January 29, 2016

cake anek

ಇನ್ನಷ್ಟು ಕೇಕ್ ಗಳು. ಮಾಲವಿಕಾಳ speciality ಕುಕೀ ಮಾಡುವುದರಲ್ಲಿ. ಕುಕಿಗಳ ಆರ್ಡರ್ ಬಂದಾಗ ಅವಳಿಗೆ ತುಂಬಾ ಖುಷಿ . ಜನರಿಗೆ ಇತ್ತಿತ್ತಲಾಗಿ , ಅದರಲ್ಲೂ ಮಕ್ಕಳಿಗೆ ಕುಕೀ ಬಗ್ಗೆ ಎಲ್ಲ ಗೊತ್ತು. ಈ ಕುಕೀ ಗಳು ಬಿಸ್ಕಿಟ್ ತರಹ ಕುರುಂ ಇರಲ್ಲ. ಸ್ವಲ್ಪ ಮೆತ್ತಗೆ ಇರುತ್ವೆ. ಕಾಫಿ ಜತೆ ಒಳ್ಳೆಯ ಕಾಂಬಿನೇಶನ್. ಮಾಳವಿಕಾ  ಮೊಟ್ಟೆಯಿಲ್ಲದ ಕೂಕಿಗಳನ್ನು ಮಾಡುತ್ತಾಳೆ. ಅವಳ ಕೇಕ್ ಕೂಡ ಎಗ್ ಲೆಸ್. ಯಾರಾದರೂ ಸ್ಪೆಸಿಫಿಕ್ ಆಗಿ ಕೇಳಿದ್ರೆ ಮಾತ್ರ ಮೊಟ್ಟೆ ಹಾಕ್ತಾಳೆ ಇಲ್ಲದಿದ್ದರೆ by ಡಿಫಾಲ್ಟ್ ಮೊಟ್ಟೆ ರಹಿತ ಕೇಕ್ ನಮ್ಮ ಬಿಸ್ಕೂಟ್ ಫ್ಯಾಕ್ಟರಿನಲ್ಲಿ. 
ಓದಲು ಇಷ್ಟ ಪಡುವ ಹುಡುಗಿಗೆ ಹ್ಯಾರಿ potter ಪುಸ್ತಕದ ಪನ್ನೆ.  ಅವಳು ಅವಳ ಫ್ರೆಂಡ್ಸ್, ಕೇಕ್ ಮೇಲೆ  ಬರೆದಿದ್ದನ್ನೆಲ್ಲ ಓದಿ, ಇದನ್ನು ಕಟ್ ಮಾಡುವ ಮನಸ್ಸೇ ಬರಲ್ಲ ಅಂತ, ಮತ್ತು ಕೇಕ್ ಕಟ್ ಮಾಡಿದ ಕೂಡಲೆ ಹೇಗೆ ಬೇಗ ಬೇಗ ಕೇಕ್ ಖರ್ಚಾಯಿತು ಅಂತ ಹೇಳಲು ಅವರ ಅಮ್ಮ ಕೇಕ್ ಕಟ್ ಮಾಡಿದ ಕೆಲವೇ ನಿಮಿಷಕ್ಕೆ ಅಂದರೆ ಪಾರ್ಟಿ ಆರಂಭ ವಾಗುವ ಮೊದಲೇ ಫೋನ್ ಮಾಡಿ ತಮ್ಮ ಖುಷಿ ಹಂಚಿಕೊಂಡಾಗ ನಮಗೂ  ತುಂಬಾ ಖುಶಿ. ಡಿಸೈನ್ ಮಾತ್ರವಲ್ಲ ಕೇಕ್ ಕೂಡ ರುಚಿಯಾಗಿತ್ತು ಅಂತ. ಆಮೇಲೆ ಅವರ ಬಿಲ್ಡಿಂಗ್ ನಿಂದ ಹಲವಾರು ಜನರು ಬಿಸ್ಕೂಟ್ ಫ್ಯಾಕ್ಟರಿಯಿಂದ ಕೇಕ್ ಆರ್ಡರ್ ಮಾಡಿದಲ್ಲದೆ, ಈ ಹುಡುಗಿಯ ತಮ್ಮನಿಗೋಸ್ಕರ ಕಾರ್ ಕೇಕ್ ಆರ್ಡರ್ ಬಂದಿತ್ತು. ಅದು ಮುಂದೆ ಯಾವಾಗಲಾದರೂ ಇಲ್ಲಿ ಹಾಕುತ್ತೇನೆ 

ಗರ್ಲ್ ಫ್ರೆಂಡ್ ತನ್ನ ಬಾಯ್ ಫ್ರೆಂಡ್ ಗೆ ಇಷ್ಟ ಅಂತ ಈ ತರಹದ ಕೇಕ್ ಆರ್ಡರ್ ಮಾಡಿದ್ದು. :-)

ಅಮ್ಮನಿಗೆ ಹೊಲಿಗೆ , ನಿಟ್ಟಿಂಗ್ ಇಷ್ಟ ಅಂತ ಮಕ್ಕಳ ಆರ್ಡರ್. 


hand painted cookies


ರಜತ್ ನಿಗೆ ಹುಷಾರಿಲ್ಲದೆ ಡಾಕ್ಟರ್ ಕೇಕ್ ತಿನ್ನಬಾರದು ಅಂದಿದ್ರಂತೆ ಹಾಗಾಗಿ ಅವನ ಅಪ್ಪ ಈ ದೊಡ್ಡ ಚಾಕೋಲೇಟ್  ಕುಕೀ ಆರ್ಡರ್ ಮಾಡಿದ್ರು. 

ಕ್ರಿಸ್ಮಸ್ ಗೆ ಕೆಲವು ಕೂಕಿಸ್ 
ಯುಮ್ಮಿ ಕಪ್ ಕೇಕ್ಸ್ ಅಂತ ..ಯಾವ ಕಪ್ ಕೇಕ್ ಚೂಸ್ ಮಾಡುವುದು ???

ಮಕ್ಕಳಿಗೆ ಇದು ತುಂಬಾ ಇಷ್ಟ ಕ್ಯಾಂಡಿ ಪಾಪ್ (candy pop)


ಮೇಲೆ ಮೂರು ಕ್ಯಾಂಡಿ ಪಾಪ್ ಗಳು, ಜನಪ್ರಿಯ ಕಾರ್ಟೂನ್ character ಗಳು . ಮಕ್ಕಳು ಅವರಿಗೆ ಬೇಕಾದನ್ನು ಸೆಲೆಕ್ಟ್ ಮಾಡುವುದನ್ನು ನೋಡುವುದೇ ಖುಶಿ. 

ವ್ಯಾನಿಲ್ಲ  ಕಪ್ ಕೇಕ್ with strawberry ಐಸಿಂಗ್
ಎಚ್ ಎಸ ಆರ್ ಲೇ ಔಟ್ ಇಲ್ಲಿಗೆ ಹತ್ತಿರ. ಅಲ್ಲೊಂದು ಆಫಿಸ್. ಅಲ್ಲಿ ಒಬ್ಬರು  ಹರಿ. ಅವರಿಗೆ ಬಿಸ್ಕೂಟ್ ಫ್ಯಾಕ್ಟರಿಯ ಕಪ್ ಕೇಕ್ ಗಳು ಬಹಳ ಇಷ್ಟ. ಅವರು ರಾತ್ರಿ ಅಥವಾ ಬೆಳಿಗ್ಗೆ ಕೇಕ್ ಗಳಿಗಾಗಿ ಆರ್ಡರ್ ಕೊಟ್ಟು, ಬೆಳಿಗ್ಗೆ ಆಫಿಸ್ ಗೆ ಹೋಗುವ ಮುಂಚೆ ಅದನ್ನು ಪಿಕ್ ಮಾಡಿಕೊಂಡು ಹೋಗುತ್ತಾರೆ. ಆಫಿಸ್ ನಲ್ಲಿ ಕ್ಯಾಬಿನ್ ನಲ್ಲಿ ಅವಿತುಕೊಂಡು ಅವರು ಕೇಕ್ ಗಳನ್ನು ತಿನ್ನುವುದಂತೆ. " ನಾನ್ ಯಾಕೆ ನನ್ನ ಕೇಕ್ ಶೇರ್ ಮಾಡಬೇಕು? ಬೇಕಾದರೆ ಅವ್ರು ಕೊಂಡು ತಿನ್ನಲಿ ' ಎಂದು ಅವರ ಆಂಬೋಣ. :-) ಆಫಿಸ್ ಕೆಲಸದ ಮೇಲೆ ಹೊರ ದೇಶಕ್ಕೆಲ್ಲ ಹೋದಾಗ ಅವರು ಬಿಸ್ಕುಟ್ ಫ್ಯಾಕ್ಟರಿಯ ಕಪ್ ಕೇಕ್ ತುಂಬಾ ಮಿಸ್ ಮಾಡ್ತಾರಂತೆ. ಮುಂದಿನ ಸಲ ಅವರಿಗೆ ಕೇಕ್ ಜತೆ ಸೆಳ್ಫಿ ತೆಗೆದು ಕಳಿಸಲು ಹೇಳಬೇಕು. ಈಗ ಅವರು ಊರಲಿಲ್ಲ. :-) 

January 3, 2016

ಹೊಸ ವರುಷ ತರಲಿ ಹರುಷ

ಎಲ್ಲರಿಗೂ ೨೦೧೬ ಒಳ್ಳೆಯದು ಮಾಡಲಿ. ನಾನು   ಮಾಲವಿಕಾಳ ಬಿಸ್ಕೂಟ್ ಫ್ಯಾಕ್ಟರಿ ಕೆಲಸಗಳಲ್ಲಿ ಬಿಜಿ , ಆದ್ದರಿಂದ ಬಹುಶಃ ಬ್ಲಾಗ್ ಅಪ್ಡೇಟ್ ಮಾಡುವುದು ಅಷ್ಟರಲ್ಲೇ ಇದೆ. ಆದರೆ ಅಕ್ಕನ ಕೇಕ್ ಚಿತ್ರಗಳನ್ನು ಇಲ್ಲಿ ಹಾಕುತ್ತಿರುತ್ತೇನೆ ಯಾವಾಗದರೊಮ್ಮೆ. 

ಬಿಸ್ಕೂಟ್ ಫ್ಯಾಕ್ಟರಿ ಏಕ್ಸಿಭಿಶನ್ ಗಳಲ್ಲಿ ಪಾಲ್ಗೊಳ್ಳುವುದು ನನಗೆ ತುಂಬಾ ಇಷ್ಟ ಆಗುತ್ತದೆ. ದುಡ್ಡಿನ ಜವಾಬ್ದಾರಿ ನಂದು. ಕೆಲವೊಮ್ಮೆ ನಾನು ಅಡಿಗೆ ಮಾಡಿಕೊಂಡು ಲಂಚ್ ಬಾಕ್ಸ್ ಕಟ್ಟಿ ಕೊಂಡು ಹೋಗುತ್ತೇನೆ. ಕೆಲವೊಮ್ಮೆ ಎಕ್ಷಿಭಿಶನ್  ಹಮ್ಮಿಕೊಂಡವರು ಊಟದ ಕೂಪನ್ ಕೊಡುತ್ತಾರೆ. 

ಬಿಸ್ಕೂಟ್ ಫ್ಯಾಕ್ಟರಿ, who so late? i am hungry. i am waiting to taste those lovely cakes ಅಂತ ಕಾಯುವವರು ಇರುತ್ತಾರೆ. ಐನೂರರ ನೋಟ್ ಕೊಟ್ಟುಬಿಟ್ಟು , ದಿನಾ ಇಡೀ ಏನಾದ್ರೂ ತಿನ್ನಬೇಕು ಉಳಿದ ದುಡ್ಡು ಸಂಜೆ ಕೊಡಿ ಅಂತ ಅಭಿಮಾನದಿಂದ ಹೇಳುವ ಜನರಾಗಿರುವಷ್ಟು ಅಕ್ಕನ ಕೇಕ್ , ಕುಕ್ಕಿಗಳು ಫೇಮಸ್ ಆಗಿವೆ. ಮಕಾಳಂತೂ ಕೇಕ್ ನೋಡಿ ಮುಖವರಳಿಸುವುದನ್ನು ನೋಡುವುದೊಂದು ಸೊಗಸು. 

ಸಧ್ಯಕ್ಕೆ ಫೇಸ್ ಬುಕ್ ಮಾತ್ರ ನಮ್ಮ ಜಾಹೀರಾತಿಗೆ  ಸೀಮಿತ ಯಾಕಂದ್ರೆ ಅವಳದ್ದು one man show. ಕೆಲವರಿಗೆ   ತರಬೇತಿ ಕೊಟ್ಟು ಒಂದು ಔಟ್ ಲೆಟ್ ಪ್ರಾರಂಭಿಸ ಬೇಕೆಂದು ನಮ್ಮ ಮುಂದಿನ ಗುರಿ. ಅದಕಾಗಿ ಪ್ರಶಸ್ತ ಜಾಗದ ಹುಡುಕಾಟದಲ್ಲಿದ್ದೇವೆ. 

ಗೇಟಡ್ ಕಮ್ಯೂನಿಟಿ ಗಳಲ್ಲೂ ಆಗಾಗ  ಸೇಲ್ ಗಳು ನಡೆಯುತ್ತವೆ. ಅವುಗಳೋ ಪೇಟೆಯ ಸದ್ದುಗದ್ದಲಗಳಿಂದ ದೂರ. ಪ್ರಾಣ ಹೋಗುತ್ತದೆಂದರೆ ಹತ್ತಿರದಲ್ಲಿ ಏನೂ ಸಿಗಲ್ಲ. ಹಾಗಾಗಿ ಅವರಿಗೋಸ್ಕರ ಮೂರು ತಿಂಗಳಿಗೊಮ್ಮೆ ಏಕ್ಸಿಭಿಶನ್  ತರಹದ್ದು ಇವ್ಂಟ್ ಮ್ಯಾನೆಜ್ಮೆಂಟ್ (ಅದೂ ಒಂದು ಸಕತ್ ಒಳ್ಳೆಯ ಬಿಸಿನೆಸ್ ಐಡಿಯಾ ) ಟೀಮ್ ನವರು ಹಮ್ಮಿಕೊಳ್ಳುತ್ತರೆ. ಬಟ್ಟೆ ಬರೆ , ಮನೆಯ ಅಲಂಕಾರಿಕ ಸಾಮಗ್ರಿಗಳು, ನಾರ್ತ್ ಇಂಡಿಯನ್, ಸೌತ್ ಇಂಡಿಯನ್, ಚೈನೀಸ್ , ಬೇಕರಿ ಐಟಮ್ , ಗ್ರಹೋಪಯೋಗಿ ವಸ್ತುಗಳು , ಪಾತ್ರೆ ಪಗಡಿ ಹೀಗೆ ಹತ್ತು ಹಲವಾರು ಸ್ಟಾಲ್ ಗಳು. ಅ ಹೌಸಿಂಗ್ ಸೊಸೈಟಿಯವರಿಗೆ ಒಂದು ದಿನದ ಮೋಜು ಮಜಾ. ಅವರು ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಹಸಿವೆಯಾದಾಗ ಈ ತಿಂಡಿಗಳ ಸ್ಟಾಲ್ ಗಳಿಗೆ ಬರುವುದು.... ಇವೆಲ್ಲಾ ನನಗೆ ಹೊಸ ಜಗತ್ತು. ನಾನೂ ಈಗ ಎಂಜಾಯ್ ಮಾಡುತ್ತೇನೆ. ಅವರೆಲ್ಲ ಅಕ್ಕನಿಗೆ ಕೇಕ್ ಕುಕ್ಕಿಗಳ ಆರ್ಡರ್ ಕೊಡುತ್ತಾರೆ. 

ಈಗ ಎಷ್ಟೊಂದು ಜನರ ಪರಿಚಯ!!! 

ಮಿಲ್ ಬೋಟ್ ಅನ್ನುವ food app ಇದೆ. ಅಲ್ಲಿ ಬಿಸ್ಕೂಟ್ ಫ್ಯಾಕ್ಟರಿಯ product ಗಳನ್ನು ಪಡೆಯ ಬಹುದು. ಅವರು ಮನೆಗೆ ಬಂದು ಪಿಕ್ ಮಾಡಿ ಡೆಲಿವರಿ ಕೂಡ ಮಾಡುತ್ತರೆ. ಆದರೆ ನಮಗೆ ಕಸ್ಟಮರ್ ಜತೆ ನೇರ ಸಂಪರ್ಕ ಇರಲ್ಲ. ಇಲ್ಲಿಂದಲೂ ಅಕ್ಕನಿಗೆ ಹಲವಾರು ಕಪ್ ಕೇಕ್  ಕುಕ್ಕಿಗಳ ಆರ್ಡರ್ ಬಂದಿದೆ. ಕಳೆದ ವರ್ಷ ದಸರಾ ದೀಪಾವಳಿ, ಕ್ರಿಸ್ಮಸ್, ಈ  ಹೊಸ ವರ್ಷ ಬಿಸ್ಕೂಟ್ ಫ್ಯಾಕ್ಟರಿ ನಿಜಕ್ಕೂ ಫ್ಯಾಕಟರಿ ನೇ ಆಗಿದೆ. 

ಕೇಕ್ ಪಡೆದುಕೊಂಡವರು ಎಸ ಎಂ ಎಸ ಮಾಡಿ ಚೆನ್ನಾಗಿದೆ ಅಂತ ಹೇಳುವಾಗ ಅಕ್ಕನಿಗಿಂತ ಹೆಚ್ಚು ಖುಷಿ ನನಗೆ. 
ಸುಮ್ಮನೆ ಬಿಡಿ ಬಿಡಿ ನೆನಪು ಹಂಚಿಕೊಂಡಿದ್ದೇನೆ. 
chocolate cup cakes with strawberry filling and decorated with strawberry cream
ಆಕೆ ಆರ್ಥೊಪೆಡಿಶಿಯಿನ್. ಆಫಿಸ್ ನಲ್ಲಿ ಪಾಟ್ ಲಕ್ (pot luck) ಪಾರ್ಟಿ. ಆಕೆ ಕಪ್ ಕೇಕ್ ಮಾಡಿ ತರುತ್ತೇನೆ ಅಂದ್ಲಂತೆ. ಪಾಪ ಪುರುಸೊತ್ತು ಸಿಗಲಿಲ್ಲ. ಯಾರೋ ಬಿಸ್ಕೂಟ್ ಫ್ಯಾಕ್ಟರಿ ಬಗ್ಗೆ ಹೇಳಿದರಂತೆ. ಕೂಡಲೆ ಫೋನ್ ನಲ್ಲಿ ತುರ್ತು ಕೇಕ್ ಗಳಿಗಾಗಿ ದಂಬಾಲು ಬಿದ್ದಳು. ಅಕ್ಕ ಕೇಕ್ ಗಳನ್ನು ಮಾಡಿ, ಕೊಟ್ಟು ಬಂದಳು. ರಾತ್ರಿನೇ ಆಕೆಯ ಮೆಸೆಜ್: love you. thank you for making / saving my day. Cakes were a big hit. ಅಂತ ಇನ್ನೊಂದು ಪಾರ್ಟಿುಗಾಗಿ ಆರ್ಡರ್ ಕೂಡ ಇತ್ತಿದ್ದಾಳೆ.

ಕ್ರಿಸ್ಮಸ್ ಗೆ ಕೂಕಿಸ್ 

ಕಪ್ ಕೇಕ್ಸ್ 

ಇನ್ನಷ್ಟು ಕಪ್ ಕೇಕ್ ಗಳು 

ಎಚ್ ಎಸ ಆರ್ ಲೇ ಔಟ್ ನ ಒಂದು ಆಫಿಸ್ - ಹೊಸ ವರ್ಷದ- ಪಾರ್ಟಿಗಾಗಿ ಕೇಕ್ 

Rum and Raisin torte- ಪಾರ್ಟಿ ಆರ್ಡರ್