ಇತ್ತೀಚೆಗೆ ತೀರ್ಥಹಳ್ಳಿಗೆ ಹೋದಾಗ ಹೊಸನಗರ ದಲ್ಲಿರುವ ರಾಮಚಂದ್ರಾಪುರ ಮಠಕ್ಕೆ ಹೋಗಿದ್ದೆವು. ಈ ಮಠದಲ್ಲಿ ಭಾರತೀಯ ಗೋ ತಳಿಗಳ ಸಂರಕ್ಷಣಾ ಕಾರ್ಯ ನಡೆಯುತ್ತಿದೆ. ಮಠದ ಆವರಣ ಉತ್ತಮ ನೀರಾಶ್ರಯ ಭೂಮಿಯನ್ನು ಒಳಗೊಂಡಿದ್ದು ಗೋವುಗಳಿಗೆ ಬೇಕಾದ ಹಸಿರು ಹುಲ್ಲು ಇಲ್ಲೇ ಬೆಳೆಯುತ್ತದೆ. ಕೊಟ್ಟಿಗೆ, ಹಟ್ಟಿಯನ್ನು clean ಆಗಿ ಇಡಲಾಗಿದ್ದು, ಅವುಗಳ ಗೋಡೆಗಳ ಮೇಲೆ ಮುದ್ದಾದ ಚಿತ್ತರಗಳನ್ನೂ ಬರೆದಿದ್ದಾರೆ. ಉತ್ತಮ ಹಾಗೂ ವಿಶಿಷ್ಟ ಗುಣದ ದೇಶಿಯ ತಳಿಗಳ ಗೋವುಗಳ ಸಂಗ್ರಹವನ್ನು ಇಲ್ಲಿ ನೋಡಬಹುದು. ಶ್ರೀ ರಾಘವೇಶ್ವರ ಸ್ವಾಮಿಗಳು ಕೈಗೊಂಡ ಕಾಯಕವು ಅತ್ಯಂತ ಶ್ಲಾಘನೀಯ. ದೇಶ ವಿದೇಶಗಳಿಂದ ಜನರು ಇಲ್ಲಿಗೆ ಭೇಟಿ ನೀಡಿ ತಮಗಾಗುವಷ್ಟು ಧನ ಸಹಾಯ ಕೂಡ ಮಾಡುತ್ತಾರೆ. ಹಿಂದಿ-ಇಂಗ್ಲೀಷ ಮಾತಾನಾಡುವ ಯುವಕರು ಅತ್ಯಂತ ಖುಶಿಯಿಂದ ಮಠದ ವಿವರವನ್ನು ಒದಗಿಸುತ್ತಾರೆ. ಸಾವಯವ ಪದ್ದತಿಯಲ್ಲಿ ಬೆಳೆಸಿದ ಅರಿಶಿನ ಪುಡಿ, ಕಶಾಯದ ಪುಡಿ, ಔಷಧೀಯ ಪುಡಿಗಳು, ಗೋಮೂತ್ರ, ಜೇನುತುಪ್ಪ , ಗಂಧದ ಕಡ್ಡಿ ಇಲ್ಲಿ ಲಭ್ಯ.
ರೋಗ ಪೀಡಿತ / stray ಹಸುಗಳನ್ನೂ (ಕೆಲವಕ್ಕೆ ಬೆನ್ನಿನಿಂದ ಮೂರನೆ ಕಾಲು ಬಂದಿತ್ತು, ಕೆಲವಕ್ಕೆ ಕಾಲಿನ ಬುಡಕ್ಕೆ(foot)ಗೆ ಏನೋ ರೋಗ ಬಂದಿತ್ತು, ಕೆಲವು ಹಸುಗಳ ಕಣ್ಣಿನಿಂದ ಕೀವು ಒಸರುತ್ತಿತ್ತು, ಸುಮಾರು ಕಣ್ಣು ಕಾಣದೇ ಇರುವ ಹಸು ಕರುಗಳೂ ಇದ್ವು)ಇಲ್ಲಿ ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಲಾಗುತ್ತದೆ.
ಮಠದ ಆವರಣ ತುಂಬ ಸ್ವಚ್ಛವಾಗಿಡಲಾಗಿದೆ. ಭೇಟಿ ನೀಡಿದವರಿಗೆಲ್ಲ ಬಿಸಿ ಬಿಸಿ ಕಶಾಯ ನೀಡುತ್ತಾರೆ. ಅಲ್ಲಿ ತಂಗುವ ವ್ಯವಸ್ಥೆ ಕೂಡ ಇದೆ.
ಮಠದ / ಗೋ ಶಾಲೆಯ ಹೆಚ್ಚಿನ ಭಾಗವನ್ನು ಶ್ರೀಕಾಂತ್ video ದಲ್ಲಿ ಸೆರೆ ಹಿಡಿದಿದ್ದರಿಂದ, ಇಲ್ಲಿ ಕೆಲವೇ ಫೋಟೊಗಳನ್ನು ಹಾಕಿದ್ದೇನೆ.
Entrance
ಆಕಳು ಕರು.
ಹಿಂಬಾಗಿಲಿನಲ್ಲಿರುವ ಕಟ್ಟೆ. ಅದರಲ್ಲಿ ಪುಟ್ಟ ನಂದಿ .ನೆಲದ ಮೇಲೆ ಸುತ್ತಲೂ ತುಲಸಿ ಗಿಡಗಳು
gigantic
ಎಲ್ಲರೂ ತುಂಬಾ ಸಾಧುಸ್ವಭಾವದವರು, ನಮ್ಮೆಲ್ಲರಿಂದ ನೇವರಿಸಿಕೊಳ್ಳುವ ಆಸಕ್ತಿ. ನಾವೂ enjoy ಮಾಡಿದ್ವಿ. :-) ಗೋಡೆ ಮೇಲಿನ ಚಿತ್ತಾರ ಸ್ವಲ್ಪ ಕಾಣಿಸುತ್ತಿದೆ.
ಬರಗೂರು...ತಮಿಳುನಾಡಿನಿಂದ ಬಂದ ತಳಿ
ಇದರ ಕೊಂಬು ನನಗೆ ತುಂಬಾssssss ಇಷ್ಟ
ಕಾಂಗಯಂ ಜಾತಿಯ ತಳಿ. ಮಾಲು ನಿಹಾ ಏನಾದರು ತಂದಿದ್ದಾರಾ ಅಂತ ಕುತೂಹಲದಿಂದ ಅವರೆಲ್ಲ ಆ ಕಡೆ ತಿರುಗಿದಾಗ
ಇದರ coat ನ sheen ನನಗೆ ತುಂಬಾ ಇಷ್ಟವಾಯ್ತು. ಒಳ್ಳೆ ವೆಲ್ವೆಟ್ ತರಹ ಮೈ. ಕೊಂಬು ನೋಡಿ!!!!
ಮುದ್ದು ಮುದ್ದು.
Oh!! just look at him. Magnificant ಅಲ್ವಾ?
ಪತಿ - ಪತ್ನಿ ಔರ್ wow
ನನ್ನ ಶ್ರೀಕಾಂತ್ and ಗೋವು (ಸಿರಸಿ-ಸಿದ್ದಾಪುರದ (north kanara)ಕೊಂಕಣಿಯಲ್ಲಿ ಗಂಡನಿಗೆ ಗೋವ್ ಅಂತಲೂ ಸಂಭೋಧಿಸುತ್ತಾರೆ.)hehehe
ಸಮ್ರಾಟ್ another pose. ನಮಗೆ ಸೊಪ್ಪ್ ಹಾಕಲಿಲ್ಲ :-)
ತಲೆಯ shape ನೋಡಿ!! unique ಆಗಿದೆಯಲ್ವಾ?
(hey!! ಇದು ನನ್ನ 50 ನೇ ಪೋಸ್ಟ್. did not think i would manage it. ಥ್ಯಾಂಕ್ಸ್ to ’ಶ್ರೀಕಾಂತ್ &'ರಘು ಅಪಾರ' for their confidence in my ability to write in kannada)
:-)



















