May 31, 2010

ನೀರ್ಗೊಜ್ಜು

ನೀರ್ಗೊಜ್ಜು: ಇದನ್ನು ಮಾಡುವ ಬಗ್ಗೆ, ಸೇವಿಸುವ ಬಗ್ಗೆ ಸುಶ್ರುತ ಅವರ ಚಿಕ್ಕ ಚೊಕ್ಕ ಪ್ರಬಂಧ ಓದಿದ ನಂತರವೇ ಮುಂದುವರೆಸಿ


ಶ್ರೀಕಾಂತ್ ಕಣ್ಣು ಮುಚ್ಚಿ divine divine ಅಂತ ಗುಣುಗುಣಿಸ್ತಾ ಅಪ್ಪೆ ಹುಳಿಯನ್ನು (ನೀರ್ಗೊಜ್ಜು) ಹೀರತಾ ಇದ್ರು. ದೈವ ಸಾಕ್ಷಾತ್ ಕಾರ ಅಥವಾ ಸಾಕ್ಷಾತ್ ಖಾರ ನಾ ಅಂತ ಗೊತ್ತಾಗಲಿಲ್ಲ. ಸರಕ್-ಬುರುಕ್-sound effect ಜತೆ ಅವರು enjoy ಮಾಡಿದ್ದಕ್ಕೆ ನಾನು, ಮಾಲವಿಕ, ನಿಹಾರಿಕಾ ಸಾಕ್ಷಿ.

ನೀರ್ಗೊಜ್ಜು ಸಖ್ಹತ್ kick ಕೊಟ್ಟಿರಬೇಕು ಯಾಕಂದ್ರೆ, ಊಟ ಆದಮೇಲೆ ಶ್ರೀಕಾಂತ್ ’ಬ್ರಾಹ್ಮಣ ಸಂತೃಪ್ತನಾದ- may god bless my wife for keeping my body and soul together, thank you malathi’ ಅಂತ ಇಂಗ್ಲಿಷ್ ನಲ್ಲಿ ಆಶೀರ್ವಾದ ಬೇರೆ ಮಾಡಿದ್ರು.

ಸುಶ್ರುತನ recipe ಯಲ್ಲಿ ಸ್ವಲ್ಪವೇ ಬದಲಾವಣೆ ಮಾಡಿದ್ದೇನೆ. ಒಂದು, ಮಾವಿನ ಕಾಯಿಯನ್ನು ಸಣ್ಣದಾಗಿ ಕತ್ತರಿಸುವ ಬದಲು, ಅದನ್ನು ತುರಿದು ಹಾಕಿದೆ. ಮತ್ತು mixie ಯಲ್ಲಿ ಹಾಕುವ ಬದಲು ರುಬ್ಬುವ ಕಲ್ಲಿನ ಉಪಯೋಗ ಮಾಡಿದೆ. ಒಗ್ಗರಣೆ ಹಾಕುವ ಮೊದಲು, ರುಬ್ಬಿದ ಪದಾರ್ಥವನ್ನು ಸೋಸಿದೆ.

ನನ್ನ ಹಾಗೂ ನನ್ನ ಹಳೇಯ ರುಬ್ಬುವ ಕಲ್ಲಿನ ನಂಟನ್ನು ಕಂಡ ನನ್ನ ಆಪ್ತರು ನನಗೆ relic, museum piece ಅಂತ ಹೆಸರು ಇಟ್ಟಿದ್ದಾರೆ.
ಗ್ರಾಮೀಣ ತಿಂಡಿಗಳನ್ನು (esp ಹಲಸಿನ ಎಲೆ ಕೊಟ್ಟೆ ಕಡುಬು, ಅರಸಿನ ಎಲೆ ಸಿಹಿ ಕಡುಬು, ಪತ್ರೋಡೆ etc) ಮಾಡುವಾಗ ನಾನು ನನ್ನ ರುಬ್ಬುವಕಲ್ಲಿನ ಮೇಲೆ ಹೆಚ್ಚು Dependant. ಯಾರು ಏನೇ ಹೇಳಲಿ, ರುಬ್ಬುವ ಕಲ್ಲಿನಲ್ಲಿ ರುಬ್ಬಿ ತಯಾರಿಸಿದ ಇಡ್ಲಿ, ದೋಸೆ, ಚಟ್ನಿ, ಮಸಾಲೆ, ಉಪ್ಪಿನಕಾಯಿ ತುಂಬಾ ರುಚಿ. :-)

ಉಪ್ಪಿನಕಾಯಿ ಮಾಡುವಾಗಲೂ ಹಾಗೆ ಮಿಕ್ಸಿ ಯಲ್ಲಿ ಹಾಕಿದರೆ ಬೇಗ ಹಾಳಾಗುತ್ತೇನೋ ಎಂಬ ಹೆದರಿಕೆ. ಮತ್ತು ಉಪ್ಪಿನಕಾಯಿಗೆ ರುಬ್ಬುವಾಗ ಅಡಿಕೆ ಹಾಳೆಯನ್ನು ಉಪಯೋಗಿಸ್ತೇನೆ. ಆಗ ಕೈಬೆರಳು ಉರಿಯುವುದೂ ಇಲ್ಲ, ಉಪ್ಪಿನಕಾಯಿನೂ sanitised condtion ನಲ್ಲಿ ತಯಾರಾದ ಹಾಗಾಗುತ್ತಲ್ಲವಾ?

ಬೆಳಗಾವಿಯಿಂದ  ಉಪ್ಪಿನಕಾಯಿ ಮಾಡಲು ತಂದ ಅಪ್ಪೆಮಿಡಿ ಹೇಗೂ ಇತ್ತು, ಕಾಕತಾಳೀಯವೆಂಬಂತೆ ಸುಶ್ರುತ ಅವರ article ವಿಜಯಕರ್ನಾಟಕ(ರವಿವಾರದ ಲವಲvk)ದಲ್ಲಿ ಬಂತು. ಅಂತೂ ಸುಶ್ರುತನ ನೀರ್ಗೊಜ್ಜು ಪ್ರಭಾವ-ಅದನ್ನು ತಯಾರಿಸಿದ್ದಷ್ಟೆ ಅಲ್ಲ, ನನ್ನಿಂದ ಇಷ್ಟೆಲ್ಲ ಬರೆಯುವಂತೆ ಕೂಡ ಮಾಡಿತು.

thanks Sushrutha!!

:-)

May 25, 2010

ದೇಶಕಾಲ ವಿಶೇಷ ಸಂಚಿಕೆ


ಈ ಪುಟದಲ್ಲಿ ಕೈ ಬರಹ ತರಹದ font ಎಷ್ಟು ಸೊಗಸಾಗಿದೆ. ಈ ಎರಡು ಪುಟಗಳು ಸುಮ್ಮನೆ trailer.



ಐದು ವರ್ಷ ಪೋರೈಸಿದ ಸಂಭ್ರಮದಲ್ಲಿ, ದೇಶಕಾಲ ಪತ್ರಿಕೆ ’ದೇಶ ಕಾಲ ವಿಶೇಷ’ ಸಂಚಿಕೆ ಹೊರ ತಂದಿದೆ. ನನ್ನ ಮಿತ್ರ ಅಪಾರ ರಿಗೆ ಈ ಪುಸ್ತಕ ನನ್ನ ಪರವಾಗಿ ಕೊಳ್ಳಲು ಹೇಳಿದಾಗ ಅದರ ಗಾತ್ರದ ಬಗ್ಗೆ ನನಗೆ ಅರಿವಿರಲಿಲ್ಲ. 320 ಪುಟಗಳ A4 -size ನ ಪುಸ್ತಕ.(ತೂಕದ ಪುಸ್ತಕ :-)) ಸೃಜನಾ ಕಾಯ್ಕಿಣಿ ಯವರ ಓಡಿಸ್ಸಿ ನೃತ್ಯದ ಕಾರ್ಯಕ್ರಮಕ್ಕೆ ನಾವೆಲ್ಲ ಸಿಕ್ಕಿದಾಗ ಅವರು ಪುಸ್ತಕವನ್ನು ನನಗೆ ತಂದು ಕೊಟ್ಟರು.

ಅದರ ಮುಖಪುಟದ ಬಗ್ಗೆ ನಮ್ಮ ಮನೆಯಲ್ಲಿ fift-fifty ಅಭಿಪ್ರಾಯ. ನನಗೆ- ನೀಹಾ ಗೆ ಅಷ್ಟೇನೂ ವಿಶೇಷ ಅನ್ನಿಸಲಿಲ್ಲ, ಆದರೆ ಶ್ರೀಕಾಂತ್ ಹಾಗೂ ಮಾಲವಿಕ ಗೆ ತುಂಬಾ ಇಷ್ಟವಾಗಿ ಇಬ್ಬರೂ ಒಂದೇ ಸಲ 'wow' ಅಂದರು.

ಅದರ ಒಳಪುಟಗಳೆಲ್ಲ super. no dusraa baat..ಈ ಸಂಚಿಕೆಯಲ್ಲಿನ ಮೂರನೆ ಹಾಗು ಐದನೆ ಪುಟ ನನಗೆ ತುಂಬ ಇಷ್ಟವಾಗಿ ಅದನ್ನು ಸ್ಕ್ಯಾನ್ ಮಾಡಿ ಹಾಕಿದ್ದೇನೆ. ಸಧ್ಯಕ್ಕಂತು ಆ ಪುಸ್ತಕವನ್ನು ಓದುವುದಿಲ್ಲ.ಸುಮ್ನೆ ಒಂದು ಸಲ glance ಮಾಡಿದ್ದೇನೆ. ತುಂಬ ವಿಭಿನ್ನವಾಗಿದೆ,interesting ಆಗಿದೆ, ಪ್ರತೀ ಪುಟದಲ್ಲೂ ಅಂದವಾದ illustrations. ಸಂಪಾದಕರ,ಎಷ್ಟೊಂದು ಬರಹಗಾರರ, ಕವಿಗಳ, ಚಿತ್ರಕಾರರ - ಹಾಗೂ ಪುಸ್ತಕದ ನಾನಾ ಹಂತದಲ್ಲಿ ಸಹಾಯ ಮಾಡಿರುವವರ-ಒಟ್ಟಾರೆ ಪರಿಶ್ರಮದ ಫಲ, ಸಂಚಿಕೆ ತುಂಬ ಅಚ್ಚುಕಟ್ಟಾಗಿ ಮೂಡಿ ಬಂದಿದೆ.

ಒಂದು disadvantage ಅಂದ್ರೆ,ನನಗೆ ನೆಟ್ಟಗೆ ಕೂತು ಓದುವುದರೆಂದರೆ ಆಗಲ್ಲ. ಹಾಗೇ office ಗೆ ಹೋಗುವಾಗ ಬಸ್ಸ್ ನಲ್ಲೂ ಓದಲು ಪುಸ್ತಕದ ಗಾತ್ರದ ನಿಮಿತ್ತ ಕಿರಿಕಿರಿ ಅನ್ನಿಸುತ್ತೆ. ಮುಂದಿನ ತಿಂಗಳು ರೈಲಿನಲ್ಲಿ ದೊಡ್ಡ ಪ್ರವಾಸ ಹೊರಟಿದ್ದೇನೆ, ಆವಾಗ ಇದನ್ನು ಓದಲು ತುಂಬ ಕಾತುರಳಾಗಿದ್ದೇನೆ :-)

ಎಲ್ಲರೂ ಖಂಡಿತ ಈ ಪುಸ್ತಕ ಕೊಳ್ಳಲೇ ಬೇಕು. ನಿಜಕ್ಕೂ elegant look and feel ಇದೆ-ಸಂಗ್ರಹಯೋಗ್ಯ. ನನ್ನ favorite ಬರಹಗಾರರಾದ ಯಶವಂತ ಚಿತ್ತಾಲ, U.R. ಅನಂತಮೂರ್ತಿ, ಶ್ರೀನಿವಾಸ ವೈದ್ಯ, ವೈದೇಹಿ ಹಾಗೂ ವಸುಧೇಂದ್ರರ ಹೆಸರು ನೋಡಿ ನಾನಂತು full ಖುಶ್.

:-)

May 17, 2010

world famous in ಕೋಣನಕುಂಟೆ


ಭಾನುವಾರ , ನನ್ನ ಚಿಕ್ಕಪ್ಪನ ಮೊಮ್ಮಗನ ಉಪನಯನ ಪ್ರಯುಕ್ತ ಕೋಣನಕುಂಟೆಗೆ ಹೋಗಿದ್ದೆ. ಡಿಸೆಂಬರ್ ತಿಂಗಳಲ್ಲಿ ನನ್ನ ಸಣ್ಣದೊಂದು ಬರಹ ವಿಜಯ ಕರ್ನಾಟಕದಲ್ಲಿ ಬಂದಿತ್ತು. ನನ್ನ ಒಬ್ಬ ಸೋದರ ಮಾವನಿಗೆ ಅದರ ನೆನಪಾಗಿ ಅದರ ಬಗ್ಗೆ mention ಮಾಡಿದ್ರು. ಅವರು ಆಗ್ಲೇ ಫೋನ್ ಮಾಡಿದಾಗ cell out of reach ಮೆಸೆಜ್ ಬಂದಿದ್ದು ಹೇಳಿದರು.ಆವಾಗಲೇ ಎಲ್ಲರೂ ಅದು ಓದಿದ್ದರ ಬಗ್ಗೆ ತಿಳಿಯಿತು. ಎಲ್ಲರೂ ಶಹಬ್ಬಾಸಗಿರಿ ಕೊಟಿದ್ದೆ ಕೊಟ್ಟಿದ್ದು. ನನ್ನ ಕನ್ನಡ ಅಷ್ಟೊಂದು ಸುಧಾರಿಸಿದ್ದು ಅವರಿಗೆಲ್ಲ ಆಶ್ಚರ್ಯದ ವಿಷಯ.
ನಮ್ಮ ಕೆಲವು ಕುಟುಂಬ ವರ್ಗದವರಿಗೆ ನಾವು ಏನು ಕೆಲಸ ಮಾಡ್ತಾ ಇದ್ದೇವೆ ಅನ್ನುವುದರ ಬಗ್ಗೆ ಸರಿ ತಿಳಿದಿಲ್ಲ. ಒಂದೊಮ್ಮೆ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಶ್ರೀಕಾಂತ್ ತಮ್ಮ ಹಿರಿ ಅಕ್ಕನಿಗೆ ನಮ್ಮ ಕೆಲಸದ ಬಗ್ಗೆ-NGO ಬಗ್ಗೆ consultancy ಬಗ್ಗೆ ಅರ್ಧ ಗಂಟೆ ತಿಳಿಹೇಳಿದರು. ಅವರು ಆ ಕಡೆ ಹೋದ ಮೇಲೆ ನನಗವರು ಮಾಡಿದ ಪ್ರಶ್ನೆ ’ನೀವು ಮದುವೆ ಎಲ್ಲ ಮಾಡಿಸ್ತೀರಾ?? ಶ್ರೀಕಾಂತ್ ಏನು ಹೇಳಿದ ಅಂತ್ಲೇ ಗೊತ್ತಾಗಲಿಲ್ಲ ಅಂತ...:-) ಅವರಿಗೆ ಗೊತ್ತಿದ್ದು marriage consultancy ಮಾತ್ರ ಯಾಕಂದ್ರೆ ಅವರ ಇಬ್ಬರ ಹೆಣ್ಣು ಮಕ್ಕಳ ಜಾತಕವನ್ನು ಅವರು marriage consultancy bureau ನಲ್ಲಿ ನೋಂದಾಯಿಸಿದ್ದರಿಂದ. :-)
ವಿಜಯ ಕರ್ನಾಟಕದಲ್ಲಿದ್ದ ಸುಧನ್ವಾ ದೇರಾಜೆ ಯವರು -’ಹೊಸ ವರ್ಷಕ್ಕೆ ವಿ.ಕ. ಸಾಪ್ತಾಹಿಕ ಲವಲವಿಕೆಯಿಂದ ಎರಡು ವಿಶೇಷ ಪುಟಗಳು ಬರ್‍ತಿವೆ. ಅದರಲ್ಲಿ "ನಿಮ್ಮ ಕನಸಿನ ಉದ್ಯೋಗ ಯಾವುದು?' ಅಂತ ಒಂದಷ್ಟು ಜನರ ಬಳಿ ಬರೆಸುತ್ತಿದ್ದೇವೆ. ನೀವೂ ಒಂದು ಪುಟ್ಟ ಬರಹ (250 ಪದಗಳ ಮಿತಿಯಲ್ಲಿ) ಬರೆದುಕೊಡುವಿರಾ? ಕಲ್ಪಿತ ಜಾಬ್ ಬಗ್ಗೆ ಬೇಡ. ಈಗ ಇರುವ ಒಂದು ಉದ್ಯೋಗದ ಬಗ್ಗೆ . ಅದು ನಿಮಗೆ ಯಾಕಿಷ್ಟ ಅಂತ’. ಅದು 475 ಪದಗಳಾಯ್ತು. ಅದನ್ನು ಸರಿ ಪಡಿಸುವಷ್ಟು/edit ಮಾಡುವಷ್ಟು ಸಮಯ ನನ್ನಲ್ಲಿರಲಿಲ್ಲ, ಯಾಕೆಂದ್ರೆ ಅದರ ಮರುದಿನ ಮುಂಜಾನೆ ನಾವೆಲ್ಲರೂ ಮಹಾರಾಷ್ಟ್ರಕ್ಕೆ ಹೊರಟಿದ್ದ್ವಿ. ಅವರು ಅದನ್ನು ತುಂಬಾ ಚೆನ್ನಾಗಿ ಎಡಿಟ್ ಮಾಡಿ ಹಾಕಿದ್ರು. ಕೊಲ್ಹಾಪುರ್ ತನಕ ನನಗೆ ಫೋನ್ ಕಾಲ್/ ಎಸ್ ಎಮ್ ಎಸ್ ಮೂಲಕ ಅದು ವಿ.ಕೆ ನಲ್ಲಿ ಬಂದಿದ್ದು ತಿಳಿಯಿತು. ಹಾಗೆ ಶೆಣೈ ಅಂತ ಹಾಕಿದ್ದರಿಂದ, ನಮ್ಮ ಸಂಸ್ಥೆಯ ಬಗ್ಗೆ ಅಲ್ಪ ಸ್ವಲ್ಪ ತಿಳಿದವರು, ಇತರರಿಂದ ನಮ್ಮ ನಂಬರ್ ಪಡೆದುಕೊಂಡು, ಸುಮಾರು ಫೋನ್ ಕರೆಗಳು ಬಂದವು.  ಶ್ರೀಕಾಂತ್ ಕಾಲೇಜ್ ನ ಗುರುಗಳು ಅವರಿಗೆ ಫೋನ್ ಮಾಡಿ ಅಭಿನಂದಿಸಿದಾಗ ತುಂಬ ಖುಶಿ ಪಟ್ಟಿದ್ದೆ. ಆ ಮೇಲೆ ಸೆಲ್ ಫೋನ್ ಸಿಗ್ನಲ್ ಪೂರ್ತಿ ಹೋಗಿಬಿಡ್ತು.
ಸುಮಾರು 15 ದಿನಗಳ ಮೇಲೆ ಮನೆಗೆ ಬಂದ ಮೇಲೆ e-mail ನಲ್ಲಿ ಸುಮಾರು ಮಿತ್ರರು-ಬಂಧುಗಳ ಅಭಿನಂದನಾ ಪತ್ರಗಳಿದ್ದವು ನಮ್ಮ ಕೆಲಸದ ಬಗ್ಗೆ ಖುಶಿ ವ್ಯಕ್ತ ಪಡಿಸಿ.
ಈಗ ನೀವು ಓದಿ. ನಮ್ಮ ವೆಬ್ ಸೈಟ್ ಗೂ ಭೇಟಿ ನೀಡಿ.
ಕೆಲವು ತಿದ್ದುಪಡಿಗಳಿವೆ ಮೇಲಿನ ಬರಹದಲ್ಲಿ
* ಶ್ರೀಕಾಂತ್ RUDSET Institute ನಲ್ಲಿ ನಿರ್ದೇಶಕರಾಗಿದ್ದರು.
* ಮಾಲತಿ ಶೆಣೈ - ಸಮಾಜ ಸೇವಾ ಕಾರ್ಯಕರ್ತೆ ಖಂಡಿತ ಅಲ್ಲ. ನನ್ನದೇನಿದ್ದರೂ back-end / moral support ಮಾತ್ರ.
* ಈಗ ನಮ್ಮೊಂದಿಗೆ 620 ಜನ ಸಹೋದ್ಯೋಗಿಗಳಿದ್ದಾರೆ.
* ಕೋಣನಕುಂಟೆಯಲ್ಲಿ world famous ಶೀರ್ಷಿಕೆ c/o ಮಾಲವಿಕ ಶೆಣೈ
clipping ಮೇಲೆ click ಮಾಡಿದ್ರೆ ಓದಬಹುದು ಅನ್ನಿಸುತ್ತೆ!!!

:-)
ನಮ್ಮ web-site

:-)


May 11, 2010

ಸಂಭ್ರಮದ -ಛಂದ book release event

ರವಿವಾರ (09.05.2010) ಛಂದ ಪ್ರಕಾಶನದ 4 ಪುಸ್ತಕ ಬಿಡುಗಡೆ ಕಾರ್ಯಕ್ರಮ, J.C. Road ನ A.D.A. ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ನಾವು ಸ-ಕುಟುಂಬ, ಸ-ಪರಿವಾರ ಹೋಗಲು ಕಾರಣ ಮೂರು
1. ಬೊಳುವಾರ ಮಾಮ ಶ್ರೀಕಾಂತ್ ರ freind and ex-colleague (Bank)
2. ನಮ್ಮೂರಿನ ಮುದ್ದು ಹುಡುಗಿ - ’ಮುದ್ದು’ ತೀರ್ಥಹಳ್ಳಿ.
3. ನನ್ನ ಕೆಲವು ಬ್ಲಾಗ್ ಮಿತ್ರರ ಭೇಟಿ (ದಿವ್ಯ ಮಲ್ಲ್ಯ, ಸುಶ್ರುತ ದೊಡ್ಡೇರಿ, ಸಾವಿತ್ರಿ, ಸಂದೀಪ್ ಕಾಮತ್)

ಕಾರ್ಯಕ್ರಮ 10.30 ಗೆ ಶುರು, ಆದ್ರೆ, ನಾವು ಮನೆಯಿಂದ ಹೊರಡುವಾಗ್ಲೇ 10.30. ಬೆಳಿಗ್ಗೆ ಮಾಲವಿಕಳ classmates ಎಲ್ಲ ಸೇರಿ ನನಗೆ mothers day wish ಮಾಡಿದ್ರು. ಆಗಲೇ ಲೇಟ್ ಆಗಿದ್ದು. ನಾವು ತಲುಪಿದ್ದು 11.45ಗೆ.
ಶ್ರೀಕಾಂತ ಹಾಗೂ ನಿಹಾರಿಕಾ shoot ಮಾಡಿದ ಕೆಲವು ಚಿತ್ರಗಳು ...

ಶ್ರೀ ರಾಧೇಶ ತೋಲ್ಪಾಡಿ. ಶ್ರೀ ರಾಘವೇಂದ್ರ ಪಾಟೀಲ್, ಬೋಳುವಾರ್ ಮಹಮ್ಮದ್, ವಿತಾಶಾ ರಿಯಾ popularly known as ಮುದ್ದು ತೀರ್ಥಹಳ್ಳಿ. ಹಿಂಭಾಗದಲ್ಲಿ ಕಾಣುತ್ತಿರುವ banner ಸಹ ಎಷ್ಟು catchy ಆಗಿದೆ.


ವೇದಿಕೆಯನ್ನು ಮನೋಹರವಾಗಿ ಸಜ್ಜುಗೊಳಿಸಿದ್ದು ರಾಘವೇಂದ್ರ ಹೆಗ್ಡೆ, ಸುಶ್ರುತ ದೊಡ್ಡೇರಿ ಹಾಗೂ ಶ್ರೀನಿಧಿ ಡಿ. ಎಸ್. ಒಳ್ಳೆ ಮಕ್ಕಳ ದಿನಾಚರಣೆ mood ಇದ್ದ ಹಾಗಿತ್ತು.

ಇತ್ತೀಚೆಗೆ ವಸುಧೇಂದ್ರ ಅವರಿಗೆ ತುಂಬಾsssssssss ಬರೀ ಬೇಕು ಅಂತ ಅನ್ನಿಸ್ತಿದೆಯಂತೆ. ನಾವೂ ತುಂಬಾssssಕಾತರದಿಂದ ಕಾದು, ಪುಸ್ತಕ ಕೊಂಡು ಓದುತ್ತೇವೆ. promise!!! :-)


ಚಂದ್ರಾ ಗುರುದತ್ ಅವರ ಕೈ ಚಳಕ- ಪುರಸ್ಕೃತ ಮುಖಪುಟ ರಂಗೋಲಿಯಲ್ಲಿ ಅರಳಿದೆ (right)
prize winning coverpage designed by Shri Vinaykumar Saya (left)

'ಹುಲಿರಾಯ' ಪುಸ್ತಕ ಬರೆದ ಕೀರ್ತಿರಾಜ್-10 ನೆ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಅವನ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರುವುದು.



ಛಂದ ಸಡಗರದ ನಡುವೆ ನಮ್ಮದೂ ಫೊಟೊ ತೆಗೆಸಿಕೊಳ್ಳುವ ಸಂಭ್ರಮ. L to R: Divya mallya, Niharika, Malavika, Savithri, malathi, Sandeep Kamath
ಮುದ್ದು ಪುಟ್ಟಿ ಆಟ ಪುಟ್ಟ umbrella ಮತ್ತು balloon jate. ಬೊಳುವಾರ ಮಾಮ ಕಾರ್ಯಕ್ರಮದ ಕೊನೆಯಲ್ಲಿ ವೇದಿಕೆ ಮೇಲಿರುವ ಪುಟ್ಟ ಛತ್ರಿ/ಕೊಡೆ ಯನ್ನು ಸಭೆಯಲ್ಲಿದ್ದ ಪುಟ್ಟ ಮಕ್ಕಳಿಗೆ ಕರೆದು ಕೊಡುತ್ತಿರುವ ನೋಟ ಚೆನ್ನಾಗಿತ್ತು.
ಕಾರ್ಯಕ್ರಮ ನಿರೂಪಣೆ  ಮಾಡಿದವರು ಸುಧನ್ವಾ ದೇರಾಜೆ!!!! ನನಗಂತು ಇಷ್ಟವಾಯ್ತು. :-)
ಕಾರ್ಯಕ್ರಮದ ವರದಿ ವಿಜಯ ಕರ್ನಾಟಕದಲ್ಲಿ ಬಂದಿದೆ. ಅದನ್ನು ಅವಧಿಯಲ್ಲೂ ಹಾಕಿದ್ದಾರೆ.ವಿ.ಕೆ ಯವರು ರಾಧೇಶ ತೋಲ್ಪಾಡಿ ಯವರನ್ನು ರಾಜೇಶ ತೋಲ್ಪಾಡಿ ಮಾಡಿದ್ದಾರೆ :-)
but ಗ್ರೇಟ್ news ಏನು ಗೊತ್ತಾ ನನಗೀಗ  ’ನಮ್ಮಮ್ಮ ಅಂದ್ರೆ ನಂಗಿಷ್ಟ’ ಪುಸ್ತಕದ ಮೂರು ಪ್ರತಿಗಳು ಗಿಫ್ಟ್ ಆಗಿ ಸಿಕ್ಕಿದ್ದು (mothers day special edition with CDs and greeting cards.) ಪುಸ್ತಿಕೆಯ ಒಟ್ಟಿಗೆ ಬುಕ್ ಮಾರ್ಕ್ ಆಗಿ ಮುದ್ದಾದ - ಅರಳಿಮರದ/ ಅಶ್ವತ್ಥ ವೃಕ್ಷದ ಎಲೆ ಕೊಟ್ಟಿದ್ದಾರೆ.


:-) Happy Mothers Day to all (thanks to internet connectivity problems..ಎರಡು ದಿನ ಲೇಟ್ ಅಷ್ಟೆ. :-)

May 2, 2010

ಅನುಭವ- a strange Experience

ಸಂಜೆ walk ನಿಂದ ವಾಪಸ್ ಬರುವಾಗ ದಿನಾ ಬೇರೆ ಬೇರೆ ದಾರಿ ಬಳಸಿ ಕೊಂಡು ಮನೆಗೆ ಬರುವುದು ವಾಡಿಕೆ. ಈ ಸಲ ನಾವು ಒಂದು ಇಳಿಜಾರಾದ ಪ್ರದೇಶದಿಂದ ಕೆಳಗಿಳಿಯುತ್ತಾ ಇದ್ವಿ. ನಮ್ಮ ಎದುರಿಗೆ ಬಿಳಿ ಮುಂಡು ಹಾಕ್ಕೊಂಡ 4-5 ಮಧ್ಯವಯಸ್ಕ ಗಂಡಸರು , ಗಟ್ಟಿಯಾಗಿ ಮಾತಾಡ್ತಾ, ನಗ್ತಾ ಕೆಳಗಿಳಿಯುತ್ತ ಇದ್ದರು. ಅವರ ಮುಂದಿನಿಂದ ಕೆಲವು teenage ಹುಡುಗರು ಸಿಗರೇಟ್ ಸೇದುತ್ತ, ಹೋಗ್ತಾ ಇದ್ದರು. ಆ ಮೇಲೆ ಏನಾಯ್ತೋ ಏನೋ ಗಲಾಟೆ ಶುರು ಆಗಿ ಬಿಡ್ತು. ಆ ಹುಡುಗರು ಇವರ dress ಬಗ್ಗೆ ಏನೋ ಕುಹುಕ ಆಡಿದ್ದರು. ಗಲೀಜು ಬೈಗಳ ವಿನಿಮಯದ ನಂತರದ, ಜೋರು ಜೋರು ಗಂಟಲಿನ ಮಾತಿನ ಚಕಮಕಿ ನಡೆದು,ಕೆಲವೇ ಕ್ಷಣಗಳಲ್ಲಿ ಹೊಡೆದಾಟ ಶುರು ಆಗಿ ಬಿಡ್ತು. ಒಬ್ಬ ಹುಡುಗ, ರಸ್ತೆ ಪಕ್ಕದಲ್ಲಿದ್ದ ಕಲ್ಲನ್ನು ಎತ್ತಿ ಗಂಡಸರ ಕಡೆಗೆ ಎಸೆದು ಬಿಟ್ಟ. ಇದನ್ನು ನೋಡಿ ಉಳಿದವರು ಕಲ್ಲು ಎಸೆಯಲಿಕ್ಕೆ ಶುರು ಮಾಡಿದರು. ಒಂದು ಕಲ್ಲು ನೇರವಾಗಿ ಒಬ್ಬರ ತಲೇಗೆ ಬಿತ್ತು. ನಾನು stop it stop it ಅಂತ ಕಿರುಚುತ್ತ ಓಡಿದೆ. ನಾನು ನಿಹಾರಿಕಾ ಅಲ್ಲಿದ್ದನ್ನು ನೋಡಿ ಗಾಯಗೊಂಡವರೊಬ್ಬರನ್ನು ಬಿಟ್ಟು ಎಲ್ಲರೂ ಚದುರಿಹೋದರು.ವಯಸ್ಕರ ಜತೆ ಇದ್ದವರೂ ಕೂಡ. ನಾವು ಅವರ ಬಳಿಗೆ ಹೋಗುವಷ್ಟರಲ್ಲಿ, ಅವರ ಬಿಳಿ ಮುಂಡು, ತುಂಬು ತೋಳಿನ ಬಿಳಿ shirt ರಕ್ತದಿಂದ ತೊಯ್ದು ತೊಪ್ಪೆಯಾಗಿದ್ದವು. ಇನ್ನೊಂದು ಕಲ್ಲು ಬಹುಶ: ಎದೆಗೆ ತಾಕಿರಬೇಕು, ಎದೆಯನ್ನೂ ಹಿಡಿದುಕೊಂಡು ಆ ವಯಸ್ಕರು ಕುಸಿದು ಬಿದ್ದರು. ನಿಹಾರಿಕಾಗೆ ’you wait here, i iwill get help' ಅಂತ ಹೇಳಿ ಆ ರಸ್ತೆ ಉದ್ದಕ್ಕೆ ಓಡಿದ್ದೆ ಓಡಿದ್ದು. ಡಾಕ್ಟರ್ sign ಇದ್ದ ಗೇಟ್ ಬಳಿ ನಿಂತು ಡಾಕ್ಟರ್, ಡಾಕ್ಟರ್ ಅಂತ ಕೂಗಿದ್ದೂ ಆಯಿತು, ಲೈಟು ಹಾಕಿರಲಿಲ್ಲ. ಯಾರೂ ಹೊರಗೆ ಬರಲಿಲ್ಲ. ನಾನು ಡಕ್ಟರ್ ಅಂತ ಕೂಗಿದ್ದು ಮಾತ್ರ , ಸಿನಿಮಾಗಳಲ್ಲಿ ತೋರಿಸುವ ಹಾಗೆ ಪ್ರತಿಧ್ವನಿಸುತ್ತ ಇತ್ತು. ಯಾರಾದರೂ ಪ್ಲೀಸ್ ಹೆಲ್ಪ್ ಮಾಡಿ ಅಂತ ಹಲುಬಿದ್ದೆ ಆಯ್ತು. ಯಾವ ಒಂದು ನರಪ್ರಾಣಿನೂ ನಮ್ಮ ಸಹಾಯಕ್ಕೆ ಬರಲಿಲ್ಲ. ಪುನ: ನಿಹಾರಿಕಳ ಬಳಿ ಬಂದು, ನನ್ನ ಬ್ಯಾಗ್ ನಿಂದ ನೀರಿನ ಬಾಟಲ್ ಹಾಗೂ ಟಿಶ್ಯೂ ಪೆಪರ ಗಳನ್ನು ಅವಳಿಗೆ ಕೊಟ್ಟು, staunch the flow (blood), will try to get help from some other place, keep him as comfortable as possible'' ಅಂತ ಹೇಳಿ ಮೈನ್ ರೋಡ ಕಡೆ ದಾವಿಸಿದೆ.

ಪುಣ್ಯಕ್ಕೆ ಗರಿಗರಿಯಾದ ಹೊಸ uniform, ಹೊಸ ಬೂಟು ಹಾಕ್ಕೊಂಡಿದ್ದ ಪೋಲಿಸಪ್ಪ ಸಿಕ್ಕಿದ. ಅವರ ಬಳಿ ಓಡಿ, ಹೀಗ್ ಹೀಗೆ ಆಗಿದೆ ಯಾರು ಸಹಯಕ್ಕೆ ಬರ್ತಾ ಇಲ್ಲ, ಅವರಿಗೆ ಪೆಟ್ಟಾಗಿದೆ ಅಂತ ನಾನು excite ಆಗಿ ಹೇಳ್ತಾ ಇದ್ದರೆ, ಅವರು ಕೂಲಾಗಿ;ನೀವು responsibility' ತೆಗೆದುಕೊಳ್ಳುವುದಾದರೆ ನಾನು complain lodge ಮಾಡ್ತೇನೆ ಅಂದ್ರು. ಅದಕ್ಕೆ ನಾನು, ಮೊದಲು ಪ್ಲೀಸ್ ಒಂದು ವೆಹಿಕಲ್ ತರಸಿ ಅವರಿಗೆ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿ ಅಂತಂದೆ. ಅವರು ಕೂಡಲೆ ಸೆಲ್ಲ್ ನಿಂದ ಪೋಲಿಸ್ ವೆಹಿಕಲ್ ಗೆ ಕರೆ ಮಾಡಿದ್ರು. ಅದು ಬರುವ ತನಕ ಅವರು ನನ್ನ details ಆದ ಹೆಸರು, ವಿಳಾಸ, ಫೋನ್ ನಂಬರ ಇತ್ಯಾದಿ ಕೇಳಿ, ನನ್ನ ಪರ್ಸ್ ನಲ್ಲಿ ಯಾವಾಗಲೂ ಇಟ್ಟುಕೊಳ್ಳುವ identity proof (voter id)ತೆಗೆಸಿಸಿ verify ಮಾಡಿಕೊಂಡ್ರು. ಅಷ್ಟರೊಳಗೆ ಪೋಲಿಸ್ ವ್ಯಾನ್ ನಲ್ಲಿ ಕೆಲವರು ಬಂದು ಆ ವಯಸ್ಕರನ್ನು ಕರೆದು ಕೊಂಡು ಹೋದರು.

ನೀವು ಪೋಲಿಸ್ ಸ್ಟೇಶನ್ ಗೆ ಬರಬೇಕಾಗುತ್ತೆ ಮ್ಯಾಡಂ ಅಂದಿದ್ದಕ್ಕೆ ಹೂಂ ಅಂತ ಹೇಳಿ ನಿಹಾಳನ್ನು ಕರೆದುಕೊಂಡು ಹೊರಟೆ. ನೋಡು ನೋಡುತ್ತಿದ್ದಂತೆ station ಬಂತು. ಅರೇ station ನಲ್ಲಿ ನೋಡಿದ್ರೆ ಯಾರೂ ಇಲ್ಲ. ’ನೀವೆ ಅವರ ಮನೆಗೆ ಹೋಗಿ ಅವರ ಮನೆಯವರಿಗೆ ತಿಳಿಸಿ ಬರುತ್ತೀರ” ಅಂತ request ಮಾಡಿದ್ರು. ಸರಿ ಅಂತ ನಾನು ನಿಹಾ ಹೊರಟ್ವಿ, ಬಸ್ಸ್ stop ನಲ್ಲಿ ಬಸ್ ಒಂದು ಬಂತು. ನಾನು ನಿಹಾ ಹತ್ತಿದ್ವಿ. conductor ಗೆ 500 ರೂ ನೋಟ್ ಕೊಟ್ಟೆ. ಅವನು ಬೈ ಲಿಕ್ಕೆ ಶುರು ಮಾಡಿದ. 10 ರೂ ಟಿಕೇಟ್ ಗೆ 500 ರೂ ಕೊಟ್ರೆ, ನಾನೆಲ್ಲಿಂದ ಚಿಲ್ಲರೆ ತರಲಿ ಅಂತ ಅವನ ದುಡ್ಡಿನ ಚೀಲ ಬಿಡಿಸಿ ತೋರಿಸಿದ. ಬಸ್ಸಿನ ಜನರೆಲ್ಲ ನನ್ನ ಕಡೆಗೆ ನೋಡ್ತಾ ಇದ್ದರಿಂದ ಮುಜುಗರ ಆಯ್ತು. ಪರ್ಸ್ ನಲ್ಲಿ ಒಂದು ರೂ coin ಬಿಟ್ಟರೆ 1000 ದ ಒಂದು ನೋಟ್, 500 ರ ಎರಡು ನೋಟ್ ಇದ್ವು. ನಿಹಾ ಅವಳ ಪರ್ಸ್ ತಂದಿರಲಿಲ್ಲ.

change ಇಲ್ಲ. ಇಳಿಯಿರಿ ಮ್ಯಾಡಂ ಅಂತ ನಮ್ಮನ್ನು ಇಳಿಸಿ ಬಿಟ್ಟ. ಬಸ್ಸ್ ನವರೆಲ್ಲ ಗಹ ಗಹಿಸಿ ನಗಲು ಪ್ರಾರಂಭಿಸಿದರು. ಅಷ್ಟರಲ್ಲಿ ಎಚ್ಚರ ಆಯ್ತು. ಮಕ್ಕಳು ಯಾವುದೋ ಸಿಡಿ ಹಾಕ್ಕೊಂಡು ಗಟ್ಟಿಯಾಗಿ ನಕ್ಕಾಗ ಎಚ್ಚರ ಆಯ್ತು. ಸಾಧಾರಾಣವಾಗಿ ನಾನು ಯಾವತ್ತೂ ಮಧ್ಯಾನ್ಹ ಮಲುಗುವುದಿಲ್ಲ. ಗೀರಡ್ಡಿ ಗೋವಿಂದರಾಜು- ಇವರು compile ಮಾಡಿದ ಸಣ್ಣ ಕಥೆಗಳ ಸಂಕಲನ ದಲ್ಲಿನ ಕತೆ ಆನಂದ ಎನ್ನುವವರು ಬರೆದ’ ರಾಧೆಯ ಕ್ಷಮೆ’ ಓದಿ ಮುಗಿಸಿ, ಆ ಕತೆಯ ಭಾಷೆಯನ್ನು , ಅದು ನನ್ನಲ್ಲಿ ಉದಯಿಸಿದ ಭಾವನೆಗಳನ್ನು,ಮೆಲುಕು ಹಾಕುತ್ತ ಒಂದು ಕ್ಷಣ ಕಣ್ಣು ಮುಚ್ಚಿದ್ದ ನೆನಪು. ಮತ್ತೆ ಈ ಕನಸು. ಎಚ್ಚರವಾದ ಮೇಲೆ ಮೈ ಮನಸ್ಸು ಎರಡು ಭಾರ. ಮಕ್ಕಳಿಗೆ ಗೋಳಿಬಜೆ ಮಾಡಿಕೊಡುತ್ತೇನೆ ಎಂದು promise ಮಾಡಿದ್ದರಿಂದ ಏಳಲೇ ಬೇಕಾಯಿತು.

ಕತೆ ತುಂಬಾ ಚೆನ್ನಾಗಿದೆ. ಕನಸಿಗೂ ಕತೆಗೂ ಯಾವುದೇ ಸಂಬಂಧವಿಲ್ಲ. ಕಥಾ ನಾಯಕ ಒಬ್ಬ ಕಲಾವಿದ. ಹಿಂದಿನ ಸಂಜೆ ಕೃಷ್ಣನಿಗೆ ಕಾದೂ ಕಾದೂ, ಸಿಟ್ಟುಕೊಂಡ ರಾಧೆಯ ಬಳಿ ಕೃಷ್ಣ ಕ್ಷಮೆ ಕೇಳುವ theme ಒಂದನ್ನು ಸುಮಾರು ದಿನದಿಂದ ಮಥಿಸಿ, ಒಂದು ಮುಂಜಾನೆ ನಾಯಕ ಚಿತ್ರ ಬರೆಯಲು studioಗೆ ಹೋಗುತ್ತಾನೆ. ಆರು ಗಂಟೆಯ ಸತತ ಪರಿಶ್ರಮದಿಂದ ನಾಯಕನಿಗೆ ಬೇಕಾದ ಹಾಗೆ ಚಿತ್ರ ಮೂಡಿ ಬರುತ್ತದೆ. ಇನ್ನೆನೂ finishing touches apply ಮಾಡುತ್ತಿದ್ದ ಹಾಗೆ, ದೇವರ ಮನೆ ಹೊಕ್ಕು ಅಲ್ಲಿದ್ದ ಅರಿಸಿನ-ಕುಂಕುಮವನ್ನು ಮೈಗೆ ಮೆತ್ತಿಕೊಂಡಂತಹ ಅವರ 2 ವರ್ಷದ ಮಗನ colourful ಅವತಾರವನ್ನು ಗಂಡನಿಗೆ, ತುಸು ಹೆಮ್ಮೆಯಿಂದಲೇ ’ನೋಡಿ, ನಿಮ್ಮನ್ನು ಮೀರಿಸುವ ಕಲಾವಿದನಾಗುತ್ತಾನೆ ಇಂವ’ ಅಂತ ತೋರಿಸಿಕೊಳ್ಳಲು ಹೆಂಡತಿ studio ಗೆ ಬರುತ್ತಾಳೆ. ಮಗನ ಪರಾಕ್ರಮ ಹೇಳಿ ಮುಗಿಸುವುದರಲ್ಲಿ, ಪುಟ್ಟ ಮಗನ ಕಾಲು , ಅಪ್ಪನ ಕೈಲ್ಲಿದ್ದ ಕುಂಚಕ್ಕೆ ತಾಗಿ, ಕುಂಚ ಅವರ ಕೈನಿಂದ ಹಾರಿ, ಅವರ ಇಡಿ ಕಲಾಕೃತಿ ಹಾಳಾಗಿ ಬಿಡುತ್ತೆ. ಕೋಪದಿಂದ ನಾಯಕ ಹೆಂಡತಿಯನ್ನು ಕೊಂಚ ಖಾರವಾಗಿಯೇ ಬೈಯುತ್ತಾನೆ, ಆಮೇಲೆ ಪಶ್ಚಾತ್ತಾಪ ಪಟ್ಟು , ಅಳುತ್ತಿದ ಅವಳನ್ನು ರಮಿಸುತ್ತ, ಅವಳ ಮುಖಭಾವಗಳನ್ನು ನೆನಪಲ್ಲಿಟ್ಟುಕೊಂಡು ಇನ್ನೊಂದು masterpiece ರಚಿಸುತ್ತಾನೆ. ಇದರಲ್ಲಿ ರಾಧೆಯ ಮುಖ ಅವನ ಹೆಂಡತಿಯ ಮುಖವನ್ನು ಹೋಲುತ್ತೆ. ಇದು ಕಥೆಯ ಸಾರಾಂಶ ಅಷ್ಟೆ. ಆ ಭಾಷೆಯ ಸೌಂದರ್ಯ ಅರಿಯಲು ಅದನ್ನು ಓದಿಯೇ ತೀರಬೇಕು.

ಕಥೆ ತುಂಬ ಸುಂದರವಾಗಿ ಮೂಡಿ ಬಂದಿದೆ.ಗಂಡ ಹೆಂಡಿರ ತುಂಟ ಸಂಭಾಷಣೆ ಯಲ್ಲಿ -ಲಾಲಿತ್ಯವಿದೆ, ಒಂದು ಆಹ್ಲಾದವಿದೆ.

ಪುಸ್ತಕದ ವಿವರ ಹೀಗಿದೆ

ಪ್ರಥಮ ವಿಶ್ವ ಕನ್ನಡ ಸಮ್ಮೇಳನ ಸಾಹಿತ್ಯ ಮಾಲೆ
ವಿಚಾರ ಸಾಹಿತ್ಯ
ಸಣ್ಣ ಕಥೆಗಳ ಸಂಕಲನ- ಗಿರಡ್ಡಿ ಗೋವಿಂದರಾಜ
(ಕರ್ನಾಟಕ ಸರ್ಕಾರ 1983)
ಬೆಲೆ - Rs. 4.50- ನಾಲ್ಕು ರೂಪಾಯಿ ಐವತ್ತು ಪೈಸೆ

ಅಂದ ಹಾಗೆ ಗೋಳಿಬಜೆ - was very tasty :-) ಟೀ ಹೀರುತ್ತ ಇದನ್ನು ಬರೆದೆ. ತಲೆ ಬುಡ ಇಲ್ಲದ್ದು. ಬೈ ಬೇಡಿ please!!
thats all folks!!!!!
:-)