂಸ್ಥೆಗಳ ಪ್ರಯತ್ನ ಪ್ರಶಂಸನೀಯ.

    ನೀವು ನಿಜವಾಗಲೂ ಸಮಾಜ ಸೇವಾಕರ್ತೆ, ಅದನ್ನು ಒಪ್ಪಿಕೊಳ್ಳಿ.

    ೬೨೦ ಜನಕ್ಕೆ ಕೆಲಸಕೊಟ್ಟು, ಅಷ್ಟೇ ಕುಟುಂಬಗಳಿಗೆ ಅನ್ನದ ದಾರಿ ತೋರಿಸುವುದು ಸುಲಭದ ಮಾತಲ್ಲ.

    ನಿಮಗೂ, ಶ್ರೀಕಾಂತ್ ಅವರಿಗೂ, ಮಕ್ಕಳಿಗೂ ಸದಾ ನೆಮ್ಮದಿ, ಆರ್ಥಿಕ ಸದೃಡತೆ, ಪ್ರೋತ್ಸಾಹ, ಹೆಸರೂ, ಆರೋಗ್ಯ, ಸನ್ಮಾನಗಳೂ ಸಲ್ಲುತಿರಲಿ.

    ಒಂದು ದೊಡ್ಡ ವಿನಂತಿ, ನನ್ನದು ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ತಾಲ್ಲೂಕು, ನಗರಗೆರೆ ಹೋಬಳಿ, ವಾಟದಹೊಸಹಳ್ಳಿ ಅಂತ ಪುಟ್ಟ ಹಳ್ಳಿ. ಬಸ್ ಸೌಕರ್ಯವಿದೆ, ಹೈಸ್ಕೂಲಿನವರೆಗೂ ಶಾಲೆಯಿದೆ. ನಮ್ಮ ಹಳ್ಳಿ ನೆಚ್ಚಿಕೊಂಡು ಸುತ್ತಮುತ್ತಲ ತುಂಬಾ ಇನ್ನೂ ಪುಟ್ಟ ಹಳ್ಳಿಗಳಿವೆ. ಒಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆ ಇದೆ. ದಯಮಾಡಿ ನಮ್ಮ ಹಳ್ಳಿಗೂ ನಿಮ್ಮ ಸೇವೆ ವಿಸ್ತರಿಸಿದರೇ, ಆ ಮೂಲಕ ಗಡಿ ಗ್ರಾಮಕ್ಕೂ ಒಂದು ದಿಕ್ಕಾಗುವುದು.

    "ಎಂದರೋ ಮಹಾನುಭಾವುಲು ಅಂದರಿಕೀ ವಂದನಮುಲು"

    ReplyDelete
  9. ಮಾಲತಿ-ಶ್ರೀಕಾಂತ್ ನಿಮ್ಮ ಸಂಸ್ಥೆಯ ಕೆಲಸ ಕಾರ್ಯಗಳು ಬಹಳ ಗುರುತರವಾದವು...ನಿಮ್ಮ ಎಲ್ಲ ಪ್ರಯತ್ನಗಳೂ ಫಲಕಾರಿಯಾಗಲಿ. ನನಗೆ ನನ್ನ ಒಬ್ಬ ಆರ್ಕುಟ್ ಸ್ನೇಹಿತೆ ..ಪರಿಸರ..ವನೀಕರಣದ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವ ತಮ್ಮ ಕಾರ್ಯಕ್ರಮಗಳ ಬಗ್ಗೆ ಹೇಳಿದಾಗ ನಿಮ್ಮ ಸಂಸ್ಥೆಯ ನೆನಪಾಯಿತು..ನಿಮ್ಮ ಬಗ್ಗೆ ತಿಳಿಸಿದೆ...ಬಹುಶಃ ನಿಮ್ಮನ್ನು ಸಂಪರ್ಕಿಸಬಹುದು...ನಿಮ್ಮ ಕೆಲಸಗಳು ಪೂರಕವಾದರೆ ಅವುಗಳ ಪ್ರಭಾವ ಬಹಳ ತೀವ್ರವಿರುತ್ತದೆಂದು ನನ್ನ ಅನಿಸಿಕೆ...

    ReplyDelete
  10. Dr Azad!!
    Sure she is welcome to contact our office anytime. Kindly provide her our web link
    :-)
    malathi S

    ReplyDelete