March 29, 2024

ಹೋಳಿ ಹಬ್ಬಕ್ಕೊಂದು ಬಹುಮಾನ

 ಇನ್ಸ್ಟಾಗ್ರಾಮ್ ನಲ್ಲಿ ಕೇಕ್ ವಾಲ ...ಒಂದು competition ಆಯೋಜಿಸಿದ್ರು. ಹಾಡಿನ ಸಾಹಿತ್ಯದಲ್ಲಿ 'ಬಣ್ಣ' ಇರಬೇಕು ಅಂತ. 


ಕನ್ನಡದ ಹಾಡಿ ನಲ್ಲಿ ಯಾವುದೂ ತೋಚಲಿಲ್ಲ...ಕೆಂಪಾದವೋ ಅಂತ ಒಂದು ಹಾಡಿದೆಯ?? ಮತ್ತು 'ಬೆಳ್ಳಿ' ಇದು ಬಣ್ಣವಾ ಗೊತ್ತಿಲ್ಲ...ನಿಮಗೆ ಗೊತ್ತಿದ್ದಲ್ಲಿ ಇಲ್ಲಿ ಹಾಕಿ.

ಬೆಳ್ಳಿ ಮೋಡದ ಅಂಚಿನಿಂದ, ಮೂಡಿಬಂದ ಆಶಾಕಿರಣ.......??



ನಾನು ಸುಮ್ಮನೆ ತಮಾಷೆಗೆ ಭಾಗವಹಿಸಿದೆ.ಭಾಗವಹಿಸಲು ಇನ್ನೊಂದು ಮುಖ್ಯ ಕಾರಣ ಯಾರನ್ನೂ tag ಮಾಡಲು ಹೇಳಿರಲಿಲ್ಲ. ಟ್ಯಾಗ್ ಮಾಡುವುದು ನನಗೆ ಮುಜುಗರ ಅನ್ನಿಸುತ್ತೆ. 🙃. 3 ವಿಜೇತರಲ್ಲಿ ನನ್ನ ಹೆಸರು ಕೂಡ ಇತ್ತು


ನಿನ್ನೆ ನನ್ನ ಬಹುಮಾನದ ಹ್ಯಾ0ಪರ್ ಕಳುಹಿಸಿದ್ರು. ಖುಷಿಯಾಯ್ತು. ಇವತ್ತು ಅದು ಆಫಿಸ್ ನವರ ಜತೆ ಶೇರ್ ಮಾಡ್ತಿದ್ದೀನಿ...





March 27, 2024

ತಿರುವಂಗಾಡ ಶ್ರೀ ರಾಮ ದೇವಸ್ಥಾನ ತಲಶೇರಿ

 ತಲಶೇರಿಯಲ್ಲಿ ನಮ್ಮ ಮಿತ್ರರ ಮಗಳ ಮದುವೆಯಿತ್ತು.

ಮದುವೆಯ ಕಾರ್ಯಕಲಾಪಗಳು ಒಂದೇ ಗಂಟೆಯಲ್ಲಿ ಮುಕ್ತಾಯವಾದವು. ರೆಸ್ಟ್ ತೆಗೆದುಕೊಂಡು ಸ್ವಲ್ಪ ಊರು ಸುತ್ತಿದೆವು









ಇಷ್ಟನ್ನೂ ಖಾಲಿ ಮಾಡಿ ಎರಡು ಬಗೆ ಪಾಯಸ ಕೂಡ ಗುಳುಂ ಮಾಡಿದೆ. 😆



ಬೀಚ್, ದೇವಸ್ಥಾನ, ತರಕಾರಿ ಮಾರುಕಟ್ಟೆಗೆ ಭೇಟಿ ಕೊಟ್ಟೆವು. 


ಹತ್ತಿಯ ಮುಂಡು ತುಂಬಾ ಕಡಿಮೆ ದರಕ್ಕೆ ಸಿಕ್ಕಿತು

ಹಾಗೆ ನೇಂದ್ರ ಬಾಳೆ ಹಣ್ಣು, ಉತ್ತಮ ಗುಣ ಮಟ್ಟದ ಪರಿಮಳಯುಕ್ತ ಅಡಿಗೆಗೆ ಬಳಸುವ ತೆಂಗಿನಕಾಯಿ ಎಣ್ಣೆ , ಒಂದು ಕತ್ತಿ etc etc 😆


ಈ ಚೆಂದದ ರಾಮ  ದೇವಸ್ಥಾನಕ್ಕೆ 3000 ವರ್ಷದ ಇತಿಹಾಸ ಇದೆಯಂತೆ. ಗರ್ಭಗುಡಿಯಲ್ಲಿ ಇತ್ತೀಚೀನ ಹಾಗೆ ಕರೆಂಟ್ ಹಾಕಿಸಿಲ್ಲ. ದೇವರ ನಂದಾದೀಪದ ಬೆಳಕು.

ಒಳಗಡೆ ರಂಗಮಂಟಪದ ಮೇಲ್ಭಾಗದಲ್ಲಿ ಚೆಂದದ ಮರದ ಕೆತ್ತನೆಗಳು. ಫೋಟೋ ತೆಗೆಯಲು ಅವಕಾಶವಿರಲಿಲ್ಲ. ವಿಶಾಲವಾದ ಪುಷ್ಕರಣಿಯು ಇತ್ತು

ಕೆಲವು ಚಿತ್ರಗಳು




ಹಾಗೆ ಹೋಗಿ ಹೀಗೆ ಕೇರಳಕ್ಕೆ ಹೋಗಿ  ಬಂದ್ಬಿಟ್ವಿ 😆😆


March 16, 2024

ಹೀಗೊಂದು ಮದುವೆ ಊಟ

 

    ಕುಂದಾಪುರದಿಂದ ಗಂಗೊಳ್ಳಿ ದಾರಿಯಲ್ಲಿ

ಅಮ್ಮನ ಸ್ನೇಹಿತೆಯ ಮಗನ ಮದುವೆಗೆ ಗಂಗೊಳ್ಳಿಗೆ ಹೋಗಿದ್ದೆ ಅಂತ ಆನೆಗುಡ್ಡೆ ಪೋಸ್ಟ್ ನಲ್ಲಿ ಹಾಕಿದ್ದೆ ಅಲ್ಲವಾ? ಅದು ಜೈನ್ ಮತ್ತು ಕೊಂಕಣಿ ಮದುವೆ.

ಮೆಹಂದಿ, ಹಳದಿ ಕಾರ್ಯಕ್ರಮಕ್ಕೆ ನಾರ್ತ್ ಸೌತ್ ತಿಂಡಿ ಊಟಗಳಿದ್ರೆ, ಮದುವೆ ದಿನ ನಮ್ಮ ಕೊಂಕಣಿ ಊಟ, ಪುಲಾವ್ ಒಂದು ಬಿಟ್ರೆ.

ಊಟಕ್ಕೆ ತೀರ ಕಡಿಮೆ ಐಟಂಸ್. ಆದ್ದರಿಂದ ಊಟ ವೇಸ್ಟ್ ಮಾಡಿದವರು ಕಡಿಮೆ ಎನ್ನಬಹುದು.

ಸ್ವೀಟ್ ಕಾರ್ನ್ ಹಾಕಿದ ಖರಾಬ್ ಸಲಾಡ್ ಗಳಿರಲಿಲ್ಲ

ಪೂರಿ, ಸಾಗು, ಪುಲಾವ್, ಚನಾ ಕಡ್ಗಿ ಘಶಿ, ಬಿಬ್ಬೊ- ಟೆಂಡ್ಲ್ - ಬಾಟಾಟ್ಯಾ ಉಪ್ಕರಿ, ಮಿಕ್ಸ್ ತರಕಾರಿ ಉಪ್ಪಿನಕಾಯಿ, ಅನ್ನ, ಸಾರು, ಮಜ್ಜಿಗೆ, ಅಪ್ಪಿಪಾಯಸ, ideal ಅವರ chocolate sundae ಐಸ್ಕ್ರೀಮ್...ಇಷ್ಟೇ

ನನ್ನ ಎಲೆ ನೋಡಿ 😆👍



March 11, 2024

ಎಳೆ ಗೇರು ಬೀಜ ಸುಲಿದ ಕತೆ

 ತೀರ್ಥಹಳ್ಳಿಯಿಂದ ಶ್ರೀಕಾಂತ್ ಫೋನ್ ಮಾಡಿ ನಮ್ಮ ತೋಟದ ಎಳೆ ಗೇರು ಬೀಜ / ಬಿಬ್ಬೊ ತರತಿದ್ದೀನಿ ಎಂದಾಗ ತುಂಬಾ ಖುಷಿ ಪಟ್ಟೆ . ಎಳೆ ಗೇರು ಬೀಜದ ರುಚಿಯೇ ಬೇರೆ. ಏನೆಲ್ಲಾ ಅಡಿಗೆ ಮಾಡಬಹುದು ಅಂತ ಕನಸು ಕಾಣಲು ಶುರುವಿಟ್ಟೆ

ಮರುದಿನ ಅವರು ತಂದದ್ದು ಸಿಪ್ಪೆ ಸಮೇತ ಗೇರು ಕಾಯಿ. ಅದನ್ನು ಬಿಡಿಸಿಯೇ ಗೊತ್ತಿರಲಿಲ್ಲ. 

 ಏನಕ್ಕೂ ನೋಡೇ ಬಿಡುವ ಅಂತ ಚಾಕುವಿನಿಂದ ಮಧ್ಯಕ್ಕೆ ಕತ್ತರಿಸಿದೆ. ಸುಲಭವಾಗಿ ಬಂತು. ಖುಷಿಯಿಂದ ಒಂದೊಂದೇ ಬಿಡಿಸುತ್ತಾ ಹೋದೆ. 




ಫ್ರೆಶ್ ಆಗಿ ಬರಲು ವಾಷ್ ರೂಮಿಗೆ ಹೋದ ಶ್ರೀಕಾಂತ್ ಬಂದ ಕೂಡಲೇ ಕಿರುಚಿದರು. ಎನ್ ಮಾಡ್ತಿದ್ದೀರಾ? ಅದನ್ನು ಬರಿ  ಕೈನಿಂದ ಯಾರಾದರು ಮುಟ್ಟುತ್ತಾರಾ?  ಬೆರಳಿನ ಸಿಪ್ಪೆ ಹೋಗಿ ನಾಳೆ ಬೊಂಬ್ಡಾ ಹೊಡೀತೀರಾ ಅಂದ್ರು. ಅಷ್ಟರಲ್ಲೇ 15 ಗೇರು ಬೀಜ ಬಿಡಿಸಿಯಾಗಿತ್ತು. ಕೊನೆ ಪಕ್ಷ ಕೈಗೆ ಎಣ್ಣೆನಾದ್ರೂ ಹಚ್ಚಿದ್ದೀರಾ, ಇಲ್ಲ...ನನಗೆ ಗೇರು ಎಣ್ಣೆಯಿಂದ ಬಟ್ಟೆ ಬರೆ ಕಲೆಯಾಗೋದು ಗೊತ್ತಿತ್ತು. ...ನಾನಂತು  i am the malathi, one & only ನನಗೇನೂ ಆಗಲ್ಲ ಅಂತ ಹಾಡ್ತಾ ಇನ್ನೊಂದೆರಡು ಗೇರು ಬೀಜ ಸುಲಿದೆ. ಇನ್ನೊಂದಪ ಆವಾಜ್ ಹಾಕಿ ಕೆಲಸ ನಿಲ್ಲಿಸ್ತಿಯಾ ಹೇಗೆ ಅಂದಾಗ ಸುಮ್ಮನಾದೆ. ಎಲ್ಲಿಂದಲೋ ಕೈ ಗವಸ ಹುಡಿಕಿ ಕೊಟ್ಟು ಈಗ ಸುಲಿ ಅಂದ್ರು.  ಸ್ವಲ್ಪ ಕಿರಿ ಕಿರಿ ಅನ್ನಿಸಿದ್ರು ಅದು ಅಭ್ಯಾಸ ಆಯ್ತು. ನಾನು ಅಕ್ಕ ಮಾತಾಡ್ತಾ, ಹಾಡ್ತಾ ಸುಮಾರು 150 ಕ್ಕೂ ಹೆಚ್ಚು ಗೇರು ಬೀಜ ಸುಲಿದ್ವಿ. ಮಧ್ಯದಲ್ಲಿ ಗೇರಿನ ರಸ ಕಣ್ಣೊಳಗೆ ಸಿಡಿದು ಶ್ರೀಕಾಂತ್ ಗು ಅಕ್ಕಂಗೂ ಫುಲ್ tension.  ಎರಡೂ ಕೈಗಳಿಗೆ ಗೇರು ಎಣ್ಣೆ ತಾಗಿದ್ದರಿಂದ ಹೇಗೆ ಕಣ್ಣು ತೊಳೆಯೋದು ತೋಚಲಿಲ್ಲ. ಕಣ್ಣು ಚೆನ್ನಾಗಿ ಉರಿತು. ಕಣ್ಣೀರಿನಿಂದ ಎಣ್ಣೆ ತಾನೇ ತಾನಾಗಿ ಹೋಯಿತು ಅನ್ನಿಸುತ್ತೆ. ಕಣ್ಣುರಿ ಹೋಯ್ತು. ಶ್ರೀಕಾಂತ್ ನನ್ನ ಹಳೆ ಚಸ್ಮಾ ಹುಡುಕಿ ತಂದು ಕೊಟ್ಟು ಉಳಿದ ಕೆಲಸ ಚಸ್ಮಾ ಹಾಕಿಕೊಂಡು ಮಾಡಿದೆ. 🙂🙂 ಆಮೇಲೆ  ಕೂತು ಕೂತು ಕಾಲು ನೋವಾಯಿತು. ಉಳಿದದ್ದು ಮರು ದಿನ ಸುಲಿದರಾಯ್ತು ಅಂದುಕೊಂಡ್ವಿ.

ಮರುದಿನ ಪೂರಿಗೆ ಗೇರು ಬೀಜದ ಪಲ್ಯ, ಮಧ್ಯಾಹ್ನಕ್ಕೆ ತೊಂಡೆಕಾಯಿ ಗೇರು ಬೀಜದ ಪಲ್ಯ.  ಏನ್ ರುಚಿ, ಬೆಣ್ಣೆಯಂತೆ soft ಆಗಿತ್ತು. ನಿಹಾ ಗೆ, ಕುಟುಂಬದವರಿಗೆ whatsapp ನಲ್ಲಿ ಚಿತ್ರ ಕಳುಹಿಸಿ ಹೊಟ್ಟೆ ಕಿಚ್ಚು ಪಡುವಂತೆ ಮಾಡಿದ್ವಿ.
ಸಂಜೆ ಶ್ರೀಕಾಂತ್, ತಂಗಿಯ ಮಗಳು & ಅಳಿಯ ಮತ್ತು ಮೊಮ್ಮಗ ಅವರನ್ನು ಗೇರು ಬೀಜದ ಪಲ್ಯ ತಿನ್ನಲು ಆಹ್ವಾನಿಸಿದರು. ಮಧ್ಯಾಹ್ನ ಊಟದ ನಂತರ ಉಳಿದ 200 ಗೇರು ಬೀಜಗಳನ್ನು ಸುಲಿದು, ಸಂಜೆ ಅದರ ಪಲ್ಯ ಮಾಡಿದೆ ....
ಹೀರೆ ಕಾಯಿ ಬೋಂಡ ಮತ್ತು ಬೆಳಗಾವಿಯ ದೋಣ್ ಮೆಣಸಿನ ಬೋಂಡ ಕೂಡ ಮಾಡಿದೆ.

ಇಲ್ಲಿಗೆ ಎಳೆ ಗೇರುಬೀಜ ಸುಲಿತದ ಕತೆ ಸಮಾಪ್ತ...... ಕೈಗಳೆರಡೂ ಕಣ್ಣು ಸರಿಯಾಗಿವೆ, thank you 😆😆❤️
ಇನ್ನು ಹಳ್ಳಿ ಜೀವನ ನಡೆಸಲು ಯಾವ certificate ಕೂಡ ಬೇಡ...,👍👍🙂 ಏನಂತೀರಾ???

March 6, 2024

ಖಾರಿ ಬಿಸ್ಕತ್ -600th post ❤️👍

 We visited this grandma every month since she lived alone. grand pa died when i was in my 13th year. they had no children. amma would prepare her favorite snacks and go from Andheri to Jogeshwari. we had named her jogeshwari bapama, bapama in konkani ..means grandma from paternal side. Her husband was my real grand pa's brother. we would leave home at two on a saturday afternoon, catching the bus and a auto and by 5 pm we were back home. i visited her because she had lots of books which she would let me borrow. Grand pa - Krishna ajja was a school teacher. he had good collection of books.they were one of the first few people who had a television when it first came. we had ours almost 20 years later 🙂🙂

To save money we walked a lot. so while returning from grandma's house  v walked a bit. amma always struggled to make ends meet. there was this bakery which gave out the amazing aroma of  freshly baked khari biscuits. while returning home amma used to get half a kg of these khari biscuits. we would come home, brew tea, dip khari biscuits in it and oh my it was so heavenly we felt like royalty. we were six of us at home and these khari biscuits would be over in two days time. i have not tasted such khari biscuits else where. next time i visit mumbai should see if that tiny bakery still exists....it is been 15 years since i last visited mumbai. my bro and family comes down to belagavi where my late father settled down after retirement from banking service. so i really did not find the necessity to visit my birthplace. i love bengaluru too much to go elsewhere. every now and then i miss the versoa beach, fresh fish,  street side vada pav...and  the taste of ragda patties sold by an auntie sitting on a tiny stool at the road leading to char bangla...i would save my bus money to buy these...ah memories...❤️❤️

the books are by Sadyojata Bhatta, husband's current favorite. i just flipped the pages of jitwari...it already has seen four editions in the same year of publication...now i am curious too. internet has been down last couple of days and it feels good to settle down with books surrounded by my plants on the balcony..

p.s. ಜಿತ್ವರಿ ಓದುತ್ತಿದ್ದೆ. ಒಂದು ಕಡೆ ಔರಂಗಾ ಜೇಬ್ ಅಂತ ಇತ್ತು. ನಮಗೆಲ್ಲ ಶಾಲೆಯಲ್ಲೆಲ್ಲ ಔರಂಗಜೇಬ ಓದಿ ಓದಿ ,ಇದು ಸ್ವಲ್ಪ ಕಿರಿಕಿರಿ ಅನ್ನಿಸಿತು. ಆಮೇಲೆ ತುಂಬಾ research ಎಲ್ಲ ಮಾಡಿ ಬರೆದಿರುತ್ತಾರೆ..ಇದೆ ಉಚ್ಛಾರ ಸರಿ ಏನೋ ಅನ್ನಿಸ್ತು. ಕೂಡಲೇ ಮುಂದಿನ chapter ನಲ್ಲಿ ಔರಂಗಜೇಬ ಅಂತ ಇತ್ತು...
ಪುಸ್ತಕ.ಪಕ್ಕಕ್ಕಿಟ್ಟೆ಼಼಼಼
   khari biscuits in pic from kalyani sweets, belagavi. good but not great

March 1, 2024

ಆನೆಗುಡ್ಡೆ ಗಣಪತಿ

 ಮೊನ್ನೆ ಸಂಕಷ್ಟಿ ದಿನ ಕುಂದಾಪುರದಲ್ಲಿದ್ದೆವು. ಗಂಗೊಳ್ಳಿಯಲ್ಲಿ ಅಮ್ಮನ ಫ್ರೆಂಡ್ ಮಗನ ಮದುವೆಯಿತ್ತು. ಅಮ್ಮನಿಗೆ ಆ ಮದುವೆಗೆ ಹೋಗಲು ತುಂಬಾ ಆಸೆ ಇತ್ತು ಆದರೆ ಯಾರದ್ದೂ ಸಾಥ್ ಇರಲಿಲ್ಲ. ಅದಕ್ಕೆ ನಾನು ಬರುತ್ತೇನೆ ಅಮ್ಮ, ಬೆಳಗಾವಿಯಿಂದ ಗಾಡಿ ಮಾಡಿಕೊಂಡು ಹೋಗುವಾ ಅಂತಂದೆ. ಮಜಾ ಮಾಡುವಾ ಅಂದೆ.

ಹೋಗುವ ದಿನ ಹತ್ತಿರ ಬರುತ್ತಿದ್ದ ಹಾಗೆ ಮಾಲವಿಕಾ ಹಾಗೂ ತಮ್ಮ ಕೂಡ ಬರುತ್ತೇನೆ ಅಂದ್ರು. ತಮ್ಮನ ಫ್ರೆಂಡ್ ಕಾರಲ್ಲಿ ಹೋಗುವುದೆಂದಾಯಿತು. 😀

ಅಮ್ಮನಿಗೆ ಆ ದಿನ ಸಂಕಷ್ಟಿ ಎಂದು ನೆನಪಾಯಿತು. ಆನೆಗುಡ್ಡೆಗೆ ಹೋಗುವನಾ ಅಂತ ಕೇಳಿದರು. ನಾವು ಉಳಿದುಕೊಂಡ ಹೋಟಲ್ ನವರು ನಮಗೆ ರಿಕ್ಷಾ ಮಾಡಿ ಕೊಡಲು ಮುಂದಾದರು. ತಮ್ಮ ಮತ್ತು ಅವನ ಫ್ರೆಂಡ್ ಗೆ ಬೆಳ್ ಬೆಳಿಗ್ಗೆ ತೊಂದರೆ ಕೊಡುವುದು ಬೇಡ ಅಂತ.

ಬೆಳಿಗ್ಗೆ ನಾವು ಟಿ ಕುಡಿಯಲು ಹೋಗುವಾಗ ಅಲ್ಲೊಂದು ರಿಕ್ಷಾ ಸ್ಟಾಅಂಡ್ ಇತ್ತು. ರೀಕ್ಷದವನು ನಮಗೆ ಆನೆಗುಡ್ಡೆಗೆ ಕರೆದು ಕೊಂಡು ಹೋಗಲು ತಯಾರಾದ. ನಾವು ಹೋಟಲ್ ಗೆ ಮರಳಿ, reception ನಲ್ಲಿ ನಾವು ಬೇರೆ ಆಟೋ ಹಿಡಿದುಕೊಂಡು ಹೋಗುತ್ತೇವೆಂದೆವು.

ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ರಶ್ ಇರಬಹುದೆಂದು ಕೊಂಡಿದ್ದೆ. ಅಮ್ಮ ಪೂಜೆ ಎಲ್ಲ ಸಲ್ಲಿಸಿದರು. ಹೊರಗಡೆ ಬರುತ್ತಿದ್ದ ಹಾಗೆ ಶ್ರೀಕಾಂತ್ ಫೋನ್ ಮಾಡಿದರು, ಬೆಂಗಳೂರಿನಿಂದ...bansi ರವೆ ಯಾವ ಡಬ್ಬಿಯಲ್ಲಿದೆ ಎಂದು ಕೇಳಲು...19 ದಿನ ಆಗಿತ್ತು ನಾನು ಬೆಂಗಳೂರು ಬಿಟ್ಟು 😀. ಮತ್ತೆ ಇತರೆ ವಿಷಯಗಳು ಮಾತಾನಾಡುತ್ತಿದ್ದ ಹಾಗೆ ಒಂದು ಕರು ಬಂದು ನನಗೆ ತೊಂದರೆ ಕೊಡಲಾರಂಭಿಸಿತು.

 ನನ್ನ ಬ್ಯಾಗ್ ನೊಳಗೆ ಏನಿದೆ ಅಂತ ಅದಕ್ಕೆ ಕುತೂಹಲ. 'ನೀನು ತಿನ್ನುವಂತದ್ದು ನನ್ನ ಬ್ಯಾಗ್ ನಲ್ಲಿ ಏನೂ ಇಲ್ಲ ಅನ್ನುತ್ತಿದ್ದ ಹಾಗೆ, ಅಮ್ಮ  ,ಇರು ಅಂತ ಅಲ್ಲೇ ಇದ್ದ ಅಂಗಡಿ ಬಳಿಗೆ ಸಾರಿದರು, ಬಾಳೆ ಹಣ್ಣು ತರಲು. ಕಷ್ಟಪಟ್ಟು ಬಾಳೆ ಹಣ್ಣು ತಿಂದಿತು ಆ ಕರು. ಮಾಲವಿಕ ಕುಂದಾಪುರದ ಬೀಚ್ ಗೆ ಹೋಗಿದ್ದಳು. ಅವಳಿಗೆ ಆ ಕರು ಅದೆಷ್ಟು ಶೇಲೇ ಮಾಡಿತು ಬಾಳೆ ಹಣ್ಣು ತಿನ್ನಲು ಎಂದಾಗ...'ಅದಕ್ಕೆ ಗೋಬಿ ಮಂಚೂರಿ ಬೇಕಿತ್ತೇನೋ' ಅಂದಾಗ ನಕ್ಕೂ ನಕ್ಕೂ.....

ಅಮ್ಮನಿಗೆ ಗಣಪನನ್ನು ನೋಡಿ ಖುಷಿಯಾಗಿದ್ದು ನನಗೂ ಖುಷಿ 🙏🙏

ಅಲ್ಲಿ ಬೇರೆ ಯಾವ ಫೋಟೋ ತೆಗೆಯಬೇಕೆನಿಸಲಿಲ್ಲ. 👍👍

❤️❤️