ಇಡ್ಲಿ ಹಿಟ್ಟು ರೆಡಿ ಮಾಡಿದ್ದೆ. ಆದರೆ ಪುನಃ ಎರಡು ದಿನ ಇವರನ್ನು ಆಸ್ಪತ್ರೆಗೆ ಸೇರಿಸಬೇಕಾಯ್ತು. ಒಂದು 50,000 ಖರ್ಚು ಆಯ್ತು. ಚಿಕ್ಕವಳು ಆಸ್ಪತ್ರೆ ಖರ್ಚು ನೋಡಿ 'amma it is good that we dont have to ask other's for money' ಅಂದಾಗ ಹೌದು ಮಗಳೇ, thanks to his friend/colleague Salimath, for some decent investments and office insurance facility ಅಂದು...better take care of your health ಅಂತ ಕೂಡ ಸೇರಿಸಿದ್ದೆ. ಸಿಕ್ಕಾಪಟ್ಟೆ ದುಬಾರಿ ಔಷಧಿ. ಜನೌಷಧಿ ಇದ್ದುದಕ್ಕೆ ಬಚಾವ್. ಅಲ್ಲಿ ಸಿಗದಿದ್ದದ್ದು ನಮ್ಮ ಮನೆ ಬಳಿಯ ಮೆಡಿಕಲ್ ಸ್ಟೋರ್ ನವ ಸ್ವಲ್ಪ discount ಕೊಡುತ್ತಾರೆ. hepamerz ಅನ್ನುವ ಚಿಕ್ಕ sachet ಒಂದಕ್ಕೆ 365 ರೂ. ದಿನಕ್ಕೆ ಮೂರು ತೆಗೊಳ್ಳಲೇ ಬೇಕು ಮತ್ತು ಕೆಲ ಔಷಧಿ life long ಅಂದಿದ್ದಾರೆ....ಲೆಕ್ಕ ಹಾಕಿ. ಟೆಕ್ ಕೇರ್ friends, ಆರೋಗ್ಯ ನೆಗಲೆಕ್ಟ್ ಮಾಡಬೇಡಿ...ನಮ್ಮ ಆಫಿಸ್ ನವರೆಲ್ಲ ಈಗ ಅವರು health check up ಮಾಡಿಸಿಕೊಳ್ಳುತ್ತಿದ್ದಾರೆ.
ಹಾಗಾಗಿ ಇವತ್ತು ಇಡ್ಲಿ. ನೋಡಿದ್ರೆ ಚಟ್ನಿ ಮಾಡಲು ತೆಂಗಿನಕಾಯಿ ಇರಲಿಲ್ಲ. ನಿನ್ನೆನೆ ಮೂವರಿಗೂ 'ನಾಳೆ ಸಂಡೇ, ಆರಾಮಾಗಿ ಏಳಿ' ಮತ್ತು ಮಕ್ಕಳಿಗೆ 'ನಾಳೆ ನಿಮಗೆ ಬ್ರೇಕ್ ಏನೂ ಮಾಡಲಿಕ್ಕಿಲ್ಲ ನೀವು' just relax ಅಂದಿದ್ದೆ. ನನಗೆ ಚಳಿಗಾಲ ಯಾವತ್ತೂ ಇಷ್ಟ. ಮನೆಯಿಂದ ಹೊರ ಬೀಳುವಷ್ಟರಲ್ಲಿ ಮಳೇನೂ ಶುರು ಆಯ್ತು. ಮನೆ ಬಳಿಯ K P N ಸೂಪರ್ ಮಾರ್ಕೆಟ್ ಬೆಳಿಗ್ಗೆ ಬೇಗನೆ ತೆರೆಯುತ್ತೆ. ತುಂಬಾ ಜನ ಇರಲ್ಲ, ಮತ್ತು ರೋಡ್ ಕ್ರಾಸ್ ಮಾಡಲು ಸುಲಭ.
ಸರಿ ನಾನು ಜಪಾನ್ ನಲ್ಲಿ , ಹೂ ಅರಳಿರುವ ಚೆರ್ರಿ ಮರದಡಿಯಲ್ಲಿ ನಡೆಯುತ್ತಿದ್ದೇನೆ ಅಂತ imagine ಮಾಡುತ್ತಾ, (ನಮ್ಮ ಹೆಬ್ಬಾಳ ಸರ್ ಅವರ ಸೊಸೆ project ಮೇಲೆ ಜಪಾನ್ ಗೆ ಹೋಗಿದ್ದಾರೆ. ಅಲ್ಲಿಯ ಚೆಂದ ಚಿತ್ರಗಳನ್ನು status ನಲ್ಲಿ ಹಾಕ್ತಿದ್ದಾರೆ i always wanted to visi japan)), ಚಳಿಯನ್ನು ಎಂಜಾಯ್ ಮಾಡ್ತಾ ಹೋಗುತ್ತಿದೆ. ಒಂದು ಪುಟ್ಟ , ಇಬ್ಬರು ಮಕ್ಕಳಿರುವ ಜೋಡಿ ಹೆಗಲಿಗೆ ರಕ್ ಸ್ಯಾಕ್ ಏರಿಸಿ ಎಲ್ಲೋ ಟ್ರಿಪ್ ಹೊರತಟಿದ್ದರೇನೋ...ಮಕ್ಕಳು ತುಂಬಾ excite ಆಗಿದ್ದರು. ಖುಷಿ ಆಯ್ತು ಅವರನ್ನು ನೋಡಿ. ನಮ್ಮ ಜೀವನ ಇವರ ಲೀವರ್ ಕಾಯಿಲೆಯಿಂದ ಎಷ್ಟು ಬದಲಾಯ್ತು. ನನಗೂ ಮಕಳೊಂದಿಗೆ ಹೊರಗೆ ಹೋಗುವುದು ತುಂಬಾ ಇಷ್ಟ. ನನಗೆ friends ಅಂತ ಯಾರೂ ಇಲ್ಲ. ನನಗೆ ಅವರ company ಇಷ್ಟ. family ಯಾಗಿ ಹೊರಗೆ ಹೋಗುವುದು ಈಗ ಆಸ್ಪತ್ರೆ ಗೆ ಸೀಮಿತ ವಾಗಿದೆ. ನಮ್ಮದು ದೊಡ್ಡ ಗಾಡಿ, ಅಜಯ್ ಎಂಬೋ ಒಳ್ಳೆಯ ಸಾರಥಿ. ಆಸ್ಪತ್ರೆಗೆ ಹೋದರೆ ಅರ್ಧ ದಿನ ಅಥವಾ ಏನಾದರೂ parameters ಹೆಚ್ಚು ಕಡಿಮೆ ಇದ್ರೆ, ಔಷಧಿ, observation ಅಂತ ಅಡ್ಮಿಟ್ ಮಾಡೋದೂ ಇರುತ್ತೆ. ಗಾಡಿ ಸುಮ್ನೆ ಖಾಲಿ ಇರಬೇಕಲ್ಲ? ಹೇಗೂ ದುಡ್ಡು ಕೊಡುತ್ತೇವೆ. ಹಾಗಾಗಿ ಅಕ್ಕ ಅವಳ ಬೇಕರಿ ಸಾಮಾನು, ಅಥವಾ ಎಲ್ಲಾದರೂ ಹೋಗಿ time spend ಮಾಡಿ ಅಂತ ನಾನೇ ಕಳಿಸುತ್ತೇನೆ. ಆಸ್ಪತ್ರಯಲ್ಲಿ ಒಂದು attendee ಗೆ ಮಾತ್ರ ಪ್ರವೇಶ. Manipal Hospiral, kanakapura Road,ಆಸ್ಪತ್ರೆ ಸಿಬ್ಬಂದಿ ತುಂಬಾ ಕಾಳಜಿಯಿಂದ ನೋಡಿ ಕೊಳ್ಳುತ್ತಾರೆ ಆದ್ದರಿಂದ ನನಗೂ ಸ್ವಲ್ಪ ಆರಾಮ್ ಎನಿಸುತ್ತದೆ. ಅಲ್ಲಿ tension free ಒಳ್ಳೆಯ ನಿದ್ದೆ ಮಾಡುತ್ತೇನೆ. 🙂👍 ಹೊರ ದೇಶಕ್ಕೆ ಹೋಗಿ, 5 ಸ್ಟಾರ್ ಹೋಟೆಲ್ ವಾಸ ಅಂತ ಮನಸ್ಸಿಗೆ ಸಮಾಧಾನ ಮಾಡಿಕೊಳ್ಳುತ್ತಿದ್ದೇನೆ.ಎಲ್ಲೆದ್ದೆ? ಹಾಂ ನಾನು ಎಲ್ಲೂ ಹೋಗದೆ ಆರು ತಿಂಗಳಾದವು. ಈಗ ಹೊರಗೆ ಹೋಗುವುದೆಂದರೆ, ಆಸ್ಪತ್ರೆ, ತರಕಾರಿ, ಹಣ್ಣು, ಔಷದಿ ತರಲು ಮಾತ್ರ. ಬಿಡುವಿಲ್ಲದ ಜೀವನ 😏
ಇವತ್ತಿನ ಅಡುಗೆ
filter coffee for the bro-in-law 🙂👍
ನಾನು pot ನಲ್ಲಿ ಸಾಂಬ್ರಾಣಿ ಗಿಡಗಳನ್ನು ಬೆಳೆಸಿ, ತೋಟದ ಉಸ್ತುವಾರಿ ನೋಡಿಕೊಳ್ಳುವ ಮಂಜುನಾಥ್ ಕುರ್ತಕೋಟಿ ಯವರ ಜತೆ ಕಳಿಸಿದ್ದೆ. i could see the amusement/patronizing looks in srikanth's as well as farm hands' face. ಆಮೇಲೆ ಬರಿ ಮಳೆ. ಗಿಡಗಳ ಕತೆ ಏನಾಯ್ತು ಅಂತ ವಿಚಾರಿಸಲಿಲ್ಲ. ಸಾಣೆಕಟ್ಟೆಯ ಗಡ್ಡೆ. ಅಷ್ಟು ಮಳೆಯಲ್ಲೂ ಚೇತರಿಸಿಕೊಂಡು, ತೀರ್ಥಹಳ್ಳಿಯ ಹಲವು ಕೊಂಕಣಿಗಳ ಮನೆಗೆ ಕೊಡಲ್ಪಟ್ಟು, ಶ್ರೀಕಾಂತ್ ಕಸಿನ್ ಇಲ್ಲಿ ಬರುತ್ತಾರೆಂದು ಗೊತ್ತಾಗಿ, ಅವರ ಬಳಿ farm helper ಕಳಿಸಿಕೊಟ್ಟಿದ್ದಾರೆ. ಇವತ್ತು ಪಲ್ಯ ತಯಾರಿಸಿದೆ. ಘಮ ಘಮ ಎನ್ನುತ್ತಿತ್ತು. ತುಂಬಾ ಖುಷಿಯಾಯ್ತು. ನಾನು ಹಳ್ಳಿಗೆ ಹೋಗುವ ಕನಸು, ಕನಸಾಗೆ ಉಳಿತು 😊😊😧







