September 30, 2025
Hung curd dip
September 25, 2025
Sugarless oats cookies
one glass Oats, 3 soft dates, 5 cashews, 2 almonds, 1 tb sp wheat flour. blend all these ingredient in a blender. to this mixture add 1 tsp baking soda, 1 and 1/2 tea spoon baking powder, a tsp of home made ghee ( for the patient at our home only home made ghee), you can substitute with oil or butter, 1 tsp vanilla essence, bit of cocoa powder, enough butermilk for the dough to come together. mix into a soft dough. keep aside for 1/2 an hour. roll into ball, flatten with palms. bake at 180 degrees for 15 minutes..more if you like crispy consistency.
i am constantly trying out fun foodss for him to eat... the girls liked this a lot...got over in no time.
oats has fibre which will help in easing constipation. Liver patients suffer from constipation.
For a person who does not like to cook, i am ending up doing just that and i am not liking it one bit...😧😧
(updating this blog from hospital where he is having albumen transfusion)
September 21, 2025
ಮಖಾನಾ ಖೀರ್ / ಪಾಯಸ
tiny straw mat woven by malavika @ragikana
ತುಪ್ಪದಲ್ಲಿ ಗೇರು ಬೀಜ, ಬಾದಾಮಿ, ಮೆತ್ತಗಿನ ಖರ್ಜೂರ ಮತ್ತು ಮಖಾನಾ ವನ್ನು ಹುರಿಯಿರಿ. ಮಖಾನಾ crisp ಆದ ಮೇಲೆ ಪಕ್ಕಕಿಡಿ. ತಣಿದ ನಂತರ ಇದರರಲ್ಲಿ ಅರ್ಧದಷ್ಟು ತೆಗೆದು ,ಏಲಕ್ಕಿ ಒಟ್ಟಿಗೆ ಮಿಕ್ಸಿಯಲ್ಲಿ ಹಾಕಿ. ಬಿಸಿ ಮಾಡಿ ತಣ್ಣಗಾಗಿಸಿದ ಹಾಲಿಗೆ ತಯಾರಿಸಿದ ಪುಡಿ ಹಾಗೂ ಮಖಾನಗಳನ್ನು ಬೆರೆಸಿ ಪುನಃ ಬಿಸಿ ಮಾಡಿ. ಪಿಸ್ತಾ ದಿಂದ ಅಲಂಕರಿಸಿ ಸರ್ವ್ ಮಾಡಿ.ಇವರು ಅನ್ನ/ಅಕ್ಕಿ ಪದಾರ್ಥ ಅಷ್ಟು ಸೇವಿಸುವಂತಿಲ್ಲ. ಅದಕ್ಕೆ ಇವತ್ತು ಮಹಾಲಯ ಅಮಾವಾಸ್ಯೆಯಂದು ಅನ್ನದ ಪಾಯಸದ ಬದಲು ಈ ಖೀರನ್ನು ಮಾಡಿದೆ. ಸಕ್ಕರೆಗೆ ಬದಲಾಗಿ ಎರಡು ಖರ್ಜೂರ ಬಳಸಿದೆ. ನೀವು ಸಕ್ಕರೆ ಅಥವಾ brown sugar ಅಥವಾ ಬೆಲ್ಲ ಬಳಸಬಹುದು.
September 18, 2025
ಮಖಾನಾ /lotus seed/foxnut
ಏನಿಲ್ಲ ತಾವರೆ ಹೂವಿನ ಬೀಜ. ಎಲ್ಲ ಸೂಪರ್ ಸ್ಟೋರ್ ಗಳಲ್ಲಿ ಲಭ್ಯ. ಫೈಬರ್ (ನಾರಿನ ಅಂಶ) ಇರೋದರಿಂದ constipation(ಮಲಬದ್ಧತೆ) ದೂರ ಆಗುತ್ತೆ ಅಂತ ಹೇಳ್ತಾರೆ. ಶುಗರ್ ಇದ್ದವರಿಗೆ ಸಂಜೆಯ ಸ್ನಾಕ್ ಆಗಿ ಉತ್ತಮ.
ಸ್ವಲ್ಪವೇ ಎಣ್ಣೆಯಲ್ಲಿ ಈ ಬೀಜಗಳನ್ನು ಹುರಿಯಿರಿ. ಕುರುಮ್ ಆದ ಮೇಲೆ ಉಪ್ಪು, ಕರಿಮೆಣಸು ಬೆರೆಸಿ. ಬೇಕಿದ್ದಲ್ಲಿ ಶೇಂಗಾ ಬೀಜ, ಗೇರು ಬೀಜ ಸೇರಿಸಬಹುದು ಹುರಿಯುವಾಗ. ನಿಮ್ಮದೇ versions ನಲ್ಲಿ ಮಾಡಿ ನೋಡಿ...ಅವಲಕ್ಕಿ ಚೂಡಾ ಮಾಡಿದ ಹಾಗೆ ಕೂಡ ತಯಾರಿಸಬಹುದು.
September 15, 2025
Health update - liver transplant
transplant ಗೆ ಪೂರ್ವ ತಯಾರಿ ಆಗಿ..ಹಿಂದಿನ 15 ದಿನಗಳು ಆಸ್ಪತ್ರೆ, ಟೆಸ್ಟ್ ಗಳು ಅಂತ ಓಡಾಟವೇ ಆಯ್ತು , ಎಷ್ಟರ ಮಟ್ಟಿಗೆ ಎಂದರೆ ನಾನು ಒಂದು ವಾರದಲ್ಲಿ ಎರಡು ಕಿಲೋ ತೂಕ ಕಡಿಮೆ ಆಗಿದ್ದೀನಿ.
ಇವತ್ತು ಸ್ವಲ್ಪ ರಿಲ್ಯಾಕ್ಸ್ ಆಗಿ ಮನೆಯಲ್ಲೇ ಇದ್ದೀವಿ.transplant /ಕಸಿ ಪ್ರಕ್ರಿಯೆಗೆ ರಿಜಿಸ್ಟರ್ ಆಗಿದ್ದೇವೆ. ಬಹುಷ್ಯ operation ಮಂಗಳೂರಲ್ಲಿ. ಯಾವುದೇ ಸಮಯಕ್ಕೆ ಅಲ್ಲಿಗೆ ಹೋಗಲು ತಯಾರಾಗಿರಬೇಕಂತೆ. ನಮಗೆ 8 ಗಂಟೆಯ ಸಮಯ ಕೊಡುತ್ತಾರಂತೆ. ಕೊನೆಯ ಕಂತಿನ ದುಡ್ಡು ಕಟ್ಟಿದ ಮೇಲೆ ಸರ್ಜರಿ ಶುರು. ಒಟ್ಟಿಗೆ ತಗಲುವ ಅಂದಾಜು ವೆಚ್ಚ 34 ಲಕ್ಷ. ಆಮೇಲೂ ಒಂದು ಎರಡು ಮೂರು ಲಕ್ಷ ದುಡ್ಡು ತಗುಲಬಹುದು. ಒಂದು ಸೈಟ್ ಮಾರಿ ದುಡ್ಡು ರೆಡಿ ಇಟ್ಟುಕೊಂಡಿದ್ದೇವೆ. ಅಲ್ಲಿಗೆ ಒಂದು tension ಕಡಿಮೆ.
ಸರ್ಜರಿ ಆದ ಒಂದು ವರ್ಷ ನಾವು ಆರೋಗ್ಯದ ಬಗ್ಗೆ ತುಂಬಾ ಅಂದರೆ ತುಂಬಾ ಎಚ್ಚರ ವಹಿಸಬೇಕು.ಎಲ್ಲಿಗೂ ಪ್ರಯಾಣ ನಿಷಿದ್ಧ. ಯಾವುದೇ ಸೋಂಕು ತಗುಲಬಾರದು. ದೂರದಿಂದ ಮಾತು ಕತೆ ಆಡಬೇಕು. ಮನೆಯಲ್ಲೂ ಮಾಸ್ಕ್ ಧರಿಸಲೇಬೇಕು.
ಓದ್ತಾ ಇರಿ. update ಮಾಡುತ್ತಿರುತ್ತೇನೆ
🙏🙏👍
September 11, 2025
Siddavana, Ujire
Six and a half years at RUDSETI, Ujire, was a transformative experience, thanks to the constant interactions with the inspiring Dr. Veerendra Heggade ji and Smt. Hemavati Heggade. Their gentle and down-to-earth nature left a lasting impression on me. I learned valuable lessons from Dr. Heggade about the importance of punctuality and attention to detail, like adding dates to my signature – a habit that has proven invaluable in many challenging situations.
While searching for a friend's picture, I stumbled upon a photograph of our farewell to Dr. Heggade when Srikanth was transferred to Manipal. I'm grateful for their stint at RUDSETI, which sparked their journey to leave banking careers and start organizations dedicated to working with the underprivileged.
Their selflessness and commitment continue to inspire us.
September 7, 2025
ಒಂದು ಸೂಪರ್ ಮಸಾಲೆ ದೋಸೆ recipe
ಆಸ್ಪತ್ರೆಯಲ್ಲಿ ಬೆಳಿಗ್ಗೆ ಒಂದು ದಿನ ಗೋದಿ ದೋಸೆ ಕೊಟ್ಟಿದ್ರು ಶ್ರೀಕಾಂತ್ ಗೆ. ಎರಡು ದೋಸೆಯಲ್ಲಿ ಒಂದೂವರೆ ತಿಂದ್ರು. ನಾನು ವೆಸ್ಟ್ ಮಾಡುವ ಪೈಕಿ ಅಲ್ಲ. ಅರ್ಧ ನಾನು ತಿಂದೆ. ತುಂಬಾ ಸಾಫ್ಟ್ ಆಗಿ ರುಚಿಯಾಗಿತ್ತು.
ಇವತ್ತು ನಾನು ಅಂದಾಜಿನಲ್ಲೇ ಗೋದಿ ಬಳಸಿ ಮಸಾಲೆ ದೋಸೆ ಮಾಡಿದೆ. ತುಂಬಾ ಕಿರಿ ಕಿರಿಯೂ ಇಲ್ಲ.
ರಾತ್ರಿ ಎರಡು ಕಪ್ ಸದಕಾ ರವೆ (broken wheat) ಮತ್ತು ಒಂದು table ಸ್ಪೂನ್ ಉದ್ದಿನ ಬೇಳೆ ನೆನೆಸಿದೆ. ಬೆಳಿಗ್ಗೆ ಅವನ್ನು ಚೆನ್ನಾಗಿ ತೊಳೆದು, ಮಿಕ್ಸಿ ಯಲ್ಲಿ ,ಉಪ್ಪು ಬೆರೆಸಿ , ಒಂದು ಸಣ್ಣ ಶುಂಠಿ ತುಂಡು ಹಾಕಿ ರುಬ್ಬಿದೆ. ತೆಳುವಾಗಿ ದೋಸೆ ಹುಯ್ದಲ್ಲಿ ಕುರುಮ್ ಕುರುಮ್ ಮಸಾಲೆ ದೋಸೆ ರೆಡಿ...ದಪ್ಪ ಹುಯ್ದು ತುಪ್ಪದಲ್ಲಿ ಬೇಯಿಸಿದರೆ ಇನ್ನೂ ರುಚಿ. ಟ್ರೈ ಮಾಡಿ ಹೇಳಿ ನನಗೆ.
ಒಳಗಡೆ ಕೆಂಪು ಚಟ್ನಿ ಮತ್ತು ಆಲೂ ಗಡ್ಡೆ ಪಲ್ಯ ಇದೆ. ಕ್ಲಿಕ್ ಮಾಡಲು ಮರೆತೆ...😊❤️
ಅಕ್ಕಿಗಿಂತ ಉತ್ತಮ ತಿನಿಸು ಮತ್ತು ಮನೆ ಮಂದಿಗೆಲ್ಲ ತುಂಬಾ ಇಷ್ಟ ಆಯ್ತು.
ಮರುದಿನ ಪೋಡಿ ದೋಸೆ ಮತ್ತು ಸಾಂಬಾರ್ ಜತೆ
ನಿನ್ನೆ 12.02 ಗೆ ಚಂದ್ರ ಗ್ರಹಣ ದ ಕೊನೆಯ ಕ್ಷಣಗಳು 👍❤️😊
September 5, 2025
ಒಂದು ನೆನಪು + health update
ನಾಲ್ಕು ದಿನ ಪುನಃ ಆಸ್ಪತ್ರೆ ವಾಸ. ನಿನ್ನೆ ರಾತ್ರಿ ಮನೆಗೆ ಬಂದೆವು. ಮೊನ್ನೆ ರಾತ್ರಿ ಡ್ರಿಪ್ಸ್ ಹಾಕಿದ್ರು...ಅವರ ಮೇಲೆ ಒಂದು ಕಣ್ಣು ಇಡ್ತಾ you tube ರೀಲ್ಸ್ ನೋಡ್ತಿದ್ದಾಗ ಈ ಶೆಗಡಿ ಕಾಣಿಸ್ತು.
ತೀರ್ಥಹಳ್ಳಿಯಲ್ಲಿ ಈ ತರಹದ ಒಂದು electric ಶೆಗಡಿ ಇತ್ತು. ಶಾಕ್ ಹೊಡೆಯುತ್ತಿತ್ತು. ಇನ್ನೊಂದು ಎರಡು ಬರ್ನರ್ ನ ಗ್ಯಾಸ್ ಸ್ಟವ್ ಇತ್ತು. ಅದರ ಮೇಲೆ ಏನೋ ಬೇಯುತ್ತಾ ಇತ್ತು. ಅಕ್ಕ ನನಗೆ ಸಾಂಬಾರ್ ಮಸಾಲೆ ಹುರಿಯಲಿಕ್ಕೆ electric ಶೆಗಡಿ ಯುಸ್ ಮಾಡಲು ಹೇಳಿದ್ರು. ಒಂದು ಸಣ್ಣ ಸೌಟಿನಂತಹ ಪಾತ್ರೆಯಲ್ಲಿ ಹುರಿಯ ಬೇಕಿತ್ತು. ಒಂದೊಂದೇ ಮಸಾಲೆ ಹುರೀತಾ ಇದ್ದೆ. ತಪ್ಪಿ ಸ್ಟೀಲ್ ಸ್ಪೂನ್ ಶೆಗಡಿ ಮಧ್ಯದ ಭಾಗದ ತಂತಿಗೆ ತಗುಲಿತು...ಶಾಕ್ ಹೊಡೆದ ರಭಸಕ್ಕೆ ನನ್ನ ಕೈ ನಿಂದ ಸ್ಪೂನ್, ಸೌಟು, ಸಾಂಬಾರ್ ಪದಾರ್ಥಗಳು ಅಡಿಗೆ ಮನೆಯಲ್ಲೆಲ್ಲ ಚಿಲ್ಲಾ ಪಿಲ್ಲಿ. ಎಲ್ಲಿಂದ ಕ್ಲೀನ್ ಮಾಡಲು ಶುರು ಮಾಡಬೇಕೆಂದೆ ತಿಳಿಯದೆ ಸುಮಾರು ಹೊತ್ತು ಗುಮ್ಮನ ಗುಸ್ಕು ತರಹ ನಿಂತು ಕೊಂಡೇ ಇದ್ದೆ. 🤔😊... ಸಧ್ಯ ಅಕ್ಕ(co-sister) ಬೈ ಲಿಲ್ಲ...
health update
ಭಾನುವಾರ ರಾತ್ರಿ ಇವರ movements ಎಲ್ಲ ಸ್ವಲ್ಪ ಸ್ಲೋ ಇತ್ತು...ಶ್ವಾಸ ಎಳೆಯುವಾಗ ಒಂದು ತರಹ ಬೇರೇನೇ ಶಬ್ದ ಬರ್ತಾ ಇತ್ತು. uncomfortable ಮತ್ತು tired ಫೀಲ್ ಆಗ್ತಾ ಇದೆ ಅಂದ್ರು. ಹೊಟ್ಟೆ ನೀರು ತುಂಬಿ ಕೊಂಡು ತುಂಬಾನೇ ದೊಡ್ಡ ಕಾಣ್ತಾ ಇತ್ತು. ಡಾಕ್ಟರ್ ಬಳಿ ಹೋಗುವಾ ಅಂದ್ರೆ ಬೇಡ ಅಂದ್ರು. ಸ್ವಲ್ಪ ಹೊತ್ತಿಗೆ ತಲೆ ಬುಡ ಅರ್ಥ ವಾಗದ ಮಾತು ಶುರು ಮಾಡಿದ್ರು. ಡಾಕ್ಟರ್ ಗೆ ಮೆಸೇಜ್ ಮಾಡಿದ್ರೆ (ಫೋನ್ ಮಾಡಲಿಕ್ಕೆ ಇಲ್ಲ only msg 😡) ಕರೆದು ಕೊಂಡು ಬನ್ನಿ ಅಂದ್ರು..ಟೆಸ್ಟ್ ಮಾಡಿ, observation ಗೆ ಅಂತ ಅಡ್ಮಿಟ್ ಮಾಡಲು ಹೇಳಿದರು. ಮೈ ನಲ್ಲಿ ಅಮ್ಮೋನಿಯ ಜಾಸ್ತಿ ಆಗಿತ್ತು...ಅದಕ್ಕೆ antibiotic ಅದು ಇದು ಅಂತ ನಾಲ್ಕು ದಿನ ಇದ್ದು 86,000/ ಖರ್ಚು ಆಗಿ ಮನೆಗೆ ಬಂದ್ವಿ..ಸುಸ್ತಾಯ್ತಪ್ಪ..ಇನ್ನು ಮುಂದಿನ ವಾರ ಪುನಃ ಹೋಗ ಬೇಕು...ಸಾಧಾರಣ ಕೆಮ್ಮು ಜ್ವರ ಆದ್ರೆ ನಮಗೆ ಬೇರೆ ಡಾಕ್ಟರ್ ಹತ್ತಿರ ಹೋಗುವ option ಇದೆ. ಆದರೆ ಇದು liver ಕಾಯಿಲೆ...specialist ಬಳಿನೇ ಹೋಗ ಬೇಕು. ಹೇಳಿದ ದುಡ್ಡು ತೆತ್ತಬೇಕು
ಪುನಃ ಓದುಗರಲ್ಲಿ request... ಆರೋಗ್ಯದ ಬಗ್ಗೆ ಕಾಳಜಿ ಮಾಡಿ ಪ್ಲೀಸ್. ಇಲ್ಲದಿದ್ದರೆ ಸಾಕಷ್ಟು ದುಡ್ಡು ಒಟ್ಟು ಮಾಡಿಡಿ. ಉಗುರಿನಿಂದ ಹೋಗುವುದಕ್ಕೆ ಕೊಡಲಿ ಉಪಯೋಗಿಸಬೇಕಾದ ಕಥೆ ಆಯ್ತು. ಆರೋಗ್ಯವೇ ಭಾಗ್ಯ ಅನ್ನುವ ಯುಕ್ತಿ ಈಗ ಅರ್ಥ ಆಗ್ತಾ ಇದೆ. ಸೆಪ್ಪೆ ಊಟ ತಿನ್ನಲೇ ಬೇಕು..ಬೇರೆ ಉಪಾಯನೇ ಇಲ್ಲ..
ಎರಡು ದಿನ ಆರೋಗ್ಯ ಸರಿಯಿದ್ರೆ ನಾಲ್ಕು ದಿನ ಆರೋಗ್ಯ ಸರಿ ಇರಲ್ಲ. ನಾಳೆ liver trasplant ಸರ್ಜನ್ ಜತೆ ಅಪ್ಪೋಯಿಂಟ್ಮೆಮೆಂಟ್...😏😧. ಯಕೃತ್ತಿನ ಮಹತ್ವ ಈಗ ತಿಳಿಯುತ್ತ ಇದೆ. ಇವರಿಗೆ ಹೇಳ್ತಿರ್ತೀನಿ... write about your experience... ಬೇರೆಯವರಿಗೆ ಅನುಕೂಲ ವಾಗ ಬಹುದು ಅಂತ...ಆದ್ರೆ ಅವರಲ್ಲಿ ಅಷ್ಟು ಶಕ್ತಿನೆ ಇಲ್ಲ..
ಓದ್ತಾ ಇರಿ. update ಮಾಡ್ತಿರ್ತೇನೆ 🙏🙏














