ನಿಹಾ ಮೊದಲ ಸಲ ಈ ಪದದ ಪ್ರಯೋಗ ಮಾಡಿದ್ದು. ನನ್ನನ್ನು ಹಾಗೆ ಸಂಭೋಧಿಸಿದ್ದು. ಅದಕ್ಕೆ ಕಾರಣ ಶ್ರೀಕಾಂತ. ಮೊನ್ನೆ ಪಟ್ಟಾಗಿ ಬಿಸಿ ಇಸಿ ಇಡ್ಲಿ ಸಾಂಬಾರ್ ಚಟ್ನಿ ಬೆಣ್ಣೆ ಮೇಲ್ತಾ, ' ಎಷ್ಟು ದಿನ ಆಯ್ತು ನೀನು ಹೊರಗೆ ಹೋಗದೆ ' ಅಂತ ಪ್ರಶ್ನಿಸಿದರು. ನಾನು ಉತ್ತರಿಸುವ ಮುನ್ನ ನಿಹಾರಿಕಾ 'amma has become housebound. ಎರಡು ಮೂರು ತಿಂಗಳಾಯಿತು ಹೊರಗೆ ಹೋಗದೆ ಅಂತ. ನಾನು ಅರೆ ಆಫಿಸ್, ಲೈಬ್ರರಿ,ನಾಟಕಕ್ಕೆಲ್ಲ ಹೋಗಿದೀನಿಲ್ಲವಾ ಅಂದ್ರೆ' ಹಾಗಲ್ಲವಂತೆ ರಸ್ತೆ ಮೇಲೆ ಓಡಾಡ್ತಾ ಜನರ ಮದ್ಯೆ ಬರೆತಿಲ್ಲ ನೀನು ಈ ಮಧ್ಯೆ ಅಂದಳು. ಹೌದು ಎಲ್ಲಾದರೂ ಹೊರಗೆ ಹೋಗಬೇಕಿದ್ದಲ್ಲಿ ಮನೆಯಿಂದ ಹೊರಗೆ ಬಂದರೆ ಲಿಫ್ಟ್. ಇಳಿದು ಸೀದಾ ಕಾರ್ ನಲ್ಲಿ. ಆಮೇಲೆ towards my destination and back the same way.
ಈ ಮನೆಗೆ ಬಂದಿದ್ದು ಅಂದ್ರೆ ಶಿಫ್ಟ್ ಆಗಿದ್ದು ಫೆಬ್ರವರಿ ೨೬ ರಂದು. ಅ ಮೇಲೆ ಒಂದು ವಾರ ಹಾಲು, ಮನೆಗೆ ಅಗತ್ಯತ ಸಾಮಾನು ಸರಂಜಾಮೂಗಳ ದೊರಕುವ ಸ್ಥಳಗಳ ಬಗ್ಗೆ ಮಾಹಿತಿಗೆ ತಿರುಗಾಟ, ಇದಾದ ಕೆಲವು ದಿನಗಳ ನಂತರ ಅಮ್ಮನಿಗೆ ಬೆಳಗಾವಿಗೆ ಬಿಟು ಬಂದ ನಂತರ ನಾನು ಮನೆಯಿಂದ ಹೊರಗಡೆ ಕಾಲು ಇಟ್ಟಿಲ್ಲ, ಬೆಳಿಗ್ಗೆ ಹಾಲು ತರಕಾರಿ ಶ್ರೀಕಾಂತ ದಿಪಾರ್ಟಮೆಂಟ್, ಉಳಿದ ಸಾಮಾನು ನಿಹಾ ಕಾಲೇಜಿನಿಂದ ಬರುವಾಗ, ಇಸ್ತ್ರಿ ಯವರು ಮಾತ್ರವಲ್ಲ, ಮೆಡಿಕಲ್ ಸ್ಟೋರ್ ನವ ಔಷಧಿ ಬೇಕಿದ್ದಲ್ಲಿ ಫೋನ್ ಮಾಡಿ ಮೇಡಂ ನಾನೇ ಬಂದು ಕೊಡ್ತೀನಿ ಅಂತಾನೆ,, ಬಿಲ್ ಗಳನ್ನೆಲ್ಲ ನೆಟ್ ನಲ್ಲೇ ಪೇಮೆಂಟ್. :-) ಹೀಗೆ ನಾನು ಹೊರಗೆ ಹೋಗದೆ ಸುಮಾರು ಸಮಯ ಆಗಿತ್ತು. ಮದುವೆ ಮುಂಜಿ ಮುಂತಾದ ಸಮಾರಂಭಗಳಿಂದ ತಪ್ಪಿಸಿಕೊಳ್ಳುವುದರಲ್ಲಿ ಮಹಾ ಜಾಣೆ ನಾನು. ಮತ್ತು ಈ ಮನೆಗೆ ಬಂದ ಮೇಲೆ ಹಲವಾರು ನೆಂಟರು ಇಷ್ಟರು ಬರುತ್ತಿರುತ್ತಾರೆ. ನನ್ನ ಬೆಳಗ್ಗಿನ ಕೆಲಸಗಳು ಮುಗಿದ ನಂತರ ಪುಸ್ತಕ ಹಿಡಿದು ಬಾಲ್ಕನಿಯಲ್ಲಿ ಕುಳಿತರೆ ಮಧ್ಯಾಹ್ನ ಊಟಕ್ಕೆ ಒಳಗೆ ಬರುವುದು. ಸಂಜೆ ಬಾಲಕ್ನಿಯಿಂದಲೆ ಜಗತ್ತನ್ನು ನೋಡುವ್ದುದು.
"ನೋಡು ಮೈ ಎಲ್ಲ ಜಬ್ಬ್ಬು ಜಬ್ಬು ಆಗಿದೆ. You are 40 + It is high time you take care of your health "ಅಂದ್ರು ರಾಯರು. ನಾಳೆ ಬೆಳಿಗ್ಗೆಯಿಂದ ನನ್ನ ಜತೆ ವಾಕ್ ಅಂತಲೂ ಸೇರ್ಸಿದರು.
ಮರುದಿನ ಬೆಳಿಗ್ಗೆ ಬಾ ವಾಕಿಂಗ್ ಹೋಗುವಾ ಅಂದ್ರೆ 'ಇವತ್ತು ಲೇಟ್ ಆಯ್ತು ನನಗೆ ಪೂರಿ ಪಲ್ಯ ಮಾಡಬೇಕು ಬರಲ್ಲ ಅಂತಲೋ, ಬಾಳೆ ಎಲೆ ಮೇಲೆ ಅಕಿ ರೊಟ್ಟಿ ತಟ್ಟಬೇಕು ಅಂತಲೋ ಏನಾದರೊಂದು ನನ್ನ ಸಬೂಬು. ಸಂಜೆ ಮಕ್ಕಳು ಬಾ ಅಮ್ಮ ವಾಕ್ ಹೋಗುವ ಅಂದ್ರೆ ನನ್ನ ಬಟ್ಟೆ ಎಲ್ಲ ಟೈಟ್ ಆಗಿದೆ, ಬಟ್ಟೆಗೆ ಇಸ್ತ್ರಿ ಇಲ್ಲ, ಕಾಲು ನೋವು, ಬೆನ್ನು ನೋವು, ಅಥ್ವಾ ನಿಮಗೋಸ್ಕರ ಏನಾದರೂ ಸ್ಪೆಷಲ್ ತಿಂಡಿ ಮಾಡ್ತೇನೆ ಅಂತ್ಲೋ ತಪ್ಪಿಸಿಕೊಳ್ಳುತ್ತಿದ್ದೆ.
ಮೊನ್ನೆ ನಿಹಾ nothing doing, you are coming with us for a walk and that's it' ಅಂತ ಖಡಾಖಂಡಿತವಾಗಿ ಹೇಳಿದ್ಲು. (ನಾನು ಅವಳಿಗೆ ಸ್ವಲ್ಪ ಹೆದರುತ್ತೇನೆ :-)) ಅಷ್ಟೆ ಅಲ್ಲ ನನಗೋಸ್ಕರ ಲೂಸ್ ಚೂರಿದಾರ ಟಾಪ್ ಒಂದನ್ನು ಜಯನಗರದಿಂದ ತಂದಿದ್ದಳು. ಅದಕ್ಕೆ ಇಸ್ತೀ ಕೂಡ ಹಾಕಿ, ನನ್ನ ಶೂಸ್ ಎಲ್ಲ ರೆಡಿ ಮಾಡಿಟ್ಟಿದ್ದಳು. ಆದ್ದರಿಂದ ನನ್ನ ಬಳಿ ವಾಕ್ ನಿಂದ ತಪ್ಪಿಸಿಕೊಳ್ಳಲು ಯಾವುದೇ ಸಬೂಬು ಇರಲಿಲ್ಲ. ಹೊರಟೆ. ಸಿಗ್ನಲ್ ನಲ್ಲಿ ನಿಂತಾಗ ವಾಹನಗಳ ಭರ ಭರ ಓಡಾಟ, ಜನ ಜಂಗುಳಿ ನೋಡಿ ಕಂಪಿಸಿದೆ. ತಲೆ ಎದೆಯಲ್ಲೆಲ್ಲ ಢಡ ಢಡ ಸದ್ದು, ಸಿಗ್ನಲ್ ಕ್ರಾಸ್ ಮಾಡಲು ಭಯ. ಕ್ರಾಸ್ ಮಾಡುವ ಅವಕಾಶ ಎರಡು ಸಲ ಸಿಕ್ಕರೂ ನಾನು ಅರಾಲ್ಡೈಟ್ ಹಾಕಿ ನೆಲಕ್ಕೆ ಅಂಟಿಸಿಕೊಂಡವರ ಥರ ನಿಂತಿದ್ದೆ. ದಳ ದಳ ಬೆವರಿದೆ. ಕೊನೆಗೆ ಮಕ್ಕಳಿಬ್ಬರೂ ಎರಡು ಕಡೆಯಿಂದ ಕೈ ಹಿಡಿದು ದರದರನೆ ಎಳೆದು ರಸ್ತೆ ಕ್ರಾಸ್ ಮಾಡಿಸಿದರು. ’ಮನೆಯಲ್ಲಿ ಕೂತ್ರೆ ಹಿಂಗೆ ಆಗೋದು’ ಅಂತ ಅಕ್ಕ ಕೂಡ ಜೋರು ಮಾಡಿದಳು. ಸಿಕ್ಕಾಪಟ್ಟೇ ಹೆದರಿದೆ ಆ ದಿನ. housebound ನ ಅರ್ಥ ಮನೆಗೆ ಬಂದೆ ಮೇಲೆ ಹುಡುಕಿದೆ. ನೀವೂ ಗೂಗಲಿಸಿ. ಆಮೇಲೆ The Net ಅನ್ನುವ ಸಿನಿಮಾ ನೋಡಿದೆ. ನೀವೂ ನೋಡಿ.
ಈಗ ನಾನು ದಿನಾ ವಾಕಿಂಗ್, ಅದೂ ಇದು ಅಂತ ಮನೆಯಿಂದ ಹೊರಗಡೆ ಹೋಗ್ತಿದ್ದಿನಿ. it was very scary. :-(

Visiting your blog after a very long time... My Amma likes to be house bound most of the time... For that my Lil daughter says.. Mouma Jana tugele gurtu melna swalpa disani ;)
ReplyDelete