ನಿನ್ನೆ ಸಂಜೆ ಎರಡು ಗಂಟೆಗಳ ಕಾಲ , ತಮ್ಮ ವಿಶಿಷ್ಟ ಸೂಫಿ ಸಂಗೀತದಿಂದ ನಮ್ಮನೆಲ್ಲ ರಂಜಿಸಿದರು,ಬಿಕಾನೇರ್ (ರಾಜಸ್ಥಾನ್) ಬಳಿಯ ಪುಟ್ಟ ಹಳ್ಳಿ ಪೂಗಲ್ ನಿಂದ ದೇಶ ವಿದೇಶಗಳಲ್ಲಿಯೂ ಅವರ ಹಾಡುಗಳಿಂದ ಪ್ರಖ್ಯಾತರಾದ ಮೀರ್ ಮುಖ್ತೀಯಾರ್ ಅಲಿ.
ಹರೀ..ಮೌಲಾ....ರಾಮ್...ರಹೀಮ್, ಅಲೀ...ಬಜರಂಗ್ ಬಲೀ....ಹೀಗೆ ಸಾಗಿತ್ತು ಅವರ ಹಾಡಿನ ಪ್ರಯಾಣ. ಸಂಗೀತಕ್ಕೆ ಯಾವುದೇ ಅಡೆತಡೆಗಳಿಲ್ಲ ಅಲ್ಲವೇ? music is so divine
ಚಿತ್ರಕಲಾ ಪರಿಷದ್ ನ ಬಯಲು ಉದ್ಯಾನದಲ್ಲಿ ನಡೆದ ಈ ಸಂಗೀತ ಮಂಜರಿ ಕಾರ್ಯಕ್ರಮದಲ್ಲಿ, ಕೇಳುಗರು ಅಲಿಯವರ ಹಾಡು, ಸಾರಂಗಿ, ತಬಲಾ, ಢೋಲಕ್, ಹಾರ್ಮೋನಿಯಮ್ ನ ಸಾಥ್ ಗೆ ತಲೆ ದೂಗಿಸುತ್ತ ಇದ್ದರೆ, ಅಲ್ಲಿನ ಮರಗಿಡಗಳು ಇನಿತೂ ಅಲ್ಲಾಡದೇ ಸಂಗೀತವನ್ನು ಕೇಳುತ್ತಿದ್ದವು. ವೆಂಡರ್ ಕಣ್ಣು ಪುಸ್ತಕದ ಬರಹಗಾರರು-ವಿಶ್ವ ವಿಖ್ಯಾತ ಛಾಯಾಗ್ರಾಹಕರು ಕೆ. ಶಿವು ಬಂಡೆಯ ಮೇಲೆ ಕೆಳಗೆ ಚುರುಕಾಗಿ ಓಡಾಡುತ್ತ ’perfect moment' ನ ಫೋಟೋ ಕ್ಲಿಕ್ಕಿಸುವುದನ್ನು ನೋಡುವುದೂ ಕೂಡ ಒಂದು ವಿಶೇಷವಾಗಿತ್ತು.
ಸಂತ ಕಬೀರ್ ದಾಸರ ’ಜಬ್ ಮೈ ಥಾ ತಬ್ ಹರಿ ನಹಿ ,ಅಬ್ ಹರೀ ಹೈ ಮೈ ನಹೀಂ...ಸಬ್ ಅಂಧಿಯಾರಾ ಮಿಠ ಗಯಾ ಜಬ್ ದೀಪಕ್ ದೇಖಿಯಾ ಮಹೀಂ(here mein- me, refers to our ego)ಅದರ ಅರ್ಥವನ್ನು ಹಾಡಿನ ಮಧ್ಯ ವಿವರಿಸುತ್ತ ಅವರ ವಿಶಿಷ್ಟ ಶೈಲಿಯಲ್ಲಿ ಹಾಡುತ್ತಲಿದ್ದರೆ, ನಮಗೆ ಸಮಯದ ಪರಿವೇ ಆಗಲಿಲ್ಲ. ಮೇರೆ ಪಿಯಾ ಘರ್ ಆಯೆ ಓ ಲಾಲನಿ ಹಾಡುವಾಗ ಕೇಳುಗರೂ ಅವರೊಂದಿಗೆ ಚಪ್ಪಾಳೆ ತಟ್ಟುತ್ತ ದನಿ ಮೇಳೈಸಿದರು.
ಚದರಿಯಾ ಝಿನಿ ರೆ ಝಿನಿ, ಹೈ ರಾಮ ರಸ ಭಿನಿ....ಮನುಷ್ಯ ಜೀವನವನ್ನು ಬಟ್ಟೆಗೆ ಹೋಲಿಸುತ್ತ,ಹತ್ತಿಯು, ಬೀಜ ದಿಂದ ದರ್ಜಿಯವರೆಗಿನ ತನಕ ಕೈಗೊಂಡ ಪ್ರವಾಸದ ಕತೆ ಹೇಳುತ್ತ ಹಾಡಿದ ಜೈಪುರಿ ಭಾಷೆಯ ಹಾಡು ನನಗೆ ತುಂಬಾ ಇಷ್ಟ ಆಯ್ತು. ಒಂದು ತುಂಬಾ ಚೆನ್ನಾದ ಪಂಜಾಬಿ ಹಾಡಿತ್ತು. ಅದರ lyrics ಮರೆತು ಹೋಗಿದೆ. ಅದರ ಅರ್ಥ ಹೀಗಿದೆ. ಒಂದು ಸಲ ವೃಕ್ಷಕ್ಕೆ ಬೆಂಕಿ ಬೀಳುತ್ತೆ. ಆದರೆ ಆ ವೃಕ್ಷದಲ್ಲಿ ಗೂಡು ಕಟ್ಟಿ ವಾಸಿಸುವ ಪಕ್ಷಿಗಳು ಹಾರಿ ಹೋಗದೇ ಮರದಲ್ಲೆ ಉಳಿಯುತ್ತವೆ. ಮರ ಕೇಳುತ್ತೆ..ನನಗಾದರೆ ನನ್ನ ಬೇರುಗಳು ನೆಲದಲ್ಲಿ ಸೇರಿಕೊಂಡಿವೆ, ಆದರೆ ನೀನು ರೆಕ್ಕೆಗಳ ಸಹಾಯದಿಂದ ಹಾರಿ, safe ಜಾಗಕ್ಕೆ ಹೋಗಬಹುದಲ್ಲವಾ?? ಅದಕ್ಕೆ ಪಕ್ಷಿ ಹೇಳುತ್ತೆ, ’ಮೊಟ್ಟೆಯಿಂದ ಮರಿಯಾಗುವ ತನಕ ನನಗೆ ರಕ್ಷಣೆ ಕೊಟ್ಟಿದ್ದಿಯಾ, ನಿನ್ನ ಫಲ ಪುಷ್ಪಗಳಿಂದ ನನಗೆ ಆಹಾರ ಒದಗಿಸಿದ್ದೀಯಾ, ಈಗ ಆಪತ್ಕಾಲದಲ್ಲಿ ನಿನ್ನನ್ನು ಬಿಟ್ಟು ಹೋಗುವುದು ನನ್ನ ಧರ್ಮವಲ್ಲ’...ಈ ಹಾಡು ತುಂಬ racyಯಾಗಿತ್ತು.
ಹಿಂದಿನ ಸಲ ಅವರ ಕಾರ್ಯಕ್ರಮ miss ಮಾಡಿದ್ದೆ. ಈ ಸಲ iam glad i could attend. ಈ ಅನುಭವ ವರ್ಣಿಸಲಸಾಧ್ಯ. ಕೇಳೆತೀರಬೇಕು.
ವಾರ್ತಾ ಇಲಾಖೆ ಹಾಗೂ ಚಿತ್ರಕಲಾ ಪರಿಷದ್ ಜಂಟಿ ಯಾಗಿ ಈ ಕಾರ್ಯಕ್ರಮವನ್ನು, ನಿನ್ನೆ ದಿನಾಂಕ 10.04.2010 ರಂದು ಆಯೋಜಿಸಿತ್ತು
:-)


ನನಗೆ ಮಿಸ್ ಆಯಿತು
ReplyDeleteಇಂಥಹ ಎಷ್ಟೋ ಕಾರ್ಯಕ್ರಮಗಳು ವಿದೇಶಕ್ಕೆ ಬಂದಿದ್ದರಿಂದ ಸಿಗುತ್ತಿಲ್ಲ
ಇದನ್ನು ನಿಮ್ಮಂಥವರು ಬ್ಲಾಗಿನಲ್ಲಿ ಹಾಕುತ್ತಿರ ಅದೇ ಸಂತೋಷ
thanks for sharing the melody & joy you experienced!
ReplyDeleteಮಾಲತಿ ಮೇಡಮ್,
ReplyDeleteನೀವು ನನಗೆ ಕಳಿಸಿದ ಮೇಲ್ ನೋಡಲು ತಡವಾಗಿದ್ದಕ್ಕೆ ಕ್ಷಮೆಯಿರಲಿ. ನಿಮ್ಮ ಬ್ಲಾಗಿನಲ್ಲಿ ನನ್ನ ಫೋಟೊಗ್ರಫಿ ಬಗೆ ಬರೆದಿದ್ದು ನನಗೆ ಖುಷಿ ವಿಚಾರ. ಅದಕ್ಕಾಗಿ ನಿಮಗೆ ಧನ್ಯವಾದಗಳು. ಬಿಡುವಾದಾಗ ನನ್ನ ಬ್ಲಾಗನ್ನು ನೋಡಿ..
http://www.chaayakannadi.blogspot.com/
ಶಿವು.ಕೆ