ನನ್ನ ಫ್ರೆಂಡ್ ಸೂಸಿ ಕಾಲ್ ಮಾಡಿ 'ಮಾಲತಿ ಇವತ್ತು ಪೂಜೆ ಮಾಡುವಾಗ ನಿನ್ನ ನೆನಪು ಬಂದು ನಗ್ತಾ ಇದ್ದೆ..
ನಾನು : ಯಾಕೆ?!🤔🤔ಅಲ್ಲ ನೀನು ದೇವರಲ್ಲಿ ನಂಬಿಕೆ ಇಲ್ಲ ಅಂತ ಎಷ್ಟು ತನ್ಮಯಳಾಗಿ ದೇವರನ್ನೆಲ್ಲ ಕ್ವೀನ್ ಮಾಡ್ತೀಯ....
ಹೂಂ ಅದಕ್ಕೆ ನಗು ಯಾಕೆ ಬಂತು..
ಚಳಿಗಾಲದಲ್ಲಿ ಒಮ್ಮೆ ನೀನು ದೇವರ ಮೂರ್ತಿಗಳನ್ನೆಲ್ಲ ಬಿಸಿ ನೀರಿನಿಂದ ತೊಳೆಯುತ್ತಾ..'ಪಾಪ ಅವರಿಗೂ ಚಳಿ ಆಗುತ್ತಲ್ಲವಾ' ಅಂದಿದ್ದು ನೆನಪಾಗಿ ನಗು ಬಂತು..ನಿನ್ನ ತನ್ಮಯತೆಯೇ ನಿನ್ನ ಭಕ್ತಿ.....
ನನಗೆ ದೇವರಲ್ಲಿ ನಂಬಿಕೆಯಿಲ್ಲ ಅಂದ್ರೆ ಬೇರೆಯವರಿಗೆ tension.. ಅವರದ್ದೇ ಆದ ಒಂದು ಸಮಾಧಾನ ನನಗೋಸ್ಕರ ಕೊಂಡುಕೊಳ್ಳುತ್ತಾರೆ,, ಅಮ್ಮನನ್ನೂ ಒಳಗೊಂಡು.
ಹೌದು ನನಗೆ ದೇವರ ಮೂರ್ತಿಗಳೆಲ್ಲ ಲಕಲಕ ಹೊಳೆಯುವಂತಿರಬೇಕು. ನಾನು ಹುಣಸೆ ಹುಳಿಯನ್ನು ಬಿಸಿ ನೀರಿನಲ್ಲಿ ನೆನೆಸಿ ಅದಕ್ಕೆ ಉಪ್ಪು ಹಾಕಿ, ದೇವರನ್ನು ಉಜ್ಜಲಿಕ್ಕೆ ಎಂದು ಒಂದು eco ಫ್ರೆಂಡ್ಲಿ ಬ್ರಶ್ ಒಂದನ್ನು ಇಟ್ಟಿದ್ದೇನೆ. 🙂





















































