April 19, 2010

ರಾಮಚಂದ್ರಾಪುರ ಮಠದ ಗೋ ಶಾಲೆ

ಇತ್ತೀಚೆಗೆ ತೀರ್ಥಹಳ್ಳಿಗೆ ಹೋದಾಗ ಹೊಸನಗರ ದಲ್ಲಿರುವ ರಾಮಚಂದ್ರಾಪುರ ಮಠಕ್ಕೆ ಹೋಗಿದ್ದೆವು. ಈ ಮಠದಲ್ಲಿ ಭಾರತೀಯ ಗೋ ತಳಿಗಳ ಸಂರಕ್ಷಣಾ ಕಾರ್ಯ ನಡೆಯುತ್ತಿದೆ. ಮಠದ ಆವರಣ ಉತ್ತಮ ನೀರಾಶ್ರಯ ಭೂಮಿಯನ್ನು ಒಳಗೊಂಡಿದ್ದು ಗೋವುಗಳಿಗೆ ಬೇಕಾದ ಹಸಿರು ಹುಲ್ಲು ಇಲ್ಲೇ ಬೆಳೆಯುತ್ತದೆ. ಕೊಟ್ಟಿಗೆ, ಹಟ್ಟಿಯನ್ನು clean ಆಗಿ ಇಡಲಾಗಿದ್ದು, ಅವುಗಳ ಗೋಡೆಗಳ ಮೇಲೆ ಮುದ್ದಾದ ಚಿತ್ತರಗಳನ್ನೂ ಬರೆದಿದ್ದಾರೆ. ಉತ್ತಮ ಹಾಗೂ ವಿಶಿಷ್ಟ ಗುಣದ ದೇಶಿಯ ತಳಿಗಳ ಗೋವುಗಳ ಸಂಗ್ರಹವನ್ನು ಇಲ್ಲಿ ನೋಡಬಹುದು. ಶ್ರೀ ರಾಘವೇಶ್ವರ ಸ್ವಾಮಿಗಳು ಕೈಗೊಂಡ ಕಾಯಕವು ಅತ್ಯಂತ ಶ್ಲಾಘನೀಯ. ದೇಶ ವಿದೇಶಗಳಿಂದ ಜನರು ಇಲ್ಲಿಗೆ ಭೇಟಿ ನೀಡಿ ತಮಗಾಗುವಷ್ಟು ಧನ ಸಹಾಯ ಕೂಡ ಮಾಡುತ್ತಾರೆ. ಹಿಂದಿ-ಇಂಗ್ಲೀಷ ಮಾತಾನಾಡುವ ಯುವಕರು ಅತ್ಯಂತ ಖುಶಿಯಿಂದ ಮಠದ ವಿವರವನ್ನು ಒದಗಿಸುತ್ತಾರೆ. ಸಾವಯವ ಪದ್ದತಿಯಲ್ಲಿ ಬೆಳೆಸಿದ ಅರಿಶಿನ ಪುಡಿ, ಕಶಾಯದ ಪುಡಿ, ಔಷಧೀಯ ಪುಡಿಗಳು, ಗೋಮೂತ್ರ, ಜೇನುತುಪ್ಪ , ಗಂಧದ ಕಡ್ಡಿ ಇಲ್ಲಿ ಲಭ್ಯ.
 ರೋಗ ಪೀಡಿತ / stray ಹಸುಗಳನ್ನೂ (ಕೆಲವಕ್ಕೆ ಬೆನ್ನಿನಿಂದ ಮೂರನೆ ಕಾಲು ಬಂದಿತ್ತು, ಕೆಲವಕ್ಕೆ ಕಾಲಿನ ಬುಡಕ್ಕೆ(foot)ಗೆ ಏನೋ ರೋಗ ಬಂದಿತ್ತು, ಕೆಲವು ಹಸುಗಳ ಕಣ್ಣಿನಿಂದ ಕೀವು ಒಸರುತ್ತಿತ್ತು, ಸುಮಾರು ಕಣ್ಣು ಕಾಣದೇ ಇರುವ ಹಸು ಕರುಗಳೂ ಇದ್ವು)ಇಲ್ಲಿ ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಲಾಗುತ್ತದೆ.
ಮಠದ ಆವರಣ ತುಂಬ ಸ್ವಚ್ಛವಾಗಿಡಲಾಗಿದೆ. ಭೇಟಿ ನೀಡಿದವರಿಗೆಲ್ಲ ಬಿಸಿ ಬಿಸಿ ಕಶಾಯ ನೀಡುತ್ತಾರೆ. ಅಲ್ಲಿ ತಂಗುವ ವ್ಯವಸ್ಥೆ ಕೂಡ ಇದೆ.
ಮಠದ / ಗೋ ಶಾಲೆಯ ಹೆಚ್ಚಿನ ಭಾಗವನ್ನು ಶ್ರೀಕಾಂತ್ video ದಲ್ಲಿ ಸೆರೆ ಹಿಡಿದಿದ್ದರಿಂದ, ಇಲ್ಲಿ ಕೆಲವೇ ಫೋಟೊಗಳನ್ನು ಹಾಕಿದ್ದೇನೆ.


Entrance

ಆಕಳು ಕರು.


ಹಿಂಬಾಗಿಲಿನಲ್ಲಿರುವ ಕಟ್ಟೆ. ಅದರಲ್ಲಿ ಪುಟ್ಟ ನಂದಿ .ನೆಲದ ಮೇಲೆ ಸುತ್ತಲೂ ತುಲಸಿ ಗಿಡಗಳು



gigantic
ಎಲ್ಲರೂ ತುಂಬಾ ಸಾಧುಸ್ವಭಾವದವರು, ನಮ್ಮೆಲ್ಲರಿಂದ ನೇವರಿಸಿಕೊಳ್ಳುವ ಆಸಕ್ತಿ. ನಾವೂ enjoy ಮಾಡಿದ್ವಿ. :-) ಗೋಡೆ ಮೇಲಿನ ಚಿತ್ತಾರ ಸ್ವಲ್ಪ ಕಾಣಿಸುತ್ತಿದೆ.

ಬರಗೂರು...ತಮಿಳುನಾಡಿನಿಂದ ಬಂದ ತಳಿ

ಇದರ ಕೊಂಬು ನನಗೆ ತುಂಬಾssssss ಇಷ್ಟ

ಕಾಂಗಯಂ ಜಾತಿಯ ತಳಿ. ಮಾಲು ನಿಹಾ ಏನಾದರು ತಂದಿದ್ದಾರಾ ಅಂತ ಕುತೂಹಲದಿಂದ ಅವರೆಲ್ಲ ಆ ಕಡೆ ತಿರುಗಿದಾಗ

ಇದರ coat ನ sheen ನನಗೆ ತುಂಬಾ ಇಷ್ಟವಾಯ್ತು. ಒಳ್ಳೆ ವೆಲ್ವೆಟ್ ತರಹ ಮೈ. ಕೊಂಬು ನೋಡಿ!!!!

ಮುದ್ದು ಮುದ್ದು.



Oh!! just look at him. Magnificant ಅಲ್ವಾ?

ಪತಿ - ಪತ್ನಿ ಔರ್ wow


ನನ್ನ ಶ್ರೀಕಾಂತ್ and ಗೋವು (ಸಿರಸಿ-ಸಿದ್ದಾಪುರದ (north kanara)ಕೊಂಕಣಿಯಲ್ಲಿ ಗಂಡನಿಗೆ ಗೋವ್ ಅಂತಲೂ ಸಂಭೋಧಿಸುತ್ತಾರೆ.)hehehe



ಸಮ್ರಾಟ್ another pose. ನಮಗೆ ಸೊಪ್ಪ್ ಹಾಕಲಿಲ್ಲ :-) 


ತಲೆಯ shape ನೋಡಿ!! unique ಆಗಿದೆಯಲ್ವಾ?


ಇದು ಸಮ್ರಾಟ್ ನನ್ನ favorite of the lot. ಮುಟ್ಟಲಿಕ್ಕೆ ಬಿಡುವುದಿಲ್ಲ. ಸಿಟ್ಟಿನ ಎತ್ತು.
(hey!! ಇದು ನನ್ನ 50 ನೇ ಪೋಸ್ಟ್. did not think i would manage it. ಥ್ಯಾಂಕ್ಸ್ to ’ಶ್ರೀಕಾಂತ್ &'ರಘು ಅಪಾರ' for their confidence in my ability to write in kannada)


:-)

21 comments:

  1. Nice.. Chanagidave.. :-)

    Aa muddu muddu white dana nodi.. nimmannE nodi nagaaDtha ide.. :D

    ReplyDelete
  2. ನಮಸ್ಕಾರ
    ತುಂಬಾ ಕುಶಿ ಆಯ್ತು ನೀವು ಗೋ ಶಾಲೆಗೆ ಭೇಟಿಕೊಟ್ಟಿದ್ದು..
    ಆ ಕಾಂಕ್ರೇಜ್ ತಳಿಯ ಎತ್ತು ವಿಕ್ರಾಂತ್ ಅಲ್ಲ ಸಾಮ್ರಾಟ್ ಅಂತ.ಅದು ವಿಶ್ವ ಗೋ ಸಮ್ಮೇಳನದ ಅಧ್ಯಕ್ಷತೆ ವಹಿಸಿದಂತೆ ವಿರಾಜಿಸಿತ್ತು.

    ReplyDelete
  3. thanks Raghavendra Hegde!!!!
    :-)
    malathi S

    ReplyDelete
  4. Wow..Samrat.namage illindale maTada goshaaleyannu torisiddakke thanks:)
    Nice to see u too there..
    Congrats and gudluck..Enjoy Blogging:)

    ReplyDelete
  5. ತುಂಬ ಚೆನ್ನಾಗಿದೆ. ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು

    ReplyDelete
  6. congrats for the fastest fifty malathi!
    ~apara

    ReplyDelete
  7. ಬಹಳ ಸುಂದರವಾಗಿದೆ.

    ReplyDelete
  8. ಬಹಳ ಸುಂದರವಾದ ವಾತವರಣವಿತ್ತು.....
    ತುಂಬಾ ಇಷ್ಟವಾಯಿತು....
    ಪರಿಚಯಿಸಿದ್ದಕ್ಕೆ ಧನ್ಯವಾದಗಳು....
    50 ಮಾಲತಿಗೆ ಶುಭಾಷಯಗಳು...

    ReplyDelete
  9. malatiyavare,
    ee mathada bagge tiLididde indu bahalastu tiLisidiri dhanyavadagaLu..

    tadavaada anisikegaLige kshame irali itteechege kelasadottadadalli muLugiddevu

    ReplyDelete
  10. ಬ್ಲೊಗ್ ಅರ್ಧ ಶತಕವೀರವನಿತೆಗೆ ಶುಭಾಶಯಗಳು ಮತ್ತು ಅಭಿನ೦ದನೆ.
    ಇನ್ನು ತಮ್ಮ ವಿವಿಧಗೋವು ತಳಿಗಳ ಚಿತ್ರಪರಿಚಯದ ಲೇಖನ ತು೦ಬಾ ಚೆನ್ನಾಗಿ ಬ೦ದಿದೆ. ಚಿತ್ರಗಳು ಮನವನ್ನ ಸೂರೆಗೊ೦ಡವು. ತಮಗೂ ಶ್ರೀಕಾ೦ತರಿಗೂ ಧನ್ಯವಾದಗಳು. ಸಮಯ ಸಿಕ್ಕಾಗ ವಿಡೀಯೊ ಸಹಾ ಏರಿಸಿ.
    ತಮ್ಮನ್ನು ಪ್ರೋತ್ಸಾಹಿಸಿ ನಮಗೆ ಈ ಬ್ಲೊಗ್-ನ ರಸಸ್ವಾದನೆ ಮಾಡಳು ಕಾರಣರಾದ ಶ್ರೀಕಾ೦ತರಿಗೂ ಮತ್ತು ರಘುರವರಿಗೂ ವ೦ದನೆಗಳು.

    ReplyDelete
  11. Awesome post with great pictures!

    And congrats on reaching 50! Here's to many more! :-)

    ReplyDelete
  12. thankyou...thankyou...thankyou
    ಎಲ್ಲರಿಗೂ
    :-)
    ಮಾಲತಿ ಎಸ್.

    ReplyDelete
  13. ದೇಶೀ ಗೋ ತಳಿಗಳನ್ನು ಉಳಿಸಿ ರಕ್ಷಿಸಲು ರಾಮಚಂದ್ರಾಪುರ ಮಠ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಗಳ ನೇತೃತ್ವದಲ್ಲಿ ಶ್ರಮವಹಿಸುತ್ತಿದೆ. ಲೇಖನಕ್ಕೆ ಧನ್ಯವಾದಗಳು. ನಿಮ್ಮ ಐವತ್ತನೆ ಬರಹಕ್ಕೆ ಅಭಿನಂದನೆಗಳು. ಹೀಗೆ ಬರೆಯುತ್ತಿರಿ

    ReplyDelete
  14. ರಾಮಚಂದ್ರಾಪುರದ ಮಠದಲ್ಲಿ ಪತಿ ಪತ್ನಿ ಔರ್ COW...
    hahaha....ಬಹಳ ಚನ್ನಾಗಿದೆ ಮಾಲತಿ...ನಿಮ್ಮ ಎರಡು ಬ್ಲಾಗ್ ಪೋಸ್ಟ್ ಗಳು ಮಿಸ್ಸ್ ಆದ್ವು..ಸಮಯ ಮಾಡ್ಕೊಂಡು ಓದ್ತೀನಿ,,,
    ಫೋಟೋಸ್ ಮತ್ತೆ ಲೇಖನ as usual inter-resting.

    ReplyDelete
  15. ದೀಪಸ್ಮಿತಾ!!
    ಧನ್ಯವಾದಗಳು. ನಿಮ್ಮ ನಾಗಮಂಡಲ ಸಚಿತ್ರ ಲೇಖನ ಸಖತ್ತಾಗಿದೆ. ಹಳೆ ನೆನಪುಗಳು ಮರುಕಳಿಸಿದವು.

    @ ಡಾ. Azad
    :-)
    cow ಅಲ್ಲ ಅದು. ಹೀ ಹೀ ಹೀ
    comment ಗೆ ಥ್ಯಾಂಕ್ಸ್.
    ನಿಮ್ಮ ಫೊಟೊ ನೋಡ್ದೆ..ಕುವೈತ್ ಕನ್ನಡ ಕೂಟದಲ್ಲಿ
    ಮಾಲತಿ ಎಸ್.

    ReplyDelete
  16. ಮಾಲತಿ ಅವರೆ,

    ಬ್ಲಾಗಿನ ೫೦ನೇ ಪೋಸ್ಟಿಗೆ ನನ್ನ ಅಭಿನಂದನೆಗಳು. ಹಲವಾರು ಸಾಮಾಜಿಕ ಕಳಕಳಿಯ ವಿಚಾರಗಳನ್ನು ಮುಂದಿಟ್ಟೊಕೊಂಡು ಮನಮುಟ್ಟುವಂತೆ ಬರೆಯುತ್ತಿದ್ದೀರಿ. ಅಭಿನಂದನೆಗಳು...

    ಹಸುವಿನ ಬಗ್ಗೆ ಅಪರ ಪ್ರೀತಿ ಇಟ್ಟಿರುವ ಒಂದು ಧಾರ್ಮಿಕ ಮಠದ ಇಂತಹ ಗೋರಕ್ಷಣಾ ಕಾರ್ಯಕ್ರಮ ಶ್ಲಾಂಘನೀಯ.

    ವಿಲಾಯತಿ ಹಸುಗಳ ಮುಂದೆ ಬಡಕಲಾಗುತ್ತಿರುವ ನಮ್ಮ ನಾಟಿ ಗೋವುಗಳನ್ನು ಕಾಪಾಡಬೇಕಿದೆ. ನಮ್ಮ ತಳಿಗಳ ಹಾಲಿನಲ್ಲಿ ರೋಗ ರಕ್ಷಣಾ ರಸಯನಿಕಗಳು ಹೇರಳವಾಗಿರುವುದು ಇದಾಗಲೇ ಜನ್ಯವಾಗಿದೆ.

    ಅಂತೆಯೇ ಗಿರಿಧಾಮಗಳಿಗೋ, ಕಡಲತಡಿಗೋ, ರೇಸೋರ್ಟುಗಳಿಗೋ ಜಾಲಿಯಾಗಿ ಟ್ರಿಪ್ ಹೊಡೆಯುವ ಇಂದಿನ ಸಂಸಾರಗಳಿಗೆ, ವಿಭಿನ್ನವಾಗಿ ಇಂತಹ ಕ್ಷೇತ್ರಗಳಿಗೆ ಪ್ರೀತಿಯಿಂದ ಹೋಗುವ ನಿಮ್ಮ ಕುಟುಂಬವೂ ಆದರ್ಶಪ್ರಯವಾಗಲಿ...

    ಬ್ಲಾಗು ೫೦... ೧೦೦.. ೧೦೦೦೦೦೦೦೦೦೦೦೦... ಹೀಗೆ ಹಬ್ಬಲಿ.

    ಅಭಿಮಾನಿ ಸಂಘದ ಪರವಾಗಿ.,
    ಬದರಿನಾಥ ಪಲವಳ್ಳಿ

    ReplyDelete
  17. thank you badari bhaiyyaa!!
    abhimaani sangha?? yaavudappaa adu?
    :-)
    malathi S

    ReplyDelete
  18. ಮಾಲತಿಯವರೆ...

    ನಿಮ್ಮ ಐವತ್ತನೇ ಪೋಸ್ಟಿಗಾಗಿ ಅಭಿನಂದನೆಗಳು...!
    ನಿಮ್ಮ ಬರವಣಿಗೆ ಆಪ್ತವಾಗಿರುತ್ತದೆ..

    ದೇಶಿ ತಳಿಗಳನ್ನು ಉಳಿಸುವ ಕಾರ್ಯಕ್ರಮ ತುಂಬಾ ಉತ್ತಮವಾದದ್ದು...
    ಅದಕ್ಕಾಗಿ ಸ್ವಾಮಿಜೀಯವರನ್ನು ಅಭಿನಂದಿಸೋಣ...
    ಅವರೊಡನೆ ಕೈಜೋಡಿಸೋಣ..

    ಚಂದದ ಫೋಟೊ, ಲೇಖನಕ್ಕಾಗಿ ಅಭಿನಂದನೆಗಳು..

    ಕೊನೆಯ ಫೋಟೊದ "ಕೋಡು" ಬಹಳ ಇಷ್ಟವಾಯಿತು...

    ReplyDelete