2020 ನಲ್ಲಿ ಪ್ರತಿ ತಿಂಗಳು ಎಲ್ಲಾದರೂ ಹೋಗಬೇಕೆಂದು ನಿರ್ಧರಿಸಿದ್ದೆ. ಮೊದಲ ತಿಂಗಳಲ್ಲೇ ಸುಮಾರು ಕಡೆ ಹೋಗಿ ಬಂದೆ. ಊಚನಹಳ್ಳಿ/ಗುಡಿಬಂಡೆ, ಚೆನ್ನೈ, ಮೈಸೂರು, ನಾಗರಹೊಳೆ, ಕಾರ್ಕಳ, ಕುಂದಾಪುರ, ಮತ್ತು ಫೆಬ್ರವರಿಯಲ್ಲಿ ಬೆಳಗಾವಿ, ಕೇರಳದ ಪಯನ್ನೂರು.
ನಾವು 6 ವರ್ಷ ಬೆಳ್ತಂಗಡಿ/ಉಜಿರೆಯಲ್ಲಿದ್ದಾಗ ಶೆಣೈ ಡಾಕ್ಟರ್ ನಮ್ಮ ಫ್ಯಾಮಿಲಿ ಡಾಕ್ಟರ್ ಮಾತ್ರವಲ್ಲ ಆಪ್ತ ಮಿತ್ರರು ಕೂಡ ಆಗಿದ್ದರು. ಅವರ ಮಕ್ಕಳು ಹೆಚ್ಚು ಕಡಿಮೆ ನನ್ನ ಮಕ್ಕಳ ವಯಸ್ದು, ಒಂದೇ ಶಾಲೆ...ಹಾಗೆ ಒಡನಾಟವಿತ್ತು. ಊರು ಬಿಟ್ಟ ಮೇಲೂ ಸಂಪರ್ಕದಲ್ಲಿ ದ್ದೆವು ಚಿಕ್ಕ ಮಗನ ಮದುವೆ ಪಯನ್ನೂರಿನಲ್ಲಿ ಹಮ್ಮಿಕೊಂಡಿದ್ದರು. ನಾನು ಅಕ್ಕ ಹೋಗುವುದೆಂದು ನಿರ್ಧರಿಸಿದೆವು. ಕೊನೆ ಕ್ಷಣದಲ್ಲಿ ನಿಹಾ ಕೂಡ ಬರುತ್ತೇನೆಂದಳು. ಹವಾಮಾನ ಚೆನ್ನಾಗಿತ್ತು. ಅಷ್ಟು ಸೆಕೆ ಅನ್ನಿಸಲಿಲ್ಲ
ಅಲ್ಲಿನ ಹಿನ್ನೀರು ದಾಟಿ ಸಮುದ್ರಕ್ಕೆ ಹೋಗಿದ್ದು ಮರೆಯಲಾಗದ ಅನುಭವ.
ಹೆಚ್ಚಿನ ಜನಕ್ಕೆ ಗೊತ್ತಿಲ್ಲದಿದ್ದರಿಂದುದಲೇನೋ ತುಂಬಾ ಸ್ವಚ್ಛ ಸಮುದ್ರದ ತಟ ನೋಡಲು ಸಿಕ್ಕಿತ್ತು. ಸೂರ್ಯಾಸ್ತಕ್ಕೆ ಸ್ವಲ್ಪ ಮುಂಚೆ ನಾವು ಒಂದು 10 ಜನರನ್ನು ದೋಣಿಯವ ಅಲ್ಲಿಗೆ ಬಿಟ್ಟ. ಸೂರ್ಯಾಸ್ತದ ನಂತರ ನಮನ್ನು ವಾಪಸ್ lake ಕಡೆ ತಂದು ಬಿಟ್ಟ.ಕೆಳಗಿವೆ ಕೆಲ ಚಿತ್ರಗಳು.
https://niharikashenoy.blogspot.com/2020/02/footloose-in-payannur-part-i.html
ನಿಹರಿಕಾ ತೆಗೆದ ಪಟ
ಛಾಯಾಗ್ರಾಹಕರು ಹೀಗೆ ನಿಂತಲ್ಲಿ ನಾವು ಸಮಾರಂಭ ನೋಡುವುದು ಹೇಗೆ?Marzipaan icecream
Kuch to gudbud hai
ನಾವು ಅಲ್ಲಿ rainbow ರೆಸಿಡೆನ್ಸಿ ನಲ್ಲಿ ಉಳಿದುಕೊಂಡಿದ್ದೆವು. ಅಲ್ಲಿಯ ಮ್ಯಾನೇಜರ್ ನಮ್ಮನ್ನು ತುಂಬಾ ಕಾಳಜಿಯಿಂದ ದೊಡ್ಡಣ್ಣನಂತೆ/ಅಪ್ಪನಂತೆ ನೋಡಿಕೊಂಡರು. ನಮಗೆ ತಿರುಗಾಟಕ್ಕೆ ಒಳ್ಳೆಯ ಜಾಗ ಮತ್ತು ವಾಹನವನ್ನೂ ಮಾಡಿಕೊಟ್ಟರು. ಅಲ್ಲಿಗೆ ಬರುವ ಹೆಚ್ಚಿನವರು ಮದುವೆ ಸಮಾರಂಭಕ್ಕೆ ಬರುತ್ತಾರೆ ವಿನಃ ಅದೂ ಟೂರಿಸ್ಟ್ spot ಅಲ್ಲ ಅಂತ ಹೇಳಿದರು.
ಅಲ್ಲಿಂದ ಮರಳಲು ನಮ್ಮ ಟ್ರೈನ್ ಟಿಕೆಟ್ ಕನ್ಫರ್ಮ್ ಆಗಿರಲಿಲ್ಲ. ಹಾಗಾಗಿ ಪಾಯನ್ನೂರಿನಿಂದ ಕಾಸರಗೋಡು, ಅಲ್ಲಿಂದ ಮಂಗಳೂರು. ಮಂಗಳೂರಿನಿಂದ ಎಸ್ ಆರ್ ಎಸ್ ಬಸ್. ಸ್ವಲ್ಪ ಸಮಯ ನಮ್ಮ ಕೈಯಲ್ಲಿರೋದರಿಂದ ನಾವು ತಾಜ್ಮಹಲ್ ಹೋಟಲ್ ಮತ್ತು ಐಡಿಎಲ್ ಐಸ್ಕ್ರೀಮ್ ಗೆ ಭೇಟಿ ನೀಡಿ ಬಂದ್ವಿ..

























