June 30, 2016

ಭಯ

ಆತನಿಗೆ ಹಾವೆಂದರೆ ಸಿಕ್ಕಾಪಟ್ಟೆ ಭಯ. ಹಾಗಾಗಿ ಅವನ ಊರಲ್ಲಿ ೧೦೬ ನೇ ಮಹಡಿಯ ಕಟ್ಟಡದಲ್ಲಿ ೧೦೬ ನೇ ಮಹಡಿಯಲ್ಲಿ ಮನೆ ಕೊಂಡುಕೊಂಡ. ಅಷ್ಟು ದೊಡ್ಡ ಕಟ್ಟಡಕ್ಕೆ ಹಾವು ಬರುವ ಹೆದರಿಕೆ ಅವನಿಗೆ ಲವಲೇಶವೂ ಇರಲಿಲ್ಲ, ಹಾಗಾಗಿ ಅವನು ಆ ರಾತ್ರಿ ತುಂಬಾ ಚೆನ್ನಾಗಿ ನಿದ್ದೆ ಮಾಡಿದ. ಮಾರನೇ ದಿನ ಬೆಳಿಗ್ಗೆ ಬಾಗಿಲಿನ ಕರೆಗಂಟೆಯ ಸದ್ದಾದಾಗ ಅವನಿಗೆ ಎಚ್ಚರ. ಅವನ ಪಕ್ಕದ ಫ್ಲ್ಯಾಟ್ ನಲ್ಲಿರುವ ಅಮ್ಮ ಮಗ ಕೂಡಿ  ಅವನಿಗೆ ಆ ಕಟ್ಟಡಕ್ಕೆ ಹಾಗೂ ಅವರ ನೆಕ್ಸ್ಟ್ ಡೋರ್ ನೈಬರ್ ಆಗಿದ್ದಕ್ಕೆ ಸ್ವಾಗತಿಸಲು ಬಂದು ಒಂದು ಚಂದದ  ಸಣ್ಣ ಸಣ್ಣ ನೇರಳೆ ಬಣ್ಣದ ಹೂಗಳ ಕುಂಡವನ್ನು ಕೊಟ್ಟು ಅವರು ಹೊರಟರು. ಅದನ್ನು ಬಾಲ್ಕನಿಯ ಕಟ್ಟೆಯ ಮೇಲಿಟ್ಟು ಎಷ್ಟು ಸುಂದರವಾಗಿ  ಫ್ಲ್ಯಾಟ್ ಗೆ ಕಳೆಯನ್ನು ಕೊಟ್ಟಿದೆ ಆ ಹೂ ಕುಂಡ ಅಂತ ಖುಷಿಯಾಗಿದ್ದ. 
ಮರುದಿನ ಬೆಳಿಗ್ಗೆ ಎದ್ದ ಕೂಡಲೇ ಅವನ ಕಣ್ಣು ಹೂಕುಂಡದ ಬಳಿ ಹೋಯಿತು. ಅಲ್ಲೇನೋ ವಿಲವಿಲನೆ ಅಲ್ಲಾಡುವ ಹುಳ ಕಾಣಿಸಿತು. ಹಾವು ಎಂದು ಆತನಿಗೆ ಹೃದಯ sthaMbana ಆಯ್ತು. 
ಎರಡು ದಿನದ ನಂತರ ಕೊಳೆತ ವಾಸನೆಗೆ ಪೊಲೀಸರು ಮನೆ ಬಾಗಿಲು ಒಡೆದು ಒಳ ಹೊಕ್ಕರು. ಪುಟ್ಟ ಗಿಡ ಬಿಸಿಲಿಗೆ ಒಣಗಿತ್ತು ಅದರಿಂದ ಕೆಲವು ಎರೆಹುಳಗಳು ಹರಿದಾಡ್ತಿದ್ದವು. ಆ ಮನುಷ್ಯ ಅವನ್ನೇ ಹಾವು ಎಂದು ತಿಳಿದು ಹೆದರಿ ಮೃತ ಪಟ್ಟಿದ್ದ. 
ನನ್ನ ಅಜ್ಜ ನಾನು ಚಿಕ್ಕವಳಿದ್ದಾಗ ಒಂದು ಕತೆ ಹೇಳಿದ್ದರು. ಒಬ್ಬನ ಮಗನ  ಕುಂಡಲಿಯಲ್ಲಿ ಹಾವಿನ ಕಡಿತದಿಂದ ಸಾವು ಎಂದು ಬರೆದಿತ್ತು. ಹಾಗಾಗಿ ಅವನ ತಂದೆ  ಸಮುದ್ರದ ಮಧ್ಯೆ ಒಂದು ಕಂಬ ಕಟ್ಟಿ ಆ ಕಂಬದ ಮೇಲೆ ಮನೆಯೊಂದನ್ನು ಮಾಡಿ ಮಗನನ್ನು ಅಲಿಟ್ಟನಂತೆ . ಆಳು ಕಾಳು  ಸೇವಕರಿಂದ ಜೀವನ ಏನು ಸಮಸ್ಯೆ ಇಲ್ಲದೆ ನಡೆಯುತ್ತಿತ್ತು. ಮಗನಿಗೆ ೧೮ ವರ್ಷ  ಆದಾಗ ತಂದೆ ಅಂದುಕೊಂಡನಂತೆ "ಈ ಕುಂಡಲಿ ಎಲ್ಲ ಸುಳ್ಳು ' ಅಷ್ಟು ಉದ್ದದ ಕಂಬದ ಮೇಲಿನ ಮನೆಗೆ ಹಾವು ಹೇಗೆ ಹೋಗುತ್ತೆ' ಅಂತ,
ಮಗ ಒಂದು ಸಲ ಸಮುದ್ರದ ಕಡೆಗೆ ನೋಡುತ್ತಿದ್ದ ಹಾಗೆ ಒಂದು ಚೆಂದದ  ನಿಂಬೆ ಹಣ್ಣು ನೀರೊಳಗೆ ತೇಲಿ ಹೋಗುತ್ತಾ ಇತ್ತಂತೆ. ಆ ಹುಡುಗ ಆಳುಗಳನ್ನು ಕಳುಹಿಸಿ ಅದನ್ನು ತನ್ನ ಕೊಠಡಿ ಗೆ ತರಿಸಿದನಂತೆ. ರಸಭರಿತ ನಿಂಬೆ ಹಣ್ಣನ್ನು ಚಾಕುವಿನಿಂದ ಕೊಯ್ದಾಗ ಅದರಲ್ಲಿನ ಹಾವು ಹೊರಗೆ ಬಂದು ಆ ಹುಡುಗನ್ನ ಕಚ್ಚಿಬಿಟ್ಟಿತಂತೆ, ಈ ಕತೆ ನೆನಪಾಗಿ ಮೇಲಿನ ಕತೆ ಬರೆದಿದ್ದು. 
ಅಂದ ಹಾಗೆ ಒಂದು ಸಲ ಶ್ರೀಕಾಂತ ಕಸಿನ್ ಮನೆ ಗೋವಾದಲ್ಲಿನ ಅವರ  ಮನೆಗೆ, ಅದೂ  ಅವರು ಇದ್ದದ್ದು ಎಂಟನೇ ಮಹಡಿಯಲ್ಲಿ . ಅವರ ಬಾಲ್ಕನಿಯಲ್ಲಿ ಹಾವನ್ನು ಕಂಡು ಹೆದರಿದ್ದರು. ನನಗೆ ಫೋನ್ ಮಾಡಿದಾಗ ನಾನು ಡಿಟೆಕ್ಟಿವ್ ತರಹ ಎಲ್ಲ ಕೇಳಿಕೊಂಡು, ಅಂದರೆ ಮನೆಯಲ್ಲಿ ಏನೇನೆಲ್ಲ ನಡೆಯಿತು, ಆ ದಿನ ಮನೆಗೆ ಹೊರಗಿನಿಂದ ಏನು ತಂದಿದ್ದರು ವಗೈರೆ. 
ಆಗ ಗೊತ್ತಾದದ್ದು ಅದು ಮನೆಗೆ ತಂದು ಕೊಟ್ಟ ಕಣಿಲೆಯ ಪದರದಲ್ಲಿ ಅಡಗಿಕೊಂಡು ಬಂದಂತಹ   ಹಾವಿನ ಮರಿ... ವಿಷಕಾರಿ ಅಲ್ಲ ಅನ್ನುವುದೊಂದೇ ಸಮಾಧಾನ 
ಮೊನ್ನೆ   ಸ್ನೇಹಿತೆ ಸೂಸಿ ಫೋನ್  ಮಾಡಿದಾಗ, ನೀರಿನ ಹೂಜಿ  ತೆಗೆದಿದ್ದೆ ಕ್ಲಿನ್ ಮಾಡಲು ಅದರ ಕೆಳಗೆ ಸ್ವಲ್ಪ ಜಾಗ ಇತ್ತು . ಅದರಲ್ಲಿ ಹಾವೊಂದು ಸಿಂಬಿ ಸುತ್ತಿ   ಕುಳಿತಿತ್ತು. ಮಾಲತಿ ಇದ್ದರೆ  ಏನು ಮಾಡ್ತಿದ್ದಳು ಅಂತ ಆಲೋಚನೆ ಮಾಡಿ ಅದನ್ನು ಕಸಬರಿಕೆ ಮತ್ತು ರಟ್ಟಿನ ಸಹಾಯದಿಂದ   ನೀರಿನ ಕೊಳದಲ್ಲಿ ಬಿಟ್ಟರಂತೆ. ಸೂಸಿ ಇರೋದು ಚಾರ್ಮಾಡಿ ಬೆಟ್ಟದ ತಪ್ಪಲಿನಲ್ಲಿ, ದಡ್ಡ ಕಾಡಿನ ನಡುವೆ. ಹಾಗಾಗಿ ಅಲ್ಲಿ ಹಾವು ಸರ್ವೇ ಸಾಮಾನ್ಯ. 
ಸುಮ್ನೆ ಒಂದು ಲಹರಿ, ಆಗುವುದೆಲ್ಲ ಆಗೇ ಆಗುತ್ತೆ. ಸುಮ್ಮನೆ ಹೆದರಿಕೊಂಡು ಇರಬಾರದು.  
:-)

June 23, 2016

Anti climax- a kannada short story

'ಅಮ್ಮಾ ನಿನ್ನ ಆ ಜುಜುಬಿ ಕೆಲಸ ಬಿಟ್ಟು ಬಿಡು ನನ್ನ ಜತೆ ಯು ಎಸ ಗೆ ಬಾ ಅಂತ ಮಗಳ ಮಾತು ಕೇಳಿ ಸರಸಳಿಗೆ ಮೈ ಪರಚಿಕೊಳ್ಳುವಂತೆ ಆಯ್ತು. ಆಫಿಸಿಗೆ ಲೇಟ್ ಆಗುತ್ತೆ ಬೇಗ ದೋಸೆ ತಿನ್ನಲು ಬಾ ಅಂದಿದ್ದಕ್ಕೆ ಮಗಳು ವೇಣಿ ಹೀಗೆ ಮಾತಾಡಿದ್ದಳು. 

ಸರಸ ಮೌನ ತಾಳಿ ಆಫಿಸ್ ಗೆ ನಡೆದಳು. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಹಾಗೆ ಹಿಂದಿನ ನೆನಪುಗಳೆಲ್ಲ ಫ್ಲಾಶ್ ಬ್ಯಾಕ್ ನಲ್ಲಿ ಅವಳಿಗೆ ಗೋಚರಿಸಿತು. ಕಣ್ಣು ಮುಚ್ಚಿ ತಲೆಯನ್ನು ಕಿಟಕಿಗಾನಿಸಿದಳು. 

ಆಗಿನ ಕಾಲದ ಹಾಗೆ ಸರಸ್ಳಿಗೆ ಬೇಗ ನೆ ಮದುವೆ ಮಾಡಿದರು. ಆಕೆಯದ್ದು ಪಿ ಯು ಸಿ ಮುಗಿದಿದ್ದಷ್ಟೆ. ಅವಳ ಅಪ್ಪ ನಿಗೆ ಅವಳನ್ನು ಮುಂದಕ್ಕೆ ಓದಿಸುವ ಯೋಚನೆಯಿರಲಿಲ್ಲ. ಹಾಗೇ ಈ ನೆಂಟಸ್ತನ ಕೂಡಿ ಬಂತು. ಮದುವೆಯೂ ಆಯಿತು. ಸರಸ ಹಠವಿಡಿದು ಮನೆಕೆಲಸದೊಂದಿಗೆ ಓದನ್ನು ಮುಂದುವರೆಸಿ  ಸ್ನಾತಕೋತ್ತರ ಪದವಿಯನ್ನು ಪಡೆಯಲು ಯಶಸ್ವಿಯಾದಳು. ನರಹರಿ ಒಳ್ಳೆಯವನು. ಫ್ಯಾಕ್ಟರಿ ಒಂದರಲ್ಲಿ ಸೂಪರ್ವೈಸರ್ ಕೆಲಸ. ಸಂಬಳ ತಕ್ಕಮಟ್ಟಿಗಿತ್ತು. ಆದರೆ ಕಾಯಿಲೆಯ ಮನುಷ್ಯ. ಎರಡು ದಿನ ಕೆಲಸಕ್ಕೆ ಹೋದರೆ ನಾಲ್ಕು ದಿನ ಮನೆಯಲ್ಲಿ. ಹಾಗಾಗಿ ಹಿಂದೆ ಮುಂದೆ ಆಲೋಚಿಸದೆ ಸರಸ ಬ್ಯಾಂಕ್ ಒಂದರಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಯಶಸ್ವಿಯಾದಳು. ಮಗಳು ತ್ರಿವೇಣಿ ಹುಟ್ಟಿದ ನಾಲ್ಕು ವರ್ಷಕ್ಕೆ ನರಹರಿ ಕಾಲವಾದ . ಆಗ ಸರಸಳ ನೌಕರಿಯೇ ಅವಳಿಗೆ ಧೈರ್ಯ ತುಂಬಿದ್ದು. ಮಗಳು ಓದುವುದರಲ್ಲಿ ಅಷ್ಟು ಜಾಣೆಯಲ್ಲದಿದ್ದರೂ ಇಂಜಿನಿಯರಿಂಗ್  ಮಾಡಲೇ ಬೇಕೆಂದು ಹಠ ಹಿಡಿದಿದ್ದರಿಂದ ಬ್ಯಾಂಕ ನಲ್ಲಿ ಸಾಲ ಸೋಲ ಮಾಡಿ ಅವಳಿಗೆ ಓದಿಸಿದ್ದಳು. ಈಗ ಅವಳಿಗೆ ಹೆಸರಾಂತ ಐಟಿ ಕಂಪನೆಯೊಂದರಲ್ಲಿ ಕೆಲಸ. ಅದರ ನಿಮಿತ್ತ ಅವಳು ಯು ಎಸ ನಲ್ಲಿರೋದು. ಅಲ್ಲಿಯೇ ಅವಳ ಸಹ ಕೆಲಸಗಾರನೊಂದಿಗೆ ಮದುವೆ ಮಾಡಿಕೊಂಡಿದ್ದಾಳೆ. ಈಗ ಅವಳು ಚೊಚ್ಚಿಲ  ಗರ್ಭಿಣಿ. ಭಾರತದ ಕಛೇರಿಯಿಂದ ಕೆಲವೊಂದು ಡಾಕ್ಯೂಮೆಂಟ್ಸ್ ಗೆಂದು ಬಂದಿದ್ದವಳು ಈ ಮಾತು ಹೇಳಿದ್ದಾಳೆ. 

ದುಡಿಯುವ ಮಗಳು ಒಂದು  ದಿನ ಕೂಡ ಅಮ್ಮ ಪಡೆದ  ಲೋನ್ ನ ವಿಷಯದ ಬಗ್ಗೆ ಮಾತಾಡಿಲ್ಲ . ಈಗ ಅವಳು ಪ್ರೀತಿಯಿಂದೇನೂ ಅವಳ ಅಮ್ಮನನ್ನು ತನ್ನ ಜೊತೆ ಇರಕ್ಕೆ ಕರೆದಿಲ್ಲ ಎಂದು ಸರಸಳಿಗೆ ಗೊತ್ತು. ಅಲ್ಲಿ ಅವಳ ಬಾಣಂತನ ಮತ್ತು ಮಗುವನ್ನು ನೋಡಿಕೊಳ್ಳಲು ಅಷ್ಟೆ ಬಾ ಎಂದಿದ್ದಾಳೆ. 

ಸರಸ  ದುಡ್ಡಿನ ಸಂಕಷ್ಟದಿಂದ  ಹಲವಾರು ಸಲ ಚಿಕ್ಕ ಪುಟ್ಟ ಆಸೆಗಳನ್ನು ಕೈ ಬಿಟ್ಟಿದ್ದಾಳೆ, ಆದರೆ ಮಗಳಿಗೆ ಏನನ್ನು ಕಡಿಮೆಯಾಗದಂತೆ ಬೆಳೆಸಿದ್ದಾಳೆ,

ಸಂಜೆ ಬಂದ ಮೇಲೆ ಆಕೆ ವೇಣಿಯನ್ನು ತರಾಟೆಗೆ ತೆಗೆದುಕೊಂಡಳು. "ಏನೇ ನನ್ನ ಕೆಲಸ ಜುಜುಬಿಯಾ? ನಿನ್ನ ಓದಿಗೆ, ನಂತರದ ಕೆಲಸಕ್ಕೆ ಈ ಜುಜುಬಿ  ಕೆಲಸದ ಸಂಬಳದಿಂದಲೇ ಸಾಧ್ಯವಾಗಿದ್ದು. ನಾನು ಯು ಎಸ ಗೆ ನಿನ್ನ ಸೇವೆ ಮಾಡಲು ಬರಲ್ಲ. ಬೇಕಾದರೆ ನಿನ್ನ ಗಂಡ ನ ಕಡೆಯವರನ್ನು ಕರೆ'
ಏನಂದಿ? ನನ್ನ ಗಂಡನ ಕಡೆಯವರಾ? ಅವರನ್ನು ಏನೆಂದು ಕೊಂಡಿದ್ದೀಯಾ ?ಅವರು ದೊಡ್ಡ ಜನ . ಅವರೆಲ್ಲ ಹಾಗೆಲ್ಲಾ ಬರಲ್ಲ. 
"ಮತ್ತು  ನಾನೇನೂ ಇಲ್ಲಿ ಬಿಟ್ಟ್ಟಿ ಕೂತಿದ್ದಿನಾ?? ಲೋನ್ ತೆಗೆಂಡಿದ್ದು ಏನು ಮಾಡೋದು? ನೀನು ಒಂದಿನನಾದ್ರೂ  ಅಮ್ಮ ಉಳಿದ ದುಡ್ಡು ಕಟ್ಟುತ್ತೀನಿ ಅಂದ್ಯಾ? ಹೋಗಲಿ ಬಿಡು ಕೆಲಸ ಬಿಟ್ರೆ ಕಾಯಂ ಆಗಿ ನನ್ನನ್ನು ಯು ಎಸ ನಲ್ಲಿಟ್ಟು ಕೋತಿಯಾ? 
ಅದಕ್ಕೆ ವೇಣಿ ಏನೂ ಉತರಿಸಲಿಲ್ಲ . ಅದರ ಬದಲು 'ನೀನು ನನಗೆ ಈಗ ಸಹಾಯ ಮಾಡದಿದ್ದರೆ ಇನ್ನೆಂದೂ ನಿನ್ನ ಮುಖ ನೋಡಲ್ಲ' ಅಂತ ಸಿಟ್ಟಿನಿಂದ ಅಬ್ಬರಿಸಿದಳು 
ಅದಕ್ಕೆ ಸರಸ 'ಹೋಗ್ , ಹೋಗೆ ನಿನ್ನನ್ನು ನಂಬಿ ಜೀವನ ಮಾಡಿದ್ರೆ ಅಷ್ಟೇ, ನನ್ನ ಕತೆ ಗೋವಿಂದ. ಇನ್ನು ಹತ್ತು ವರ್ಷ ಸರ್ವಿಸ್ ಇದೆ ನನಗೆ.   ನೀನು ನನ್ನ ಮುಖ ನೋಡೋದೇನೂ ಬೇಡ. ಆದ್ರೆ ನನ್ನ ನಂತರ ನನ್ನ ಆಸ್ತಿ ನಿನಗೆ ಒಂದು ಬಿಡಿಗಾಸು ಸಿಗಲ್ಲಾ. ಎಲ್ಲ ಅನಾಥಾಶ್ರಮಕ್ಕೆ ಬರೆದು ಕೊಡುತ್ತೇನೆ. ಅಹಂಕಾರ ನಿನಗೆ ಮಾತ್ರ ಕಟ್ಟಿಟ್ಟ ಬುತ್ತಿಯಲ್ಲ. ನನ್ನ ಮುಂದಿನ ಜೀವನ ನಾನು ಆರಾಮಾಗಿ ನಡೆಸುತ್ತೇನೆ. ನಿನಗೊಂದು ದೊಡ್ಡ ನಮಸ್ಕಾರ 'ಎಂದು ಮಾತು ಮುಗಿಸಿ, ತನ್ನ ಸಂಜೆಯ ವಾಕ್ ಗೆ ಹೊರಟು ಹೋದಳು 
:-) 


June 20, 2016

In God's own country - a place to relax

Last week Niha was called to assist in a photoshoot of a new holidayhome/resort. At the last minute Niha asked if i wanted to accompany her and i accepted.  Armed with a suspense thriller and quickly bundling some clothes and snacks in a bag , we caught the Kerala Transport bus at three from Kengeri Satellite town to Sulthan Battheri, waynad district, Kerala. With just short stop at Mysore and another one at Gundlupet for evening tea we reached Sulthan battheri at 8.30 pm in the night.
The manager of the resort was waiting to pick us up. There was a slight drizzle and it was cool. But the way to the resort was dark.







A quick look around the rooms and hot yummy dinner and we were off to retire for the day.the mattress was comfortable and the quilt warm.   Morning i woke to the twittering of innumerable birds.


After freshening up Niha went to assist her friend in making the arrangements for Photoshoot and i took a quiet walk by myself. The roads were full of ups and downs and surrounded by lush greenery and to my utter delight i found there were many households in the surrounding area. the road to resort was dark because of the powercut and also due to the thick cover of greenery. Not long into my walk and  i realised were situated just few minutes away from the bus stand and further away was the market. On the way met a fish seller and milk man on moped with loud hrns. they stand in a corner and blow on their horn ( both the horns had different sounds for the people to identify between the fish and milk seller) and people in the vicinity run with their vessels for fish or milk. :-)
 clean country road with not much traffic is ideal for family outings on bicycles


After a yummy breakfast of puttu and kadala curry and When Niha was busy with her work i spent quiet time with my book and FaceBook 🙂
at night the place is good to have barbecues and campfire, there is ample space for games and parking your vehicles.
If you want a break from Bangalore and wish to visit some place nearby and if you would like to read/ write something this is the place to be.
Morning walks are the pleasantest. You can see deers roaming freely and i spied more than 10 varieties of birds (they were hard to capture on my cell phone) and a strange snake with a head on both the ends 🙂




The people looking after the place, be it Sandhya who mans the front office or tangamma who dishes out tasty kerala delicacies and mujeeb and babu, the Manager Ajeesh are all friendly, smiling  and approachable.
They have different tour packages for the guests and once their website is up and running i will link it up to this note.
In the meantime you can contact  Ajeesh's at:
Three roots
+91 9947697651
+91 9946 225455
Email: threerootsstay@gmail.com

So what are you doing this weekend???!!
:-)