ಇದು ನಿಜವಾಗಿ ನಡೆದ ಘಟನೆ. ನಾವಾಗ ವರ್ಗವಾಗಿ ಉಜಿರೆಯ ಶಿವಾಜಿನಗರದಲ್ಲಿದ್ದೆವು. ನಮ್ಮವರ ಬ್ಯಾಂಕ್ ನಲ್ಲಿದ್ದ ಕಲೀಗ್ ಗೆ ನವ ದೆಹಲಿ ಗೆ ವರ್ಗವಾಗಿ ಅವರ ಮನೆಯಲ್ಲಿ ನಾವು ಬಾಡಿಗೆಗಿದ್ದೆವು. ದೊಡ್ಡದಾದ ಹಳೇ ಮನೆ. ಮನೆಯ ಸುತ್ತ ಮುತ್ತ ಸಾಕಷ್ಟು ಜಾಗ ಇದ್ದು, ಹಲಸು, ಮಾವಿನ ಹಾಗೂ ನಾಲ್ಕೈದು ತೆಂಗಿನ ಮರಗಳಿದ್ದವು. ಮನೆಯ ಸುತ್ತ ದೊಡ್ಡ ಕಂಪೌಂಡ್ ಇದ್ದು, ಗಾಡಿ ಹೋಗಲು ದೊಡ್ಡದಾದ ಗೇಟ್ ಹಾಗೂ ಅದರ ಪಕ್ಕದಲ್ಲೇ ನಾವೆಲ್ಲ ಉಪಯೋಗಿಸುತ್ತಿದ್ದ ಚಿಕ್ಕ ಗೇಟ್. ಆ ಚಿಕ್ಕ ಗೇಟ್ ಮೂಲಕ ಒಂದು ಚಿಕ್ಕ ಕಪ್ಪು ಬಣ್ಣದ ನಾಯಿ ಮರಿ ಬರುತ್ತಿತ್ತು. ನಾನದಕ್ಕೆ ಬ್ಲ್ಯಾಕಿ ಅಂತ ಹೆಸರಿಟ್ಟಿದ್ದೆ. ಅಷ್ಟಾಗಿ ಕನ್ನಡ ಬರದಿದ್ದ ನನಗೆ ದನ-ಕರು, ನಾಯಿ, ಹಾವುಗಳೆ ಫ್ರೆಂಡ್ಸ್. :-) ಬ್ಲ್ಯಾಕಿಗೆ ನೀರು ದೋಸೆ ಅಂದರೆ ಇಷ್ಟ.
ಮನೆಯವರು ಬೈಕ್ ತೆಗೆದುಕೊಂಡು ಕಛೇರಿ ಗೆ ತೆರೆಳಿದ ಮೇಲೆ ಗೇಟ್ ಹಾಕಲು ಹೋದ ನನಗೆ ಬ್ಲ್ಯಾಕಿ ಬರುವುದು ಕಾಣಿಸಿತು. ಬೇಗ ಬಾ ಬ್ಲ್ಯಾಕಿ, ನಿನ್ನ ಇಷ್ಟದ ದೋಸೆ ಮಾಡಿದ್ದೇನೆ (ಕೊಂಕಣಿಯಲ್ಲಿ) ಅಂತ ಹೇಳಿದೆ. ಹೇಗೂ ದೊಡ್ಡ ಗೇಟ್ತೆರೆದೇ ಇದ್ದುದರಿಂದ ಅದರಿಂದ ಬ್ಲ್ಯಾಕಿ ಒಳಗೆ ಬರಲಿ ಅಂತ, ಅದು ತಲುಪುವವರೆಗೆ ಕಾಯ್ತಾ ಇದ್ದೆ. ಅಷ್ಟರೊಳಗೆ ರಭಸದಿಂದ ಬಂದ ಒಂದು ಎಸ್ಟೇಟ್ ಜೀಪ್ ಅದನ್ನು ಹಾಯ್ದು ಕೊಂಡು ಹೋಯ್ತು. ಬ್ಲ್ಯಾಕಿ ಅಂತ ಕಿರುಚಿ ಕಣ್ಣುಗಳನ್ನು ಎರಡು ಕೈ ನಿಂದ ಮುಚ್ಚಿಕೊಂಡೆ. ಬ್ಲ್ಯಾಕಿ ಊಳಿಡುವುದು ಕೇಳಿಸ್ತು. ನಿಧಾನವಾಗಿ ಕಣ್ಣು ತೆರೆದು ನೋಡಿದಾಗ, ಜೀಪ್ ಅದರ ಹಿಂಬಾಗ ಮೇಲೆ ಹರಿದು, ಆ ಭಾಗ ಕಾಲುಗಳ ಸಹಿತ ಪೂರ್ತಿ ಜಜ್ಜಿ ಹೋಗಿತ್ತು. ಮೂಕವಾಗಿ ನನ್ನೆಡೆಗೆ ನೋಡುತ್ತ ಅದು ರೋದಿಸುತ್ತಿತ್ತು. ನಾನು ಅದರ ಜತೆ ಅಳ್ತಾ ಇದ್ದೆ. ಎಲ್ಲಿದ್ದವೋ ನಾಲ್ಕೈದು ನಾಯಿಗಳು ಬಂದು ಅದರ ಸುತ್ತ ಮುತ್ತ ತಿರುಗಿ ಅದನ್ನು ಎಬ್ಬಿಸುವ ಪ್ರಯತ್ನ ಮಾಡಿದವು. ಅದು ಏಳದೆ ಇದ್ದುದರಿಂದ ಅದರ ಜತೆ ಒಂದೈದು ನಿಮಿಷ ಅವೂ ಊಳಿಟ್ಟವು. ಅಮೇಲೆ ಎರಡು ನಾಯಿ ಹಿಂಬಾಗ ಕಚ್ಚಿ ಹಿಡಿದವು, ಮೂರು ನಾಯಿ ಕುತ್ತಿಗೆ ಭಾಗವನ್ನು ಹಿಡಿದು ಅದರ ಕುತ್ತಿಗೆ ಮುರಿಯುವ ತನಕ ಎಳೆದಾಡಿದವು. ಅದು ಕೊನೆಯುಸಿರೆಳೆಯಿತು. ನಾಯಿಗಳು ಪುನ: ಅದನ್ನು ಕಾಲಿನಿಂದ ತಡಕಾಡಿ, ಅದು ಅಲುಗದೇ ಇರುವುದು ಖಾತರಿ ಮಾಡಿ, ಬಂದ ದಾರಿಯಲ್ಲಿ ಹೋಗಿ ಬಿಟ್ಟವು. ನಾನು ಮಾತ್ರ, ಬ್ಲ್ಯಾಕಿಯ ಕಣ್ಣಿನಿಂದ ಒಸರಿದ ಕರುಣಾಜನಕ ನೋಟ ಮತ್ತು ನನ್ನ ಅಸಹಾಯಕತೆಯನ್ನು ನೆನೆಸಿಕೊಂಡು, ನಮ್ಮ ತೋಟಕ್ಕೆ ಪಾತಿ ಮಾಡುವ ಅಣ್ಣಿ ಗೌಡ ಬರುವ ತನಕ ಅಲ್ಲೆ ನಿಂತಿದ್ದೆ. ಅಳಬೇಡಿ ಒಡತಿ ಅಂದ ಅಣ್ಣಿ ಗೌಡ, ಹತ್ತಿರದ ತೋಟದಲ್ಲಿ ಕೆಲಸಕ್ಕಿರುವ ಇನ್ನಿಬ್ಬರು ಕೆಲಸಗಾರನ್ನು ಕರೆದು ತಂದು, ಗೇಟ್ ಬಳಿಯಿರುವ ತೆಂಗಿನ ಬುಡದಲ್ಲಿ ಗುಂಡಿ ತೆಗೆದು ಬ್ಲ್ಯಾಕಿ ಯನ್ನು ಅದರಲ್ಲಿ ಹೂತಿದರು. ಮಣ್ಣು ಹಾಕುವ ಮುಂಚೆ ಅದಕ್ಕೆ ಅಂತ ಇಟ್ಟ ನೀರು ದೋಸೆಯನ್ನು ಅದರ ಒಟ್ಟಿಗೆ ಮಣ್ಣು ಮಾಡಿದೆ. ನಾಯಿಗಳ ಹಿಂಡು ಕಂಡಾಗ ಹಾಗೂ ನೀರು ದೋಸೆ ಮಾಡಿದಾಗಲೆಲ್ಲ ನನಗೆ ಬ್ಲಾಕಿ ನೆನಪಿಗೆ ಬರುತ್ತದೆ.
ಪ್ರಾಣಿಗಳಲ್ಲಿಯೂ ದಯಾ ಮರಣದ ಪರಿಕಲ್ಪನೆ ಇರಬುಹುದಾ? ನಾನು ಅದಕ್ಕೆ ಸಾಕ್ಷಿ ಆಗಿದ್ದೇನಾ? ಗೊತ್ತಿಲ್ಲ.
ಪ್ರಾಣಿಗಳಲ್ಲಿಯೂ ದಯಾ ಮರಣದ ಕಲ್ಪನೆ ಇದೆ, ಅದಕ್ಕೆ ನೀವು ಬರೆದಿರೋದೆ ಸಾಕ್ಷಿ .....
ReplyDeleteಈ ತರಹ ದೃಶ್ಯ ಎದುರು ನಡೆದಾಗ ಮನಸಿಗೆ ತುಂಬಾ ನೋವಾಗುತ್ತೆ...
You made me cry today, Malathi. I am going to sleep tonight holding my Caesar tight all night. I have buried a dog with my own hands once several years ago... and it took me forever to come out of that trauma.
ReplyDeleteI always say this: If you have not experienced a dog's love, you have not experienced true love.
ಖಂಡಿತವಾಗಿ ಇದು ತುಂಬಾ ನೋವು ಕೊಡುವ ಸಂಗತಿ. ನೀವು ಯಾರನ್ನು ತುಂಬಾ ಇಷ್ಟ ಪಡುತ್ತಿರೋ ಅವರು ನಿಮ್ಮ ಕಣ್ಣ ಮುಂದೆಯೇ ಇನ್ನಿಲ್ಲವಾದಾಗ ಆಗುವ ದುಃಖ ಖಂಡಿತವಾಗಿ ಮರೆಯೋದು ತುಂಬ ಕಷ್ಟ. ನಮ್ಮ ಮನೆಯಲ್ಲಿ ನಮ್ಮೆಲ್ಲರಿಗೂ ಮರ್ಗದರ್ಷನವಗಿದ್ದ ಎಲ್ಲರಿಗೂ ಒಳ್ಳೆಯದನ್ನೇ ಬಯಸಿದ ಅಣ್ಣ ಒಂದಿನ ರಾತ್ರಿ ಕಾರ್ ಅಪಘಾತದಲ್ಲಿ ಇನ್ನಿಲ್ಲವಾದಾಗ ಅದೆಷ್ಟು ನೋವಾಯಿತು. ಈಗಲೂ ಅದನ್ನು ನೆನ್ಸಿದರು ಕಣ್ಣುಗಳಲ್ಲಿ ನೀರು ಬರುತ್ತೆ. ಜೀವನವೇ ಬೇಡ ಅನ್ನಿಸುತ್ತೆ.
ReplyDeleteGood post, as usual.
ReplyDeleteThe inference drawn is quite interesting and seems to be an original one.
Suggest that this be reported to the British and American Veterinary Associations'journals for publication, under Letters to the Editor column.
http://www.bva.co.uk/publications_and_resources/bvapublications.aspx
http://avmajournals.avma.org/loi/javma