July 30, 2019

ಮನಸ್ಸಿದ್ದಲ್ಲಿ ಮಾರ್ಗ

ಸುಮಾರು ಎರಡು ವರ್ಷಗಳ ಹಿಂದಿನ ಕತೆ. ಸಂಜೆ ಮಾಮೂಲು ನಾನು ಬಾಲ್ಕನಿಯಲ್ಲಿರೋದು. ಕೆಲವೊಮ್ಮೆ ಪುಸ್ತಕ ಓದ್ತಾ, ಕೆಲವೊಮ್ಮೆ ಕುತ್ತಿಗೆಗೆ ಬೈನೂಕುಲರ್ ನೇತಾಡಿಸಿಕೊಂಡು ಎದುರಿಗಿರುವ ಮರಗಳಲ್ಲಿ ಬರುವ ಹಕ್ಕಿ ಗಳ ನ್ನು ಸಮಯ ಕಳಿತೀನಿ. ಹೀಗೆ ಬಗ್ಗಿ ಒಂದ್ಸಲ ಬಿಲ್ಡಿಂಗ್ ನ ಕೆಳಗಡೆ ನೋಡ್ತಾ ಆ ಮಹಿಳೆ ಕಾಣಿಸಿದ್ರು. ಕಷ್ಟ ಪಟ್ಟು ವಾಕರ್ ಸಹಾಯದಿಂದ ನಡೀತಾ ಇದ್ರು. ಸಿಕ್ಕಾಪಟ್ಟೆ ಬೊಜ್ಜು. ಧರಿಸಿದ ತೋಳಿಲ್ಲದ ಕಮೀಜ್ ನಿಂದ ಜೋತಾಡುತ್ತಿರುವ ಮಾಂಸ. ಎರಡು ಹೆಜ್ಜೆ ನಡೆದು ಸುಧಾರಿಸ್ಕೊಳ್ತಾ ಇದ್ರು. ಬಳಬಳನೆ ಇಳಿಯುತ್ತಿರುವ ಬೆವರು. ಆಕೆಯ ಅಕ್ಕಪಕ್ಕ ಅವಳನ್ನು encourage ಮಾಡುವ ಮಗ, ಮಗಳು. ಕೆಲವೊಮ್ಮೆ ನಾನು ವಾಕ್ ಮಾಡುವಾಗ ಬರುತ್ತಿದ್ದರು. ಕಾಲೇಜು ಕಲಿಯುತ್ತಿರುವ ಇಬ್ಬರು ಮಕ್ಕಳು, ಹಾಡು ಹೇಳ್ತಾ, ಜೋಕ್ಸ್ ಹೇಳ್ತಾ ಆಕೆಯನ್ನು ನಡೆಯಲು ಹುರಿದುಂಬಿಸುತ್ತಿದ್ದರು. ಚಿಕ್ಕ ವಯಸ್ದು ಆಕೆಗೆ. ಬೊಜ್ಜು ತಿಂದು ಬಂದದ್ದಲ್ಲ, ಏನೋ ರೋಗ.
ಆಮೇಲೆ ಸುಮಾರುವಾರು ತಿಂಗಳು ನಾನು ಬೇರೆ ಪಾರ್ಕ್ ಗೆ ಹೋಗ್ತಿದ್ದೆ, ಮತ್ತು ಪ್ರಯಾಣ ಅದು ಇದು ಅಂತ ಆಕೆಯ ಬಗ್ಗೆ ಮರೆತೇ ಹೋಯಿತು.
ಹೀಗೆ ಒಂದ್ಸಲ ಪುನಃ ಬಾಲ್ಕನಿಯಿಂದ ಆಕೆಯನ್ನು ನೋಡಿ ದೇ. ಈಗ ವಾಲ್ಕಿಂಗ್ ಸ್ಟಿಕ್ ಮಾತ್ರ ಉಪಯೋಗಿಸಿ ನಡೀತಾ ಇದ್ರು, ಅಕ್ಕ ಪಕ್ಕ ಮಕ್ಕಳಿರಲಿಲ್ಲ. ಮತ್ತೊಮ್ಮೆ ತಿಂಗಳುಗಳ ಸಮಯದ ನಂತರ ನೋಡಿದ್ರೆ, ಇನ್ನಷ್ಟು ಸ್ಲಿಮ್ ಆಗಿ ಚೆಂದದ ಡ್ರೆಸ್ ಹಾಕ್ಕೊಂಡಿದ್ರು. ಅವರ ಗುರ್ತು ಹಿಡಿಯಲು ನನಗೆ ಸಮಯ ಹಿಡೀತು. ಹಿಂದುರಿಗಿ ಅವರ ಬಳಿ ಬಂದು ಆಕೆಯನ್ನು ಅಭಿನಂದಿಸಿದೆ.
ಹೇಗೆ ಸಾಧ್ಯ ಆಯ್ತು ಅಂತ ಕೇಳಿದೆ.
ಗಂಡ ತೀರಿಕೊಂಡ ಬಳಿ ಅವರು depression ಗೆ ಒಳಗಾದ್ರಂತೆ. ಔಷಧೀಯ side ಎಫ್ಫೆಕ್ಟ್ ನಿಂದ ಬೊಜ್ಜು ಬಂದು, ಅದನ್ನು ನಿವಾರಿಸಲು ಇವರೂ ಮನಸ್ಸು ಮಾಡಲಿಲ್ಲವಂತೆ. ಕೆಲಸದವರ ಮೇಲೆ ಪೂರ್ತಿ ಅವಲಂಬನೆ, ಅವರ ಉಡಾಫೆ, ಸಂಬಂಧಿಕರ ನಿರ್ಲಕ್ಷ,  ನಡೆಯುವಾಗ thighs ಉಜ್ಜಿ ಉಜ್ಜಿ ಆದ ನವೆ ಗುಣವಾಗಲು ತಿಂಗಳುಗಟ್ಟಲೆ ತೆಗೊಂಡ ಸಮಯ ಅವರನ್ನು weight loss ನತ್ತ ಮನಸ್ಸು ತಿರುಗಿಸಿತಂತೆ. ಮಕ್ಕಳು ತುಂಬಾ ಸಹಾಯ ಮಾಡಿದ್ರು ಅಂದರು.
ನನಗಂತೂ ಸರಿ ತಿನ್ನಬೇಕು. ಆದರೆ ತಿಂದನ್ನು ಅರಗಿಸಲು ಸೋಮಾರಿತನ. ಆಫಿಸಿಗೆ ಹೋಗುವಾಗ ಫಿಟ್ ಆಗಿದೆ. ತುಂಬಾ ನಡೀತಿದ್ದೆ. ಇತ್ತೀಚೆಗೆ ವಾಕಿಂಗ್ ಕಡಿಮೆಯಾಗಿತ್ತು. ಸೊಂಟ ನೋವು, ಬೆನ್ನು ನೋವು, ಮೊಣಕಾಲು ನೋವು ಅಂತ ವಾಕಿಂಗ್ ತಪ್ಪಿಸ್ತಿದೆ. ಸಹಜವಾಗೇ ಮೈ ಬಂದಿತ್ತು. ವಾಕ್, ತಿನ್ನುವುದರ ಮೇಲೆ ಹಿಡಿತ, ತುಂಬಾ ನೀರಿನ intake ಇದರಿಂದ weight ಸರಿಯಾಗಿದೆ. ಅಷ್ಟಲ್ಲದೆ ಹಿಂದಿನ ಸಾರಿ ವೈದ್ಯರು 12 ಕೆ ಜಿ ಯಷ್ಟು ತೂಕ ಕಡಿಮೆ ಮಾಡಬೇಕು. Cholestrol high ಇದೆ. ಕಡಿಮೆಮಾಡದಿದ್ದಲ್ಲಿ ಶೂಗರ್ ಬರುವ ಅನುಮಾನ ಇದೆ ಅಂದಿದ್ರು. ಈಗ ನನ್ನ B M I ಪ್ರಕಸರ ನನ್ನ ತೂಕ ಸರಿಯಾಗಿದೆ. ಹೊಟ್ಟೆ fat ಕಡೆ ಸ್ವಲ್ಪ ಗಮನಕೊಡಬೇಕಾಗಿದೆ. ತೂಕ ಕಡಿಮೆಯಾದ ಹಿನ್ನೆಲೆಯಲ್ಲಿ ಗಂಟು ನೋವು ಕೂಡ ಪೂರ್ತಿ ನಿವಾರಣೆಯಾಗಿದೆ.

July 2, 2019

ಸಮಯಪ್ರಜ್ಞೆ

ಏನೋ ಸದ್ದಿಗೆ ಎಚ್ಚರ ಆಯ್ತು ಸಮನ್ವಿತಾಳಿಗೆ. ಯಾರೋ ಮುಖ್ಯ ಬಾಗಿಲಿಗೆ ಬೀಗದ ಕೈ ಹಾಕಿ ತಿರುವ ಪ್ರಯತ್ನ ಮಾಡುತ್ತಿದ್ದರು. ಕೂಡಲೇ ಸೆಕ್ಯುರಿಟಿಯವರಿಗೆ ಸಂದೇಶ ರವಾನಿಸಿ ಕಳ್ಳರನ್ನು ಹಿಡಿಯಲು ಅವಕಾಶವಾಯಿತು. ಪೊಲೀಸರು ಬಂದು ಅವರನ್ನು ಹಿಡಿದುಕೊಂಡು ಹೋದರು
ಅಪಘಾತ ಆದಾಗ ಬೈಕ್ ಮೇಲಿಂದ ಸುಮಾರು ದೂರ ಹಾರಿ ಹೋಗಿ ಬಿದ್ದಿದ್ದಳು ಸಮನ್ವಿತಾ. ಹೆಲ್ಮೆಟ್, ಪರ್ಸ್, ದುಪಟ್ಟಾ ಎಲ್ಲಾ ಚಿಲ್ಲಾಪಿಲ್ಲಿ ಆಗಿ ಬಿದ್ದಿತ್ತು. ಅಷ್ಟರಲ್ಲೇ ಯಾರೋ ಪರ್ಸ್ ಎಗರಿಸಿಕೊಂಡು ಓಡಿ ಯಾಗಿತ್ತು. ಏಟಾಗಿಲ್ಲದಿದ್ದರೂ ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾಯಿತು. ಗಾಡಿ ಓಡಿಸುತ್ತಿದ್ದ ಸಂಭ್ರಮ್ಮ್ ಗೆ ಕೆಲವು ತರಚು ಗಾಯ ಬಿಟ್ಟರೆ ಏನು serious ಏಟು ಆಗಿರಲಿಲ್ಲ. ಅಲ್ಲೇ ಹತ್ತಿರದ ಆಸ್ಪತ್ರೆಯಲ್ಲಿ first aid
 ಚಿಕಿತ್ಸೆ ಮ್ತ್ತುಆಡಿಸಿಕೊಂಡು  ಮುಂದೆ ಬರುವ ಮೈ ಕೈ ನೋವಿಗೆ ಔಷಧ ತೆಗೆದುಕೊಂಡು ಮನೆಗೆ ಬಂದು ಕೆಲಸ್ಆಅಕ್ಕೆ ರಜೆ ಕೋರಿದರು.
ಆಮೇಲೆ ಸಮನ್ವಿತಾ ಮಾಡಿದ ಮೊದಲ ಕೆಲಸ ಅಂದರೆ ಬೀಗ ರಿಪೇರಿ ಮಾಡುವವರನ್ನು ಕರೆದು ಮುಖ್ಯ ಬಾಗಿಲಿನ ಬೀಗ ಬದಲಾಯಿಸಿದ್ದು. ಯಾಕೇಂದರೆ ಪರ್ಸ್ ನಲ್ಲಿ ಅವಳ id ಕಾರ್ಡ್, ಕ್ರೆಡಿಟ್ ಕಾರ್ಡ್ ಜತೆ ಮನೆಯ ಬೀಗದ ಕೈ ಕೂಡ ಇತ್ತು. ಮನೆಯ ಅಡ್ರೆಸ್ ಮತ್ತು ಬೀಗದ ಕೈ ಇದ್ದಾಗ ಖಂಡಿತ ಕಳವು ಮಾಡಲು ಬರುವರೆಂಬ ಖಾತ್ರಿಯಿತ್ತು ಅವಳಿಗೆ. ಮನೆಯಲ್ಲಿ ಹಲವಾರು ಬೆಲೆ ಬಾಳುವ ಪೈಂಟಿಂಗ್ಸ್ ಮತ್ತು artefacts ಗಳಿದ್ದವು
ಹೀಗೆ ಅವಳ ಸಮಯ ಪ್ರಜ್ಞೆಯಿಂದ ಕಳ್ಳರನ್ನು ಹಿಡಿಯಲು ಸಹಾಯವಾಯಿತು.
ಇವತ್ತು ಬೆಳಿಗ್ಗೆ ವಾಕ್ ಮಾಡುವಾಗ ಹೊಳೆದ ಕತೆ
😊