May 11, 2010

ಸಂಭ್ರಮದ -ಛಂದ book release event

ರವಿವಾರ (09.05.2010) ಛಂದ ಪ್ರಕಾಶನದ 4 ಪುಸ್ತಕ ಬಿಡುಗಡೆ ಕಾರ್ಯಕ್ರಮ, J.C. Road ನ A.D.A. ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ನಾವು ಸ-ಕುಟುಂಬ, ಸ-ಪರಿವಾರ ಹೋಗಲು ಕಾರಣ ಮೂರು
1. ಬೊಳುವಾರ ಮಾಮ ಶ್ರೀಕಾಂತ್ ರ freind and ex-colleague (Bank)
2. ನಮ್ಮೂರಿನ ಮುದ್ದು ಹುಡುಗಿ - ’ಮುದ್ದು’ ತೀರ್ಥಹಳ್ಳಿ.
3. ನನ್ನ ಕೆಲವು ಬ್ಲಾಗ್ ಮಿತ್ರರ ಭೇಟಿ (ದಿವ್ಯ ಮಲ್ಲ್ಯ, ಸುಶ್ರುತ ದೊಡ್ಡೇರಿ, ಸಾವಿತ್ರಿ, ಸಂದೀಪ್ ಕಾಮತ್)

ಕಾರ್ಯಕ್ರಮ 10.30 ಗೆ ಶುರು, ಆದ್ರೆ, ನಾವು ಮನೆಯಿಂದ ಹೊರಡುವಾಗ್ಲೇ 10.30. ಬೆಳಿಗ್ಗೆ ಮಾಲವಿಕಳ classmates ಎಲ್ಲ ಸೇರಿ ನನಗೆ mothers day wish ಮಾಡಿದ್ರು. ಆಗಲೇ ಲೇಟ್ ಆಗಿದ್ದು. ನಾವು ತಲುಪಿದ್ದು 11.45ಗೆ.
ಶ್ರೀಕಾಂತ ಹಾಗೂ ನಿಹಾರಿಕಾ shoot ಮಾಡಿದ ಕೆಲವು ಚಿತ್ರಗಳು ...

ಶ್ರೀ ರಾಧೇಶ ತೋಲ್ಪಾಡಿ. ಶ್ರೀ ರಾಘವೇಂದ್ರ ಪಾಟೀಲ್, ಬೋಳುವಾರ್ ಮಹಮ್ಮದ್, ವಿತಾಶಾ ರಿಯಾ popularly known as ಮುದ್ದು ತೀರ್ಥಹಳ್ಳಿ. ಹಿಂಭಾಗದಲ್ಲಿ ಕಾಣುತ್ತಿರುವ banner ಸಹ ಎಷ್ಟು catchy ಆಗಿದೆ.


ವೇದಿಕೆಯನ್ನು ಮನೋಹರವಾಗಿ ಸಜ್ಜುಗೊಳಿಸಿದ್ದು ರಾಘವೇಂದ್ರ ಹೆಗ್ಡೆ, ಸುಶ್ರುತ ದೊಡ್ಡೇರಿ ಹಾಗೂ ಶ್ರೀನಿಧಿ ಡಿ. ಎಸ್. ಒಳ್ಳೆ ಮಕ್ಕಳ ದಿನಾಚರಣೆ mood ಇದ್ದ ಹಾಗಿತ್ತು.

ಇತ್ತೀಚೆಗೆ ವಸುಧೇಂದ್ರ ಅವರಿಗೆ ತುಂಬಾsssssssss ಬರೀ ಬೇಕು ಅಂತ ಅನ್ನಿಸ್ತಿದೆಯಂತೆ. ನಾವೂ ತುಂಬಾssssಕಾತರದಿಂದ ಕಾದು, ಪುಸ್ತಕ ಕೊಂಡು ಓದುತ್ತೇವೆ. promise!!! :-)


ಚಂದ್ರಾ ಗುರುದತ್ ಅವರ ಕೈ ಚಳಕ- ಪುರಸ್ಕೃತ ಮುಖಪುಟ ರಂಗೋಲಿಯಲ್ಲಿ ಅರಳಿದೆ (right)
prize winning coverpage designed by Shri Vinaykumar Saya (left)

'ಹುಲಿರಾಯ' ಪುಸ್ತಕ ಬರೆದ ಕೀರ್ತಿರಾಜ್-10 ನೆ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಅವನ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರುವುದು.



ಛಂದ ಸಡಗರದ ನಡುವೆ ನಮ್ಮದೂ ಫೊಟೊ ತೆಗೆಸಿಕೊಳ್ಳುವ ಸಂಭ್ರಮ. L to R: Divya mallya, Niharika, Malavika, Savithri, malathi, Sandeep Kamath
ಮುದ್ದು ಪುಟ್ಟಿ ಆಟ ಪುಟ್ಟ umbrella ಮತ್ತು balloon jate. ಬೊಳುವಾರ ಮಾಮ ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆ ಮೇಲಿರುವ ಪುಟ್ಟ ಛತ್ರಿ/ಕೊಡೆ ಯನ್ನು ಸಭೆಯಲ್ಲಿದ್ದ ಪುಟ್ಟ ಮಕ್ಕಳಿಗೆ ಕರೆದು ಕೊಡುತ್ತಿರುವ ನೋಟ ಚೆನ್ನಾಗಿತ್ತು.
ಕಾರ್ಯಕ್ರಮ ನಿರೂಪಣೆ  ಮಾಡಿದವರು ಸುಧನ್ವಾ ದೇರಾಜೆ!!!! ನನಗಂತು ಇಷ್ಟವಾಯ್ತು. :-)
ಕಾರ್ಯಕ್ರಮದ ವರದಿ ವಿಜಯ ಕರ್ನಾಟಕದಲ್ಲಿ ಬಂದಿದೆ. ಅದನ್ನು ಅವಧಿಯಲ್ಲೂ ಹಾಕಿದ್ದಾರೆ.ವಿ.ಕೆ ಯವರು ರಾಧೇಶ ತೋಲ್ಪಾಡಿ ಯವರನ್ನು ರಾಜೇಶ ತೋಲ್ಪಾಡಿ ಮಾಡಿದ್ದಾರೆ :-)
but ಗ್ರೇಟ್ news ಏನು ಗೊತ್ತಾ ನನಗೀಗ  ’ನಮ್ಮಮ್ಮ ಅಂದ್ರೆ ನಂಗಿಷ್ಟ’ ಪುಸ್ತಕದ ಮೂರು ಪ್ರತಿಗಳು ಗಿಫ್ಟ್ ಆಗಿ ಸಿಕ್ಕಿದ್ದು (mothers day special edition with CDs and greeting cards.) ಪುಸ್ತಿಕೆಯ ಒಟ್ಟಿಗೆ ಬುಕ್ ಮಾರ್ಕ್ ಆಗಿ ಮುದ್ದಾದ - ಅರಳಿಮರದ/ ಅಶ್ವತ್ಥ ವೃಕ್ಷದ ಎಲೆ ಕೊಟ್ಟಿದ್ದಾರೆ.


:-) Happy Mothers Day to all (thanks to internet connectivity problems..ಎರಡು ದಿನ ಲೇಟ್ ಅಷ್ಟೆ. :-)

12 comments:

  1. dry peepul (dont know its name in kannada)ಅನ್ನುವ ಬದಲು ಅದಕ್ಕೆ ಕನ್ನಡದಲ್ಲಿ ಏನಂತಾರೆ ಅಂತ ತಿಳ್ಕೊಳ್ಳೋ ಪ್ರಯತ್ನ ಮಾಡಬಹುದಿತ್ತಲ್ವಾ?

    peepul=ಅಶ್ವತ್ಥ ಮರ

    -ಪ್ರವೀಣ,ಬೆಂಗಳೂರು

    ReplyDelete
  2. ನಿಮಗೆ ಧನ್ಯವಾದಗಳು ಪ್ರವೀಣ.
    ತಿದ್ದಿ ಬರೆದಿದ್ದೇನೆ.
    :-)
    ಮಾಲತಿ ಎಸ್.

    ReplyDelete
  3. ತಲೆಗೆ ಹುಳ ಬಿಡುವುದು ಅಂದ್ರೆ ಏನಿರಬಹುದು ಏನಿರಬಹುದು ಎಂಬ ಕುತೂಹಲ ಹುಟ್ಟು ಹಾಕೋದು.ಗೊಂದಲ ಹುಟ್ಟು ಹಾಕೋದು.ಯಾವುದೋ ವಿಷಯದ ಬಗ್ಗೆ ಹೊಸ ಆಯಾಮವನ್ನ ನಮ್ಮೆದುರು ಇಟ್ಟು ಚಕಿತ ಗೊಳಿಸುವುದು.ಸಂದರ್ಭಕ್ಕೆ ತಕ್ಕಂತೆ ಅದರ ಅರ್ಥ ಕೂಡ ಬದಲಾಗುತ್ತೆ.
    ( ಇಷ್ಟು ನಾನು ಅರ್ಥ ಮಾಡಿಕೊಂಡದ್ದು :) ನಾನೇ ಸರಿಯಲ್ಲ.ನಿಮಗೆ ಏನಾದರೂ ಬೇರೆ ಮೂಲದಿಂದ ಸರಿಯಾದ ಅರ್ಥ ಸಿಕ್ಕರೆ ದಯವಿಟ್ಟು ನನಗೂ ತಿಳಿಸಿ :):) )

    ಅಂದಹಾಗೆ ನನಗೆ ನೀವು ಗೊತ್ತು.ನೀವು ಹಾಗು ನಿಮ್ಮ ಮನೆಯವರನ್ನ ಸಮಾರಂಭದಲ್ಲಿ ಗುರುತಿಸಿದ್ದೆ .( ನೀವು ರಾಮಚಂದ್ರಪುರ ಮಠದ ಗೋಶಾಲೆಗೆ ಹೋದಾಗಿನ ಫೋಟೋ ಹಾಕಿದ್ದಿರಲ್ಲ.ಆಗ ನಿಮ್ಮನ್ನ ನೋಡಿದ್ದ್ದೆ)

    ReplyDelete
  4. ಚೆಂದದ ಸಂಭ್ರಮ...
    ಒಳ್ಳೆ ಫೋಟೊಗಳು....

    ReplyDelete
  5. vasudendra avara baravaNige nange tumba ista avara ella pustaka odiddene..... mattastu avara pustakagaLu barli oduva aase ide namage

    ReplyDelete
  6. ಇನ್ನೂ ಸುಲಭವಾಗಿ
    peepul=ಅರಳಿ ಮರ
    ಇದು ಸರಿಯಾದ, ಎಲ್ಲರೂ ಮಾತಾಡುವ ಕನ್ನಡ ಪದ.

    -ಪ್ರವೀಣ,ಬೆಂಗಳೂರು

    ReplyDelete
  7. ನಾನು, ನೀವು ಬ್ಲಾಗಿನಲ್ಲಿ ಕಾಮೆಂಟ್ ಹಾಕುವುದನ್ನು ನೋಡಿದ್ದೆ.ನಿಮ್ಮ ಬ್ಲಾಗನ್ನು ಓದಿದ್ದೆ ಕೂಡ.

    ಆದರೆ ನಿಮ್ಮನ್ನು ನೋಡಿರಲಿಲ್ಲ. ಮೊನ್ನೆ ಕಾರ್ಯಕ್ರಮದಲ್ಲಿ ನಿಮ್ಮನ್ನು ನೋಡಿದ್ದೆ. ನೀವು ನನ್ನ ಮುಂದೆನೇ ಕುಳಿತಿದ್ದಿರಿ (ಈಗ ಫೋಟೋ ನೋಡಿ confirm ಆಯ್ತು) ಪರಿಚಯ ಸರಿ ಇಲ್ಲದಿದ್ದ ಕಾರಣ ನಿಮ್ಮನ್ನು ಮಾತಾಡಿಸಲಾಗಲಿಲ್ಲ....

    ಮುಂದಿನ ಸಲ ನಾನೇ ಬಂದು ನಿಮ್ಮ ಪರಿಚಯ ಮಾಡಿಕೊಳ್ಳುತ್ತೇನೆ..... :-)

    - ದಿವ್ಯಾ

    ReplyDelete
  8. namaste Divya!!
    Sure we will meet and talk next time
    thank you
    :-)
    malathi S

    ReplyDelete
  9. Suguna (manasu)
    Vasudhendra avara hosa pustaka -'rakshaka anaatha' nijakkoo tumbaa chennagide. poorthi enjoy maaDde. neevella khanDita OdbEku
    :-)
    malathi S

    ReplyDelete
  10. ಮಾಲತಿ ಅವರೇ,

    ಪುಸ್ತಕವೆನ್ನುವುದೇ ಅಮೃತ ದುನಿ. ಅದರ ಅಳ ವಿಸ್ತಾರ ಮತ್ತು ಅದು ತೆರೆದುಕೊಳ್ಳುವ ಪರಿಯೇ ಸೋಜಿಗ. ಅಕ್ಷರ ಜ್ಞಾನ ಮನುಜನನ್ನು ಮಾನವನನ್ನಾಗಿ ಮಾಡುತ್ತದೆ.

    ಪುಸ್ತಕ ಬಿಡುಗಡೆಯಂತ ಸಮಾರಂಭಗಳನ್ನು ವರದಿ ಮಾಡುವ, ಆ ಮೂಲಕ ನಮ್ಮನ್ನು ಪುಸ್ತಕ ಕೊಂಡು ಓದುವ ಕ್ರಿಯೆಗೆ ಪ್ರೇರೇಪಿಸುವ ನಿಮ್ಮ ತಾಳ್ಮೆಗೆ ಶರಣು...

    ಅಂದಹಾಗೆ, ಈ ಫೋಟೋಗಳನ್ನೆಲ್ಲಾ ನಿಮ್ಮ ಮೊಬೈಲ್ನಲ್ಲೇ ಹಿಡಿದಿರೋ ಹೇಗೆ?

    - ಬದರಿನಾಥ ಪಲವಳ್ಳಿ

    ReplyDelete
  11. ಮಾಲತಿ ಮೇಡಂ,
    ಇದು ನಿಮ್ಮ ಬ್ಲಾಗಿಗೆ ನನ್ನ ಮೊದಲ ಭೇಟಿ.
    ನಿಮ್ಮ ಎಲ್ಲಾ ಬರಹಗಳನ್ನೂ ಓಡಿದೆ. ಒಳ್ಳೆಯ ಲೇಖನಗಳು, ಸುಂದರ ಚಿತ್ರಗಳು, ಹಾಗೆ ಮಾಹಿತುಕ್ತ
    ಬರಹಗಳು ತುಂಬಾ ಖುಷಿ ಕೊಟ್ಟಿತು. ರಾಮಚಂದ್ರಾಪುರದ ಗೋವುಗಳ ಚಿತ್ರ ನೋಡಿ ಹೃದಯ ತುಂಬಿ ಬಂತು. (ಎಷ್ಟಾದರೂ ನಮ್ಮೂರು ಅನ್ನೋ ದುರಹಂಕಾರ ಅಲ್ವಾ!)
    ಧನ್ಯವಾದಗಳು.
    ಒಮ್ಮೆ ನನ್ನ ಬ್ಲಾಗಿಗೂ ಭೇಟಿ ಕೊಡಿ,
    http://pravi-manadaaladinda.blogspot.com

    ReplyDelete